ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 10-02-2021

at 00:00 hrs to 24:00 hrs

 

ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 04/2021, ಕಲಂ: 420 ಐಪಿಸಿ ಹಾಗೂ ಕಲಂ: 66(ಸಿ)(ಡಿ) ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈ ನಮೂದಿತ ಆರೋಪಿತರು ಪಿರ್ಯಾದಿಯವರ ಇ-ಮೇಲ್ ಖಾತೆಗೆ ಇ-ಮೇಲ್ ಮುಖಾಂತರ ಸಂಪರ್ಕಿಸಿ, ಅವರಿಗೆ ಅಮೇರಿಕಾ ದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿದ್ದು, ಅದನ್ನು ಪಿರ್ಯಾದಿಯವರು ನಂಬಿ ಅವರು ನೀಡಿರುವ ಮೊಬೈಲ್ ನಂಬರಿಗೆ ಸಂಪರ್ಕಿಸಿದ್ದು, ಸದ್ರಿ ಆರೋಪಿತರು ಪಿರ್ಯಾದಿಯವರಿಗೆ ವಾಟ್ಸಪ್ ಮುಖಾಂತರ ಪ್ರಶ್ನೆ ಪತ್ರಿಕೆಯನ್ನು ಕಳುಹಿಸಿಕೊಟ್ಟು ಅದಕ್ಕೆ ಉತ್ತರಿಸುವಂತೆ ಹೇಳಿದ್ದು, ಅದರಂತೆ ಪಿರ್ಯಾದಿಯವರು ಅವರು ನೀಡಿರುವ ಪ್ರಶ್ನೆ ಪತ್ರಿಕೆಗೆ ಉತ್ತರವನ್ನು ಕಳುಹಿಸಿಕೊಟ್ಟಿರುತ್ತಾರೆ. ನಂತರದಲ್ಲಿ ಆರೋಪಿತರು ಪಿರ್ಯಾದಿಯವರಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿ, ಅವರಿಂದ ಪಾಸ್‍ಪೋರ್ಟ್ ಚಾರ್ಜ್, ವಿಸಾ ಚಾರ್ಜ್, ಮೆಡಿಕಲ್ ರಿಪೋರ್ಟ್ ಅಪ್ಲಿಕೇಶನ್ ಫೀಸ್, ಎನ್.ಓ.ಸಿ ಫೀಸ್, ಹೆಲ್ತ್ ಇನ್ಸುರೆನ್ಸ್ ಫೀಸ್ ಇತ್ಯಾದಿ ಹೀಗೆ ವಿವಿಧ ತೆರಿಗೆ, ಸುಂಕ ಕಟ್ಟುವಂತೆ ತಿಳಿಸಿದ ಮೇರೆಗೆ ಅದರಂತೆ ಪಿರ್ಯಾದಿಯವರು ಅವರ ಮಾತನ್ನು ನಂಬಿ, ಅವರು ಹೇಳಿದಂತೆ ಅವರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ದಿನಾಂಕ: 13-08-2020 ರಿಂದ ದಿನಾಂಕ: 17-01-2021 ರವರೆಗೆ ಒಟ್ಟೂ 57,14,749/- ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದು, ಆದರೆ ಆರೋಪಿತರು ಪಿರ್ಯಾದಿಯವರಿಗೆ ಯಾವುದೇ ಉದ್ಯೋಗ ಕೊಡಿಸದೆ ಮೋಸ ಮಾಡಿದ ಬಗ್ಗೆ ಪಿರ್ಯಾದಿ ಕುಮಾರಿ: ನೇತ್ರಾವತಿ ತಂದೆ ನಾಗಪ್ಪಾ ಗೌಡಾ, ಪ್ರಾಯ-25 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಮುಗಳಿ, ಗುಣವಂತೆ, ತಾ: ಹೊನ್ನಾವರ ರವರು ದಿನಾಂಕ: 10-02-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 27/2021, ಕಲಂ: 229(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಚನ್ನಬಸಪ್ಪ ಕಿರಣ ಅನೂಪ @ ಅನುಪ ಕಿರಣ, ಸಾ|| 11/2, 1 ನೇ ಮಹಡಿ, ನಂಜಪ್ಪ ಮೆನ್ಸನ್, ಬಿ.ಟಿ ರೋಡ್, ಮಲ್ಲೇಶ್ವರಂ, ಬೆಂಗಳೂರು-560003, ಕಚೇರಿ ವಿಳಾಸ|| ಬಿಲ್ಡಿಂಗ್ 5/1, 3ಬಿ ರಿಚ್ ಬಿಲ್ಡಿಂಗ್, ರಿಚ್ಮಂಡ್ ರೋಡ್, ಬೆಂಗಳೂರು-5600025. ನಮೂದಿತ ಆರೋಪಿತನು ಕಾರವಾರದ ಜೆ.ಎಮ್.ಎಫ್.ಸಿ 2 ನೇ ನ್ಯಾಯಾಲಯದ ಸಿ.ಸಿ ನಂ: 07/2017 ನೇದರ 2 ನೇ ಆರೋಪಿತನಾಗಿದ್ದು, ಸದರಿ ಆರೋಪಿತನು ಮಾನ್ಯ ನ್ಯಾಯಾಲಯದಿಂದ ದಿನಾಂಕ: 05-04-2017 ರಂದು ಶರತ್ತು ಬದ್ಧ ಜ್ಯಾಮೀನಿನ ಮೇಲೆ ಬಿಡುಗಡೆ ಹೊಂದಿದವನು, ನ್ಯಾಯಾಲಯವು ನೀಡಿದ ಮುದ್ದತ್ತಿಗೆ ಯಾವುದೇ ಸಕಾರಣ ನೀಡದೆ ಗೈರು ಹಾಜರಾಗಿದ್ದು, ದಿನಾಂಕ: 21-07-2018 ರಂದು ನ್ಯಾಯಾಲಯವು ಸದರಿ ಆರೋಪಿತನ ಮೇಲೆ ಜಾಮೀನು ರಹಿತ ವಾರಂಟ್ ಹೊರಡಿಸಿದ್ದು, ಆರೋಪಿತನು ನ್ಯಾಯಾಲಯವು ನೀಡಿದ ಮುದ್ದತ್ತಿಗೆ ಹಾಜರಾಗದೇ ತಲೆ ಮರೆಸಿಕೊಂಡು, ನ್ಯಾಯಾಲಯವು ಜ್ಯಾಮೀನು ನೀಡುವಾಗ ವಿಧಿಸಿದ ಷರತ್ತನ್ನು ಉಲ್ಲಂಘಿಸಿದ ಬಗ್ಗೆ ಪಿರ್ಯಾದಿ ಶ್ರೀ ಗಣಪತಿ ತಂದೆ ಜಟ್ಟಿ ಪಟಗಾರ, ಪ್ರಾಯ-49 ವರ್ಷ, ವೃತ್ತಿ-ಶಿರಸ್ತೇದಾರರು, ಸಾ||  ಜೆ.ಎಮ್.ಎಫ್.ಸಿ 2 ನೇ ನ್ಯಾಯಾಲಯ, ಕಾರವಾರ ರವರು ದಿನಾಂಕ: 10-02-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 30/2021, ಕಲಂ: 9B(1)(b) ಸ್ಫೋಟಕ ಅಧಿನಿಯಮ-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಾಣಮ್ಮ ಗಂಡ ಗಣಪತಿ ನಾಯಕ, 2]. ಹರ್ಷನ್ ತಂದೆ ಗಣಪತಿ ನಾಯಕ, 3]. ದರ್ಶನ ತಂದೆ ಗಣಪತಿ ನಾಯಕ, 4]. ರೋಷನ್ ತಂದೆ ಗಣಪತಿ ನಾಯಕ, ಸಾ|| (ಎಲ್ಲರೂ) ಶಿರಗುಂಜಿ, ಅಗಸೂರು, ತಾ: ಅಂಕೋಲಾ. ಈ ನಮೂದಿತ ಆರೋಪಿತರು ಅಂಕೋಲಾ ತಾಲೂಕಿನ ಶಿರಗುಂಜಿ ಗ್ರಾಮದ ಸರ್ವೇ ನಂ: 108/1 ನೇದರಲ್ಲಿ ಅನಧೀಕೃತವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ, ಇಲಾಖೆ, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ಮಾನ್ಯ ಅಂಕೋಲಾ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ದಾಖಲಿಸಿದ್ದು, ಸದರ ದೂರು ಮಾನ್ಯ ನ್ಯಾಯಾಲಯದಲ್ಲಿ ಸಿ.ಸಿ ನಂ: 163/2020 ನೇದರಲ್ಲಿ ವಿಚಾರಣೆಯಲ್ಲಿರುತ್ತದೆ. ಆದರೂ ಸಹ ನಮೂದಿತ ಆರೋಪಿತರು ದಿನಾಂಕ: 06-02-2021 ರಂದು ಸಾಯಂಕಾಲದ ವೇಳೆಯಲ್ಲಿ ಸದರ ಸರ್ವೇ ನಂ: 108/1 ನೇದರಲ್ಲಿ ಅನಧೀಕೃತವಾಗಿ ಸ್ಪೋಟಕಗಳನ್ನು ಬಳಸಿ ಕಲ್ಲು ಗಣಿಗಾರಿಕೆ ನಡೆಸಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಶನಿಯಾರ ದೇವಾಡಿಗ, ಪ್ರಾಯ-31 ವರ್ಷ, ವೃತ್ತಿ-ಭೂ ವಿಜ್ಞಾನಿ, ಉಪ-ನಿರ್ಧೇಶಕರ ಕಚೇರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಾರವಾರ, ಸಾ|| ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಹತ್ತಿರ, ವೆಂಕ್ಟಾಪುರ, ತಾ: ಭಟ್ಕಳ ರವರು ದಿನಾಂಕ: 10-02-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 31/2021, ಕಲಂ: 143, 147, 427, 448, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಪ್ರಮೋದ ತಂದೆ ಮಂಜುನಾಥ ನಾಯ್ಕ, ಪ್ರಾಯ-34 ವರ್ಷ, ಸಾ|| ಮಾವಿನಹೊಳೆ, ಸರಳಗಿ, ತಾ: ಹೊನ್ನಾವರ, 2] ವೆಂಕಟ್ರಮಣ ಕೃಷ್ಣ ನಾಯ್ಕ, ಪ್ರಾಯ-39 ವರ್ಷ, ಸಾ|| ಹಳದೀಪುರ, ತಾ: ಹೊನ್ನಾವರ, 3]. ಪ್ರತಿಭಾ ವೆಂಕಟ್ರಮಣ ನಾಯ್ಕ, ಪ್ರಾಯ-26 ವರ್ಷ, ಸಾ|| ಮಾವಿನಹೊಳೆ, ಸರಳಗಿ, ತಾ: ಹೊನ್ನಾವರ, 4]. ರೇವತಿ ಮಂಜುನಾಥ ನಾಯ್ಕ, ಪ್ರಾಯ-50 ವರ್ಷ, ಸಾ|| ಮಾವಿನಹೊಳೆ, ಮಹಿಮೆ, ತಾ: ಹೊನ್ನಾವರ, 5] ಜ್ಯೋತಿ ಪ್ರಮೋದ ನಾಯ್ಕ, ಪ್ರಾಯ-26 ವರ್ಷ, ಸಾ|| ಮಾವಿನಹೊಳೆ, ಮಹಿಮೆ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ದಿನಾಂಕ: 10-02-2021 ರಂದು 10-30 ಗಂಟೆಯ ಸುಮಾರಿಗೆ ಮಾವಿನಹೊಳೆ ಬ್ರಿಡ್ಜ್ ಹತ್ತಿರ ಇರುವ ಪಿರ್ಯಾದಿಯ ಟೇಲರಿಂಗ್ ಅಂಗಡಿಯ ಹತ್ತಿರ ಸಂಗನಮತ ಮಾಡಿಕೊಂಡು ಬಂದು ಪಿರ್ಯಾದಿಯ ಅಂಗಡಿಯ ಬೀಗ ಮುರಿದು ಅಕ್ರಮ ಪ್ರವೇಶ ಮಾಡಿ, ಹೊಲಿಗೆ ಯಂತ್ರವನ್ನು ಅಲ್ಲಿಯೇ ಪಕ್ಕದಲ್ಲಿರುವ ಗಟಾರದಲ್ಲಿ ಹಾಕಿ, ಗಿರಾಕಿಗಳ ಬಟ್ಟೆಯನ್ನು ಚೆಲ್ಲಾಪಿಲ್ಲಿ ಮಾಡಿ, ಪಿರ್ಯಾದಿಯ ಅಂಗಡಿಯ ಸುತ್ತ ತಂತಿಯ ಬೇಲಿಯನ್ನು ಹಾಕಿ, ಪಿರ್ಯಾದಿಯು ತನ್ನ ಅಂಗಡಿ ಹತ್ತಿರ ಬರುವುದನ್ನು ನೋಡಿದ ಆರೋಪಿತರು ಕೈಯಲ್ಲಿದ್ದ ಕ್ತತಿಯನ್ನು ಪಿರ್ಯಾದಿಗೆ ತೋರಿಸಿ ಬೆದರಿಸಿ ‘ಬೋಳಿ ಮಗನೇ, ಸೂಳೆ ಮಗನೇ ಈ ದಿನ ಇಷ್ಟಕ್ಕೆ ಮುಗಿಯಿತು. ಮುಂದೆ ನಿನ್ನ ಟೇಲರಿಂಗ್ ಅಂಗಡಿಗೆ ಬೆಂಕಿ ಹಾಕುತ್ತೇವೆ’ ಅಂತಾ ಧಮಕಿ ಹಾಕಿ ಓಡಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಲಕ್ಷ್ಮಣ ತಂದೆ ಮಾದೇವ ನಾಯ್ಕ, ಪ್ರಾಯ-39 ವರ್ಷ, ವೃತ್ತಿ-ಟೇಲರಿಂಗ್ ಕೆಲಸ. ಸಾ|| ಮಾವಿನಹೊಳೆ, ಸರಳಗಿ, ತಾ: ಹೊನ್ನಾವರ ರವರು ದಿನಾಂಕ: 10-02-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 21/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಭಾಸ್ಕರ ತಂದೆ ಸುಬ್ರಾಯ ನಾಯ್ಕ, ಸಾ|| ದೇವರಗದ್ದೆ, ಮಂಕಿ, ತಾ: ಹೊನ್ನಾವರ, 2]. ಸಂತೋಷ ತಂದೆ ನಾರಾಯಣ ನಾಯ್ಕ, ಸಾ|| ಮೂಲೆಮನೆ, ದೇವರಗದ್ದೆ, ಮಂಕಿ, ತಾ: ಹೊನ್ನಾವರ, 3]. ತಿಮ್ಮಪ್ಪ ಧರ್ಮಾ ನಾಯ್ಕ, ಸಾ|| ಮೂಲೆಮನೆ, ಮಂಕಿ, ತಾ: ಹೊನ್ನಾವರ, 4]. ಗಣಪತಿ ಸುಬ್ರಾಯ ನಾಯ್ಕ, ಸಾ|| ದೇವರಗದ್ದೆ, ಮಂಕಿ, ತಾ: ಹೊನ್ನಾವರ, 5]. ಮಾಬ್ಲು ತಂದೆ ಹನುಮಂತ ನಾಯ್ಕ, ಸಾ|| ದಾಸನಮಕ್ಕಿ, ಮಂಕಿ, ತಾ: ಹೊನ್ನಾವರ, 6]. ಶ್ರೀಧರ ತಂದೆ ಅಚಲಗುಂಡಿ ನಾಯ್ಕ, ಸಾ|| ರಾಮನಗರ, ಮಂಕಿ, ತಾ: ಹೊನ್ನಾವರ, 7]. ಗೋಪಾಲ ತಂದೆ ಮಂಜು ನಾಯ್ಕ, ಸಾ|| ದೇವರಗದ್ದೆ, ಮಂಕಿ, ತಾ: ಹೊನ್ನಾವರ, 8]. ಉಲ್ಲಾಸ ತಂದೆ ದೇವಯ್ಯ ನಾಯ್ಕ, ಸಾ|| ಗುಳದಕೇರಿ, ಮಂಕಿ, ತಾ: ಹೊನ್ನಾವರ, 9]. ಮೋಹನ ತಂದೆ ಮಾದೇವ ನಾಯ್ಕ, ಸಾ|| ಹಳೇಮಠ, ಮಂಕಿ, ತಾ: ಹೊನ್ನಾವರ, 10]. ರಘುವೀರ ತಂದೆ ಗಜಾನನ ನಾಯ್ಕ, ಸಾ|| ಮಾವಿನಕಟ್ಟೆ, ಮಂಕಿ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ದಿನಾಂಕ: 10-02-2021 ರಂದು ಮಧ್ಯರಾತ್ರಿ 01-00 ಗಂಟೆಯ ಸುಮಾರಿಗೆ ಮಂಕಿ ದೇವರಗದ್ದೆಯ ಸಿದ್ದಿಕ್ ಎಂಬುವವರ ಮನೆಯ ಪಕ್ಕದ ಬಯಲು ಪ್ರದೇಶದಲ್ಲಿ ತಮ್ಮ ತಮ್ಮ ಲಾಭಕ್ಕೋಸ್ಕರ ಕುಟಕುಟಿ ಎಂಬ ಜೂಗಾರಾಟ ಆಡುತ್ತಿದ್ದಾಗ ದಾಳಿಯ ವೇಳೆ ಜೂಗಾರಾಟಕ್ಕೆ ಬಳಸಿದ ನಗದು ಹಣ 9,890/- ರೂಪಾಯಿಗಳು ಹಾಗೂ ಕುಟಕುಟಿ ಜೂಗಾರಾಟಕ್ಕೆ ಬಳಸಿದ ಸಲಕರಣೆಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪರಮಾನಂದ ಬಿ. ಕೊಣ್ಣೂರ, ಪಿ.ಎಸ್.ಐ, ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 10-02-2021 ರಂದು 16-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 14/2021, ಕಲಂ: ಮನುಷ್ಯ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮನುಷ್ಯ ಶ್ರೀ ಗಂಗಾಧರ ತಂದೆ ಗಜಾನನ ಆಚಾರಿ, ಪ್ರಾಯ-33 ವರ್ಷ, ವೃತ್ತಿ-ಆಚಾರಿ ಕೆಲಸ, ಸಾ|| ಮಂಕಿ, ದೇವರಗದ್ದೆ, ತಾ: ಹೊನ್ನಾವರ, ಹಾಲಿ ಸಾ|| ತೂದಳ್ಳಿ, ಬೈಲೂರು, ತಾ: ಭಟ್ಕಳ. ಪಿರ್ಯಾದುದಾರರ ಮಗನಾದ ಈತನು ಕಳೆದ 4 ವರ್ಷಗಳ ಹಿಂದೆ ಮದುವೆಯಾಗಿ ಮಾವನ ಮನೆಯಾದ ಬೈಲೂರು ಗ್ರಾಮದ ತೂದಳ್ಳಿಯಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದವನು, ಕಳೆದ ಒಂದು ತಿಂಗಳ ಹಿಂದೆ ಆತನ ಹೆಂಡತಿ ಸರಸ್ವತಿ ಇವಳು ಗಂಡು ಮಗುವಿಗೆ ಜನ್ಮ ನೀಡಿದ್ದು, ಆ ಮಗುವಿಗೆ ಆರಾಮ ಇಲ್ಲದೇ ಕೆ.ಎಮ್.ಸಿ ಮಣಿಪಾಲದಲ್ಲಿ ಚಿಕಿತ್ಸೆ ಮಾಡಿಕೊಂಡು ಬಂದಿದ್ದು ಇರುತ್ತದೆ. ಹೀಗಿರುತ್ತಾ ದಿನಾಂಕ: 09-02-2021 ರಂದು ಮಧ್ಯಾಹ್ನ 12-00 ಗಂಟೆಯ ಸುಮಾರಿಗೆ ಗಂಗಾಧರ ಈತನೊಟ್ಟಿಗೆ ಕೆಲಸ ಮಾಡುವ ವಿನಾಯಕ ಆಚಾರಿ ಈತನು ಪಿರ್ಯಾದಿಯ ಮಗಳಾದ ಅರುಣಾ ಆಚಾರಿ ಇವಳಿಗೆ ಫೋನ್ ಮಾಡಿ ‘ಗಂಗಾಧರ ಈತನು ನನಗೆ ಫೋನ್ ಮಾಡಿ, ತನಗೆ ಮತ್ತು ತನ್ನ ಹೆಂಡತಿಗೆ ಹಣದ ವಿಚಾರದಲ್ಲಿ ಜಗಳ ಆಗಿದ್ದು, ತನ್ನ ಮನಸ್ಸಿಗೆ ತುಂಬಾ ಬೇಜಾರಾಗಿದೆ, ಜೀವ ಸಾಕಾಗಿ ಹೋಗಿದೆ ಎಂದು ಹೇಳಿ ಫೋನ್ ಕರೆ ಸ್ಥಗಿತ ಮಾಡಿರುತ್ತಾನೆ’ ಎಂದು ಪಿರ್ಯಾದಿಯ ಮಗಳಿಗೆ ಫೋನ್ ಮಾಡಿ ತಿಳಿಸಿದಾಗ, ಪಿರ್ಯಾದಿಯ ಮಗಳು ಪಿರ್ಯಾದಿಗೆ ತಿಳಿಸಿದಾಗ, ಪಿರ್ಯಾದಿಯು ಗಂಗಾಧರನ ಮೊಬೈಲ್‍ಗೆ ಫೋನ್ ಮಾಡಿದ್ದು ಮೊಬೈಲ್ ಸ್ವಿಚ್ ಆಫ್ ಆಗಿರುತ್ತದೆ. ನಂತರ ಪಿರ್ಯಾದಿಯು ಸಂಬಂಧಿಕರ ಮನೆಗೆ ಫೋನ್ ಮಾಡಿ ವಿಚಾರಿಸಿದ್ದರಲ್ಲಿ ಅಲ್ಲಿಯೂ ಸಹ ಗಂಗಾಧರ ಈತನು ಬಂದಿಲ್ಲವಾಗಿ ತಿಳಿಸಿರುತ್ತಾರೆ. ಕಾರಣ ಪಿರ್ಯಾದಿಯ ಮಗ ಗಂಗಾಧರ ಮತ್ತು ಆತನ ಹೆಂಡತಿ ಇವರಿಬ್ಬರಲ್ಲಿ ಹಣದ ವಿಚಾರದಲ್ಲಿ ಮನಸ್ಥಾಪ ಉಂಟಾಗಿ, ಗಂಗಾಧರ ಈತನು ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಮನನೊಂದು ದಿನಾಂಕ: 09-02-2021 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ಹೆಂಡತಿಯ ಹತ್ತಿರ ‘ಭಟ್ಕಳಕ್ಕೆ ಹೋಗಿ ಬರುತ್ತೇನೆ’ ಎಂದು ಹೇಳಿ ಮಾವನ ಮನೆಯಾದ ತೂದಳ್ಳಿಯಿಂದ ಹೋದವನು, ಈವರೆಗೂ ಮರಳಿ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾನೆ. ಕಾರಣ ಕಾಣೆಯಾದ ತನ್ನ ಮಗನನ್ನು ಹುಡುಕಿಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಗಜಾನನ ತಂದೆ ವೆಂಕಟ್ರಮಣ ಆಚಾರಿ ಪ್ರಾಯ-55 ವರ್ಷ, ವೃತ್ತಿ-ಆಚಾರಿ ಕೆಲಸ, ಸಾ|| ಮಂಕಿ, ದೇವರಗದ್ದೆ, ತಾ: ಹೊನ್ನಾವರ ರವರು ದಿನಾಂಕ: 10-02-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 22/2021, ಕಲಂ: 427, 509, 504, 506, 510 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಂಜುನಾಥ ತಂದೆ ನಂದಿ ಕೋರಾರ, ಪ್ರಾಯ-46 ವರ್ಷ, ಸಾ|| ಕೋಟೇಶ್ವರ ರಸ್ತೆ, ಎನ್.ಎಚ್-66, ಭಟ್ಕಳ ಶಹರ, 2]. ಹೊನ್ನು ತಂದೆ ಮಂಜುನಾಥ ಕೋರಾರ, ಪ್ರಾಯ-40 ವರ್ಷ, ಸಾ|| ಕೋಟೇಶ್ವರ ರಸ್ತೆ, ಎನ್.ಎಚ್-66, ಭಟ್ಕಳ ಶಹರ. ಈ ನಮೂದಿತ ಆರೋಪಿತರು ದಿನಾಂಕ: 07-02-2021 ರಂದು ಮಧ್ಯಾಹ್ನ 14-30 ಗಂಟೆಯ ಸುಮಾರಿಗೆ ಭಟ್ಕಳ ಶಹರದ ಕೋಟೇಶ್ವರ ರಸ್ತೆಯ ಹತ್ತಿರ ಜೆ.ಸಿ.ಬಿ ಯಿಂದ ಜಾಗ ಅಗೆಯುತ್ತಿರುವಾಗ ಪಿರ್ಯಾದಿಯವರ ಮನೆಗೆ ಪುರಸಭೆಯಿಂದ ಅಳವಡಿಸಿದ ಕುಡಿಯುವ ನೀರಿನ ಪೈಪನ್ನು ಮುರಿದು ಹಾನಿ ಪಡಿಸಿದ್ದರಿಂದ ಅದನ್ನು ಸರಿ ಮಾಡಿಕೊಡುವಂತೆ ಪಿರ್ಯಾದಿಯವರು ಆರೋಪಿತರಿಗೆ ಕೇಳಿದಾಗ, ಆರೋಪಿತರು ಪಿರ್ಯಾದಿಯವರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ಜೀವದ ಬೆದರಿಕಗೆ ಹಾಕಿ, ತದನಂತರ ನೀರಿನ ಪೈಪನ್ನು ಸರಿ ಮಾಡಿಕೊಡುವುದಾಗಿ ಒಪ್ಪಿಕೊಂಡವರು, ಅದೇ ದಿವಸ ಸಾಯಂಕಾಲ 19-30 ಗಂಟೆಯ ಸುಮಾರಿಗೆ ಪುನಃ ಪಿರ್ಯಾದಿಯವರ ಮನೆಯ ಬೇಲಿಯ ಹತ್ತಿರ ಹೋಗಿ ಪಿರ್ಯಾದಿಯವರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ಜೀವದ ಬೆದರಿಕೆ ಹಾಕಿ ಹೋದವರು, ದಿನಾಂಕ: 08-02-2021 ರಂದು ಬೆಳಿಗ್ಗೆ 11-00 ಗಂಟೆಯಿಂದ 12-00 ಗಂಟೆಯ ನಡುವಿನ ಅವಧಿಯಲ್ಲಿ ಆರೋಪಿತರಿಬ್ಬರು ಸಂಗನಮತ ಮಾಡಿಕೊಂಡು ಭಟ್ಕಳ ಶಹರದ ಜೆ.ಎಮ್.ಎಫ್.ಸಿ ಕೋರ್ಟಿನ ಆವರಣದಲ್ಲಿ ಹೋಗಿ ಅಲ್ಲಿದ್ದ ಪಿರ್ಯಾದಿಯವರನ್ನು ಉದ್ದೇಶಿಸಿ, ಪಿರ್ಯಾದಿಯವರ ಹೆಂಡತಿಯವರ ಮಾನಕ್ಕೆ ಕುಂದುಂಟು ಮಾಡುವ ಉದ್ದೇಶದಿಂದ ಅವಾಚ್ಯ ಶಬ್ದಗಳಿಂದ ನಿಂದಿಸಿ, ಇಲ್ಲಸಲ್ಲದ ಆರೋಪ ಮಾಡಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ರವೀಂದ್ರ ತಂದೆ ಸುಬ್ಬಾ ಮಂಗಳ, ಪ್ರಾಯ-48 ವರ್ಷ, ವೃತ್ತಿ-ವಕೀಲರು, ಸಾ|| ಕೋಟೇಶ್ವರ ರಸ್ತೆ, ಎನ್.ಎಚ್-66, ಭಟ್ಕಳ ಶಹರ ರವರು ದಿನಾಂಕ: 10-02-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 22/2021, ಕಲಂ: 279, 337, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಫೀರ್ ಎಸ್. ತಂದೆ ಸಲೀಂ ಕೆ. ಪ್ರಾಯ-30 ವರ್ಷ, ವೃತ್ತಿ-ಚಾಲಕ, ಸಾ|| ಲೈಲಾ ಮಂಜೀಲ್, ಪುರಪುರಮ್, ಕಾವಾಪೇರಿ ಪೋಸ್ಟ್, ಪಾಲಕಾಡ್ ಜಿಲ್ಲೆ, ಕೇರಳಾ (ಲಾರಿ ನಂ: ಎಮ್.ಎಚ್-43/ವಾಯ್-7210 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 09-02-2021 ರಂದು ಮಧ್ಯಾಹ್ನ 12-30 ಗಂಟೆಯ ಸುಮಾರಿಗೆ ತನ್ನ ಬಾಬ್ತು ಲಾರಿ ನಂ: ಎಮ್.ಎಚ್-43/ವಾಯ್-7210 ನೇದನ್ನು ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದವನು ಯಲ್ಲಾಪುರ ತಾಲೂಕಿನ ಟಿ.ಎಸ್.ಎಸ್ ಪೆಟ್ರೋಲ್ ಬಂಕ್ ಕ್ರಾಸ ಹತ್ತಿರ, ಕಾರವಾರ-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ರಸ್ತೆಯ ಮೇಲೆ ತಿರುವಿನ ರಸ್ತೆ ಹಾಗೂ ಪಕ್ಕದಲ್ಲಿ ಪೆಟ್ರೋಲ್ ಬಂಕ್ ಇದ್ದರೂ ಸಹ ನಿಧಾನವಾಗಿ ಬಾರದೇ, ಅತೀವೇಗವಾಗಿ ಹಾಗೂ ನಿಷ್ಕಾಳಜಿಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದು ಎದುರಿನಿಂದ ಟಿ.ಎಸ್.ಎಸ್ ಪೆಟ್ರೋಲ್ ಬಂಕ್ ಕಡೆಗೆ ನೋಂದಣಿಯಾಗದ ಮೋಟಾರ್ ಸೈಕಲ್ ಸವಾರ ಸುಕುಮಾರ ಈತನು ತನ್ನ ಮೋಟಾರ್ ಸೈಕಲಿಗೆ ಬಲಗಡೆಯ ಇಂಡಿಕೇಟರ್ ಹಾಕಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಎದುರಿನಿಂದ ಡಿಕ್ಕಿ ಮಾಡಿ, ಅಪಘಾತ ಪಡಿಸಿದ್ದರಿಂದಲೇ ಮೋಟಾರ್ ಸೈಕಲ್ ಸವಾರ ಸುಕುಮಾರ ಈತನಿಗೆ ತಲೆಗೆ ಹಾಗೂ ಕಾಲಿಗೆ ಭಾರೀ ಗಾಯ ಪೆಟ್ಟು ಆಗಿ, ಯಲ್ಲಾಪುರದ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಮಾಡಿಕೊಂಡು, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 10-02-2021 ರಂದು 02-45 ಗಂಟೆಗೆ ಮೃತಪಟ್ಟಿದ್ದಲ್ಲದೇ, ಸದ್ರಿ ಮೋಟಾರ್ ಸೈಕಲ್ ಹಿಂಬದ ಸವಾರ ಬರ್ನಾಬ್ ಸಿದ್ದಿ ಈತನಿಗೂ ಸಹ ಮುಖಕ್ಕೆ, ಎದೆಗೆ ಮತ್ತು ಕೈಗೆ ಸಾದಾ ಸ್ವರೂಪದ ಗಾಯ ಪೆಟ್ಟು ಪಡಿಸಿ, ಮೋಟಾರ್ ಸೈಕಲನ್ನು ಜಖಂಗೊಳಿಸಿದ ಬಗ್ಗೆ ಪಿರ್ಯಾದಿ ಶ್ರೀ ಆನಂದ ತಂದೆ ರಾಮಾ ಸಿದ್ದಿ, ಪ್ರಾಯ-31 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ನರಸೂರ, ಲಾಲಗುಳಿ, ಕಣ್ಣಿಗೇರಿ ಗ್ರಾಮ, ತಾ: ಯಲ್ಲಾಪುರ ರವರು ದಿನಾಂಕ: 10-02-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 18/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಮಣ್ಣ ಎಸ್. ಪಾಟೀಲ್, 35 ವರ್ಷ, ಸಾ|| ಹಿಡಕಲ್, ತಾ: ಖಾನಾಪುರ, ಜಿ: (ಮೋಟಾರ್ ಸೈಕಲ್ ನಂ: ಕೆ.ಎ-22/ಇ.ಎಂ-2094 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 10-02-2021 ರಂದು ತನ್ನ ಮೋಟಾರ್ ಸೈಕಲ್ ನಂ: ಕೆ.ಎ-22/ಇ.ಎಂ-2094 ನೇದರ ಹಿಂಬದಿಯಲ್ಲಿ ಗಾಯಾಳು ಕೆಂಪಣ್ಣ ರವರನ್ನು ಕೂಡ್ರಿಸಿಕೊಂಡು, ಮೋಟಾರ್ ಸೈಕಲನ್ನು ದಾಂಡೇಲಿ ಕೆ.ಸಿ ಸರ್ಕಲ್ ಕಡೆಯಿಂದ ಹಳಿಯಾಳ ಕಡೆಗೆ ಹೋಗಲು ಅತೀವೇಗವಾಗಿ ಹಾಗೂ ನಿಷ್ಕಾಳಜೀತನದಿಂದ ಚಾಲನೆ ಮಾಡಿ 21-05 ಗಂಟೆಗೆ ಹಳಿಯಾಳ ರಸ್ತೆ ನೂರ್ ಮಸೀದಿ ಹತ್ತಿರ ಕೆ.ಸಿ ಸರ್ಕಲ್ ಕಡೆಗೆ ನಡೆದುಕೊಂಡು ಬರುತ್ತಿದ್ದ ಪಿರ್ಯಾದುದಾರರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು, ಪಿರ್ಯಾದುದಾರರಿಗೆ ಹೊಟ್ಟೆಯ ಎಡಭಾಗಕ್ಕೆ, ಕಿವಿಗೆ ಗಾಯ, ಗಾಯಾಳು ಸಲೀಂ ರವರಿಗೆ ತುಟಿಗೆ, ಗದ್ದಕ್ಕೆ ಒಳಪೆಟ್ಟು ಪಡಿಸಿ, ಹಿಂಬದಿ ಸವಾರನಾದ ಕೆಂಪಣ್ಣ ರವರಿಗೆ ಕಾಲಿಗೆ, ಕೈಗೆ ಒಳಪೆಟ್ಟು ಪಡಿಸಿದ್ದಲ್ಲದೇ, ತನಗೆ ತಲೆಗೆ ಭಾರೀ ಗಾಯಪೆಟ್ಟು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಫಯಾಜ್ ತಂದೆ ಬಾಬು ಗೋರಿ, ಪ್ರಾಯ-20 ವರ್ಷ, ವೃತ್ತಿ-ಚಾಲಕ, ಸಾ|| ಅಲೈಡ್ ಏರಿಯಾ, ಹಳಿಯಾಳ ರಸ್ತೆ, ದಾಂಡೇಲಿ ರವರು ದಿನಾಂಕ: 10-02-2021 ರಂದು 23-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 41/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಚಂದ್ರಶೇಖರ ತಂದೆ ರಾಜುಗೌಡ ಪಾಟೀಲ್, ಪ್ರಾಯ-22 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹರ್ತಿ, ತಾ&ಜಿ: ಗದಗ, ಹಾಲಿ ಸಾ|| ದೇಶಪಾಂಡೆ ನಗರ, ಹಳಿಯಾಳ ಶಹರ. ನಮೂದಿತ ಆರೋಪಿತನು ದಿನಾಂಕ: 10-02-2021 ರಂದು ಸಂಜೆ 16-20 ಗಂಟೆಗೆ ಹಳಿಯಾಳ ಶಹರದ ಸರ್ಕಾರಿ ಆಸ್ಪತ್ರೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು, ಬರ-ಹೋಗುವ ಜನರಿಗೆ ಕರೆದು ಅದೃಷ್ಟ ಸಂಖ್ಯೆಗಳ ಮೇಲೆ ಹಣ ಪಂಥ ಕಟ್ಟಿರಿ ಅದೃಷ್ಟ ಸಂಖ್ಯೆ ತಾಗಿದರೆ 01/- ರೂಪಾಯಿಗೆ 80/- ರೂಪಾಯಿ ಕೊಡುತ್ತೇನೆ ಅಂತಾ ಜನರ ಮನವೊಲಿಸಿ ಅವರಿಂದ ಹಣ ಪಡೆದು, ಓ.ಸಿ ಮಟಕಾ ಜೂಗಾರಾಟದ ಮೇಲೆ ಹಣ ಪಂಥ ಕಟ್ಟಿಸಿಕೊಳ್ಳುತ್ತಿದ್ದಾಗ, ದಾಳಿಯ ಕಾಲಕ್ಕೆ 1). ನಗದು ಹಣ 1,250/- ರೂಪಾಯಿ, 2). ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-1, ಅ||ಕಿ|| 00.00/- ರೂಪಾಯಿ, 3). ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ, 4). ರಟ್-01, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಪಿರ್ಯಾದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮೋತಿಲಾಲ್ ಪವಾರ, ಪೊಲೀಸ್ ವೃತ್ತ ನಿರೀಕ್ಷಕರು, ಹಳಿಯಾಳ ವೃತ್ತ, ಹಳಿಯಾಳ ರವರು ದಿನಾಂಕ: 10-02-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 21/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ದಿನೇಶ ತಂದೆ ರಾಮಚಂದ್ರ ನಾಯ್ಕ, ಪ್ರಾಯ-31 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಬೆಣ್ಣೆಕೇರಿ, ಇರಾಸೆ, ಪೋ: ನಾಣಿಕಟ್ಟಾ, ಮತ್ತಿಹಳ್ಳಿ ಗ್ರಾಮ, ತಾ: ಸಿದ್ದಾಪುರ. ನಮೂದಿತ ಆರೋಪಿತನು ದಿನಾಂಕ: 10-02-2021 ರಂದು 21-30 ಗಂಟೆಗೆ ಸಿದ್ದಾಪುರ ತಾಲೂಕಿನ ಇರಾಸೆ-ಬೆಣ್ಣೆಕೇರಿಯಲ್ಲಿ ಇರುವ ತನ್ನ ಮನೆಯ ಎದುರಿನ ಅಂಗಳದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಅನಧೀಕೃತವಾಗಿ ಸಾರ್ವಜನಿಕರಿಗೆ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ದಾಳಿ ಮಾಡಿದಾಗ, 1). HAYWARD'S CHEERS WHISKY 90 ML ಅಂತಾ ಬರೆದ ಮದ್ಯ ತುಂಬಿದ 6 ಟೆಟ್ರಾ ಪ್ಯಾಕೆಟ್ ಗಳು, 2). 4 ಪ್ಲಾಸ್ಟಿಕ್ ಗ್ಲಾಸುಗಳು, 3). HAYWARD'S CHEERS WHISKY 90 ML ಅಂತಾ ಬರೆದ 4 ಮದ್ಯದ ಖಾಲಿ ಟೆಟ್ರಾ ಪ್ಯಾಕೆಟ್ ಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜುನಾಥ ಬಾರ್ಕಿ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 10-02-2021 ರಂದು 23-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 10-02-2021

at 00:00 hrs to 24:00 hrs

 

ಮಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 01/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಪುರುಷೋತ್ತಮ ತಂದೆ ದತ್ತಾ ಮಾಳಸೇಕರ್, ಪ್ರಾಯ-57 ವರ್ಷ, ವೃತ್ತಿ-ಎನ್.ಪಿ.ಸಿ.ಎಲ್ ಕೈಗಾದಲ್ಲಿ ಅಗ್ನಿಶಾಮಕದಳದಲ್ಲಿ ಫೈರಮೆನ್, ಸಾ|| ಕೈಗಾವಾಡಾ, ಮಲ್ಲಾಪುರ, ಕಾರವಾರ. ಇವರು ದಿನಾಂಕ: 09-02-2021 ರಂದು ಮಧ್ಯಾಹ್ನ 02-00 ಗಂಟೆಯಿಂದ ರಾತ್ರಿ 10-00 ಗಂಟೆಯವರೆಗೆ ತಮ್ಮ ಕರ್ತವ್ಯ ನಿರ್ವಹಿಸಿ ವಾಪಸ್ ರಾತ್ರಿ 11-00 ಗಂಟೆಗೆ ಮನೆಗೆ  ಬಂದು ಊಟ ಮಾಡಿ ಮಲಗಿದ್ದವರಿಗೆ ರಾತ್ರಿ 01-30 ಗಂಟೆಯ ಸಮಯಕ್ಕೆ ಇದ್ದಕ್ಕಿದ್ದಂತೆ ಮೈಕೈ ನೋವು ಹಾಗೂ ಎದೆನೋವು ಕಾಣಿಸಿಕೊಂಡಾಗ ಚಿಕಿತ್ಸೆಯ ಕುರಿತು ಮಲ್ಲಾಪುರದ ಟೌನಶಿಪ್ ಕೆ.ಜಿ.ಎಸ್ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು, ಸದರಿಯವರಿಗೆ ಪರೀಕ್ಷಿಸಿದ ವೈದ್ಯರು ಸಮಯ 02-10 ಗಂಟೆಗೆ ಮೃತಪಟ್ಟ ಕುರಿತು ತಿಳಿಸಿದ ಬಗ್ಗೆ ಪಿರ್ಯಾದಿ ಶ್ರೀ ರಾಮಕ್ರಷ್ಣ ತಂದೆ ಮಹೇಶ ಗೌಡ, ಪ್ರಾಯ-41 ವರ್ಷ, ವೃತ್ತಿ-ಕೈಗಾದಲ್ಲಿ ಗುತ್ತಿಗೆ ಕಾರ್ಮಿಕ, ಸಾ|| ಕೈಗಾವಾಡಾ, ಮಲ್ಲಾಪುರ, ಕಾರವಾರ ರವರು ದಿನಾಂಕ: 10-02-2021 ರಂದು 07-25 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 12-02-2021 10:44 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080