ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 09-08-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 69/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965  ನೇದ್ದರ ವಿವರ...... ನಮೂದಿತ ಆರೋಪಿತ ತುಳಸಿದಾಸ @ ತುಳಸ್ಯಾ ತಂದೆ ಲಕ್ಷ್ಮಣ ನಾವಗೆ, ಸಾ|| ಅಳವೆವಾಡಾ, ಕೋಡಿಭಾಗ, ಕಾರವಾರ. ಈತನು ದಿನಾಂಕ: 09-08-2021 ರಂದು 12-00 ಗಂಟೆಯ ಸುಮಾರಿಗೆ ತನ್ನ ತಾಬಾ ಯಾವುದೇ ಪಾಸ್ ಅಥವಾ ಪರ್ಮಿಟ್ ಪಡೆದುಕೊಳ್ಳದೇ ಕೋಡಿಬಾಗ ಅಳವೆವಾಡಾದ ಸಾರ್ವಜನಿಕ ಸ್ಥಳದಲ್ಲಿ ಗೋವಾ ರಾಜ್ಯ ತಯಾರಿಕೆಯ 1). ROYAL STAG RESERVE WHISKY-180 ML ಅಂತಾ ಲೇಬಲ್ ಇರುವ ಸರಾಯಿ ಬಾಟಲಿ-48, ಅ||ಕಿ|| 100 × 48 = 4,800/- ರೂಪಾಯಿ, 2). MCDOWELLS NO.1 RESERVE WHISKY, ORIGINAL-180 ML ಅಂತಾ ಲೇಬಲ್ ಇರುವ ಸರಾಯಿ ಬಾಟಲಿ-12, ಅ||ಕಿ|| 100 × 12 = 1,200/- ರೂಪಾಯಿ, 3). MCDOWELLS NO.1 LUXURY PREMIUM WHISKY, ORIGINAL-750 ML ಅಂತಾ ಲೇಬಲ್ ಇರುವ ಸರಾಯಿ ಬಾಟಲಿ-08, ಅ||ಕಿ|| 400 × 08 = 3,200/- ರೂಪಾಯಿ, 4). MCDOWELLS NO.1 PLATINUM LUXURY WHISKY, ORIGINAL-750 ML ಅಂತಾ ಲೇಬಲ್ ಇರುವ ಸರಾಯಿ ಬಾಟಲಿ-03 ಅ||ಕಿ|| 400 × 03 = 1,200/- ರೂಪಾಯಿ ಹಾಗೂ 5). ಪ್ಲಾಸ್ಟಿಕ್ ಚೀಲ-01, ಅ||ಕಿ|| 00.00/- ರೂಪಾಯಿ. ಹೀಗೆ ಒಟ್ಟೂ 10,400/- ರೂಪಾಯಿ ಬೆಲೆಬಾಳುವ ಗೋವಾ ಸರಾಯಿ ತುಂಬಿದ ಬಾಟಲಿಗಳನ್ನು ತನ್ನ ತಾಬಾ ಇಟ್ಟುಕೊಂಡು ಸಾಗಾಟ ಮಾಡುವ ತಯಾರಿಯಲ್ಲಿದ್ದವನು, ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಸರಾಯಿ ತುಂಬಿದ ಮೂಟೆಯನ್ನು ಬಿಟ್ಟು ಓಡಿ ಹೋಗಿ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಿದ್ದಪ್ಪಾ ಎಸ್. ಬೀಳಗಿ, ಪೊಲೀಸ್ ನಿರೀಕ್ಷಕರು, ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 09-08-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 121/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965  ನೇದ್ದರ ವಿವರ...... ನಮೂದಿತ ಆರೋಪಿತ ಸೋಮು ತಂದೆ ವಿಷ್ಣು ಗೌಡ, ಸಾ|| ಶಶಿಹಿತ್ತಲ್, ವಾಡಿಬೊಗ್ರಿ, ಬೆಳಂಬಾರ, ತಾ: ಅಂಕೋಲಾ. ಈತನು ದಿನಾಂಕ: 09-08-2021 ರಂದು 16-45 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಶಶಿಹಿತ್ತಲ್, ವಾಡಿಬೊಗ್ರಿ, ಬೆಳಂಬಾರದ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಯಾವುದೇ ಪಾಸ್ ಅಥವಾ ಪರವಾನಿಗೆ ಇಲ್ಲದೇ ಮಾರಾಟ ಮಾಡುವ ಉದ್ದೇಶದಿಂದ ಸುಮಾರು 9,642.42/- ರೂಪಾಯಿ ಮೌಲ್ಯದ ಕರ್ನಾಟಕ ರಾಜ್ಯದ ಮದ್ಯದ ಸ್ಯಾಚೆಟ್ ಗಳನ್ನು ಅಕ್ರಮವಾಗಿ ತಂದು ಮಾರಾಟ ಮಾಡುತ್ತಿದ್ದಾಗ ಪೊಲೀಸ್ ಜೀಪನ್ನು ಕಂಡು ಕೈ ಚೀಲಗಳನ್ನು ಅಲ್ಲಿಯೇ ಎಸೆದು ಓಡಿ ಹೋಗಿ ಪರಾರಿಯಾದ ಬಗ್ಗೆ ಪಿರ್ಯಾದಿ ಶ್ರೀ ಪ್ರವೀಣ ಕುಮಾರಆರ್, ಪಿ.ಎಸ್.ಐ-1, ಅಂಕೋಲಾ ಪೊಲೀಸ್ ಠಾಣೆ ರವರು ದಿನಾಂಕ: 09-08-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 57/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಅರುಣ ತಂದೆ ಲಕ್ಕಪ್ಪ, ಪ್ರಾಯ-22 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| 01 ನೇ ಕ್ರಾಸ್, 04 ನೇ ಮೇನ್, ಎನ್.ಎಸ್ ಪಾಳ್ಯ, ಬಿ.ಟಿ.ಎಮ್ 02 ನೇ ಸ್ಟೇಜ್, ಬನ್ನೇರಘಟ್ಟ ರೋಡ್, ಬೆಂಗಳೂರು-76. ಈತನು ದಿನಾಂಕ: 09-08-2021 ರಂದು ಬೆಳಿಗ್ಗೆ 07-45 ಗಂಟೆಯ ಸುಮಾರಿಗೆ ಗೋಕರ್ಣದ ಮೇನ್ ಬೀಚಿನ ಸಮುದ್ರದಲ್ಲಿ ಈಜಾಡಲು ಹೋದವನು, ಈಜಾಡಲಾಗದೇ ಸಮುದ್ರದ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದು, ಆತನು ಇನ್ನೂವರೆಗೂ ಪತ್ತೆಯಾಗಿಲ್ಲವಾಗಿದ್ದು, ಆತನನ್ನು ಹುಡುಕಿ ಕೊಡಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ರುದ್ರಾಆರಾಧ್ಯ ತಂದೆ ಮಲ್ಲಿಕಾರ್ಜುನಯ್ಯ ಎನ್. ಆರ್, ಪ್ರಾಯ-40 ವರ್ಷ, ವೃತ್ತಿ-ವ್ಯಾಪಾರ, ಸಾ|| 01 ನೇ ಕ್ರಾಸ್, 04 ನೇ ಮೇನ್, ಎನ್.ಎಸ್ ಪಾಳ್ಯ, ಬಿ.ಟಿ.ಎಮ್ 02 ನೇ ಸ್ಟೇಜ್, ಬನ್ನೇರಘಟ್ಟ ರೋಡ್, ಬೆಂಗಳೂರು-76 ರವರು ದಿನಾಂಕ: 09-08-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 210/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಪಾಂಡು ತಂದೆ ರಾಮ ನಾಯ್ಕ, ಪ್ರಾಯ-52 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜಲವಳ್ಳಿ ಕರ್ಕಿ, ತಾ: ಹೊನ್ನಾವರ, 2]. ಪ್ರಕಾಶ ತಂದೆ ರೆಮೆಂಡ್ ಫರ್ನಾಂಡೀಸ್, ಪ್ರಾಯ-31 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕವಲಕ್ಕಿ, ತಾ: ಹೊನ್ನಾವರ, 3]. ಸಚಿನ್ ತಂದೆ ಚಂದ್ರಕಾಂತ ನಾಯ್ಕ, ಪ್ರಾಯ-20 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನಗರೆ, ನಗರಬಸ್ತಿಕೇರಿ, ತಾ: ಹೊನ್ನಾವರ, 4]. ನಾಗರಾಜ ತಂದೆ ನಾರಾಯಣ ಅಂಬಿಗ, ಪ್ರಾಯ-36 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನಗರಬಸ್ತಿಕೇರಿ, ಗೇರುಸೊಪ್ಪ, ತಾ: ಹೊನ್ನಾವರ, 5]. ಮಾರುತಿ ತಂದೆ ಮಂಜುನಾಥ ನಾಯ್ಕ, ಪ್ರಾಯ-27 ವರ್ಷ, ವೃತ್ತಿ-ಆಚಾರಿ ಕೆಲಸ, ಸಾ|| ಮಾಗೋಡ, ತಾ: ಹೊನ್ನಾವರ, 6]. ಮಂಜುನಾಥ ತಂದೆ ಮೋಹನ ಗೌಡ, ಪ್ರಾಯ-28 ವರ್ಷ, ವೃತ್ತಿ-ಸೆಂಟ್ರಿಂಗ್ ಕೆಲಸ, ಸಾ|| ನಡುಗನಕೇರಿ, ಪಡುಕುಳಿ, ಜಲವಳ್ಳಿ, ತಾ: ಹೊನ್ನಾವರ. ಈ ನಮೂದಿತ ಆರೊಪಿತರು ದಿನಾಂಕ: 08-8-2021 ರಂದು 16-00 ಗಂಟೆಗೆ ಹೊನ್ನಾವರದ ಜಲವಳ್ಳಿಯ ಪ್ರಭಾತಕೇರಿಯ ಗ್ರಾಮ ಪಂಚಾಯತ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಹುಂಜಗಳನ್ನು ಎರಡು ಕಡೆಯಿಂದಲು ಕಾದಾಡಲು ಬಿಟ್ಟು ತಮ್ಮ ಲಾಭಕ್ಕೋಸ್ಕರ ಅವುಗಳ ಮೇಲೆ ಹಣವನ್ನು ಪಂಥವನ್ನಾಗಿ ಕಟ್ಟಿ ಕೋಳಿ ಅಂಕ ಜೂಜಾಟ ಆಡುತ್ತಿದ್ದಾಗ ದಾಳಿ ವೇಳೆ 1). ನಗದು ಹಣ ಒಟ್ಟು 2,600/- ರೂಪಾಯಿ, 2). ಕೋಳಿ ಹುಂಜಗಳು-04, ಅ||ಕಿ|| 1,200/- ನೇದವುಗಳೊಂದಿಗೆ ಎಲ್ಲಾ ಆರೋಪಿತರು ವಶಕ್ಕೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಶಿಕುಮಾರ ಸಿ. ಆರ್, ಪಿ.ಎಸ್.ಐ (ಕಾ&ಸು-1), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 09-08-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 108/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಿಹಾಲ್ ಶೆಟ್ಟಿ, ಸಾ|| ಪಡೀಲು, ಮಂಗಳೂರು (ರಾಯಲ್ ಎನಫೀಲ್ಡ್ ಮೋಟಾರ್ ಸೈಕಲ್ ನಂ: ಕೆ.ಎ-19/ಇ.ಎಕ್ಸ್-3048 ನೇದರ ಸವಾರ). ಈತನು ದಿನಾಂಕ: 09-08-2021 ರಂದು ಬೆಳಗಿನ ಜಾವ 03-30 ಗಂಟೆಗೆ ಅನಂತವಾಡಿ ಗ್ರಾಮದಲ್ಲಿರುವ ಹಂಚಿನ ಫ್ಯಾಕ್ಟರಿ ಸಮೀಪ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯಲ್ಲಿ ತಾನು ಸವಾರಿ ಮಾಡುತ್ತಿದ್ದ ರಾಯಲ್ ಎನಫೀಲ್ಡ್ ಮೋಟಾರ್ ಸೈಕಲ್ ನಂ: ಕೆ.ಎ-19/ಇ.ಎಕ್ಸ್-3048 ನೇದರಲ್ಲಿ ಹಿಂದುಗಡೆ ಧನುಷರಾಜ ಇವನಿಗೆ ಕೂಡ್ರಿಸಿಕೊಂಡು ಮುರ್ಡೇಶ್ವರ ಕಡೆಯಿಂದ ಮಂಕಿ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದವನು, ರಸ್ತೆಯಲ್ಲಿ ಸತ್ತು ಬಿದ್ದಿರುವ ಆಕಳನ್ನು ಗಮನಿಸದೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು, ಮೋಟಾರ್  ಸೈಕಲ್ ಹಿಂದೆ ಕುಳಿತ ಧನುಷರಾಜ ಇವನಿಗೆ ಮೈ ಕೈಗೆ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಕೂಡ ಮುಖಕ್ಕೆ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಗೊವೀಂದ ತಂದೆ ವೆಂಕಪ್ಪ ನಾಯ್ಕ, ಪ್ರಾಯ 45 ವರ್ಷ, ವೃತ್ತಿ-ಟಾಯರ್ ಪಂಕ್ಚರ್ ಅಂಗಡಿ, ಸಾ|| ಅನಂತವಾಡಿ, ತಾ: ಹೊನ್ನಾವರ ರವರು ದಿನಾಂಕ: 09-08-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 68/2021, ಕಲಂ: 25(1-B)(a), 27(1) ಮತ್ತು 30 ಭಾರತೀಯ ಆಯುಧ ಅಧಿನಿಯಮ-1959 ನೇದ್ದರ ವಿವರ...... ನಮೂದಿತ ಆರೋಪಿತರು 1]. ಹಿಪ್ಜುರ್ ರೆಹಮಾನ್ ತಂದೆ ಮಹಮ್ಮದ್ ಅಲಿ, ಪ್ರಾಯ 52 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಬೃಂದಾವನ ಕಾಲೋನಿ, ಕಸ್ತೂರಬಾ ನಗರ, ತಾ: ಶಿರಸಿ, 2]. ಅಬ್ದುಲ್ ರಜಾಕ್ ತಂದೆ ಅಬ್ದುಲ್ ವಾಹಿದ್, ಪ್ರಾಯ 22 ವರ್ಷ, ವೃತ್ತಿ-ಚಾಲಕ, ಸಾ|| ನೆಹರೂನಗರ, ತಾ: ಶಿರಸಿ, 3]. ಇನಾಯತ ಖಾನ್ ತಂದೆ ಬುಡಾನ್ ಖಾನ್, ಪ್ರಾಯ 46 ವರ್ಷ, ವೃತ್ತಿ-ಚಾಲಕ, ಸಾ|| ಮಸೀದಿಯ ಹತ್ತಿರ, ನೆಹರೂನಗರ, ತಾ: ಶಿರಸಿ, 4]. ಮಹಮ್ಮದ್ ಇಸ್ಮಾಯಿಲ್ ತಂದೆ ಮಹಮ್ಮದ್ ಉಸ್ಮಾನ್ ಸಾಬ್, ಸಾ|| ಹೆರೂರ, ತಾ: ಸಿದ್ದಾಪುರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ಹಾಗೂ 2 ನೇಯವರು ಸೇರಿಕೊಂಡು ದಿನಾಂಕ: 07-08-2021 ರಂದು ಆರೋಪಿ 2 ನೇಯವನು ಬಳಸುತ್ತಿರುವ ಮಾರುತಿ 800 ಕಾರ್ ನಂ: ಕೆ.ಎ-31/ಎಮ್-1424 ನೇದರಲ್ಲಿ ಆರೋಪಿ 4 ನೇಯವನ ಮನೆಗೆ ಹೋದಾಗ ಆರೋಪಿ 1 ನೇಯವನು ತನ್ನ ತೋಟಕ್ಕೆ ಕಾಡು ಪ್ರಾಣಿಗಳ ಕಾಟ ಜಾಸ್ತಿಯಾಗಿದೆ ಎಂದು ಹೇಳಿದಾಗ ಆರೋಪಿ 4 ನೇಯವನು ಲೈಸೆನ್ಸ್ ಮೂಲಕ ಪಡೆದುಕೊಂಡ ತನ್ನ ಬಂದೂಕನ್ನು ಮತ್ತು 4 ಜೀವಂತ ಕಾಡತೂಸುಗಳನ್ನು ಆರೋಪಿ 1 ನೇಯವನಿಗೆ ನೀಡಿದ್ದು, ಆರೋಪಿ 1 ಮತ್ತು 2 ನೇಯವರು ಸೇರಿಕೊಂಡು ಸದ್ರಿ ಬಂದೂಕನ್ನು ತಾವು ಹೋದ ಕಾರಿನಲ್ಲಿ ಸಾಗಾಟ ಮಾಡಿಕೊಂಡು ಬಂದು ಕಾರಿನಲ್ಲಿ ಇಟ್ಟುಕೊಂಡವರು, ದಿನಾಂಕ: 08-08-2021 ರಂದು ರಾತ್ರಿ 12-00 ಗಂಟೆಗೆ ಆರೋಪಿ 3 ನೇಯವನೊಂದಿಗೆ ಸೇರಿಕೊಂಡು ಆರೋಪಿ 4 ನೇಯವನು ನೀಡಿದ ಬಂದೂಕು ಮತ್ತು ಜೀವಂತ ಕಾಡುತೂಸುಗಳನ್ನು ಆರೋಪಿ 2 ನೇಯವನು ಬಳಸುತ್ತಿರುವ ಕಾರ್ ನಂ: ಕೆ.ಎ-31/ಎಮ್-1424 ನೇದರಲ್ಲಿ ಬನವಾಸಿ ರಸ್ತೆಯ ಗಡಿಹಳ್ಳಿಯಲ್ಲಿರುವ ಆರೋಪಿ 1 ನೇಯವನ ತೋಟಕ್ಕೆ ಬರುವ ಕಾಡು ಪ್ರಾಣಿಗಳನ್ನು ಓಡಿಸಲು ತೆಗೆದುಕೊಂಡು ಹೋದವರು, ದಿನಾಂಕ: 09-08-2021 ರಂದು 11-45 ಗಂಟೆಗೆ ಮರಳಿ ಮನೆಗೆ ಬರುತ್ತಿರುವಾಗ ಶಿರಸಿ ನಗರದ ಕರಿಗುಂಡಿ ರಸ್ತೆಯ 4 ನೇ ಅಡ್ಡ ರಸ್ತೆಯಲ್ಲಿ ಹೆಲಿಪ್ಯಾಡ್ ಮೈದಾನದ ಹತ್ತಿರ ಪಿರ್ಯಾದಿಯವರು ಅವರಿಗೆ ಬಂದ ಖಚಿತ ಮಾಹಿತಿಯಂತೆ ಪಂಚರ ಸಮಕ್ಷಮ ವಾಹನಗಳ ತಪಾಸಣೆ ಮಾಡುವಾಗ ಸಿಕ್ಕಿದ್ದು, ಆರೋಪಿತರಾದ 1, 2 ಹಾಗೂ 3 ನೇಯವರು ಸೇರಿಕೊಂಡು ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಅಕ್ರಮವಾಗಿ ಬಂದೂಕನ್ನು ಮತ್ತು 4 ಜೀವಂತ ಕಾಡತೂಸುಗಳನ್ನು ಸಾಗಾಟ ಮಾಡಿಕೊಂಡು ಬಂದು ತಮ್ಮ ಸ್ವಾಧೀನದಲ್ಲಿಟ್ಟುಕೊಂಡಿದ್ದು, ಆರೋಪಿ 4 ನೇಯವನು ತಾನು ಲೈಸೆನ್ಸ್ ಅಡಿಯಲ್ಲಿ ಪಡೆದ ಬಂದೂಕನ್ನು ಲೈಸೆನ್ಸ್ ಇಲ್ಲದೇ ಇರುವ ವ್ಯಕ್ತಿಗಳಿಗೆ ಬಳಸಲು ನೀಡಿ ಲೈಸೆನ್ಸ್ ನಲ್ಲಿ ವಿಧಿಸಿದ ಷರತ್ತುಗಳನ್ನು ಉಲ್ಲಂಘಿಸಿದ್ದು, ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕೋರಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭೀಮಾಶಂಕರ ಸಿನ್ನೂರ ಸಂಗಣ್ಣ, ಪಿ.ಎಸ್.ಐ, ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 09-08-2021 ರಂದು 14-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 75/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಬಸವರಾಜ ಅಕ್ಕಿವಳ್ಳಿ, ಸಾ|| ಜನತಾ ಕಾಲೋನಿ, ಬನವಾಸಿ, ತಾ: ಶಿರಸಿ (ಮಹೀಂದ್ರಾ ಕಾರ್ ನಂ: ಕೆ.ಎ-06/ಝೆಡ್-6671 ನೇದರ ಚಾಲಕ). ಈತನು ದಿನಾಂಕ: 08-08-2021 ರಂದು 20-15 ಗಂಟೆಗೆ ತನ್ನ ಬಾಬ್ತು ಮಹೀಂದ್ರಾ ಕಾರ್ ನಂ: ಕೆ.ಎ-06/ಝೆಡ್-6671 ನೇದನ್ನು ಬನವಾಸಿ-ದಾಸನಕೊಪ್ಪ ರಸ್ತೆಯಲ್ಲಿ ದಾಸನಕೊಪ್ಪ ಕಡೆಯಿಂದ ಬನವಾಸಿ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನೇ ಮಧುರವಳ್ಳಿ ಸಮೀಪ ಒಮ್ಮೇಲೆ ತನ್ನ ಬಲಬದಿಗೆ ಚಲಾಯಿಸಿ, ಎದುರಿನಿಂದ ಬರುತ್ತಿದ್ದ ಗಾಯಾಳು ಪಿರ್ಯಾದಿಯವರು ಬನವಾಸಿ ಕಡೆಯಿಂದ ದಾಸನಕೊಪ್ಪ ಕಡೆಗೆ ರಸ್ತೆಯ ಎಡಬದಿಯಿಂದ ಚಲಾಯಿಸಿಕೊಂಡು ಬರುತ್ತಿದ್ದ ಟಾಟಾ ಏಸ್ ವಾಹನ ನಂ: ಕೆ.ಎ-27/ಎ-7644 ನೇದಕ್ಕೆ ಎದುರಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಅದರಲ್ಲಿದ್ದ ಪಿರ್ಯಾದಿಯವರಿಗೆ ಎಡಗಾಲ ಮೊಣಗಂಟಿಗೆ ತೀವೃವಾದ ಹಾಗೂ ಬಲಗಾಲ ಮೊಣಗಂಟಿಗೆ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಯಲ್ಲಪ್ಪ ತಂದೆ ಚಂದ್ರಪ್ಪ ಲಮಾಣಿ, ಪ್ರಾಯ-35 ವರ್ಷ, ವೃತ್ತಿ-ಚಾಲಕ, ಸಾ|| ರತ್ನಾಪುರ (ಕರಗುದರಿ), ತಾ: ಹಾನಗಲ್, ಜಿ: ಹಾವೇರಿ ರವರು ದಿನಾಂಕ: 09-08-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 76/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹ್ಮದ್ ಮುಜಾಫರ್ ತಂದೆ ಸಯ್ಯದ್ ಆದಂ ಸಾಬ್, ಸಾ|| ದಾವಣಗೇರಿ, (ಬೊಲೆರೋ ವಾಹನ ನಂ: ಕೆ.ಎ-31/ಎ-1777 ನೇದರ ಚಾಲಕ). ಈತನು ದಿನಾಂಕ: 09-08-2021 ರಂದು ಸಾಯಂಕಾಲ 05-15 ಗಂಟೆಯ ಸುಮಾರಿಗೆ ತನ್ನ ಬಾಬ್ತು ಬೊಲೆರೋ ವಾಹನ ನಂ: ಕೆ.ಎ-31/ಎ-1777 ನೇದನ್ನು ಮುಂಡಗೋಡ-ಶಿರಸಿ ರಾಜ್ಯ ಹೆದ್ದಾರಿಯಲ್ಲಿ ಮುಂಡಗೋಡ ಕಡೆಯಿಂದ ಶಿರಸಿ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ವಡಗೇರಿ ಹತ್ತಿರ ಎದುರಿನಿಂದ ಅಂದರೆ ಶಿರಸಿ ಕಡೆಯಿಂದ ಮುಂಡಗೋಡ ಕಡೆಗೆ ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಸಿ-7101 ನೇದರ ಸವಾರ ಸದಾನಂದ ತಂದೆ ಜಗನ್ನಾಥ ಮಟ್ಟಿಮನಿ, ಪ್ರಾಯ-32 ವರ್ಷ, ಸಾ|| ಹಿರೇಹಳ್ಳಿ, ತಾ: ಮುಂಡಗೋಡ ಈತನ ಮೋಟಾರ್ ಸೈಕಲಿಗೆ ಎದುರಿನಿಂದ ಡಿಕ್ಕಿ ಹೊಡೆದು ರಸ್ತೆ ಅಪಘಾತ ಪಡಿಸಿ, ಈ ಅಪಘಾತದಿಂದ ಸದಾನಂದ ಈತನು ಧರಿಸಿದ ಹೆಲ್ಮೆಟ್ ಒಡೆದು ಹೋಗಿ, ತಲೆಗೆ ಮಾರಣಾಂತಿಕ ಗಾಯ ಹಾಗೂ ಬಲಗಾಲ ತೊಡೆಯ ಭಾಗಕ್ಕೆ ಭಾರೀ ಗಾಯವನ್ನುಂಟು ಪಡಿಸಿ, ಆತನ ಮರಣವನ್ನುಂಟು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಶಂಭಾಜಿ ತಂದೆ ಮಲಕಪ್ಪ ಮಟ್ಟಿಮನಿ, ಪ್ರಾಯ-29 ವರ್ಷ, ವೃತ್ತಿ-ವ್ಯಾಪಾರ, ಸಾ|| ಹಿರೇಹಳ್ಳಿ, ತಾ: ಮುಂಡಗೋಡ ರವರು ದಿನಾಂಕ: 09-08-2021 ರಂದು 18-25 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 09-08-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 27/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಚಂದ್ರು ತಂದೆ ಗಣಪತಿ ಅಂಬಿಗ, ಪ್ರಾಯ-32 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಮಲಬಾರಕೇರಿ, ಕಾಸರಕೋಡ, ತಾ: ಹೊನ್ನಾವರ. ಪಿರ್ಯಾದುದಾರರ ತಮ್ಮನಾದ ಈತನು ಹಲವು ವರ್ಷಗಳಿಂದ ವಿಪರೀತ ಕುಡಿತದ ಚಟ ಹೊಂದಿದ್ದವನು ಹಾಗೂ ಫಿಡ್ಸ್ ಕಾಯಿಲೆಯಿಂದ ಸಹ ಬಳಲುತ್ತಿದ್ದನು. ದಿನಾಂಕ: 07-08-2021 ರಂದು ರಾತ್ರಿ ಊಟ ಮಾಡಿಕೊಂಡು ಮೀನುಗಾರಿಕೆಗೆ ಹೋಗಿದ್ದವನು ವಾಪಸ್ ಮನೆ ಹತ್ತಿರ ಬಂದವನು, ದಿನಾಂಕ: 08-08-2021 ರಂದು ಬೆಳಿಗ್ಗೆ 06-00 ಗಂಟೆಯ ಸಮಯಕ್ಕೆ ನಮ್ಮ ಮನೆಯ ಪಾತ್ರೆ ತೊಳೆಯುವ ಜಾಗದ ಹತ್ತಿರ ಹೋದಾಗ ಅಲ್ಲಿ ಅರೆಪ್ರಜ್ಞೆಯಾಗಿ ಬಿದ್ದುಕೊಂಡಿದ್ದವನಿಗೆ ಉಪಚಾರದ ಸಲುವಾಗಿ ವೆನಲಾಕ್ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 09-08-2021 ರಂದು ಮಧ್ಯಾಹ್ನ 13-05 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಇದರ ಹೊರತು ತನ್ನ ತಮ್ಮನ ಸಾವಿನಲ್ಲಿ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಮಾದೇವ ತಂದೆ ಗಣಪತಿ ಅಂಬಿಗ, ಪ್ರಾಯ-37 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಮಲಬಾರಕೇರಿ, ಕಾಸರಕೋಡ, ತಾ: ಹೊನ್ನಾವರ ರವರು ದಿನಾಂಕ: 09-08-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಜೋಯಿಡಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 07/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ವಿಶಾಲ ತಂದೆ ತುಕಾರಾಮ ದುಬ್ಳೆ, ಪ್ರಾಯ-34 ವರ್ಷ, ವೃತ್ತಿ-ಕಿರಾಣಿ ವ್ಯಾಪಾರ, ಸಾ|| ಕುಂಬಾರವಾಡಾ, ತಾ: ಜೋಯಿಡಾ. ಪಿರ್ಯಾದಿಯ ಕಿರಿಯ ಮಗನಾದ ಈತನು ತನ್ನ ಮನೆಯ ಪಕ್ಕದಲ್ಲಿ ಕಿರಾಣಿ ಅಂಗಡಿ ವ್ಯಾಪಾರ ಮಾಡಿಕೊಂಡು ಇದ್ದವನು, ಯಾವುದೋ ವಿಷಯವನ್ನು ತನ್ನ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 08-08-2021 ರಂದು 20-30 ಗಂಟೆಯಿಂದ ದಿನಾಂಕ: 09-08-2021 ರಂದು 01-30 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯ ಮನೆಯ ಪಕ್ಕದಲ್ಲಿರುವ ಸಾರ್ವಜನಿಕ ಬಾವಿಯಲ್ಲಿ ಹಾರಿ, ಬಾವಿಯ ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾನೆ. ಇದರ ಹೊರತು ಅವನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ತುಕಾರಾಮ ತಂದೆ ರಾಮಚಂದ್ರ ದುಬ್ಳೆ, ಪ್ರಾಯ-77 ವರ್ಷ, ವೃತ್ತಿ-ಕಿರಾಣಿ ವ್ಯಾಪಾರ, ಸಾ|| ಕುಂಬಾರವಾಡಾ, ತಾ: ಜೋಯಿಡಾ ರವರು ದಿನಾಂಕ: 09-08-2021 ರಂದು 07-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 


 

ಇತ್ತೀಚಿನ ನವೀಕರಣ​ : 10-08-2021 01:31 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080