ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 10-07-2021

at 00:00 hrs to 24:00 hrs

 

ಮಹಿಳಾ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 07/2021, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ಶ್ರೀಮತಿ ಹೀನಾ ಸುಹೇಲ್ ಖುರೇಶಿ ಸಾಬ್, ಪ್ರಾಯ-22 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಮಧೇವಾಡ, ಕೋಡಿಭಾಗ, ಕಾರವಾರ. ಪಿರ್ಯಾದಿಯವರ ಹೆಂಡತಿಯಾದ ಇವಳು ದಿನಾಂಕ: 06-07-2021 ರಂದು 12-00 ಗಂಟೆಗೆ ಮನೆಯಲ್ಲಿ ಇದ್ದವಳು, ಪಿರ್ಯಾದಿಯವರು ಮನೆಯ ಒಳಗಡೆ ಇದ್ದಾಗ ಮನೆಯಲ್ಲಿ ಯಾರಿಗೂ ತಿಳಿಸದೇ ಸಂಬಂಧಿಕರ ಮನೆಗೂ ಹೋಗದೇ ಎಲ್ಲಿಯೋ ಹೋಗಿ ಈವರೆಗೂ ಮನೆಗೆ ಬಾರದೇ ಕಾಣೆಯಾಗಿದ್ದು, ಕಾಣೆಯಾದ ತನ್ನ ಹೆಂಡತಿಯನ್ನು  ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಸುಹೇಲ್ ಖುರೇಶಿ ತಂದೆ ಅಬ್ದುಲ್ ರೆಹಮಾನ್ ಸಾಬ್, ಪ್ರಾಯ-29 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಧೇವಾಡ, ಕೋಡಿಭಾಗ, ಕಾರವಾರ ರವರು ದಿನಾಂಕ: 10-07-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 112/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಯಾನ್ ತಂದೆ ಸ್ವಪನ್ ಬ್ಯಾನರ್ಜಿ, ಪ್ರಾಯ-36 ವರ್ಷ, ಸಾ|| ಇ/30, ರಾಮಘರ್, ಸಿ.ಇ.ಎಸ್.ಸಿ ಆಪೀಸ್, ರಾಮಘರ್, ಕೋಲ್ಕತ್ತಾ (ರಾಯಲ್ ಎನಫೀಲ್ಡ್ ಕ್ಲಾಸಿಕ್ ಬ್ಲಾಕ್ (500 ಸಿಸಿ) ಮೋಟಾರ್ ಸೈಕಲ್ ನಂ: ಎಮ್.ಎಚ್-14/ಜಿ.ಟಿ-0405 ನೇದರ ಸವಾರ). ಈತನು ದಿನಾಂಕ: 10-07-2021 ರಂದು ಮಧ್ಯಾಹ್ನ 02-15 ಗಂಟೆಯ ಸುಮಾರಿಗೆ ತನ್ನ ಬಾಬ್ತು ರಾಯಲ್ ಎನಫೀಲ್ಡ್ ಕ್ಲಾಸಿಕ್ ಬ್ಲಾಕ್ (500 ಸಿಸಿ) ಮೋಟಾರ್ ಸೈಕಲ್ ನಂ: ಎಮ್.ಎಚ್-14/ಜಿ.ಟಿ-0405 ನೇದನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ರಸ್ತೆಯ ಮೇಲೆ ಕಲಘಟಗಿ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿಯಿಂದ ಚಾಲನೆ ಮಾಡಿಕೊಂಡು ಬಂದವನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ರಸ್ತೆಯ ಬಲ ತಿರುವಿನಲ್ಲಿ ತನ್ನ ಮೋಟಾರ್ ಸೈಕಲಿನ ವೇಗವನ್ನು ನಿಯಂತ್ರಿಸಲಾಗದೇ ಯಲ್ಲಾಪುರ ತಾಲೂಕಿನ ಹಿಂದೂ ರುದ್ರಭೂಮಿಯ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ರಸ್ತೆಯ ಎಡಬದಿಗೆ ಇದ್ದ ಬ್ರಿಡ್ಜ್ ಮೇಲಿಂದ ಸುಮಾರು 20 ಅಡಿ ಕೆಳಗೆ ತಣ್ಣೀರ ಹಳ್ಳದ ದಡದಲ್ಲಿ ಮೋಟಾರ್ ಸೈಕಲ್ ಸಮೇತ ಬಿದ್ದುಕೊಂಡು ತನಗೆ ಭಾರೀ ಸ್ವರೂಪದ ಒಳಪೆಟ್ಟು ಪಡಿಸಿಕೊಂಡು ಸ್ಥಳದಲ್ಲಿಯೇ ಮರಣ ಪಟ್ಟಿದ್ದಲ್ಲದೇ, ತಾನು ಚಲಾಯಿಸಿಕೊಂಡು ಬಂದ ಮೋಟಾರ್ ಸೈಕಲನ್ನು ಜಖಂ ಮಾಡಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಕಲ್ಪೇಶ ತಂದೆ ಸುರೇಶ ನಾಗ್ವೇಕರ, ಪ್ರಾಯ-34 ವರ್ಷ, ವೃತ್ತಿ-ಎಸ್.ಆರ್.ಸಿ.ಸಿ ಚಿಲ್ಡ್ರನ್ ಆಸ್ಪತ್ರೆ, ಮಲಾಡ, ಮುಂಬೈದಲ್ಲಿ ಬ್ರಾಂಡಿಂಗ್ ಡೆಪ್ಯೂಟಿ ಮ್ಯಾನೇಜರ್, ಸಾ|| 05/ಬಿ, ಶಿವಗಂಗಾ ಬಿಲ್ಡಿಂಗ್ ನಂ: 2, ಚಿಂಚೋಳಿ ಬಂದರ್ ರೋಡ್, ಲೀಲಾ ಆಸ್ಪತ್ರೆ ಎದುರು, ಮಲಾಡ್ (ವೆಸ್ಟ್), ಮುಂಬೈ, ಮಹಾರಾಷ್ಟ್ರ ರವರು ದಿನಾಂಕ: 10-07-2021 ರಂದು 22-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 91/2021, ಕಲಂ: 324, 326, 341, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಈರಪ್ಪ ತಂದೆ ನಾಗರಾಜ ಬೋವಿವಡ್ಡರ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗಣೇಶಪುರ, ತಾ: ಮುಂಡಗೋಡ, 2]. ಸುರೇಶ ವಡ್ಡರ, ಸಾ|| ನಾಗನೂರು, ತಾ: ಮುಂಡಗೋಡ, 3]. ರಫೀಕ್ ಗೂಡೂರ, ಸಾ|| ನಾಗನೂರು, ತಾ: ಮುಂಡಗೋಡ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ಪಿರ್ಯಾದಿಯವರ ಹತ್ತಿರ ಹೊಲದ ಕೆಲಸವನ್ನು ಮಾಡಿ ಕೊಡುವುದಾಗಿ ಹಾಗೂ ಗಾಯಾಳು: ದೀಪಕ ಲಮಾಣಿ ರವರ ಹತ್ತಿರ ಕಾರನ್ನು ಕೊಡಿಸುವುದಾಗಿ ಹೇಳಿ ಹಣವನ್ನು ಪಡೆದುಕೊಂಡವನು, ಹಲವು ಬಾರಿ ಕೇಳಿದರೂ ಸಹ ಅವರ ಹಣವನ್ನು ಕೊಡದೇ ಕೆಲಸವನ್ನು ಮಾಡಿಕೊಡದೇ ಇದ್ದುದರಿಂದ ದಿನಾಂಕ: 10-07-2021 ರಂದು ಆರೋಪಿತನು ಹಣವನ್ನು ಕೊಡುವುದಾಗಿ ಹೇಳಿದ್ದರಿಂದ ಸಮಯ 15-30 ಗಂಟೆಗೆ ಆರೋಪಿತನ ಮನೆಯ ಹತ್ತಿರ ಹೋದ ಪಿರ್ಯಾದಿ, ಗಾಯಾಳುಗಳಾದ ದೀಪಕ ಲಮಾಣಿ ಮತ್ತು ವಿಜಯ ಲಮಾಣಿ ರವರಿಗೆ ಮಾತಿಗೆ ಮಾತು ಬೆಳೆದು ಆರೋಪಿ 1 ನೇಯವನು ಹಾಗೂ ಆತನೊಂದಿಗೆ ಬಂದ ಆರೋಪಿ 2 ಮತ್ತು 3 ನೇಯವರು ಅವಾಚ್ಯವಾಗಿ ‘ಬೋಳಿ ಮಕ್ಕಳಾ, ಸೂಳೆ ಮಕ್ಕಳಾ, ಈ ದಿವಸ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ’ ಅಂತಾ ಹೇಳಿ ಅಡ್ಡಗಟ್ಟಿ ತಡೆದು ನಿಲ್ಲಿಸಿ, ಆರೋಪಿ 1 ನೇಯವನು ಕಬ್ಬಿಣದ ರಾಡಿನಿಂದ ದೀಪಕ ಲಮಾಣಿ ಈತನ ತಲೆ ಹಾಗೂ ಭುಜದ ಮೇಲೆ, ಆರೋಪಿ 2 ನೇಯವನು ಟೈಲ್ಸ್ ನಿಂದ ವಿಜಯ ಲಮಾಣಿ ಈತನಿಗೆ ತಲೆಯ ಮೇಲೆ ಮತ್ತು ಆರೋಪಿ 3 ನೇಯವನು ಪಿರ್ಯಾದಿಗೆ ತಲೆಯ ಮೇಲೆ ಟೈಲ್ಸ್ ನಿಂದ ಹೊಡೆದು ಸಾದಾ ಹಾಗೂ ಭಾರೀ ಸ್ವರೂಪದ ಗಾಯನೋವು ಪಡಿಸಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಸಂತ ತಂದೆ ವಾಸು ಪವಾರ, ಪ್ರಾಯ-43 ವರ್ಷ, ವೃತ್ತಿ-ಚಹಾ ಅಂಗಡಿ ಕೆಲಸ, ಸಾ|| ಅಗಡಿ, ತಾ: ಮುಂಡಗೋಡ ರವರು ದಿನಾಂಕ: 10-07-2021 ರಂದು 18-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 92/2021, ಕಲಂ: 323, 324, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ವಿಜಯ ತಂದೆ ನಾಗರಾಜ ಲಮಾಣಿ, ಪ್ರಾಯ-26 ವರ್ಷ, ವೃತ್ತಿ-ಸ್ವೆಟರ್ ವ್ಯಾಪಾರ, 2]. ದೀಪಕ ಲಮಾಣಿ, ಪ್ರಾಯ-24 ವರ್ಷ, ವೃತ್ತಿ-ಸ್ವೆಟರ್ ವ್ಯಾಪಾರ, ಸಾ|| (ಇಬ್ಬರೂ) ಅಗಡಿ, ತಾ: ಮುಂಡಗೋಡ. ಈ ನಮೂದಿತ ಆರೋಪಿತರು ದಿನಾಂಕ: 10-07-2021 ರಂದು 15-30 ಗಂಟೆಗೆ ಪಿರ್ಯಾದಿಯವರ ಮನೆಗೆ ಹೋಗಿ ತಾವು ನೀಡಿದ ಹಣವನ್ನು ಮರಳಿ ಕೊಡುವಂತೆ ಕೇಳಿದ್ದು, ಅದಕ್ಕೆ ಪಿರ್ಯಾದಿಯು ‘ಸ್ವಲ್ಪ ದಿನ ತಡೆಯಿರಿ, ಮನೆಯನ್ನು ಕಟ್ಟಲು ಪೂರ್ತಿ ಹಣ ಖರ್ಚಾಗಿದೆ’ ಅಂತಾ ಹೇಳಿದಾಗ, ಆರೋಪಿ 1 ಮತ್ತು 2 ನೇಯವರು ಸೇರಿಕೊಂಡು ಪಿರ್ಯಾದಿಗೆ ಅವಾಚ್ಯವಾಗಿ ‘ಬೋಳಿ ಮಗನೆ, ಸೂಳೆ ಮಗನೆ, ನಮ್ಮ ಹಣದಲ್ಲಿ ನೀನು ಮನೆ ಕಟ್ಟುತ್ತೀಯಾ? ಈ ದಿನ ನಮಗೆ ಹಣ ಬೇಕೇ ಬೇಕು. ಇಲ್ಲವಾದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ’ ಅಂತಾ ಹೇಳಿದವರೆ, ಆರೋಪಿ 1 ನೇಯವನು ಟೈಲ್ಸ್ ನಿಂದ ಪಿರ್ಯಾದಿಯ ತಲೆಯ ಮೇಲೆ ಹೊಡೆದು ಗಾಯ ಪಡಿಸಿದ್ದು, ಆರೋಪಿ 2 ನೇಯವನು ಕೈಯಿಂದ ಮೈ ಮೇಲೆ ಹೊಡೆದನು. ಆಗ ಅಲ್ಲಿಯೇ ಇದ್ದ ತಮ್ಮ ಪರಿಚಯಿಸ್ಥರಾದ ಸುರೇಶ ವಡ್ಡರ, ರಫೀಕ್ ಗೂಡುರ ಹಾಗೂ ಪಿರ್ಯಾದಿಯ ಹೆಂಡತಿ: ಪ್ರಭಾವತಿ ಸೇರಿ ತನಗೆ ಇನ್ನೂ ಹೊಡೆಯದಂತೆ ಬಿಡಿಸಿದ್ದು, ಈ ಕುರಿತು ಸದ್ರಿ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಈರಪ್ಪ ತಂದೆ ನಾಗರಾಜ ಬೋವಿವಡ್ಡರ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗಣೇಶಪುರ, ತಾ: ಮುಂಡಗೋಡ ರವರು ದಿನಾಂಕ: 10-07-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 10-07-2021

at 00:00 hrs to 24:00 hrs

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 18/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ತುಕ್ಯಾ ತಂದೆ ನಾಗ್ಯಾ ಮಿರಾಶಿ, ಪ್ರಾಯ-62 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹುಲಗೋಡ, ಸಾತ್ಪೂರ್ ಗ್ರಾಮ, ತಾ: ಯಲ್ಲಾಪುರ. ಪಿರ್ಯಾದಿಯ ತಂದೆಯಾದ ಇವರು ದಿನಾಂಕ: 10-07-2021 ರಂದು ಬೆಳಿಗ್ಗೆ 07-30 ಗಂಟೆಯ ಸುಮಾರಿಗೆ ಸಾತ್ಪೂರ್ ಹುಲಗೋಡ ಗ್ರಾಮದ ತನ್ನ ವಾಸದ ಮನೆಯ ಸಮೀಪದ ಸಾಗುವಳಿ ಜಮೀನು ಸರ್ವೇ ನಂ: 239 ರಲ್ಲಿ ಇರುವ ಬೋರವೆಲ್ ನಿಂದ ಗದ್ದೆಗೆ ನೀರು ಹಾಯಿಸುವ ಸಲುವಾಗಿ ಬೋರವೆಲ್ ಚಾಲನೆ ಮಾಡಲು ಮೀಟರ್ ಬೋರ್ಡ್ ಹತ್ತಿರ ಹೋಗಿ ಬಟನ್ ಒತ್ತಿದಾಗ ಆಕಸ್ಮಿಕವಾಗಿ ಮೃತನ ಎಡಗೈ ಬೆರಳುಗಳಿಗೆ ವಿದ್ಯುತ್ ತಾಗಿ ಮೈಯಲ್ಲಿ ವಿದ್ಯುತ್ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮಕ್ಕಾಗಿ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ತುಕ್ಯಾ ಮಿರಾಶಿ, ಪ್ರಾಯ-34 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹುಲಗೋಡ, ಸಾತ್ಪೂರ್ ಗ್ರಾಮ, ತಾ: ಯಲ್ಲಾಪುರ ರವರು ದಿನಾಂಕ: 10-07-2021 ರಂದು 09-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 12-07-2021 04:52 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080