ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 09-11-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 49/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈ ನಮೂದಿತ ಆರೋಪಿತರು ದಿನಾಂಕ: 31-10-2021 ರಂದು 23-00 ಗಂಟೆಯಿಂದ ದಿನಾಂಕ: 01-11-2021 ರಂದು ಬೆಳಗಿನ ಜಾವ 07-00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯವರು ಜನತಾ ಕಾಲೋನಿಯ ಐಸ್ ಪ್ಯಾಕ್ಟರಿ ಚೆಂಡಿಯಾದಲ್ಲಿರುವ ತಮ್ಮ ವಾಸ್ತವ್ಯದ ಮನೆಯ ಮುಂದೆ ನಿಲ್ಲಿಸಿಟ್ಟಿದ್ದ ಅಂದಾಜು ಮೌಲ್ಯ 25,000/- ರೂಪಾಯಿ ಬೆಲೆಬಾಳುವ ಕಪ್ಪು ಬಣ್ಣದ ಬಜಾಜ್ ಪಲ್ಸರ್ 220 ಡಿ.ಟಿ.ಎಸ್.ಐ.ಎಫ್ ಮೋಟಾರ್ ಸೈಕಲ್ ನಂ: ಕೆ.ಎ-30/ಎಸ್-9111 (ಇಂಜಿನ್ ನಂ: DKZCFG53919, ಚೆಸ್ಸಿಸ್ ನಂ: MD2A13EZ6FCG16722) ನೇದನ್ನು ಕಳುವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಸಿದ್ದೇಶ ತಂದೆ ಪ್ರದೀಪ ನಾಯ್ಕ, ಪ್ರಾಯ-25 ವರ್ಷ, ವೃತ್ತಿ-ಮೆಕ್ಯಾನಿಕ್, ಸಾ|| ಜನತಾ ಕಾಲೋನಿ, ಐಸ್ ಪ್ಯಾಕ್ಟರಿ, ಚೆಂಡಿಯಾ, ಕಾರವಾರ ರವರು ದಿನಾಂಕ: 09-11-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 53/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶ್ಯಾಮ ತಂದೆ ಮಹಾದೇವ ಮಾಜಾಳಿಕರ, ಪ್ರಾಯ-42 ವರ್ಷ, ವೃತ್ತಿ-ಚಾಲಕ, ಸಾ|| ಹಿಪ್ಪಳಿ, ಮಾಜಾಳಿ, ಕಾರವಾರ (ಬೊಲೆರೋ ಪಿಕಪ್ ವಾಹನ ನಂ: ಕೆ.ಎ-30/ಎ-2906 ನೇದರ ಚಾಲಕ). ಈತನು ದಿನಾಂಕ: 09-11-2021 ರಂದು ಬೆಳಿಗ್ಗೆ 05-30 ಗಂಟೆಗೆ ತನ್ನ ಬೊಲೆರೋ ಪಿಕಪ್ ವಾಹನ ನಂ: ಕೆ.ಎ-30/ಎ-2906 ನೇದರ ಮೇಲೆ ಪಿರ್ಯಾದಿಯ ಜೊತೆ ಸೇರಿಕೊಂಡು ಮೀನು ತರಲು ಮಾಜಾಳಿಯ ಹಿಪ್ಪಳಿಯಿಂದ ಅಂಕೋಲಾಕ್ಕೆ ಹೋಗಲು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-17(66) ರ ಮೇಲಿಂದ ಹೋಗುತ್ತಿರುವಾಗ ಆರೋಪಿ ವಾಹನದ ಚಾಲಕನು ತನ್ನ ಬೊಲೆರೋ ಪಿಕಪ್ ವಾಹನವನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಗೋವಾದಿಂದ ಕಾರವಾರಕ್ಕೆ ಬರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-17(66) ರ ಮೇಲೆ ಗಾಂವಗೇರಿ ಕ್ರಾಸ್ ಬಳಿಗೆ ರಸ್ತೆಯಲ್ಲಿ ಬಂದ ದನಕ್ಕೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಬೊಲೆರೋ ವಾಹನ ನಂ: ಕೆ.ಎ-30/ಎ-2906 ನೇದನ್ನು ಎಡಬದಿಗೆ ಪಲ್ಟಿಯಾಗಿಸಿ ಹೆದ್ದಾರಿಯ ಮಧ್ಯದ ಡಿವೈಡರ್ ಮೇಲಿಂದ ಹೆದ್ದಾರಿಯ ಇನ್ನೊಂದು ಬದಿಗೆ ಬೀಳುವಂತೆ ಮಾಡಿ, ತನ್ನ  ಹಣೆಯ ಭಾಗಕ್ಕೆ ಮತ್ತು ಎಡಗಾಲಿಗೆ ಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಅಜಯ ತಂದೆ ಮೋಹನ ಚಂಡೇಕರ, ಪ್ರಾಯ-24 ವರ್ಷ, ವೃತ್ತಿ-ಕ್ಲೀನರ್, ಸಾ|| ಅಂಬಿಗವಾಡ, ಅಸ್ನೋಟಿ, ಕಾರವಾರ ರವರು ದಿನಾಂಕ: 09-11-2021 ರಂದು 19-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 79/2021, ಕಲಂ: 304(ಎ) ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಜಟ್ಟು ನಾರಾಯಣ ದೇಶಭಂಡಾರಿ, ಸಾ|| ಚೌಡಗೇರಿ, ಗೋಕರ್ಣ, ತಾ: ಕುಮಟಾ (ಮಾಲ್ಕಿ ಜಾಗದ ಮಾಲಿಕ), 2]. ಮನೋಜಕುಮಾರ ಚೌಧರಿ ಠಾಕೂರ, ಸಾ|| ಜಾರ್ಖಂಡ, ಹಾಲಿ ಸಾ|| ಹನೇಹಳ್ಳಿ, ಗೋಕರ್ಣ, ತಾ: ಕುಮಟಾ (ಹಿಟಾಚಿ ವಾಹನದ ಚಾಲಕ). ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ಗೋಕರ್ಣದ ಚೌಡಗೇರಿ ಗ್ರಾಮದ ತನ್ನ ಬಾಬ್ತು ಮಾಲ್ಕಿ ಜಾಗದಲ್ಲಿ ಹಿಟಾಚಿ ಮೂಲಕ ಗುಡ್ಡದ ಮಣ್ಣನ್ನು ಕೊರೆದು ತೆಗೆದು ಮಣ್ಣನ್ನು ಟಿಪ್ಪರ್ ಲಾರಿ ಮೂಲಕ ಗಂಗಾವಳಿಯಲ್ಲಿ ಬ್ರಿಡ್ಜ್ ಕಟ್ಟಲು ನದಿಗೆ ಮಣ್ಣನ್ನು ಹಾಕಲು ತೆಗೆದುಕೊಂಡು ಹೋಗಲಾಗುತ್ತಿದ್ದು, ಸದರ ಮಾಲ್ಕಿ ಜಾಗದ ಗುಡ್ಡದಿಂದ ಮಣ್ಣನ್ನು ತೆಗೆಯುವಾಗ ಅಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮಾಲ್ಕಿ ಜಾಗದ ಮಾಲಿಕ ಆರೋಪಿ 1 ನೇಯವನು ಯಾವುದೇ ಜೀವ ರಕ್ಷಕ ಸಾಧನೆಗಳನ್ನು ಹಾಗೂ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಕೈಗೊಳ್ಳದೇ ಮಣ್ಣನ್ನು ಕೊರೆಯಲು ನೀಡಿದ್ದು, ದಿನಾಂಕ: 09-11-2021 ರಂದು ಮಧ್ಯಾಹ್ನ 13-30 ಗಂಟೆಯ ಸುಮಾರಿಗೆ ಸದರ ಮಾಲ್ಕಿ ಜಾಗದಲ್ಲಿ ಹಿಟಾಚಿ ವಾಹನದ ಚಾಲಕನಾದ ಆರೋಪಿ 2 ನೇಯವನು ಹಿಟಾಚಿಯನ್ನು ಬಳಸಿ ಗುಡ್ಡದ ಮಣ್ಣನ್ನು ಕೊರೆಯುತ್ತಿದ್ದಾಗ ಮಣ್ಣು ಕೊರೆಯುವುದರಿಂದ ಗುಡ್ಡ ಕುಸಿಯುವ ಸಾಧ್ಯತೆ ಇರುವ ಬಗ್ಗೆ ತಿಳಿದು ಕೂಡಾ ನಿರ್ಲಕ್ಷ್ಯತನದಿಂದ ಮಣ್ಣನ್ನು ಕೊರೆದು ಗುಡ್ಡದ ಪಕ್ಕದಲ್ಲಿ ನಿಂತಿದ್ದ ಮೋಹನದಾಸ ತಂದೆ ಹಮ್ಮಣ್ಣ ನಾಯಕ, ಸಾ|| ಶೀಳ್ಯಾ, ಬಾಸ್ಗೋಡ, ತಾ: ಅಂಕೋಲಾ ಇವರ ಮೇಲೆ ಮಣ್ಣು ಕುಸಿದು ಬೀಳುವಂತೆ ಮಾಡಿ, ಸ್ಥಳದಲ್ಲಿಯೇ ಮರಣವನ್ನುಂಟು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ವಿಶ್ವನಾಥ ತಂದೆ ಬೊಮ್ಮಯ್ಯ ನಾಯಕ, ಪ್ರಾಯ-61 ವರ್ಷ, ವೃತ್ತಿ-ಚಾಲಕ, ಸಾ|| ಕೆರೆಕಟ್ಟೆ, ಲಕ್ಷ್ಮೀಶ್ವರ, ತಾ: ಅಂಕೋಲಾ ರವರು ದಿನಾಂಕ: 09-11-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 303/2021, ಕಲಂ: 143, 147, 323, 341, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ 10 ರಿಂದ 15 ಜನ ಅಪರಿಚಿತ ವ್ಯಕ್ತಿಗಳಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದುದಾರರು ಮಾಜಿ ಸೈನಿಕರಿದ್ದು, ದಿನಾಂಕ: 08-11-2021 ರಂದು 18-45 ಗಂಟೆಯ ಸುಮಾರಿಗೆ ಕಾಸರಕೋಡ ಗ್ರಾಮದ ಬಂದರ್ ನಲ್ಲಿ ಕೆಲಸ ಮಾಡಿಕೊಂಡಿರುವ ತನ್ನ ಸ್ನೇಹಿತನಾದ ವಿನಾಯಕ ತಂದೆ ಬೀರಪ್ಪ ನಾಯ್ಕ ಇವರನ್ನು ಬೇಟಿ ಮಾಡಲು ತಮ್ಮ ಮೋಟಾರ್ ಸೈಕಲ್ ಮೇಲೆ ಕಾಸರಕೋಡ ಟೊಂಕಾದಿಂದಾ ಬಂದರ್ ಕಡೆಗೆ ಮೋಟಾರ್ ಸೈಕಲ್ ಮೇಲೆ ಹೊಗುತ್ತಿರುವಾಗ ಕಾಸರಕೋಡ ಟೊಂಕಾದ ಮಲ್ಲುಕುರ್ವಾ ಶಾಲೆಯ ಹತ್ತಿರ ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದ ನಮೂದಿತ ಆರೋಪಿತರು ಪಿರ್ಯಾದಿಯನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ, ಪಿರ್ಯಾದಿಗೆ ‘ನೀನು ಎಲ್ಲಿ ಹೋಗುತ್ತಿದ್ದಿಯಾ?’ ಅಂತಾ ಕೇಳಿದಾಗ, ಪಿರ್ಯಾದಿಯು ‘ತಾನು ಬಂದರ್ ನಲ್ಲಿ ಕೆಲಸ ಮಾಡುತ್ತಿರುವ ತನ್ನ ಸ್ನೇಹಿತನಾದ ವಿನಾಯಕ ಬೀರಪ್ಪ ನಾಯ್ಕ ಅವರನ್ನು ಭೇಟಿ ಮಾಡಲು ಹೊರಟಿದ್ದೇನೆ' ಎನ್ನುವುದಾಗಿ ಹೇಳಿದ್ದು, ಆಗ ಅಲ್ಲಿ ಸೇರಿದ ಜನರು ಪಿರ್ಯಾದಿಗೆ ‘ನೀನು ಇಲ್ಲಿ ಕಳ್ಳತನ ಮಾಡಲು ಬಂದಿದ್ದಿಯಾ ಬೋಳಿ ಮಗನೇ, ಸೂಳೆ ಮಗನೇ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಎಲ್ಲರೂ ಸೇರಿ ಪಿರ್ಯಾದಿಗೆ ಕೈಯಿಂದ ಮುಖಕ್ಕೆ ಹಾಗೂ ಮೈಮೇಲೆ ಹೊಡೆದು ದೂಡಿ ಹಾಕಿ ಕಾಲಿನಿಂದ ತುಳಿದಿದ್ದು, ಆಗ ಪಿರ್ಯಾದಿಯು ‘ತಾನು ಆರ್ಮಿ ವ್ಯಕ್ತಿ ಆಗಿದ್ದೇನೆ’ ಎನ್ನುವುದಾಗಿ ಹೇಳಿದ್ದು, ಆರೋಪಿತರು ‘ಆರ್ಮಿ ಅಂತಾ ಹೇಳಿದರೆ ಮತ್ತೆ ಹೊಡೆಯುತ್ತೇವೆ’ ಎನ್ನುವುದಾಗಿ ಹೇಳಿ, ‘ಮುಂದೆ ಈ ಕಡೆಗೆ ಬಂದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ’ ಅಂತಾ ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ವಿನೋದ ತಂದೆ ವಿಶ್ವನಾಥ ಕಾಂಬಳೆ, ಪ್ರಾಯ-41 ವರ್ಷ, ವೃತ್ತಿ-ನಿವೃತ್ತ ಮಾಜಿ ಸೈನಿಕ, ಸಾ|| ಶೇಡಿಕುಳಿ, ತಾ: ಅಂಕೋಲಾ ರವರು ದಿನಾಂಕ: 09-11-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 195/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಶಂಭುಲಿಂಗಯ್ಯ ತಂದೆ ವೀರಭದ್ರಪ್ಪ ಸಕಲ್ಲಿಪುರ, ಪ್ರಾಯ-38 ವರ್ಷ, ವೃತ್ತಿ-ಚಾಲಕ, ಸಾ|| ಮನೆ ನಂ: 708, ಮಾದನಾಯಕನಹಳ್ಳಿ ಪೋ: ಮಾದವರ್, ಬೆಂಗಳೂರು ನಾರ್ಥ್, ಬೆಂಗಳೂರು (ಕ್ಯಾಂಟರ್ ವಾಹನ ನಂ: ಕೆ.ಎ-52/ಎ-9321 ನೇದರ ಚಾಲಕ), 2]. ಜೋಗೇಶ ಕುಮಾರ ತಂದೆ ಚೈನಸಿಂಗ್, ಪ್ರಾಯ-29 ವರ್ಷ, ವೃತ್ತಿ-ಚಾಲಕ, ಸಾ|| ಚಿನ್ನಾ, ಪೋ: ವಾಂಗಲ್, ತಾ: ಸಲೋನಿ, ಜಿ: ಚಂಭಾ, ಹಿಮಾಚಲ ಪ್ರದೇಶ ರಾಜ್ಯ (ಕಂಟೇನರ್ ವಾಹನ ನಂ: ಆರ್.ಜೆ-10/ಜಿ.ಬಿ-2429 ನೇದರ ಚಾಲಕ). ಈ ನಮೂದಿತ ಆರೋಪಿತರು ಯಲ್ಲಾಪುರ ತಾಲೂಕಿನ ಶಿರಲೆ ಫಾಲ್ಸ್ ಹತ್ತಿರ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ರಸ್ತೆಯ ತಿರುವಿನ ಮೇಲೆ ದಿನಾಂಕ: 09-11-2021 ರಂದು ಬೆಳಗಿನ ಜಾವ 02-30 ಗಂಟೆಯ ಸುಮಾರಿಗೆ ತಮ್ಮ ತಮ್ಮ ವಾಹನಗಳಾದ ಕ್ಯಾಂಟರ್ ವಾಹನ ನಂ: ಕೆ.ಎ-52/ಎ-9321 ನೇದನ್ನು ಹಾಗೂ ಕಂಟೇನರ್ ವಾಹನ ನಂ: ಆರ್.ಜೆ-10/ಜಿ.ಬಿ-2429 ನೇದನ್ನು ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ರಸ್ತೆಯ ಮಧ್ಯದಲ್ಲಿ ತಮ್ಮ ವಾಹನಗಳನ್ನು ಮುಖಾಮುಖಿ ಢಿಕ್ಕಿ ಪಡಿಸಿಕೊಂಡು ಎರಡು ವಾಹನಗಳನ್ನು ಜಖಂಗೊಳಿಸಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾಗಪ್ಪ ತಂದೆ ಪೂರಪ್ಪ ಲಮಾಣಿ, ಪ್ರಾಯ-35 ವರ್ಷ, ವೃತ್ತಿ-ಪೋಲಿಸ್ ಹೆಡ್ ಕಾನ್ಸಟೇಬಲ್, ಸಾ|| ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 09-11-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 149/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಪ್ರವೀಣ ತಂದೆ ರಾಮಚಂದ್ರ ಪಾಟೀಲ್, ಪ್ರಾಯ-34 ವರ್ಷ, ವೃತ್ತಿ-ಹೋಟೆಲ್ ಕೆಲಸ, ಸಾ|| ಶಿರಸಿ ರಸ್ತೆ, ತಾ: ಮುಂಡಗೋಡ, 2]. ರಾಜು ನಾಯ್ಕ, ಸಾ|| ಶಿರಸಿ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 09-11-2021 ರಂದು 17-00 ಗಂಟೆಗೆ ಮುಂಡಗೋಡ ಪಟ್ಟಣದ ಶಿರಸಿ ರಸ್ತೆಯ ಚೌಡಳ್ಳಿ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು ರಸ್ತೆಯ ಮೇಲೆ ಓಡಾಡುವ ಜನರನ್ನು ಕರೆದು 01/- ರೂಪಾಯಿಗೆ 80/- ರೂಪಾಯಿ ಕೊಡುವ ಕರಾರಿನ ಮೇಲೆ ಒಬ್ಬರಿಗೆ ಅನ್ಯಾಯದ ಲಾಭ ಇನ್ನೊಬ್ಬರಿಗೆ ಅನ್ಯಾಯದ ನಷ್ಟ ಆಗುವಂತೆ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಓ.ಸಿ ಜೂಗಾರಾಟ ನಡೆಸಿ, ನಗದು ಹಣ 4,650/- ರೂಪಾಯಿ ಹಾಗೂ ಓ.ಸಿ ಜೂಗಾರಾಟದ ಸಲಕರಣೆಗಳಾದ ಅಂಕೆ-ಸಂಖ್ಯೆ ಬರೆದ ಚೀಟಿ-01, ಬಾಲ್ ಪೆನ್-01. ಇವುಗಳೊಂದಿಗೆ ಪಿರ್ಯಾದಿಯವರು ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ಮಾಡಿದ ಕಾಲಕ್ಕೆ ಸಿಕ್ಕಿದ್ದಲ್ಲದೇ, ಓ.ಸಿ ಜೂಗಾರಾಟದಿಂದ ಸಂಗ್ರಹವಾದ ಹಣವನ್ನು ಆರೋಪಿ 2 ನೇಯವನಿಗೆ ಕೊಡುವುದಾಗಿ ತಿಳಿಸಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಿದ್ದಪ್ಪ ಎಸ್.ಸಿಮಾನಿ ಪೊಲೀಸ್ ನಿರೀಕ್ಷಕರು, ಮುಂಡಗೋಡ ಪೊಲೀಸ್ ಠಾಣೆ ರವರು ದಿನಾಂಕ: 09-11-2021 ರಂದು 18-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 174/2021, ಕಲಂ: ಮಹಿಳೆ ಮತ್ತು ಮಕ್ಕಳು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದವರು ಶ್ರೀಮತಿ ಅರುಣಾ ಕೋಂ. ಗಣೇಶ ಸಾವಂತ, ಪ್ರಾಯ-25 ವರ್ಷ, ವೃತ್ತಿ-ಮನೆ ಕೆಲಸ ಹಾಗೂ ತನ್ನ ಮಕ್ಕಳಾದ ನೂಪುರ್, ಪ್ರಾಯ-4 ವರ್ಷ, ಇವಾನ್, ಪ್ರಾಯ-2 ವರ್ಷ, ಸಾ|| (ಎಲ್ಲರೂ) ಪೋಂಡಾ, ಸಾವಂತವಾಡಿ, ಮಹಾರಾಷ್ಟ್ರ ರಾಜ್ಯ, ಹಾಲಿ ಸಾ|| ಕುರಿಗದ್ದಾ ಗ್ರಾಮ, ತಾ: ಹಳಿಯಾಳ. ಪಿರ್ಯಾದಿಯವರ ಮಗಳಾದ ಶ್ರೀಮತಿ ಅರುಣಾ ಕೋಂ. ಗಣೇಶ ಸಾವಂತ ಇವಳು ತನ್ನ ಮಕ್ಕಳಾದ ನೂಪುರ್ ಹಾಗೂ ಇವಾನ್ ಇವರನ್ನು ಕರೆದುಕೊಂಡು ದಿನಾಂಕ: 08-11-2021 ರಂದು ಮಧ್ಯಾಹ್ನ 01-30 ಗಂಟೆಯಿಂದ ಸಾಯಂಕಾಲ 06-00 ಗಂಟೆಯ ನಡುವಿನ ಅವಧಿಯಲ್ಲಿ ಆಸ್ಪತ್ರೆಗೆ ತೋರಿಸಿಕೊಳ್ಳುತ್ತೇನೆ ಅಂತಾ ಹಳಿಯಾಳ ತಾಲೂಕಿನ ಕುರಿಗದ್ದಾ ಗ್ರಾಮದ ತನ್ನ ತವರು ಮನೆಯಿಂದ ಹಳಿಯಾಳಕ್ಕೆ ಬಂದವಳು, ತನ್ನ ಗಂಡನ ಮನೆಗೂ ಹೋಗದೇ, ಸಂಬಂಧಿಕರ ಮನೆಗೂ ಹೋಗದೇ, ವಾಪಸ್ ಮನೆಗೂ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾರೆ. ಕಾರಣ ಕಾಣೆಯಾದ ತನ್ನ ಮಗಳು ಮತ್ತು ಮೊಮ್ಮಕ್ಕಳನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ಪುಷ್ಪಾ ಕೋಂ. ಮಹೇಶ ಗೌಡರ, ಪ್ರಾಯ-53 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಕುರಿಗದ್ದಾ ಗ್ರಾಮ, ತಾ: ಹಳಿಯಾಳ ರವರು ದಿನಾಂಕ: 09-11-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಅಂಬಿಕಾನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 10/2021, ಕಲಂ: 87 ರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ದಿಲೀಪ ತಂದೆ ಧರ್ಮಪ್ಪ ಲಮಾಣಿ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕುಳಗಿ ಸರ್ಕಲ್, ಕುಳಗಿ, ಅಂಬಿಕಾನಗರ, ತಾ: ದಾಂಡೇಲಿ, 2]. ಹಾಲೇಶ ತಂದೆ ವೇಣುಗೋಪಾಲ, ಪ್ರಾಯ-51 ವರ್ಷ, ವೃತ್ತಿ-ಕಾರ್ಪೆಂಟರ್ ಕೆಲಸ, ಸಾ|| ಕುಳಗಿ, ಅಂಬಿಕಾನಗರ, ತಾ: ದಾಂಡೇಲಿ, 3]. ಮೌಲಾಸಾಬ್ ತಂದೆ ಫಕ್ರುಸಾಬ್ ದೇಸೂರ, ಪ್ರಾಯ-40 ವರ್ಷ, ವೃತ್ತಿ-ಚಾಲಕ, ಸಾ|| ಕುಳಗಿ ಸರ್ಕಲ್, ಕುಳಗಿ, ಅಂಬಿಕಾನಗರ, ತಾ: ದಾಂಡೇಲಿ, 4]. ನಿಂಗಪ್ಪ ತಂದೆ ಪರಶುರಾಮ್ ಹುಂದಳೆಕರ, ಪ್ರಾಯ-49 ವರ್ಷ, ವೃತ್ತಿ-ಫಾರೆಸ್ಟ್ ವಾಚರ್, ಸಾ|| ಹಳೇ ದಾಂಡೇಲಿ, ತಾ: ದಾಂಡೇಲಿ, 5]. ಹಸನ್ ತಂದೆ ಹುಸೇನಸಾಬ್ ಶೇಖ್, ಪ್ರಾಯ-36 ವರ್ಷ, ವೃತ್ತಿ-ಚಾಲಕ, ಸಾ|| ಕುಳಗಿ, ಅಂಬಿಕಾನಗರ, ತಾ: ದಾಂಡೇಲಿ, 6]. ಮೆಹಬೂಬ್ ತಂದೆ ಹುಸೇನಸಾಬ್ ಶೇಖ್, ಪ್ರಾಯ-46 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕುಳಗಿ, ಅಂಬಿಕಾನಗರ, ತಾ: ದಾಂಡೇಲಿ. ಈ ನಮೂದಿತ ಆರೋಪಿತರುಗಳು ದಿನಾಂಕ: 09-11-2021 ರಂದು 10-00 ಗಂಟೆಯ ಸುಮಾರಿಗೆ ಅಂಬಿಕಾನಗರ ಕುಳಗಿ ಗೌಳಿವಾಡಾದ ಅರಣ್ಯ ಪ್ರದೇಶದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತಮ್ಮ ತಮ್ಮ ಲಾಭಕ್ಕಾಗಿ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವನ್ನಾಗಿ ಕಟ್ಟಿ ಅಂದರ್-ಬಾಹರ್ ಜೂಗಾರಾಟ ಆಡುತ್ತಿದ್ದಾಗ ಜೂಗಾರಾಟದ ಆಟದ ಸಲಕರಣೆಗಳು ಮತ್ತು ನಗದು ಹಣ 4,200/- ರೂಪಾಯಿಯೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಸಂಗೀತಾ, ಡಬ್ಲ್ಯೂ.ಪಿ.ಎಸ್.ಐ, ಅಂಬಿಕಾನಗರ ಪೊಲೀಸ್ ಠಾಣೆ ರವರು ದಿನಾಂಕ: 09-11-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 09-11-2021

at 00:00 hrs to 24:00 hrs

 

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 17/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ರಾಜೇಶ ತಂದೆ ಶಿವಪುತ್ರಪ್ಪ ಪೂಜಾರ, ಪ್ರಾಯ-32 ವರ್ಷ, ವೃತ್ತಿ-ಪಟೇಲ್ ಸಾ ಮಿಲ್ ದಲ್ಲಿ ಕೆಲಸ, ಸಾ|| ಪಾಳಾ, ಮುಂಡಗೋಡ, ಹಾಲಿ ಸಾ|| ಅಯ್ಯಪ್ಪ ನಗರ, ತಾ: ಶಿರಸಿ. ಪಿರ್ಯಾದಿಯ ತಮ್ಮನಾದ ಈತನು ವಿವಿಧ ಬ್ಯಾಂಕುಗಳಲ್ಲಿ ಕೃಷಿ ಕೆಲಸ ಮತ್ತು ಕಾರ್ ಖರೀದಿಸಲು ಮಾಡಿಕೊಂಡಿದ್ದ ಸಾಲ ತೀರಿಸಲು ಆಗದೇ ಇರುವ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಅಥವಾ ಬೇರೇ ಯಾವುದೋ ಕಾರಣದಿಂದ ದಿನಾಂಕ: 08-11-2021 ರಂದು ಸಂಜೆ 06-30 ಗಂಟೆಯ ಸುಮಾರಿಗೆ ಅವನು ವಾಸವಿದ್ದ ಶಿರಸಿಯ ಅಯ್ಯಪ್ಪ ನಗರದ ಬಾಡಿಗೆ ಮನೆಯಲ್ಲಿ ಮಲಾತಿಯನ್ ಕ್ರಿಮಿನಾಶಕ ಸೇವಿಸಿ, ತೀವೃ ಅಸ್ವಸ್ಥನಾದವನಿಗೆ ಚಿಕಿತ್ಸೆಯ ಕುರಿತು ಶಿರಸಿಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಯ ಕುರಿತು ಶಿರಸಿಯ ಟಿ.ಎಸ್.ಎಸ್ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 09-11-20211 ರಂದು ಬೆಳಿಗ್ಗೆ 07-30 ಗಂಟೆಗೆ ಮೃತಪಟ್ಟಿರುತ್ತಾನೆ. ಇದರ ಹೊರತು ಮೃತ ತನ್ನ ತಮ್ಮನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗಣೇಶ ತಂದೆ ಶಿವಪುತ್ರಪ್ಪ ಪೂಜಾರ, ಪ್ರಾಯ-34 ವರ್ಷ, ವೃತ್ತಿ-ಚಾಲಕ, ಸಾ|| ಪಾಳಾ, ತಾ: ಮುಂಡಗೋಡ ರವರು ದಿನಾಂಕ: 09-11-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ಇತ್ತೀಚಿನ ನವೀಕರಣ​ : 10-11-2021 12:48 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080