ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 10-01-2022

at 00:00 hrs to 24:00 hrs

 

ಮಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 01/2022, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 08-01-2022 ರಂದು ರಾತ್ರಿ 22-00 ಗಂಟೆಯಿಂದ ದಿನಾಂಕ: 09-01-2022 ರಂದು ಬೆಳಗಿನ ಜಾವ 05-00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯು ತನ್ನ ಮನೆಯ ಮುಂದೆ ನಿಲ್ಲಿಸಿಟ್ಟ ಪಿರ್ಯಾದಿಯ ಬಾಬ್ತು ಕಪ್ಪು ಬಣ್ಣದ ಅ||ಕಿ|| 50,000/- ರೂಪಾಯಿ ಮೌಲ್ಯದ ಹೋಂಡಾ ಏವಿಯೇಟರ್ ಸ್ಕೂಟಿ ನಂ: ಕೆ.ಎ-30/ವಿ-7117 ನೇದನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮೊಹ್ಮದ್ ರಜಾ ತಂದೆ ಮೊಹ್ಮದ್ ಮಸಿಯುದ್ದೀನ್ ನೂರಿ, ಪ್ರಾಯ-21 ವರ್ಷ, ವೃತ್ತಿ-ಕೈಗಾ ಸೊಸೈಟಿಯಲ್ಲಿ ಸೇಲ್ಸಮೆನ್ ಕೆಲಸ, ಸಾ|| ಮನೆ ನಂ: 333, ಮುಸ್ಲೀಂವಾಡಾ, ಮಲ್ಲಾಪುರ, ಕಾರವಾರ ರವರು ದಿನಾಂಕ: 10-01-2022 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 11/2022, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿಷ್ಣು ತಂದೆ ಗಣಪತಿ ಹರಿಕಂತ್ರ, ಪ್ರಾಯ-28 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಈರಪ್ಪನಹಿತ್ಲ, ಹಳದಿಪುರ, ತಾ: ಹೊನ್ನಾವರ (ಸ್ಕೂಟಿ ನಂ: ಕೆ.ಎ-47/ಯು-0850 ನೇದರ ಸವಾರ). ಈತನು ದಿನಾಂಕ: 10-01-2022 ರಂದು 13-30 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಹೊನ್ನಾವರದ ಶರವಾತಿ ಬ್ರಿಡ್ಜ್ ಮೇಲೆ ತನ್ನ ಬಾಬ್ತು ಸ್ಕೂಟಿ ನಂ: ಕೆ.ಎ-47/ಯು-0850 ನೇದನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತನ್ನ ಎದುರಿನಿಂದ ಹೋಗುತ್ತಿದ್ದ ವಾಹನವನ್ನು ಓವರಟೇಕ್ ಮಾಡಲು ತನ್ನ ಸ್ಕೂಟಿಯನ್ನು ನಿಯಂತ್ರಿಸಲಾಗದೇ ಒಮ್ಮೆಲೇ ರಸ್ತೆಯ ಎಡಕ್ಕೆ ಚಲಾಯಿಸಿ, ತನ್ನ ಎದುರಿನಿಂದ ಬರುತ್ತಿದ್ದ ಪಿರ್ಯಾದಿಯವರು ಚಲಾಯಿಸಿಕೊಂಡು ಬರುತ್ತಿದ್ದ ನೋಂದಣಿ ಇರದ ಹೋಂಡಾ ಡಿಯೋ ಸ್ಕೂಟಿ (ಇಂಜಿನ್ ನಂ: JF98EG1137255 ಹಾಗೂ ಚಾಸಿಸ್ ನಂ: ME4JF984KMG102596) ನೇದಕ್ಕೆ ಮುಂದಿನಿಂದ ಡಿಕ್ಕಿ ಪಡಿಸಿ, ಎರಡು ಸ್ಕೂಟಿಗಳನ್ನು ಜಖಂಗೊಳಿಸಿದ ಬಗ್ಗೆ ಪಿರ್ಯಾದಿ ಶ್ರಿ ನಾಗಭೂಷಣ ತಂದೆ ಅನಂತ ಅಂಬಿಗ, ಪ್ರಾಯ-21 ವರ್ಷ, ವೃತ್ತಿ-ಬೇಕರಿ ಕೆಲಸ, ಸಾ|| ಮಿರ್ಜಾನ, ತಾ: ಕುಮಟಾ ರವರು ದಿನಾಂಕ: 10-01-2022 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 08/2022, ಕಲಂ: 78(3) ಕರ್ನಾಟಕ ಪೊಲೀಸ್ ಕಾಯ್ದೆ (ತಿದ್ದುಪಡಿ ವಿಧೇಯಕ)-2021 ನೇದ್ದರ ವಿವರ...... ನಮೂದಿತ ಆರೋಪಿತ ನಾಗರಾಜ ತಂದೆ ದುರ್ಗಪ್ಪ ಮೊಗೇರ, ಪ್ರಾಯ-37 ವರ್ಷ, ವೃತ್ತಿ-ವ್ಯಾಪಾರ, ಸಾ|| ಅಳ್ವೆಕೋಡಿ, ಶಿರಾಲಿ, ತಾ: ಭಟ್ಕಳ. ಈತನು ದಿನಾಂಕ: 10-01-2022 ರಂದು 09-35 ಗಂಟೆಯ ಸಮಯಕ್ಕೆ ಅಳ್ವೆಕೋಡಿ ಬ್ರಿಡ್ಜ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ 01/- ರೂಪಾಯಿಗೆ 70/- ರೂಪಾಯಿ ಕೊಡುವ ಶರತ್ತಿನ ಮೇಲೆ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣದ ಪಂಥ ಕಟ್ಟಿಸಿ, ಓ.ಸಿ ಜುಗಾರಾಟ ನಡೆಸುತ್ತಿದ್ದಾಗ ಓ.ಸಿ ಚೀಟಿ-01, ಬಾಲ್ ಪೆನ್-01 ಹಾಗೂ ನಗದು ಹಣ 850/- ರೂಪಾಯಿಯೊಂದಿಗೆ ಆರೋಪಿತನು ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭರತಕುಮಾರ ವಿ, ಪಿ.ಎಸ್.ಐ (ಕಾ&ಸು), ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 10-01-2022 ರಂದು 10-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 09/2022, ಕಲಂ: 78(3) ಕರ್ನಾಟಕ ಪೊಲೀಸ್ ಕಾಯ್ದೆ (ತಿದ್ದುಪಡಿ ವಿಧೇಯಕ)-2021 ನೇದ್ದರ ವಿವರ...... ನಮೂದಿತ ಆರೋಪಿತ ಜನಾರ್ಧನ ತಂದೆ ಬಿಳಿಯಾ ನಾಯ್ಕ, ಪ್ರಾಯ-34 ವರ್ಷ, ವೃತ್ತಿ-ವ್ಯಾಪಾರ, ಸಾ|| ಅಳ್ವೆಕೋಡಿ, ಶಿರಾಲಿ, ತಾ: ಭಟ್ಕಳ. ಈತನು ದಿನಾಂಕ: 10-01-2022 ರಂದು 16-00 ಗಂಟೆಯ ಸಮಯಕ್ಕೆ ಅಳ್ವೆಕೋಡಿಯ ದುರ್ಗಾ ಪರಮೇಶ್ವರಿ ದೇವಸ್ಥಾನದ ಕಮಾನ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ 01/- ರೂಪಾಯಿಗೆ 70/- ರೂಪಾಯಿ ಕೊಡುವ ಶರತ್ತಿನ ಮೇಲೆ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣದ ಪಂಥ ಕಟ್ಟಿಸಿ, ಓ.ಸಿ ಜುಗಾರಾಟ ನಡೆಸುತ್ತಿದ್ದಾಗ ಓ.ಸಿ ಚೀಟಿ-01, ಬಾಲ್ ಪೆನ್-01 ಹಾಗೂ ನಗದು ಹಣ 750/- ರೂಪಾಯಿಯೊಂದಿಗೆ ಆರೋಪಿತನು ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭರತಕುಮಾರ ವಿ, ಪಿ.ಎಸ್.ಐ (ಕಾ&ಸು), ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 10-01-2022 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 01/2022, ಕಲಂ: 78(3) ಕರ್ನಾಟಕ ಪೊಲೀಸ್ ಕಾಯ್ದೆ (ತಿದ್ದುಪಡಿ ವಿಧೇಯಕ)-2021 ನೇದ್ದರ ವಿವರ...... ನಮೂದಿತ ಆರೋಪಿತ ಸಂತೋಷ ತಂದೆ ಈಶ್ವರ ಮಾನೆನೇವರ, ಪ್ರಾಯ-27 ವರ್ಷ, ವೃತ್ತಿ-ಚಾಲಕ, ಸಾ|| ವಿವೇಕಾನಂದ ನಗರ, ತಾ: ಶಿರಸಿ. ಈತನು ದಿನಾಂಕ: 10-01-2022 ರಂದು 18-50 ಗಂಟೆಗೆ ಶಿರಸಿ ನಗರದ ಕಸ್ತೂರಾಬಾ ನಗರದ ಸೂಪಾ ಮಸಿದಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ ಅದೃಷ್ಟದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿದರೆ 01/- ರೂಪಾಯಿಗೆ 80/- ರೂಪಾಯಿ ಹಣವನ್ನು ಕೊಡುತ್ತೇನೆ ಅಂತಾ ಹೇಳಿ ಜನರಿಗೆ ಕರೆದು ಜನರಿಂದ ಹಣವನ್ನು ಅದೃಷ್ಟದ ಅಂಕೆ-ಸಂಖ್ಯೆಗಳ ಮೇಲೆ ಪಂಥವಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ಪಿರ್ಯಾದಿಯವರು ಪಂಚರು ಮತ್ತು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ನಡೆಸಿದಾಗ ಓ.ಸಿ ಮಟಕಾ ಜೂಗಾರಾಟದಿಂದ ಸಂಗ್ರಹವಾದ ನಗದು ಹಣ 890/- ರೂಪಾಯಿ ಹಾಗೂ ಓ.ಸಿ ಮಟಕಾ ಜೂಗರಾಟಕ್ಕೆ ಬಳಸಿದ ಅಂಕೆ-ಸಂಖ್ಯೆ ಬರೆದ ಚೀಟಿ-01, ಅ||ಕಿ|| 00.00/- ರೂಪಾಯಿ ಮತ್ತು ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭೀಮಾಶಂಕರ ಸಿನ್ನೂರ ಸಂಗಣ್ಣ, ಪಿ.ಎಸ್.ಐ, ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 10-01-2022 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 04/2022, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ಕುಮಾರಿ: ನಿಶಾ ತಂದೆ ಮದನಲಾಲ ಬಾಟಿ, ಪ್ರಾಯ-19 ವರ್ಷ, ವೃತ್ತಿ-ವಿದ್ಯಾರ್ಥಿನಿ, ಸಾ|| ಪಡ್ತಿ ಗಲ್ಲಿ, ತಾ: ಶಿರಸಿ. ಪಿರ್ಯಾದಿಯ ಮಗಳಾದ ಇವಳು ದಿನಾಂಕ: 10-01-2022 ರಂದು ಬೆಳಿಗ್ಗೆ 10-30 ಗಂಟೆಗೆ ತನ್ನ ಮನೆಯಿಂದ ಶಿರಸಿಯ ಎಮ್.ಇ.ಎಸ್ ಕಾಲೇಜಿಗೆ ಹೋಗುತ್ತೇನೆಂದು ಹೇಳಿ ಹೋದವಳು, ಕಾಲೇಜಿಗೂ ಹೋಗದೆ ಈವರೆಗೂ ಮನೆಗೆ ವಾಪಸ್ ಬರದೇ ಇರುವುದರಿಂದ ಅವಳು ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮದನಲಾಲ ತಂದೆ ಹಿರಾಜಿ ಬಾಟಿ, ಪ್ರಾಯ-43 ವರ್ಷ, ವೃತ್ತಿ-ವ್ಯಾಪಾರ, ಸಾ|| ಪಡ್ತಿ ಗಲ್ಲಿ, ತಾ: ಶಿರಸಿ ರವರು ದಿನಾಂಕ: 10-01-2022 ರಂದು 21-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 01/2022, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಲಕ್ಷ್ಮಣ ತಂದೆ ಅಪ್ಪಾರಾವ ಗುಂಡೂಪಕರ, ಪ್ರಾಯ-59 ವರ್ಷ, ವೃತ್ತಿ-ಕಿರಾಣಿ ಅಂಗಡಿ ವ್ಯಾಪಾರ, ಸಾ|| ಹಂದಲಿ ಗ್ರಾಮ, ತಾ: ಹಳಿಯಾಳ. ಈತನು ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಹಂದಲಿ ಗ್ರಾಮದವನಿದ್ದು, ದಿನಾಂಕ: 10-01-2022 ರಂದು ಮಧ್ಯಾಹ್ನ 03-30 ಗಂಟೆಗೆ ಹಂದಲಿ ಗ್ರಾಮದ ತನ್ನ ಅಂಗಡಿಯಲ್ಲಿ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಸಾರ್ವಜನಿಕರಿಗೆ Original Choice ಎಂಬ ಮದ್ಯವನ್ನು (ಸರಾಯಿಯನ್ನು) ಸೇವಿಸಲು ಅನುಕೂಲ ಮಾಡಿಕೊಟ್ಟಿರುವಾಗ ಪಿರ್ಯಾದಿಯವರು ಸಿಬ್ಬಂದಿಗಳು ಹಾಗೂ ಪಂಚರೊಂದಿಗೆ ಸೇರಿ ದಾಳಿ ಮಾಡಿದಾಗ ಅಬಕಾರಿ ಸ್ವತ್ತುಗಳಾದ 1). Original Choice ಅಂತಾ ಬರೆದ 90 ML ನ ಪೌಚ್ ಗಳು-15, ಅ||ಕಿ|| 526/- ರೂಪಾಯಿ, 2). Original Choice ಅಂತಾ ಬರೆದ 90 ML ನ ಖಾಲಿ ಪೌಚ್ ಗಳು-02, ಅ||ಕಿ|| 00.00/- ರೂಪಾಯಿ, 3). ನೀರಿನ ಬಾಟಲಿ-01, ಅ||ಕಿ|| 00.00/- ರೂಪಾಯಿ, 4). ಪ್ಲಾಸ್ಟಿಕ್ ಗ್ಲಾಸ್–02, ಅ||ಕಿ|| 00.00/- ರೂಪಾಯಿ, 5). ಬಿಳಿ ಚೀಲ-01, ಅ||ಕಿ|| 00.00/- ರೂಪಾಯಿ ಇವುಗಳೊಂದಿಗೆ ಆರೋಪಿತನನ್ನು ವಶಕ್ಕೆ ಪಡೆದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಐ. ಆರ್. ಗಡ್ಡೇಕರ, ಪಿ.ಎಸ್.ಐ, ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 10-01-2022 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 03/2022, ಕಲಂ: 420 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತನು ಯಾರೋ ಅಪರಿಚಿತನಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದಿಯವರು ದಿನಾಂಕ: 27-12-2021 ರಂದು ಸಾಯಂಕಾಲ 05-00 ಗಂಟೆಗೆ ಹಳಿಯಾಳ ಎಸ್.ಬಿ.ಐ ಶಾಖೆಯ ಎ.ಟಿ.ಎಮ್ ನಿಂದ ಹಣ ತೆಗೆಯಲು ಹೋದಾಗ ನಮೂದಿತ ಆರೋಪಿತನು ಎ.ಟಿ.ಎಮ್ ಮಷಿನ್ ನಿಂದ ಎ.ಟಿ.ಎಮ್ ಅನ್ನು ತೆಗೆದುಕೊಂಡು ಅದನ್ನು ಪಿರ್ಯಾದಿಗೆ ಗೊತ್ತಾಗದಂತೆ ಬದಲಿಸಿ, ತನ್ನ ಹತ್ತಿರ ಇದ್ದ ಬೇರೆ ಯಾವುದೋ ಎ.ಟಿ.ಎಮ್ ನೀಡಿ, ದಿನಾಂಕ: 27-12-2021 ರಿಂದ ದಿನಾಂಕ: 29-12-2021 ರಂದು ಬೆಳಿಗ್ಗೆ 11-00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯವರ ಎ.ಟಿ.ಎಮ್ ಬಳಸಿ, ಅವರ ಉಳಿತಾಯ ಖಾತೆ ಸಂಖ್ಯೆ: 111317XXXXX ನೇದರಿಂದ ಒಟ್ಟು 67,500/- ರೂಪಾಯಿ ಹಣವನ್ನು ವಿವಿಧ ಎ.ಟಿ.ಎಮ್ ಹಾಗೂ ಇತರೆ ಸ್ಥಳಗಳಲ್ಲಿ ತೆಗೆದುಕೊಂಡು ಪಿರ್ಯಾದಿಗೆ ವಂಚಿಸಿದ ಬಗ್ಗೆ ಪಿರ್ಯಾದಿ ಶ್ರೀಮತಿ ವಿದ್ಯಾ ಕೋಂ. ನಾಗೇಂದ್ರ ನೇತ್ರೇಕರ, ಪ್ರಾಯ-59 ವರ್ಷ, ವೃತ್ತಿ-ಗ್ರೂಪ್ ಡಿ ಕೆಲಸ (ಯಡೋಗಾ ಪ್ರಾಥಮಿಕ ಆರೋಗ್ಯ ಕೇಂದ್ರ), ಸಾ|| ದೇಸಾಯಿ ಗಲ್ಲಿ, ಹಳಿಯಾಳ ಶಹರ ರವರು ದಿನಾಂಕ: 10-01-2022 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 05/2022, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಗಣಪತಿ ತಂದೆ ವೆಂಕಟ್ರಮಣ ಭಟ್ಟ, ಪ್ರಾಯ-80 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಜಗಳೆಮನೆ, ಬೇಗಾರ ಗ್ರಾಮ, ತಾ: ಸಿದ್ದಾಪುರ. ಈತನು ದಿನಾಂಕ; 10-01-2022 ರಂದು ಸಿದ್ದಾಪುರ ತಾಲೂಕಿನ ವಂದಾನೆ ವರದಾ ಗ್ರಾಮೀಣ ಬ್ಯಾಂಕ್ ಹತ್ತಿರ ತಮ್ಮ ತಾಬಾದಲ್ಲಿ Original Choice ಅಂತಾ ಹೆಸರಿನ ಒಟ್ಟು 1,759/- ರೂಪಾಯಿ ಬೆಲೆಬಾಳುವ 90 ML ನ 50 ಮದ್ಯ ತುಂಬಿದ ಟೆಟ್ರಾ ಪ್ಯಾಕೆಟ್ ಗಳನ್ನು ಪಾಸ್ ಯಾ ಪರ್ಮಿಟ್ ಇಲ್ಲದೇ ಇಟ್ಟುಕೊಂಡು ಸಾಗಾಟ ಮಾಡಲು ನಿಂತಿದ್ದಾಗ 16-00 ಗಂಟೆಗೆ ಪಿರ್ಯಾದಿಯವರು ಠಾಣಾ ಸಿಬ್ಬಂದಿಯೊಂದಿಗೆ ಸೇರಿ ದಾಳಿ ಮಾಡಿ ಹಿಡಿದುಕೊಂಡು ಸರಾಯಿ ಪ್ಯಾಕೆಟ್ ಗಳನ್ನು ಪಂಚನಾಮೆಯಂತೆ ಜಪ್ತ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜೇಶ್ವರ ವಿ. ಚಂದಾವರ, ಪಿ.ಎಸ್.ಐ (ತನಿಖೆ), ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 10-01-2022 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 10-01-2022

at 00:00 hrs to 24:00 hrs


 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 01/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ದತ್ತಾ ತಂದೆ ತಿಮ್ಮಾ ನಾಯ್ಕ, ಪ್ರಾಯ-52 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಕಲಬೇಣ, ಅವರ್ಸಾ, ತಾ: ಅಂಕೋಲಾ. ಈತನು ಮೊದಲಿನಿಂದಲೂ ದಿನಾಲೂ ವಿಪರೀತ ಸರಾಯಿ ಕುಡಿದು ಅನಾರೋಗ್ಯಕ್ಕೀಡಾದವನು, ವಿಪರೀತ ಹೊಟ್ಟೆ ಮತ್ತು ಎದೆನೋವಿನಿಂದ ಬಳಲುತ್ತಿದ್ದವನು, ಹೊಟ್ಟೆ ಮತ್ತು ಎದೆನೋವನ್ನು ತಾಳಲಾರದೇ ತಾನು ಸಾಯುತ್ತೇನೆ ಅಂತಾ ಹೇಳುತ್ತಿದ್ದವನು, ದಿನಾಂಕ: 08-01-2022 ರಂದು ಮಧ್ಯಾಹ್ನ ಅಂಕೋಲಾ ತಾಲೂಕಿನ ಅವರ್ಸಾ ಸಕಲಬೇಣದಲ್ಲಿರುವ ತನ್ನ ಮನೆಯಿಂದ ಹೋದವನು, ಎಲ್ಲಿಯೋ ಹೋಗಿ ವಿಷ ಕುಡಿದು ಸಾಯಂಕಾಲ 05-00 ಗಂಟೆಗೆ ವಾಪಸ್ ತನ್ನ ಮನೆಗೆ ಬಂದು ವಾಂತಿ ಮಾಡಿಕೊಳ್ಳುತ್ತಿದ್ದವನು, ಉಪಚಾರಕ್ಕಾಗಿ ಅಂಕೋಲಾದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ನಂತರ ಅಲ್ಲಿಂದ ಹೆಚ್ಚಿನ ಉಪಚಾರಕ್ಕಾಗಿ ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿ ಉಪಚಾರವನ್ನು ಪಡೆದುಕೊಳ್ಳುತ್ತಿದ್ದವನು, ದಿನಾಂಕ: 10-01-2022 ರಂದು 12-25 ಗಂಟೆಗೆ ಉಪಚಾರ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ. ಮೃತದೇಹವು ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿದ್ದು, ಈ ಕುರಿತು ಮುಂದಿನ ಕ್ರಮವನ್ನು ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಧಾಕು ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಚಾಲಕ, ಸಾ|| ಸಕಲಬೇಣ, ಅವರ್ಸಾ, ತಾ: ಅಂಕೋಲಾ ರವರು ದಿನಾಂಕ: 10-01-2022 ರಂದು 08-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 02/2022, ಕಲಂ: 174(ಸಿ) ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳು ಶ್ರೀಮತಿ ರಾಧಾ ಗಂಡ ಚಂದ್ರ ತಾಂಡೇಲ, ಪ್ರಾಯ-35 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಕಾಸರಕೋಡ, ಟೋಂಕಾ-1, ತಾ: ಹೊನ್ನಾವರ. ಪಿರ್ಯಾದಿಯ ಅಣ್ಣನ ಹೆಂಡತಿಯಾದ ಇವಳು ‘VEERABATHIRA PRAMOTER LIMITED CASH BACK PLAN’ ನಲ್ಲಿ 55,00,000/- (ಐವತ್ತೈದು ಲಕ್ಷ ರೂಪಾಯಿ) ಹೂಡಿಕೆ ಮಾಡಿದ್ದು, ಈ ಕಂಪನಿಯವರು ರಾಧಾ ಇವರಿಗೆ 18,50,000/- ರೂಪಾಯಿ ಚೆಕ್ ನೀಡಿದ್ದು, ಅದು ಸಹಿತ ಚೆಕ್ ಬೌನ್ಸ್ ಆಗಿದ್ದ, ಇದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 05-01-2022 ರಂದು ಬೆಳಗಿವ ಜಾವ ಹೊನ್ನಾವರ ಕಾಸರಕೋಡದ ಟೊಂಕಾದಲ್ಲಿರುವ ತನ್ನ ಮನೆಯಲ್ಲಿ ಇಲಿ ಪಾಷಾಣಾ ಕುಡಿದು ಅಸ್ವಸ್ಥಗೊಂಡವಳಿಗೆ ಚಿಕಿತ್ಸೆಯ ಕುರಿತು ಹೊನ್ನಾವರದ ಸೇಂಟ್ ಇಗ್ನೇಷಿಯಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಪಡಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಚಿಕಿತ್ಸೆಗೆ ದಾಖಲು ಪಡಿಸಿದ್ದು, ಸದರಿಯವಳು ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದವಳು, ದಿನಾಂಕ: 10-01-2022 ರಂದು ಬೆಳಿಗ್ಗೆ 03-40 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಸದರಿಯವಳ ಮರಣದಲ್ಲಿ ಸಂಶಯವಿದ್ದು ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಾಮಾ ತಂದೆ ಮಾದೇವ ತಾಂಡೇಲ, ಪ್ರಾಯ-35 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಕಾಸರಕೋಡ, ಟೋಂಕಾ-1, ತಾ: ಹೊನ್ನಾವರ ರವರು ದಿನಾಂಕ: 10-01-2022 ರಂದು 08-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುರ್ಡೇಶ್ವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 02/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳು ಶ್ರೀಮತಿ ಮಂಗಳಿ ಕೋಂ. ತಿಮ್ಮಪ್ಪ ಗೊಂಡ, ಪ್ರಾಯ-43 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಅತ್ತಿಬಾರ ಗ್ರಾಮ, ಪೋ: ಕಟಗಾರಕೊಪ್ಪ, ತಾ: ಭಟ್ಕಳ. ಪಿರ್ಯಾದಿಯ ಹೆಂಡತಿಯಾದ ಇವಳು ದಿನಾಂಕ: 10-01-2022 ರಂದು 18-00 ಗಂಟೆಗೆ ತಮ್ಮ ಗದ್ದೆಯಲ್ಲಿ ಕೃಷಿ ಕೆಲಸದಲ್ಲಿರುವಾಗ ಯಾವುದೋ ಒಂದು ಹಾವು ಮಂಗಳಿ ಇವರ ಬಲಗಾಲ ಕಿರುಬೆರಳಿಗೆ ಕಚ್ಚಿದ್ದು, ಮಂಗಳಿ ಇವರು ಮನೆಗೆ ಬಂದು ಹಾವು ಕಚ್ಚಿದ ವಿಷಯವನ್ನು ಮನೆ ಜನರಿಗೆ ತಿಳಿಸಿ, ಕುಡಿಯಲು ನೀರು ಕೇಳಿ ನೀರು ಕುಡಿದು ಮನೆಯಲ್ಲಿಯೇ ಕುಸಿದು ಬಿದ್ದವಳಿಗೆ ಉಪಚಾರಕ್ಕಾಗಿ ಭಟ್ಕಳ ತಾಲೂಕಿನ ಆಸ್ಪತ್ರೆಗೆ 19-30 ಗಂಟೆಗೆ ಕರೆದುಕೊಂಡು ಬಂದಿದ್ದು, ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ, ಆಸ್ಪತ್ರೆಗೆ ತರುವ ಪೂರ್ವದಲ್ಲಿ ದಾರಿ ಮಧ್ಯದಲ್ಲಿ ಮೃತಪಟ್ಟಿರುತ್ತಾರೆ ಅಂತಾ ತಿಳಿಸಿದ್ದು, ಮೃತದೇಹವು ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ತಿಮ್ಮಪ್ಪ ತಂದೆ ನಾಗಪ್ಪ ಗೊಂಡ, ಪ್ರಾಯ-43 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಅತ್ತಿಬಾರ ಗ್ರಾಮ, ಪೋ: ಕಟಗಾರಕೊಪ್ಪ, ತಾ: ಭಟ್ಕಳ ರವರು ದಿನಾಂಕ: 10-01-2022 ರಂದು 22-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 03/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ತಿಮ್ಮಪ್ಪ ತಂದೆ ಗೋಳಿಬೀರಾ ಮೊಗೇರ, ಪ್ರಾಯ-57 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಮಠದಹಿತ್ಲು, ಮಾದುಮನೆ, ಕಾಯ್ಕಿಣಿ, ತಾ: ಭಟ್ಕಳ. ಈತನು ಚಕ್ರವರ್ತಿ ಬೋಟಿನಲ್ಲಿ ಭಟ್ಕಳದ ಲೈಟ್ ಹೌಸ್ ಹತ್ತಿರ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದಾಗ ದಿನಾಂಕ: 10-01-2022 ರಂದು ಬೆಳಗಿನ ಜಾವ 04-00 ಗಂಟೆಯ ಸುಮಾರಿಗೆ ಆಕಸ್ಮಿಕವಾಗಿ ಕಾಲು ಜಾರಿ ಬೋಟಿನಿಂದ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಇದರ ಹೊರತು ಅವನ ಮರಣದಲ್ಲಿ ಬೇರೆ ಏನು ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶಿವಾನಂದ ತಂದೆ ತಿಮ್ಮಪ್ಪ ಮೊಗೇರ, ಪ್ರಾಯ-34 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಮಠದಹಿತ್ಲು, ಮಾದುಮನೆ, ಕಾಯ್ಕಿಣಿ, ತಾ: ಭಟ್ಕಳ ರವರು ದಿನಾಂಕ: 10-01-2022 ರಂದು 11-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 19-01-2022 05:22 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080