ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 08-10-2021
at 00:00 hrs to 24:00 hrs
ಕದ್ರಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 12/2021, ಕಲಂ: ಹುಡುಗಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಕುಮಾರಿ: ತಬಸುಮ್ ತಂದೆ ಮುಕ್ತುಂಸಾಬ್ ಸೈಯದ್, ಪ್ರಾಯ-19 ವರ್ಷ, ಸಾ|| ರಾಜೀವನಗರ, ಕದ್ರಾ, ಕಾರವಾರ. ಪಿರ್ಯಾದಿಯ ಮಗಳಾದ ಇವಳಿಗೆ ಕಿಡ್ನಿಯ ಸಮಸ್ಯೆಯ ಕುರಿತು ಆರೋಗ್ಯ ಸರಿ ಇಲ್ಲದೇ ಇರುವುದರಿಂದ ಮನೆಯಲ್ಲಿಯೇ ಇರುತ್ತಿದ್ದವಳು. ದಿನಾಂಕ: 05-10-2021 ರಂದು ಬೆಳಿಗ್ಗೆ 09-30 ಗಂಟೆ ಸುಮಾರಿಗೆ ‘ತನಗೆ ಆರೋಗ್ಯ ಸರಿ ಇಲ್ಲಾ. ಕದ್ರಾ ಆಸ್ಪತ್ರೆಗೆ ಹೋಗುತ್ತೇನೆ’ ಅಂತಾ ಹೇಳಿ ಹೋದವಳು, ಆಸ್ಪತ್ರೆಗೂ ಹೋಗದೇ ಎಲ್ಲಿಯೋ ಹೋಗಿ ಈವರೆಗೆ ಮರಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ. ಕಾರಣ ಕಾಣೆಯಾದ ತನ್ನ ಮಗಳನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮುಕ್ತುಂಸಾಬ್ ತಂದೆ ಗೈಬಿಸಾಬ್ ಸೈಯದ್, ಪ್ರಾಯ-47 ವರ್ಷ, ವೃತ್ತಿ-ಮೀನು ವ್ಯಾಪಾರ ಹಾಗೂ ಡ್ರೈವಿಂಗ್ ಕೆಲಸ, ಸಾ|| ರಾಜೀವನಗರ, ಕದ್ರಾ, ಕಾರವಾರ ರವರು ದಿನಾಂಕ: 08-10-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮುರ್ಡೇಶ್ವರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 93/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಈಶ್ವರ ತಂದೆ ದೇವಯ್ಯ ನಾಯ್ಕ, ಪ್ರಾಯ-52 ವರ್ಷ, ವೃತ್ತಿ-ಸೈಕಲ್ ರಿಪೇರಿ, ಸಾ|| ಹೆರಾಡಿ, ಕಾಯ್ಕಿಣಿ, ತಾ: ಭಟ್ಕಳ (ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-8736 ನೇದರ ಸವಾರ). ಈತನು ದಿನಾಂಕ: 07-10-2021 ರಂದು ತಾನು ಚಲಾಯಿಸುತ್ತಿದ್ದ ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-8736 ನೇದರ ಹಿಂದುಗಡೆ ತನ್ನ ಹೆಂಡತಿಯಾದ ಶ್ರೀಮತಿ ಸುಮತಿ ಕೋಂ. ಈಶ್ವರ ನಾಯ್ಕ, ಪ್ರಾಯ-42 ವರ್ಷ, ವೃತ್ತಿ-ಆಶಾ ಕಾರ್ಯಕರ್ತೆ, ಸಾ|| ಹೆರಾಡಿ, ಕಾಯ್ಕಿಣಿ, ತಾ: ಭಟ್ಕಳ ಇವಳನ್ನು ಕೂಡ್ರಿಸಿಕೊಂಡು ತೆರ್ನಮಕ್ಕಿಯಿಂದ ಮುರ್ಡೇಶ್ವರದ ಸರಕಾರಿ ಆಸ್ಪತ್ರೆಗೆ ಹೋಗುವ ಕುರಿತು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಬೆಳಿಗ್ಗೆ 08-00 ಗಂಟೆಯ ಸುಮಾರಿಗೆ ಬಸ್ತಿಯಲ್ಲಿ ಮೋಟಾರ್ ಸೈಕಲನ್ನು ಅತೀವೇಗವಾಗಿ ಹಾಗೂ ಅಜಾಗಕರೂಕತೆಯಿಂದ ಚಾಲನೆ ಮಾಡಿದ ವೇಳೆ ರಸ್ತೆಯ ಮೇಲೆ ನಾಯಿ ಅಡ್ಡವಾಗಿ ಓಡಿ ಬಂದಿದ್ದರಿಂದ ಆರೋಪಿತನು ತನ್ನ ಮೋಟಾರ್ ಸೈಕಲ್ ಮೇಲಿನ ನಿಯಂತ್ರಣ ತಪ್ಪಿ ಹಿಂಬದಿ ಸವಾರಳಾದ ಶ್ರೀಮತಿ ಸುಮತಿ ನಾಯ್ಕ ಇವಳನ್ನು ರಸ್ತೆಯ ಮೇಲೆ ಕೆಡವಿ, ಆಕೆಯ ಎಡಗೈ ಮೊಣಗಂಟಿನ ಮೂಳೆ ಮುರಿದು ಗಂಭೀರ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಈಶ್ವರ ತಂದೆ ಕೆಂಚ ನಾಯ್ಕ, ಪ್ರಾಯ-47 ವರ್ಷ, ವೃತ್ತಿ: ಸೈಕಲ್ ರಿಪೇರಿ, ಸಾ|| ಕೆರೆಮನೆ, ಕಾಯ್ಕಿಣಿ, ಮುರ್ಡೇಶ್ವರ, ತಾ: ಭಟ್ಕಳ ರವರು ದಿನಾಂಕ: 08-10-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹೊನ್ನಾವರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 258/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 05-10-2021 ರಂದು ಬೆಳಿಗ್ಗೆ 10-30 ಗಂಟೆಯಿಂದ 17-45 ಗಂಟೆಯ ನಡುವಿನ ಅವಧಿಯಲ್ಲಿ ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ ಜೆ.ಎಮ್.ಎಫ್.ಸಿ ಹೊನ್ನಾವರ ನ್ಯಾಯಾಲಯದ ಹಿಂದುಗಡೆ ವಾಹನ ನಿಲ್ಲಿಸುವ ಶೆಡ್ಡಿನಲ್ಲಿ ನಿಲ್ಲಿಸಿಟ್ಟಿದ್ದ ಪಿರ್ಯಾದಿಯ ಬಾಬ್ತು ಕಪ್ಪು ಬಣ್ಣದ ಅಂದಾಜು 16,000/- ರೂಪಾಯಿ ಬೆಲೆಯ ಹೀರೋ ಹೋಂಡಾ ಸೂಪರ್ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂ: ಕೆ.ಎ-47/ಜೆ-9807 (ಚಾಸಿಸ್ ನಂ: MBLJA05EGB9L10656, ಎಂಜಿನ್ ನಂ: JA05EBB9L10406) ನೇದನ್ನು ಕಳವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಪ್ರಶಾಂತ ತಂದೆ ದತ್ತಾತ್ರೇಯ ದೇಸಾಯಿ, ಪ್ರಾಯ-30 ವರ್ಷ, ವೃತ್ತಿ-ಪೊಲೀಸ್ ಸಿಬ್ಬಂದಿ, ಸಾ|| ಮಂಕಿ ಪೊಲೀಸ್ ಠಾಣೆ, ತಾ: ಹೊನ್ನಾವರ ರವರು ದಿನಾಂಕ: 08-10-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಯಲ್ಲಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 166/2021, ಕಲಂ: ಹುಡುಗಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಕುಮಾರಿ: ಪ್ರಿಯಾಂಕಾ ತಂದೆ ಸಿದ್ಧೇಶ್ವರ ಮರಾಠಿ, ಪ್ರಾಯ-19 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಬೆಳ್ಳಂಬಿ ಗ್ರಾಮ, ತಾ: ಯಲ್ಲಾಪುರ. ಪಿರ್ಯಾದಿಯ ಮಗಳಾದ ಇವಳು ದಿನಾಂಕ: 07-10-2021 ರಂದು 09-30 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಬೆಳ್ಳಂಬಿ ಊರಿನ ತನ್ನ ಮನೆಯಿಂದ ‘ಚಿಕ್ಕಪ್ಪನ ಮನೆಗೆ ಹೋಗಿ ಮಜ್ಜಿಗೆ ತೆಗೆದುಕೊಂಡು ಬರುತ್ತೇನೆ’ ಅಂತಾ ತನ್ನ ತಾಯಿಯ ಹತ್ತಿರ ಹೇಳಿ ಹೋದವಳು, ಈವರೆಗೂ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾರೆ. ಕಾರಣ ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸಿದ್ಧೇಶ್ವರ ತಂದೆ ಟಕ್ಕು ಮರಾಠಿ, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬೆಳ್ಳಂಬಿ ಗ್ರಾಮ, ತಾ: ಯಲ್ಲಾಪುರ ರವರು ದಿನಾಂಕ: 08-10-2021 ರಂದು 11-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಯಲ್ಲಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 167/2021, ಕಲಂ: 196, 198, 420 ಐಪಿಸಿ ಹಾಗೂ ಕಲಂ: 3(1)(ಕ್ಯೂ) ಎಸ್.ಸಿ/ಎಸ್.ಟಿ ಎಕ್ಟ್-2015 ನೇದ್ದರ ವಿವರ...... ನಮೂದಿತ ಆರೋಪಿತ ಮೌಲಾಲಿ ತಂದೆ ಮಹಮ್ಮದಸಾಬ್ ಪಟೇಲ್, ಸಾ|| ಮನೆ ನಂ: 542, ಮಸೀದಿ ಗಲ್ಲಿ ಕ್ರಾಸ್, ಕಿರವತ್ತಿ ಗ್ರಾಮ, ತಾ: ಯಲ್ಲಾಪುರ. ಈತನು ಮೂಲತಃ ಮುಸ್ಲಿಂ ಜನಾಂಗದವನೆಂದು ಗೊತ್ತಿದ್ದರೂ ಸಹ ತಾನು ಪರಿಶಿಷ್ಟ ಪಂಗಡದ ‘ಸಿದ್ದಿ’ ಜಾತಿಗೆ ಸೇರಿದವನೆಂದು ತಹಶೀಲ್ದಾರ ಯಲ್ಲಾಪುರ ತಾಲೂಕ ರವರಿಂದ ದಿನಾಂಕ: 23-02-2017 ರಂದು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು, ಪ. ಜಾತಿ/ಪ. ಪಂಗಡದವರಿಗೆ ಹಾಗೂ ಸರಕಾರಕ್ಕೆ ವಂಚಿಸಿರುವ ಬಗ್ಗೆ ಪಿರ್ಯಾದಿ ಶ್ರೀಮತಿ ಲಲಿತಾ, ಪ್ರಾಯ-39 ವರ್ಷ, ವೃತ್ತಿ-ಮಹಿಳಾ ಪೊಲೀಸ್ ಕಾನ್ಸಟೇಬಲ್ (ಡಬ್ಲ್ಯೂ.ಪಿ.ಸಿ-719), ಸಾ|| ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ, ಮಂಗಳೂರು ರವರು ದಿನಾಂಕ: 08-10-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಯಲ್ಲಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 168/2021, ಕಲಂ: 279 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತರು 1]. ಬಂಟಿ ರಾಘವ್ ತಂದೆ ಭಗವಾನಸಿಂಗ್, ಪ್ರಾಯ-26 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| ಜೈಸಿಂಗ್ ನಗ್ಲಾ, ಪೋ: ಲೊಯಿ ಠಾಣಾ ಸೂರಿರ್, ತಾ: ಮಾಟ, ಜಿ: ಮಥುರಾ, ಉತ್ತರ ಪ್ರದೇಶ ರಾಜ್ಯ (ಕಂಟೇನರ್ ಲಾರಿ ನಂ: ಎಚ್.ಆರ್-38/ಟಿ-2371 ನೇದರ ಚಾಲಕ), 2]. ಕಂಟೇನರ್ ಲಾರಿ ನಂ: ಎಚ್.ಆರ್-69/ಸಿ.ಇ-6952 ನೇದರ ಚಾಲಕನಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈ ನಮೂದಿತ ಆರೋಪಿತರ ಪೈಕಿ ಆರೋಪಿ 1 ನೇಯವನು ತನ್ನ ಕಂಟೇನರ್ ಲಾರಿ ನಂ: ಎಚ್.ಆರ್-38/ಟಿ-2371 ನೇದನ್ನು ದಿನಾಂಕ: 08-10-2021 ರಂದು ಬೆಳಿಗ್ಗೆ 08-30 ಗಂಟೆಗೆ ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತನ್ನ ಮುಂದೆ ನಿಧಾನವಾಗಿ ರಸ್ತೆಯ ಎಡಬದಿಯಿಂದ ಪಿರ್ಯಾದಿ ಚಲಾಯಿಸಿಕೊಂಡು ಹೊರಟ ಕಾರ್ ನಂ: ಕೆ.ಎ-02/ಎಂ.ಜೆ-5365 ನೇದರ ಹಿಂಬದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದಲ್ಲದೇ, ಅದೇ ಮಾರ್ಗದಲ್ಲಿ ಪಿರ್ಯಾದಿಯು ಚಲಾಯಿಸುತ್ತಿದ್ದ ಕಾರಿನ ಮುಂದೆ ಕಂಟೇನರ್ ಲಾರಿ ನಂ: ಎಚ್.ಆರ್-69/ಸಿ.ಇ-6952 ನೇದನ್ನು ಚಲಾಯಿಸಿಕೊಂಡು ಹೊರಟ ಆರೋಪಿ 2 ನೇಯವನು ಯಾವುದೇ ಸಿಗ್ನಲ್ ಲೈಟ್ ಹಾಗೂ ಮುನ್ಸೂಚನೆ ನೀಡದೇ ತಾನು ಚಲಾಯಿಸುತ್ತಿದ್ದ ಕಂಟೇನರ್ ಲಾರಿಯನ್ನು ಒಂದೇ ಸಲ ನಿಲ್ಲಿಸಿದ ಪರಿಣಾಮ ಪಿರ್ಯಾದಿಯ ಕಾರಿನ ಹಿಂದೆ ಆರೋಪಿ 1 ನೇಯವನ ಕಂಟೇನರ್ ಲಾರಿ ಅಪ್ಪಳಿಸಿದ ರಭಸಕ್ಕೆ ಮುಂದೆ ಹೋಗಿ ಆರೋಪಿ 2 ನೇಯವನ ಲಾರಿಯ ಹಿಂದೆ ತಾಗಿ ಜಖಂ ಆಗಿದ್ದು, ಆರೋಪಿ 2 ನೇಯವನು ಪಿರ್ಯಾದಿಯ ಕಾರು ಜಕಂ ಆಗಿದ್ದನ್ನು ನೋಡಿಯೂ ಸಹ ತನ್ನ ಕಂಟೇನರ್ ಲಾರಿ ನಿಲ್ಲಿಸದೇ ಸಂಬಂಧ ಪಟ್ಟ ಪೊಲೀಸ್ ಠಾಣೆಗೆ ಮಾಹಿತಿಯೂ ನೀಡದೇ ತನ್ನ ಕಂಟೇನರ ಲಾರಿಯನ್ನು ಚಲಾಯಿಸಿಕೊಂಡು ಹೋಗಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಹೇಶ ತಂದೆ ರಾಮಚಂದ್ರ ಸೊನಗುಜೆ, ಪ್ರಾಯ-50 ವರ್ಷ, ವೃತ್ತಿ-ಕಾರ್ ಚಾಲಕ, ಸಾ|| ಗಾಂದಿ ಚೌಕ್, ಅತ್ತಾರ್ ಗಲ್ಲಿ ರೋಡ್, ಧಾರವಾಡ ರವರು ದಿನಾಂಕ: 08-10-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಯಲ್ಲಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 169/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮುನುಸ್ವಾಮಿ ಎಸ್. ತಂದೆ ಸುಂದರಂ, ಪ್ರಾಯ-37 ವರ್ಷ, ವೃತ್ತಿ-ಚಾಲಕ, ಸಾ|| ಸೆಂಥಿಮಂಗಲಂ, ನಾಮಹಕ್ಕಲ್, ತಮಿಳುನಾಡು (ಟ್ರಾಲಿ ಲಾರಿ ನಂ: ಟಿ.ಎನ್-28/ಎ.ಎಮ್-1497 ನೇದರ ಚಾಲಕ). ಈತನು ದಿನಾಂಕ: 07-10-2021 ರಂದು 06-30 ಗಂಟೆಗೆ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಬಾಬ್ತು ಟ್ರಾಲಿ ಲಾರಿ ನಂ: ಟಿ.ಎನ್-28/ಎ.ಎಮ್-1497 ನೇದನ್ನು ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ತನ್ನ ಸೈಡ್ ಬಿಟ್ಟು ರಸ್ತೆಯ ಬಲಕ್ಕೆ ಬಂದು ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಹೋಗುತ್ತಿದ್ದ ಈಚರ್ ಲಾರಿ ನಂ: ಕೆ.ಎ-25/ಎ.ಬಿ-2357 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಎರಡು ವಾಹನಗಳನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪ್ರಶಾಂತ ತಂದೆ ಉಮೇಶ ಮರಡಿ, ಪ್ರಾಯ-25 ವರ್ಷ, ವೃತ್ತಿ-ಟ್ರಾನ್ಸಪೋರ್ಟ್ ದಲ್ಲಿ ಕೆಲಸ, ಸಾ|| ಹೌಸ್ ನಂ: 6, ನಿಲಗುಡೆ ಲೇಔಟ್, ನವನಗರ, ಹುಬ್ಬಳ್ಳಿ ರವರು ದಿನಾಂಕ: 08-10-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಯಲ್ಲಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 170/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಜೇಶ ಕುಮಾರ ತಂದೆ ಕಿಶನ್ ರಜಾಕ್, ಪ್ರಾಯ-47 ವರ್ಷ, ವೃತ್ತಿ-ಚಾಲಕ, ಸಾ|| ಸುಲಿಮರ್, ಜೆಲಗೋರ್, ಹರಜಾರಿಯಾಕಮ್, ತಾ: ಬಾಗಮಾರ್, ಜಿ: ಧನಬಾಗ, ಜಾರ್ಖಂಡ ರಾಜ್ಯ (ಲಾರಿ ನಂ: ಕೆ.ಎ-35/ಎ-9600 ನೇದರ ಚಾಲಕ). ಈತನು ದಿನಾಂಕ: 07-10-2021 ರಂದು ಬೆಳಗಿನ ಜಾವ ಸಮಯ ಸುಮಾರು 03-30 ಗಂಟೆಗೆ ಯಲ್ಲಾಪುರ ತಾಲೂಕಿನ ಡೋಮಗೇರಿ ಗ್ರಾಮದಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಬಾಬ್ತು ಲಾರಿ ನಂ: ಕೆ.ಎ-35/ಎ-9600 ನೇದನ್ನು ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀವೇಗವಾಗಿ ಮತ್ತು ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು, ತನ್ನ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡು ಅದೇ ವೇಳೆಗೆ ಹುಬ್ಬಳ್ಳಿ ಕಡೆಗೆ ಮುಖ ಮಾಡಿ ಕಚ್ಚಾ ರಸ್ತೆಯ ಸೈಡಿನಲ್ಲಿ ನಿಂತುಕೊಂಡಿದ್ದ ಲಾರಿ ನಂ: ಎಮ್.ಎಚ್-08/ಎಚ್-0700 ನೇದಕ್ಕೆ ಹಿಂದಿನಿಂದ ಬಂದು ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಪಿರ್ಯಾದಿಯವರು ಹಾಗೂ ಸಾಕ್ಷಿದಾರರಾದ ಸೈಫನ್ ತಂದೆ ಹುಸೀನಿ ನಧಾಪ್, ಇವರು ತಮ್ಮ ಲಾರಿಯ ಪಂಕ್ಚರ್ ತೆಗೆಯುತ್ತಿದ್ದು, ಈ ಅಪಘಾತದಿಂದ ಪಿರ್ಯಾದಿಯವರ ಮೈಕೈಗೆ ಗಾಯನೋವು ಆಗಿದ್ದಲ್ಲದೇ, ಲಾರಿಯ ಚಾಲಕನಾದ ಸಾಕ್ಷಿದಾರ ಸೈಫನ್ ತಂದೆ ಹುಸೀನಿ ನಧಾಪ್, ಇವರಿಗೂ ಸಹ ಎಡಗಾಲಿನ ಮಂಡಿಯ ಕೆಳಗೆ ಮತ್ತು ಎಡಗೈಗೆ ಗಾಯನೋವು ಪಡಸಿ, ಎರಡು ವಾಹನಗಳನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಜಟ್ಟಪ್ಪ ತಂದೆ ಅಂಬಣ್ಣ ಅಂಕೋರೆ, ಪ್ರಾಯ-35 ವರ್ಷ, ವೃತ್ತಿ-ಲಾರಿ ಕ್ಲೀನರ್ ಕೆಲಸ, ಸಾ|| ಡಿ.ಸಿ.ಸಿ ಬ್ಯಾಂಕ್ ಹತ್ತಿರ, ಟಾಕಲ್ಲಿ, ತಾ: ಸೌಥ್ ಸೋಲಾಪುರ, ಜಿ: ಸೋಲಾಪುರ, ಮಹಾರಾಷ್ಟ್ರ ರಾಜ್ಯ ರವರು ದಿನಾಂಕ: 08-10-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಯಲ್ಲಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 171/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಎಸ್. ದೇವರಾಜು ತಂದೆ ಶ್ರೀಗಿರಿ ಹನುಮಂತಪ್ಪ, ಪ್ರಾಯ-30 ವರ್ಷ, ವೃತ್ತಿ-ಚಾಲಕ, ಸಾ|| ಗಂಗಾವತಿ, ಕೊಪ್ಪಳ (ಲಾರಿ ನಂ: ಕೆ.ಎ-17/ಡಿ-2310 ನೇದರ ಚಾಲಕ). ಈತನು ದಿನಾಂಕ: 08-10-2021 ರಂದು 09-30 ಗಂಟೆಗೆ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ ತಾಳಿಕುಂಬ್ರಿ ಬಸ್ ನಿಲ್ದಾಣದ ಹತ್ತಿರ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಬಾಬ್ತು ಲಾರಿ ನಂ: ಕೆ.ಎ-17/ಡಿ-2310 ನೇದನ್ನು ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ತನ್ನ ಸೈಡ್ ಬಿಟ್ಟು ರಸ್ತೆಯ ತೀರಾ ಬಲಕ್ಕೆ ಬಂದು ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆಗೆ ಪಿರ್ಯಾದಿಯವರು ಚಲಾಯಿಸಿಕೊಂಡು ಬರುತ್ತಿದ್ದ ಬೊಲೆರೋ ವಾಹನ ನಂ: ಕೆ.ಎ-30/ಎ-2310 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಎರಡು ವಾಹನಗಳನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾರಾಯಣ ತಂದೆ ಮಾಚಾ ಪೂಜಾರಿ, ಪ್ರಾಯ-41 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕುಂಟಕಣಿ, ಆಚವೆ ಗ್ರಾಮ, ತಾ: ಅಂಕೋಲಾ ರವರು ದಿನಾಂಕ: 08-10-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಶಿರಸಿ ನಗರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 66/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸುಪ್ರೀತ ತಂದೆ ಮಹೇಶ ದೊಣ್ಣೆಮಠ, ಪ್ರಾಯ-33 ವರ್ಷ, ವೃತ್ತಿ-ಅರ್ಚಕರು, ಸಾ|| ಹಿತ್ಲಗದ್ದೆ, ತಾ: ಶಿರಸಿ (ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಬಿ-6815 ನೇದರ ಸವಾರ). ಈತನು ದಿನಾಂಕ: 08-10-2021 ರಂದು ಬೆಳಿಗ್ಗೆ 09-30 ಗಂಟೆಯ ಸುಮಾರಿಗೆ ಶಿರಸಿ ಶಹರದ ಬನವಾಸಿ ರಸ್ತೆಯ ಫಾರೆಸ್ಟ್ ಕಾಲೇಜ್ ಹತ್ತಿರ ತಾನು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಬಿ-6815 ನೇದನ್ನು ಬನವಾಸಿ ಕಡೆಯಿಂದ ಶಿರಸಿ ಕಡೆಗೆ ಹೋಗಲು ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ಬನವಾಸಿ ರಸ್ತೆಯ ಫಾರೆಸ್ಟ್ ಕಾಲೇಜ್ ಹತ್ತಿರ ತನ್ನ ಮೋಟಾರ್ ಸೈಕಲನ್ನು ನಿಯಂತ್ರಿಸಲಾಗದೇ ಎದುರು ಬರುವ ವಾಹನಗಳನ್ನು ನೋಡಿ ತಕ್ಷಣ ಬ್ರೇಕ್ ಹಾಕಿದಾಗ ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು ಅಪಘಾತ ಪಡಿಸಿಕೊಂಡು, ತನ್ನ ಮೋಟಾರ್ ಸೈಕಲ್ ಹಿಂದೆ ಕುಳಿತಿದ್ದ ಪಿರ್ಯಾದಿಗೆ ಬಲಗೈ ಮತ್ತು ಮೈಮೇಲೆ ಅಲ್ಲಲ್ಲಿ ಹಾಗೂ ಬಲಗಾಲಿಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ನೀಲಕಂಠ ತಂದೆ ಕುಪ್ಪಯ್ಯ ನಾಯ್ಕ, ಪ್ರಾಯ-58 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಂಚಿನಕೇರಿ, ತಾ: ಶಿರಸಿ ರವರು ದಿನಾಂಕ: 08-10-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮುಂಡಗೋಡ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 125/2021, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ಶ್ರೀಮತಿ ಪೂರ್ಣಿಮಾ ಕೋಂ. ಸಂತೋಷ ರಾಣಿ, ಪ್ರಾಯ-28 ವರ್ಷ, ವೃತ್ತಿ-ಮನೆ ಕೆಲಸ, ಸಾ|| ನಾಗನೂರ, ತಾ: ಮುಂಡಗೋಡ. ಪಿರ್ಯಾದಿಯ ಅಕ್ಕಳಾದ ಇವಳು ಮುಂಡಗೋಡದ ದವಾಖಾನೆಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ದಿನಾಂಕ: 01-09-2021 ರಂದು ಬೆಳಿಗ್ಗೆ 10-00 ಗಂಟೆಗೆ ನಾಗನೂರದಿಂದ ಹೋದವಳು, ಇದುವರೆಗೂ ಮನೆಗೆ ಬಾರದೇ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಕಾಣೆಯಾಗಿರುತ್ತಾಳೆ. ಅವಳಿಗೆ ಇದುವರೆಗೂ ಹುಡುಕಾಡಿ ಪತ್ತೆಯಾಗದೇ ಇದ್ದುದರಿಂದ ಸದ್ರಿ ಕಾಣೆಯಾದ ತನ್ನ ಅಕ್ಕಳನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ದೇವೇಂದ್ರ ತಂದೆ ರಾಮಚಂದ್ರ ಸುಳ್ಳಳ್ಳಿ, ಪ್ರಾಯ-23 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನಾಗನೂರ, ತಾ: ಮುಂಡಗೋಡ ರವರು ದಿನಾಂಕ: 08-10-2021 ರಂದು 20-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 08-10-2021
at 00:00 hrs to 24:00 hrs
ಹೊನ್ನಾವರ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 38/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಮಂಜುನಾಥ ತಂದೆ ಸುಬ್ರಹ್ಮಣ್ಯ ಭಟ್ಟ, ಪ್ರಾಯ-68 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕೇಶವಪಾಲ, ಸಾಲ್ಕೋಡ, ಪೋ: ಅರೇಂಗಡಿ, ತಾ: ಹೊನ್ನಾವರ. ಪಿರ್ಯಾದಿಯ ತಂದೆಯವರಾದ ಇವರು ಗ್ಯಾಂಗ್ರೀನ್ ಖಾಯಿಲೆಯಿಂದ ಬಳಲುತ್ತಿದ್ದವರು, ಜೀವನದಲ್ಲಿ ಜಿಗುಪ್ಸೆಗೊಂಡು ಮಾನಸಿಕವಾಗಿ ನೊಂದುಕೊಂಡಿದ್ದವರು, ದಿನಾಂಕ: 08-10-2021 ರಂದು ಮಧ್ಯಾಹ್ನ 15-00 ಗಂಟೆಯಿಂದ 17-00 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಮನೆಯ ಅಡುಗೆ ಕೋಣೆಯ ಮಾಳಿಗೆಯ ಜಂತಿಗೆ ನೈಲಾನ್ ಹಗ್ಗ ಕಟ್ಟಿಕೊಂಡು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರ ಹೊರತು ತನ್ನ ತಂದೆಯ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಕೊಳ್ಳುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಸುಬ್ರಹ್ಮಣ್ಯ ತಂದೆ ಮಂಜುನಾಥ ಭಟ್ಟ, ಪ್ರಾಯ-42 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕೇಶವಪಾಲ, ಸಾಲ್ಕೋಡ, ಪೋ: ಅರೇಂಗಡಿ, ತಾ: ಹೊನ್ನಾವರ ರವರು ದಿನಾಂಕ: 08-10-2021 ರಂದು 18-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಯಲ್ಲಾಪುರ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 31/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಜಮಾಲಸಾಬ್ ತಂದೆ ಅಮೀರಸಾಬ್ ಬೇಪಾರಿ, ಪ್ರಾಯ-55 ವರ್ಷ, ವೃತ್ತಿ-ಗ್ಯಾಸ್ ರಿಪೇರಿ ಕೆಲಸ, ಸಾ|| ನೂತನನಗರ, ಜಡ್ಡಿ, ತಾ: ಯಲ್ಲಾಪುರ. ಪಿರ್ಯಾದಿಯ ತಂದೆಯಾದ ಇವರು ಕಳೆದ 6 ವರ್ಷಗಳ ಹಿಂದೆ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿ. ದೇಶಪಾಂಡೆ ನಗರ, ಹುಬ್ಬಳ್ಳಿ ಯಲ್ಲಿ ಸಾಲ ಮಾಡಿಕೊಂಡು 2 ಲಾರಿಗಳನ್ನು ತೆಗೆದುಕೊಂಡಿದ್ದರು. ಹೀಗೆ ಸಾಲ ಮಾಡಿಕೊಂಡ ವಿಷಯದಲ್ಲಿ ಸರಾಯಿ ಕುಡಿಯುವ ಚಟವನ್ನು ಬೆಳೆಸಿಕೊಂಡಿದ್ದು, ಔಷಧೋಪಚಾರದಲ್ಲಿದ್ದವರು ಗುಣಮುಖವಾಗದೇ ಇದ್ದುದರಿಂದ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಬೇಜಾರಿನಿಂದ ಇದ್ದವರು, ದಿನಾಂಕ: 07-10-2021 ರಂದು ಸಾಯಂಕಾಲ 19-30 ಗಂಟೆಯಿಂದ ದಿನಾಂಕ: 08-10-2021 ರಂದಿ ಬೆಳಿಗ್ಗೆ 07-00 ಗಂಟೆಯ ನಡುವಿನ ಅವಧಿಯಲ್ಲಿ ಯಲ್ಲಾಪುರ ಪಟ್ಟಣದ ಜೋಡಕೇರಿ ಕೆರೆಯಲ್ಲಿ ಹಾರಿ ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾರೆ. ಇದರ ಹೊರತು ತನ್ನ ತಂದೆಯವರ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಮೃತರ ಮೃತದೇಹವು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರುತ್ತದೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಲ್ತಾಫ್ ತಂದೆ ಜಮಾಲಸಾಬ್ ಬೇಪಾರಿ, ಪ್ರಾಯ-24 ವರ್ಷ, ವೃತ್ತಿ-ಚಾಲಕ, ಸಾ|| ನೂತನನಗರ, ಜಡ್ಡಿ, ತಾ: ಯಲ್ಲಾಪುರ ರವರು ದಿನಾಂಕ: 08-10-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======