ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 09-01-2022

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 03/2022, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಲ್ಲಿಕಾರ್ಜುನ ತಂದೆ ಶ್ರೀಮಂತ ನಾರಾಯಣಕರ, ಪ್ರಾಯ-26 ವರ್ಷ, ವೃತ್ತಿ-ಜೂನಿಯರ್ ಪವರ್ ಮ್ಯಾನ್, ಸಾ|| ಬಿಜಾಪುರ, ಹಾಲಿ ಸಾ|| ಮಖೇರಿ, ಕಾರವಾರ (ಯಮಹಾ ಎಫ್.ಜೆಡ್ ಮೋಟಾರ್ ಸೈಕಲ್ ನಂ: ಕೆ.ಎ-30/ಯು-7290 ನೇದರ ಸವಾರ). ಈತನು ದಿನಾಂಕ: 08-01-2022 ರಂದು 20-30 ಗಂಟೆಯ ಸಮಯಕ್ಕೆ ತನ್ನ ಬಾಬ್ತು ಯಮಹಾ ಎಫ್.ಜೆಡ್ ಮೋಟಾರ್ ಸೈಕಲ್ ನಂ: ಕೆ.ಎ-30/ಯು-7290 ನೇದನ್ನು ಸಿದ್ದರ ಕಡೆಯಿಂದ ಕಾರವಾರ ಕಡೆಗೆ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು, ಸಿದ್ದರ ಕೋಳಿ ಫಾರ್ಮ್ ಹತ್ತಿರದ ರಾಜ್ಯ ಹೆದ್ದಾರಿ ಸಂಖ್ಯೆ-06 ರಲ್ಲಿ ಸ್ಕಿಡ್ ಆಗಿ ಮೋಟಾರ್ ಸೈಕಲ್ ಸಮೇತ ಬಿದ್ದು ಅಪಘಾತ ಪಡಿಸಿಕೊಂಡು, ತನ್ನ ತಲೆಯ ಹಿಂಬದಿಗೆ ತೀವೃ ಸ್ವರೂಪದ ಗಾಯ ಪಡಿಸಿಕೊಂಡವನಿಗೆ ಕಾರವಾರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿಕೊಂಡು, ಹೆಚ್ಚಿನ ಚಿಕಿತ್ಸೆಯ ಕುರಿತು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ದಿನಾಂಕ: 09-01-2022 ರಂದು ಬೆಳಗಿನ ಜಾವ ಸುಮಾರು 03-00 ಗಂಟೆಯ ಸಮಯಕ್ಕೆ ಮಾರ್ಗ ಮಧ್ಯದಲ್ಲಿ ಮರಣಪಟ್ಟ ಬಗ್ಗೆ ಪಿರ್ಯಾದಿ ಶ್ರೀ ದೇವರಾಯ ತಂದೆ ರಾಮಾ ಗೌಡಾ ಪ್ರಾಯ-45 ವರ್ಷ, ವೃತ್ತಿ-ಹೆಸ್ಕಾಂ ಪವರ್ ಮ್ಯಾನ್, ಸಾ|| ಗುಡ್ಡೇಹಳ್ಳಿ, ಬಿಣಗಾ, ಕಾರವಾರ ರವರು ದಿನಾಂಕ: 09-01-2022 ರಂದು 09-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 09/2022, ಕಲಂ: 269, 270 ಐಪಿಸಿ ಹಾಗೂ ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಗಜಾನನ ತಂದೆ ಶಿವರಾಮ ನಾಯ್ಕ, ಪ್ರಾಯ-41 ವರ್ಷ, ವೃತ್ತಿ-ಶಾಮಿಯಾನ ಕೆಲಸ, ಸಾ|| ವೀರನಗುಡಿ, ಜಲವಳ್ಳಿ, ತಾ: ಹೊನ್ನಾವರ, 2] ವಸಂತ @ ಕಾಮು ಶೆಟ್ಟಿ, ಸಾ|| ಅರೇಅಂಗಡಿ, ತಾ: ಹೊನ್ನಾವರ, 3]. ನಾಗರಾಜ (ಪೂರ್ತಿ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ) ಮತ್ತು ಇನ್ನು 3-4 ಜನರು. ಈ ನಮೂದಿತ ಆರೋಪಿತರು ಕೊರೋನಾ ಸಾಂಕ್ರಾಮಿಕ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಘನ ಸರ್ಕಾರ ಲಾಕಡೌನ್ ಆದೇಶ ಮಾಡಿದ್ದರೂ ಸಹ, ಮುಖಕ್ಕೆ ಮಾಸ್ಕ್ ಹಾಕದೇ, ಯಾವುದೇ ಸುರಕ್ಷತಾ ಕ್ರಮ ಅನುಸರಿಸದೇ, ಕೊರೋನಾ ಸಾಂಕ್ರಾಮಿಕ ರೋಗದ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ಘನ ಸರ್ಕಾರದ ಮತ್ತು ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿ, ಮಾನವನ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ಸಾಂಕ್ರಾಮಿಕ ರೋಗದ ಸೋಂಕು ಹರಡುವುದನ್ನು ತಡೆಯಲು ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳನ್ನು ನಿರ್ಲಕ್ಷಿಸಿ, ಕೋವಿಡ್ ನಿಯಮವನ್ನು ಉಲ್ಲಂಘನೆ ಮಾಡಿ ದಿನಾಂಕ: 09-01-2022 ರಂದು 17-50 ಗಂಟೆಗೆ ಹೊನ್ನಾವರ ತಾಲೂಕಿನ ಸಂತೆಗುಳಿ ಕ್ರಿಕೆಟ್ ಮೈದಾನದ ಎದುರಿನ ಗೇರು ಪ್ಲಾಂಟೇಶನ್ ನ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ತಮ್ಮ-ತಮ್ಮ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥ ಕಟ್ಟಿ, ಇಸ್ಪೀಟ್ ಅಂದರ್-ಬಾಹರ್ ಎಂಬ ಜೂಜಾಟವನ್ನು ಆಡುತ್ತಿದ್ದಾಗ ದಾಳಿಯ ಕಾಲಕ್ಕೆ 1). ಒಟ್ಟು ಹಣ 2,030/- ರೂಪಾಯಿ, 2). ಒಟ್ಟು ಇಸ್ಪೀಟ್ ಎಲೆಗಳು-52, ಅ||ಕಿ|| 00.00/- ರೂಪಾಯಿ, 3). ಪೇಪರ್ ಮಂಡಾ-01, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಆರೋಪಿ 1 ನೇಯವನು ವಶಕ್ಕೆ ಸಿಕ್ಕಿದ್ದು ಹಾಗೂ ಉಳಿದ ಆರೋಪಿತರು ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತೇಶ ಯು. ನಾಯಕ, ಪಿ.ಎಸ್.ಐ (ಕಾ.ಸು & ಸಂಚಾರ), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 09-01-2022 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 10/2022, ಕಲಂ: 279, 337 ಐಪಿಸಿ ಹಾಗೂ 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಯಾವುದೋ ಒಂದು ಸ್ಕೂಟರ್ ಸವಾರನಾಗಿದ್ದು, ಸ್ಕೂಟರ್ ನಂಬರ್ ಹಾಗೂ ಸವಾರನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 09-01-2022 ರಂದು ಸಾಯಂಕಾಲ 19-30 ಗಂಟೆಯ ಸುಮಾರಿಗೆ ಹೊನ್ನಾವರ ಕಡೆಯಿಂದ ಚಂದಾವರ ನಾಕಾ ಕಡೆಗೆ ಹೋಗುವ ರಸ್ತೆಯಲ್ಲಿ ಚಂದಾವರದ ಅಯ್ಯಂಗಾರ್ ಬೇಕರಿ ಹತ್ತಿರ ತನ್ನ ಸ್ಕೂಟರನ್ನು ಹೊನ್ನಾವರ ಕಡೆಯಿಂದ ಚಂದಾವರ ನಾಕಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ, ಚಂದಾವರ ನಾಕಾ ಕಡೆಯಿಂದ ಹೊನ್ನಾವರ ಕಡೆಗೆ ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ವಿ-5572 ನೇದರಲ್ಲಿ ಬರುತ್ತಿದ್ದ ಗಾಯಾಳು ರಾಜೇಶ ತಂದೆ ಮಾಬ್ಲೇಶ್ವರ ನಾಯ್ಕ, ಪ್ರಾಯ-33 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| ಹೊದ್ಕೆಶಿರೂರು, ತಾ: ಹೊನ್ನಾವರ, ಈತನ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಅವನ ತಲೆಗೆ, ಬಲಭುಜಕ್ಕೆ ಹಾಗೂ ಎಡ ಮೊಣಕಾಲಿಗೆ ಗಾಯನೋವುಂಟು ಪಡಿಸಿದ್ದಲ್ಲದೇ, ಅಪಘಾತ ಪಡಿಸಿದ ನಂತರ ಆರೋಪಿ ಸ್ಕೂಟರ್ ಸವಾರನು ತನ್ನ ಸ್ಕೂಟರನ್ನು ಸ್ಥಳದಲ್ಲಿ ನಿಲ್ಲಿಸದೇ ಹಾಗೆಯೇ ಚಲಾಯಿಸಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ರಾಮಚಂದ್ರ ತಂದೆ ಮಾಬ್ಲೇಶ್ವರ ನಾಯ್ಕ, ಪ್ರಾಯ-31 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೊದ್ಕೆಶಿರೂರು, ತಾ: ಹೊನ್ನಾವರ ರವರು ದಿನಾಂಕ: 09-01-2022 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 04/2022, ಕಲಂ: 454, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 04-01-2022 ರಂದು ಬೆಳಿಗ್ಗೆ 08-10 ಗಂಟೆಯಿಂದ 08-30 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯವರು ಕಿರಾಣಿ ಅಂಗಡಿಯ ಪಕ್ಕದಲ್ಲಿರುವ ಜೈನ ಬಸದಿ ದೇವಸ್ಥಾನಕ್ಕೆ ದೇವರಿಗೆ ಕೈ ಮುಗಿಯಲು ಅಂಗಡಿ ತೆರೆದು ಹೋದ ಸಂದರ್ಭದಲ್ಲಿ ಅಂಗಡಿಯ ಒಳಗೆ  ಪ್ರವೇಶಿಸಿ, ಅಂಗಡಿಯ ಒಳಗಡೆಯ ಮೂಲೆಯಲ್ಲಿದ್ದ ತಿಳಿ ನೀಲಿ ಬ್ಯಾಗಿನಲ್ಲಿದ್ದ ನಗದು ಹಣ 65,000/- ರೂಪಾಯಿ, ಮೋಟಾರ್ ಸೈಕಲ್ ಆರ್.ಸಿ, ಸಿಂಡಿಕೇಟ್ ಬ್ಯಾಂಕ್ ಪಾಸ್ ಬುಕ್, ಕಾರ್ಪೋರೇಶನ್ ಬ್ಯಾಂಕ್ ಪಾಸಬುಕ್ ನೇದನ್ನು ಆರೋಪಿತ ಕಳ್ಳರು ಕಳುವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀನಿವಾಸ ತಂದೆ ದಾಮೋದರ ಪ್ರಭು, ಪ್ರಾಯ-65 ವರ್ಷ, ವೃತ್ತಿ-ಕಿರಾಣಿ ವ್ಯಾಪಾರ, ಸಾ|| ಗ್ರಾಮ ಪಂಚಾಯತ ಹತ್ತಿರ, ಬಸ್ತಿ, ಕಾಯ್ಕಿಣಿ, ತಾ: ಭಟ್ಕಳ ರವರು ದಿನಾಂಕ: 09-01-2022 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 09-01-2022

at 00:00 hrs to 24:00 hrs

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 04/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳು ಶ್ರೀಮತಿ ದೊಂಡಿ ಕೋಂ. ದೇವು ಬರಾಗಡೆ, ಪ್ರಾಯ-39 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಖಂಡ್ರ್ಯಾನಕೊಪ್ಪ, ಪೋ: ಮದ್ನೂರ, ತಾ: ಯಲ್ಲಾಪುರ, ಪಿರ್ಯಾದಿಯವರ ತಾಯಿಯಾದ ಇವಳು ಕಳೆದ ಎರಡು ವರ್ಷಗಳಿಂದ ಸರಾಯಿ ಕುಡಿಯುವ ಚಟವನ್ನು ಬೆಳೆಸಿಕೊಂಡಿದ್ದವಳು. ಸರಾಯಿ ಕುಡಿದ ನಶೆಯಲ್ಲಿ ದಿನಾಂಕ: 08-09-2122 ರಂದು ಸಮಯ ಸುಮಾರು 21-00 ಗಂಟೆಗೆ ತನ್ನ ಮನೆಯಲ್ಲಿರುವ ಹತ್ತಿ ಗಿಡಕ್ಕೆ ಹೊಡೆಯವ ಔಷಧಿ ಕುಡಿದು ನರಳಾಡುತ್ತಿದ್ದವಳಿಗೆ ಯಲ್ಲಾಪುರದ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಉಪಚಾರ ಕೊಡಿಸಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 09-01-2022 ರಂದು ಸಮಯ ಸುಮಾರು ಬೆಳಗಿನ ಜಾವ 02-30 ಗಂಟೆಗೆ ಮೃತಪಟ್ಟಿರುತ್ತಾಳೆ. ಇದರ ಹೊರತು ತನ್ನ ತಾಯಿಯ ಮರಣದಲ್ಲಿ ಬೇರೇ ಯಾವುದೇ ಸಂಶಯವಿರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಜ್ಞಾನೇಶ್ವರ ತಂದೆ ದೇವು ಬರಾಗಡೆ, ಪ್ರಾಯ-19 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಖಂಡ್ರ್ಯಾನಕೊಪ್ಪ, ಪೋ: ಮದ್ನೂರ, ತಾ: ಯಲ್ಲಾಪುರ ರವರು ದಿನಾಂಕ: 09-01-2022 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 


 

 

 

 

 

 

ಇತ್ತೀಚಿನ ನವೀಕರಣ​ : 10-01-2022 05:11 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080