ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 08-09-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 76/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ರಿತೇಶ ಅರವಿಂದ ಬಾಡಕರ್, ಪ್ರಾಯ-36 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಪದ್ಮನಾಭ ನಗರ, ದೇವಳಿವಾಡಾ, ಕಾರವಾರ. ಈತನು ದಿನಾಂಕ: 07-09-2021 ರಂದು 20-15 ಗಂಟೆಗೆ ತನ್ನ ಲಾಭದ ಸಲುವಾಗಿ ಪಾದ್ರಿಬಾಗ ಹೋಗುವ ಸಾರ್ವಜನಿಕ ರಸ್ತೆಯ ತಿರುವಿನಲ್ಲಿ ಸಾರ್ವಜನಿಕರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವ ಷರತ್ತಿನ ಮೇಲೆ ಓ.ಸಿ ಮಟಕಾ ಜೂಗಾರಾಟದ ಅದೃಷ್ಟದ ಅಂಕೆ-ಸಂಖ್ಯೆಗಳ ಮೇಲೆ ಹಣದ ಪಂಥ ಕಟ್ಟಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಓ.ಸಿ ಚೀಟಿ ಬರೆದುಕೊಟ್ಟು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ದಾಳಿಯ ಕಾಲ ನಗದು ಹಣ 3,435/- ರೂಪಾಯಿ ಹಾಗೂ ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳೊಂದಿಗೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಿದ್ದಪ್ಪ ಎಸ್. ಬೀಳಗಿ, ಪೊಲೀಸ್ ನಿರೀಕ್ಷಕರು, ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 08-09-2021 ರಂದು 11-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 84/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಜೀತ್ ತಂದೆ ಶೇಖರ ಪೂಜಾರಿ, ಪ್ರಾಯ-30 ವರ್ಷ, ಸಾ|| ಮುದ್ರಾಂಗಡಿ, ಪಡುಬಿದ್ರೆ, ತಾ: ಕಾಪು, ಜಿ: ಉಡುಪಿ (ಇನೋವಾ ಕಾರ್ ನಂ: ಕೆ.ಎ-23/ಎನ್-0900 ನೇದರ ಚಾಲಕ). ಈತನು ದಿನಾಂಕ: 07-09-2021 ರಂದು ತಮ್ಮ ಸಂಬಂಧಿಕರಾದ ವಿನಾಯಕ ತಂದೆ ಗಂಗಾಧರ ಶೇಟ್, ಶ್ರೀಮತಿ ವಿಧ್ಯಾ ಮೋಹನ ಸಾಲಿಯಾನ್ ಹಾಗೂ ಶೃತಿ ತಂದೆ ಶೇಖರ ಪೂಜಾರಿ ಇವರನ್ನು ಕರೆದುಕೊಂಡು ಬಾಬ್ತು ಇನೋವಾ ಕಾರ್ ನಂ: ಕೆ.ಎ-23/ಎನ್-0900 ನೇದರಲ್ಲಿ ಪೂಜಾ ಕಾರ್ಯಕ್ರಮಕ್ಕಾಗಿ ಉಡುಪಿಯಿಂದ ಗೋಕರ್ಣಕ್ಕೆ ಹೊರಟಿದ್ದು, ಭಟ್ಕಳ ದಾಟಿ ಮುರ್ಡೇಶ್ವರ ಕಡೆಗೆ ಬರುತ್ತಿದ್ದಾಗ ಆರೋಪಿ ಚಾಲಕನು ಕಾರನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬೆಳಿಗ್ಗೆ 08-30 ಗಂಟೆಯ ಸುಮಾರಿಗೆ ಮುರ್ಡೇಶ್ವರ ಬೇಂಗ್ರೆಯ ಕಾಮತ್ ಕ್ಯಾಂಟೀನ್ ಹತ್ತಿರ ರೋಡ್ ಡಿವೈಡರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಕಾರನ್ನು ಪಲ್ಟಿ ಮಾಡಿ, ವಿನಾಯಕ ತಂದೆ ಗಂಗಾಧರ ಶೇಟ್ ಇವರಿಗೆ ಬಲಗಾಲ ಮೊಣಗಂಟಿನ ಕೆಳಗೆ ಗಂಭೀರ ಸ್ವರೂಪದ ಗಾಯನೋವು ಹಾಗೂ ಶ್ರೀಮತಿ ವಿಧ್ಯಾ ಮೋಹನ ಸಾಲಿಯಾನ್ ಇವರಿಗೆ ತಲೆಗೆ ತೆರಚಿದ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಚಾಲಕನು ತನಗೂ ಸಹ ತಲೆಗೆ ಮತ್ತು ಬಲಗೈ ಮೊಣಗಂಟಿಗೆ ತೆರಚಿದ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಕುಮಾರಿ: ನತಾಶಾ ತಂದೆ ಜುಲೇನ್ ಟೆಲೀಸ್, ಪ್ರಾಯ-28 ವರ್ಷ, ವೃತ್ತಿ-ಖಾಸಗಿ ಕಂಪನಿ ಮಾಲಕಿ, ಸಾ|| ಕೊಟ್ಟಾರ ಚೌಕಿ, ಬಿ.ಎಸ್.ಎನ್.ಎಲ್ ಟೆಲಿಪೋನ್ ಕಛೇರಿ ಎದುರು, ಅಶೋಕ ನಗರ, ಮಂಗಳೂರು ರವರು ದಿನಾಂಕ: 08-09-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 112/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಿತಿನಕುಮಾರ ತಂದೆ ಪಾಂಡುರಂಗ ನಾಯ್ಕ, ಸಾ|| ಸಾಲೆಮನೆ, ಶಿರಾಲಿ, ತಾ: ಭಟ್ಕಳ (ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-7393 ನೇದರ ಸವಾರ). ಈತನು ದಿನಾಂಕ: 07/09/2021 ರಂದು ಮಧ್ಯಾಹ್ನ 12-30 ಗಂಟೆಯ ಸಮಯಕ್ಕೆ ತನ್ನ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-7393 ನೇದನ್ನು ಮುರ್ಡೇಶ್ವರ ಕಡೆಯಿಂದ ಭಟ್ಕಳ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಚಿತ್ರಾಪುರ ಕ್ರಾಸ್ ಕಡೆಯಿಂದ ಅಳ್ವೆಕೋಡಿ ಕ್ರಾಸ್ ಕಡೆಗೆ ಹೋಗಲು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಡಾಂಬರ್ ರಸ್ತೆ ದಾಟುತ್ತಿದ್ದ ಶಂಕರ ತಂದೆ ತಿಮ್ಮಯ್ಯ ನಾಯ್ಕ, ಪ್ರಾಯ-59 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಬಂಡಿಕಾಶಿ, ಚಿತ್ರಾಪುರ, ತಾ: ಭಟ್ಕಳ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದರ ಪರಿಣಾಮ ಅವರ ಎಡಗಾಲಿಗೆ, ಬಲಗೈ ಮೊಣಗಂಟಿನ ಹತ್ತಿರ ಮತ್ತು ಬಲಗೈ ಹಸ್ತದ ಮೇಲೆ ಹಾಗೂ ಬಾಯಿಗೆ ಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ವೆಂಕಟ್ರಮಣ ತಂದೆ ಸಣಕೂಸ ನಾಯ್ಕ, ಪ್ರಾಯ-45 ವರ್ಷ, ವೃತ್ತಿ-ಕೆ.ವಿ.ಜಿ ಬ್ಯಾಂಕ್ ನಲ್ಲಿ ಪಿಗ್ಮಿ ಕಲೆಕ್ಟರ್, ಸಾ|| ದುರ್ಗಾಪರಮೇಶ್ವರಿ ರೋಡ್, ಮುಂಡಳ್ಳಿ, ತಾ: ಭಟ್ಕಳ ರವರು ದಿನಾಂಕ: 08-09-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 117/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಯಾರೋ ಕಳ್ಳರು ದಿನಾಂಕ: 06-09-2021 ರಂದು ರಾತ್ರಿ 09-00 ಗಂಟೆಯಿಂದ ದಿನಾಂಕ: 08-09-2021 ರಂದು ಮಧ್ಯಾಹ್ನ 12-30 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯ ಮನೆಯ ಬಾಗಿಲನ್ನು ಬಲವಾದ ವಸ್ತುವಿನಿಂದ ಒಡೆದು ಮನೆಯ ಒಳಗಡೆ ಇರುವ 03 ಅಲ್ಮೇರಾಗಳ ಬಾಗಿಲನ್ನು ತೆರೆದು ಅಲ್ಮೇರಾದಲ್ಲಿದ್ದ 1). ಬಂಗಾರದ ಚೈನ್-03 ಜೊತೆ, 48.00 ಗ್ರಾಂ, ಅ||ಕಿ|| 90,000/- ರೂಪಾಯಿ, 2). ಬಂಗಾರದ ಲಾಕೆಟ್-03, 24 ಗ್ರಾಂ. ಅ||ಕಿ|| 40,000/- ರೂಪಾಯಿ, 3). ಬಂಗಾರದ ಬ್ರೇಸಲೆಟ್-01, 06 ಗ್ರಾಂ, ಅ||ಕಿ|| 10,000/- ರೂಪಾಯಿ, 4). ಬಂಗಾರದ ಕಿವಿ ಒಲೆ-03 ಜೊತೆ, 12 ಗ್ರಾಂ, ಅ||ಕಿ|| 20,000/- ರೂಪಾಯಿ, 5). ಬಂಗಾರದ ಬೆರಳು ಉಂಗುರುಗಳು-06, ಒಟ್ಟು 24 ಗ್ರಾಂ, ಅ||ಕಿ|| 40,000/- ರೂಪಾಯಿ ಮತ್ತು ಇತರೆ ದಾಖಲೆಗಳು, ಅ||ಕಿ|| 00.00/- ರೂಪಾಯಿ. ಹೀಗೆ ಒಟ್ಟು ಅಂದಾಜು 114 ಗ್ರಾಂ ತೂಕದ ಅ||ಕಿ|| 2,00,000/- ರೂಪಾಯಿ ಮೌಲ್ಯದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀಮತಿ ಸಫೀನಾ ಸನೋಬರ್ ಕೋಂ. ಜಹೀರ್ ಕೊಬಟ್ಟೆ, ಪ್ರಾಯ-35 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಬಾಂಬೆ ಬಜಾರ್, ಮೋತಿ ಮಾರ್ಕೆಟ್ ಹತ್ತಿರ, ಮೇನ್ ರೋಡ್, ತಾ: ಭಟ್ಕಳ ರವರು ದಿನಾಂಕ: 08-09-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 141/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹಾಬಲೇಶ್ವರ ತಂದೆ ವೆಂಕಟರಮಣ ಜೋಶಿ, ಸಾ|| ಶಿಶುಪಾಲ್, ಹುಟುಕಮನೆ, ತಾ: ಯಲ್ಲಾಪುರ (ಕಾರ್ ನಂ: ಕೆ.ಎ-25/ಪಿ-9788 ನೇದರ ಚಾಲಕ). ಈತನು ದಿನಾಂಕ: 30-08-2021 ರಂದು ಮಧ್ಯಾಹ್ನ 12-30 ಗಂಟೆಯ ಸುಮಾರಿಗೆ ಯಲ್ಲಾಪುರ ಪಟ್ಟಣದ ಹೊಸ ತಹಶೀಲ್ದಾರ್ ಕಛೇರಿಯ ಮುಂದೆ ಹಾಯ್ದ ಕಾರವಾರ-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಕಾರ್ ನಂ: ಕೆ.ಎ-25/ಪಿ-9788 ನೇದನ್ನು ತನ್ನ ಪಥವನ್ನು ಬಿಟ್ಟು ತನ್ನ ವಿರುದ್ಧ ಪಥದಲ್ಲಿ ನಿಲ್ಲಿಸಿಕೊಂಡು ನಿಂತವನು, ಒಮ್ಮೇಲೆ ಕಾರು ಚಾಲನೆ ಮಾಡಿ ನಿರ್ಲಕ್ಷ್ಯತನದಿಂದ ಮುಂದೆ ಬಂದು, ತನ್ನ ಎದುರಿನಿಂದ ಅಂದರೆ ಯಲ್ಲಾಪುರ ಪಟ್ಟಣದ ಸಂಕಲ್ಪ ಕ್ರಾಸ್ ಕಡೆಯಿಂದ ಯಲ್ಲಾಪುರ ಗಾಂಧಿ ಚೌಕ ಕಡೆ ರಸ್ತೆಯ ಎಡಬದಿಯಿಂದ ನಡೆದುಕೊಂಡು ಬರುತ್ತಿದ್ದ ಸಾಕ್ಷಿದಾರಳಾದ ಕುಮಾರಿ: ಸಾವಿತ್ರಿ ತಂದೆ ಧರ್ಮಾ ಮರಾಠಿ ರವರಿಗೆ ಡಿಕ್ಕಿ ಹೊಡೆದು ರಸ್ತೆಯ ಮೇಲೆ ಕೆಡವಿ ಅಪಘಾತ ಪಡಿಸಿ ತಲೆಗೆ, ಕುತ್ತಿಗೆ, ಸಾದಾ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ರವಿರಾಜ ತಂದೆ ರಾಮದಾಸ ನಾಯ್ಕ, ಪ್ರಾಯ-36 ವರ್ಷ, ವೃತ್ತಿ-ಟ್ರ್ಯಾಕ್ಸ್ ಚಾಲಕ, ಸಾ|| ಹುಣ್ಸಗೇರಿ, ಕಂಚನಳ್ಳಿ ಗ್ರಾಮ, ತಾ: ಯಲ್ಲಾಪುರ ರವರು ದಿನಾಂಕ: 08-09-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 08-09-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

 

ಇತ್ತೀಚಿನ ನವೀಕರಣ​ : 09-09-2021 01:39 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080