ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 09-04-2022

at 00:00 hrs to 24:00 hrs

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 18/2022, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನರೇಂದ್ರ ತಂದೆ ಸಂದೀಪ ನಾಯ್ಕ, ಪ್ರಾಯ-17 ವರ್ಷ, ವೃತ್ತಿ-ಐಟಿಐ ವಿದ್ಯಾರ್ಥಿ, ಸಾ|| ಉಳಗಾ, ಕಾರವಾರ (ಮೋಟಾರ್ ಸೈಕಲ್ ನಂ: ಕೆ.ಎ-30/ಕ್ಯೂ-8232 ನೇದರ ಸವಾರ). ಪಿರ್ಯಾದಿಯು ದಿನಾಂಕ: 09-04-2022 ರಂದು ಎಂದಿನಂತೆ ವಾಚಮೆನ್ ಕೆಲಸ ಮುಗಿಸಿಕೊಂಡು ಕಾರವಾರದಿಂದ ಬಸ್ ಮೂಲಕ ಹಳಗಾಗೆ ಹೋಗಿ ನಾರಾಯಣ ದೇವಸ್ಥಾನದ ಹತ್ತಿರ ಇಳಿದು ರಸ್ತೆಯ ಎಡಬದಿಯಿಂದ ನಡೆದುಕೊಂಡು ಮನೆಗೆ ಹೋಗುತ್ತಿರುವಾಗ ಮುಂದಿನಿಂದ ಬಂದ ಮೋಟಾರ್ ಸೈಕಲ್ ನಂ: ಕೆ.ಎ-30/ಕ್ಯೂ-8232 ನೇದರ ಸವಾರನಾದ ನಮೂದಿತ ಆರೋಪಿತನು ತನ್ನ ಮೋಟಾರ್ ಸೈಕಲನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಎದುರುಗಡೆಗಯಿಂದ ಬಂದು ತನ್ನ ಸೈಡನ್ನು ಬಿಟ್ಟು ಪಿರ್ಯಾದಿಯ ಸೈಡಿಗೆ ಬಂದು ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯ ತಲೆಯ ಹಿಂಭಾಗದಲ್ಲಿ ಗಾಯವಾಗಿ ರಕ್ತ ಬರುವಂತೆ ಹಾಗೂ ಮುಖದ ಭಾಗದಲ್ಲಿ ಮತ್ತು ಬಾಯಿಯ ಹತ್ತಿರ ಒಳನೋವಾಗಲು ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಪ್ರಕಾಶ ತಂದೆ ಮುರಾರಿ ಗುನಗಿ, ಪ್ರಾಯ-59 ವರ್ಷ, ವೃತ್ತಿ-ವಾಚಮೆನ್ ಕೆಲಸ, ಸಾ|| ಘಾಡಸಾಯಿ, ಹಳಗಾ, ಕಾರವಾರ ರವರು ದಿನಾಂಕ: 09-04-2022 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 64/2022, ಕಲಂ: ಮನುಷ್ಯ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮನುಷ್ಯ ಶ್ರೀ ರಾಘವೇಂದ್ರ ತಂದೆ ಗಣಪತಿ ಆಗೇರ, ಪ್ರಾಯ-22 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ವಾಸರಕುದ್ರಿಗೆ, ತಾ: ಅಂಕೋಲಾ. ಪಿರ್ಯಾದಿಯ ಮಗನಾದ ಈತನು ದಿನಾಂಕ: 05-04-2022 ರಂದು ಬೆಳಿಗ್ಗೆ 07-30 ಗಂಟೆಗೆ ತಮ್ಮ ಮನೆಯಾದ ವಾಸರಕುದ್ರಿಗೆಯಿಂದ ಗೌಂಡಿ ಕೆಲಸಕ್ಕೆ ಹೋಗುತ್ತೆನೆಂದು ಹೇಳಿ ಹೋದವನು ಇದುವರೆಗೂ ವಾಪಸ್ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾನೆ. ಸದ್ರಿ ಕಾಣೆಯಾದ ತನ್ನ ಮಗನನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಚೆನ್ನಿ ಗಂಡ ಗಣಪತಿ ಆಗೇರ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ವಾಸರಕುದ್ರಿಗೆ, ತಾ: ಅಂಕೋಲಾ ರವರು ದಿನಾಂಕ: 09-04-2022 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 75/2022, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಪಾಂಡುರಂಗ ತಂದೆ ನಾರಾಯಣ ಭಂಡಾರಿ, ಪ್ರಾಯ-56 ವರ್ಷ, ವೃತ್ತಿ-ಬೀಡಾ ಅಂಗಡಿ ವ್ಯಾಪಾರ, ಸಾ|| ಸಾಂತಗಲ್, ಫಾರೆಸ್ಟ್ ಚೆಕ್ ಪೋಸ್ಟ್ಟ್ ಹತ್ತಿರ, ತಾ: ಕುಮಟಾ, 2]. ಬುಡಾನ್ ತಂದೆ ಗಫಾರ್ ಶೇಖ್, ಪ್ರಾಯ-49 ವರ್ಷ, ವೃತ್ತಿ-ವ್ಯಾಪಾರ, ಸಾ|| ಸಂತೆಗುಳಿ, ಪಳ್ಳಿ ಹತ್ತಿರ, ತಾ: ಕುಮಟಾ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 09-04-2022 ರಂದು 13-30 ಗಂಟೆಗೆ ಕುಮಟಾ ತಾಲೂಕಿನ ಸಾಂತಗಲ್ ಫಾರೆಸ್ಟ್ ಚೆಕ್ ಪೋಸ್ಟ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು ಬರ-ಹೋಗುವ ಜನರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿಸಿಕೊಂಡು ಓ.ಸಿ ಚೀಟಿ ಬರೆದು ಓ.ಸಿ ಮಟಕಾ ಜುಗರಾಟ ನಡೆಸುತ್ತಿದ್ದಾಗ ದಾಳಿಯ ಕಾಲ 1). ನಗದು ಹಣ 2,070/- ರೂಪಾಯಿ, 2). ಅಂಕೆ-ಸಂಖ್ಯೆ ಬರೆದ ಚೀಟಿ-01. ಅ||ಕಿ|| 00.00/- ರೂಪಾಯಿ, 3). ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿಗಳ ಸಮೇತ ಸಿಕ್ಕಿದ್ದು ಹಾಗೂ ಸದರಿ ಓ.ಸಿ ಆಟದಿಂದ ಬಂದ ಹಣವನ್ನು ಓ.ಸಿ ಬುಕ್ಕಿಯಾದ ಆರೋಪಿ 2 ನೇಯವನಿಗೆ ನೀಡುವುದಾಗಿ ತಿಳಿಸಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ತಿಮ್ಮಪ್ಪ ನಾಯ್ಕ, ಪೊಲೀಸ್ ನಿರೀಕ್ಷಕರು, ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 09-04-2022 ರಂದು 15-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 138/2022, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಗಜಾನನ ವೆಂಕಟ್ರಮಣ ನಾಯ್ಕ, ಪ್ರಾಯ-39 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಉಪಳೆ, ಹೆಬ್ಬಾನಕೇರಿ, ತಾ: ಹೊನ್ನಾವರ, 2]. ರಮೇಶ ಕೃಷ್ಣ ಶೆಟ್ಟಿ, ಪ್ರಾಯ-47 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೆಳಗಿನಕೇರಿ, ನವಿಲಗೋಣ, ತಾ: ಹೊನ್ನಾವರ, 3]. ವಿನೋದ ಗೋವಿಂದ ನಾಯ್ಕ, ಪ್ರಾಯ-30 ವರ್ಷ, ಸಾ|| ಬೆಂತ್ಲಕೇರಿ, ನವಿಲಗೋಣ, ತಾ: ಹೊನ್ನಾವರ, 4]. ಗುಂಡು ಮಂಜುನಾಥ ಕೊಡಿಯಾ, ಪ್ರಾಯ-26 ವರ್ಷ, ಸಾ|| ನವಿಲಗೋಣ, ತಾ: ಹೊನ್ನಾವರ ಹಾಗೂ ಇತರ 4 ಜನರು. ಈ ನಮೂದಿತ ಆರೋಪಿತರು ದಿನಾಂಕ: 08-4-2022 ರಂದು 22-50 ಗಂಟೆಗೆ ಹೊನ್ನಾವರ ತಾಲೂಕಿನ ನವಿಲಗೋಣ ಕೆಳಗಿನಕೇರಿ ಅರಣ್ಯ ಜಾಗದ ಸಾರ್ವಜನಿಕ ಸ್ಥಳದಲ್ಲಿ ತಮ್ಮ-ತಮ್ಮ ಅನ್ಯಾಯದ ಲಾಭಕ್ಕೋಸ್ಕರ ಮೇಣದ ಬತ್ತಿ ಬೆಳಕಿನಲ್ಲಿ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ ಅಂದರ್-ಬಾಹರ್ ಜೂಗಾರಾಟವನ್ನು ಆಡುತ್ತಿದ್ದಾಗ ದಾಳಿಯ ಕಾಲಕ್ಕೆ ಒಟ್ಟು ನಗದು ಹಣ 650/- ರೂಪಾಯಿ, ಇಸ್ಪೀಟ್ ಎಲೆಗಳು-52 ಹಾಗೂ ಹಳದಿ ಪ್ಲಾಸ್ಟಿಕ್ ತಾಡಪಾಲ ಮಂಡ-01, ಅರ್ದ ಉರಿದ ಮೇಣದ ಬತ್ತಿ-02 ಇವುಗಳೊಂದಿಗೆ ಆರೋಪಿ 1 ಹಾಗೂ 2 ನೇಯವರು ಸೆರೆ ಸಿಕ್ಕಿದ್ದು ಹಾಗೂ ಉಳಿದ ಆರೋಪಿತರು ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಶಿಕುಮಾರ ಸಿ. ಆರ್, ಪಿ.ಎಸ್.ಐ (ತನಿಖೆ-2), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 09-04-2022 ರಂದು 01-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 46/2022, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಗಣಪತಿ ತಂದೆ ಮಂಜಪ್ಪ ನಾಯ್ಕ, ಪ್ರಾಯ-50 ವರ್ಷ, ವೃತ್ತಿ-ಗೂಡಂಗಡಿ ವ್ಯಾಪಾರ, ಸಾ|| ಸೋನಾರಕೇರಿ, ಕಟ್ಟೆಮನೆ, ಮಾವಳ್ಳಿ-1, ಮುರ್ಡೇಶ್ವರ, ತಾ: ಭಟ್ಕಳ. ಈತನು ದಿನಾಂಕ: 09-04-2022 ರಂದು 12-45 ಗಂಟೆಗೆ ಮುರ್ಡೇಶ್ವರದ ಸೋನಾರಕೇರಿಯಲ್ಲಿ ಶ್ರೀ ಮುರ್ಡೇಶ್ವರ ದೇವರ ಕಲ್ಯಾಣಿ (ನೀರಿನ ಹೊಂಡ) ಸಮೀಪ ಒಂದು ಗೂಡಂಗಡಿಯ ಎದುರು ಸಾರ್ವಜನಿಕ ಸ್ಥಳದಲ್ಲಿ ಸಂಬಂಧಪಟ್ಟ ಅಧೀಕೃತ ಅಧಿಕಾರಿಗಳಿಂದ ಅನುಮತಿ ಅಥವಾ ಪಾಸ್ ಯಾ ಪರ್ಮಿಟ್ ಹೊಂದದೇ ಅಕ್ರಮವಾಗಿ 1). Original Choice DELUXE WHISKY ಸರಾಯಿ ಪ್ಯಾಕೆಟ್ ಗಳು-88, 2). HAYWARDS CHEERS WHISKY ಸರಾಯಿ ಪ್ಯಾಕೆಟ್ ಗಳು-88, 3). OLD TAVERN Whisky ಸರಾಯಿ ಪ್ಯಾಕೆಟ್ ಗಳು-36. ಹೀಗೆ ಒಟ್ಟು 9305.88/- ರೂಪಾಯಿ ಮೌಲ್ಯದ ಸರಾಯಿ ಪ್ಯಾಕೆಟ್ ಗಳನ್ನು ತನ್ನ ಲಾಭಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ತನ್ನ ತಾಬಾ ಇಟ್ಟುಕೊಂಡಿರುವಾಗ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪರಮಾನಂದ ಬಿ. ಕೊಣ್ಣೂರ, ಪಿ.ಎಸ್.ಐ (ಕಾ&ಸು), ಮುರ್ಡೇಶ್ವರ ಪೊಲೀಸ್ ಠಾಣೆ ರವರು ದಿನಾಂಕ: 09-04-2022 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 28/2022, ಕಲಂ: 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 08-04-2022 ರಂದು ಬೆಳಿಗ್ಗೆ 10-30 ಗಂಟೆಯಿಂದ 12-00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯ ಮನೆಯ ಕೋಣೆಯ ಬೀರುವಿನಲ್ಲಿದ್ದ ನೀಲಿ ಬಣ್ಣದ ಬ್ಯಾಗಿನಲ್ಲಿಟ್ಟಿದ್ದ 1). ಏರಟೆಲ್ ಕಂಪನಿಯ ಸಿಮ್ ನಂ: 819796770 ನೇದನ್ನು ಅಳವಡಿಸಿದ ನೋಕಿಯಾ ಕಂಪನಿಯ ಮೊಬೈಲ್ ಪೋನ್-1, ಅ||ಕಿ|| 500/- ರೂಪಾಯಿ, 2). ಬಂಗಾರದ ಲಕ್ಷ್ಮಿ ಹಾರ ಅಂದಾಜು-16 ಗ್ರಾಂ ಮೌಲ್ಯ 64,000/- ರೂಪಾಯಿ, 3). ಬಂಗಾರದ ಗುಂಡಿನ ಹಾರ ಅಂದಾಜು 25 ಗ್ರಾಂ, ಮೌಲ್ಯ 1,00,000/- ರೂಪಾಯಿ, 4). ಬಂಗಾರದ ಉಂಗುರ-4, ಅಂದಾಜು 20 ಗ್ರಾಂ, ಮೌಲ್ಯ 80,000/- ರೂಪಾಯಿ, 5). ಬಂಗಾರದ ಬಳೆ 2, ಅಂದಾಜು 30 ಗ್ರಾಂ, ಮೌಲ್ಯ 1,20,000/- ರೂಪಾಯಿ, 6). ನಗದು ಹಣ 75,000/- ರೂಪಾಯಿ, 7). ಎಫ್.ಡಿ ಸರ್ಟಿಫಿಕೇಟ್, ಅ||ಕಿ|| 00.00/- ರೂಪಾಯಿ, 8). ಎಸ್.ಬಿ.ಐ ಪಾಸಬುಕ್, ಅ||ಕಿ|| 00.00/- ರೂಪಾಯಿ, 9). ಎಸ್.ಬಿ.ಐ ಚೆಕ್ ಬುಕ್, ಅ||ಕಿ|| 00.00/- ರೂಪಾಯಿ. ಹೀಗೆ ಒಟ್ಟೂ 4,39,500/- ರೂಪಾಯಿ ನೇದವುಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಕಮಲಾ @ ಉಷಾ ಕೋಂ. ರಾಮಚಂದ್ರ ವಝೆ, ಪ್ರಾಯ-83 ವರ್ಷ, ವೃತ್ತಿ-ಗೃಹಿಣಿ, ಸಾ|| ಮನೆ ನಂ: 1803, ವಝೆ ಕಂಪೌಂಡ್, ಬನವಾಸಿ ರೋಡ್, ತಾ: ಶಿರಸಿ ರವರು ದಿನಾಂಕ: 09-04-2022 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 44/2022, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಚಂದ್ರಶೇಖರ ತಂದೆ ನಾರಾಯಣ ಮಂಕ್ರೋಳ್ಳಿ, ಪ್ರಾಯ-26 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮುಗವಳ್ಳಿ, ತಾ: ಶಿರಸಿ. ಈತನು ದಿನಾಂಕ: 09-04-2022 ರಂದು 10-05 ಗಂಟೆಗೆ ಮುಗವಳ್ಳಿ ಗ್ರಾಮದ ತನ್ನ ಮನೆಯ ಪಕ್ಕದ ಸಾರ್ವಜನಿಕ ಸ್ಥಳದ ತಾತ್ಕಾಲಿಕ ಶೆಡ್ಡಿನಲ್ಲಿ ಸಾರ್ವಜನಿಕರಿಗೆ ಮದ್ಯ ಸೇವಿಸಲು ಅನುವು ಮಾಡಿ ಕೊಡುತ್ತಿರುವಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದ ಕಾಲಕ್ಕೆ ಅಬಕಾರಿ ಸ್ವತ್ತುಗಳಾದ 1). Haywards Cheers Whisky 90 ML ಟೆಟ್ರಾ ಪ್ಯಾಕೆಟ್ ಗಳು-10, ಅ||ಕಿ|| 351.30/- ರೂಪಾಯಿ, 2). Haywards Cheers Whisky 90 ML ಅಂತಾ ಲೇಬಲ್ ಮದ್ಯದ ಖಾಲಿ ಟೆಟ್ರಾ ಪ್ಯಾಕ್-02, ಅ||ಕಿ|| 00.00/- ರೂಪಾಯಿ, 3). ನಗದು ಹಣ 110/- ರೂಪಾಯಿ, 4). ಪ್ಲಾಸ್ಟಿಕ್ ಲೋಟ-02, ಅ||ಕಿ|| 00.00/- ರೂಪಾಯಿ ನೇದವುಗಳೊಂದಿಗೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಹಣಮಂತ ಬಿರಾದಾರ, ಪಿ.ಎಸ್.ಐ (ಕಾ&ಸು), ಬನವಾಸಿ ಪೊಲೀಸ್ ಠಾಣೆ ರವರು ದಿನಾಂಕ: 09-04-2022 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 09-04-2022

at 00:00 hrs to 24:00 hrs

 

ಹಳಿಯಾಳ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 07/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ತಿಪ್ಪಣ್ಣ ತಂದೆ ಭೀಮಪ್ಪ ವಡ್ಡರ, ಪ್ರಾಯ-50 ವರ್ಷ, ವೃತ್ತಿ-ಚಾಲಕ, ಸಾ|| ಬೆಳವಟಗಿ, ತಾ: ಹಳಿಯಾಳ. ಪಿರ್ಯಾದಿಯ ಗಂಡನಾದ ಈತನು ಇವರು ವಿಪರೀತ ಸರಾಯಿ ಕುಡಿದು ಮನೆಯಲ್ಲಿ ಜಗಳ ಮಾಡುತ್ತಿದ್ದರಿಂದ ಬೇಸತ್ತಿದ್ದ ಪಿರ್ಯಾದಿಯವರು ಕಳೆದ 10 ವರ್ಷಗಳ ಹಿಂದೆ ತಮ್ಮ ಎರಡು ಜನ ಮಕ್ಕಳೊಂದಿಗೆ ಹಳಿಯಾಳಕ್ಕೆ ಬಂದು ದೇಶಪಾಂಡೆ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದು, ಪಿರ್ಯಾದಿಯ ಗಂಡ ತಿಪ್ಪಣ್ಣ ಇವರು ಆಗಾಗ ಹಳಿಯಾಳದಲ್ಲಿರುವ ತನ್ನ ಹೆಂಡತಿ ಮನೆಗೆ ಬಂದು ಇದ್ದು ಹೋಗುತ್ತಿದ್ದು, ಪಿರ್ಯಾದಿಯವರು ಸಹ ಆಗಾಗ ತನ್ನ ಗಂಡನ ಮನೆಯಾದ ಬೆಳವಟಗಿಗೆ ಹೋಗಿ ಬರುತ್ತಾ, ಸರಾಯಿ ಕುಡಿಯುವುದನ್ನು ಬಿಡು ಅಂತಾ ಹೇಳಿದರೂ ಕೇಳದ ತಿಪ್ಪಣ್ಣ ಈತನು ದಿನಾಂಕ: 04-04-2022 ರಂದು ಮಧ್ಯಾಹ್ನ 12-00 ಗಂಟೆಯಿಂದ ದಿನಾಂಕ: 09-04-2022 ರಂದು ಬೆಳಿಗ್ಗೆ 10-00 ಗಂಟೆಯ ನಡುವಿನ ಅವಧಿಯಲ್ಲಿ ಸರಾಯಿ ಕುಡಿದು ನಶೆಯಲ್ಲಿ ತನಗಿರುವ ಯಾವುದೋ ವೈಯಕ್ತಿಕ ಸಮಸ್ಯೆಯಿಂದ ಅಥವಾ ತನ್ನ ಹೆಂಡತಿ ಮಕ್ಕಳನ್ನು ತನ್ನನ್ನು ಬಿಟ್ಟು ಬೇರೆ ವಾಸವಾಗಿರುತ್ತಾರೆ ಎಂಬುದನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಬೇಸತ್ತು ತನ್ನಾರೇ ತಾನು ಹಳಿಯಾಳ ತಾಲೂಕಿನ ಬೆಳವಟಗಿಯಲ್ಲಿರುವ ತನ್ನ ಮನೆಯ ದೇವರ ಕೋಣೆಯಲ್ಲಿ ನೈಲಾನ್ ಹಗ್ಗದಿಂದ ಮನೆಯ ಅಟ್ಟಲಿಗೆಗೆ ಹಾಕಿದ್ದ ಕಟ್ಟಿಗೆ ಎಳೆಗೆ ಉರುಳು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಶವವು ಕೊಳೆತ ಸ್ಥಿತಿಯಲ್ಲಿ ಇರುತ್ತದೆ. ಇದರ ಹೊರತು ಬೇರೇ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಲಕ್ಷ್ಮೀ ಕೋಂ. ತಿಪ್ಪಣ್ಣ ವಡ್ಡರ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬೆಳವಟಗಿ, ತಾ: ಹಳಿಯಾಳ, ಹಾಲಿ ಸಾ|| ದೇಶಪಾಂಡೆ ನಗರ, ಹಳಿಯಾಳ ಶಹರ ರವರು ದಿನಾಂಕ: 09-04-2022 ರಂದು 11-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 23-04-2022 05:45 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080