ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 10-04-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 47/2021, ಕಲಂ: 78(3) ಕರ್ನಾಟಕ ಪೊಲಿಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಜನಾರ್ಧನ ತಂದೆ ದುಲಬಾ ಕಲ್ಗುಟಕರ, ಪ್ರಾಯ-47 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಂತೋಷಿ ಮಾತಾ ದೇವಸ್ಥಾನದ ಹತ್ತಿರ, ನಂದನಗದ್ದಾ, ಬಾಡ, ಕಾರವಾರ. ಈತನು ದಿನಾಂಕ: 09-04-2021 ರಂದು 19-15 ಗಂಟೆಗೆ ಕಾರವಾರದ ನಂದನಗದ್ದಾ ಸಂತೋಷಿ ಮಾತಾ ದೇವಸ್ಥಾನದ ಹತ್ತಿರ ಸಾರ್ವಜನಕ ಸ್ಥಳದಲ್ಲಿ ನಿಂತುಕೊಂಡು ತನ್ನ ಲಾಭದ ಸಲುವಾಗಿ ಸಾರ್ವಜನಿಕರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವ ಷರತ್ತಿನ ಮೇಲೆ ಅದೃಷ್ಠದ ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿ ಜನರಿಂದ ಹಣ ಪಡೆದು ಓ.ಸಿ ಮಟಕಾ ಜೂಜಾಟ ನಡೆಸುತ್ತಿರುವಾಗ ಪಿರ್ಯಾದಿಯವರು ದಾಳಿ ಮಾಡಿ ನಗದು ಹಣ 2,260/- ರೂಪಾಯಿಯನ್ನು ಹಾಗೂ ಜೂಗಾರಾಟಕ್ಕೆ ಬಳಸಿದ ಸ್ವತ್ತುಗಳನ್ನು ವಶಕ್ಕೆ ಪಡೆದುಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂತೋಷಕುಮಾರ ಎಮ್, ಪಿ.ಎಸ್.ಐ, ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 10-04-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 68/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗಂಗಾಧರ ತಂದೆ ಗುರುಬಸಯ್ಯ ಹಿರೇಮಠ, ಪ್ರಾಯ-31 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಸುನ್ನಾಳ, ತಾ: ರಾಮದುರ್ಗ, ಜಿ: ಬೆಳಗಾವಿ (ಕಾರ್ ನಂ: ಕೆ.ಎ-22/ಎಮ್.ಸಿ-1720 ನೇದರ ಚಾಲಕ). ಈತನು ದಿನಾಂಕ: 29-03-2021 ರಂದು 14-30 ಗಂಟೆಗೆ ಅಂಕೋಲಾ ತಾಲೂಕಿನ ಸುಂಕಸಾಳ ಗ್ರಾಮದಲ್ಲಿ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ಡಾಂಬರ್ ರಸ್ತೆಯ ಮೇಲೆ ತನ್ನ ಬಾಬ್ತು ಕಾರ್ ನಂ: ಕೆ.ಎ-22/ಎಮ್.ಸಿ-1720 ನೇದನ್ನು ಅಂಕೋಲಾ ಕಡೆಯಿಂದ ಹುಬ್ಬಳ್ಳಿಯ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ಕಾರಿನ ಮೇಲಿನ ತನ್ನ ನಿಯಂತ್ರಣವನ್ನು ಕಳೆದುಕೊಂಡು ರಸ್ತೆಯ ಬದಿಯಲ್ಲಿದ್ದ ಬ್ರಿಡ್ಜಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಡಾಂಬರ್ ರಸ್ತೆಯ ಮೇಲೆ ಕಾರನ್ನು ಪಲ್ಟಿ ಪಡಿಸಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ 1). ಪಿರ್ಯಾದಿ, 2). ವಿನಾಯಕ ತಂದೆ ಪ್ರಕಾಶ ಭೂಪನೂರು, ಸಾ|| ಕಮಡೊಳ್ಳಿ ಓಣಿ, ಹುಬ್ಬಳ್ಳಿ, 3). ಅವಿನಾಶ ತಂದೆ ಅಶೋಕ ಶಿರೋಳ, 4). ಸುಜೀತ ತಂದೆ ಅಶೋಕ ಶೀರೋಳ, ಸಾ|| (ಇಬ್ಬರೂ) ರಾಮದುರ್ಗಾ, ಬೆಳಗಾವಿ ಇವರಿ ಕೈಗೆ, ಕಾಲಿಗೆ ಹಾಗೂ ಕುತ್ತಿಗೆಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಚಾಲಕನು ತನಗೂ ಕೂಡ ಕೈಗೆ ಸಾದಾ ಸ್ವರೂಪದ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಬಸವನಗೌಡ ತಂದೆ ಚೆನ್ನಪ್ಪ ಗೌಡ ಪಾಟೀಲ್, ಪ್ರಾಯ-31 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಸುನ್ನಾಳ, ತಾ: ರಾಮದುರ್ಗ, ಜಿ: ಬೆಳಗಾವಿ ರವರು ದಿನಾಂಕ: 10-04-2021 ರಂದು 18-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 69/2021, ಕಲಂ: 279, 337, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸೆಲ್ವದೊರೈ ತಂದೆ ಶ್ರೀನಿವಾಸನ್, ಪ್ರಾಯ-32 ವರ್ಷ, ಸಾ|| ಪಿಲ್ಲಾರಪಳಯಮ್, ತಾ: ಮುಸರಿ, ಜಿ: ತಿರುಚಿರಪಲ್ಲಿ, ತಮಿಳುನಾಡು ರಾಜ್ಯ (ಲಾರಿ ನಂ: ಕೆ.ಎ-01/ಎ.ಜೆ-1123 ನೇದರ ಚಾಲಕ). ಈತನು ದಿನಾಂಕ: 10-04-2021 ರಂದು ರಾತ್ರಿ 19-35 ಗಂಟೆಯ ಸುಮಾರಿಗೆ ತನ್ನ ಲಾರಿ ನಂ: ಕೆ.ಎ-01/ಎ.ಜೆ-1123 ನೇದನ್ನು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ರಸ್ತೆಯಲ್ಲಿ ಲಾರಿಯನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದವನು, ಅಂಕೋಲಾ ತಾಲೂಕಿನ ಅಗಸೂರ ಹತ್ತಿರ ಮುಂದಿನಿಂದ ಹೋಗುತ್ತಿದ್ದ ಯಾವುದೋ ವಾಹನಕ್ಕೆ ಓವರಟೇಕ್ ಮಾಡಲು ಹೋಗಿ ರಸ್ತೆಯ ಬಲಕ್ಕೆ ಚಲಾಯಿಸಿ ಲಾರಿಯ ಮೇಲಿನ ನಿಯಂತ್ರಣ ತಪ್ಪಿ ಪಲ್ಟಿ ಕೆಡವಿ ಅಪಘಾತ ಪಡಿಸಿ, ಲಾರಿಯಲ್ಲಿದ್ದ ಪಿರ್ಯಾದಿಯ ಎದೆಗೆ ಹಾಗೂ ಬಲಗಾಲಿನ ತೊಡೆಯ ಹತ್ತಿರ ಒಳ ದುಃಖಾಪತ್ ಪಡಿಸಿ, ಆರೋಪಿ ಚಾಲಕನು ತಾನು ಸಹ ಲಾರಿಯ ಅಡಿಯಲ್ಲಿ ಬಿದ್ದು ಗಂಭೀರ ಸ್ವರೂಪದ ಗಾಯನೋವು ಪಡಿಸಿಕೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ರವಿಕುಮಾರ ತಂದೆ ಸಿಂಗೇಕೌಂಡರ, ಪ್ರಾಯ-29 ವರ್ಷ, ವೃತ್ತಿ-ಅಣ್ಣ ಲಕ್ಷ್ಮೀ ಟ್ರಾನ್ಸಪೋರ್ಟ್ ನಾಮಕಲ್ ಚಾಲಕ, ಸಾ|| ಡೋರ್ ನಂ: 944, ಬೆಳಂಬಟ್ಟಿ ಗ್ರಾಮ, ಪೋ: ಮಗಾದೇವಿ, ತಾ: ಮುಸರಿ, ಜಿ: ತಿರುಚಿರಪಲ್ಲಿ, ತಮಿಳನಾಡು ರಾಜ್ಯ ರವರು ದಿನಾಂಕ: 10-04-2021 ರಂದು 23-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 28/2021, ಕಲಂ: ಹೆಂಗಸು ಮತ್ತು ಮಗು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದವರು 1]. ಶ್ರೀಮತಿ ಮಂಜುಳಾ ಕೋಂ. ರಮೇಶ ಸಿದ್ದರ್, ಪ್ರಾಯ-30 ವರ್ಷ, 2]. ಮಣಿ ತಂದೆ ರಮೇಶ ಸಿದ್ದರ್, ಪ್ರಾಯ-05 ವರ್ಷ, ಸಾ|| (ಇಬ್ಬರೂ) ಸೂರಣಗಿ, ಗೋಮಾಳ, ಪೋ: ತೆಲಗುಂದ, ತಾ: ಸೊರಬಾ, ಜಿ: ಶಿವಮೊಗ್ಗ, ಹಾಲಿ ಸಾ|| ಬಂಕಿಕೊಡ್ಲ, ಗೋಕರ್ಣ, ತಾ: ಕುಮಟಾ. ಈ ನಮೂದಿತರಲ್ಲಿ 1 ನೇಯವಳು ಪಿರ್ಯಾದಿಯ ಹೆಂಡತಿಯಾಗಿದ್ದು, ಇವಳು ದಿನಾಂಕ: 23-03-2021 ರಂದು ಪಿರ್ಯಾದಿಯು ಬಂಕಿಕೊಡ್ಲದಲ್ಲಿ ವಾಸವಾಗಿರುವ ಬಾಡಿಗೆ ಮನೆಯಲ್ಲಿ ಇದ್ದವಳು, ಮನೆಯಲ್ಲಿ ಇರದೇ ತನ್ನ ಮಗನೊಂದಿಗೆ ಕಾಣೆಯಾಗಿರುತ್ತಾಳೆ. ಕಾಣೆಯಾದವರನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಮೇಶ ತಂದೆ ದೊಡ್ಡಮಾರುತಿ ಸಿದ್ದರ್, ಪ್ರಾಯ-41 ವರ್ಷ, ವೃತ್ತಿ-ಬಳೆ ವ್ಯಾಪಾರ, ಸಾ|| ಸೂರಣಗಿ, ಗೋಮಾ, ಪೋ: ತೆಲಗುಂದ, ತಾ: ಸೊರಬಾ, ಜಿ: ಶಿವಮೊಗ್ಗ, ಹಾಲಿ ಸಾ|| ಬಂಕಿಕೊಡ್ಲ, ಗೋಕರ್ಣ, ತಾ: ಕುಮಟಾ ರವರು ದಿನಾಂಕ: 10-04-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 100/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನಾವರ ತಾಲೂಕಿನ ಹಳದಿಪುರ, ಅಗ್ರಹಾರ ಬಸ್ ಸ್ಟ್ಯಾಂಡ್ ಹತ್ತಿರ ಇರುವ ಶ್ರೀ ಗಜಾನನ ಕೋಲ್ಡ್ರಿಂಕ್ಸ್ ಅಂಗಡಿ ಪಕ್ಕದಲ್ಲಿ ಪಿರ್ಯಾದಿಯ ತಮ್ಮನವರಾದ ಸುರೇಶ ದೇವಾಡಿಗ ಇವರಿಗೆ ಸಂಬಂಧಿಸಿದ ಅ||ಕಿ|| 15,000/- ರೂಪಾಯಿ ಮೌಲ್ಯದ ಕಪ್ಪು ಬಣ್ಣದ ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂ: ಕೆ.ಎ-47/ಜೆ-1804 ನೇದು ಇಟ್ಟಿದನ್ನು ದಿನಾಂಕ: 09-04-2021 ರಂದು 22-00 ಗಂಟೆಯಿಂದ ದಿನಾಂಕ: 10-04-2021 ರಂದು ಬೆಳಿಗ್ಗೆ 07-30 ಗಂಟೆಯ ನಡುವಿನ ಅವಧಿಯಲ್ಲಿ ಕಳುವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಗಜಾನನ ತಂದೆ ಗಣಪತಿ ದೇವಾಡಿಗ, ಪ್ರಾಯ-56 ವರ್ಷ, ವೃತ್ತಿ-ಕೋಲ್ಡ್ರಿಂಕ್ಸ್ ಅಂಗಡಿ ವ್ಯಾಪಾರ, ಸಾ|| ಭಂಡಾರಕೇರಿ, ಅಗ್ರಹಾರ, ಹಳದಿಪುರ, ತಾ: ಹೊನ್ನಾವರ ರವರು ದಿನಾಂಕ: 10-04-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 101/2021, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದವರು ಶ್ರೀಮತಿ ಜ್ಯೋತಿ ಕೋಂ. ಮಂಜುನಾಥ ಮನಗೊಂಡ್ಲಿ, ಪ್ರಾಯ-32 ವರ್ಷ, ವೃತ್ತಿ-ಗಾರ್ಮೆಂಟ್ಸ್ ನಲ್ಲಿ ಕೆಲಸ, ಸಾ|| ಕವಲಕ್ಕಿ, ತಾ: ಹೊನ್ನಾವರ. ಪಿರ್ಯಾದಿಯ ಹೆಂಡತಿಯಾದ ಇವಳು ಮನೆಯಲ್ಲಿ ಮಲಗಿಕೊಂಡಿದ್ದವಳು, ದಿನಾಂಕ: 08-04-2021 ರಂದು 23-00 ಗಂಟೆಯಿಂದ ದಿನಾಂಕ: 09-04-2021 ರಂದು ಬೆಳಗ್ಗೆ 05-00 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಿಂದ ಎಲ್ಲಿಯೋ ಹೋಗಿ, ಸಂಬಂಧಿಕರ ಮನೆಗೂ ಹೋಗದೇ, ಮನೆಗೂ ಮರಳಿ ಬಾರದೇ ಕಾಣೆಯಾಗಿದ್ದು, ಕಾಣೆಯಾದ ತನ್ನ ಹೆಂಡತಿಯನ್ನು ಹುಡುಕಿಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಈರಪ್ಪ ಮನಗೊಂಡ್ಲಿ, ಪ್ರಾಯ-39 ವರ್ಷ, ವೃತ್ತಿ-ವ್ಯಾಪಾರ, ಸಾ|| ಕವಲಕ್ಕಿ, ತಾ: ಹೊನ್ನಾವರ ರವರು ದಿನಾಂಕ: 10-04-2021 ರಂದು 18-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 102/2021, ಕಲಂ: 143, 147, 148, 323, 341, 324, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮುದಾಶೀರ್ ಇಸ್ಮಾಯಿಲ್ ಗೈಮಾ, 2]. ಇಸ್ಮಾಯಿಲ್ ಗೈಮಾ, 3]. ಪೈಜಾನ್ ಮುನಾಫ್ ಸಂಶಿ, 4]. ಹಬೀಬ್ ಹಸನ್ ಅಪ್ಕಾರ್, 5]. ಸಾಬೀರ್ ಖಾಜಾ ಸಿದ್ದಿಬಾಪಾ, ಸಾ|| (ಎಲ್ಲರೂ) ಉಪ್ಪೋಣಿ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ಹಾಗೂ ಪಿರ್ಯಾದಿಯವರು ಹೊನ್ನಾವರ ತಾಲ್ಲೂಕಿನ ಉಪ್ಪೋಣಿ ಗ್ರಾಮದವರಿದ್ದು, ಈ ಹಿಂದಿನಿಂದಲೂ ಆರೋಪಿತರೆಲ್ಲರೂ ಪಿರ್ಯಾದಿಯೊಂದಿಗೆ ದ್ವೇಷದಿಂದ ಇದ್ದವರು, ದಿನಾಂಕ: 10-04-2021 ರಂದು ಸಂಜೆ 17-30 ಗಂಟೆಗೆ ಪಿರ್ಯಾದಿಯು ತನ್ನ ಮನೆಯಿಂದ ಅಂಗಡಿಗೆ ಮೋಟಾರ್ ಸೈಕಲ್ ಮೇಲಾಗಿ ಹೋಗುತ್ತಿದ್ದಾಗ ಅಂಗಡಿಯ ಹತ್ತಿರ ಆರೋಪಿ 1 ನೇಯವನು ಪಿರ್ಯಾದಿಯ ಗಾಡಿಯನ್ನು ಅಡ್ಡ ಹಾಕಿದ್ದು, ಆಗ ಆರೋಪಿ 2, 3, 4 ಹಾಗೂ 5 ನೇಯವರು ಪಿರ್ಯಾದಿಯನ್ನು ಗುಂಪು ಕಟ್ಟಿಕೊಂಡು ನಿಲ್ಲಿಸಿದ್ದು, ಆಗ ಆರೋಪಿ 1 ನೇಯವನು ತನ್ನ ಕೈಯಲ್ಲಿದ್ದ ಚಾಕುವಿನಿಂದ ಪಿರ್ಯಾದಿಯ ಎದೆಯ ಎಡಭಾಗಕ್ಕೆ ಹೊಡೆದು ಗಾಯ ಪಡಿಸಿದ್ದಲ್ಲದೇ, ಆರೋಪಿ 2, 3, 4 ಹಾಗೂ 5 ನೇಯವರು ಪಿರ್ಯಾದಿಯನ್ನು ಹಿಡಿದುಕೊಂಡಿದ್ದು, ಆಗ ಆರೋಪಿ 3 ನೇಯವನು ಕಟ್ಟಿಗೆಯ ದೊಣ್ಣೆಯಿಂದ ಪಿರ್ಯಾದಿಯ ತಲೆಯ ಮೇಲೆ ಹೊಡೆದಿದ್ದು, ಆಗ ಅದನ್ನು ತಪ್ಪಿಸಲು ಬಂದ ನೂರುಲ್ಲಾ ಅಮೀನ್ ಅಬುಮಹ್ಮದ್ ಗುರ್ಕಾರ, ಈತನಿಗೆ ಆರೋಪಿತರೆಲ್ಲರೂ ಕೈಯಿಂದ ಹೊಡೆದಿದ್ದಲ್ಲದೇ, ನಂತರ ಆರೋಪಿತರೆಲ್ಲರೂ ಅಲ್ಲಿಂದ ಹೋಗುವಾಗ ‘ಇಂದು ಸಂಜೆಯ ವೇಳೆಗೆ ಕೊಲೆ ಮಾಡಿಯೇ ತೀರುತ್ತೇವೆ’ ಅಂತಾ ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಮಹ್ಮದ್ ಯುನೂಸ್ ತಂದೆ ಅಬುಮಹ್ಮದ್ ಗುರ್ಕಾರ, ಪ್ರಾಯ-28 ವರ್ಷ, ವೃತ್ತಿ-ವ್ಯಾಪಾರ, ಸಾ|| ಉಪ್ಪೋಣಿ, ತಾ: ಹೊನ್ನಾವರ ರವರು ದಿನಾಂಕ: 10-04-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 103/2021, ಕಲಂ: 323, 324, 341, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಹ್ಮದ್ ಯುನೂಸ್ ಅಬುಮಹ್ಮದ್ ಗುರ್ಕಾರ, ಪ್ರಾಯ-28 ವರ್ಷ, ವೃತ್ತಿ-ವ್ಯಾಪಾರ, ಸಾ|| ಉಪ್ಪೋಣಿ, ತಾ: ಹೊನ್ನಾವರ, 2]. ನೂರುಲ್ಲಾ ಅಮೀನ್ ತಂದೆ ಅಬುಮಹ್ಮದ್ ಗುರ್ಕಾರ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಉಪ್ಪೋಣಿ, ತಾ: ಹೊನ್ನಾವರ, 3]. ಅಬುಮಹ್ಮದ್ ಗುರ್ಕಾರ, ಪ್ರಾಯ-55 ವರ್ಷ, ವೃತ್ತಿ-ವ್ಯಾಪಾರ, ಸಾ|| ಉಪ್ಪೋಣಿ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ಹಾಗೂ ಪಿರ್ಯಾದಿಯವರು ಹೊನ್ನಾವರ ತಾಲ್ಲೂಕಿನ ಉಪ್ಪೋಣಿ ಗ್ರಾಮದವರಿದ್ದು, ಈ ಹಿಂದಿನಿಂದಲೂ ಆರೋಪಿತರೆಲ್ಲರೂ ಪಿರ್ಯಾದಿಗೆ ಕಂಡಾಗಲೆಲ್ಲ ಗುರಾಯಿಸಿ ನೋಡುತ್ತಿದ್ದವರು, ದಿನಾಂಕ: 10-04-2021 ರಂದು ಸಂಜೆ 17-30 ಗಂಟೆಯ ಸುಮಾರಿಗೆ  ಪಿರ್ಯಾದಿಯು ತನ್ನ ಮನೆಯಿಂದ ತಮ್ಮ ಅಂಗಡಿಗೆ ನಡೆದುಕೊಂಡು ಹೋಗುತ್ತಿದ್ದಾಗ ಅಂಗಡಿಯ ಹತ್ತಿರ ಆರೋಪಿತರೆಲ್ಲರೂ ಪಿರ್ಯಾದಿಯನ್ನು ಅಡ್ಡಗಟ್ಟಿ ಹಿಡಿದು ‘ನಮ್ಮ ತಂಟೆಗೆ ಬರುತ್ತೀಯಾ ರಾಂಡಕೇ, ಬೋಸಡಿಕೇ’ ಅಂತಾ ಅವಾಚ್ಯವಾಗಿ ಬೈಯ್ದಿದ್ದಲ್ಲದೇ, ಆರೋಪಿ 1 ನೇಯವನು ತನ್ನ ಕೈಯಲ್ಲಿದ್ದ ಕಟ್ಟಿಗೆಯ ಬಡಿಗೆಯಿಂದ ಪಿರ್ಯಾದಿಯ ಮೈಮೇಲೆ  ಹೊಡೆದಿದ್ದಲ್ಲದೇ, ಆರೋಪಿ 2 ಮತ್ತು 3 ನೇಯವರು ಕೈಯಿಂದ ಮೈಮೇಲೆ ಹೊಡೆದು ಪಿರ್ಯಾದಿಗೆ ಬಲಗೆನ್ನೆಗೆ, ಕುತ್ತಿಗೆಯ ಹಿಂಬದಿಗೆ ಗಾಯ ಪಡಿಸಿದ್ದಲ್ಲದೇ, ಪಿರ್ಯಾದಿಗೆ ಹೊಡೆಯುವುದನ್ನು ನೋಡಿ ಬಿಡಿಸಲು ಬಂದ ಪಿರ್ಯಾದಿಯ ಅಣ್ಣನಾದ ಮುದಶೀರ್ ಇಸ್ಮಾಯಿಲ್ ಗೈಮಾ ಈತನಿಗೂ ಸಹ ಆರೋಪಿತರೆಲ್ಲರೂ ‘ನೀನ್ಯಾರು ಕೇಳುವವನು?’ ಅಂತಾ ಅವಾಚ್ಯವಾಗಿ ಬೈಯ್ದು, ಕೈಯಿಂದ ಮೈಮೇಲೆ ಹೊಡೆದು ನೆಲಕ್ಕೆ ದೂಡಿ ಹಾಕಿ, ಕಣ್ಣಿನ ಹತ್ತಿರ ಹಾಗೂ ಬೆನ್ನಿಗೆ ಗಾಯ ಪಡಿಸಿದ್ದಲ್ಲದೇ, ಪಿರ್ಯಾದಿ ಹಾಗೂ ಪಿರ್ಯಾದಿಯ ಅಣ್ಣನಿಗೆ ಆರೋಪಿತರೆಲ್ಲರೂ ‘ಇನ್ನೊಮ್ಮೆ ನಿಮ್ಮನ್ನು ಜೀವ ಸಮೇತ ಬಿಡುವುದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ನೈಮ್ ತಂದೆ ಇಸ್ಮಾಯಿಲ್ ಗೈಮಾ, ಪ್ರಾಯ-19 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಉಪ್ಪೋಣಿ, ತಾ: ಹೊನ್ನಾವರ ರವರು ದಿನಾಂಕ: 10-04-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 57/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಾದಪ್ಪ ತಂದೆ ಅಮಸಿದ್ದ ಕೋಳಿ, ಪ್ರಾಯ-39 ವರ್ಷ, ವೃತ್ತಿ-ಚಾಲಕ, ಸಾ|| ಜಾಲಗೇರಿ, ತಾ&ಜಿ: ಬಿಜಾಪುರ (ಲಾರಿ ನಂ: ಎಮ್.ಎಚ್-25/ಟಿ-4547 ನೇದರ ಚಾಲಕ). ಈತನು ದಿನಾಂಕ: 09-04-2021 ರಂದು ಬೆಳಿಗಿನ ಜಾವ 05-30 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ತಾಳಿಕುಂಬ್ರಿ ಕ್ರಾಸ್ ಹತ್ತಿರ ಹಾದು ಹೋದ ರಾ ಹೆ -63 ರಲ್ಲಿ ತನ್ನ ಬಾಬ್ತು ಲಾರಿ ನಂ: ಎಮ್.ಎಚ್-25/ಟಿ-4547 ನೇದನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಮತ್ತು ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು, ತನ್ನ ವಾಹನವನ್ನು ನಿಯಂತ್ರಣದಲ್ಲಿಟ್ಟುಕೊಳ್ಳದೇ ವಾಹನವನ್ನು ಪಲ್ಟಿ ಕೆಡವಿ ಅಪಘಾತ ಪಡಿಸಿ, ತನ್ನ ವಾಹನದಲ್ಲಿದ್ದ ಲಾರಿ ಕ್ಲೀನರ್ ಸಾಕ್ಷಿದಾರ ಜಗದೀಶ ತಂದೆ ಬಸಪ್ಪ ಹಳ್ಳಿ, ಇವರಿ ಮೈಕೈಗೆ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಚಾಲಕನು ತನಗೂ ಸಹ ಮೈಕೈಗೆ ಗಾಯನೋವು ಪಡಿಸಿಕೊಂಡು ಲಾರಿಯನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ನೀಲಪ್ಪ ತಂದೆ ಸೂರಪ್ಪ ಪಾಯಿಣ್ಣಿ, ಪ್ರಾಯ-49 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕಾರಜೋಳ, ತಾ&ಜಿ: ಬಿಜಾಪುರ ರವರು ದಿನಾಂಕ: 10-04-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 58/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಚಂದ್ರು ತಂದೆ ನಾರಾಯಣ ದೇವಾಡಿಗ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೊಸಗದ್ದೆ, ಭರತನಹಳ್ಳಿ, ಕುಂದರ್ಗಿ, ತಾ: ಯಲ್ಲಾಪುರ. ಈತನು ದಿನಾಂಕ: 10-04-2021 ರಂದು 15-00 ಗಂಟೆಗೆ ಯಲ್ಲಾಪುರ ತಾಲೂಕ ಭರತನಹಳ್ಳಿ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ದಳದಲ್ಲಿ ತನ್ನ ಲಾಭಕ್ಕಾಗಿ ಓ.ಸಿ ಮಟಕಾ ಎಂಬ ಜೂಗಾರಾಟದ ಬಗ್ಗೆ ಜನರಿಗೆ ಆಸೆ ತೋರಿಸಿ ಅವರಿಂದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಎಂಬ ಜೂಗಾರಾಟ ಆಡಿಸುತ್ತಿರುವಾಗ ನಗದು ಹಣ 645/- ರೂಪಾಯಿ ಮತ್ತು ಓ.ಸಿ ಮಟಕಾ ಜೂಗಾರಾಟದ ಅಂಕೆ-ಸಂಖ್ಯೆ ಬರೆದ ಪೇಪರ್-01 ಹಾಗೂ ಬಾಲ್ ಪೆನ್-01 ಇವುಗಳೊಂದಿಗೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜುನಾಥ ಎಸ್. ಗೌಡರ್, ಪಿ.ಎಸ್.ಐ-1, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 10-04-2021 ರಂದು 17-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 59/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಜಗದೀಶನ್ ತಂದೆ ನಲ್ಲುಸ್ವಾಮಿ, ಪ್ರಾಯ-55 ವರ್ಷ, ವೃತ್ತಿ-ಚಾಲಕ, ಸಾ|| ಪೆರಂಬಳೂರು, ತಮಿಳುನಾಡು ರಾಜ್ಯ (ಟ್ರಕ್ ವಾಹನ ನಂ: ಕೆ.ಎ-22/ಸಿ-3206 ನೇದರ ಚಾಲಕ), 2]. ಸುನೀಲ ತಂದೆ ಮಾಮನಸಿಂಗ್, ಪ್ರಾಯ-35 ವರ್ಷ, ವೃತ್ತಿ-ಚಾಲಕ, ಸಾ|| ಕಾರಿದಾರಣಿ, ಬಂಡಾಡ್, ಹರಿಯಾಣ ರಾಜ್ಯ (ಟ್ರಾಲಿ ವಾಹನ ನಂ: ಜಿ.ಜೆ-12/ಬಿ.ವಿ-3367 ನೇದರ ಚಾಲಕ). ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 09-04-2021 ರಂದು 21-30 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ತಾಳಿಕುಂಬ್ರಿ ಕ್ರಾಸ್ ಹತ್ತಿರ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ನೇರವಾದ ರಸ್ತೆಯ ಮೇಲೆ ತನ್ನ ಬಾಬ್ತು ಟ್ರಕ್ ವಾಹನ ನಂ: ಕೆ.ಎ-22/ಸಿ-3206 ನೇದನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದವನು, ತನ್ನ ವಾಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳದೇ ಅದೇ ವೇಳೆ ಆರೋಪಿ 2 ನೇಯವನು ತನ್ನ ಬಾಬ್ತು ಟ್ರಾಲಿ ವಾಹನ ನಂ: ಜಿ.ಜೆ-12/ಬಿ.ವಿ-3367 ನೇದನ್ನು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದಿದ್ದರಿಂದ ಎರಡು ವಾಹನಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡ ಪರಿಣಾಮ ಈ ಅಪಘಾತದಿಂದ ಆರೋಪಿ 1 ಮತ್ತು 2 ನೇಯಯವರು ಸಾದಾ ಗಾಯನೋವು ಪಡಿಸಿಕೊಂಡು, ಎರಡು ವಾಹನಗಳನ್ನು ಜಖಂಗೊಳಿಸಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸಂತೋಷ ತಂದೆ ನಾಗಪ್ಪ ಭೋವಿವಡ್ಡರ, ಪ್ರಾಯ-35 ವರ್ಷ, ವೃತ್ತಿ-ಚಾಲಕ, ಸಾ|| ಮಂಜುನಾಥ ನಗರ, ತಾ: ಯಲ್ಲಾಪುರ ರವರು ದಿನಾಂಕ: 10-04-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 20/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಅಶೋಕ ತಂದೆ ಭೀಮಪ್ಪಾ ಚಿಕ್ಕಪ್ಪದವರ, ಪ್ರಾಯ-34 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಾಲಮಡ್ಡಿ, ದಾಂಡೇಲಿ. ಈತನು ದಿನಾಂಕ: 10-04-2021 ರಂದು 22-30 ಗಂಟೆಗೆ ದಾಂಡೇಲಿ ತಾಲೂಕಿನ ಹಾಲಮಡ್ಡಿ ಗ್ರಾಮದ ಬಸ್ ಸ್ಟ್ಯಾಂಡ್ ಹತ್ತಿರದ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಸಾರ್ವಜನಿಕರಿಗೆ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಅನಧೀಕೃತವಾಗಿ ಸರಾಯಿ ಪ್ಯಾಕೆಟ್ ಗಳನ್ನು ಮಾರಾಟ ಮಾಡುವಾಗ, ನೀಲಿ ಬಣ್ಣದ ಕೈ ಚೀಲದಲ್ಲಿ ORIGINAL CHOICE-90 ML ನ ಟೆಟ್ರಾ ಪ್ಯಾಕೆಟ್ ಗಳು-26, ಅ||ಕಿ|| 913.38/- ರೂಪಾಯಿ ಮತ್ತು ನಗದು 175/- ರೂಪಾಯಿಗಳೊಂದಿಗೆ ಸ್ಥಳದಲ್ಲಿಯೇ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಐ. ಆರ್. ಗಡ್ಡೇಕರ್, ಪಿ.ಎಸ್.ಐ (ಕಾ&ಸು), ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 10-04-2021 ರಂದು 23-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 33/2021, ಕಲಂ: 3, 25, 1(ಬಿ) ಭಾರತ ಆಯುಧ ಅಧಿನಿಯಮ-1959 ನೇದ್ದರ ವಿವರ...... ನಮೂದಿತ ಆರೋಪಿತರು 1]. ಸಂತೋಷ ವಾಸು ನಾಯ್ಕ, ಪ್ರಾಯ-38 ವರ್ಷ, ಸಾ|| ಕೊಡ್ಲಳ್ಳಿ, ಕೊಡಗಿಬೈಲ್, ತಾ: ಶಿರಸಿ, 2]. ಅಣ್ಣಪ್ಪ ಮರಿಯಾ ಚಲವಾದಿ, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹತ್ತರಗಿ, ಪೋ: ನವಿಲಗಾರ, ತಾ: ಶಿರಸಿ. ಈ ನಮೂದಿತ ಆರೋಪಿತರು ದಿನಾಂಕ: 10-04-2021 ರಂದು 00-10 ಗಂಟೆಗೆ ಒಂಟಿ ನಳಿಕೆಯ ನಾಡ ಬಂದೂಕು-1 ಮತ್ತು ಅದಕ್ಕೆ ಉಪಯೋಗಿಸುವ ಒಂದೇ ನಮೂನೆಯ ಗಾತ್ರವಲ್ಲದ ಸುಮಾರು 108 ಚರ್ರಿಗಳನ್ನು ಯಾವುದೇ ಅಧೀಕೃತ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ಆರೋಪಿ 1 ನೇಯವನ ಮನೆಯಾದ ಕೊಡ್ಲಳ್ಳಿ ಕಡೆಯಿಂದ ಆರೋಪಿ 2 ನೇಯವನ ಮನೆಯಾದ ಹತ್ತರಗಿ ಕಡೆಗೆ ತೆಗೆದುಕೊಂಡು ಹೋಗುತ್ತಿರುವಾಗ ಓಣಿ ವಿಘ್ನೇಶ್ವರ ಬಸ್ ನಿಲ್ದಾಣದ ಹತ್ತಿರ ದಾಳಿ ಮಾಡಿದ ಕಾಲಕ್ಕೆ ಆರೋಪಿ 2 ನೇಯವನು ಸೆರೆ ಸಿಕ್ಕಿದ್ದು ಹಾಗೂ ಆರೋಪಿ 1 ನೇಯವನು ದಾಳಿಯ ಕಾಲ ಓಡಿ ಹೋಗಿ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶ್ಯಾಮ್ ವಿ. ಪಾವಸ್ಕರ, ಪಿ.ಎಸ್.ಐ (ಕ್ರೈಂ), ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 10-04-2021 ರಂದು 02-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 34/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ನರಸಿಂಹ ತಂದೆ ದೇವು ಮರಾಠಿ, ಪ್ರಾಯ-45 ವರ್ಷ, ವೃತ್ತಿ-ಹೊಟೇಲ್ ವ್ಯಾಪಾರ, ಸಾ|| ದೇವನಳ್ಳಿ, ಪೋ: ದೇವನಳ್ಳಿ, ತಾ: ಶಿರಸಿ. ಈತನು ದಿನಾಂಕ: 10-04-2021 ರಂದು 15-45 ಗಂಟೆಯ ಸುಮಾರಿಗೆ ಶಿರಸಿ ತಾಲೂಕಿನ ದೇವನಳ್ಳಿ ಗ್ರಾಮದ ತನಗೆ ಸೇರಿದ ತನ್ನ ಮಹಾಗಣಪತಿ ಹೊಟೇಲ್ ಎದುರಿನಲ್ಲಿ ಮದ್ಯಪಾನ ಕುಡಿಯಲು ಅವಕಾಶ ಮಾಡಿಕೊಟ್ಟ ಕಾಲಕ್ಕೆ ದಾಳಿ ಮಾಡಿ, ದಾಳಿಯ ಕಾಲಕ್ಕೆ 1). Haywards Cheers Whisky ಹೆಸರಿನ 90 ML ಅಳತೆಯ ಸರಾಯಿ ಇದ್ದ ಪ್ಯಾಕೆಟ್ ಗಳು-08, ಅ||ಕಿ|| ತಲಾ ಒಂದಕ್ಕೆ 35.13/- ರೂಪಾಯಿಗಳಂತೆ ಒಟ್ಟೂ ಅ||ಕಿ|| 281.04/- ರೂಪಾಯಿ, 2). Haywards Cheers Whisky ಹೆಸರಿನ 90 ML ಅಳತೆಯ ಖಾಲಿ ಪ್ಯಾಕೆಟ್ ಗಳು-04, ಅ||ಕಿ|| 00.00/- ರೂಪಾಯಿ, 3). ಮದ್ಯಪಾನ ಕುಡಿಯಲು ಉಪಯೋಗಿಸಿದ Use & Through Plastic Glass-03, ಅ||ಕಿ|| 00.00/- ರೂಪಾಯಿಗಳೋಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಕುಷ್ಣಗೌಡ ಅರಕೇರಿ, ಪ್ರೋ ಪಿ.ಎಸ್.ಐ, ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 10-04-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 37/2021, ಕಲಂ: 8(c), 20(b)(ii)(A) ಎನ್.ಡಿ.ಪಿ.ಎಸ್ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತ ಆಭೀದ್ ತಂದೆ ಮಹ್ಮದ್ ರಫೀಕ್ ಹುಬ್ಬಳ್ಳಿ, ಪ್ರಾಯ-19 ವರ್ಷ, ವೃತ್ತಿ-ಚಾಲಕ, ಸಾ|| ಇಂದಿರಾ ನಗರ, ತಾ: ಶಿರಸಿ, ಹಾಲಿ ಸಾ|| ಮದಿನಾ ಹೊಟೇಲ್ ಹತ್ತಿರ, ನೆಹರೂ ನಗರ, ತಾ: ಶಿರಸಿ. ಈತನು ದಿನಾಂಕ: 10-04-2021 ರಂದು 11-00 ಗಂಟೆಗೆ ಶಿರಸಿ ನಗರದ ಕರಿಗುಂಡಿ ರಸ್ತೆಯ ಕಸದಗುಡ್ಡೆ ಕ್ರಾಸ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾದಕ ವಸ್ತುವನ್ನು ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡಿಕೊಂಡು ಬಂದು ಮಾರಾಟ ಮಾಡಲು ತನ್ನ ವಶದಲ್ಲಿಟ್ಟುಕೊಂಡಿರುವಾಗ ಪಿರ್ಯಾದಿಯವರು ಪಂಚರು, ಪತ್ರಾಂಕಿತ ಅಧಿಕಾರಿ, ತೂಕದ ವ್ಯಾಪಾರಿ ಹಾಗೂ ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ನಡೆಸಿದ ಕಾಲಕ್ಕೆ 1). 504 ಗ್ರಾಂ ತೂಕದ ಗಾಂಜಾ ಮಾದಕ ವಸ್ತು, ಅ||ಕಿ|| 15,000/- ರೂಪಾಯಿ, 2). ನೀಲಿ ಬಣ್ಣದ ನಾನ್ ಪ್ಲಾಸ್ಟಿಕ್ ಕವರ್-01, ಅ||ಕಿ|| 00.00/- ರೂಪಾಯಿ, 3). ನೋಟ್ ಬುಕ್ ಖಾಲಿ ಹಾಳೆಗಳು-07, ಅ||ಕಿ|| 00.00/- ರೂಪಾಯಿ, 4). ನಗದು ಹಣ 400/-  ರೂಪಾಯಿ, 5). ಒಪ್ಪೋ ಕಂಪನಿಯ ಮೊಬೈಲ್ ಪೋನ್-01, ಅ||ಕಿ|| 1,000/- ರೂಪಾಯಿಗಳೊಂದಿಗೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನಾಗಪ್ಪ, ಪಿ.ಎಸ್.ಐ, ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 10-04-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 53/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 30-03-2021 ರಂದು ಮಧ್ಯಾಹ್ನ 03-00 ಗಂಟೆಯಿಂದ 04-30 ಗಂಟೆಯ ನಡುವಿನ ಅವಧಿಯಲ್ಲಿ ಮುಂಡಗೋಡ ತಹಶೀಲ್ದಾರ್ ಆಫೀಸಿನ ಪಾರ್ಕಿಂಗ್ ಶೆಡ್ಡಿನಲ್ಲಿ ಇರುವ ಖುಲ್ಲಾ ಜಾಗದಲ್ಲಿ ನಿಲ್ಲಿಸಿಟ್ಟ ಪಿರ್ಯಾದಿಯ ಬಾಬ್ತು ಅ||ಕಿ|| 40,000/- ರೂಪಾಯಿ ಬೆಲೆಬಾಳುವ ಹೋಂಡಾ ಎಕ್ಟಿವ್ 3G DLX ಮೋಟಾರ್ ಸೈಕಲ್ ನಂ: ಕೆ.ಎ-31/ಎಕ್ಸ್-3998 ನೇದನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಮೋಟಾರ ಸೈಕಲ್ ನೀಲಿ ಬಣ್ಣದಿದ್ದು, ಅದರ ಚಾಸಿಸ್ ನಂ: ME4JF506AGT086587 ಹಾಗೂ ಇಂಜಿನ್ ನಂ: JF50ET4086932 ನೇದು ಇರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾಗಪ್ಪ ತಂದೆ ಯಲ್ಲಪ್ಪ ಕೋಣನಕೇರಿ, ಪ್ರಾಯ-55 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸನವಳ್ಳಿ, ತಾ: ಮುಂಡಗೋಡ ರವರು ದಿನಾಂಕ: 10-04-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 54/2021, ಕಲಂ: 15(ಎ) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಕೃಷ್ಣ ತಂದೆ ಹನುಮಂತಪ್ಪ ಭೋವಿವಡ್ಡರ, ಪ್ರಾಯ-27 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ರವೀಂದ್ರ ನಗರ, ತಾ: ಯಲ್ಲಾಪುರ, ಹಾಲಿ ಸಾ|| ಯಲ್ಲಾಪುರ ರೋಡ, ತಾ: ಮುಂಡಗೋಡ. ಈತನು ದಿನಾಂಕ: 10-04-2021 ರಂದು ಮಧ್ಯಾಹ್ನ 12-30 ಗಂಟೆಗೆ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ತನ್ನ ದಾಬಾದಲ್ಲ್ಲಿ ಸಾರ್ವಜನಿಕರಿಗೆ ಮದ್ಯ ಸೇವಿಸಲು ಅನುಕೂಲ ಮಾಡಿಕೊಟ್ಟಿದ್ದರಿಂದ ಪಿರ್ಯಾದಿಯವರು ಪಂಚರೊಂದಿಗೆ ಹಾಗೂ ಸಿಬ್ಬಂದಿಯವರೊಂದಿಗೆ ಸೇರ ದಾಳಿ ಮಾಡಿದ ಕಾಲಕ್ಕೆ 424/- ರೂಪಾಯಿ ಬೆಲೆಬಾಳುವ BAGPIPER ಅಂತಾ ಬರೆದ 180 ML ನ ಸರಾಯಿ ಇದ್ದ ಪೌcf ಗಳು-04 ಹಾಗೂ BAGPIPER ಅಂತಾ ಬರೆದ 180 ML ನ ಖಾಲಿ ಪೌcf ಗಳು-02, ಖಾಲಿ ನೀರಿನ ಬಾಟಲಿ-01, ಗ್ಲಾಸಗಳು-02. ಇವುಗಳೊಂದಿಗೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಬಸವರಾಜ ಮಬನೂರ, ಪಿ.ಎಸ್.ಐ, ಮುಂಡಗೋಡ ಪೊಲೀಸ್ ಠಾಣೆ ರವರು ದಿನಾಂಕ: 10-04-2021 ರಂದು 14-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 55/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಂಜುನಾಥ ತಂದೆ ಗಂಗಾಧರ ನುಲೆನೂರ, ಪ್ರಾಯ-39 ವರ್ಷ, ವೃತ್ತಿ-ಚಹಾ ವ್ಯಾಪಾರ, ಸಾ|| ಯಲ್ಲಾಪುರ ರಸ್ತೆ, ತಾ: ಮುಂಡಗೋಡ, 2]. ಮಹಮ್ಮದ್ ತಂದೆ ಹುಸೇನಕಾನ್ ಬೆಂಡಿಗೇರಿ, ಪ್ರಾಯ-38 ವರ್ಷ, ಸಾ|| ಮಾರಿಕಾಂಬಾ ನಗರ, ತಾ: ಮುಂಡಗೋಡ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: ; 10-04-2021 ರಂದು 15-15 ಗಂಟೆಗೆ ಮುಂಡಗೋಡ ತಾಲೂಕಿನ ಯಲ್ಲಾಪುರ ರಸ್ತೆಯಲ್ಲಿಯ ಪೋಸ್ಟ್ ಆಫೀಸ್ ಎದುರು ಸಾರ್ವಜನಿಕ ಸ್ಥಳದಲ್ಲಿ ನಿಂತು ರಸ್ತೆಯ ಮೇಲೆ ಓಡಾಡುವ ಜನರನ್ನು ಕರೆದು 01/- ರೂಪಾಯಿಗೆ 80/- ರೂಪಾಯಿ ಕೊಡುವ ಕರಾರಿನ ಮೇಲೆ ಒಬ್ಬರಿಗೆ ಅನ್ಯಾಯದ ಲಾಭ ಇನ್ನೊಬ್ಬರಿಗೆ ಅನ್ಯಾಯದ ನಷ್ಟ ಆಗುವಂತೆ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಓ.ಸಿ ಜೂಗಾರಾಟ ನಡೆಸಿ, ನಗದು ಹಣ 3,995/- ರೂಪಾಯಿ ಹಾಗೂ ಓ.ಸಿ ಜೂಗಾರಾಟದ ಸಲಕರಣೆಗಳಾದ ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-01, ಬಾಲ್ ಪೆನ್-01 ನೇದವುಗಳೊಂದಿಗೆ ಪಿರ್ಯಾದಿಯವರು ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ಮಾಡಿದ ಕಾಲಕ್ಕೆ ಸೆರೆ ಸಿಕ್ಕಿದ್ದಲ್ಲದೇ, ಓ.ಸಿ ಜೂಗಾರಾಟದಿಂದ ಸಂಗ್ರಹವಾದ ಹಣವನ್ನು ಓ.ಸಿ ಬುಕ್ಕಿಯಾದ ಆರೋಪಿ 2 ನೇಯವನಿಗೆ ನೀಡುತ್ತಿದ್ದುದಾಗಿ ತಿಳಿಸಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಬಸವರಾಜ ಮಬನೂರ, ಪಿ.ಎಸ್.ಐ, ಮುಂಡಗೋಡ ಪೊಲೀಸ್ ಠಾಣೆ ರವರು ದಿನಾಂಕ: 10-04-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 79/2021, ಕಲಂ: 279, 337, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರಸಾದ ತಂದೆ ಮಂಜುನಾಥ ಪಾಟೀಲ್, ಪ್ರಾಯ-25 ವರ್ಷ, ಸಾ|| ಕೆಸರೊಳ್ಳಿ, ತಾ: ಹಳಿಯಾಳ (ಮೋಟಾರ್ ಸೈಕಲ್ ನಂ: ಕೆ.ಎ-31/ಯು-7268 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 10-04-2021 ರಂದು 21-00 ಗಂಟೆಗೆ ಹಳಿಯಾಳ ತಾಲೂಕಿನ ಹವಗಿ ಗ್ರಾಮದ ಬಸ್ ನಿಲ್ದಾಣ ಹತ್ತಿರ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-31/ಯು-7268 ನೇದನ್ನು ಹಳಿಯಾಳ ಕಡೆಯಿಂದ ಅಳ್ನಾವರ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಾ, ತನ್ನ ಚಾಲನೆಯ ಮೇಲೆ ನಿಯಂತ್ರಣ ಕಳೆದುಕೊಂಡು ಹವಗಿ ಗ್ರಾಮದ ಕಡೆಯಿಂದ ಹವಗಿ ರಮೇಶ ನಾಯಕ ಇವರ ಅವಲಕ್ಕಿ ಮಿಲ್ ಕಡೆಗೆ ಸ್ಕೂಟಿ ನಂ: ಕೆ.ಎ-65/ಎಚ್-3698 ನೇದನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ಸಂದೀಪ ತಂದೆ ಅಣ್ಣಪ್ಪ, ಸಾ|| ಶಿವಮೊಗ್ಗ, ಹಾಲಿ ಸಾ|| ಹವಗಿ, ತಾ: ಹಳಿಯಾಳ ಇವರ ಸ್ಕೂಟಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಸಂದೀಪ ಇವರಿಗೆ ಮತ್ತು ಸಂದೀಪ ಇವರ ಸ್ಕೂಟಿ ಹಿಂಬದಿಯಲ್ಲಿ ಕುಳಿತಿದ್ದ ಸುರೇಶ ಮಡಿವಾಳ, ಸಾ|| ಹವಗಿ, ತಾ: ಹಳಿಯಾಳ ಇವರಿಗೆ ಸಾಧಾರಣ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ಸಾಧಾರಣ ಸ್ವರೂಪದ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಭೀಮರಾಯ ಚಿಣಗಿ, ಪ್ರಾಯ-47 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹವಗಿ, ತಾ: ಹಳಿಯಾಳ ರವರು ದಿನಾಂಕ: 09-04-2021 ರಂದು 23-00 ಗಂಟೆಗೆ ಠಾಣೆಯಲ್ಲಿ ದೂರು ದಾಖಲಿಸಿದ್ದನ್ನು ಠಾಣಾ ಗುನ್ನಾ ನಂ: 79/2021, ಕಲಂ: 279, 337 ಐಪಿಸಿ ನೇದರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಈ ಪ್ರಕರಣವು ತನಿಖೆಯಲ್ಲಿರುವಾಗ ಪ್ರಕರಣದ ಗಾಯಾಳುವಾದ ನಮೂದಿತ ಆರೋಪಿತನಿಗೆ ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರ ಕೊಡಿಸಿ, ಹೆಚ್ಚಿನ ಉಪಚಾರಕ್ಕಾಗಿ ಧಾರವಾಡ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಅಲ್ಲಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹೋಗಿ ಹೆಚ್ಚಿನ ಉಪಚಾರಕ್ಕಾಗಿ ದಾಖಲಿಸಿದ್ದು, ಹೀಗೆ ಉಪಚಾರದಲ್ಲಿದ್ದ ಆರೋಪಿತನು ಉಪಚಾರ ಫಲಕಾರಿಯಾಗದೇ ದಿನಾಂಕ: 10-04-2021 ರಂದು ಬೆಳಗ್ಗೆ 08-30 ಗಂಟೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರಿಂದ ಸದರ ಪ್ರಕರಣಕ್ಕೆ ಕಲಂ: 304(ಎ) ಐಪಿಸಿ ನೇದನ್ನು ಅಳವಡಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದು ಇರುತ್ತದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 10-04-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

 

 

 

 

 

ಇತ್ತೀಚಿನ ನವೀಕರಣ​ : 12-04-2021 02:06 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080