ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 09-02-2021

at 00:00 hrs to 24:00 hrs

 

ಮಹಿಳಾ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 03/2021, ಕಲಂ: ಮಹಿಳೆ ಮತ್ತು ಮಕ್ಕಳು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದವರು 1]. ಶ್ರೀಮತಿ ಸುಧಾ ಕೋಂ. ಮಾರುತಿ ಚೌಗುಳೆ, ಪ್ರಾಯ-22 ವರ್ಷ, ವೃತ್ತಿ-ಮನೆವಾರ್ತೆ, 2]. ಕುಮಾರಿ: ಅನುಷ್ಕಾ ಮಾರುತಿ ಚೌಗುಳೆ, ಪ್ರಾಯ-04 ವರ್ಷ, 3]. ಕುಮಾರ: ಆಯುಷ್ ಮಾರುತಿ ಚೌಗುಳೆ, ಪ್ರಾಯ-03 ವರ್ಷ, ಸಾ|| (ಎಲ್ಲರೂ) ಕಳಸವಾಡ, ಹಬ್ಬುವಾಡ, ಕಾರವಾರ. ನಮೂದಿತ ಕಾಣೆಯಾದವರಲ್ಲಿ ಪಿರ್ಯಾದಿಯವರ ಹೆಂಡತಿಯಾದ ಶ್ರೀಮತಿ ಸುಧಾ ಕೋಂ. ಮಾರುತಿ ಚೌಗುಳೆ ಇವರು ತನ್ನ ಮಕ್ಕಳಾದ ಕುಮಾರಿ: ಅನುಷ್ಕಾ ಮಾರುತಿ ಚೌಗುಳೆ ಹಾಗೂ ಕುಮಾರ: ಆಯುಷ್ ಮಾರುತಿ ಚೌಗುಳೆ ಇವರೊಂದಿಗೆ ಪಿರ್ಯಾದಿಯವರು ಕೆಲಸಕ್ಕೆ ಹೋದ ನಂತರ ಮನೆಯಲ್ಲಿ ಇರುತ್ತಿದ್ದಳು. ದಿನಾಂಕ: 08-02-2021 ರಂದು ಪಿರ್ಯಾದಿಯವರು ಎಂದಿನಂತೆ ಬೆಳಿಗ್ಗೆ 07-00 ಗಂಟೆಯ ಸಮಯದಲ್ಲಿ ಕೆಲಸಕ್ಕೆ ಹೋಗಿ ಸಾಯಂಕಾಲ 19-00 ಗಂಟೆಯ ಸಮಯಕ್ಕೆ ಮನೆಗೆ ಬಂದಾಗ ಪಿರ್ಯಾದಿಯವರ ಹೆಂಡತಿ ಹಾಗೂ ಮಕ್ಕಳು ಮನೆಯಲ್ಲಿ ಇರಲಿಲ್ಲ. ತಾನು ಸಂಬಂಧಿಕರಲ್ಲಿ ಹಾಗೂ ಪರಿಚಯಸ್ಥರಲ್ಲಿ ವಿಚಾರಿಸಿದಾಗ ಯಾರಿಗೂ ಹೇಳದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ. ಕಾರಣ ಕಾಣೆಯಾದ ತನ್ನ ಹೆಂಡತಿ ಹಾಗೂ ಮಕ್ಕಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಾರುತಿ ತಂದೆ ಗೋಪಾಲ ಚೌಗುಳೆ, ಪ್ರಾಯ-32  ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಕಳಸವಾಡಾ, ಕಾರವಾರ ರವರು ದಿನಾಂಕ: 09-02-2021 ರಂದು 11-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 31/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶಾಫಿಕ್ ಖಾನ್ ತಂದೆ ಹೈದರ್ ಅಲಿಖಾನ್, ಸಾ|| ಪ್ಲಾಟಕೇರಿ, ಮಿರ್ಜಾನ, ತಾ: ಕುಮಟಾ (ಮೋಟಾರ್ ಸೈಕಲ್ ನಂ: ಕೆ.ಎ-47/ಯು-4992 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 07-02-02021 ರಂದು 20-00 ಗಂಟೆಗೆ ತಾನು ಸವಾರಿ ಮಾಡಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಯು-4992 ನೇದನ್ನು ಕುಮಟಾ ಕಡೆಯಿಂದ ಅಂಕೋಲಾ ಕಡೆಗೆ ಚಲಾಯಿಸಿಕೊಂಡು ಹೋಗಿ ಸ್ಥಳದಲ್ಲಿ ಚತುಷ್ಪದ ರಸ್ತೆ ಇದ್ದರೂ ಸಹ ಕುಮಟಾ ಕಡೆಯಿಂದ ಅಂಕೋಲಾ ಕಡೆಗೆ ಸಂಚರಿಸುವ ರಸ್ತೆಯನ್ನು ಬಿಟ್ಟು ವಿರುದ್ಧ ದಿಕ್ಕಿನಿಂದ ಅಂದರೆ ಅಂಕೊಲಾ ಕಡೆಯಿಂದ ಕುಮಟಾ ಕಡೆಗೆ ಸಂಚರಿಸುವ ರಸ್ತೆಯಲ್ಲಿ ಅತೀವೇಗವಾಗಿ ಚಲಾಯಿಸಿ, ಮಿರ್ಜಾನಿನ ಪ್ಲಾಟಕೇರಿ ಕ್ರಾಸ್ ಹತ್ತಿರ ನಿಷ್ಕಾಳಜಿಯಿಂದ ಒಮ್ಮೇಲೆ ತಿರುಗಿಸಿ ಪಿರ್ಯಾದಿಯವರು ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-4405 ನೇದಕ್ಕೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯವರಿಗೆ ಬಲಗಾಲಿನ ಪಾದಕ್ಕೆ, ಎಡಗೈ ಹಸ್ತಕ್ಕೆ ಮತ್ತು ಸೊಂಟಕ್ಕೆ ಗಾಯನೋವು ಆಗಲು ಹಾಗೂ ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ಎಡಗಾಲಿನ ಬೆರಳಿಗೆ, ಎಡಗೈಗೆ ಹಾಗೂ ಎಡಗಾಲಿನ ಮೊಣಗಂಟಿಗೆ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಕೃಷ್ಣಾ ತಂದೆ ಬೀರಾ ಪಟಗಾರ, ಪ್ರಾಯ-30 ವರ್ಷ, ವೃತ್ತಿ-ಗಾರೆ ಕೆಲಸ, ಸಾ|| ಹಣ್ಣೇಮಠ, ಮಾಣಿಕಟ್ಟಾ, ತಾ: ಕುಮಟಾ ರವರು ದಿನಾಂಕ: 09-02-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 19/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಕನ್ಯಾ ಕೇಶವ ಗೌಡ, ಪ್ರಾಯ-47 ವರ್ಷ, ಸಾ|| ಕಳಸಿನಮೂಟೆ, ತಾ: ಹೊನ್ನಾವರ, 2]. ಮಂಜುನಾಥ ಮಂಜು ಗೌಡ, ಪ್ರಾಯ-32 ವರ್ಷ, ಸಾ|| ಹೊಸಪಟ್ಟಣ, ತಾ: ಹೊನ್ನಾವರ, 3]. ಕೇಶವ ಮಂಜು ಗೌಡ, ಪ್ರಾಯ-40 ವರ್ಷ, ಸಾ|| ಹೊಸಪಟ್ಟಣ, ತಾ: ಹೊನ್ನಾವರ, 4]. ಮಂಜುನಾಥ ಚಂದ್ರು ಗೌಡ, ಪ್ರಾಯ-40 ವರ್ಷ, ಸಾ|| ಕಳಸಿನಮೂಟೆ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ದಿನಾಂಕ: 08-02-2021 ರಂದು 17-15 ಗಂಟೆಗೆ ಕಳಸಿನಮೂಟೆ ಮತ್ತು ಹೊಸಪಟ್ಟಣ ನಡುವೆ ಇರುವ ಕೊಂಕಣ ರೈಲ್ವೇ ಬ್ರಿಡ್ಜ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತಮ್ಮ ತಮ್ಮ ಲಾಭಕ್ಕೋಸ್ಕರ ಹಣವನ್ನು ಇಸ್ಪೀಟ್ ಎಲೆಗಳ ಮೇಲೆ ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಗಾರಾಟ ಆಡುತ್ತಿದ್ದಾಗ ದಾಳಿಯ ವೇಳೆ ಇಸ್ಪೀಟ್ ಜೂಗಾರಾಟಕ್ಕೆ ಬಳಸಿದ ಒಟ್ಟೂ ಹಣ 1,935/- ರೂಪಾಯಿ ಹಾಗೂ ಜೂಗಾರಾಟದ ಸಲಕರಣೆಗಳಾದ ಇಸ್ಪೀಟ್ ಎಲೆಗಳು-52, ಮಂಡದ ಮೇಲೆ ಹಾಸಿದ ಬಿಳಿ ಪ್ಲ್ಯಾಸ್ಟಿಕ್ ಚೀಲ-1 ನೇದವುಗಳೊಂದಿಗೆ ಆರೋಪಿ 1 ಮತ್ತು 2 ನೇಯವರು ಸೆರೆ ಸಿಕ್ಕಿದ್ದು ಹಾಗೂ ಆರೋಪಿ 3 ಮತ್ತು 4 ನೇಯವರು ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪರಮಾನಂದ ಬಿ. ಕೊಣ್ಣೂರ, ಪಿ.ಎಸ್.ಐ, ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 09-02-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 20/2021, ಕಲಂ: 504, 160 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಕುಪ್ಪಯ್ಯ ತಂದೆ ಸಣಕೂಸ ನಾಯ್ಕ, ಪ್ರಾಯ-60 ವರ್ಷ, 2]. ಶೇಖರ ಕುಪ್ಪಯ್ಯ ನಾಯ್ಕ, ಪ್ರಾಯ-40 ವರ್ಷ, 3]. ಲಕ್ಷ್ಮೀ ಕುಪ್ಪಯ್ಯ ನಾಯ್ಕ, ಪ್ರಾಯ-58 ವರ್ಷ, 4]. ಕೃಷ್ಣ ಕುಪ್ಪಯ್ಯ ನಾಯ್ಕ, ಪ್ರಾಯ-42 ವರ್ಷ, ಸಾ|| (ಎಲ್ಲರೂ) ಕೆಳಗಿನ ಇಡಗುಂಜಿ, ತಾ: ಹೊನ್ನಾವರ, 5]. ಕಮಲಾಕರ ಮಾದೇವ ನಾಯ್ಕ, ಪ್ರಾಯ-40 ವರ್ಷ, ಸಾ|| ಕಾಸರಕೋಡ, ತಾ: ಹೊನ್ನಾವರ, 6]. ಏಕನಾಥ ದೇವಾ ನಾಯ್ಕ, ಪ್ರಾಯ-38 ವರ್ಷ, ಸಾ|| ಕೆಳಗಿನೂರು, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ದಿನಾಂಕ: 09-02-2021 ರಂದು 19-35 ಗಂಟೆಗೆ ಮಂಕಿ ಪೊಲೀಸ್ ಠಾಣೆಯ ಕಂಪೌಂಡ್ ಗೇಟ್ ಎದುರುಗಡೆ ಸಾರ್ವಜನಿಕ ರಸ್ತೆಯ ಮೇಲೆ ತಮ್ಮ ತಮ್ಮ ಮನೆಯ ವಿಚಾರವಾಗಿ ಚೀರಾಡಿ ಕೂಗಾಡುತ್ತಾ ಒಬ್ಬರಿಗೊಬ್ಬರು ಅವಾಚ್ಯ ಶಬ್ದಗಳನ್ನು ಬಳಸಿ ಬೈಯ್ದಾಡಿ ಕೈ-ಕೈ ಮಿಲಾಯಿಸಿ ದೂಡಾಡಿ ಹೊಡೆದಾಡಿಕೊಂಡು ಸಾರ್ವಜನಿಕ ಶಾಂತತಾಭಂಗ ಪಡಿಸಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪರಮಾನಂದ ಬಿ. ಕೊಣ್ಣೂರ, ಪಿ.ಎಸ್.ಐ, ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 09-02-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 21/2021, ಕಲಂ: 392, 323, 504, 506 ಐಪಿಸಿ ಹಾಗೂ ಕಲಂ: 25 ಇಂಡಿಯನ್ ಆರ್ಮ್ಸ್ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮೌಲಾಲಿ ತಂದೆ ಮಹ್ಮದ್ ಸಾಬ್ ಹುಲಗೂರು, ಸಾ|| ದೇವಿಕೊಪ್ಪ, ತಾ: ಕಲಘಟಗಿ, ಜಿ: ಧಾರವಾಡ ಹಾಗೂ ಇನ್ನೂ ಎರಡು ಜನ ಅಪರಿಚಿತರು. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 08-02-2021 ರಂದು ಪಿರ್ಯಾದಿಗೆ ‘ಹಣವನ್ನು ಕೊಡುತ್ತೇನೆ. ಯಲ್ಲಾಪುರಕ್ಕೆ ಬನ್ನಿ’ ಅಂತಾ ಹೇಳಿದ್ದರಿಂದ ಪಿರ್ಯಾದಿಯವರು ತನ್ನ ಸಹೋದರ ಹೇಮಂತ ಹಾಗೂ ಭಾವನವರಾದ ಆಕಾಶ ರವರೊಂದಿಗೆ ತಮ್ಮ ಮೋಟಾರ್ ಸೈಕಲ್ ನಂ: ಕೆ.ಎ-27/ಇ.ಎಮ್-4694 ನೇದರ ಮೇಲಾಗಿ ಯಲ್ಲಾಪುರದ ಕಾರವಾರ-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಹಳಿಯಾಳ ಕ್ರಾಸ್ ಸಮೀಪ ಬಂದು ನಿಂತುಕೊಂಡಿದ್ದಾಗ, ರಾತ್ರಿ 23-30 ಗಂಟೆ ಸುಮಾರಿಗೆ ಆರೋಪಿ 1 ನೇಯವನು ತನ್ನ ಮಾರುತಿ-800 ಕಾರ್ ನಂ: ಕೆ.ಎ-29/ಎಮ್-2227 ನೇದರ ಮೇಲಾಗಿ ಇನ್ನಿಬ್ಬರು ಆರೋಪಿತರನ್ನು ಕರೆದುಕೊಡು ಬಂದು, ಆರೋಪಿ 1 ನೇಯವನು ಪಿರ್ಯಾದಿಯವರಿಗೆ ತನ್ನ ಕಾರನ್ನು ಹಿಂಬಾಲಿಸಿಕೊಂಡು ಬರುವಂತೆ ಹೇಳಿದ್ದು, ಅದರಂತೆ ಪಿರ್ಯಾದಿಯವರು ಆರೋಪಿತನ ಕಾರನ್ನು ಹಿಂಬಾಲಿಸಿಕೊಂಡು ಹೋಗುತ್ತಿರುವಾಗ ಮಲ್ಲಿಕಾ ಹೊಟೇಲ್ ಹತ್ತಿರ ಮೋಟಾರ್ ಸೈಕಲನ್ನು ನಿಲ್ಲಿಸುವಂತೆ ಆರೋಪಿತನು ಸೂಚಿಸಿದ್ದರಿಂದ, ಪಿರ್ಯಾದಿಯವರು ತಮ್ಮ ಮೋಟಾರ್ ಸೈಕಲನ್ನು ನಿಲ್ಲಿಸುವಷ್ಟರಲ್ಲಿ ಕಾರಿನಲ್ಲಿದ್ದ ಇದ್ದ ಇನ್ನಿಬ್ಬರು ಆರೋಪಿತರ ಪೈಕಿ ಒಬ್ಬನು ತನ್ನ ಕೈಯಲ್ಲಿ ಪಿಸ್ತೂಲ್ ಹಿಡಿದುಕೊಂಡು ಹಾಗೂ ಇನ್ನೊಬ್ಬನು ತನ್ನ ಕೈಯಲ್ಲಿ ರಾಡ್ ಹಿಡಿದುಕೊಂಡು ಪಿರ್ಯಾದಿಯವರಿಗೆ ಹೊಡೆಯಲು ಮೈಮೇಲೆ ಏರಿ ಬಂದಿದ್ದು ಹಾಗೂ ಆರೋಪಿ 1 ನೇಯವನು ತನ್ನ ಕೈಯಿಂದ ಪಿರ್ಯಾದಿಯ ಎಡಗೆನ್ನೆಗೆ ಹೊಡೆದು ನೆಲಕ್ಕೆ ಬೀಳಿಸಿದ್ದು ಹಾಗೂ ಪಿಸ್ತೂಲ್ ಹಿಡಿದುಕೊಂಡ ಆರೋಪಿ ವ್ಯಕ್ತಿಯು ಪಿರ್ಯಾದಿಯವರಿಗೆ ‘ಹಣ ಬೇಕಾ ಚಿನಾಲಕೆ ಬೇಟೆ, ನಿಮಗೆ ಇಲ್ಲೆ ಗುಂಡು ಹೊಡೆದು ಸಾಯಿಸಿ ಜಂಗಲಿನಲ್ಲಿ ಒಗೆದು ಹೋಗುತ್ತೇವೆ’ ಅಂತಾ ಹೆದರಿಸಿ ಪಿರ್ಯಾದಿಯವರ ಪ್ಯಾಂಟ್ ಕಿಸೆಯಲ್ಲಿದ್ದ 820/- ರೂಪಾಯಿ ಹಣವನ್ನು ಬಲಾತ್ಕಾರವಾಗಿ ಸುಲಿಗೆ ಮಾಡಿಕೊಂಡು ಹಾಗೂ ರಾಡ್ ಹಿಡಿದುಕೊಂಡ ಇನ್ನೊಬ್ಬ ಆರೋಪಿ ವ್ಯಕ್ತಿಯು ಪಿರ್ಯಾದಿಯ ಸಹೋದರ ಹಾಗೂ ಭಾವನವರಿಗೆ ಹೆದರಿಸಿ ಅವರ ಬಳಿ ಇದ್ದ ಪರ್ಸ್ ಅನ್ನು ಕಸಿದುಕೊಂಡಿದ್ದು, ನಂತರ ಸದರಿ ಮೂವರು ಆರೋಪಿತರು ಪಿರ್ಯಾದಿ ಹಾಗೂ ಆತನ ಸಹೋದರ ಮತ್ತು ಭಾವನವರಿಗೆ ಕಾಲಿನಿಂದ ಒದ್ದು ನೆಲಕ್ಕೆ ಕೆಡವಿ ದುಃಖಾಪತ ಪಡಿಸಿ, ಅವರ ಬಳಿ ಇದ್ದ ಹಣ ಹಾಗೂ ಪಿರ್ಯಾದಿಯ ಕೊರಳಲ್ಲಿದ್ದ ಬೆಳ್ಳಿಯ ಚೈನ್ ಅನ್ನು ಸುಲಿಗೆ ಮಾಡಿಕೊಂಡು ಪಿರ್ಯಾದಿಯವರ ಮೋಟಾರ್ ಸೈಕಲನ್ನು ಆರೋಇ 1 ನೇಯವನು ಹೊಡೆದುಕೊಂಡು ಹೋಗಿದ್ದು, ಉಳಿದ ಇಬ್ಬರೂ ಆರೋಪಿತರು ‘ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿಮಗೆ ಕೊಂದು ಹಾಕುತ್ತೇವೆ’ ಎನ್ನುವುದಾಗಿ ಹೆದರಿಸಿ, ಅಲ್ಲಿಂದ ಕಾರನ್ನು ತಿರುಗಿಸಿಕೊಂಡು ಕಲಘಟಗಿ ಕಡೆಗೆ ಹೋದ ಬಗ್ಗೆ ಪಿರ್ಯಾದಿ ಶ್ರೀ ಕೃಷ್ಣಾಜಿ ತಂದೆ ನಾರಾಯಣ ಹಾವೇರಿ, ಪ್ರಾಯ-28 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಚನ್ನಾಪುರ, ಬೇವಿನಕಟ್ಟೆ ಹತ್ತಿರ, ತಾ: ಹಾನಗಲ್, ಜಿ: ಹಾವೇರಿ ರವರು ದಿನಾಂಕ: 09-02-2021 ರಂದು 00-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 15/2021, ಕಲಂ: 448, 427, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಆಸೀಫ್ ತಂದೆ ಅಬ್ದುಲ್ ಸತ್ತಾರ್ ಶೇಖ್, ಪ್ರಾಯ-32 ವರ್ಷ, ಸಾ|| ಮಹಾಸತಿ ದೇವಸ್ಥಾನದ ಹತ್ತಿರ, ತಾ: ಶಿರಸಿ. ಪಿರ್ಯಾದಿಯವರು ಶಿರಸಿ-ಯಲ್ಲಾಪುರ ರಸ್ತೆಯಲ್ಲಿರುವ ಮಧುವನ ಹೊಟೇಲ್ ಹತ್ತಿರ ಮಿಶ್ರ ಪೇಡಾ ಸ್ವೀಟ್ಸ್ ಅಂಗಡಿಯನ್ನು ಇಟ್ಟುಕೊಂಡು ಅದರಲ್ಲಿ ಸಿಹಿ ತಿನಿಸುಗಳ ವ್ಯಾಪಾರ ಮಾಡಿಕೊಂಡು ಬಂದಿದ್ದು, ದಿನಾಂಕ: 08-02-2021 ರಂದು ಮಧ್ಯಾಹ್ನ 16-00 ಗಂಟೆಯ ಸುಮಾರಿಗೆ ಆರೋಪಿತನು ಅಕ್ರಮವಾಗಿ ಪ್ರವೇಶ ಮಾಡಿ ‘ತನಗೆ ಈ ಹಿಂದೆ ವ್ಯಾಪಾರ ಮಾಡಿದ್ದರಲ್ಲಿ 300/- ರೂಪಾಯಿ ಹಣ ಚಿಲ್ಲರೆಯನ್ನು ಕೊಡುವುದು ಬಾಕಿ ಇದೆ’ ಅಂತಾ ಹೇಳಿ ಜಗಳ ತೆಗೆದು ಪಿರ್ಯಾದಿಗೆ ‘ಬೋಳಿ ಮಗನೆ’ ಅಂತಾ ಅವಾಚ್ಯವಾಗಿ ಬೈಯ್ಯುತ್ತಿದ್ದವನಿಗೆ, ಪಿರ್ಯಾದಿಯವರು ‘ಜಗಳ ಮಾಡಬೇಡ. ಸಮಧಾನವಾಗಿ ಮಾತನಾಡು’ ಅನ್ನುತ್ತಿರುವಾಗ ‘ತನಗೆ ಚಿಲ್ಲರೆ ಹಣ ಹೇಗೆ ತೆಗೆದುಕೊಳ್ಳಬೇಕು ಅಂತಾ ಗೊತ್ತು’ ಅನ್ನುತ್ತಾ ಕೌಂಟರ್ ಮೇಲಿದ್ದ ಇಲೆಕ್ಟ್ರಾನಿಕ್ ವೇವಿಂಗ್ ಮಷೀನಿಗೆ ಕೈ ಹಾಕಿ ಎತ್ತಿ ಅಂಗಡಿಯೊಳಗೆ ಎಸೆದು, ವೇವಿಂಗ್ ಮಷೀನ್ ಒಡೆದು ಹಾಕಿ ಸುಮಾರು 22,000/- ರೂಪಾಯಿಗಳಷ್ಟು ಹಾಗೂ ಕೌಂಟರ್ ಮೇಲಿದ್ದ 2 ಸ್ವೀಟ್ ಟ್ರೇ ಯಲ್ಲಿದ್ದ ಸ್ವೀಟ್ ಗಳನ್ನು ಅಂಗಡಿ ಒಳಗೆ ಎಸೆದು ಅ||ಕಿ|| 6,000/- ರೂಪಾಯಿಯಷ್ಟು ಹಾನಿ ಪಡಿಸಿ, ಹೀಗೆ ಒಟ್ಟೂ 28,000/- ರೂಪಾಯಿಯಷ್ಟು ಹಾನಿ ಪಡಿಸಿ ‘ತನ್ನ ಸುದ್ದಿಗೆ ಬಂದರೆ ಜೀವ ಸಹಿತ ಬಿಡುವುದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಪ್ರಸನ್ನ ತಂದೆ ನರಸಿಂಹ ಹೆಗಡೆ, ಪ್ರಾಯ-46 ವರ್ಷ, ವೃತ್ತಿ-ಮಿಶ್ರ ಪೇಡಾ ಮಾಲಿಕರು, ಸಾ|| ಇಂದಿರಾನಗರ, ತಾ: ಶಿರಸಿ ರವರು ದಿನಾಂಕ: 09-02-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 13/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮುಜಾಫರ್ ತಂದೆ ಇಬ್ರಾಹಿಂ ಶೇಖ್, ಸಾ|| ಬನವಾಸಿ, ತಾ: ಶಿರಸಿ (ಮೋಟಾರ್ ಸೈಕಲ್ ನಂ: ಕೆ.ಎ-31/ವಾಯ್-2002 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 09-02-2021 ರಂದು 10-00 ಗಂಟೆಗೆ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-31/ವಾಯ್-2002 ನೇದನ್ನು ಬನವಾಸಿ ಕಡೆಯಿಂದ ಅಜ್ಜರಣಿ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಭಾಶಿ ಕ್ರಾಸ್ ಹತ್ತಿರ ಭಾಶಿ ಕಡೆಯಿಂದ ಬನವಾಸಿ ಕಡೆಗೆ ಬರುತ್ತಿದ್ದ ಗಾಯಾಳು ಸುಧಾಕರ ತಂದೆ ದ್ಯಾವಾ ನಾಯ್ಕ ರವರು ಚಲಾಯಿಸಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಬಿ-4633 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಸುಧಾಕರ ರವರಿಗೆ ಬಲಗೈಗೆ ರಕ್ತಗಾಯ ಹಾಗೂ ಮುಖಕ್ಕೆ ಗಾಯ ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ಬಲಗಣ್ಣಿನ ಹುಬ್ಬಿನ ಹತ್ತಿರ ಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ನಾರಾಯಣ ನಾಯಕ, ಪ್ರಾಯ-47 ವರ್ಷ, ವೃತ್ತಿ-ಶಿಕ್ಷಕರು, ಸಾ|| ಮನೆ ನಂ: 100, ಮರಗುಂಡಿ, ಕೊರ್ಲಕಟ್ಟಾ, ತಾ: ಶಿರಸಿ ರವರು ದಿನಾಂಕ: 09-02-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 09-02-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

 

======||||||||======

 

 

 

ಇತ್ತೀಚಿನ ನವೀಕರಣ​ : 10-02-2021 01:36 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080