ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 09-04-2021

at 00:00 hrs to 24:00 hrs

 

ಮಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 12/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ದಿಲೀಪ ತಂದೆ ಬಾಬನಿ ಅಸ್ನೋಟಿಕರ್, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜೋಶಿವಾಡಾ, ಕೆರವಡಿ, ಕಾರವಾರ. ಈತನು ದಿನಾಂಕ: 09-04-2021 ರಂದು ಬೆಳಿಗ್ಗೆ 07-00 ಗಂಟೆಗೆ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಗೋವಾ ರಾಜ್ಯ ತಯಾರಿಕೆಯ ಸರಾಯಿ ತುಂಬಿದ 1). 750 ML ನ Goa’s Special palm Fenny for Sale in Goa ಗೋವಾ ಸರಾಯಿ ಬಾಟಲಿಗಳು-16, 2). 750 ML ನ Light horse premium blended malt whisky ಗೋವಾ ಸರಾಯಿ ಬಾಟಲಿಗಳು-03, 3) 750 ML ನ Real whisky ಗೋವಾ ಸರಾಯಿ ಬಾಟಲಿ-01, 4) 500 MLದ King Fisher Strong premium beer ಟಿನ್ ಗಳು-06. ಹೀಗೆ ಒಟ್ಟೂ 2,632/- ರೂಪಾಯಿ ಮೌಲ್ಯದ ಗೋವಾ ಸರಾಯಿಯನ್ನು ಮೂಟೆಯಲ್ಲಿ ಕಟ್ಟಿಕೊಂಡು ತನ್ನ ಲಾಭಕ್ಕೋಸ್ಕರ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ತನ್ನಸ್ವಾಧೀನದಲ್ಲಿ ಇಟ್ಟುಕೊಂಡು ಸಾಗಾಟ ಮಾಡುತ್ತಿರುವಾಗ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಜಶೇಖರ ಬಿ. ಸಂಗನೂರ, ಪಿ.ಎಸ್.ಐ, ಮಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 09-04-2021 ರಂದು 09-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 67/2021, ಕಲಂ: 324, 504 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಮಾಶ್ಯಾ ತಂದೆ ಕನ್ನೆ ಗೌಡ, ಪ್ರಾಯ-55 ವರ್ಷ, ವೃತ್ತಿ-ಕೂಲಿಕೆಲಸ, ಸಾ|| ಬಾವಿಗದ್ದೆ, ತಳಗದ್ದೆ, ತಾ: ಅಂಕೋಲಾ. ನಮೂdit ಆರೋಪಿತನಿಗೂ ಹಾಗೂ ಪಿರ್ಯಾದಿ ಮತ್ತು ಪಿರ್ಯಾದಿಯವರ ತಮ್ಮನಾದ ಸುಧಾಕರನಿಗೂ ಜಾಗದ ವಿಷಯವಾಗಿ ಸುಮಾರು 1 ವರ್ಷದಿಂದ ಜಗಳವಾಗುತ್ತಾ ಬಂದಿದ್ದು, ದಿನಾಂಕ: 07-04-2021 ರಂದು 20-30 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ತಳಗದ್ದೆಯ ಬಾವಿಗದ್ದೆಯಲ್ಲಿ ಪಿರ್ಯಾದಿಯವರು ಮನೆಯಿಂದ ಚಹಾ ಅಂಗಡಿಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿತನು ಪಿರ್ಯಾದಿಗೆ ‘ಬೋಳಿ ಮಗನೆ, ಸೂಳೆ ಮಗನೆ’ ಅಂತಾ ಅವಾಚ್ಯವಾಗಿ ಬೈಯ್ದು, ಚಾಕುವಿನಿಂದ ಪಿರ್ಯಾದಿಯ ಎಡಗೈಗೆ, ಎಡ ಹೊಟ್ಟೆಯ ಭಾಗ ಮತ್ತು ಬಲಭುಜಕ್ಕೆ ಹೊಡೆದು ರಕ್ತದ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಾದೇವ ತಂದೆ ಗಣಪು ಗೌಡ, ಪ್ರಾಯ 40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಾವಿಗದ್ದೆ, ತಳಗದ್ದೆ, ತಾ: ಅಂಕೋಲಾ ರವರು ದಿನಾಂಕ: 09-04-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 82/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತೆ ಶ್ರೀಮತಿ ಭವಾನಿ ವಾಮನ ದೇಶಭಂಡಾರಿ, ಪ್ರಾಯ-43 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಉಳ್ಳೂರು ಮಠ ಕ್ರಾಸ್, ಕೊಳಗೇರಿ, ದಿವಳ್ಳಿ, ತಾ: ಕುಮಟಾ. ನಮೂದಿತ ಆರೋಪಿತಳು ದಿನಾಂಕ: 09-04-2021 ರಂದು 12-30 ಗಂಟೆಗೆ ಕುಮಟಾದ ದಿವಳ್ಳಿ ಊರಿನ ಕೊಳಗೇರಿಯಲ್ಲಿ ಉಳ್ಳೂರು ಮಠ ಕ್ರಾಸ್ ಹತ್ತಿರ ಅವರ ಮನೆಯ ಎದುರಿಗೆ ರಸ್ತೆಯ ಅಂಚಿನ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ಸುಮಾರು 4,363/- ರೂಪಾಯಿ ಮೌಲ್ಯದ ವಿವಿಧ ಮಾದರಿಯ ಸಾರಾಯಿ ಮತ್ತು ಬಿಯರ್ ಬಾಟಲಿಗಳನ್ನು ಮಾರಾಟ ಮಾಡುವ ಉದ್ದೇಶದಿಂದ ತನ್ನ ತಾಬಾ ಇಟ್ಟುಕೊಂಡಿರುವಾಗ ಪೊಲೀಸರನ್ನು ನೋಡಿ ಮದ್ಯದ ಬಾಟಲಿಗಳನ್ನು ಬಿಟ್ಟು ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಸುಧಾ ಅಘನಾಶಿನಿ, ಪಿ.ಎಸ್.ಐ-1 (ಕ್ರೈಂ), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 09-04-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 51/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹ್ಮದ್ ನಾತಿಕ್ ತಂದೆ ಗುಲಾಮಗೌಸ್ ಶೇಖ್, ಸಾ|| ಮದೀನಾ ಕಾಲೋನಿ, ತಾ: ಭಟ್ಕಳ (ಮಾರುತಿ ಸ್ವಿಫ್ಟ್ ಕಾರ್ ನಂ: ಕೆ.ಎ-47/ಎಮ್-6093 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 09-04-2021 ರಂದು 18-45 ಗಂಟೆಯ ಸಮಯಕ್ಕೆ ತನ್ನ ಹಳದಿ ಬಣ್ಣದ ಮಾರುತಿ ಸ್ವಿಫ್ಟ್ ಕಾರ್ ನಂ: ಕೆ.ಎ-47/ಎಮ್-6093 ನೇದನ್ನು ಭಟ್ಕಳ ಕಡೆಯಿಂದ ಕುಂಟವಾಣಿ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ತನ್ನ ಎದುರುಗಡೆಯಿಂದ ಅಂದರೆ ಕುಂಟವಾಣಿ ಕಡೆಯಿಂದ ಭಟ್ಕಳ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-8934 ನೇದರ ಸವಾರರಾದ ಮಂಜುನಾಥ ತಂದೆ ಸೋಮಯ್ಯ ದೇವಾಡಿಗ, ಸಾ|| ವಿ.ವಿ ರೋಡ, ಮಣ್ಕುಳಿ, ತಾ: ಭಟ್ಕಳ ಹಾಗೂ ಸಣ್ಣು ತಂದೆ ಸಂಕಯ್ಯ ಗೊಂಡ, ಸಾ|| ತಲಗೋಡ, ಗೊಂಡರಕೇರಿ, ತಾ: ಭಟ್ಕಳ ಇವರಿಗೆ ಎದುರುಗಡೆಯಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದರ ಪರಿಣಾಮ ಇಬ್ಬರು ರಸ್ತೆಯ ಮೇಲೆ ಮೋಟಾರ್ ಸೈಕಲ್ ಸಮೇತ ಬಿದ್ದಿದ್ದರಿಂದ, ಮೋಟಾರ್ ಸೈಕಲ್ ಸವಾರನ ಬಲಗಾಲಿಗೆ ಮತ್ತು ತಲೆಗೆ ಭಾರೀ ಗಾಯ ಪಡಿಸಿದ್ದು ಹಾಗೂ ಮೋಟಾರ್ ಸೈಕಲ್ ಹಿಂಬದಿ ಸವಾರನ ಬಲಗಾಲಿಗೆ ತೀವ್ರ ಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಯತೀಶ ತಂದೆ ಚಂದ್ರಶೇಖರ ಪೂಜಾರಿ, ಪ್ರಾಯ-19 ವರ್ಷ, ವೃತ್ತಿ-ಪೆಟ್ರೋಲ್ ಬಂಕಿನಲ್ಲಿ ಕೆಲಸ, ಸಾ|| ಮಣ್ಕುಳಿ ಪೆಟ್ರೋಲ್ ಪಂಪ್ ಹತ್ತಿರ, ತಾ: ಭಟ್ಕಳ ರವರು ದಿನಾಂಕ: 09-04-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 36/2021, ಕಲಂ: 8(c), 20(b)(ii)(A) ಎನ್.ಡಿ.ಪಿ.ಎಸ್ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತ ಪ್ರಸನ್ನ @ ಪಚ್ಚು ತಂದೆ ಗಣಪತಿ ಕರುಬರ, ಪ್ರಾಯ-40 ವರ್ಷ, ವೃತ್ತಿ-ಚಾಲಕ, ಸಾ|| ಭಾಸ್ಕರ ಕಾಲೋನಿ, ಗಣೇಶ ನಗರ, ತಾ: ಶಿರಸಿ. ಈತನು ದಿನಾಂಕ: 09-04-2021 ರಂದು 19-05 ಗಂಟೆಗೆ ಶಿರಸಿ ನಗರದ ಶಿರಸಿ ಹುಲೇಕಲ್ ರಸ್ತೆಯ ಹೊಸ ಬಸ್ ನಿಲ್ದಾಣದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾದಕ ವಸ್ತುವನ್ನು ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡಿಕೊಂಡು ಬಂದು ಮಾರಾಟ ಮಾಡಲು ತನ್ನ ವಶದಲ್ಲಿಟ್ಟುಕೊಂಡಿರುವಾಗ ಪಿರ್ಯಾದಿಯವರು ಪಂಚರು, ಪತ್ರಾಂಕಿತ ಅಧಿಕಾರಿ, ತೂಕದ ವ್ಯಾಪಾರಿ ಹಾಗೂ ಸಿಬ್ಬಂದಿಗಳೊಂದಿಗೆ ಸೇರಿ ನಡೆಸಿದ ದಾಳಿಯ ಕಾಲಕ್ಕೆ 1). 60 ಗ್ರಾಂ ತೂಕದ ಗಾಂಜಾ ಮಾದಕ ವಸ್ತು, ಅ||ಕಿ|| 1,800/- ರೂಪಾಯಿ, 2). ವಿವಿಧ ಮುಖಬೆಲೆಯ ನಗದು ಹಣ 240/- ರೂಪಾಯಿಗಳೊಂದಿಗೆ ಆರೋಪಿತನು ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನಾಗಪ್ಪ, ಪಿ.ಎಸ್.ಐ, ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 09-04-2021 ರಂದು 20-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 78/2021, ಕಲಂ: 405, 417, 420 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಕಾಶಪ್ಪಾ ತಂದೆ ನಾಗಪ್ಪಾ ಹೊಸಮನಿ, ಪ್ರಾಯ-45 ವರ್ಷ, ಸಾ|| ಕಲಘಟಗಿ, ಧಾರವಾಡ. ನಮೂದಿತ ಆರೋಪಿತನು ಎತ್ತು ದನಕರಗಳನ್ನು ಮಾರಾಟ ಮಾಡುವ ಮತ್ತು ಕೊಡಿಸುವ ದಲ್ಲಾಳಿ ಅಂತಾ ಹೇಳಿ ಹಳಿಯಾಳ ತಾಲೂಕಿನ ಸಂಕನಕೊಪ್ಪ ಗ್ರಾಮದಲ್ಲಿ ದಿನಾಂಕ: 01-01-2020 ರಂದು 10-00 ಗಂಟೆಯಿಂದ ಇಲ್ಲಿಯವರೆಗೆ 1). ಪಿರ್ಯಾದಿಯವರ ಬಾಬ್ತು 83,000/- ರೂಪಾಯಿ ಕಿಮ್ಮತ್ತಿನ ಒಂದು ಜೊತೆ ಎತ್ತುಗಳನ್ನು, 2). ಶ್ರೀ ಕುಭೇರ ತಂದೆ ಕಲ್ಲಪ್ಪಾ ಬಾಂದುರ್ಗಿ, ಪ್ರಾಯ-45 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ತಟ್ಟಿಗೇರಿ, ತಾ: ಹಳಿಯಾಳ ಇವರ ಬಾಬ್ತು 45,000/- ರೂಪಾಯಿ ಕಿಮ್ಮತ್ತಿನ ಒಂದು ಜೊತೆ ಎತ್ತುಗಳನ್ನು, 3). ಶ್ರೀ ಚಂದ್ರಕಾಂತ ತಂದೆ ದೇಮಣ್ಣಾ ಗೌಡಾ, ಪ್ರಾಯ-52 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮುಗದಕೊಪ್ಪ, ತಾ: ಹಳಿಯಾಳ ಇವರ ಬಾಬ್ತು 50,000/- ರೂಪಾಯಿ ಕಿಮ್ಮತ್ತಿನ ಒಂದು ಜೊತೆ ಎತ್ತುಗಳನ್ನು, 4). ಶ್ರೀ ಶಿವಾಜಿ ತಂದೆ ಅಮೃತ ಕೊರ್ವೇಕರ, ಪ್ರಾಯ-60 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಸಂಕನಕೊಪ್ಪ, ತಾ: ಹಳಿಯಾಳ ಇವರ ಬಾಬ್ತು 54,500/- ರೂಪಾಯಿ ಕಿಮ್ಮತ್ತಿನ ಒಂದು ಜೊತೆ ಎತ್ತುಗಳನ್ನು, 5). ಶ್ರೀ ಯಲ್ಲಪ್ಪ ತಂದೆ ಪೀಶಪ್ಪ ಗೌಡ, ಪ್ರಾಯ-69 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮುಗದಕೊಪ್ಪ, ತಾ: ಹಳಿಯಾಳ ಇವರ ಬಾಬ್ತು 50,000/- ರೂಪಾಯಿ ಕಿಮ್ಮತ್ತಿನ ಒಂದು ಜೊತೆ ಎತ್ತುಗಳನ್ನು, 6). ಶ್ರೀ ಮಂಜುನಾಥ ತಂದೆ ಸೋಮನಿಂಗ ತೋರ್ಲೇಕರ, ಪ್ರಾಯ-31 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ನಂದಿಗದ್ದಾ, ತಾ: ಹಳಿಯಾಳ ಇವರ ಬಾಬ್ತು 66,500/- ರೂಪಾಯಿ ಕಿಮ್ಮತ್ತಿನ ಒಂದು ಜೊತೆ ಎತ್ತುಗಳನ್ನು, 7). ಶ್ರೀ ಕೇಶವ ತಂದೆ ನಾರಾಯಣ ಗೌಡ, ಪ್ರಾಯ-48 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ನಂದಿಗದ್ದಾ, ತಾ: ಹಳಿಯಾಳ ಇವರ ಬಾಬ್ತು 48,000/- ರೂಪಾಯಿ ಕಿಮ್ಮತ್ತಿನ ಒಂದು ಜೊತೆ ಎತ್ತುಗಳನ್ನು, 8). ಶ್ರೀ ಹನುಮಂತ ತಂದೆ ಭೀಮರಾಯ ಹುಲಕೊಪ್ಪಕರ, ಪ್ರಾಯ-50 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ತತ್ವಣಗಿ, ತಾ: ಹಳಿಯಾಳ ಇವರ ಬಾಬ್ತು 60,000/- ರೂಪಾಯಿ ಕಿಮ್ಮತ್ತಿನ ಒಂದು ಜೊತೆ ಎತ್ತುಗಳನ್ನು, 9). ಶ್ರೀ ನಾಗೇಂದ್ರ ತಂದೆ ಅಪ್ಪಣ್ಣಾ ನಾರ್ವೇಕರ, ಪ್ರಾಯ-55 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ನಂದಿಗದ್ದಾ, ತಾ: ಹಳಿಯಾಳ ಇವರ ಬಾಬ್ತು 72,000/- ರೂಪಾಯಿ ಕಿಮ್ಮತ್ತಿನ ಒಂದು ಜೊತೆ ಎತ್ತುಗಳನ್ನು, 10). ಶ್ರೀ ಸಂತೋಷ ತಂದೆ ಪರಶುರಾಮ್ ನಾರ್ವೇಕರ, ಪ್ರಾಯ-37 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ನಂದಿಗದ್ದಾ, ತಾ: ಹಳಿಯಾಳ ಇವರ ಬಾಬ್ತು 26,900/- ರೂಪಾಯಿ ಕಿಮ್ಮತ್ತಿನ ಒಂದು ಜೊತೆ ಎತ್ತುಗಳನ್ನು, 11). ಶ್ರೀ ನಿಂಗಪ್ಪಾ ತಂದೆ ನಾಗೇಂದ್ರ ಕೊರ್ವೇಕರ, ಪ್ರಾಯ-41 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಸಂಕನಕೊಪ್ಪ, ತಾ: ಹಳಿಯಾಳ ಇವರ ಬಾಬ್ತು 26,900/- ರೂಪಾಯಿ ಕಿಮ್ಮತ್ತಿನ ಒಂದು ಜೊತೆ ಎತ್ತುಗಳನ್ನು, 12). ಶ್ರೀ ರಾಮದಾಸ ತಂದೆ ಗೋವಿಂದ ಕೊರ್ವೇಕರ, ಪ್ರಾಯ-31 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಸಂಕನಕೊಪ್ಪ, ತಾ: ಹಳಿಯಾಳ ಇವರ ಬಾಬ್ತು 22,500/- ರೂಪಾಯಿ ಕಿಮ್ಮತ್ತಿನ ಒಂದು ಜೊತೆ ಎತ್ತುಗಳನ್ನು, 13). ಶ್ರೀ ಮಾರುತಿ ತಂದೆ ಯಶವಂತ ಮರಾಠಿ, ಪ್ರಾಯ-40 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಸಂಕನಕೊಪ್ಪ, ತಾ: ಹಳಿಯಾಳ ಇವರ ಬಾಬ್ತು 25,000/- ರೂಪಾಯಿ ಕಿಮ್ಮತ್ತಿನ ಒಂದು ಜೊತೆ ಎತ್ತುಗಳನ್ನು, 14). ಶ್ರೀ ಪರಶುರಾಮ್ ತಂದೆ ಸೋಮನಿಂಗ ವಾಲೇಕರ, ಪ್ರಾಯ-55 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಸಂಕನಕೊಪ್ಪ, ತಾ: ಹಳಿಯಾಳ ಇವರ ಬಾಬ್ತು 43,000/- ರೂಪಾಯಿ ಕಿಮ್ಮತ್ತಿನ ಒಂದು ಜೊತೆ ಎತ್ತುಗಳನ್ನು ಮತ್ತು 15). ಶ್ರೀ ವಿಠ್ಠಲ ತಂದೆ ಯಲ್ಲಾರಿ ಖಂಡೇಕರ, ಪ್ರಾಯ-65 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಜನಗಾ, ತಾ: ಹಳಿಯಾಳ ಇವರ ಬಾಬ್ತು 57,000/- ರೂಪಾಯಿ ಕಿಮ್ಮತ್ತಿನ ಒಂದು ಜೊತೆ ಎತ್ತುಗಳನ್ನು, ಹೀಗೆ ಒಟ್ಟೂ 7,30,300/- ರೂಪಾಯಿ ಮೌಲ್ಯದ 15 ಜೊತೆ ಎತ್ತುಗಳನ್ನು ಖರೀದಿ ಮಾಡಿ ‘ಮರು ದಿವಸ ಬಂದು ಹಣ ಕೊಡುತ್ತೇನೆ’ ಅಂತಾ ತೆಗೆದುಕೊಂಡು ಹೋದವನು, ಇಲ್ಲಿಯವರೆಗೆ ಯಾರಿಗೂ ಹಣವನ್ನು ಮುಟ್ಟಿಸದೇ, ಎತ್ತುಗಳನ್ನು ಸಂಬಂಧ ಪಟ್ಟವರಿಗೆ ವಾಪಸ್ ಒಪ್ಪಿಸದೇ, ಮೋಸ ಮಾಡಿ ನಂಬಿಕೆದ್ರೋಹ ಮತ್ತು ವಂಚನೆ ಮಾಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಬಸ್ಸೆಟ್ಟಿ ತಂದೆ ಹೂವಣ್ಣಾ ಮರಾಠಿ, ಪ್ರಾಯ-69 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಸಂಕನಕೊಪ್ಪ, ತಾ: ಹಳಿಯಾಳ ರವರು ದಿನಾಂಕ: 09-04-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 79/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರಸಾದ ತಂದೆ ಮಂಜುನಾಥ ಪಾಟೀಲ್, ಪ್ರಾಯ-25 ವರ್ಷ, ಸಾ|| ಕೆಸರೊಳ್ಳಿ, ತಾ: ಹಳಿಯಾಳ (ಮೋಟಾರ್ ಸೈಕಲ್ ನಂ: ಕೆ.ಎ-31/ಯು-7268 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 09-04-2021 ರಂದು 21-00 ಗಂಟೆಗೆ ಹಳಿಯಾಳ ತಾಲೂಕಿನ ಹವಗಿ ಗ್ರಾಮದ ಬಸ್ ನಿಲ್ದಾಣ ಹತ್ತಿರ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-31/ಯು-7268 ನೇದನ್ನು ಹಳಿಯಾಳ ಕಡೆಯಿಂದ ಅಳ್ನಾವರ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಾ, ತನ್ನ ಚಾಲನೆಯ ಮೇಲೆ ನಿಯಂತ್ರಣ ಕಳೆದುಕೊಂಡು ಹವಗಿ ಗ್ರಾಮದ ಕಡೆಯಿಂದ ಹವಗಿ ರಮೇಶ ನಾಯಕ ಇವರ ಅವಲಕ್ಕಿ ಮಿಲ್ ಕಡೆಗೆ ಸ್ಕೂಟಿ ನಂ: ಕೆ.ಎ-65/ಎಚ್-3698 ನೇದನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ಸಂದೀಪ ತಂದೆ ಅಣ್ಣಪ್ಪ, ಸಾ|| ಶಿವಮೊಗ್ಗ, ಹಾಲಿ ಸಾ|| ಹವಗಿ, ತಾ: ಹಳಿಯಾಳ ಇವರ ಸ್ಕೂಟಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಸಂದೀಪ ಇವರಿಗೆ ಮತ್ತು ಸಂದೀಪ ಇವರ ಸ್ಕೂಟಿ ಹಿಂಬದಿಯಲ್ಲಿ ಕುಳಿತಿದ್ದ ಸುರೇಶ ಮಡಿವಾಳ, ಸಾ|| ಹವಗಿ, ತಾ: ಹಳಿಯಾಳ ಇವರಿಗೆ ಸಾಧಾರಣ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ಸಾಧಾರಣ ಸ್ವರೂಪದ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಭೀಮರಾಯ ಚಿಣಗಿ, ಪ್ರಾಯ-47 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹವಗಿ, ತಾ: ಹಳಿಯಾಳ ರವರು ದಿನಾಂಕ: 09-04-2021 ರಂದು 23-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 42/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ರಾಜೀವ ತಂದೆ ಶೀನಪ್ಪಾ ಶೆಟ್ಟಿ, ಪ್ರಾಯ-61 ವರ್ಷ, ವೃತ್ತಿ-ಮೇಸ್ತ್ರಿ ಕೆಲಸ, ಸಾ|| ಉಪ್ಪಳ್ಳಿ, ಹೆರೂರು ಗ್ರಾಮ, ಪೋ: ಮೂಡಮಟ್ಟಾ, ತಾ: ಬೈಂದೂರು, ಜಿ: ಉಡುಪಿ. ನಮೂದಿತ ಆರೋಪಿತನು ದಿನಾಂಕ: 09-04-2021 ರಂದು ಮಧ್ಯಾಹ್ನ 14-30 ಗಂಟೆಗೆ ಸಿದ್ದಾಪುರ ಶಹರದ ತರಕಾರಿ ಮಾರ್ಕೆಟ್ ಹಿಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅನಧೀಕೃತವಾಗಿ ಸಾರ್ವಜನಿಕರಿಗೆ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟ ಕಾಲಕ್ಕೆ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ, 1). Original Choice Deluxe Whisky 90 ML ಅಂತಾ ಬರೆದ ಮದ್ಯ ತುಂಬಿದ 4 ಟೆಟ್ರಾ ಪ್ಯಾಕೆಟ್ ಗಳು, 2). 4 ಪ್ಲಾಸ್ಟಿಕ್ ಗ್ಲಾಸುಗಳು, 3). Original Choice Deluxe Whisky 90 ML ಅಂತಾ ಬರೆದ 2 ಮದ್ಯದ ಕಾಲಿ ಟೆಟ್ರಾ ಪ್ಯಾಕೆಟ್ ಗಳು, 4). ಕೈ ಚೀಲ-1. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಂತಪ್ಪ ಜಿ ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 09-04-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 37/2021, ಕಲಂ: 323, 324, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಂಜುನಾಥ ತಂದೆ ಶಿವಪುತ್ರಪ್ಪ ಜಕ್ಕಣ್ಣನವರ, 2]. ನಾಗಪ್ಪ ತಂದೆ ನಾಗಪ್ಪ ಯಾಲಕ್ಕಿ, 3]. ಮಂಜು ತಂದೆ ನಾಗಪ್ಪ ಯಾಲಕ್ಕಿ, 4]. ಸಿಕಂದರ ಮಿಯಾಜಾನ್, ಸಾ|| (ಎಲ್ಲರೂ) ದಾಸನಕೊಪ್ಪ, ತಾ: ಶಿರಸಿ. ಈ ಪ್ರಕರಣದ ಪಿರ್ಯಾದಿ ಮತ್ತು ಆತನ ಸ್ನೇಹಿತರಾದ ಗಜಾನನ ತಂದೆ ಚಂದ್ರಶೇಖರ ಚಕ್ರಸಾಲಿ, ರೆಹಮುತ್‍ವುಲ್ಲಾ ಬಾಷಾ ಸಾಬ್ ಶಿರಗೋಡ ಇವರುಗಳು ದಿನಾಂಕ: 07-04-2021 ರಂದು 20-00 ಗಂಟೆಗೆ ದಾಸನಕೊಪ್ಪ-ಬನವಾಸಿ ರಸ್ತೆಯ ದಾಸನಕಟ್ಟೆಯ ಕೆರೆಯ ಹತ್ತಿರ ಇರುವ ಭೂತಪ್ಪನಕಟ್ಟೆಯ ಬಳಿ ನಿಂತುಕೊಂಡಾಗ ನಮೂದಿತ ಆರೋಪಿತರು ಪಿರ್ಯಾದಿ ಮತ್ತು ಆತನ ಸ್ನೇಹಿತರನ್ನು ಉದ್ದೇಶಿಸಿ ‘ಇಲ್ಲಿ ಯಾಕೆ ನಿಂತುಕೊಂಡಿದ್ದಿರಿ? ನಮ್ಮ ಕೆರೆಯ ಮೀನು ಹಿಡಿಯಲು ಬಂದಿದ್ದಿರಾ ಬೋಳಿ ಮಕ್ಕಳೆ, ಸೂಳೆ ಮಕ್ಕಳೆ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಕೈಯಿಂದ ಕಾಲಿನಿಂದ ಮೈಮೇಲೆ ಹೊಡೆದು ಗಾಯನೋವು ಪಡಿಸಿ, ಆರೋಪಿ 3 ನೇಯವನು ಕಟ್ಟಿಗೆಯ ಬಡಿಗೆಯಿಂದ ಪಿರ್ಯಾದಿಗೆ ಹೊಡೆದಿದ್ದಲ್ಲದೇ, ಸದರಿಯವರೆಲ್ಲರೂ ಕೂಡಿಕೊಂಡು ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಪುಟ್ಟಪ್ಪ ತಂದೆ ಬಸವರಾಜ ಗೌಡ, ಪ್ರಾಯ-35 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಬೆಳ್ಳನಕೇರಿ, ಪೋ: ದಾಸನಕೊಪ್ಪ, ತಾ: ಶಿರಸಿ ರವರು ದಿನಾಂಕ: 09-04-2021 ರಂದು 22-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 09-04-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

 

 

 

 

ಇತ್ತೀಚಿನ ನವೀಕರಣ​ : 11-04-2021 09:03 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080