ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 09-10-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 82/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ವಾಸೀಮರಾಜ್ ದಾವಲಸಾಬ್, ಪ್ರಾಯ-42 ವರ್ಷ, ವೃತ್ತಿ-ತರಕಾರಿ ಅಂಗಡಿ, ಸಾ|| ಲಿಂಗನಾಯ್ಕನವಾಡಾ, ಮುಸ್ಲಿಂ ಗಲ್ಲಿ, ದೋಭಿಘಾಟ್ ರಸ್ತೆ, ಕಾರವಾರ, 2]. ಪ್ರಕಾಶ ಪಟಾಲ, ಸಾ|| ಶಿರವಾಡ, ಕಾರವಾರ, 3]. ಮುಸ್ತಾಕ್ @ ಚಾಲಿ, ಸಾ|| ಕಾರವಾರ. ಈ ನಮೂದಿತ ಆರೋಪಿತರು ದಿನಾಂಕ: 08-10-2021 ರಂದು 19-30 ಗಂಟೆಗೆ ಕ್ರಿಕೆಟ ಬೆಟ್ಟಿಂಗ್ ಎಂಬ ಆಟ ನಡೆಸಿ, ತಮ್ಮ ಲಾಭದ ಸಲುವಾಗಿ ಹೆಚ್ಚಿಗೆ ಹಣ ಕೊಡುವುದಾಗಿ ಆಸೆ/ಆಮಿಷ ನೀಡಿ, ಆಸ್ಫಾಕ್ ಎನ್ನುವವರಿಂದ 2,800/- ರೂಪಾಯಿ ಹಣವನ್ನು ಫೋನಪೇ ಮೂಲಕ ಪಡೆದುಕೊಳ್ಳುತ್ತಿದ್ದಾಗ ದಾಳಿಯ ವೇಳೆ ಮೊಬೈಲ್ ದಾಖಲೆ ಸಹಿತ ಆರೋಪಿ 1 ನೇಯವನು ಸೆರೆ ಸಿಕ್ಕಿದ್ದು ಹಾಗೂ ಆರೋಪಿ 2 ಮತ್ತು 3 ನೇಯವರು ಓಡಿ ಹೋಗಿ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂತೋಷಕುಮಾರ ಎಮ್, ಪಿ.ಎಸ್.ಐ (ಎಲ್&ಓ), ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 09-10-2021 ರಂದು 12-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 172/2021, ಕಲಂ: 324, 341, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಗಜಾನನ ಲುಮ್ಮಾ ಮರಾಠಿ, ಪ್ರಾಯ-26 ವರ್ಷ, ಸಾ|| ನಾಗೂರು, ತಾ: ಕುಮಟಾ, 2]. ವಿವೇಕ ಲುಮ್ಮಾ ಮರಾಠಿ, ಪ್ರಾಯ-24 ವರ್ಷ, ಸಾ|| ನಾಗೂರು, ತಾ: ಕುಮಟಾ. ಈ ನಮೂದಿತ ಆರೋಪಿತರ ಮತ್ತು ಪಿರ್ಯಾದಿಯ ನಡುವೆ ಅತಿಕ್ರಮಣ ತೋಟದ ಜಮೀನಿನ ಸರ್ವೇ ನಂ: 36 ನೇದರ ಜಮೀನಿನ ವಿಚಾರವಾಗಿ ಈ ಹಿಂದಿನಿಂದಲೂ ಪರಸ್ಪರ ವೈಮನಸ್ಸು ಮನಸ್ತಾಪ ಉಂಟಾಗುತ್ತಿದ್ದು, ಪಿರ್ಯಾದಿಯವರು ದಿನಾಂಕ: 24-09-2021 ರಂದು ತಮ್ಮ ಅತಿಕ್ರಮಣ ತೋಟದದಲ್ಲಿರುವ ಅಡಿಕೆ ಕೊನೆಯನ್ನು ಕೊಯ್ದುಕೊಂಡು ಹೋಗಿರುವ ವಿಚಾರದಲ್ಲಿ ದಿನಾಂಕ: 25-09-2021 ರಂದು ಬೆಳಿಗ್ಗೆ 08-00 ಗಂಟೆಯಲ್ಲಿ ಪಿರ್ಯಾದಿಯು ಶಂಕರ ಮರಾಠಿ ಕಾರಗದ್ದೆ ನಾಗೂರು ಇವರ ಮನೆಯ ಹತ್ತಿರ ಕೂಲಿ ಕೆಲಸಕ್ಕೆ ಹೋದಾಗ ಆರೋಪಿತರಿಬ್ಬರೂ ಸೇರಿಕೊಂಡು ಬಂದು ಪಿರ್ಯಾದಿಯನ್ನು ಉದ್ದೇಶಿಸಿ ‘ನಮ್ಮ ಜಾಗದ ಅಡಿಕೆ ಕೊನೆಯನ್ನು ಯಾಕೆ ಕೊಯ್ದಿದ್ದಿಯಾ, ಬೋಳಿ ಮಗನೆ, ಸೂಳೆ ಮಗನೆ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಆರೋಪಿ 1 ನೇಯವನು ಪಿರ್ಯಾದಿಗೆ ಕಟ್ಟಿಗೆಯ ಬಡಿಗೆಯಿಂದ ಕೈಗೆ, ತೊಡೆಗೆ ಹಾಗೂ ಕುತ್ತಿಗೆಯ ಭಾಗಕ್ಕೆ ಹೊಡೆದಿದ್ದು, ಪಿರ್ಯಾದಿಯು ತಪ್ಪಿಸಿಕೊಂಡು ಹೋಗುತ್ತಿರುವಾಗ ವಿವೇಕ ಆರೋಪಿ 2 ನೇಯವನು ಪಿರ್ಯಾದಿಯನ್ನು ಅಡ್ಡಗಟ್ಟಿ ತಡೆದು ’ಬೋಳಿ ಮಗನೆ, ನಮ್ಮ ಸುದ್ದಿಗೆ ಬಂದರೆ ನಿನನ್ನು ಸುಮ್ಮನೆ ಬಿಡುವುದಿಲ್ಲ. ಕೊಲೆ ಮಾಡಿ ಬಿಸಾಡುತ್ತೆವೆ’ ಅಂತಾ ಜೀವ ಬೆದರಿಕೆಯನ್ನು ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಜನಾರ್ಧನ ತಂದೆ ವೆಂಕಟೇಶ ಮರಾಠಿ, ಪ್ರಾಯ-43 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕೇದಗಿಪಾಲ, ನಾಗೂರು, ತಾ: ಕುಮಟಾ ರವರು ದಿನಾಂಕ: 09-10-2021 ರಂದು 13-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 173/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶಾಂತರಾಮ ತಂದೆ ಲಕ್ಷ್ಮಣ ದೇಶಭಂಡಾರಿ, ಸಾ|| ಚಂಡೇಶ್ವರ, ಹಳದೀಪುರ, ತಾ: ಹೊನ್ನಾವರ (ಟೆಂಪೋ ವಾಹನ ನಂ: ಕೆ.ಎ-12/ಬಿ-0315 ನೇದರ ಚಾಲಕ). ಈತನು ದಿನಾಂಕ: 09-10-2021 ರಂದು 08-30 ಗಂಟೆಯ ವೇಳೆಗೆ ತಾನು ಚಲಾಯಿಸುತ್ತಿದ್ದ ಟೆಂಪೋ ವಾಹನ ನಂ: ಕೆ.ಎ-12/ಬಿ-0315 ನೇದನ್ನು ರಾಜ್ಯ ಹೆದ್ದಾರಿ ಸಂಖ್ಯೆ-48 ರ ಮೇಲೆ ಚಂದಾವರ ಕಡೆಯಿಂದ ಕುಮಟಾ ಕಡೆಗೆ ಹೋಗಲು ಅತೀವೇಗವಾಗಿ ಚಲಾಯಿಸಿಕೊಂಡು ಹೊರಟು ಕುಮಟಾ ತಾಲೂಕಿನ ಕೂಜಳ್ಳಿ ಊರಿನ ಮಲ್ಲಾಪುರ ಕ್ರಾಸ್ ಹತ್ತಿರ ತಲುಪಿದಾಗ ಟೆಂಪೋ ವಾಹನವನ್ನು ನಿಷ್ಕಾಳಜಿಯಿಂದ ರಸ್ತೆಯ ಬಲಕ್ಕೆ ಚಲಾಯಿಸಿ, ಎದುರಿನಿಂದ ಅಂದರೆ ಕುಮಟಾ ಕಡೆಯಿಂಂದ ಚಂದಾವರ ಕಡೆಗೆ ಪಿರ್ಯಾದಿಯವರು ಸವಾರಿ ಮಾಡಿಕೊಂಡು ಹೊರಟ ಮೋಟಾರ್ ಸೈಕಲ್ ನಂ: ಕೆ.ಎ-47/ಆರ್-4641 ನೇದಕ್ಕೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯವರಿಗೆ ತಲೆಗೆ ಹಾಗೂ ಎಡಗೈ ಕಿರುಬೆರಳಿಗೆ ಸಾದಾ ಗಾಯನೋವು ಆಗಲು ಆರೋಪಿ ಟೆಂಪೋ ವಾಹನದ ಚಾಲಕನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ನಾರಾಯಣ ನಾಯ್ಕ, ಪ್ರಾಯ-52 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೊದ್ಕೆಶಿರೂರು, ಪೋಸ್ಟ್ ಆಫೀಸ್ ಹತ್ತಿರ, ತಾ: ಹೊನ್ನಾವರ ರವರು ದಿನಾಂಕ: 09-10-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 122/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹೇಶ ತಂದೆ ಈರಪ್ಪ ನಾಯ್ಕ, ಸಾ|| ಸೋಡಿಗದ್ದೆ, ಹಡೀನ್, ತಾ: ಭಟ್ಕಳ (ಆಟೋ ರಿಕ್ಷಾ ನಂ: ಕೆ.ಎ-47/9346 ನೇದರ ಚಾಲಕ). ಈತನು ದಿನಾಂಕ: 08-10-2021 ರಂದು 16-30 ಗಂಟೆಗೆ ಆಟೋ ರಿಕ್ಷಾ ನಂ: ಕೆ.ಎ-47/9346 ನೇದನ್ನು ಭಟ್ಕಳ ಕಡೆಯಿಂದ ಹೆರೂರ ಕಡೆಗೆ ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಶ್ರೀಧರ ಹೆಬ್ಬಾರ ಇವರ ಮನೆಯ ಕ್ರಾಸ್ ಹತ್ತಿರ ತನ್ನ ಎದುರಿನಿಂದ ಅಂದರೆ ಹದ್ಲೂರ ಕಡೆಯಿಂದ ಹೆರೂರ ಕಡೆಗೆ ಬರುತ್ತಿದ್ದ ಪಿರ್ಯಾದಿಯ ಅಣ್ಣನ ಮಗನಾದ ಶೇಖರ ತಂದೆ ತಿಮ್ಮಪ್ಪ ಗೊಂಡ ಈತನು ಈತನ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-7726 ನೇದಕ್ಕೆ ಎದುರಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದರ ಪರಿಣಾಮ ಮೋಟಾರ್ ಸೈಕಲ್ ಸವಾರನು ರಸ್ತೆಯ ಮೇಲೆ ಬಿದ್ದ ಪರಿಣಾಮ ಎದೆಯ ಮೇಲೆ ತೆರೆಚಿದ ಗಾಯ, ಬಲಗೆನ್ನೆಯ ಗದ್ದದ ಮೇಲೆ ಮತ್ತು ಬಲಗಾಲ ಮೊಣಕಾಲಿನ ಹತ್ತಿರ ಗಾಯವಾದ ಬಗ್ಗೆ ಪಿರ್ಯಾದಿ ಶ್ರೀ ರಾಮಾ ತಂದೆ ಬಡಿಯಾ ಗೊಂಡ, ಪ್ರಾಯ-40 ವರ್ಷ, ವೃತ್ತಿ-ಪೌರ ಕಾರ್ಮಿಕ, ಸಾ|| ಹದ್ಲೂರ, ಪೋ: ಕೋಣಾರ, ತಾ: ಭಟ್ಕಳ ರವರು ದಿನಾಂಕ: 09-10-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 127/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ವೆಂಕಟೇಶ ತಂದೆ ಸುಬ್ರಾಯ ನಾಯ್ಕ, ಪ್ರಾಯ-39 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹೊಸಗದ್ದೆ, ಹಸರಗೋಡ ಗ್ರಾಮ, ತಾ: ಸಿದ್ದಾಪುರ. ಈತನು ದಿನಾಂಕ: 09-10-2021 ರಂದು 11-45 ಗಂಟೆಗೆ ಸಿದ್ದಾಪುರ ತಾಲೂಕಿನ ಹಸರಗೋಡ ಗ್ರಾಮ ಪಂಚಾಯತ ಹತ್ತಿರದ ಹೊಸಗದ್ದೆ ಊರಿನಲ್ಲಿರುವ ತನ್ನ ಮನೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪಾಸ್ ಯಾ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಸಾರ್ವಜನಿಕರಿಗೆ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ, 1). Original Choice Deluxe Whisky 90 ML ಅಂತಾ ಬರೆದ ಮದ್ಯ ತುಂಬಿದ 04 ಟೆಟ್ರಾ ಪ್ಯಾಕೆಟ್ ಗಳು, 2). Original Choice Deluxe Whisky 90 ML ಅಂತಾ ಬರೆದ ಖಾಲಿ 2 ಮದ್ಯದ ಟೆಟ್ರಾ ಪ್ಯಾಕೆಟ್ ಗಳು ಮತ್ತು ಪ್ಲಾಸ್ಟಿಕ್‍ 2 ಗ್ಲಾಸುಗಳು ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾತಪ್ಪ ಜಿ. ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 09-10-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 09-10-2021

at 00:00 hrs to 24:00 hrs

 

ಸಿದ್ದಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 34/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಬಾಲಚಂದ್ರ ತಂದೆ ಮುದ್ದಪ್ಪ ಗೌಡರ್, ಪ್ರಾಯ-75 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕುಣಜಿ, ತಾ: ಸಿದ್ದಾಪುರ. ಪಿರ್ಯಾದುದಾರಳ ಗಂಡನಾದ ಈತನು ಕಳೆದ ಕೆಲವು ವರ್ಷಗಳಿಂದ ಎದೆನೋವು, ಕಫ್ ಗಟ್ಟಿಯಾಗುವಿಕೆ, ಉಸಿರಾಟದ ತೊಂದರೆ, ನಿದ್ರಾಹಿನತೆ ಹಾಗೂ ಇನ್ನೂ ಕೆಲವು ವೀಪರಿತವಾದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವನಿದ್ದು, ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಕೊರಗುತ್ತಾ ಜೀವನದಲ್ಲಿ ಜಿಗುಪ್ಸೆಗೊಂಡವನು, ದಿನಾಂಕ: 09-10-2021 ರಂದು ಬೆಳಿಗ್ಗೆ 04-30 ಗಂಟೆಯ ಸುಮಾರಿಗೆ ತನ್ನ ಮನೆಯಲ್ಲಿ ತೋಟಕ್ಕೆ ಹೊಡೆಯುವ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದವನಿಗೆ ಚಿಕಿತ್ಸೆಗೆಂದು ಸಿದ್ದಾಪುರದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾ ಮಧ್ಯಾಹ್ನ 15-30 ಗಂಟೆಗೆ ಮೃತಪಟ್ಟಿದ್ದು, ಇದರ ಹೊರತು ಮೃತನ ಸಾವಿನಲ್ಲಿ ಬೇರೇನೂ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಶಾಂತಾ ಕೋಂ. ಬಾಲಚಂದ್ರ ಗೌಡರ್, ಪ್ರಾಯ-70 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಕುಣಜಿ, ತಾ: ಸಿದ್ದಾಪುರ ರವರು ದಿನಾಂಕ: 09-10-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 12-10-2021 11:46 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080