ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 09-03-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 38/2021, ಕಲಂ: 323, 324, 504, 506, 385 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ದೀಪಕ ತಂದೆ ವಿನಾಯಕ ವೆರ್ಣೇಕರ, ಪ್ರಾಯ-45 ವರ್ಷ, ವೃತ್ತಿ-ಅಕ್ಕಸಾಲಿಗ, ಸಾ|| ಐ.ಟಿ.ಐ ಕಾಲೇಜ್ ಹತ್ತಿರ, ಪಾದ್ರಿಬಾಗ, ಕಾರವಾರ, 2]. ವಿಜಯಾನಂದ ತಂದೆ ಸುಭಾಷಪಾವಸ್ಕರ, ಪ್ರಾಯ-43 ವರ್ಷ, ಸಾ|| ಮೂರು ದೇವಸ್ಥಾನದ ಹತ್ತಿರ, ಸುಂಕೇರಿ, ಕಾರವಾರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ಈ ಹಿಂದೆ ಪಿರ್ಯಾದಿಯವರೊಂದಿಗೆ ಜಂಟಿ ವ್ಯವಹಾರ ಮಾಡಿಕೊಂಡಿದ್ದು, ನಂತರ ಪಿರ್ಯಾದಿಯವರು ಆರೋಪಿತನಿಂದ ಪ್ರತ್ಯೇಕಗೊಂಡು ವ್ಯವಹಾರವನ್ನು ಮುಂದುವರಿಸಿ, ವ್ಯವಹಾರದಲ್ಲಿ ಯಶಸ್ಸು ಹೊಂದಿರುವುದನ್ನು ಕಂಡು ಆರೋಪಿ 1 ನೇಯವನು ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ಚೆಕ್ ಗಳನ್ನು ತೋರಿಸಿ, ಪಿರ್ಯಾದಿಗೆ ಹಣ ನೀಡುವಂತೆ ಕಿರುಕುಳ ಕೊಡಲು ಪ್ರಾರಂಭಿಸಿ, ದಿನಾಂಕ: 17-08-2019 ರಂದು 12-30 ಗಂಟೆಗೆ ಕಾರವಾರದ ಕೋರ್ಟ್ ಹಾಲ್ ನ ಹೊರಗಡೆ ವಿಚಾರಣೆಯ ನಂತರ ಪಿರ್ಯಾದಿ ಹಾಗೂ ಆತನ ತಮ್ಮ ಉಮೇಶ ಉಲ್ಲಾಸ ರೇವಣಕರ ನ್ಯಾಯಾಲಯದ ಆವರಣದ ಹೊರಗಡೆ ನಿಂತುಕೊಂಡಿದ್ದಾಗ ಆರೋಪಿ 1 ಹಾಗೂ 2 ನೇಯವರು ಹಿಂಬದಿಯಿಂದ ಪಿರ್ಯಾದಿಯ ಶರ್ಟ್ ಕಾಲರ್ ಅನ್ನು ಹಿಡಿದು ಕೈಯಿಂದ ಕೆನ್ನೆಯ ಮೇಲೆ ಹೊಡೆದು ಹಾಗೂ ಆತನ ಸಹೋದರನಿಗೆ ‘ಬೇವರ್ಸಿ ರಾಂಡೆಚಾ, ಪೈಸೆ ದಿವು ಜೈನಾ? ತುಕಾ ಆನಿ ತುಗೇಲ ಬೈಲೇಕ, ಪೋರಾಕ ಜೀವಾಂಶಿ ಮಾರತಾಲೆ’ ಅಂತ ಅವಾಚ್ಯವಾಗಿ ಬೈಯ್ದು ಜೀವದ ಬೆದರಿಕೆ ಹಾಕಿ, ಆರೋಪಿತರು ಪಿರ್ಯಾದಿಗೆ 18 ಲಕ್ಷ ರೂಪಾಯಿ ಹಣ ಬಲತ್ಕಾರವಾಗಿ ನೀಡುವಂತೆ ಇಲ್ಲದೇ ಹೋದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಉಲ್ಲಾಸ ರೇವಣಕರ, ಪ್ರಾಯ-42 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ರಾಮಸೀತಾ ದೇವಸ್ಥಾನದ ಹತ್ತಿರ, ಸೋನಾರವಾಡಾ, ಚಿತ್ತಾಕುಲ, ಸದಾಶಿವಗಡ, ಕಾರವಾರ ರವರು ದಿನಾಂಕ: 09-03-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 44/2021, ಕಲಂ: 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಅಂಕೋಲಾ ತಾಲೂಕಿನ ಶೆಟಗೇರಿ ಕ್ರಾಸಿಲ್ಲಿ ತನ್ನ ಹೆಂಡತಿಯೊಂದಿಗೆ ವಾಸವಾಗಿರುವ ಪಿರ್ಯಾದಿಯು ವೈದ್ಯಕೀಯ ಉಪಚಾರ ಮತ್ತು ಮಂಗಳೂರಿನಲ್ಲಿ ವಾಸವಾಗಿರುವ ತನ್ನ ಮಕ್ಕಳನ್ನು ನೋಡಿಕೊಂಡು ಬರಲು ಮಂಗಳೂರಿಗೆ ಹೋಗಿದ್ದಾಗ, ದಿನಾಂಕ: 07-03-2021 ರಂದು 19-00 ಗಂಟೆಯಿಂದ ದಿನಾಂಕ: 08-03-2021 ರಂದು 07-00 ಗಂಟೆಯ ನಡುವಿನ ಅವಧಿಯಲ್ಲಿ ಆರೋಪಿತರಾದ ಯಾರೋ ಕಳ್ಳರು ಪಿರ್ಯಾದಿಯವರ ಮನೆಯ ಮುಂಬಾಗಿನ ಬೀಗ ಮುರಿದು ಮನೆಯ ಒಳಗೆ ಹೊಕ್ಕಿ ಬೆಡ್ ರೂಮಿನಲ್ಲಿದ್ದ ಮತ್ತು ಮೊದಲನೇ ಮಹಡಿಯಲ್ಲಿದ್ದ ಎರಡು ಗೋದ್ರೇಜ್ ಕಪಾಟ ಮತ್ತು ಎರಡು ಮರದ ಕಪಾಟನ್ನು ತೆರೆದು ಕೀ ಯನ್ನು ಬಳಸಿ ಕಪಾಟಿನ ಡ್ರಾಯರನ್ನು ತೆಗೆದು, ಮೂರು ಕಪಾಟಿನಲ್ಲಿದ್ದ ನಗದು ಹಣ ಸುಮಾರು 35,000/- ರೂಪಾಯಿಯನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಈ ಕುರಿತು ಕಳ್ಳರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಚಂದ್ರೇಶ ತಂದೆ ನಾರಾಯಣ ನಾಯಕ, ಪ್ರಾಯ-68 ವರ್ಷ, ವೃತ್ತಿ-ನಿವೃತ್ತ ಸಹಾಯಕ ಅರಣ್ಯಾಧಿಕಾರಿ, ಸಾ|| ಚಂದ್ರಗಿರಿ ನಿಲಯ, ಶೆಟಗೇರಿ ಕ್ರಾಸ್, ತಾ: ಅಂಕೋಲಾ ರವರು ದಿನಾಂಕ: 09-03-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 45/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮುಖೇಶಕುಮಾರ ತಂದೆ ವಸಂತಲಾಲ್ ಸಲಾಂ, ಪ್ರಾಯ-25 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| ನವಲಗಾಂ, ಪೋಸ್ಟ್ ಝಿರಿ, ಠಾಣಾ ಚಪ್ಪಾರ, ಸೌನಿ, ಮದ್ಯಪ್ರದೇಶ ರಾಜ್ಯ (ಅಶೋಕ ಲೈಲಾಂಡ್ ಕಂಪನಿಯ ದೋಸ್ತ್ ಲಾರಿ ನಂ: ಕೆ.ಎ-51/ಎ.ಎಫ್-9280 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 08-03-2021 ರಂದು ಬೆಳಿಗ್ಗೆ ಸುಮಾರು 11-00 ಗಂಟೆಗೆ ತನ್ನ ಅಶೋಕ ಲೈಲಾಂಡ್ ಕಂಪನಿಯ ದೋಸ್ತ್ ಲಾರಿ ನಂ: ಕೆ.ಎ-51/ಎ.ಎಫ್-9280 ನೇದನ್ನು ಅಂಕೋಲಾ ಕಡೆಯಿಂದ ಹುಬ್ಬಳ್ಳಿಯ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಮಾಸ್ತಿಕಟ್ಟಾ ಗ್ರಾಮದಲ್ಲಿ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ಡಾಂಬರ್ ರಸ್ತೆಯಲ್ಲಿ ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಓವರಟೇಕ್ ಮಾಡಿಕೊಂಡು ಬರುತ್ತಿದ್ದ ಒಂದು ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ತನ್ನ ಅಶೋಕ ಲೈಲಾಂಡ್ ಕಂಪನಿಯ ದೋಸ್ತ್ ಲಾರಿಯ ಚಾಲನೆಯ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ಅಪಘಾತ ಪಡಿಸಿ, ಕಾರಿನಲ್ಲಿದ್ದ ಪಿರ್ಯಾದಿಯವರಿಗೆ ಮತ್ತು ತನಗೆ ಸಾದಾ ಸ್ವರೂಪದ ಗಾಯನೋವು ಪಡಿಸಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪ್ರದೀಪಕುಮಾರ ತಂದೆ ಮನೋಜ ಕುಮಾರ, ಪ್ರಾಯ-21 ವರ್ಷ, ವೃತ್ತಿ-ಲಾರಿ ಕ್ಲೀನರ್, ಸಾ|| ಮೇನ್ ಚೌಕ, ಚೌಭಾರ, ಪೋಸ್ಟ್ ಭುನ್ನಾ, ಪಟಿಯಾಬಾದ್, ಹರಿಯಾಣ ರಾಜ್ಯ ರವರು ದಿನಾಂಕ: 09-03-2021 ರಂದು 17-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 22/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮೊಹಮ್ಮದ್ ಅಲ್ತಾಫ್ ತಂದೆ ಮೊಹಮ್ಮದ್ ಸಲೀಂ ಸೌದಾಗರ್, ಪ್ರಾಯ-23 ವರ್ಷ, ಸಾ|| ಮುಗ್ದುಮ್ ಕಾಲೋನಿ, ಶಬ್ನಂ ಸ್ಟ್ರೀಟ್, ತಾ: ಭಟ್ಕಳ (ಮೋಟಾರ್ ಸೈಕಲ್ ನಂ: ಕೆ.ಎ-47/ಎಲ್-3622 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 08-03-2021 ರಂದು ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಎಲ್-3622 ನೇದರ ಮೇಲೆ ಹಿಂಬದಿ ಸವಾರನಾಗಿ ಪಿರ್ಯಾದಿಗೆ ಕೂಡ್ರಿಸಿಕೊಂಡು ಹಾಗೂ ಮೊಹ್ಮದ್ ಅದ್ನಾನ್ ತಂದೆ ಖಲೀಲ್ ಊರ್ ರೆಹಮಾನ್ ಈತನು ಪಿರ್ಯಾದಿಯ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-47/ಎಸ್-3206 ನೇದನ್ನು ಸವಾರಿ ಮಾಡಿಕೊಂಡು ಮುರ್ಡೇಶ್ವರದಲ್ಲಿ ತಿರುಗಾಡಿ ಮುರ್ಡೇಶ್ವರ ನಾಕಾದ ಮುಖಾಂತರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ಪರತ್ ಭಟ್ಕಳ ಕಡೆಗೆ ಹೋಗುವಾಗ ಪಿರ್ಯಾದಿಯು ಹೊರಟ ಮೋಟಾರ್ ಸೈಕಲ್ ಮುಂದುಗಡೆ ಮೊಹಮ್ಮದ್ ಅದ್ನಾನ್ ಈತನು ಮೋಟಾರ್ ಸೈಕಲನ್ನು ಚಲಾಯಿಸಿಕೊಂಡು ಹೊರಟಿದ್ದು, ಸದ್ರಿ ಮೋಟಾರ್ ಸೈಕಲ್ ಹಿಂದುಗಡೆಯಿಂದ ಮೊಹಮ್ಮದ್ ಅಲ್ತಾಫ್ ಈತನು ಪಿರ್ಯಾದಿಯನ್ನು ಹಿಂದುಗಡೆ ಕೂಡ್ರಿಸಿಕೊಂಡು ಮೋಟಾರ್ ಸೈಕಲ್ ಚಲಾಯಿಸಿಕೊಂಡು ಹೊರಟಾಗ ಬಸ್ತಿ ಉತ್ತರಕೊಪ್ಪ ಕ್ರಾಸ್ ಹತ್ತಿರ ತಲುಪುತ್ತಿದ್ದಂತೆ ಆರೋಪಿತನು ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ರಾತ್ರಿ 10-30 ಗಂಟೆಯ ಸುಮಾರಿಗೆ ಮುಂದುಗಡೆ ಮೊಹಮ್ಮದ್ ಅದ್ನಾನ್ ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲಿನ ಹಿಂಬದಿಗೆ ಢಿಕ್ಕಿ ಹೊಡೆದು ಅಪಘಾತ ಪಡಿಸಿದ್ದು, ಈ ಅಪಘಾತದಿಂದ ಮೊಹಮ್ಮದ್ ಅದ್ನಾನ್ ಈತನು ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು, ಆತನ ತಲೆಗೆ ಭಾರೀ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಇಶ್ತಿಯಾಕುಲ್ ಹಸನ್ ತಂದೆ ಮೊಹಮ್ಮದ್ ಇಲಿಯಾಸ್, ಪ್ರಾಯ-20 ವರ್ಷ, ವೃತ್ತಿ-ಸೂಪರ್ ಮಾರ್ಕೆಟ್ ನಲ್ಲಿ ಕೂಲಿ ಕೆಲಸ, ಸಾ|| ಬಿಲಾಲ್ ಮಸೀದಿ ರಸ್ತೆ, 1 ನೇ ಕ್ರಾಸ್, ಪುರವರ್ಗ, ಯಲ್ವಡಿಕಾವೂರ, ತಾ: ಭಟ್ಕಳ, ಹಾಲಿ ಸಾ|| ಬಂದರ್ ರೋಡ್, 1 ನೇ ಕ್ರಾಸ್, ತಾ: ಭಟ್ಕಳ ರವರು ದಿನಾಂಕ: 09-03-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಜೋಯಿಡಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 12/2021, ಕಲಂ: 78(3) ಕರ್ನಾಟಕ ಪೊಲಿಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ರಾಮಾ ಗಾವಡಾ, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜನತಾ ಕಾಲೂನಿ, ತಾ: ಜೋಯಿಡಾ. ನಮೂದಿತ ಆರೋಪಿತನು ದಿನಾಂಕ: 09-03-2021 ರಂದು 15-15 ಗಂಟೆಯ ಸುಮಾರಿಗೆ ತಮ್ಮ ಲಾಭಕ್ಕೋಸ್ಕರ ಜೋಯಿಡಾದ ಶಿವಾಜಿ ಸರ್ಕಲ್ ಹತ್ತಿರದ ಬಸ್ ನಿಲ್ದಾಣದ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬರಿಗೆ ಅನ್ಯಾಯದ ಲಾಭ, ಇನ್ನೊಬ್ಬರಿಗೆ ಅನ್ಯಾಯದ ನಷ್ಟವಾಗುವಂತೆ ಸಾರ್ವಜನಿಕರಿಂದ ಹಣವನ್ನು ಸ್ವೀಕರಿಸಿಕೊಂಡು ಓ.ಸಿ. ಚೀಟಿ ಬರೆಯುತ್ತಿದ್ದಾಗ ನಗದು ಹಣ 3,100/- ರೂಪಾಯಿ, ಬಾಲ್ ಪೆನ್ ಹಾಗೂ ಅಂಕೆ-ಸಂಖ್ಯೆ ಬರೆದ ಓ.ಸಿ ಚೀಟಿಗಳ ಸಮೇತ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಮಂಜುಳಾ ಎಸ್. ರಾವೋಜಿ, ಪಿ.ಎಸ್.ಐ, ಜೋಯಿಡಾ ಪೊಲೀಸ್ ಠಾಣೆ ರವರು ದಿನಾಂಕ: 09-03-2021 ರಂದು 16-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 38/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಂತೋಷ ತಂದೆ ವೆಂಕಪ್ಪಾ ಹಾಡ್ಲಿ, ಸಾ|| ಮಂಜುನಾಥ ನಗರ, ಗೋಕುಲ್ ರೋಡ್, ಹುಬ್ಬಳ್ಳಿ (ಮಾರುತಿ ಓಮಿನಿ ವಾಹನ ನಂ: ಕೆ.ಎ-25/ಎಮ್.ಬಿ-2463 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 08-03-2021 ರಂದು ಮಧ್ಯಾಹ್ನ 02-00 ಗಂಟೆಯ ಸುಮಾರಿಗೆ ತನ್ನ ಮಾರುತಿ ಓಮಿನಿ ವಾಹನ ನಂ: ಕೆ.ಎ-25/ಎಮ್.ಬಿ-2463 ನೇದನ್ನು ಯಲ್ಲಾಪುರ ಕಡೆಯಿಂದ ಶಿರಸಿ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಸವಣಗೇರಿ ನೀರಿನ ಟ್ಯಾಂಕ್ ಹತ್ತಿರ ತನ್ನ ಮುಂದೆ ನಿಧಾನವಾಗಿ ಮೋಟಾರ ಸೈಕಲ್ ನಂ: ಕೆ.ಎ-31/ಇ.ಸಿ-2882 ನೇದನ್ನು ಚಲಾಯಿಸಿಕೊಂಡು ಹೊರಟ ಪಿರ್ಯಾದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲಿನ ಸಮೇತ ಕೆಳಗೆ ಬೀಳಿಸಿ ಪಿರ್ಯಾದಿಯ ಬಲ ಸೊಂಟ, ಬಲ ಪಕ್ಕೆಲುಬು, ಬಲಗಾಲ ತೊಡೆಗೆ ಹಾಗೂ ಬಲಗೈ ಮೊಣಗಂಟಿನ ಹತ್ತಿರ ಸಾದಾ ಗಾಯನೋವು ಪಡಿಸಿ, ಎರಡು ವಾಹನಗಳನ್ನು ಜಖಂಗೊಳಿಸಿದ ಬಗ್ಗೆ ಪಿರ್ಯಾದಿ ಶ್ರೀ ಆದರ್ಶ ತಂದೆ ರಾಮಚಂದ್ರ ನಾಯ್ಕ, ಪ್ರಾಯ-21 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಸವನಗೇರಿ, ಪೋ: ಹುತ್ಕಂಡ, ತಾ: ಯಲ್ಲಾಪುರ ರವರು ದಿನಾಂಕ: 09-03-2021 ರಂದು 11-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 22/2021, ಕಲಂ: 78(3) ಕರ್ನಾಟಕ ಪೊಲಿಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಬಸವರಾಜ ತಂದೆ ಬಂಗಾರಪ್ಪ ಗೌಡರ, ಪ್ರಾಯ-69 ವರ್ಷ, ವೃತ್ತಿ-ಕೂಲಿ ಕೆಲಸ, ಸಾ: ಬಾಳೇಕೊಪ್ಪ, ಹೆಬ್ರೆ ಗ್ರಾಮ, ಪೋ: ರಾಗಿಹೊಸಳ್ಳಿ, ತಾ: ಶಿರಸಿ. ನಮೂದಿತ ಆರೋಪಿತನು ದಿನಾಂಕ: 09-03-2021 ರಂದು 11-10 ಗಂಟೆಗೆ ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೇಕೊಪ್ಪ ಬಸ್ ನಿಲ್ದಾಣದ ಎದುರುಗಡೆಯ ಸಾರ್ವಜನಿಕ ಸ್ಥಳದಲ್ಲಿ ರಸ್ತೆಯಲ್ಲಿ ಬರ-ಹೋಗುವ ಸಾರ್ವಜನಿಕರಿಗೆ ಕೂಗಿ ಕರೆದು ಓ.ಸಿ ಜುಗಾರಾಟದ ಅಂಕೆಗಳ ಮೇಲೆ ಹಣ ಪಂಥ ಕಟ್ಟಿದರೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ, ಬಂದ ಜನರಿಂದ ಹಣ ಪಡೆದುಕೊಂಡು ಓ.ಸಿ ಚೀಟಿ ಬರೆದುಕೊಡುವಾಗ ಪಿರ್ಯಾದಿಯವರು ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ಮಾಡಿದ ಕಾಲಕ್ಕೆ 1). ನಗದು ಹಣ 1,335/- ರೂಪಾಯಿ, 2). ಬಾಲ್ ಪೆನ್-1, 3). ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-1, 4). ಚೀಟಿ ಬರೆದುಕೊಡಲು ಕಟ್ ಮಾಡಿ ಇಟ್ಟುಕೊಂಡಿದ್ದ 5 ಸಣ್ಣ-ಸಣ್ಣ ಚೀಟಿಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನಂಜಾನಾಯ್ಕ್. ಎನ್, ಪಿ.ಎಸ್.ಐ (ಕಾ&ಸು), ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 09-03-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 24/2021, ಕಲಂ: THE KARNATAKA PREVENTION OF SLAUGHTER AND RESERVATION OF CATTLE ORDINANCE-2020 ಕಲಂ: 11(1)(D)PREVENTION OF CRUELTY TO ANIMALS ACT-1960 ಮತ್ತು ಕಲಂ: 192(A) ಐ.ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತರು 1]. ದಯಾನಂದ ತಂದೆ ರಮೇಶ ಮುಗಳಿಕಟ್ಟೆ, ಪ್ರಾಯ-23 ವರ್ಷ, ವೃತ್ತಿ-ಚಾಲಕ, ಸಾ|| ಹೆರೂರ, ತಾ: ಹಾನಗಲ್, ಜಿ: ಹಾವೇರಿ, 2]. ಹನುಮಂತ @ ರವಿ ತಂದೆ ಯಲ್ಲಪ್ಪ ಮುತ್ತಳ್ಳಿ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೆರೂರು, ತಾ: ಹಾನಗಲ್, ಜಿ: ಹಾವೇರಿ, 3]. ಬಸವರಾಜ ತಂದೆ ಚನ್ನಬಸಯ್ಯ ಹಿರೇಮಠ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೆರೂರು, ತಾ: ಹಾನಗಲ್, ಜಿ: ಹಾವೇರಿ. ಈ ನಮೂದಿತ ಆರೋಪಿತರು ಸೇರಿಕೊಂಡು ದಿನಾಂಕ: 09-03-2021 ರಂದು ಬೆಳಿಗ್ಗೆ 08-40 ಗಂಟೆಗೆ ಮಹೀಂದ್ರಾ ಮೆಕ್ಸಿಮೋ ಮಾದರಿಯ ಲಗೇಜ್ ವಾಹನ ನಂ: ಕೆ.ಎ-27/ಬಿ-0479 ನೇದರ ಹಿಂಬದಿಯ ಬಾಡಿಯಲ್ಲಿ ಜಾನುವಾರನ್ನು ಸಾಗಾಟ ಮಾಡುವ ಯಾವುದೇ ಪರವಾನಿಗೆ ಪತ್ರ, ಜಾನುವಾರು ಖರೀದಿ ಪತ್ರ ಹಾಗೂ ಪಶು ವೈದ್ಯಾಧಿಕಾರಿಗಳ ತಪಾಸಣೆ ಪತ್ರ ಇಲ್ಲದೇ ಅಕ್ರಮವಾಗಿ ಜೆರ್ಸಿ ಜಾತಿಯ 5 ಆಕಳ ಕರು (1). ನಸುಗೆಂಪು ಬಣ್ಣದ ಗಂಡು ಕರು-1, ಅ||ಕಿ|| 2,000/- ರೂಪಾಯಿ, 2). ಬೂದು ಬಣ್ಣದ ಗಂಡು ಕರು-1, ಅ||ಕಿ|| 2,000/- ರೂಪಾಯಿ, 3). ನಸುಗೆಂಪು ಬಣ್ಣದ ಗಂಡು ಕರು-1, ಅ||ಕಿ|| 1,500/- ರೂಪಾಯಿ, 4). ನಸುಗೆಂಪು ಬಣ್ಣದ ಗಂಡು ಕರು-1, ಅ||ಕಿ|| 1,500/- ರೂಪಾಯಿ, 5). ಬೂದು ಬಣ್ಣದ ಗಂಡು ಕರು-1, ಅ||ಕಿ|| 1,000/- ರೂಪಾಯಿ) ಗಳನ್ನು ಅವುಗಳಿಗೆ ಆಹಾರ ನೀರು ನೀಡದೇ, ಮಲಗಲು ಸಾಧ್ಯವಾಗದ ರೀತಿಯಲ್ಲಿ ಹಿಂಸಾತ್ಮಕವಾಗಿ ತುಂಬಿಕೊಂಡು ವಧೆ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವಾಗ ಶಿರಸಿ ನಗರದ ನಂಬರ್ 5 ಕನ್ನಡ ಶಾಲೆಯ ಹತ್ತಿರ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನಾಗಪ್ಪ, ಪಿ.ಎಸ್.ಐ, ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 09-03-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 35/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸೈಯ್ಯದ್ ತಂದೆ ಅಬ್ದುಲ್ ರೆಹಮಾನ್ ಮುಲ್ಲಾ, ಸಾ|| ನಾರಾಯಣಪುರ. ಬಂಕಾಪುರ, ತಾ: ಶಿಗ್ಗಾಂವ, ಜಿ: ಹಾವೇರಿ (ಕಾರ್ ನಂ: ಜಿ.ಎ-08/ಎನ್-5335 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 27-02-2021 ರಂದು ಬೆಳಿಗ್ಗೆ 10-00 ಗಂಟೆಗೆ ತನ್ನ ಕಾರ್ ನಂ: ಜಿ.ಎ-08/ಎನ್-5335 ನೇದನ್ನು ಯಲ್ಲಾಪುರ ಕಡೆಯಿಂದ ಮುಂಡಗೋಡ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಶಿಡ್ಲಗುಂಡಿಯ ಜಾನು ಜೋರೆ ರವರ ಹೊಲದ ಹತ್ತಿರದ ಡಾಂಬರ್ ರಸ್ತೆಯ ಮೇಲೆ ತನ್ನ ಎದುರಿನಿಂದ ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ವಿ-3049 ನೇದಕ್ಕೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರನ ಬಲಗಾಲಿಗೆ ಭಾರೀ ಗಾಯ ಹಾಗೂ ಬಲಗೈಗೆ ಸಾದಾ ಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಸತೀಶ ತಂದೆ ಠಿಕ್ಕಾ ಮಿರಾಶಿ, ಪ್ರಾಯ-29 ವರ್ಷ, ವೃತ್ತಿ-ಟೇಲರಿಂಗ್ ಕೆಲಸ, ಸಾ|| ಶಿವಾಜಿ ನಗರ, ಮೈನಳ್ಳಿ, ತಾ: ಮುಂಡಗೋಡ ರವರು ದಿನಾಂಕ: 09-03-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 27/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಣ್ಣಪ್ಪ ನಾಯ್ಕ, ಸಾ|| ಕಾಯಗುಡ್ಡೆ, ತಾ: ಶಿರಸಿ (ಮೋಟಾರ್ ಸೈಕಲ್ ನಂ: ಕೆ.ಎ-31/ಕ್ಯೂ-5600 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 09-03-2021 ರಂದು ಬೆಳಿಗ್ಗೆ 10-30 ಗಂಟೆಗೆ ತನ್ನ ಬಾಬ್ತು ಮೋಟಾರ ಸೈಕಲ್ ನಂ: ಕೆ.ಎ-31/ಕ್ಯೂ-5600 ನೇದನ್ನು ಕೊರ್ಲಕಟ್ಟಾ ಕಡೆಯಿಂದ ಶಿರಸಿ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಮರಿಗುಡ್ಡೆ ಗ್ರಾಮದ ಗೋಣೂರು ಕ್ರಾಸ್ ಹತ್ತಿರ ಎದುರಿನಿಂದ ಬರುತ್ತಿದ್ದ ಪಿರ್ಯಾದುದಾರರ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಸಿ-1987 ನೇದಕ್ಕೆ ಎದುರಿನಿಂದ ಡಿಕ್ಕಿ ಹೊಡೆದು ರಸ್ತೆ ಅಪಘಾತ ಪಡಿಸಿ, ಪಿರ್ಯಾದಿಗೆ ಸಾದಾ ಸ್ವರೂಪದ ಹಾಗೂ ಹಿಂಬದಿ ಸವಾರ ಪರಶುರಾಮ ಅವಘಾನ್ ಇವರಿಗೆ ಬಲಗೈ ಹಾಗೂ ಬಲಗಾಲಿಗೆ ಗಂಭೀರ ಸ್ವರೂಪದ ಗಾಯ ಪಡಿಸಿದ್ದಲ್ಲದೇ, ತನಗೂ ಸಹ ಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಕಣ್ಣಪ್ಪ ಚಿನ್ನುಸ್ವಾಮಿ ಬಳೆಗಾರ, ಪ್ರಾಯ-40 ವರ್ಷ, ವೃತ್ತಿ-ಬಾರ್ ಬೆಂಡಿಂಗ್ ಕೆಲಸ, ಸಾ|| ರಾಮನಬೈಲ್, ತಾ: ಶಿರಸಿ ರವರು ದಿನಾಂಕ: 09-03-2021 ರಂದು 23-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 09-03-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 08/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಸೀತಾರಾಮ ತಂದೆ ಕನ್ಯಾ ಅಂಬಿಗ, ಪ್ರಾಯ-48 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ತನ್ಮಡಗಿ, ಪೋ: ಸೂರಕಟ್ಟೆ, ತಾ: ಹೊನ್ನಾವರ. ಪಿರ್ಯಾದಿಯ ತಂದೆಯಾದ ಈತನು ದಿನಾಂಕ: 09-03-2021 ರಂದು ಬೆಳಿಗ್ಗೆ 05-00 ಗಂಟೆಗೆ ತನ್ಮಡಗಿಯ ಗುಂಡಬಾಳ ಹೊಳೆಯಲ್ಲಿ ಮೀನು ಹಿಡಿದುಕೊಂಡು ಬರುತ್ತೇನೆ ಅಂತಾ ಮನೆಯಲ್ಲಿ ಹೇಳಿ ಹೋದವನು, ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ದಿನಾಂಕ: 09-03-2021 ರಂದು 15-00 ಗಂಟೆಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದರ ಹೊರತು ತನ್ನ ತಂದೆಯ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಶಿವಾ ತಂದೆ ಸೀತಾರಾಮ ಅಂಬಿಗ, ಪ್ರಾಯ-23 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ತನ್ಮಡಗಿ, ಪೋ: ಸೂರಕಟ್ಟೆ, ತಾ: ಹೊನ್ನಾವರ ರವರು ದಿನಾಂಕ: 09-03-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 08/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಜೂಜೆ ತಂದೆ ಪಾಸ್ಕಲೋ ಫರ್ನಾಂಡೀಸ್, ಪ್ರಾಯ-71 ವರ್ಷ, ಸಾ|| ಮಠದಗದ್ದೆ, ಗೌಡರಕೇರಿ, ಖೂರ್ಸೆ ಗ್ರಾಮ, ಪೋ: ಖೂರ್ಸೆ, ತಾ: ಶಿರಸಿ. ಪಿರ್ಯಾದಿಯ ತಂದೆಯಾದ ಇವರು ತನ್ನ ಹೆಂಡತಿ ಮೃತಪಟ್ಟಿದ್ದಲ್ಲದೇ, ತನಗೆ ಆದ ಹರಣಿ ಆಪರೇಷನ್ ಮತ್ತು ಪಾರ್ಶ್ವವಾಯು ಖಾಯಿಲೆ ಆಗಿದ್ದನ್ನು ಮನಸ್ಸಿಗೆ ತುಂಬಾ ಹೆಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ: 09-03-2021 ರಂದು ಬೆಳಿಗ್ಗೆ 05-00 ಗಂಟೆಯಿಂದ 08-30 ಗಂಟೆಯ ನಡುವಿನ ಅವಧಿಯಲ್ಲಿ ತಾನು ಇರುತ್ತಿದ್ದ ಕೋಣೆಯಲ್ಲಿ ತಮ್ಮ ಮನೆಯಲ್ಲಿಟ್ಟಿದ್ದ ಯಾವುದೋ ಕೀಟನಾಶಕ ವಿಷವನ್ನು ಸೇವಿಸಿ ಮಲಗಿದ್ದವನಿಗೆ ಚಿಕಿತ್ಸೆಗಾಗಿ ಶಿರಸಿಯ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲಿಸಿ, ಅಲ್ಲಿಂದ ಹೆಚ್ಚಿನ ಉಪಚಾರದ ಕುರಿತು ಶಿರಸಿಯ ಟಿ.ಎಸ್.ಎಸ್ ಆಸ್ಪತ್ರೆಗೆ ಒಯ್ದು ದಾಖಲಿಸಿ, ಚಿಕಿತ್ಸೆ ಪಡೆಯುತ್ತಿರುವಾಗ ಚಿಕಿತ್ಸೆ ಫಲಕಾರಿಯಾಗದೇ ಸಂಜೆ 07-30 ಗಂಟೆಗೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿರುತ್ತಾರೆ. ಇದನ್ನು ಹೊರತು ಪಡಿಸಿದರೆ ಮೃತನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಿಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸಂತೋಷ ತಂದೆ ಜೂಜೆ ಪರ್ನಾಂಡೀಸ್, ಪ್ರಾಯ-ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಠದಗದ್ದೆ, ಗೌಡರಕೇರಿ, ಖೂರ್ಸೆ ಗ್ರಾಮ, ಪೋ: ಖೂರ್ಸೆ, ತಾ: ಶಿರಸಿ ರವರು ದಿನಾಂಕ: 09-03-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 10-03-2021 01:10 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080