ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 09-06-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 94/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದಿಯು ದಿನಾಂಕ: 28-05-2021 ರಂದು ಟ್ರೈನ್ ನಂ: 06346 ನೇತ್ರಾವತಿ ಸ್ಪೆಷಲ್ ರೈಲಿನ PNR No: 4833038772, B-2, Berth No: 9, 10, 11, 12 & 13 ರಲ್ಲಿ ತನ್ನ ಕುಟುಂಬದವರೊಂದಿಗೆ ಮಂಗಳೂರಿನಿಂದ ಮಡಗಾಂವ್ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಬೆಳಗಿನ ಜಾವ 03-00 ಗಂಟೆಯಿಂದ 03-03 ಗಂಟೆಯ ನಡುವಿನ ಅವಧಿಯಲ್ಲಿ ರೈಲಿನಲ್ಲಿದ್ದ ಆರೋಪಿತರಾದ ಯಾರೋ ಕಳ್ಳರು ಅಜಮಾಸ್ 15,000/- ರೂಪಾಯಿ ಬೆಲೆಯ ಬಂಗಾರ, ನಗದು ಹಣ, ದಾಖಲಾತಿಗಳು ಹಾಗೂ ಕೀ ಗಳಿದ್ದ ಕಂದು ಬಣ್ಣದ ಲೇಡೀಸ್ ಹ್ಯಾಂಡ್ ಬ್ಯಾಗ್ ಅನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಮಹಮ್ಮದ್ ಇಕ್ಬಾಲ್, ಸಾ|| ಹೊಟೇಲ್ ಫೌಂಟೇನ್ ಫ್ಲಾಜಾ, ಆರ್.ಡಿ ಸ್ಟ್ರೀಟ್, ಮುಂಬೈ ರವರು (ಎಚ್.ಟಿ.ಇ-1 ರತ್ನಗಿರಿ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ರವರಲ್ಲಿ ನೀಡಿದ ದೂರನ್ನು, ಸದ್ರಿಯವರು ಆರ್.ಪಿ.ಎಫ್. ಕಾರವಾರ ರವರಿಗೆ ಕಳುಹಿಸಿದ್ದನ್ನು ಮೇಲಾಧಿಕಾರಿಗಳಿಂದ ಸ್ವೀಕರಿಸಿಕೊಂಡು) ದಿನಾಂಕ: 09-06-2021 ರಂದು 11-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 95/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಿತಿನ ತಂದೆ ಆನಂದು ಶಿರವಾಡಕರ, ಸಾ|| ಶಿರವಾಡ, ಕಾರವಾರ (ಲಾರಿ ನಂ: ಕೆ.ಎ-30/6215 ನೇದರ ಚಾಲಕ). ಈತನು ದಿನಾಂಕ: 08-06-2021 ರಂದು ರಾತ್ರಿ 19-30 ಗಂಟೆಗೆ ತನ್ನ ಲಾರಿ ನಂ: ಕೆ.ಎ-30/6215 ನೇದನ್ನು ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದಲ್ಲಿ ಹಾಯ್ದಿರುವ ಹಾರವಾಡ ಘಟ್ಟದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಡಾಂಬರ್ ರಸ್ತೆಯಲ್ಲಿ ಅಂಕೋಲಾ ಕಡೆಯಿಂದ ಕಾರವಾರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದವನು, ತನ್ನ ಲಾರಿಯ ಮುಂದೆ ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-30/ಯು-4387 ನೇದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಹಿಂಬದಿ ಸವಾರನಾದ ಪಿರ್ಯಾದಿಯ ಎಡಭಾಗದ ಹೆಗಲಿಗೆ ಸಾದಾ ಸ್ವರೂಪದ ಗಾಯ ಹಾಗೂ ಮೋಟಾರ್ ಸೈಕಲ್ ಸವಾರ ವಿಶ್ವನಾಥ ತಂದೆ ಪೇರು ಹರಿಕಂತ್ರ, ಪ್ರಾಯ-30 ವರ್ಷ, ಸಾ|| ಮುದಗಾ, ಬೀಚ್ ಹತ್ತಿರ, ಕಾರವಾರ ಈತನ ಎದೆಗೆ ಹಾಗೂ ಎಡಗೈಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶಿವರಂಜನ ತಂದೆ ವಿಠ್ಠಲ ಹರಿಕಂತ್ರ, ಪ್ರಾಯ-26 ವರ್ಷ, ವೃತ್ತಿ-ಬೋಟಿನಲ್ಲಿ ಕೆಲಸ, ಸಾ|| ಮುದಗಾ, ಬೀಚ್ ಹತ್ತಿರ, ಕಾರವಾರ ರವರು ದಿನಾಂಕ: 09-06-2021 ರಂದು 12-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 70/2021, ಕಲಂ: 468, 471 ಐಪಿಸಿ ಹಾಗೂ ಕಲಂ: 14, 14(a)(b) FOREIGNERS ACT-1946 ನೇದ್ದರ ವಿವರ...... ನಮೂದಿತ ಆರೋಪಿತೆ ಶ್ರೀಮತಿ ಖತೀಜಾ ಮೆಹರಿನ್ ಕೊಂ, ಜಾವೀದ್ ಮೊಹಿದ್ದೀನ್ ರುಕ್ನುದ್ದೀನ್, ಪ್ರಾಯ-33 ವರ್ಷ, ಸಾ|| ಮನೆ ನಂ: 106, ಅಶೋಕ ಎನಕ್ಲೇವ್, ನೇತಾಜಿ ರೋಡ್, ಬೆಂಗಳೂರು ಉತ್ತರ, ಹಾಲಿ ಸಾ|| ಅಮೀನುದ್ದೀನ್ ರೋಡ್, ನವಾಯತ್ ಕಾಲೋನಿ, ತಾ: ಭಟ್ಕಳ. ನಮೂದಿತ ಆರೋಪಿತಳು ಅಕ್ರಮವಾಗಿ ಭಾರತ ದೇಶಕ್ಕೆ ನುಸುಳಿ ಬಂದು ಯಾವುದೇ ದಾಖಲೆಗಳನ್ನು ಹೊಂದದೇ ಕಳೆದ 2013 ನೇ ಸಾಲಿನಿಂದ ಭಟ್ಕಳದಲ್ಲಿ ಅನಧೀಕೃತವಾಗಿ ಉಳಿದುಕೊಂಡು ಸುಳ್ಳು ದಾಖಲಾತಿಗಳನ್ನು ಸೃಷ್ಠಿಸಿ, ಇದೇ ನೈಜವೆಂದು ವಂಚಿಸುವ ಉದ್ದೇಶದಿಂದ ತಮ್ಮ ತಾಬಾದಲ್ಲಿ ಇಟ್ಟುಕೊಂಡ ಬಗ್ಗೆ ಪಿರ್ಯಾದಿ ಸ||ತ|| ಕುಮಾರಿ: ಸುಮಾ ಬಿ, ಡಬ್ಲ್ಯೂ.ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 09-06-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 39/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 05-06-2021 ರಂದು 20-00 ಗಂಟೆಯಿಂದ ದಿನಾಂಕ: 06-06-2021 ರಂದು ಬೆಳಿಗ್ಗೆ 09-00 ಗಂಟೆಯ ನಡುವಿನ ಅವಧಿಯಲ್ಲಿ ಶಿರಸಿ ಶಹರದ ಸಿ.ಪಿ ಬಜಾರದಲ್ಲಿರುವ ಶ್ರೀ ರೇಣುಕಾ ಮೆಟಲ್ ಸ್ಟೋರ್ ಅಂಗಡಿಯ ಮೇಲ್ಛಾವಣಿಗೆ ಹಾಕಿದ ಟಾಟಾ ಶೀಟ್ ಅನ್ನು ಯಾವುದೋ ಗಟ್ಟಿ ವಸ್ತುವಿನಿಂದ ಮಿಟಿ ತೆಗೆದು, ಶೀಟ್ ಕೆಳಗೆ ಇದ್ದ ಕಬ್ಬಿಣದ ರಾಡನ್ನು ಕಟ್ ಮಾಡಿ ಅಂಗಡಿಯ ಒಳಗೆ ಇಳಿದು, ಅಂಗಡಿಯಲ್ಲಿ ದೇವರ ಮುಂದೆ ಇಟ್ಟ 3 ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು 8,000/- ರೂಪಾಯಿ ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಸುರೇಶ ತಂದೆ ಯಲ್ಲಪ್ಪ ಭಗವೆ, ಪ್ರಾಯ-48 ವರ್ಷ, ವೃತ್ತಿ-ವ್ಯಾಪಾರ, ಸಾ|| ರಾಜೀವ ನಗರ, ತಾ: ಶಿರಸಿ ರವರು ದಿನಾಂಕ: 09-06-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 74/2021, ಕಲಂ: 427, 435, 379 ಐಪಿಸಿ ನೇದ್ದರ ವಿವರ...... ನಮೂದಿತ ಯಾರೋ ಆರೋಪಿತರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈ ನಮೂದಿತ ಆರೋಪಿತರು ದಿನಾಂಕ: 08-06-2021 ರಂದು ಸಂಜೆ 07-00 ಗಂಟೆಯಿಂದ ದಿನಾಂಕ: 09-06-2021 ರಂದು ಬೆಳಿಗ್ಗೆ 08-30 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದುದಾರರ ತೋಟದಲ್ಲಿರುವ ಸುಮಾರು 3,000/- ರೂಪಾಯಿ ಬೆಲೆಬಾಳುವ ಒಟ್ಟು 58 ಬಾಳೆ ಗಿಡ ಹಾಗೂ 10 ಅಡಿಕೆ ಗಿಡಗಳನ್ನು ಕಡಿದು ಹಾಕಿ ಲುಕ್ಸಾನ್ ಪಡಿಸಿ, ಸುಮಾರು 1,000/- ರೂಪಾಯಿ ಬೆಲೆಬಾಳುವ ಕಾಟ್ ಹಾಗೂ ಕಾಟಿನ ಮೇಲೆ ಹಾಕಿದ ಬೆಡ್ ಅನ್ನು ಸಂಪೂರ್ಣವಾಗಿ ಸುಟ್ಟು ಹಾಕಿ ನಷ್ಟವನ್ನುಂಟು ಮಾಡಿದ್ದಲ್ಲದೇ, ಸುಮಾರು 3,100/- ರೂಪಾಯಿ ಬೆಲೆಬಾಳುವ ಬಾಳೆ ಹಾಗೂ ಅಡಿಕೆ ಗಿಡಗಳಿಗೆ ಔಷಧಿ ಸಿಂಪಡಿಸುವ ಮಷೀನ್ ಅನ್ನು ಕಳವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಮಿಗಮಾರ್ ತಶಿ ತಂದೆ ಲೋಬ್ಸಂಗ್ ರಿಂಚೆನ್. ಪ್ರಾಯ-46 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಮನೆ ನಂ: 16, ಕ್ಯಾಂಪ್ ನಂ: 01, ಟಿಬೇಟಿಯನ್ ಕಾಲೋನಿ, ತಾ: ಮುಂಡಗೋಡ ರವರು ದಿನಾಂಕ: 09-06-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 09-06-2021

at 00:00 hrs to 24:00 hrs

 

ಸಿದ್ದಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 25/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಗಣೇಶ ತಂದೆ ಜನಾರ್ಧನ ಮಡಿವಾಳ, ಪ್ರಾಯ-26 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೆಮ್ಮನಬೈಲ್, ಸೋವಿನಕೊಪ್ಪ ಗ್ರಾಮ, ತಾ: ಸಿದ್ದಾಪುರ, ಹಾಲಿ ಸಾ|| ಕಲ್ಲಾಳ, ತಾ: ಸಿದ್ದಾಪುರ. ಸುದ್ದಿದಾರನ ಮಗನಾದ ಈತನು, ಕಳೆದ 5 ವರ್ಷಗಳ ಹಿಂದೆ ಮನೆ ಬಿಟ್ಟು ಬೇರೆ ಕಡೆಗೆ ವಾಸವಾಗಿದ್ದವನು, ಕಳೆದ 4 ವರ್ಷಗಳ ಹಿಂದೆ ಸಿದ್ದಾಪುರ ತಾಲೂಕಿನ ಕಲ್ಲಾಳ ಊರಿನ ಯುವತಿಯೊಂದಿಗೆ ಪ್ರೀತಿಸಿ ಮನೆಯವರಿಗೆ ಹೇಳದೆ ಅವಳನ್ನು ವಿವಾಹವಾಗಿ, ಅವಳ ತವರು ಮನೆಯಲ್ಲಿಯೇ ವಾಸವಾಗಿದ್ದವನು, ತನ್ನ ಹೆಂಡತಿ ಮದುವೆಗೂ ಪೂರ್ವದಲ್ಲಿ ಬೇರೊಬ್ಬ ಹುಡುಗನನ್ನು ಪ್ರೀತಿಸಿದ್ದ ವಿಷಯವನ್ನು ಇತ್ತೀಚೆಗೆ ಯಾರೋ ಮಾತನಾಡುತ್ತಿದ್ದನ್ನು ಕೇಳಿ ಮನಸ್ಸಿಗೆ ಹಚ್ಚಿಕೊಂಡು ಹಾಗೂ ತಾನು ಮೋಟಾರ್ ಸೈಕಲ್ ಖರೀದಿಸುವಾಗ ಮತ್ತು ಮದುವೆ ಆಗುವಾಗ ಸಂಘದಲ್ಲಿ ಮಾಡಿದ ಸಾಲವನ್ನು ತೀರಿಸುವ ವಿಚಾರವಾಗಿ ಮನಸ್ಸಿಗೆ ಹಚ್ಚಿಕೊಂಡು ಬೇಜಾರದಲ್ಲಿದ್ದವನು, ದಿನಾಂಕ: 09-06-2021 ರಂದು ಬೆಳಿಗ್ಗೆ ಸಿದ್ದಾಪುರ ತಾಲೂಕಿನ ಶಶಿಗುಳಿಯ ನಾರಾಯಣ ಹೆಗಡೆ ಇವರ ತೋಟದ ಕೆಲಸಕ್ಕೆ ಹೋದವನು, ಮಧ್ಯಾಹ್ನ 14-30 ಗಂಟೆಯಿಂದ 16-00 ಗಂಟೆಯ ನಡುವಿನ ಅವಧಿಯಲ್ಲಿ ನಾರಾಯಣ ಹೆಗಡೆ ಇವರ ಬೆಟ್ಟದಲ್ಲಿರುವ ಕಾಡು ಜಾತಿಯ ಮರಕ್ಕೆ ಟವೆಲ್ ಅನ್ನು ಕಟ್ಟಿಕೊಂಡು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ಜನಾರ್ಧನ ತಂದೆ ಕನ್ನಾ ಮಡಿವಾಳ, ಪ್ರಾಯ-55 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹೆಮ್ಮನಬೈಲ್, ಸೋವಿನಕೊಪ್ಪ ಗ್ರಾಮ, ತಾ: ಸಿದ್ದಾಪುರ ರವರು ದಿನಾಂಕ: 09-06-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

ಇತ್ತೀಚಿನ ನವೀಕರಣ​ : 11-06-2021 12:45 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080