ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 09-07-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 65/2021, ಕಲಂ: 8(C), 20(b)(ii)(A) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತರು 1]. ರಿಜ್ವಾನ್ ಶೇಖ್ ತಂದೆ ಅಕ್ಬರ್ ಶೇಖ್, ಪ್ರಾಯ-30 ವರ್ಷ, ವೃತ್ತಿ-ಕೇಬಲ್ ಕೆಲಸ, ಸಾ|| ಸಂಕ್ರಿವಾಡಾ, ಕಾರವಾರ, 2]. ಸಾಹಿಲ್ ತಂದೆ ನಾದರಬಾಷಾ, ಪ್ರಾಯ-20 ವರ್ಷ, ಸಾ|| ಗುನಗಿವಾಡಾ, ಹಬ್ಬುವಾಡಾ, ಕಾರವಾರ. ಈ ನಮೂದಿತ ಆರೋಪಿತರು ದಿನಾಂಕ: 09-07-2021 ರಂದು 12-15 ಗಂಟೆಗೆ ಕೋಡಿಬಾಗ ಸಾಗರ ದರ್ಶನ ಹಾಲ್ ಹಿಂಭಾಗದಲ್ಲಿ ಗಾಳಿ ಮರದ ಬಳಿ ತಮ್ಮ ತಾಬಾ ಯಾವುದೇ ಪಾಸ್ ಯಾ ಪರ್ಮಿಟ್ ಇಟ್ಟುಕೊಳ್ಳದೇ ಅನಧೀಕೃತವಾಗಿ 3,20,000/- ರೂಪಾಯಿ ಮೌಲ್ಯದ ಸುಮಾರು 3 ಕೆ.ಜಿ 200 ಗ್ರಾಂ. ಆಗುವಷ್ಟು ನಿಷೇಧಿತ ಫಲಭರಿತ ಹೂ ಇರುವ ಒಣಗಿದ ಗಾಂಜಾ ಮಾದಕ ಪದಾರ್ಥವನ್ನು ಮಾರಾಟ ಮಾಡಿ ಹಣ ಗಳಿಸಲು ತಮ್ಮ ತಾಬಾ ಇಟ್ಟುಕೊಂಡಿದ್ದ ವೇಳೆ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂತೋಷಕುಮಾರ ಎಮ್, ಪಿ.ಎಸ್.ಐ, ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 09-07-2021 ರಂದು 15-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 105/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ವಿನೋದ ಚಂದ್ರು, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಾರವಾಡ, ತಾ: ಅಂಕೋಲಾ, 2]. ನಾರಾಯಣ ರಮೇಶ, ಪ್ರಾಯ-37 ವರ್ಷ, ವೃತ್ತಿ-ಚಾಲಕ, ಸಾ|| ಹಾರವಾಡ, ತಾ: ಅಂಕೋಲಾ, 3]. ಶ್ರೀಧರ, ಪ್ರಾಯ-30 ವರ್ಷ, ಸಾ|| ಅಂಕೋಲಾ, 4]. ಯೋಗೇಶ, ಪ್ರಾಯ-28 ವರ್ಷ, ಸಾ|| ಅಂಕೋಲಾ. ಈ ನಮೂದಿತ ಆರೋಪಿತರು ದಿನಾಂಕ: 08-07-2021 ರಂದು 16-30 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದ ದಂಡೆಭಾಗನ ಅರಣ್ಯ ಪ್ರದೇಶದಲ್ಲಿ ತಮ್ಮ ತಮ್ಮ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥ ಕಟ್ಟಿ 100/- ರೂಪಾಯಿ ಒಳಗೆ 200/- ರೂಪಾಯಿ ಹೊರಗೆ ಅಂತಾ ಅಂದರ್-ಬಾಹರ್ ಎಂಬ ಇಸ್ಪೀಟ್ ಜೂಗಾರಾಟ ಆಡುತ್ತಿದ್ದಾಗ ದಾಳಿಯ ಕಾಲಕ್ಕೆ ನಗದು ಹಣ 5,130/- ರೂಪಾಯಿ ಹಾಗೂ ಇಸ್ಪೀಟ್ ಜೂಗಾರಾಟದ ಇತರೆ ಸಾಮಗ್ರಿಗಳ ಸಮೇತ ಆರೋಪಿ 1 ಹಾಗೂ 2 ನೇಯವರು ಸೆರೆ ಸಿಕ್ಕಿದ್ದು ಹಾಗೂ ಆರೋಪಿ 3 ಹಾಗೂ 4 ನೇಯವರು ದಾಳಿಯ ಕಾಲಕ್ಕೆ ಓಡಿ ಹೋಗಿ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪ್ರವೀಣಕುಮಾರ ಆರ್, ಪಿ.ಎಸ್.ಐ-01, ಅಂಕೋಲಾ ಪೊಲೀಸ್ ಠಾಣೆ ರವರು ದಿನಾಂಕ: 09-07-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 131/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಣ್ಣಪ್ಪಾ ತಂದೆ ಪುಟ್ಟಾ ಗೌಡಾ, ಪ್ರಾಯ-26 ವರ್ಷ, ಸಾ|| ಶಿರಗುಣಿ, ಕಕ್ಕಳ್ಳಿ, ತಾ: ಶಿರಸಿ (ಮೋಟಾರ್ ಸೈಕಲ್ ನಂ: ಕೆ.ಎ-47/ಇ.ಸಿ-3156 ನೇದರ ಸವಾರ). ಈತನು ದಿನಾಂಕ: 09-07-2021 ರಂದು 13-00 ಗಂಟೆಗೆ ತಾನು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಇ.ಸಿ-3156 ನೇದರ ಹಿಂಬದಿಯಲ್ಲಿ ಪಿರ್ಯಾದಿಯ ಅಕ್ಕ ಕುಮಾರಿ: ವೀಣಾ ತಂದೆ ಮಾಬ್ಲು ಗೌಡಾ, ಪ್ರಾಯ-25 ವರ್ಷ, ಸಾ|| ಕಬ್ಬರ್ಗಿ, ಕತಗಾಲ, ತಾ: ಕುಮಟಾ ಇವರಿಗೆ ಕೂಡ್ರಿಸಿಕೊಂಡು ಕುಮಟಾ ಪಟ್ಟಣದ ಮೂರ್ಕಟ್ಟೆ ಸರ್ಕಲ್ ಕಡೆಯಿಂದ ಬಸ್ತಿಪೇಟೆ ಸರ್ಕಲ್ ಕಡೆಗೆ ಹೋಗಲು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ, ಮೂರ್ಕಟ್ಟೆಯ ಅಪೋಲೋ ಮೆಡಿಕಲ್ಸ್ ಎದುರಿಗೆ ನಿಷ್ಕಾಳಜಿಯಿಂದ ಒಮ್ಮೇಲೆ ಬ್ರೇಕ್ ಹಾಕಿ ಮೋಟಾರ್ ಸೈಕಲ್ ಹಿಂಬದಿ ಕುಳಿತು ಸವಾರಿ ಮಾಡುತ್ತಿದ್ದ ಪಿರ್ಯಾದಿಯ ಅಕ್ಕ ಕುಮಾರಿ: ವೀಣಾ ಇವಳು ಮೋಟಾರ್ ಸೈಕಲಿನಿಂದ ಕೆಳಗೆ ರಸ್ತೆಯ ಮೇಲೆ ಬಿದ್ದು, ತಲೆಗೆ ಹಾಗೂ ಬಲಭುಜಕ್ಕೆ ಸಾಧಾ ಗಾಯನೋವು ಆಗಲು ಆರೋಪಿ ಮೋಟಾರ್ ಸೈಕಲ್ ಸವಾರನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ಮಾಬ್ಲು ಗೌಡಾ, ಪ್ರಾಯ-23 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಬ್ಬರ್ಗಿ, ಕತಗಾಲ, ತಾ: ಕುಮಟಾ ರವರು ದಿನಾಂಕ: 09-07-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 62/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಂಜಯ ತಂದೆ ಪರಮೇಶ್ವರ ಹವಳಕೊಂಡಾ, ಸಾ|| ಕಲಘಟಗಿ, ಧಾರವಾಡ (ಅಶೋಕ ಲೇಲ್ಯಾಂಡ್ ದೋಸ್ತ್ನಂ: ಕೆ.ಎ-25/ಎ.ಎ-7943 ನೇದರ ಚಾಲಕ). ದಿನಾಂಕ: 08-07-2021 ರಂದು ಪಿರ್ಯಾದಿಯ ದೊಡ್ಡಮ್ಮನ ಮಗನಾದ ಗಾಯಾಳು ಲೋಕೇಶ ತಂದೆ ಮಾದೇವ ನಾಯ್ಕ ಈತನು ತನ್ನ ಹೀರೋ ಹೋಂಡಾ ಗ್ಲ್ಯಾಮರ್ ಎಫ್.ಐ ಮೋಟಾರ್ ಸೈಕಲ್ ನಂ: ಕೆ.ಎ-47/ಎಲ್-8886 ನೇದರ ಮೇಲೆ ಗಣೇಶ ತಂದೆ ಚಂದ್ರಾ ನಾಯ್ಕ ಈತನಿಗೆ ಕೂಡ್ರಿಸಿಕೊಂಡು ಬೈಲೂರು ಕಡೆಯಿಂದ ಮುರ್ಡೇಶ್ವರ ಹೈಲ್ಯಾಂಡ್ ಹೊಟೇಲ್ ಎದುರಿಗೆ ಬಂದು ತನ್ನ ಬಲಬದಿಗೆ ಮೋಟಾರ್ ಸೈಕಲನ್ನು ತಿರುಗಿಸಿ ರಸ್ತೆ ದಾಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಲೂರು ಕಡೆಗೆ ಹೋಗುತ್ತಿದ್ದಾಗ ಸುಮಾರು 18-30 ಗಂಟೆಗೆ ಬಸ್ತಿಮಕ್ಕಿ ಕ್ರಾಸ್ ಹತ್ತಿರ ಹಿಂದಿನಿಂದ ಬರುತ್ತಿದ್ದ ಅಶೋಕ ಲೇಲ್ಯಾಂಡ್ ದೋಸ್ತ್ ನಂ: ಕೆ.ಎ-25/ಎ.ಎ-7943 ನೇದರ ಆರೋಪಿ ಚಾಲಕನು ತನ್ನ ವಾಹನವನ್ನು ಭಟ್ಕಳ ಕಡೆಯಿಂದ ಮಂಕಿ ಕಡೆಗೆ ರಾಷ್ಟ್ರೀಯ ಹೆದ್ದಾರಿ -66 ರಲ್ಲಿ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾr ಸೈಕಲ್ ಸವಾರ ಲೋಕೇಶ ತಂದೆ ಮಾದೇವ ನಾಯ್ಕ ಈತನ ಹಣೆಗೆ, ಎಡಗೈ ಮೊಣಗಂಟಿಗೆ, ಬೆನ್ನಿಗೆ, ಎಡಗಲ್ಲದ ಹತ್ತಿರ ತೆರಚಿದ ಗಾಯ ಹಾಗೂ ಸೊಂಟಕ್ಕೆ ಒಳನೋವು ಆಗಿದ್ದು ಮತ್ತು ಗಣೇಶ ಈತನಿಗೆ ಎಡಗೈ ಮುಂಗೈಗೆ, ಮೊಣಗಂಟಿನ ಹತ್ತಿರ ತೆರಚಿದ ಗಾಯ ಹಾಗೂ ಎಡಭುಜಕ್ಕೆ ಗಂಭೀರ ಸ್ವರೂಪದ ಒಳನೋವನ್ನುಂಟು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ದಿನೇಶ ತಂದೆ ರಮೇಶ ನಾಯ್ಕ, ಪ್ರಾಯ-26 ವರ್ಷ, ವೃತ್ತಿ-ಸೆಂಟ್ರಿಂಗ್ ಕೆಲಸ, ಸಾ|| ಮಡಿಕೇರಿ, ಬೈಲೂರು, ತಾ: ಭಟ್ಕಳ ರವರು ದಿನಾಂಕ: 09-07-2021 ರಂದು 1-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 111/2021, ಕಲಂ: 279, 337, 285 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಭಿಷೇಕರಾಯ ತಂದೆ ಮೊಘಲರಾಯ, ಪ್ರಾಯ-27 ವರ್ಷ, ವೃತ್ತಿ-ಚಾಲಕ, ಸಾ|| ಪರಿಯಾಪುರ, ಸಹರ್ಸಾ, ಬಿಹಾರ (ಗ್ಯಾಸ್ ಟ್ಯಾಂಕರ್ ಲಾರಿ ನಂ: ಎಮ್.ಪಿ-04/ಎಚ್.ಇ-9882 ನೇದರ ಚಾಲಕ). ಈತನು ದಿನಾಂಕ: 09-07-2021 ರಂದು ಬೆಳಿಗ್ಗೆ ಸಮಯ ಸುಮಾರು 11-30 ಗಂಟೆಗೆ ತನ್ನ ಬಾಬ್ತು ಗ್ಯಾಸ್ ಟ್ಯಾಂಕರ್ ನಂ: ಎಮ್.ಪಿ-04/ಎಚ್.ಇ-9882 ನೇದನ್ನು ಯಲ್ಲಾಪುರ ಕಡೆಯಿಂದ ಹಳಿಯಾಳ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ತನ್ನ ವಾಹನವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲಾಗದೇ, ಯಲ್ಲಾಪುರ ತಾಲೂಕಿನ ಕಣ್ಣಿಗೇರಿ ಗ್ರಾಮದಲ್ಲಿ ಹಾದು ಹೋದ ರಾಜ್ಯ ಹೆದ್ದಾರಿ ಸಂಖ್ಯೆ-93 ರ ರಸ್ತೆಯ ಪಕ್ಕದಲ್ಲಿ ಪಲ್ಟಿ ಮಾಡಿಕೊಂಡು ತನ್ನ ಬೆನ್ನಿಗೆ ಹಾಗೂ ಮೈ ಕೈಗೆ ಗಾಯನೋವು ಪಡಿಸಿಕೊಂಡಿದಲ್ಲದೇ, ವಾಹನವನ್ನು ಜಖಂಗೊಳಿಸಿದ್ದು, ಟ್ಯಾಂಕರ್ ಲಾರಿಯಲ್ಲಿದ್ದ ಗ್ಯಾಸ್ ಸ್ಟೋಟಕ ವಸ್ತು ಅಂತಾ ತಿಳಿದರೂ ಸಹ ಯಾವುದೇ ಮುಂಜಾಗ್ರತಾ ಕ್ರಮಕೈಗೊಳ್ಳದೇ ನಿರ್ಲಕ್ಷ್ಯದ ವರ್ತನೆ ತೋರಿ ಈ ಅಪಘಾತಕ್ಕೆ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಕೃಷ್ಣಮೂರ್ತಿ ಜೆ. ನಾಯ್ಕ, ಪ್ರಾಯ-42 ವರ್ಷ, ವೃತ್ತಿ-ಪೊಲೀಸ್ ಹೆಡ್ ಕಾನ್ಸಟೇಬಲ್ (ಸಿ.ಎಚ್.ಸಿ-612), ಸಾ|| ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 09-07-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 61/2021, ಕಲಂ: 5, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ-2020 ಮತ್ತು ಕಲಂ: 11(1)(ಡಿ) ಪ್ರಾಣಿ ಹಿಂಸಾ ನಿರ್ಮೂಲನಾ ಕಾಯ್ದೆ-1960 ಹಾಗೂ ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ 3 ಜನ ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈ ನಮೂದಿತ ಆರೋಪಿತರು ದಿನಾಂಕ: 09-07-2021 ರಂದು 03-50 ಗಂಟೆಯಿಂದ 04-00 ಗಂಟೆಯ ನಡುವಿನ ಅವಧಿಯಲ್ಲಿ ಶಿರಸಿ ನಗರದ ಮರಾಠಿಕೊಪ್ಪ ಶಿವಾವುಡ್ ಕಾರ್ವಿಂಗ್ ಎದುರಿನ ರಸ್ತೆಯ ಪಕ್ಕದಲ್ಲಿ ಮಲಗಿದ್ದ ಪಿರ್ಯಾದಿಯ ಮಾಲಿಕತ್ವದ 2.5 ವರ್ಷದ ಬಿಳಿ ಮಿಶ್ರಿತ ಕೆಂಪು ಬಣ್ಣದ ಹೋರಿ-01, ಅಕಿ|| 12,000/- ರೂಪಾಯಿ, 2.5 ವರ್ಷದ ಕಪ್ಪು ಮಿಶ್ರಿತ ಕೆಂಪು ಬಣ್ಣದ ಹೋರಿ-01, ಅಕಿ|| 15,000/- ರೂಪಾಯಿ. ಹೀಗೆ ಒಟ್ಟು 27,000/- ರೂಪಾಯಿ ಮೌಲ್ಯದ ದನಗಳನ್ನು ಕಳ್ಳತನ ಮಾಡಿಕೊಂಡು ತಮ್ಮ ಕಾರನಲ್ಲಿ ಹಿಂಸಾತ್ಮಕವಾಗಿ ತುಂಬಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ರವಿಚಂದ್ರ ತಂದೆ ಹನುಮಂತ ಗೌಳಿ, ಪ್ರಾಯ-31 ವರ್ಷ, ವೃತ್ತಿ-ಸಿವಿಲ್ ಕಾಂಟ್ರ್ಯಾಕ್ಟರ್, ಸಾ|| ಆನಂದ ಕಾಲೋನಿ, ಮರಾಠಿಕೊಪ್ಪ, ತಾ: ಶಿರಸಿ ರವರು ದಿನಾಂಕ: 09-07-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                     

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 123/2021, ಕಲಂ: ಯುವತಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಯುವತಿ ಕುಮಾರಿ: ಗುಲ್ನಾಜ್ ತಂದೆ ಶೇಖ್ ಇಬ್ರಾಹಿಂ ಹಂಗರಕಿ, ಪ್ರಾಯ-19 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಮನಿಯಾರ್ ಗಲ್ಲಿ, ಹಳಿಯಾಳ ಶಹರ. ಪಿರ್ಯಾದಿಯವರ ಚಿಕ್ಕಮ್ಮನ ಮಗಳಾದ ಇವಳು ದಿನಾಂಕ: 08-07-2021 ರಂದು ಬೆಳಿಗ್ಗೆ 09-30 ಗಂಟೆಯಿಂದ 11-30 ಗಂಟೆಯ ನಡುವಿನ ಅವಧಿಯಲ್ಲಿ ಹಳಿಯಾಳ ಶಹರದ ಮನಿಯಾರ್ ಗಲ್ಲಿಯಲ್ಲಿರುವ ತನ್ನ ಚಿಕ್ಕಮ್ಮಳಾದ ದಿಲ್ಷಾದ್ ಬೇಗಂ ಇವರ ಮನೆಯಿಂದ ಯಾರಿಗೂ ಹೇಳದೇ ಕೇಳದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ. ಸದರಿ ಕಾಣೆಯಾದವಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಇನಾಯತವುಲ್ಲಾ ತಂದೆ ಅಮೀರ್ ಅಮ್ಜಾ ಚುಂಚುವಾಡ, ಪ್ರಾಯ-27 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಗುತ್ತಿಗೇರಿ ಗಲ್ಲಿ, ಹಳಿಯಾಳ ಶಹರ ರವರು ದಿನಾಂಕ: 09-07-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 84/2021, ಕಲಂ: ಯುವಕ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಯುವಕ ಶ್ರೀ ಆನಂದ ತಂದೆ ಸುಬ್ಬಾ ಗೌಡ, ಪ್ರಾಯ-21 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೊರ್ಲಕೈ, ಪೋ: ಆಡುಕಟ್ಟಾ, ತಾ: ಸಿದ್ದಾಪುರ. ಈತನು ಪಿರ್ಯಾದಿಯ ಮಗನಾಗಿದ್ದು, ದಿನಾಂಕ: 06-07-2021 ರಂದು ಪಿರ್ಯಾದಿಯ ಮಗಳು ಸಿದ್ದಾಪುರದಿಂದ ಗೊದ್ರೇಜ್ ತಂದಿದ್ದಳು. ಅದಕ್ಕೆ ಪಿರ್ಯಾದಿಯು ‘ಈಗ ಅದರ ಅವಶ್ಯಕತೆ ಇಲ್ಲಾಗಿತ್ತು’ ಅಂತಾ ಹೇಳಿದಾಗ ಪಿರ್ಯಾದಿಗೆ ಹಾಗೂ ಪಿರ್ಯಾದಿಯ ಮಗ ಆನಂದ ಈತನ ನಡುವೆ ಸಣ್ಣದಾಗಿ ಮಾತಿಗೆ ಮಾತು ಆಗಿತ್ತು. ಅದರಿಂದ ಆನಂದ ಈತನು ಬೇಸರ ಮಾಡಿಕೊಂಡಿದ್ದನು. ದಿನಾಂಕ: 07-07-2021 ರಂದು ಬೆಳಿಗ್ಗೆ 05-00 ಗಂಟೆಯ ಸುಮಾರಿಗೆ ಮಗನು ನೀರು ಕುಡಿಯಲು ಎದ್ದವನು ಬಾಗಿಲು ಹಾಕಿಕೊಂಡು ಮಲಗಿದ್ದಂತೆ ಆಗಿತ್ತು. ಆದರೆ ಬೆಳಿಗ್ಗೆ 06-30 ಗಂಟೆಯ ಸುಮಾರಿಗೆ ಪಿರ್ಯಾದಿಯ ಹೆಂಡತಿಯು ಎದ್ದು ನೋಡಿದಾಗ ಆನಂದ ಈತನು ಮನೆಯಲ್ಲಿ ಇರಲಿಲ್ಲ. ನಂತರ ನಾವು ಎಲ್ಲಾ ಕಡೆ ಹುಡುಕಾಡಿದರೂ ಮಗನು ಈವರೆಗೆ ಪತ್ತೆ ಆಗಿರುವುದಿಲ್ಲ. ಮಗನು ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದರಿಂದ ತನ್ನ ಮಗನಿಗೆ ಹುಡುಕಿ ಕೊಡಬೇಕೆಂದು ವಿನಂತಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಸುಬ್ಬಾ ತಂದೆ ರಾಮಕೃಷ್ಣ ಗೌಡ, ಪ್ರಾಯ-48 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೊರ್ಲಕೈ, ಪೋ: ಆಡುಕಟ್ಟಾ, ತಾ: ಸಿದ್ದಾಪುರ ರವರು ದಿನಾಂಕ: 09-07-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಬಿಕಾನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 06/2021, ಕಲಂ: ಯುವತಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಯುವತಿ ಕುಮಾರಿ: ನೇಹಾ ತಂದೆ ಮಂಜುನಾಥ ಕುರುಬರ, ಪ್ರಾಯ-18 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಜಮಗಾ, ಅಂಬಿಕಾನಗರ, ದಾಂಡೇಲಿ. ಪಿರ್ಯಾದಿಯವರ ಮಗಳಾದ ಇವಳು ಡಿಪ್ಲೋಮಾ ಕಲಿಯುತ್ತಿದ್ದವಳು, ಈಗ ಮನೆಯಲ್ಲಿ ಇದ್ದಳು. ದಿನಾಂಕ: 06-07-2021 ರಂದು ಮಧ್ಯಾಹ್ನ 15-00 ಗಂಟೆಗೆ ದಾಂಡೇಲಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋದವಳು ಮನೆಗೆ ಬರದೇ ಸಂಬಂಧಿಕರ ಮನೆಗೂ ಹೋಗದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ. ಸದರಿ ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಹನುಮಂತ ಕುರುಬರ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜಮಗಾ, ಅಂಬಿಕಾನಗರ, ದಾಂಡೇಲಿ ರವರು ದಿನಾಂಕ: 09-07-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 09-07-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 22/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ರಮೇಶ ತಂದೆ ಮಾದೇವ ನಾಯ್ಕ, ಪ್ರಾಯ-38 ವರ್ಷ, ವೃತ್ತಿ-ಚಾಲಕ, ಸಾ|| ಸಂಕನಹಿತ್ಲ, ಖರ್ವಾ, ತಾ: ಹೊನ್ನಾವರ. ಪಿರ್ಯಾದಿಯ ಅಣ್ಣನಾದ ಈತನು ದಿನಾಂಕ: 09-07-2021 ರಂದು ತೀವ್ರವಾಗಿ ಎದೆನೋವಿನಿಂದ ಅಸ್ವಸ್ಥಗೊಂಡವನಿಗೆ ಹೊನ್ನಾವರದ ಸೇಂಟ್ ಇಗ್ನೇಷಿಯಸ್ ಆಸ್ಪತ್ರೆಗೆ ಕರೆತಂದಾಗ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಸದರಿಯವನು ಮಾರ್ಗಮಧ್ಯದಲ್ಲಿಯೇ 11-45 ಗಂಟೆಯ ಪೂರ್ವದಲ್ಲಿ ಮೃತಪಟ್ಟ ಬಗ್ಗೆ ತಿಳಿಸಿದ್ದು. ಇದರ ಹೊರತು ತನ್ನ ಅಣ್ಣನ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಸಂತೋಷ ತಂದೆ ಮಾದೇವ ನಾಯ್ಕ, ಪ್ರಾಯ-38 ವರ್ಷ, ವೃತ್ತಿ-ವ್ಯಾಪಾರ, ಸಾ|| ಸಂಕನಹಿತ್ಲ, ಖರ್ವಾ, ತಾ: ಹೊನ್ನಾವರ ರವರು ದಿನಾಂಕ: 09-07-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುರ್ಡೇಶ್ವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 18/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಮಂಜುನಾಥ ತಂದೆ ಗೋವಿಂದ ಹರಿಕಾಂತ, ಪ್ರಾಯ-53 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಕೊಡಗಿಭಟ್ಟನ ಮನೆ, ಮನಾಲಿ ಗಾರ್ಡನ್, ಮಾವಳ್ಳಿ-1, ಮುರ್ಡೇಶ್ವರ, ತಾ: ಭಟ್ಕಳ. ಪಿರ್ಯಾದಿಯ ತಂದೆಯವರಾದ ಇವರು ದಿನಾಂಕ: 09-07-2021 ರಂದು ಬೆಳಿಗ್ಗೆ 07-30 ಗಂಟೆಯ ಸುಮಾರಿಗೆ ಮನೆಯಿಂದ ಬಲೆ ತೆಗೆದುಕೊಂಡು ಸಮುದ್ರದ ದಡದಲ್ಲಿ ಬಲೆ ಬಿಟ್ಟು ಮೀನು ಹಿಡಿಯಲು ಅಂತಾ ಪಟೇಲ್ ಗಾರ್ಡನ್ ಹತ್ತಿರದ ಅರಬ್ಬೀ ಸಮುದ್ರದ  ಕಡೆಗೆ ಹೋಗಿದ್ದರು. ಮರಳಿ ಬೆಳಿಗ್ಗೆ 09-30 ಗಂಟೆಯ ಸುಮಾರಿಗೆ ಮನೆಗೆ ಬಂದವರು ಸ್ವಲ್ಪ ಸಮಯದ ನಂತರ ತನ್ನ ಎದೆ ನೋಯುತ್ತಿದೆ ಅಂತಾ ಹೇಳಿದ್ದು, ಕೂಡಲೇ ಪಿರ್ಯಾದಿಯು ತನ್ನ ತಂದೆಯವರನ್ನು ಕರೆದುಕೊಂಡು ಒಂದು ಆಟೋ ರಿಕ್ಷಾದ ಮೇಲೆ ಮುರ್ಡೇಶ್ವರದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆಸ್ಪತ್ರೆಯ ನರ್ಸ್ ಪರೀಕ್ಷಿಸಿ ಸದರಿಯವರು ಬೆಳಿಗ್ಗೆ 10-45 ಗಂಟೆಗೆ ಮೃತಪಟ್ಟ ಬಗ್ಗೆ ತಿಳಿಸಿದ್ದು, ಮೃತದೇಹವು ಪ್ರಾಥಮಿಕ ಆರೋಗ್ಯ ಕೇಂದ್ರ ಮುರ್ಡೇಶ್ವರದಲ್ಲಿ ಇದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಪ್ರಕಾಶ ತಂದೆ ಮಂಜುನಾಥ ಹರಿಕಾಂತ, ಪ್ರಾಯ-29 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಕೊಡಗಿಭಟ್ಟನ ಮನೆ, ಮನಾಲಿ ಗಾರ್ಡನ್, ಮಾವಳ್ಳಿ-1, ಮುರ್ಡೇಶ್ವರ, ತಾ: ಭಟ್ಕಳ ರವರು ದಿನಾಂಕ: 09-07-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 11-07-2021 07:20 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080