ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 10-12-2021
at 00:00 hrs to 24:00 hrs
ಯಲ್ಲಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 220/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರೇಶಮ್‍ಸಿಂಗ್ ತಂದೆ ಬುಟ್ಟಾಸಿಂಗ್ ಬಟ್ಟಿ, ಪ್ರಾಯ-38 ವರ್ಷ, ವೃತ್ತಿ-ಚಾಲಕ, ಸಾ|| ಆರ್.ಟಿ.ಓ ಆಪೀಸ್ ಹತ್ತಿರ, ಪೋಚೂರ್ ನಾಕಾ, ಗೊಂದಿಯಾ, ನಾಗಪುರ, ಮಹಾರಾಷ್ಟ್ರ (ಲಾರಿ ನಂ: ಎಮ್.ಎಚ್-33/4421 ನೇದರ ಚಾಲಕ). ಈತನು ದಿನಾಂಕ: 10-12-2021 ರಂದು 10-30 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಶಿರಲೆ ಫಾಲ್ಸ್ ಹತ್ತಿರ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಬಾಬ್ತು ಲಾರಿ ನಂ: ಎಮ್.ಎಚ್-33/4421 ನೇದನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದು, ಲಾರಿಯ ಮೇಲಿನ ನಿಯಂತ್ರಣ ತಪ್ಪಿ ರಸ್ತೆಯ ಬಲಬದಿಯ ಮಗ್ಗುಲಾಗಿ ಪಲ್ಟಿ ಕೆಡವಿ ಅಪಘಾತ ಪಡಿಸಿ ಲಾರಿಯನ್ನು ಜಖಂಗೊಳಿಸಿದ್ದಲ್ಲದೇ, ರಸ್ತೆಯ ಮೇಲೆ ಪಲ್ಟಿ ಕೆಡವಿದ್ದರಿಂದ ಇತರೇ ವಾಹನಗಳ ಸಂಚಾರಕ್ಕೆ ಅಡೆ ತಡೆಯಾಗುವಂತೆ ಮಾಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಆನಂದ ಡಿ. ಪವಾಸ್ಕರ, ಎ.ಎಸ್.ಐ, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 10-12-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಶಿರಸಿ ನಗರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 89/2021, ಕಲಂ: 15(ಎ) ಸಹಿತ 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಅಣ್ಣಪ್ಪ ತಂದೆ ವೆಂಕಟೇಶ ಮುರ್ಡೇಶ್ವರ, ಪ್ರಾಯ-31 ವರ್ಷ, ವೃತ್ತಿ-ಪೇಂಟಿಂಗ್ ಕೆಲಸ, ಸಾ|| ಕೋಟೆಗಲ್ಲಿ, ತಾ: ಶಿರಸಿ. ಈತನು ದಿನಾಂಕ: 10-12-2021 ರಂದು 11-30 ಗಂಟೆಯ ಸುಮಾರಿಗೆ ಶಿರಸಿ ಶಹರದ ಡ್ರೈವರಕಟ್ಟಾದ ಸಾರ್ವಜನಿಕ ಸ್ಥಳದಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಜನರಿಗೆ ಮುಕ್ತವಾಗಿ 1). HAYWARDS CHEERS WHISKY ಅಂತಾ ಲೇಬಲ್ ಇದ್ದ 90 ML ಅಳತೆಯ ಮದ್ಯದ ಪ್ಯಾಕೆಟ್ ಗಳು-12, ಅ||ಕಿ|| 421.56/- ರೂಪಾಯಿ, 2). HAYWARDS CHEERS WHISKY ಅಂತಾ ಲೇಬಲ್ ಇದ್ದ 90 ML ಅಳತೆಯ ಖಾಲಿ ಪ್ಯಾಕೆಟ್-02, ಅ||ಕಿ|| 00.00/- ರೂಪಾಯಿ, ಮದ್ಯವನ್ನು ಕುಡಿಯಲು ಬಳಸಿದ ಗಾಜಿನ ಗ್ಲಾಸ್-02, ಅ||ಕಿ|| 00.00/- ರೂಪಾಯಿ, ನೀರಿನ ಖಾಲಿ ಬಾಟಲಿಗಳು-01, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ಅನಧೀಕೃತವಾಗಿ ಮದ್ಯವನ್ನು ಕುಡಿಯಲು ಅವಕಾಶ ಮಾಡಿಕೊಟ್ಟಾಗ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಮೋಹಿನಿ ಎಸ್. ಶೆಟ್ಟಿ, ಪಿ.ಎಸ್.ಐ (ತನಿಖೆ), ಶಿರಸಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 10-12-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 100/2021, ಕಲಂ: 5, 7, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅದ್ಯಾದೇಶ-2020 ಮತ್ತು ಕಲಂ: 11(1)(ಆ) ಪ್ರಾಣಿ ಹಿಂಸಾ ನಿರ್ಮೂಲನಾ ಕಾಯ್ದೆ-1960 ಮತ್ತು ಕಲಂ: 192(ಎ) ಐ.ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತರು 1]. ಹೈದರ್ ಖಾನ್ ತಂದೆ ಅಕ್ಬರಖಾನ್, ಪ್ರಾಯ-46 ವರ್ಷ, ವೃತ್ತಿ-ಚಾಲಕ, ಸಾ|| 1 ನೇ ಕ್ರಾಸ್, ಕಸ್ತೂರಾಬಾ ನಗರ, ತಾ: ಶಿರಸಿ, 2]. ಷಾ ಜಹಾನ್ ತಂದೆ ಗಫಾರ್ ಸಾಬ್ ವರ್ದಿ, ಪ್ರಾಯ-52 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಯಲ್ಲಮ್ಮನ ಓಣಿ, ಕಸ್ತೂರಾಬಾ ನಗರ, ತಾ: ಶಿರಸಿ, 3]. ಅಬ್ದುಲ್ ತವಾಬ್ ತಂದೆ ಇಲಿಯಾಸ್ ಖಾಜಿ, ಸಾ|| ಕೋಟೆಗಲ್ಲಿ, ತಾ: ಶಿರಸಿ. ಈ ನಮೂದಿತ ಆರೋಪಿತರು ದಿನಾಂಕ: 10-12-2021 ರಂದು 13-20 ಗಂಟೆಗೆ ಮಹೀಂದ್ರಾ ಬೊಲೆರೋ ಪಿಕಪ್ ವಾಹನ ನಂ: ಕೆ.ಎ-31/6035 ನೇದರ ಹಿಂಬದಿಯ ಬಾಡಿಯಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುವ ಯಾವುದೇ ಪರವಾನಿಗೆ ಪತ್ರ, ಜಾನುವಾರು ಖರೀದಿ ಪತ್ರ ಹಾಗೂ ಪಶು ವೈದ್ಯಾಧಿಕಾರಿಗಳ ತಪಾಸಣೆ ಪತ್ರ ಇಲ್ಲದೇ ಅಕ್ರಮವಾಗಿ 1). ಕಪ್ಪು ಬಣ್ಣದ ದೇಶಿ ತಳಿಯ ಹೋರಿ-01, ಅ||ಕಿ|| 9,000/- ರೂಪಾಯಿ, 2). ಕಪ್ಪು ಬಣ್ಣದ ಸಿಂದಿ ಕ್ರಾಸ್ ತಳಿಯ ಹೋರಿ-01, ಅ||ಕಿ|| 9,000/- ರೂಪಾಯಿ, 3). ಕಪ್ಪು ಬಣ್ಣದ ದೇಶಿ ತಳಿಯ ಹೋರಿ-01, ಅ||ಕಿ|| 8,000/- ರೂಪಾಯಿ ಮೌಲ್ಯದ ಜಾನುವಾರುಗಳನ್ನು ತುಂಬಿಕೊಂಡು ಅವುಗಳಿಗೆ ಆಹಾರ ನೀಡದೇ ಮಲಗಲು ಸಾಧ್ಯವಾಗದ ರೀತಿಯಲ್ಲಿ ಹಳದಿ ಬಣ್ಣದ ನೈಲಾನ್ ದಾರದಿಂದ ವಾಹನದ ಬಾಡಿ ಭಾಗಕ್ಕೆ ಬಿಗಿಯಾಗಿ ಕಟ್ಟಿ ಹಿಂಸಾತ್ಮಕವಾಗಿ ತುಂಬಿಕೊಂಡು ವಧೆ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವಾಗ ಶಿರಸಿ ನಗರದ ಹುಸರಿ ರಸ್ತೆಯಲ್ಲಿ ಕಸ್ತೂರಾಬಾ ನಗರ ಕ್ರಾಸ್ ಹತ್ತಿರ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭೀಮಾಶಂಕರ ಸಿನ್ನೂರ ಸಂಗಣ್ಣ, ಪಿ.ಎಸ್.ಐ, ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 10-12-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಶಿರಸಿ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 122/2021, ಕಲಂ: 323, 341 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ ಇಬ್ಬರೂ ಬುರ್ಕಾ ಹಾಕಿಕೊಂಡ ಬಂದ ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 08-12-2021 ರಂದು ಪಿರ್ಯಾದಿಯವರು ತನ್ನ ಮೋಟಾರ್ ಸೈಕಲಿನಲ್ಲಿ ಗಡಿಹಳ್ಳಿ ಕ್ರಾಸಿನಿಂದ ಬಿಳಿಗಿರಿಕೊಪ್ಪದಲ್ಲಿನ ಮನೆಗೆ ಹೊರಟು ಸಂಜೆ 07-30 ಗಂಟೆಗೆ ಬಿಳಿಗಿರಿಕೊಪ್ಪದ ಸಮೀಪ ತಲುಪಿದಾಗ ಬುರ್ಕಾ ಹಾಕಿಕೊಂಡು ಬಂದ ನಮೂದಿತ ಆರೋಪಿತರು ಪಿರ್ಯಾದಿಗೆ ಅಡ್ಡಗಟ್ಟಿ ತಡೆದು ನಿಲ್ಲಿಸಿ, ಅವರಲ್ಲಿ ಒಬ್ಬನು ಹಿಡಿದುಕೊಂಡು ಇನ್ನೊಬ್ಬನು ಕೈಯಿಂದ ಹೊಟ್ಟೆಗೆ ಮೇಲಿಂದ ಮೇಲೆ ಗುದ್ದಿ ಹೊಡೆದಿದ್ದು, ಪಿರ್ಯಾದಿಯು ಚೀರಿ ಹಿಡಿದುಕೊಂಡಿದ್ದವನ ಕೈಗೆ ಕಚ್ಚಿದಾಗ ಅವನು ಕೂಡ ಹಲ್ಲೆ ಮಾಡಿದ್ದು, ಆ ವೇಳೆ ಪಿರ್ಯಾದಿಯ ಊರಿನಿಂದ ಮೋಟಾರ್ ಸೈಕಲ್ ಒಂದು ಬರುವುದನ್ನು ಕಂಡು ಆರೋಪಿತರು ಅರಣ್ಯದೊಳಗೆ ಓಡಿ ತಪ್ಪಿಸಿಕೊಂಡಿರುತ್ತಾರೆ. ಅವರು ಸದೃಢರಿದ್ದು ಒಬ್ಬ ಎತ್ತರ ಮತ್ತೊಬ್ಬ ಕುಳ್ಳನಿರುತ್ತಾನೆ. ಅವರಿಗೆ ಪುನಃ ನೋಡಿದರೆ ಗುರುತಿಸುತ್ತೇನೆ. ಕಾರಣ ಅವರನ್ನು ಪತ್ತೆ ಮಾಡಿ, ಅವರು ತನ್ನ ಮೇಲೆ ಹಲ್ಲೆ ಮಾಡಲು ಕಾರಣ ತಿಳಿದು ಅವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮೆಹಬೂಬಸಾಬ್ ಗೂಡುಸಾಬ್ ಯಲವಟ್ಟಿ, ಪ್ರಾಯ-58 ವರ್ಷ, ವೃತ್ತಿ-ವ್ಯಾಪಾರ, ಸಾ|| ಬಿಳಿಗಿರಿಕೊಪ್ಪ, ಕೆರೆಕೊಪ್ಪ ಗ್ರಾಮ, ಪೋ: ಉಂಚಳ್ಳಿ, ತಾ: ಶಿರಸಿ ರವರು ದಿನಾಂಕ: 10-12-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹಳಿಯಾಳ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 186/2021, ಕಲಂ: 287, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಪ್ಪಾರಾವ್ ತಂದೆ ನಾಗೇಂದ್ರ ಕೋಕಿತ್ಕರ, ಪ್ರಾಯ-34 ವರ್ಷ, ವೃತ್ತಿ-ಚಾಲಕ, ಸಾ|| ಶಿವಾಜಿ ಗ್ರೌಂಡ್ ಹತ್ತಿರ, ತಾ: ಹಳಿಯಾಳ (ಟ್ರ್ಯಾಕ್ಟರ್ ನಂ: ಕೆ.ಎ-65/ಟಿ-0791 ಹಾಗೂ ಟ್ರಾಲಿ ನಂ: ಕೆ.ಎ-65/ಟಿ-1645 ನೇದರ ಚಾಲಕ). ಈತನು ದಿನಾಂಕ: 09-12-2021 ರಂದು ಟ್ರಾಲಿಯಲ್ಲಿ ಕಬ್ಬು ಬೆಳೆ ಲೋಡ್ ತುಂಬಿಕೊಂಡು, ಹಳಿಯಾಳ ತಾಲೂಕಿನ ಹುಲ್ಲಟ್ಟಿ ಗ್ರಾಮದ ಆರ್.ವಿ.ಡಿ ಕಾಲೇಜ್ ಹತ್ತಿರ ಹಳಿಯಾಳ-ಕೆಸರೊಳ್ಳಿ ಡಾಂಬರ್ ರಸ್ತೆಯ ಮೇಲೆ ಯಾವುದೇ ಸನ್ನೆ ಸೂಚನೆಗಳನ್ನು ಅಳವಡಿಸದೇ, ಡಾಂಬರ್ ರಸ್ತೆಯಲ್ಲಿ ಹಳಿಯಾಳ ಕಡೆಗೆ ಮುಖ ಮಾಡಿ ಸದರ ಟ್ರ್ಯಾಕ್ಟರ್ ಅನ್ನು ನಿರ್ಲಕ್ಷ್ಯತನದಿಂದ ನಿಲ್ಲಿಸಿಟ್ಟಿದ್ದರಿಂದ, ಕೆಸರೊಳ್ಳಿ ಕಡೆಯಿಂದ ಹಳಿಯಾಳ ಕಡೆಗೆ ರಸ್ತೆಯ ಸೈಡಿನಿಂದ ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-65/ಇ-8897 ನೇದರ ಸವಾರನಾದ ಸಂತೋಷ್ ತಂದೆ ಬಸವರಾಜ ವಡ್ಡರ, ಈತನು ಚಾಲನೆ ಮಾಡಿಕೊಂಡು ಬಂದು ರಾತ್ರಿ 23-45 ಗಂಟೆಗೆ ಸದರ ಟ್ರ್ಯಾಕ್ಟರ್ ಟ್ರಾಲಿಗೆ ಡಿಕ್ಕಿ ಪಡಿಸಿಕೊಂಡ ಪರಿಣಾಮ ಈ ಅಪಘಾತದಿಂದ ಮೋಟಾರ್ ಸೈಕಲ್ ಚಾಲಕನಿಗೆ ತಲೆಗೆ, ಬಾಯಿಗೆ, ದವಡೆಗೆ ಗಂಭೀರ ರಕ್ತಗಾಯ ಹಾಗೂ ಬಲಗೈಗೆ ಒಳನೋವು ಆಗಿದ್ದು, ಅಲ್ಲದೇ ಮೋಟಾರ್ ಸೈಕಲ್ ಜಖಂಗೊಂಡಿದ್ದು, ಈ ಅಪಘಾತವು ಟ್ರ್ಯಾಕ್ಟರ್ ನಂ: ಕೆ.ಎ-65/ಟಿ-0791 ಹಾಗೂ ಟ್ರಾಲಿ ನಂ: ಕೆ.ಎ-65/ಟಿ-1645 ನೇದರ ಆರೋಪಿ ಚಾಲಕನು ಯಾವುದೇ ಸನ್ನೆ ಸೂಚನೆ ಅಳವಡಿಸದೇ ನಿರ್ಲಕ್ಷ್ಯತನದಿಂದ ಡಾಂಬರ್ ರಸ್ತೆಯಲ್ಲಿ ಟ್ರ್ಯಾಕ್ಟರ್ ನಿಲ್ಲಿಸಿಟ್ಟಿದ್ದರಿಂದ ಸಂಭವಿಸಿರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ಗೋವಿಂದಪ್ಪ ವಡ್ಡರ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಿದ್ಧರಾಮೇಶ್ವರ ಗಲ್ಲಿ, ಹಳಿಯಾಳ ಶಹರ ರವರು ದಿನಾಂಕ: 10-12-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 10-12-2021
at 00:00 hrs to 24:00 hrs
ಶಿರಸಿ ಗ್ರಾಮೀಣ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 36/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಕುಮಾರ: ಲಖನ್ ತಂದೆ ಗಜಾನನ ಶಿಂಧೆ, ಪ್ರಾಯ-16 ವರ್ಷ, ವೃತ್ತಿ-ಪಿಯುಸಿ ಫಸ್ಟ್ ಇಯರ್ ಕಾಮರ್ಸ್ ವಿದ್ಯಾರ್ಥಿ, ಸಾ|| ಗಾಂಧಿನಗರ, 6 ನೇ ಕ್ರಾಸ್, ತಾ: ಶಿರಸಿ. ಪಿರ್ಯಾದಿಯವರ ಮಗನಾದ ಈತನು ದಿನಾಂಕ: 09-12-2021 ರಂದು ಬೆಳಿಗ್ಗೆ 09-30 ಗಂಟೆಯ ಸುಮಾರಿಗೆ ಮನೆಯಿಂದ ಕಾಲೇಜಿಗೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದವನು, ತನ್ನ ಕಾಲೇಜಿನ ಸ್ನೇಹಿತರಾದ ಎಡ್ರಿನ್, ಪ್ರಾನ್ಸಿಸ್, ಲೋಹಿತ್, ಯೋಗೇಶ್ವರ, ಕೇದಾರ, ಪ್ರಜ್ವಲ್, ಶರಣ ಮತ್ತು ಆದರ್ಶ ಎಂಬುವವರೊಂದಿಗೆ ಕೆಂಗ್ರೆ ಹೊಳೆಗೆ ಈಜಾಡಲು ಹೋಗಿದ್ದಾಗ, ಮಧ್ಯಾಹ್ನ ಸುಮಾರು 12-30 ಗಂಟೆಗೆ ಸರಿಯಾಗಿ ಈಜು ಬಾರದಿದ್ದ ಪಿರ್ಯಾದಿಯ ಮಗನು ಕೆಂಗ್ರೆ ಹೊಳೆಯ ಆಳವಾದ ಹರಿಯುವ ನೀರಿನ ಸುಳಿಯಲ್ಲಿ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿರುವುದಾಗಿ ಮೇಲ್ನೋಟಕ್ಕೆ ಕಂಡು ಬರುತ್ತದೆಯಾದರೂ ನನ್ನ ಮಗನ ಸಾವಿನಲ್ಲಿ ಕೂಲಂಕೂಷವಾದ ತನಿಖೆಯಾಗಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗಜಾನನ ತಂದೆ ಮಾದೇವ ಶಿಂಧೆ, ಪ್ರಾಯ-49 ವರ್ಷ, ವೃತ್ತಿ-ಆಟೋ ಚಾಲಕ. ಸಾ|| ಗಾಂಧಿನಗರ, 6 ನೇ ಕ್ರಾಸ್, ತಾ: ಶಿರಸಿ ರವರು ದಿನಾಂಕ: 10-12-2021 ರಂದು 20-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹಳಿಯಾಳ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 34/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಲಕ್ಷ್ಮಣ ತಂದೆ ಶಿವರಾಯ ಮಾನೆ, ಪ್ರಾಯ-62 ವರ್ಷ, ವೃತ್ತಿ-ಕಟಿಂಗ್ ಕೆಲಸ, ಸಾ|| ಮುರ್ಕವಾಡ, ತಾ: ಹಳಿಯಾಳ. ಪಿರ್ಯಾದಿಯವರ ತಂದೆಯಾದ ಇವರು ಕಳೆದ 6-7 ವರ್ಷಗಳಿಂದ ಶುಗರ್ ಬಿಪಿ ರೋಗಕ್ಕೆ ಒಳಗಾದವರು, ದಿನಾಂಕ: 10-12-2021 ರಂದು 11-00 ಗಂಟೆಗೆ ಎದೆ ನೋವು ಅಂತಾ ಹೇಳಿದ್ದಕ್ಕೆ ಮುರ್ಕವಾಡ ಗ್ರಾಮದಿಂದ ಒಂದು ಖಾಸಗಿ ವಾಹನದ ಮೇಲಾಗಿ ಬೆಳಗ್ಗೆ 11-15 ಗಂಟೆಯಿಂದ 11-30 ಗಂಟೆಯ ನಡುವಿನ ಅವಧಿಯಲ್ಲಿ ಚಿಕಿತ್ಸೆಗಾಗಿ ಹಳಿಯಾಳದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾಗ ದಾರಿಯ ಮಧ್ಯದಲ್ಲಿ ಹೃದಯಾಘತದಿಂದಲೋ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿರುತ್ತಾರೆ. ಇದರ ಹೊರತು ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಂಡು ಮೃತದೇಹವನ್ನು ಬಿಟ್ಟು ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸಂಜು ತಂದೆ ಲಕ್ಷ್ಮಣ ಮಾನೆ, ಪ್ರಾಯ-33 ವರ್ಷ, ವೃತ್ತಿ-ಕಟಿಂಗ್ ಕೆಲಸ, ಸಾ|| ಮುರ್ಕವಾಡ, ತಾ: ಹಳಿಯಾಳ ರವರು ದಿನಾಂಕ: 10-12-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಸಿದ್ದಾಪುರ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 41/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಶಶಿಕಲಾ ಕೋಂ. ನರೇಂದ್ರ ನಾಯ್ಕ, ಪ್ರಾಯ-45 ವರ್ಷ, ವೃತ್ತಿ-ಗೃಹಿಣಿ, ಸಾ|| ಹೊಸೂರು, ತಾ: ಸಿದ್ದಾಪುರ. ಪಿರ್ಯಾದಿಯ ಅಕ್ಕಳಾದ ಇವಳು ಕಳೆದ 2 ವರ್ಷಗಳ ಹಿಂದೆ ಅವಳ ಗಂಡನ ಮನೆಯಲ್ಲಿ ಕೊಟ್ಟಿಗೆ ಸುಟ್ಟು ಹೋಗಿದ್ದನ್ನು ಮನಸ್ಸಿಗೆ ಹಚ್ಚಿಕೊಂಡಿದ್ದಳು, ಅಲ್ಲದೇ ಟೈಫಾಯ್ಡ್ ಉಂಟಾಗಿ ಗದ್ದೆ ಕೆಲಸಗಳೆಲ್ಲವೂ ಬಾಕಿ ಉಳಿದವು ಅಂತಲೂ ಮತ್ತು ತನಗೆ ಗಂಡು ಸಂತಾನವಿಲ್ಲದೇ ಇದ್ದುದನ್ನು, ಹೀಗೆ ಬೇರೆ ಬೇರೆ ಚಿಂತೆಗಳನ್ನು ಮನಸ್ಸಿಗೆ ಹಚ್ಚಿಕೊಂಡು ಮಾನಸಿಕ ಅಸ್ವಸ್ಥಳಾಗಿದ್ದಳು. ಈ ಬಗ್ಗೆ ಅವಳ ಗಂಡ ಶಿವಮೊಗ್ಗಾದ ಶ್ರೀಧರ ನರ್ಸಿಂಗ್ ಹೋಮ್ (ಮಾನಸಿಕ ಆಸ್ಪತ್ರೆ) ಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಹೀಗಿರುವಲ್ಲಿ ದಿನಾಂಕ: 09-12-2021 ರಂದು ಥಂಡಿ ಜ್ವರ ಉಂಟಾಗಿದ್ದು, ಈ ಬಗ್ಗೆ ಸಿದ್ದಾಪುರದ ಪಂಡಿತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಳು. ತದನಂತರ ರಾತ್ರಿ ಊಟ ಮಾಡಿ ಮನೆಯಲ್ಲಿ ಮಲಗಿದ್ದವಳು, ರಾತ್ರಿ 00-30 ಗಂಟೆಯಿಂದ ಬೆಳಿಗ್ಗೆ 06-00 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಿಂದ ಸ್ವಲ್ಪ ದೂರದಲ್ಲಿರುವ ಹೊಸೂರು ಡ್ಯಾಮ್ ನಲ್ಲಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮಾಬ್ಲೇಶ್ವರ ತಂದೆ ಗಣಪತಿ ನಾಯ್ಕ, ಪ್ರಾಯ-38 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ವಾಟಗಾರ, ಗುಂಜಗೋಡ ಗ್ರಾಮ, ತಾ: ಸಿದ್ದಾಪುರ ರವರು ದಿನಾಂಕ: 10-12-2021 ರಂದು 04-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======