ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 10-04-2022
at 00:00 hrs to 24:00 hrs
ಗೋಕರ್ಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 20/2022, ಕಲಂ: 15(ಎ) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ಕೇತ್ರು ನಾಯ್ಕ, ಪ್ರಾಯ-61 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗಂಗಾವಳಿ, ಗೋಕರ್ಣ, ತಾ: ಕುಮಟಾ. ಈತನು ದಿನಾಂಕ: 10-04-2022 ರಂದು ಸಂಜೆ 18-15 ಗಂಟೆಯ ನಾಡುಮಾಸ್ಕೇರಿ ಗ್ರಾಮದ ಜೋಗನಗುಡ್ಡ ಕ್ರಾಸ್ ಎದುರಿನ ಗಂಗಾವಳಿ-ಗೋಕರ್ಣಕ್ಕೆ ಹೋಗುವ ರಸ್ತೆಯ ಪಕ್ಕದ ತಾತ್ಕಾಲಿಕ ಶೆಡ್ ಒಳಗೆ ಸಾರ್ವಜನಿಕರಿಗೆ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಮದ್ಯ ಸೇವಿಸಲು ಅನುವು ಮಾಡಿಕೊಟ್ಟಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿರ್ಯಾದಿಯವರು ಮತ್ತು ಅವರ ಸಿಬ್ಬಂದಿಯವರು ಕೂಡಿ ಮುತ್ತಿಗೆ ಹಾಕಿ ದಾಳಿ ಮಾಡಿದಾಗ 1). HAYWARDS CHEERS WHISKY 90 ML ಅಂತಾ ಬರೆದ ಮದ್ಯದ ಇರುವ ಸೀಲ್ಡ್ ಪ್ಯಾಕೆಟ್ ಗಳು-04, ಅ||ಕಿ|| 140.52/- ರೂಪಾಯಿ, 2). HAYWARDS CHEERS WHISKY 90 ML ಅಂತಾ ಬರೆದ ಮದ್ಯದ ಖಾಲಿ ಪ್ಯಾಕೆಟ್ ಗಳು-02, ಅ||ಕಿ|| 00.00/- ರೂಪಾಯಿ, 3). ಖಾಲಿ ಪ್ಲಾಸ್ಟಿಕ್ ಗ್ಲಾಸ್-02, ಅ||ಕಿ|| 00.00/- ರೂಪಾಯಿ, 4). ನಗದು ಹಣ 80/- ರೂಪಾಯಿಗಳೊಂದಿಗೆ ಸಿಕ್ಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಸುಧಾ ಟಿ. ಅಘನಾಶಿನಿ, ಡಬ್ಲ್ಯೂ.ಪಿ.ಎಸ್.ಐ (ತನಿಖೆ), ಗೋಕರ್ಣ ಪೊಲೀಸ್ ಠಾಣೆ ರವರು ದಿನಾಂಕ: 10-04-2022 ರಂದು 20-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 12/2022, ಕಲಂ: 279, 283, 337, 338, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಭೈರಪ್ಪಾ ತಂದೆ ವೆಂಕಟಸಿದ್ದಯ್ಯಾ, ಪ್ರಾಯ-27 ವರ್ಷ, ಸಾ|| ಹುಲಿಸಿದ್ದಗೌಡನ ದೊಡ್ಡಿ, ಹಾರೋಹಳ್ಳಿ, ತಾ: ಕನಕಪುರ ಜಿ: ರಾಮನಗರ (ಕಾರ್ ನಂ: ಕೆ.ಎ-05/ಎನ್.ಡಿ-0794 ನೇದರ ಚಾಲಕ), 2]. ಶಿವಾನಂದ ತಂದೆ ಜಿಗುಣಿ ಮೋರೆ, ಸಾ|| ದೇಶಪಾಂಡೆ ನಗರ, ಹಳಿಯಾಳ (ಲಾರಿ ನಂ: ಕೆ.ಎ-26/ಎ-9768 ನೇದರ ಚಾಲಕ). ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 10-04-2022 ರಂದು 02-30 ಗಂಟೆಗೆ ಹಳಿಯಾಳ ತಾಲೂಕಿನ ಡೋಮಗೇರಾ ಕ್ರಾಸ್ ಹತ್ತಿರ ಹಾದು ಹೋದ ರಾಜ್ಯ ಹೆದ್ದಾರಿ ಸಂಖ್ಯೆ-46 ನೇದರ ಮೇಲೆ ತನ್ನ ಬಾಬ್ತು ಕಾರ್ ನಂ: ಕೆ.ಎ-05/ಎನ್.ಡಿ-0794 ನೇದನ್ನು ಹಳಿಯಾಳ ಕಡೆಯಿಂದ ದಾಂಡೇಲಿ ಕಡೆಗೆ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ಅತೀವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ವಾಹನವನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳದೇ ಆರೋಪಿ 2 ನೇಯವನು ತನ್ನ ಬಾಬ್ತು ಲಾರಿ ನಂ: ಕೆ.ಎ-26/ಎ-9768 ನೇದನ್ನು ರಾಜ್ಯ ಹೆದ್ದಾರಿಯ ಮೇಲೆ ಯಾವುದೇ ಇಂಡಿಕೇಟರ್ ಸೂಚನೆ ನೀಡದೇ ನಿಲ್ಲಿಸಿದ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಕಾರಿನಲ್ಲಿದ್ದ ಪಿರ್ಯಾದಿಯ ಎರಡು ಕೈಗೆ ಮತ್ತು ಮೈಗೆ ಸಣ್ಣಪುಟ್ಟ ಗಾಯನೋವು ಪಡಿಸಿದ್ದಲ್ಲದೇ, ಪ್ರಶಾಂತ ಈತನಿಗೆ ಎರಡು ಕಾಲಿನ ಪಾದಕ್ಕೆ ತೆರಚಿದ ರಕ್ತಗಾಯ ಪಡಿಸಿ, ಕುಮಾರ ಈತನಿಗೆ ಎಡಬದಿಯ ಕಣ್ಣಿನ ಹುಬ್ಬಿನ ಮೇಲೆ ಗಂಭೀರ ಸ್ವರೂಪದ ರಕ್ತಗಾಯ ಪಡಿಸಿದ್ದಲ್ಲದೇ, ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ ಕೆಂಪೇಗೌಡ ಈತನಿಗೆ ತೀವೃ ಸ್ವರೂಪದ ಗಾಯನೋವು ಪಡಿಸಿ, ಸ್ಥಳದಲ್ಲಿಯೇ ಮರಣವುಂಟಾಗುವಂತೆ ಮಾಡಿದ್ದಲ್ಲದೇ, ಆರೋಪಿ 1 ನೇಯವನು ತನಗೂ ಸಹ ತೀವೃ ಸ್ವರೂಪದ ಗಾಯನೋವು ಪಡಿಸಿಕೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು, ವಾಹನಗಳನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ದರ್ಶನ ಬಿ. ಎನ್. ತಂದೆ ನಾಗರಾಜು, ಪ್ರಾಯ-24 ವರ್ಷ, ವೃತ್ತಿ-ವ್ಯವಹಾರ, ಸಾ|| ಬೈರೇಗೌಡನ ವಲಸೆ ಗ್ರಾಮ, ಹಾರೋಹಳ್ಳಿ, ತಾ: ಕನಕಪುರ, ಜಿ: ರಾಮನಗರ ರವರು ದಿನಾಂಕ: 10-04-2022 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 13/2022, ಕಲಂ: 279, 283, 337, 338, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಾನಸ ತಂದೆ ಮಾಂತೇಶ ಗುಂಜಟ್ಟಿ, ಪ್ರಾಯ-21 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| 10 ನೇ ಕ್ರಾಸ್, ನಿರ್ಮಲನಗರ, ಧಾರವಾಡ (ಕಾರ್ ನಂ: ಕೆ.ಎ-25/ಎಮ್.ಬಿ-8788 ನೇದರ ಚಾಲಕ). ಈತನು ದಿನಾಂಕ: 10-04-2022 ರಂದು ಬೆಳಿಗ್ಗೆ ತನ್ನ ಕಾರ್ ನಂ: ಕೆ.ಎ-25/ಎಮ್.ಬಿ-8788 ನೇದರಲ್ಲಿ ತನ್ನ ಸ್ನೇಹಿತರಾದ ಶ್ರೀಕರ್ ತಂದೆ ಪ್ರಮೋದ ಹಿಜೀಬ, ಸೂರಜ್ ತಂದೆ ಪ್ರಕಾಶ ಗಂಗೋಜಿ, ಶ್ರೇಯಸ್ ತಂದೆ ನಾಗೇಶ ಇಂಗಳೆ ರವರಿಗೆ ಕೂರಿಸಿಕೊಂಡು ಹಳಿಯಾಳ-ಕರ್ಕಾ ಮಾರ್ಗವಾಗಿ ಗಣೇಶಗುಡಿ ಕಡೆಗೆ ಹೋಗುತ್ತಿರುವಾಗ ಬೆಳಿಗ್ಗೆ 10-30 ಗಂಟೆಯ ಸುಮಾರಿಗೆ ಬೇಡರಶಿರಗೂರು ಕ್ರಾಸ್ ಹತ್ತಿರ ತಿರುವಿನಿಂದ ಕೂಡಿದ ರಾಜ್ಯ ಹೆದ್ದಾರಿಯ ಮೇಲೆ ತನ್ನ ಕಾರನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ, ಕಾರನ್ನು ನಿಯಂತ್ರಿಸಲಾಗದೇ ಒಮ್ಮೇಲೆ ರಾಜ್ಯ ಹೆದ್ದಾರಿಯ ಬಲಬದಿಯ ಗಟಾರದಲ್ಲಿ ಪಲ್ಟಿ ಪಡಿಸಿ ಅಪಘಾತ ಪಡಿಸಿ, ತನ್ನ ಕಾರಿನಲ್ಲಿದ್ದ ಶ್ರೇಯಸ್ ತಂದೆ ನಾಗೇಶ ಇಂಗಳೆ, ಪ್ರಾಯ-21 ವರ್ಷ, ಸಾ|| ಗೌಳಿ ಗಲ್ಲಿ, 2 ನೇ ಕ್ರಾಸ್, ದಾಜಿಬಾನ ಪೇಟೆ, ಹುಬ್ಬಳ್ಳಿ ಈತನಿಗೆ ಮೂಗಿನ ಹತ್ತಿರ, ಬಲಗಡೆಯ ಗಲ್ಲದ ಮೇಲೆ ತೆರಚಿದ ರಕ್ತದ ಗಾಯನೋವು ಪಡಿಸಿ, ತನ್ನ ಕಾರ್ ಮರ್ದಿನ ಭಾಗ ಪೂರ್ತಿಯಾಗಿ ಜಖಂಗೊಳ್ಳುವಂತೆ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ಅಕಿಲ್ ತಂದೆ ರಾಘವೇಂದ್ರ ಕಟ್ಟಿ, ಪ್ರಾಯ-21 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಎಲ್.ಐ.ಜಿ 126, 9 ನೇ ಕ್ರಾಸ್, ನವನಗರ, ಹುಬ್ಬಳ್ಳಿ ರವರು ದಿನಾಂಕ: 10-04-2022 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 10-04-2022
at 00:00 hrs to 24:00 hrs
ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ....
======||||||||======