ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 09-05-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 104/2021, ಕಲಂ: 269, 336 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿಜಯೇಂದ್ರ ತಂದೆ ಗೋವಿಂದರಾಯ ಬಿಳಗಿ, ಸಾ|| ಮೂರೂರು ರಸ್ತೆ, ಹವ್ಯಕ ಸಬಾಭವನದ ಪಕ್ಕ, ತಾ: ಕುಮಟಾ. ಈತನು ಕೋವಿಡ್-19 ವೈರಸ್ ಪ್ರಸರಣವನ್ನು ತಡೆಟಗಟ್ಟುವ ನಿಟ್ಟಿನಲ್ಲಿ ಮಾನ್ಯ ಕರ್ನಾಟಕ ಸರ್ಕಾರವು ಮಾಡಿರುವ ಕೋವಿಡ್-19 ಕರ್ಫ್ಯೂ ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ಕೋವಿಡ್-19 ಕೊರೋನಾ ಸೋಂಕು ಸಾರ್ವಜನಿಕರಿಗೆ ಹರಡುವ ಬಗ್ಗೆ ತಿಳಿದಿದ್ದರೂ ಸಹ ದಿನಾಂಕ: 09-05-2021 ರಂದು 08-15 ಗಂಟೆಯ ಸುಮಾರಿಗೆ ಕುಮಟಾ ತಾಲೂಕಾ ದಿವಗಿ ಬ್ರಿಡ್ಜ್ ಪಕ್ಕದಲ್ಲಿರುವ ತನ್ನ ನಿರ್ವಹಣೆಯಲ್ಲಿ ಇರುವ ತನ್ನ ತಂದೆಯ ಹೆಸರಿನಲ್ಲಿ ಇರುವ ರೇತಿ ತೆಗೆಯುವ ಸೈಟಿನಲ್ಲಿ ಕೆಲಸ ಮಾಡುವ ಕಾರ್ಮಿಕರು ಮಾಸ್ಕ್ ಧರಿಸುವಂತೆ ಹಾಗೂ ಗುಂಪುಗೂಡದಂತೆ ನೋಡಿಕೊಳ್ಳಲು ಹಾಗೂ ತಾನು ಸಹ ಮಾಸ್ಕ್ ಧರಿಸದೇ ತೀವೃ ನಿರ್ಲಕ್ಷ್ಯತೆಯನ್ನು ಮಾಡಿ ಕೋವಿಡ್-19 ವೈರಾಣು ಹರಡುವಿಕೆಯಲ್ಲಿ ನಿರ್ಲಕ್ಷ್ಯತೆ ಹಾಗೂ ಸಾರ್ವಜನಿಕರ ದೇಹದ ಸುರಕ್ಷತೆಗೆ ಅಪಾಯವುಂಟು ಮಾಡುವಂತಹ ನಿರ್ಲಕ್ಷ್ಯದ ಕೃತ್ಯ ಮಾಡಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಆನಂದಮೂರ್ತಿ ಸಿ, ಪಿ.ಎಸ್.ಐ (ಕಾ&ಸು), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 09-05-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 75/2021, ಕಲಂ: 269, 270, 279, 336 ಐಪಿಸಿ ಮತ್ತು ಕಲಂ: 194(ಸಿ) ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತ ರಾಜು ತಂದೆ ವೆಂಕಟೇಶ ನಾಯ್ಕ, ಪ್ರಾಯ-36 ವರ್ಷ, ಸಾ|| ಮಂಕಿ, ಗುಳದಕೇರಿ, ತಾ: ಹೊನ್ನಾವರ (ಸ್ಕೂಟಿ ವಾಹನ ನಂ: ಕೆ.ಎ-47/ಯು-1219 ನೇದರ ಸವಾರ). ಈತನು ಕೋವಿಡ್-19 2 ನೇ ಅಲೆಯ ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ಹೊರಡಿಸಿದ ಲಾಕಡೌನ್ ಆದೇಶಗಳಿದ್ದರೂ ಸಹ ದಿನಾಂಕ: 09-05-2021 ರಂದು 20-00 ಗಂಟೆಗೆ ಮಂಕಿಯ ಕುಂಬಾರಕೇರಿಯಲ್ಲಿ ಮಂಕಿ ಕಡೆಯಿಂದ ಬೊಳೆಬಸ್ತಿ ಕಡೆಗೆ ಮಾನವೀಯ ಪ್ರಾಣಕ್ಕೆ ಹಾಗೂ ಇತರರ ದೈಹಿಕ ಸುರಕ್ಷತೆಗೆ ಅಪಾಯಕ್ಕೀಡು ಮಾಡುವಂತೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ತನ್ನ ಸ್ಕೂಟಿ ವಾಹನ ನಂ: ಕೆ.ಎ-47/ಯು-1219 ನೇದನ್ನು ಸವಾರಿ ಮಾಡಿಕೊಂಡು ತಲೆಗೆ ಹೆಲ್ಮೆಟ್ ಧರಿಸದೆ ಹಾಗೂ ಮುಖಕ್ಕೆ ಮಾಸ್ಕ್ ಧರಿಸದೆ ತನ್ನ ಸ್ಕೂಟಿ ವಾಹನದ ಮೇಲೆ ಸಾರ್ವಜನಿಕರಿಗೆ ಮಾರಣಾಂತಿಕ ಸಂಕ್ರಾಮಿಕ ರೋಗವನ್ನು ಹರಡುವ ಉದ್ದೇಶದಿಂದ ಅನಾವಶ್ಯಕವಾಗಿ ತಿರುಗಾಡುತ್ತಿದ್ದಾಗ ಸಿಕ್ಕಿದ್ದು ಮತ್ತು ತಿರುಗಾಡಲು ಸಮರ್ಪಕವಾದ ಉತ್ತರ ನೀಡದೆ ಇದ್ದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪರಮಾನಂದ ಬಿ. ಕೊಣ್ಣೂರ, ಪಿ.ಎಸ್.ಐ (ಕಾ&ಸು), ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 09-05-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 81/2021, ಕಲಂ: 269, 270, 332, 336, 353, 504 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರಶಾಂತ ತಂದೆ ನಾರಾಯಣ ಪಾಟಣಕರ, ಪ್ರಾಯ-48 ವರ್ಷ, ವೃತ್ತಿ-ವ್ಯಾಪಾರ, ಸಾ|| ಶಾರದಾ ಗಲ್ಲಿ, ಕೋರ್ಟ್ ರಸ್ತೆ ಕ್ರಾಸ್, ತಾ: ಯಲ್ಲಾಪುರ. ಈತನು ದಿನಾಂಕ: 09-05-2021 ರಂದು 01-00 ಗಂಟೆಗೆ ಯಲ್ಲಾಪುರ ಪಟ್ಟಣದ ಶಾರದಾಗಲ್ಲಿಯ ಕೋರ್ಟ್ ರಸ್ತೆಯ ಕ್ರಾಸ್ ಹತ್ತಿರ ಕೋವಿಡ್-19 ವೈರಸ್ ಹರಡದಂತೆ ತಡೆಟಗಟ್ಟುವ ನಿಟ್ಟಿನಲ್ಲಿ ಮಾನ್ಯ ಕರ್ನಾಟಕ ಸರ್ಕಾರವು ಮಾಡಿರುವ ಕೋವಿಡ್ ಕರ್ಫ್ಯೂ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್-19 ಕೊರೋನಾ ಸೋಂಕು ಸಾರ್ವಜನಿಕರಿಗೆ ಹರಡುವ ಬಗ್ಗೆ ತಿಳಿದಿದ್ದರೂ ಸಹ ದ್ವೇಷಪೂರ್ವಕವಾಗಿ ತನ್ನ ಚೈನೀಸ್ ಫಾಸ್ಟಪುಡ್ ಸೆಂಟರ್ ಅನ್ನು ತೆರೆದು ವ್ಯಾಪಾರ ಮಾಡಿಕೊಂಡು ಬಂದಿದ್ದವನು, ಸಮವಸ್ತ್ರದಲ್ಲಿದ್ದ ಪಿರ್ಯಾದಿಯವರು ಅಂಗಡಿಯನ್ನು ಬಂದ ಮಾಡಲು ತಿಳಿಸಿದರೂ ಸಹ ಪಿರ್ಯಾದಿಯವರ ಹಾಗೂ ಅವರ ಸಂಗಡ ಬಂದ ಸಿಬ್ಬಂದಿಯವರ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಅವಾಚ್ಯ ಶಬ್ದಗಳಿಂದ ಬೈದು, ಸಿಬ್ಬಂದಿಯಾದ ಸಿ.ಪಿ.ಸಿ-959, ಬಸವರಾಜ ಡಿ. ಕೆ. ಇವರ ಕುತ್ತಿಗೆಗೆ ಕೈ ಹಾಕಿ, ಕಾಲರ್ ಹಿಡಿದು ಎಳೆದಾಡಿ ಕೈಯಿಂದ ಹೊಡೆದು ದುಖಾತಪತ್ ಪಡಿಸಿದ್ದಲ್ಲದೇ, ಇಬ್ಬರಿಗೂ ನೆಲಕ್ಕೆ ದೂಡಿ ಹಾಕಿರುತ್ತಾನೆ ಹಾಗೂ ಮನುಷ್ಯನ ಪ್ರಾಣ ಅಥವಾ ಇತರೆ ದೈಹಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಕೃತ್ಯವನ್ನು ನಿರ್ಲಕ್ಷ್ಯದಿಂದ ಮಾಡಿರುವ ಬಗ್ಗೆ ಪಿರ್ಯಾದಿ ಶ್ರೀ ಉದಯ ಆನಂದ ನಾಯ್ಕ, ಪೊಲೀಸ್ ಹೆಡ್ ಕಾನ್ಸಟೇಬಲ್ (ಸಿ.ಎಚ್.ಸಿ-1461), ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 09-05-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 82/2021, ಕಲಂ: 381, 420 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ದಿವಾಕರ ತಂದೆ ಕೆ. ರಘುರಾಮ ಶೆಟ್ಟಿ, ಪ್ರಾಯ-40 ವರ್ಷ, ಸಾ|| ಸುಚಿತ್ರ ನಿಲಯ, ಯಲಹಕ್ಲು ವಡ್ಡರ್ಸೆ, ಪೋ: ಬಾನಾಡಿ, ತಾ: ಕುಂದಾಪುರ, ಜಿ: ಉಡುಪಿ. ಈತನು ದಿನಾಂಕ: 25-04-2021 ರಂದು ಮಧ್ಯರಾತ್ರಿ 00-15 ಗಂಟೆಗೆ ಪಿರ್ಯಾದಿಯವರ ಮಾಲೀಕತ್ವದಲ್ಲಿದ್ದ ಹೊಟೇಲ್ ‘ಅಚ್ಚಾ ಕಂಫರ್ಟ್ಸ್’ ಲಾಡ್ಜಿಂಗ್ ವಿಭಾಗದ ಕ್ಯಾಷ್ ಡ್ರಾವರ್ ನಲ್ಲಿ ಇಟ್ಟಿದ್ದ ಪಿರ್ಯಾದಿಯವರ ಬಾಬ್ತು 80,000/- ರೂಪಾಯಿ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹಾಗೂ ತಿಂಗಳ ಖರ್ಚು ಮತ್ತು ಉಳಿತಾಯದ ಹಣದ ಲೆಕ್ಕವನ್ನು ನೀಡದೇ ಮೋಸ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ಬಿ. ಸತ್ಯನ್ ತಂದೆ ಬಾಬು, ಪ್ರಾಯ-44 ವರ್ಷ, ವೃತ್ತಿ-ಅಚ್ಚಾ ಕಂಫರ್ಟ್ಸ್ ಹೊಟೇಲ್ ಮಾಲಕರು ಹಾಗೂ ಗುತ್ತಿಗೆದಾರರು, ಸಾ|| ಕೆ.ಬಿ ರಸ್ತೆ, ತಾ: ಯಲ್ಲಾಪುರ ರವರು ದಿನಾಂಕ: 09-05-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 29/2021, ಕಲಂ: 353, 332, 269, 270, 506, 109 ಸಹಿತ 34 ಐಪಿಸಿ ಹಾಗೂ ಕಲಂ: 51(b) THE DISASTER MANAGEMENT ACT-2005 ಮತ್ತು ಕಲಂ: 5(1) THE KARNATAKA EPIDEMIC DISEASES ACT-2020 ನೇದ್ದರ ವಿವರ...... ನಮೂದಿತ ಆರೋಪಿತರು 1]. ಲಕ್ಕು @ ಲಕ್ಷ್ಮಣ ಮಲಗೊಂಡೆ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಾರ್ನೋಡಾ, ದಾಂಡೇಲಿ, 2]. ತುಕಾರಾಮ ತಂದೆ ದೊಂಡು ಮಲಗೊಂಡೆ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಾರ್ನೋಡಾ, ದಾಂಡೇಲಿ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ತನ್ನ ಹೆಂಡತಿಯೊಂದಿಗೆ ಜಗಳವಾಡುತ್ತಿರುವ ಬಗ್ಗೆ 112 ವಾಹನಕ್ಕೆ ಬೆಂಗಳೂರು ಕಂಟ್ರೋಲ್ ರೂಮ್ ನಿಂದ ಕರೆ ಬಂದ ಮೇರೆಗೆ 112 ಜೀಪ್ ವಾಹನ ನಂ: ಕೆ.ಎ-30/ಜಿ-0616 ನೇದರಲ್ಲಿ ಕರ್ತವ್ಯದಲ್ಲಿದ್ದ ಪಿರ್ಯಾದಿಯವರು 112 ವಾಹನದಲ್ಲಿದ್ದ ಸಿಬ್ಬಂದಿಗಳನ್ನು ಕರೆದುಕೊಂಡು ದಿನಾಂಕ: 09-05-2021 ರಂದು 13-00 ಗಂಟೆಗೆ ಆರೋಪಿ 1 ನೇಯವನ ಮನೆಯ ಹತ್ತಿರ ಹೋಗಿ ಹೆಂಡತಿಯೊಂದಿಗೆ ಜಗಳವಾಡುತ್ತಿದ್ದ ಆರೋಪಿ 1 ನೇಯವನಿಗೆ ಕರೆದು ಬುದ್ಧಿವಾದ ಹೇಳುತ್ತಿರುವಾಗ ಆರೋಪಿ 1 ನೇಯವನು ‘ನೀವು ಯಾರು ಕೇಳುವವರು? ನೀವು ನಮ್ಮ ಮನೆಯ ಹತ್ತಿರ ಯಾಕೇ ಬಂದಿರುತ್ತೀರಿ?’ ಅಂತ ಹೇಳಿ, ಆರೋಪಿ 2 ನೇಯವನು ‘ಹೌದು ಪೊಲೀಸರು ನಿನ್ನ ಮನೆಯ ಹತ್ತಿರ ಹೇಗೆ ಬಂದರು? ಅವರಿಗೆ ಇಲ್ಲಿಂದ ಕಳಿಸು’ ಅಂತ ಆರೋಪಿ 1 ನೇಯವನಿಗೆ ಪ್ರಚೋದಿಸಿ, ಕರ್ನಾಟಕ ರಾಜ್ಯ ಸರ್ಕಾರವು ದಿನಾಂಕ: 27-04-2021 ರಂದು ರಾತ್ರಿ 09-00 ಗಂಟೆಗೆ ರಾಜ್ಯಾದ್ಯಂತ ಲಾಕಡೌನ್ ಆದೇಶ ಹೊರಡಿಸಿದ್ದ ಬಗ್ಗೆ ಗೊತ್ತಿದ್ದರೂ ಸಹ ಲಾಕಡೌನ್ ಆದೇಶ ಉಲ್ಲಂಘಿಸಿ, ಮಹಾಮಾರಿ ಕೊರೋನಾ ಸಾಂಕ್ರಾಮಿಕ ರೋಗವು ಹರಡುವ ಸಾಧ್ಯತೆ ಇದ್ದರೂ ಸಹ ಊರ ಗ್ರಾಮಸ್ಥರು ಸದ್ರಿ ಗಲಾಟೆಯನ್ನು ನೋಡಲು ಸಾಮೂಹಿಕವಾಗಿ ಸೇರುವಂತೆ ಮಾಡಿ, ಆರೋಪಿ 1 ನೇಯವನು ಏಕಾಏಕಿಯಾಗಿ ಪಿರ್ಯಾದಿಯ ಮೈಮೇಲೆ ಬಂದು ದೂಡಿ ಹಾಕಿ, ಬಿಡಿಸಲು ಬಂದ ಸಿಬ್ಬಂದಿ ಸಿ.ಪಿ.ಸಿ-1041, ವೀರೇಶ ನಾಯ್ಕ ಇವರ ಮೈಮೇಲೆ ಏರಿ ಹೋಗಿ, ಭುಜದ ಮೇಲೆ ಹಾಗೂ ಮೈಮೇಲೆ ಕೈಯಿಂದ ಹೊಡೆದಿದ್ದಲ್ಲದೇ, ಸಮವಸ್ತ್ರವನ್ನು ಕೈಯಿಂದ ಜಗ್ಗಿ ಹರಿದು, ಜೀವದ ಬೆದರಿಕೆ ಹಾಕಿ ಓಡಿ ಹೋಗಿದ್ದು, ಆರೋಪಿ 1 ಮತ್ತು 2 ನೇಯವನು ಸಮವಸ್ತ್ರದಲ್ಲಿದ್ದ ಪಿರ್ಯಾದಿ ಹಾಗೂ ಸಿಬ್ಬಂದಿಯ ಮೈಮೇಲೆ ಏರಿ ಹೋಗಿ, ದೂಡಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಕೊರೋನಾ ಸಾಂಕ್ರಾಮಿಕ ರೋಗ ಹರಡಿರುವ ವಿಷಯ ಗೊತ್ತಿದ್ದರೂ ಸಹ ಮುಖಕ್ಕೆ ಯಾವುದೇ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಅಪರಾಧ ಎಸಗಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಬೆನೊ ನಾರಾಯಣ ಗುರವ, ಎ.ಎಸ್.ಐ, ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 09-05-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 09-05-2021

at 00:00 hrs to 24:00 hrs

 

ಮುಂಡಗೋಡ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 15/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಕೃಷ್ಣ ತಂದೆ ಮಚೀಂದ್ರ ಪರಾಮಣ, ಪ್ರಾಯ-22 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನಂದಿಕಟ್ಟಾ, ತಾ: ಮುಂಡಗೋಡ. ಸುದ್ದಿದಾರನ ಚಿಕ್ಕಮ್ಮನ ಮಗನಾದ ಈತನು ಸರಾಯಿ ಕುಡಿದ ನಶೆಯಲ್ಗಿ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 03-05-2021 ರಂದು ರಾತ್ರಿ 09-00 ಗಂಟೆಯ ಸುಮಾರಿಗೆ ಯಾವುದೋ ಕ್ರಿಮಿನಾಶಕ ವಿಷ ಸೇವಿಸಿದವನಿಗೆ ಹೆಚ್ಚಿನ ಉಪಚಾರಕ್ಕೆ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ದಾಖಲಿಸಿದ್ದು, ಉಪಚಾರ ಫಲಕಾರಿಯಾಗದೇ ದಿನಾಂಕ: 09-05-2021 ರಂದು ಬೆಳಿಗ್ಗೆ 09-45 ಗಂಟೆಗೆ ಮೃತಪಟ್ಟಿರುತ್ತಾನೆ. ಇದರ ಹೊರತು ಬೇರೇ ಯಾವುದೇ ಸಂಶಯ ವ ಕಾರಣ ಇರುವುದಿಲ್ಲ. ನಮ್ಮ ಚಿಕ್ಕಮ್ಮನ ಮಗನ ಮೃತದೇಹವು ಕಿಮ್ಸ್ ಆಸ್ಪತ್ರೆ, ಹುಬ್ಬಳ್ಳಿಯ ಶವಾಗಾರದಲ್ಲಿರುತ್ತದೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ನಾರಾಯಣ ಜಾನಕಾಯಿ, ಸಾ|| ನಂದಿಕಟ್ಟಾ, ತಾ: ಮುಂಡಗೋಡ ರವರು ದಿನಾಂಕ: 09-05-2021 ರಂದು 13-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 10-05-2021 06:51 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080