ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 09-09-2021

at 00:00 hrs to 24:00 hrs

 

ಸಂಚಾರ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 16/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅರವಿಂದ ತಂದೆ ಮಾಬ್ಲೇಶ್ವರ ಗೋವೇಕರ, ಪ್ರಾಯ-52 ವರ್ಷ, ವೃತ್ತಿ-ರಿಕ್ಷಾ ಚಾಲಕ, ಸಾ|| ಭಗತವಾಡಾ, ಅಸ್ನೋಟಿ, ಕಾರವಾರ (ಪ್ಯಾಸೆಂಜರ್ ಆಟೋ ರಿಕ್ಷಾ ನಂ: ಕೆ.ಎ-30/7668 ನೇದರ ಚಾಲಕ). ಪಿರ್ಯಾದಿಯ ಭಾವನಾದ ಈತನು ದಿನಾಂಕ: 09-09-2021 ರಂದು ಮಧ್ಯಾಹ್ನ 02-50 ಗಂಟೆಗೆ ಬಾಬ್ತು ಪ್ಯಾಸೆಂಜರ್ ಆಟೋ ರಿಕ್ಷಾ ನಂ: ಕೆ.ಎ-30/7668 ನೇದರ ಹಿಂದಿನ ಸೀಟಿನಲ್ಲಿ ತನ್ನ ಹೆಂಡತಿ ಅಂದರೆ ಪಿರ್ಯಾದಿಯ ತಂಗಿಯಾದ ಶ್ರೀಮತಿ ಅಂಕಿತಾ ಕೋಂ. ಅರವಿಂದ ಗೋವೇಕರ, ಪ್ರಾಯ-39 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಭಗತವಾಡಾ, ಅಸ್ನೋಟಿ, ಕಾರವಾರ ಇವರನ್ನು ಕೂಡ್ರಿಸಿಕೊಂಡು ತನ್ನ ಪ್ಯಾಸೆಂಜರ್ ಆಟೋ ರಿಕ್ಷಾವನ್ನು ಟೋಲನಾಕಾ-ಕೋಡಿಭಾಗ ರಸ್ತೆಯಲ್ಲಿ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ಕಾರವಾರ ನಂದನಗದ್ದಾದ ಶಿವಾಜಿವಾಡಾದ ಶ್ರೀ ದುರ್ಗಾ ಡಿಸ್ಟ್ರಿಬ್ಯೂಟರ್, ಹ್ಯಾಂಗ್ಯೋ ಐಸ್-ಕ್ರೀಂ ಅಂಗಡಿಯ ಹತ್ತಿರ ತನ್ನ ಪ್ಯಾಸೆಂಜರ್ ಆಟೋ ರಿಕ್ಷಾದ ವೇಗವನ್ನು ನಿಯಂತ್ರಿಸಲಾಗದೇ ತನ್ನ ರಿಕ್ಷಾವನ್ನು ತನ್ನ ಬಲಬದಿಗೆ ಪಲ್ಟಿ ಕೆಡವಿ ಪ್ಯಾಸೆಂಜರ್ ಆಟೋ ರಿಕ್ಷಾದ ಹಿಂಬದಿ ಸೀಟಿನಲ್ಲಿ ಕುಳಿತ ಪಿರ್ಯಾದಿಯ ತಂಗಿಯಾದ ಶ್ರೀಮತಿ ಅಂಕಿತಾ ಕೋಂ. ಅರವಿಂದ ಗೋವೇಕರ ಇವರಿಗೆ ಎಡಗೈ ಭುಜದ ಹತ್ತಿರ ಮೂಳೆ ಮುರಿತವಾಗಿ ಭಾರೀ ಗಾಯ ಹಾಗೂ ಎದೆಯ ಭಾಗದಲ್ಲಿ ಒಳನೋವು ಉಂಟು ಪಡಿಸಿದ್ದಲ್ಲದೇ, ಆರೋಪಿ ಚಾಲಕನು ತನಗೂ ಸಹ ಎಡಗೈ ಮೊಣಕೈ ಹತ್ತಿರ ತೆರಚಿದ ಗಾಯ ಹಾಗೂ ಬೆನ್ನಿನ ಭಾಗದಲ್ಲಿ ಒಳನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಅರುಣ ತಂದೆ ಗೋಪಾಲ ನಾಗೇಕರ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಶ್ರೀ ರಾಮನಾಥ ದೇವಸ್ಥಾನ ಹತ್ತಿರ, ಅಸ್ನೋಟಿ, ಕಾರವಾರ ರವರು ದಿನಾಂಕ: 09-09-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಂಚಾರ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 17/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿವೇಕಾನಂದ ತಂದೆ ರಾಮಚಂದ್ರ ದೌಲತಾಬಾದ್, ಪ್ರಾಯ-34 ವರ್ಷ, ವೃತ್ತಿ-ಚಾಲಕ, ಸಾ|| ಕುಂದಗೋಳ, ತಾ: ಹುಮನಾಬಾದ್, ಜಿ: ಬೀದರ (ಲಾರಿ ನಂ: ಎಮ್.ಎಚ್-04/ಎಚ್.ಡಿ-9342 ನೇದರ ಚಾಲಕ). ದಿನಾಂಕ: 09-09-2021 ರಂದು ಸಾಯಂಕಾಲ 17-50 ಗಂಟೆಯಲ್ಲಿ ಪಿರ್ಯಾದಿಯ ಮೋಟಾರ್ ಸೈಕಲಿನ ಮುಂದಿನಿಂದ ಪಣಜಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ -66 ರಸ್ತೆಯ ಮುಖಾಂತರ ಕಾರವಾರ ಕಡೆಯಿಂದ ಅಂಕೋಲಾ ಕಡೆಗೆ ಮೋಟಾರ್ ಸೈಕಲ್ ನಂ: ಕೆ.ಎ-30/ಎಸ್-3595 ನೇದರ ಹಿಂದಿನ ಸೀಟಿನಲ್ಲಿ ತನ್ನ ಹೆಂಡತಿ ಶ್ರೀಮತಿ ವೃಂದಾ ಕೋಂ. ಕುಂದನ ಗುನಗಿ ಇವರನ್ನು ಕೂಡ್ರಿಸಿಕೊಂಡು ಹೋಗುತ್ತಿದ್ದ ಪಿರ್ಯಾದಿಯ ತಮ್ಮನಾದ ಕುಂದನ ಗುನಗಿ ಈತನ ಮೋಟಾರ್ ಸೈಕಲಿಗೆ ಮೋಟಾರ್ ಸೈಕಲಿನ ಹಿಂದಿನಿಂದ ಕಾರವಾರ ಕಡೆಯಿಂದ ಬಂದಂತಹ ಲಾರಿ ನಂ: ಎಮ್.ಎಚ್-04/ಎಚ್.ಡಿ-9342 ನೇದರ ಆರೋಪಿ ಚಾಲಕನು ತನ್ನ ಲಾರಿಯನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ತನ್ನ ಲಾರಿಯ ಮುಂದಿನಿಂದ ರಸ್ತೆಯ ತೀರಾ ಎಡಬದಿಯಲ್ಲಿ ಮೋಟಾರ್ ಸೈಕಲನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ಪಿರ್ಯಾದಿಯ ತಮ್ಮನ ಮೋಟಾರ್ ಸೈಕಲಿಗೆ ತನ್ನ ಲಾರಿಯ ಮುಂದಿನ ಎಡಬದಿಯಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯ ತಮ್ಮನಾದ ಕುಂದನ ಈತನಿಗೆ ಬಲಗೈ ಮುಷ್ಠಿಯ ಹತ್ತಿರ ಮೂಳೆ ಮುರಿತವಾಗಿ ಭಾರೀ ಗಾಯ ಹಾಗೂ ಬಲಗಾಲಿನ ಮಂಡಿಯ ಹತ್ತಿರ ಗಾಯ ಹಾಗೂ ಒಳನೋವು, ಎಡಗೈ ನಡುಬೆರಳಿಗೆ ತೆರಚಿದ ಗಾಯ ಪಡಿಸಿದ್ದಲ್ಲದೇ, ಪಿರ್ಯಾದಿಯ ತಮ್ಮನ ಮೋಟಾರ್ ಸೈಕಲಿನ ಹಿಂದಿನ ಸೀಟಿನಲ್ಲಿ ಕುಳಿತ ಆತನ ಹೆಂಡತಿ ವೃಂದಾ ಇವರಿಗೆ ಬಲಗೈ ಮೊಣಕೈ ಕೆಳಗೆ ತೆರಚಿದ ಗಾಯ ಹಾಗೂ ಒಳನೋವು, ಬಲಗೈ ಮುಷ್ಠಿಯ ಹತ್ತಿರ ತೆರಚಿದ ಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಮುರಳೀಧರ ತಂದೆ ಮನೋಹರ ಗುನಗಿ, ಪ್ರಾಯ-50 ವರ್ಷ, ವೃತ್ತಿ-ಕಾರವಾರದ ಜಿ.ಎಸ್.ಟಿ ಆಫೀಸಿನಲ್ಲಿ ದಿನಗೂಲಿ ನೌಕರ, ಸಾ|| ಮೇಲಿನಕೇರಿ, ಅರ್ಗಾ, ಕಾರವಾರ ರವರು ದಿನಾಂಕ: 09-09-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 77/2021, ಕಲಂ: 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 08-09-2021 ರಂದು ರಾತ್ರಿ 21-45 ಗಂಟೆಯಿಂದ ದಿನಾಂಕ: 09-09-2021 ರಂದು ಮಧ್ಯಾಹ್ನ 12-00 ಗಂಟೆಯ ನಡುವಿನ ಅವಧಿಯಲ್ಲಿ ಕಾರವಾರ ಸಂಕ್ರಿವಾಡಾದಲ್ಲಿರುವ ಪಿರ್ಯಾದಿಯವರು ವಾಸವಾಗಿರುವ ಮನೆಯ ಮುಖ್ಯ ದ್ವಾರಕ್ಕೆ ಹಾಕಿದ ಬೀಗವನ್ನು ಕಳಚಿ ಮನೆಯ ಒಳ ಪ್ರವೇಶಿಸಿ, ಮನೆಯ ದೇವರ ಕೋಣೆಯಲ್ಲಿದ್ದ ಕಪಾಟನ್ನು ತೆರೆದು ಕಪಾಟಿನ ಲಾಕರಿನಲ್ಲಿದ್ದ 2,23,873/- ರೂಪಾಯಿ ಬೆಲೆಯ ಒಟ್ಟು 207.29 ಗ್ರಾಂ ಬಂಗಾರದ ಆಭರಣ ಹಾಗೂ 3000/- ರೂಪಾಯಿ ಬೆಲೆಯ 50 ಗ್ರಾಂ ಬೆಳ್ಳಿಯ ಆಭರಣಗಳನ್ನು ಕಳುವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀಮತಿ ಪುಷ್ಪಾ ಕೋಂ. ಸುಬ್ರಮಣ್ಯ ಚಿನ್ನಸ್ವಾಮಿ, ಪ್ರಾಯ-62 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಸಂಕ್ರಿವಾಡಾ, ಕಾರವಾರ ರವರು ದಿನಾಂಕ: 09-09-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 133/2021, ಕಲಂ: 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 06-09-2021 ರಂದು ರಾತ್ರಿ 20-00 ಗಂಟೆಯಿಂದ ದಿನಾಂಕ: 07-09-2021 ರಂದು ಬೆಳಿಗ್ಗೆ 07-00 ಗಂಟೆಯ ನಡುವಿನ ಅವಧಿಯಲ್ಲಿ ಅಂಕೋಲಾ ತಾಲೂಕಿನ ನವಳಸೆ ಗ್ರಾಮದಲ್ಲಿರುವ ಪಿರ್ಯಾದಿಯವರು ಹೊಸದಾಗಿ ನಿರ್ಮಿಸುತ್ತಿರುವ ಬಾಗಿಲು ಇಲ್ಲದ ಮನೆಯ ಮೊದಲಿಗೆ ಇರುವ ಕೊಠಡಿಯಲ್ಲಿ ಇಟ್ಟಿರುವ ಸಿಪ್ಪೆ ಸಮೇತವಾಗಿ ಇರುವ 28 ಅಡಿಕೆ ಚೀಲಗಳಲ್ಲಿ ಸಿಪ್ಪೆ ಸಮೇತವಾಗಿ ಬಾಯಿ ಹೊಲೆದಿರುವ 7 ಪ್ಲಾಸ್ಟಿಕ್ ಚೀಲಗಳಲ್ಲಿರುವ ಮತ್ತು ಬಾಯಿ ಕಟ್ಟಿರುವ 4 ಚೀಲಗಳಲ್ಲಿರುವ ಒಟ್ಟು 11 ಚೀಲಗಳಲ್ಲಿರುವ ಸುಮಾರು 1 ಕ್ವಿಂಟಾಲ್ 80 ಕೆ.ಜಿ ತೂಕದ ಅ||ಕಿ|| 42,000/- ರೂಪಾಯಿ ಮೌಲದ ಸಿಪ್ಪೆ ಸಮೇತವಾಗಿ ಇರುವ ಅಡಿಕೆಯನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಮಾದೇವ ತಂದೆ ಹುಲಿಯಾ ಗೌಡ, ಪ್ರಾಯ-62 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ನೆವಳಸೆ, ಗುಂಡಬಾಳ, ತಾ: ಅಂಕೋಲಾ ರವರು ದಿನಾಂಕ: 09-09-2021 ರಂದು 15-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 239/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಶ್ರೀಮತಿ ಮಂಗಲಾ ಕೋಂ. ಪ್ರಶಾಂತ ಹಳ್ಳೇರ, ಪ್ರಾಯ-23 ವರ್ಷ, ವೃತ್ತಿ-ಗೃಹಿಣಿ, ಸಾ|| ತೂಗುಸೇತುವೆ ಹತ್ತಿರ, ಕುದ್ರಗಿ, ತಾ: ಹೊನ್ನಾವರ. ಪಿರ್ಯಾದಿಯ ಹೆಂಡತಿಯಾದ ಇವರು ದಿನಾಂಕ: 03-09-2021 ರಂದು ಬೆಳಿಗ್ಗೆ 10-00 ಗಂಟೆಗೆ ತನಗೆ ಜ್ವರ ಇದ್ದು, ಉಪ್ಪೋಣಿ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಬರುತ್ತೇನೆ ಅಂತಾ ಮನೆಯಲ್ಲಿ ಹೇಳಿ ಹೋದವಳು, ಈವರೆಗೂ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಪಿರ್ಯಾದಿಯು ಕಾಣೆಯಾದ ತನ್ನ ಹೆಂಡತಿಗಾಗಿ ತಾನೂ ಹಾಗೂ ತನ್ನ ಮನೆಯವರೆಲ್ಲರೂ ಸೇರಿ ತಮ್ಮ ಊರಿನಲ್ಲಿ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿ ದೂರದ ಸಂಬಂಧಿಕರಿಗೆ ಕರೆ ಮಾಡಿ ಮಾಹಿತಿ ಕೇಳಿದ್ದರಲ್ಲಿ ತನ್ನ ಹೆಂಡತಿ ಮಂಗಲಾ ಇವಳ ಇರುವಿಕೆ ಬಗ್ಗೆ ಯಾವುದೇ ಮಾಹಿತಿ ಸಿಗದೇ ಇದ್ದಾಗ ಎಲ್ಲಿಯೋ ಹೋಗಿದ್ದು ಬರಬಹುದು ಅಂತಾ ಈವರೆಗೆ ಕಾದು ಕಾಣೆಯಾದ ತನ್ನ ಹೆಂಡತಿ ಈವರೆಗೆ ವಾಪಸ್ ಮನೆಗೆ ಬರದೇ ಇದ್ದಾಗ ಕಾಣೆಯಾದ ತನ್ನ ಹೆಂಡತಿಯನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಪ್ರಶಾಂತ ತಂದೆ ಶಂಕರ ಹಳ್ಳೇರ, ಪ್ರಾಯ-23 ವರ್ಷ, ವೃತ್ತಿ-ಗಾರೆ ಕೆಲಸ, ಸಾ|| ತೂಗುಸೇತುವೆ ಹತ್ತಿರ, ಕುದ್ರಗಿ, ತಾ: ಹೊನ್ನಾವರ ರವರು ದಿನಾಂಕ: 09-09-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 122/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಾಧವರಾಯ ತಂದೆ ಗೋವರ್ಧನ ಪ್ರಭು, ಪ್ರಾಯ-60 ವರ್ಷ, ಸಾ|| ಕಲ್ಲಮ್ಮಣಕುರ, ಮಂಗಳೂರು (ಮಾರುತಿ ಸುಜುಕಿ ಕಾರ್ ನಂ: ಕೆ.ಎ-25/ಪಿ-7019 ನೇದರ ಚಾಲಕ). ಈತನು ದಿನಾಂಕ: 09-09-2021 ರಂದು ರಾತ್ರಿ 21-30 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯಲ್ಲಿ ಮಂಕಿ ದಾಟಿ ಭಟ್ಕಳ ಕಡೆಗೆ 1 ಕಿ.ಮೀ ಮುಂದೆ ಹೋಗಿ ರಸ್ತೆಯ ಹಂಪ್ಸ್ ಹತ್ತಿರ ತಾನು ಚಲಾಯಿಸುತ್ತಿದ್ದ ಮಾರುತಿ ಸುಜುಕಿ ಕಾರ್ ನಂ: ಕೆ.ಎ-25/ಪಿ-7019 ನೇದನ್ನು ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಮುಂದೆ ಹೋಗುತ್ತಿದ್ದ ಪಿರ್ಯಾದಿಯ ವಾಹನ ನಂ: ಕೆ.ಎ-20/ಎ.ಎ-4135 ನೇದರ ನಡುವೆ ಅಂತರವನ್ನು ಕಾಯ್ದುಕೊಳ್ಳದೇ, ಪಿರ್ಯಾದಿಯು ರಸ್ತೆಯ ಮೇಲಿನ ಹಂಪ್ಸ್ ಅನ್ನು ದಾಟಲು ತನ್ನ ವಾಹನವನ್ನು ನಿಧಾನ ಮಾಡಿದಾಗ ಆರೋಪಿತನು ತನ್ನ ಕಾರಿನ ವೇಗವನ್ನು ನಿಯಂತ್ರಿಸಲಾಗದೇ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ವಾಹನಗಳನ್ನು ಜಖಂ ಪಡಿಸಿ, ತನ್ನ ಕಾರಿನಲ್ಲಿದ್ದ ರಾಜಶ್ರೀ ಪ್ರಭು ಇವರಿಗೆ ಹಣೆಗೆ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಲಕ್ಷ್ಮಣ ತಂದೆ ಗೋವಿಂದ ಪೂಜಾರಿ, ಪ್ರಾಯ-55 ವರ್ಷ, ವೃತ್ತಿ-ಚಾಲಕ, ಸಾ|| ಬರೆಕಟ್ಟೆ ರೋಡ್, ತಾ: ಕುಂದಾಪುರ, ಜಿ: ಉಡುಪಿ ರವರು ದಿನಾಂಕ: 09-09-2021 ರಂದು 23-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಜೋಯಿಡಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 36/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 28-08-2021 ರಂದು ಬೆಳಿಗ್ಗೆ 09-30 ಗಂಟೆಯಿಂದ ದಿನಾಂಕ: 01-09-2021 ರಂದು ಬೆಳಿಗ್ಗೆ 07-30 ಗಂಟೆಯ ನಡುವಿನ ಅವಧಿಯಲ್ಲಿ ಕುಂಬಾರವಾಡ ವನ್ಯಜೀವಿ ವಲಯದ ಕಾರ್ಟೋಳಿ ಬೀಟಿನ ಕಸಂಬಾ ಮಜಿರೆಯ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳ ಚಲನವಲನೆಯನ್ನು ದಾಖಲಿಸಲು ಮತ್ತು ಕಳ್ಳಬೇಟೆ ತಡೆಗಾಗಿ ಅಳವಡಿಸಿದ 04 ಕ್ಯಾಮೆರಾಗಳ ಕಬ್ಬಿಣದ ಬಾಕ್ಸ್ ಅನ್ನು ಒಡೆದು, ಅದರಲ್ಲಿದ್ದ ಕ್ಯಾಮೆರಾಗಳನ್ನು ಕಳುವು ಮಾಡಿಕೊಂಡು ಹೋಗಿದ್ದು ಕಳುವಾದ ಕ್ಯಾಮೆರಾಗಳ ಒಟ್ಟು ಅ||ಕಿ|| 40,000/- ರೂಪಾಯಿ ಆಗಬಹುದು ಎಂಬ ಬಗ್ಗೆ ಪಿರ್ಯಾದಿ ಶ್ರೀ ಸಂತೋಷ ಸಿದ್ದಪ್ಪ ಕಕ್ಕಳಮೇಲಿ, ಪ್ರಾಯ-28 ವರ್ಷ, ವೃತ್ತಿ-ಅರಣ್ಯ ರಕ್ಷಕ (ಪ್ರಭಾರ ಕಾರ್ಟೋಳಿ ಗಸ್ತು), ಸಾ|| ಚಾಂದಕೋಟಿ, ತಾ: ಸಿಂಧಗಿ, ಜಿ: ವಿಜಯಪುರ, ಹಾಲಿ ಸಾ|| ಕುಂಬಾರವಾಡ ವನ್ಯಜೀವಿ ವಲಯ, ತಾ: ಜೋಯಿಡಾ ರವರು ದಿನಾಂಕ: 09-09-2021 ರಂದು 12-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 60/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಪ್ರಕಾಶ ತಂದೆ ಮೋಹನ ಮಡಿವಾಳ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಚೌಡೇಶ್ವರಿ ಕಾಲೋನಿ, ಗಣೇಶನಗರ, ತಾ: ಶಿರಸಿ. ಈತನು ದಿನಾಂಕ: 09-09-2021 ರಂದು 17-15 ಗಂಟೆಯ ಸುಮಾರಿಗೆ ಶಿರಸಿ ಶಹರದ ಗಣೇಶನಗರದ ಕನ್ನಡ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳಾದ ನಗದು ಹಣ ಒಟ್ಟೂ 1,180/- ರೂಪಾಯಿ, ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-01, ಬಾಲ್ ಪೆನ್-01. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಜಕುಮಾರ ಎಸ್. ಉಕ್ಕಲಿ, ಪಿ.ಎಸ್.ಐ (ಕಾ&ಸು), ಶಿರಸಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 09-09-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 612/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ವಿನಾಯಕ ತಂದೆ ಅಶೋಕ ದೇವಳಿ, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಖಾಜಿ ಗಲ್ಲಿ, ತಾ: ಶಿರಸಿ. ಈತನು ದಿನಾಂಕ: 09-09-2021 ರಂದು 19-00 ಗಂಟೆಯ ಸುಮಾರಿಗೆ ಶಿರಸಿ ಶಹರದ ಖಾಜಿ ಗಲ್ಲಿಯ ಪರಿವಾರ ಬಾರ್ ಎದುರು ಸಾರ್ವಜನಿಕ ಸ್ಥಳದಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ಓ.ಸಿ ಮಟಕಾ ಜುಗಾರಾಟದ ಸಲಕರಣೆಗಳಾದ ನಗದು ಹಣ ಒಟ್ಟೂ 860/- ರೂಪಾಯಿ, ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-01, ಬಾಲ್ ಪೆನ್-01. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಜಕುಮಾರ ಎಸ್. ಉಕ್ಕಲಿ, ಪಿ.ಎಸ್.ಐ (ಕಾ&ಸು), ಶಿರಸಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 09-09-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 56/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಕೇಶವ ತಂದೆ ಶಿವಾಜಿ ಮಿರಾಶಿ, ಪ್ರಾಯ-33 ವರ್ಷ, ವೃತ್ತಿ-ಗೌಂಡಿ ಕೆಲಸ, 2]. ಸಿಲೆಸ್ಟರ್ ತಂದೆ ಪಾಸ್ಕಲ್ ಕ್ರಾಸ್, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, 3]. ಮಲ್ಲೇಶ ನಾಯ್ಕ, 4]. ಮುದಕಪ್ಪಾ ನಾಯ್ಕ, 5]. ದಶರಥ ಗುಂಡೂಪಕರ, 6]. ರಾಜು ಗುಂಡೂಪಕರ, 7]. ರವಳು ಪಾವಲೆ, ಸಾ|| (ಎಲ್ಲರೂ) ಹಂದಲಿ, ತಾ: ಹಳಿಯಾಳ. ಈ ನಮೂದಿತ ಆರೋಪಿತರು ದಿನಾಂಕ: 09-09-2021 ರಂದು 08-30 ಗಂಟೆಗೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಹಂದಲಿ ಗ್ರಾಮದ ಸತ್ಯನಾರಾಯಣ ದೇವಸ್ಥಾನದಿಂದ ಅರಣ್ಯಕ್ಕೆ ಹೋಗುವ ಒಂದು ಮರದ ಕೆಳಗೆ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ತಮ್ಮ ತಮ್ಮ ಲಾಭದ ಸಲುವಾಗಿ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ ಅಂದರ್-ಬಾಹರ್ ಇಸ್ಪೀಟ್ ಜೂಗಾರಾಟ ಆಡುತ್ತಾ ನಗದು ಹಣ 3,320/- ರೂಪಾಯಿ ಹಾಗೂ ಜೂಗಾರಾಟದ ಸಲಕರಣೆಗಳೂಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಐ. ಆರ್. ಗಡ್ಡೇಕರ, ಪಿ.ಎಸ್.ಐ, ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 09-09-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 57/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮುಕುಂದ ತಂದೆ ಮಾರುತಿ ಪಾಟ್ನೇಕರ, ಸಾ|| ಹಳಿಯಾಳ (ಕಾರ್ ನಂ: ಕೆ.ಎ-30/ಎಮ್-4910 ನೇದರ ಚಾಲಕ). ಈತನು ದಿನಾಂಕ: 09-09-2021 ರಂದು ಮಧ್ಯಾಹ್ನ 12-15 ಗಂಟೆಯ ಸುಮಾರಿಗೆ ತಾನು ಚಾಲನೆ ಮಾಡುತ್ತಿದ್ದ ಕಾರ್ ನಂ: ಕೆ.ಎ-30/ಎಮ್-4910 ನೇದನ್ನು ದಾಂಡೇಲಿ ಕಡೆಯಿಂದ ಹಳಿಯಾಳ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯಕಾರಿಯಾಗುವಂತೆ ಚಾಲನೆ ಮಾಡಿಕೊಂಡು ಹೋಗುತ್ತಾ ಹಳಿಯಾಳ ಕಡೆಯಿಂದ ದಾಂಡೇಲಿ ಕಡೆಗೆ ಮೋಟಾರ್ ಸೈಕಲ್ ನಂ: ಜಿ.ಎ-06/ಜೆ-2239 ನೇದನ್ನು ಸವಾರಿ ಮಾಡಿಕೊಂಡು ಬರುತ್ತಿದ್ದ ಫಯಾಜ್ ತಂದೆ ಮನ್ಸೂರಖಾನ್ ಜೈಲರ್ ಈತನ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರನಿಗೆ ತಲೆಯ ಹಿಂಬದಿಗೆ, ಮೇಲ ತುಟಿಗೆ, ಎಡಗಾಲಿನ ಪಾದದ ಮೇಲೆ ಹಾಗೂ ಬಲಗೈ ಮುಂಗೈ ಹತ್ತಿರ ಸಾದಾ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಖಾಲಿದ್ ಹುಸೇನ್ ತಂದೆ ಅಬ್ದುಲ್ ರೆಹಮಾನ್ ತಂಬೋಲಿ, ಪ್ರಾಯ-36 ವರ್ಷ, ವೃತ್ತಿ-ಚಾಲಕ, ಸಾ|| ಬಿ.ಆರ್.ಡಿ ರಸ್ತೆ, ತಾ: ಹಳಿಯಾಳ ರವರು ದಿನಾಂಕ: 09-09-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 58/2021, ಕಲಂ: 324, 341, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಶೋಕ ತಂದೆ ಮಾರುತಿ ಕಸೀಲಕರ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹರೇಗಾಳಿ, ತಾ: ದಾಂಡೇಲಿ. ಈತನಿಗೂ ಹಾಗೂ ಪಿರ್ಯಾದಿಗೂ ಈ ಹಿಂದಿನಿಂದಲೂ ಜಮೀನಿನ ಸಂಬಂಧ ತಂಟೆ-ತಕರಾರು ಇದ್ದು, ದಿನಾಂಕ: 08-09-2021 ರಂದು ರಾತ್ರಿ 08-00 ಗಂಟೆಯ ಸಮಯಕ್ಕೆ ಪಿರ್ಯಾದಿಯು ಗಾಯಾಳು ಮಾದೇವ ಪಾಟೀಲ ಈತನೊಂದಿಗೆ ನೀರಿನ ಟ್ಯಾಂಕ್ ಪಕ್ಕ ಮಾತನಾಡುತ್ತಿರುವಾಗ ಆರೋಪಿತನು ಪಿರ್ಯಾದಿಯನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು, ಪಿರ್ಯಾದಿಗೆ ಅಡ್ಡಗಟ್ಟಿ ತನ್ನ ಕೈಯಲ್ಲಿದ್ದ ಕೊಡಲಿಯಿಂದ ಪಿರ್ಯಾದಿಗೆ ಹೊಡೆಯಲು ಹೋದಾಗ ಪಿರ್ಯಾದಿಯು ತಪ್ಪಿಸಿಕೊಂಡಿದ್ದರಿಂದ ಪಿರ್ಯಾದಿಯ ಪಕ್ಕ ನಿಂತ ಗಾಯಾಳು ಮಾದೇವ ಪಾಟೀಲ ಈತನ ಎಡಗೈಗೆ ಕೊಡಲಿ ತಾಗಿ ರಕ್ತ ಬಂದಿರುವುದಲ್ಲದೇ, ಆರೋಪಿತನು ತನ್ನ ಕೈಯಲ್ಲಿದ್ದ ಕೊಡಲಿಯನ್ನು ಬಿಸಾಡಿ ಇಬ್ಬರನೂ ಉದ್ದೇಶಿಸಿ ‘ಈ ದಿವಸ ಉಳಿದುಕೊಂಡಿದ್ದಿರಿ. ಇನ್ನೊಂದು ದಿನ ಸಿಕ್ಕರೆ ಜೀವ ಸಹಿತ ಬಿಡುವುದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿ ಹೋಗಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸಂತೋಷ ತಂದೆ ಬೂದಪ್ಪ ಕಸೀಲಕರ, ಪ್ರಾಯ-32 ವರ್ಷ, ವೃತ್ತಿ-ಚಾಲಕ, ಸಾ|| ಹರೇಗಾಳಿ, ತಾ: ದಾಂಡೇಲಿ ರವರು ದಿನಾಂಕ: 09-09-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 70/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಶಾಂತಾರಾಮ ತಂದೆ ಗಣಪತಿ ಮಿರಾಶಿ, ಪ್ರಾಯ-47 ವರ್ಷ, ವೃತ್ತಿ-ವ್ಯಾಪಾರ, ಸಾ|| ಹನುಮಾನ್ ಗಲ್ಲಿ, ರಾಮನಗರ, ತಾ: ಜೋಯಿಡಾ, 2]. ರಾಜಾರಾಮ ಡಿ. ಗಾಂವಕರ, ಸಾ|| ಪೊಲೀಸ್ ಠಾಣೆ ಹತ್ತಿರ, ಕಾಣಕೋಣ, ಗೋವಾ ರಾಜ್ಯ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದುರ್ಗಾದೇವಿ ಗಲ್ಲಿಗೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಮರದ ಕೆಳಗೆ ನಿಂತುಕೊಂಡು ತನ್ನ ಲಾಭಕ್ಕಾಗಿ ಓ.ಸಿ ಮಟಕಾ ಎಂಬ ಜೂಗಾರಾಟದ ಬಗ್ಗೆ ಜನರಿಗೆ ಆಸೆ ತೋರಿಸಿ ಅವರಿಂದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಎಂಬ ಜೂಗಾರಾಟ ಆಡಿಸುತ್ತಿರುವಾಗ ದಿನಾಂಕ: 09-09-2021 ರಂದು 11-45 ಗಂಟೆಗೆ ಪಿರ್ಯಾದಿಯವರು ದಾಳಿ ಮಾಡಿದ ಕಾಲಕ್ಕೆ ಆರೋಪಿ 1 ನೇಯವನ ತಾಬಾದಲ್ಲಿ ನಗದು ಹಣ 890/- ರೂಪಾಯಿ, ಓ.ಸಿ ಮಟಕಾ ಚೀಟಿ-1, ಬಾಲ್ ಪೆನ್-1 ಸಿಕ್ಕಿರುತ್ತದೆ. ಸದ್ರಿ ಆರೋಪಿ 1 ನೇಯವನು ತಾನು ಓ.ಸಿ ಮಟಕಾ ಎಂಬ ಜೂಗಾರಾಟವನ್ನು ನಡೆಸಿ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥ ಕಟ್ಟಿಸಿಕೊಂಡು ಓ.ಸಿ ಬುಕ್ಕಿಯಾದ ಆರೋಪಿ ನೇಯವನಿಗೆ ನೀಡುತ್ತಿದ್ದ ಕುರಿತು ತಿಳಿಸಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಲಕ್ಷ್ಮಣ ಎಲ್. ಪೂಜಾರ, ಪಿ.ಎಸ್.ಐ, ರಾಮನಗರ ಪೊಲೀಸ್ ಠಾಣೆ ರವರು ದಿನಾಂಕ: 09-09-2021 ರಂದು 12-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 71/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಪ್ರಭಾಕರ ತಂದೆ ವಾಗು ಮಿರಾಶಿ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹನುಮಾನ್ ಗಲ್ಲಿ, ರಾಮನಗರ, ತಾ: ಜೋಯಿಡಾ. ಈತನು ಹನುಮಾನ್ ಗಲ್ಲಿಯ ಸಾರ್ವಜನಿಕ ರಸ್ತೆಯಲ್ಲಿ ಮರದ ಕೆಳಗೆ ನಿಂತುಕೊಂಡು ತನ್ನ ಲಾಭಕ್ಕಾಗಿ ಓ.ಸಿ ಮಟಕಾ ಎಂಬ ಜೂಗಾರಾಟದ ಬಗ್ಗೆ ಜನರಿಗೆ ಆಸೆ ತೋರಿಸಿ ಅವರಿಂದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಎಂಬ ಜೂಗಾರಾಟ ಆಡಿಸುತ್ತಿರುವಾಗ ದಿನಾಂಕ: 09-09-2021 ರಂದು 11-25 ಗಂಟೆಗೆ ಪಿರ್ಯಾದಿಯವರು ದಾಳಿ ಮಾಡಿದ ಕಾಲಕ್ಕೆ ಆರೋಪಿತನ ತಾಬಾದಲ್ಲಿ ಹಣ ನಗದು ಹಣ 1,040/- ರೂಪಾಯಿ, ಓ.ಸಿ ಮಟಕಾ ಚೀಟಿ-1, ಬಾಲ್ ಪೆನ್-1 ಇವುಗಳು ಸಿಕ್ಕಿರುತ್ತದೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಚಂದ್ರಕಾಂತ ಎಸ್. ಗುನಗಿ, ಎ.ಎಸ್.ಐ, ರಾಮನಗರ ಪೊಲೀಸ್ ಠಾಣೆ ರವರು ದಿನಾಂಕ: 09-09-2021 ರಂದು 12-40 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 72/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ವೈಜನಾಥ ತಂದೆ ವಿಠೋಬಾ ಬೆಣಕಿ, ಪ್ರಾಯ-54 ವರ್ಷ, ವೃತ್ತಿ-ವ್ಯಾಪಾರ, ಸಾ|| ಜನತಾ ಪ್ಲಾಟ್, ಜಗಲಬೇಟ, ತಾ: ಜೋಯಿಡಾ. ಈತನು ಜಗಲಬೇಟ ಬಸ್ ನಿಲ್ದಾಣದ ಹತ್ತಿರ ನಿಂತುಕೊಂಡು ತನ್ನ ಲಾಭಕ್ಕಾಗಿ ಓ.ಸಿ ಮಟಕಾ ಎಂಬ ಜೂಗಾರಾಟದ ಬಗ್ಗೆ ಜನರಿಗೆ ಆಸೆ ತೋರಿಸಿ ಅವರಿಂದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಎಂಬ ಜೂಗಾರಾಟ ಆಡಿಸುತ್ತಿರುವಾಗ ದಿನಾಂಕ: 09-09-2021 ರಂದು 11-40 ಗಂಟೆಗೆ ಪಿರ್ಯಾದಿಯವರು ದಾಳಿ ಮಾಡಿದಾಗ ಆರೋಪಿತನ ತಾಬಾದಲ್ಲಿ ನಗದು ಹಣ 990/- ರೂಪಾಯಿ, ಓ.ಸಿ ಮಟಕಾ ಚೀಟಿ-1, ಬಾಲ್ ಪೆನ್-1 ಇವುಗಳು ಸಿಕ್ಕಿರುತ್ತದೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಬಿ. ಎಸ್. ನಾಯಕ, ಎ.ಎಸ್.ಐ, ರಾಮನಗರ ಪೊಲೀಸ್ ಠಾಣೆ ರವರು ದಿನಾಂಕ: 09-09-2021 ರಂದು 12-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 73/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಜೋಯ್ ತಂದೆ ಸಿ. ವಿ. ವರ್ಗೀಸ್, ಪ್ರಾಯ-67 ವರ್ಷ, ವೃತ್ತಿ-ವ್ಯಾಪಾರ, ಸಾ|| ಬಸ್ ನಿಲ್ದಾಣದ ಹತ್ತಿರ, ಗಣೇಶಗುಡಿ, ತಾ: ಜೋಯಿಡಾ. ಈತನು ಗಣೇಶಗುಡಿಯ ಗಣಪತಿ ದೇವಸ್ಥಾನದ ಹತ್ತಿರ ನಿಂತುಕೊಂಡು ತನ್ನ ಲಾಭಕ್ಕಾಗಿ ಓ.ಸಿ ಮಟಕಾ ಎಂಬ ಜೂಗಾರಾಟದ ಬಗ್ಗೆ ಜನರಿಗೆ ಆಸೆ ತೋರಿಸಿ ಅವರಿಂದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಎಂಬ ಜೂಗಾರಾಟ ಆಡಿಸುತ್ತಿರುವಾಗ ದಿನಾಂಕ: 09-09-2021 ರಂದು 19-10 ಗಂಟೆಗೆ ಪಿರ್ಯಾದಿಯವರು ದಾಳಿ ಮಾಡಿದಾಗ ಆರೋಪಿತನ ತಾಬಾದಲ್ಲಿ ನಗದು ಹಣ 1,160/- ರೂಪಾಯಿ, ಓ.ಸಿ ಮಟಕಾ ಚೀಟಿ-1, ಬಾಲ್ ಪೆನ್-1 ಇವುಗಳು ಸಿಕ್ಕಿರುತ್ತದೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ವಿನೋದ ಎಸ್. ಕೆ, ಪಿ.ಎಸ್.ಐ (ಕಾ&ಸು), ರಾಮನಗರ ಪೊಲೀಸ್ ಠಾಣೆ ರವರು ದಿನಾಂಕ: 09-09-2021 ರಂದು 13-40 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 09-09-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 34/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಹನುಮಂತ ತಂದೆ ತುಳಸು ಗೌಡ, ಪ್ರಾಯ-38 ವರ್ಷ, ವೃತ್ತಿ-ಸೆಂಟ್ರಿಂಗ್ ಕೆಲಸ, ಸಾ|| ಸಾಲಿಕೇರಿ, ಹಳದಿಪುರ, ತಾ: ಹೊನ್ನಾವರ. ಪಿರ್ಯಾದಿಯ ಗಂಡನಾದ ಈತನು ದಿನಾಂಕ: 09-09-2021 ರಂದು ಬೆಳಿಗ್ಗೆ 09-30 ಗಂಟೆಗೆ ಹೊನ್ನಾವರ ಪಟ್ಟಣದ ಬಂದರ್ ರೋಡ್ ಪೋರ್ಟ್ ಆಫೀಸ್ ಹತ್ತಿರವಿರುವ ಶಕೀಲಾ ಅಹಮ್ಮದ್ ಶೇಖ್‍ ರವರ ಮನೆಯಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದಾಗ 11-00 ಗಂಟೆಯ ಸುಮಾರಿಗೆ ಆಕಸ್ಮಾತ್ ಆಗಿ ಕಾಲು ಜಾರಿ ಮನೆಯ ಮೇಲಿನಿಂದ ಕೆಳಗೆ ಬಿದ್ದು ಗಾಯಗೊಂಡವನಿಗೆ ಚಿಕಿತ್ಸೆಗೆಂದು ಹೊನ್ನಾವರದ ತಾಲೂಕಾ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಧ್ಯಾಹ್ನ 13-30 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು, ಇದರ ಹೊರತು ತನ್ನ ಗಂಡನ ಸಾವಿನಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ತನ್ನ ಗಂಡನ ಮೃತದೇಹದ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಜಟ್ಟಮ್ಮ ಕೋಂ. ಹನುಮಂತ ಗೌಡ, ಪ್ರಾಯ-33 ವರ್ಷ, ವೃತ್ತಿ-ಗೃಹಿಣಿ, ಸಾ|| ಸಾಲಿಕೇರಿ, ಹಳದಿಪುರ, ತಾ: ಹೊನ್ನಾವರ ರವರು ದಿನಾಂಕ: 09-09-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 15/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿಯು ಸುಮಾರು  50-55 ವರ್ಷ ವಯಸ್ಸಿನ ಅಪರಿಚಿತ ಗಂಡಸ್ಸಾಗಿದ್ದು, ಮೃತನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಸದ್ರಿ ಮೃತ ವ್ಯಕ್ತಿಯ ಶವವು ಭಟ್ಕಳದ ತೆಂಗಿನಗುಂಡಿ ಅರಬ್ಬೀ ಸಮುದ್ರದ ದಡದಲ್ಲಿ ಸಿಕ್ಕಿದ್ದು, ಸದ್ರಿಯವನು ಸುಮಾರು 10 ರಿಂದ 15 ದಿವಸಗಳ ಹಿಂದೆ ಅರಬ್ಬೀ ಸಮುದ್ರದಲ್ಲಿ ಯಾವುದೋ ಕಾರಣಕ್ಕೆ ಅಥವಾ ಸಮುದ್ರದಲ್ಲಿ ಆಕಸ್ಮಿಕವಾಗಿ ಬಿದ್ದಿದರಿಂದ ಮೃತದೇಹದ ತಲೆ ಮತ್ತು ಮುಖದ ಭಾಗ ಹಾಗೂ ಎರಡು ಕೈಗಳ ಮತ್ತು ಕಾಲುಗಳ ಬೆರಳುಗಳು ಕೊಳೆತು ಹೋದ ಸ್ಥಿತಿಯಲ್ಲಿ ದಿನಾಂಕ: 09-09-2021 ರಂದು ಬೆಳಿಗ್ಗೆ 06-45 ಗಂಟೆಯ ಗಂಟೆಯ ಸುಮಾರಿಗೆ ಸಮುದ್ರದಲ್ಲಿ ಸಿಕ್ಕಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಲಕ್ಷ್ಮಣ ತಂದೆ ಮಂಜುನಾಥ ಮೊಗೇರ, ಪ್ರಾಯ-48 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ತೆಂಗಿನಗುಂಡಿ, ತಾ: ಭಟ್ಕಳ ರವರು ದಿನಾಂಕ: 09-09-2021 ರಂದು 08-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 11-09-2021 06:21 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080