ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 10-06-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 96/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 08-06-2021 ರಂದು ಸಂಜೆ 06-00 ಗಂಟೆಯಿಂದ ದಿನಾಂಕ: 08-06-2021 ರಂದು ಬೆಳಿಗ್ಗೆ 07-30 ಗಂಟೆಯ ನಡುವಿನ ಅವಧಿಯಲ್ಲಿ ಅಂಕೋಲಾ-ಮಂಜುಗುಣಿ ರಸ್ತೆಯ ತೆಂಕಣಕೇರಿಯಲ್ಲಿರುವ ಪಿರ್ಯಾದಿಯವರ ವಾಸದ ಮನೆಯ ಮುಂದಿನ ಬಾಗಿಲ ಬೀಗವನ್ನು ಯಾವುದೋ ಗಟ್ಟಿ ವಸ್ತುವಿನಿಂದ ಮೀಟಿ ಮುರಿದು, ಮನೆಯೊಳಗೆ ಹೊಕ್ಕಿ, ಮನೆಯ ಬೆಡ್ ರೂಮ್ ದಲ್ಲಿದ್ದ ಮೌಂಟೇನ್ ಚಿತ್ರದ ಗೋದ್ರೇಜ್ ಕಪಾಟನ್ನು ಓಪನ್ ಮಾಡಿ, ಸುಮಾರು ವರ್ಷಗಳಿಂದ ಗಣೇಶ ಹಬ್ಬದ ವೇಳೆ ಗಣೇಶ ವಿಗ್ರಹಕ್ಕೆ ಹಾಕುತ್ತ ಬಂದಿದ್ದ ಅಜಮಾಸು 10,000/- ರೂಪಾಯಿ ಬೆಲೆಯ ಸುಮಾರು 5 ಗ್ರಾಂ. ತೂಕದ ಬಂಗಾರದ ಕುಡಕ-1, ಅಜಮಾಸು 60,000/- ರೂಪಾಯಿ ಬೆಲೆಯ ಸುಮಾರು 15 ಗ್ರಾಂ. ತೂಕದ ಬಂಗಾರದ ಚೈನು-2, ಅಜಮಾಸು 6,000/- ರೂಪಾಯಿ ಬೆಲೆಯ ಸುಮಾರು 03 ಗ್ರಾಂ. ತೂಕದ ಬಂಗಾರದ ನೇಮಾ-1, ಅಜಮಾಸು 10,000/- ರೂಪಾಯಿ ಬೆಲೆಯ ಸುಮಾರು 05 ಗ್ರಾಂ. ತೂಕದ ಗಣೇಶ ವಿಗ್ರಹದ ಸೊಂಡಲಿಗೆ ಸುತ್ತುವ ಬಂಗಾರದ ಕಟ್ಟಿ-1 ನೇದವುಗಳು ಸೇರಿದಂತೆ ಒಟ್ಟೂ 86,000/- ರೂಪಾಯಿಗಳ ಸುಮಾರು 43 ಗ್ರಾಂ. ತೂಕದ ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸುಭಾಷ ತಂದೆ ನಾರಾಯಣ ನಾಯ್ಕ, ಪ್ರಾಯ-54 ವರ್ಷ, ವೃತ್ತಿ-ಸರಕಾರಿ ಶಾಲಾ ಶಿಕ್ಷಕ, ಸಾ|| ತೆಂಕಣಕೇರಿ, ಎಮ್.ಎಸ್.ಐ.ಎಲ್ ಶಾಪ್ ಹತ್ತಿರ, ತಾ: ಅಂಕೋಲಾ ರವರು ದಿನಾಂಕ: 10-06-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 80/2021, ಕಲಂ: ಯುವಕ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಯುವಕ ಶ್ರೀ ಮೊಹಮ್ಮದ್ ಮುಸೀನ್ ತಂದೆ ಅಲ್ಲಾಭಕ್ಷ್ ಬಾಷಾಸಾಬ್ ಕಚವಿ, ಪ್ರಾಯ-25 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೊನ್ನೆಗದ್ದೆ, ಹೆಬಳೆ, ತಾ: ಭಟ್ಕಳ. ಪಿರ್ಯಾದಿಯ ತಮ್ಮನಾದ ಈತನಿಗೆ ಸುಮಾರು 8 ವರ್ಷಗಳ ಹಿಂದೆ ಹಾವೇರಿಯಲ್ಲಿ ಅಪಘಾತವಾದಾಗಿನಿಂದ ತಲೆಗೆ ಪೆಟ್ಟಾಗಿ ಮಾನಸಿಕವಾಗಿ ಅಸ್ವಸ್ಥನಾಗಿದ್ದನು, ಪಿರ್ಯಾದಿಯ ಮನೆಯವರು ಅವನಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಉಪಚಾರ ಕೊಡಿಸಿದರೂ ಸಹ ಅವನಿಗೆ ಕಡಿಮೆಯಾಗಿರಲಿಲ್ಲ. ಹೀಗಿರುತ್ತಾ ದಿನಾಂಕ: 08-06-2021 ರಂದು ಸಂಜೆ 04-00 ಗಂಟೆಯ ಸುಮಾರಿಗೆ ತನ್ನ ಮನೆಯವರೆಲ್ಲಾ ಮನೆಯ ಒಳಗಡೆ ಇದ್ದಾಗ ನಮೂದಿತನು ಮನೆಯಿಂದ ಹೊರಗೆ ಹೋದವನು ರಾತ್ರಿ ಎಷ್ಟು ಗಂಟೆಯಾದರೂ ಸಹ ಮರಳಿ ಮನೆಗೆ ಬಂದಿರುವುದಿಲ್ಲ. ಆದ್ದರಿಂದ ತನ್ನ ತಮ್ಮ ಸಂಬಂಧಿಕರ ಮನೆಗೂ ಹೋಗದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದವನನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಮೊಹಮ್ಮದ್ ಹುಸೇನ್ ತಂದೆ ಅಲ್ಲಾಭಕ್ಷ್ ಬಾಷಾಸಾಬ್ ಕಚವಿ, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೊನ್ನೆಗದ್ದೆ, ಹೆಬಳೆ, ತಾ: ಭಟ್ಕಳ ರವರು ದಿನಾಂಕ: 10-06-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 40/2021, ಕಲಂ: 143, 147, 323, 307, 504, 506 ಸಹಿತ149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮುಷರಫ್ ಅಹಮ್ಮದ್ ತಂದೆ ಸೈಯದ್ ಮುಸ್ತಾಕ್, ಪ್ರಾಯ-21 ವರ್ಷ, 2]. ಫೈರೋಜ್ ಅಹಮ್ಮದ್ ಸೈಯದ್ ಮುಸ್ತಾಕ್ ಪ್ರಾಯ-23 ವರ್ಷ, 3]. ಅಲ್ಪಾಜ್ ಅಬ್ದುಲ್ ಸತ್ತಾರ್ ಕೇಂದ್ರಿ, ಪ್ರಾಯ-22 ವರ್ಷ, 4]. ಸೈಯದ್ ಜಿಶಾನ್ ಅಸ್ಫಾಕ್ ಸೈಯದಸಾಬ್, ಪ್ರಾಯ-19 ವರ್ಷ, ಸಾ|| (ಎಲ್ಲರೂ) ರಾಮನಬೈಲ, ತಾ: ಶಿರಸಿ, 5]. ಆದೀಲ್ ಹಬಿಬುಲ್ಲಾ ಖತಿಭ್, ಪ್ರಾಯ-21 ವರ್ಷ, ಸಾ|| ಕಸ್ತೂರಬಾ ನಗರ, ತಾ: ಶಿರಸಿ, 6]. ಅಬ್ದುಲ್ ಸತ್ತಾರ್ ಗುಲಾಬ್ ಭಾಷಾ ಶೇಖ್, ಪ್ರಾಯ-21 ವರ್ಷ, ಸಾ|| ಕಸ್ತೂರಬಾ ನಗರ, ತಾ: ಶಿರಸಿ. ಈ ನಮೂದಿತ ಆರೋಪಿತರು ದಿನಾಂಕ: 10-06-2021 ರಂದು 20-30 ಗಂಟೆಯ ಸುಮಾರಿಗೆ ಶಿರಸಿ ಶಹರದ ರಾಮನಬೈಲ ಸಂಘಧಾಮದ ಹತ್ತಿರ ಖಾಲಿ ಜಾಗದಲ್ಲಿ ಜಾಹೀದ್ ಮತ್ತು ತೈಜೀಬ್ ಇವರ ಮೇಲೆ ಹಣ ನೀಡುವ ವಿಚಾರದಲ್ಲಿ ಹಳೆಯ ದ್ವೇಷದಿಂದ ಇದ್ದವರು, ಆರೋಪಿತರಲ್ಲರೂ ಗುಂಪು ಕಟ್ಟಿಕೊಂಡು ಬಂದು ಜಾಹೀದ್ ಮತ್ತು ತೈಜೀಬ್ ಇವರಿಗೆ ‘ಮಾದರ್ ಚೋದ್, ರಾಂಡಿಕೆ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದಿದ್ದಲ್ಲದೇ, ಆರೋಪಿ 1 ನೇಯವನು ‘ಪದೇ ಪದೇ ಹಣ ಕೇಳುತ್ತಿಯಾ, ರಾಂಡಿಕೆ’ ಅಂತಾ ಬೈಯ್ದು, ಆರೋಪಿತರೆಲ್ಲರೂ ಸೇರಿ ತೈಜೀಬ್ ಹಾಗೂ ಜಾಹೀದ್ ಇವರಿಗೆ ಕೈಯಿಂದ ಮೈಮೇಲೆ ಹೊಡೆದು, ಬಿಡಿಸಲು ಹೋದ ಪಿರ್ಯಾದಿ ಮತ್ತು ಇರ್ಫಾನ್ ಇವರಿಗೂ ಸಹ ಕೈಯಿಂದ ಹೊಡೆದು ದೂಡಿ ಹಾಕಿ, ಆರೋಪಿ 2 ಮತ್ತು 5 ನೇಯವರು ಜಾಹೀದ್ ಈತನಿಗೆ ಹಿಡಿದುಕೊಂಡಾಗ ಆರೋಪಿ 1 ನೇಯವನು ಕೊಲೆ ಮಾಡುವ ಉದ್ದೇಶದಿಂದ ತಾನು ತಂದ ಚಾಕುವಿನಿಂದ ಜಾಹೀದ್ ಈತನಿಗೆ ‘ಈ ದಿನ ನಿನಗೆ ಬಿಡುವುದಿಲ್ಲ’ ಅಂತಾ ಹೇಳಿ ಬಲಬದಿಯ ಪಕ್ಕೆಲುಬಿಗೆ ಹಾಗೂ ಎಡಗೆನ್ನೆಯ ಮೇಲೆ ಚುಚ್ಚಿ ಗಾಯನೋವು ಪಡಿಸಿ, ಬಿಡಿಸಲು ಹೋದ ಪಿರ್ಯಾದಿಗೂ ಸಹ ದೂಡಿ ಹಾಕಿ, ಆರೋಪಿತರೆಲ್ಲರೂ ಹೊಡೆಯುವುದನ್ನು ಬಿಟ್ಟು ‘ಈ ದಿನ ಉಳಿದುಕೊಂಡಿದ್ದೀರಿ. ಇನ್ನೊಂದು ದಿನ ಸಿಕ್ಕರೆ ನಿಮಗೆ ಜೀವ ಸಹಿತ ಬಿಡುವುದಿಲ್ಲ’ ಅಂತಾ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಅಬ್ಜಲ್ ತಂದೆ ಕಬೀರ್ ಶೇಖ್, ಪ್ರಾಯ-20 ವರ್ಷ, ವೃತ್ತಿ-ಬಾರ್ ಬೆಂಡಿಗ್ ಕೆಲಸ, ಸಾ|| ರಾಮನಬೈಲ, ಆಟೋ ಸ್ಟ್ಯಾಂಡ್ ಹತ್ತಿರ, ತಾ: ಶಿರಸಿ ರವರು ದಿನಾಂಕ: 10-06-2021 ರಂದು 23-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 59/2021, ಕಲಂ: ಯುವತಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಯುವತಿ ಕುಮಾರಿ: ಹೀನಾ ತಂದೆ ಮೌಲಾ ಮುಲ್ಲಾ, ಪ್ರಾಯ-19 ವರ್ಷ, ಸಾ|| ಬಾಶುಮನ್ ಮಸೀದಿ ಹತ್ತಿರ, ಮಾರುತಿ ನಗರ, ದಾಂಡೇಲಿ. ಪಿರ್ಯಾದುದಾರರ ಮೊಮ್ಮಗಳಾದ ಇವಳು ದಿನಾಂಕ: 09-06-2021 ರಂದು 15-00 ಗಂಟೆಗೆ ಮಾರುತಿ ನಗರದ ತಮ್ಮ ಮನೆಯಿಂದ ‘ಅಂಗಡಿಗೆ ಹೋಗಿ ಬರುತ್ತೇನೆ’ ಅಂತಾ ಮನೆಯಲ್ಲಿ ಹೇಳಿ ಮನೆಯಿಂದ ಹೋದವಳು, ಅಂಗಡಿಗೂ ಹೋಗದೇ ಮರಳಿ ಮನೆಗೂ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಮೊಮ್ಮಗಳನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ಮೆಹಮೂನಾ ಕೋಂ. ಮಹಮ್ಮದ್ ಅಲಿ ಶೇಖ್, ಪ್ರಾಯ-70 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಬಾಶುಮನ್ ಮಸೀದಿ ಹತ್ತಿರ, ಮಾರುತಿ ನಗರ, ದಾಂಡೇಲಿ ರವರು ದಿನಾಂಕ: 10-06-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 75/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 05-06-2021 ರಂದು ರಾತ್ರಿ 11-30 ಗಂಟೆಯಿಂದ ದಿನಾಂಕ: 06-06-2021 ರಂದು ಮುಂಜಾನೆ 07-30 ಗಂಟೆಯ ನಡುವಿನ ಅವಧಿಯಲ್ಲಿ ಮುಂಡಗೋಡ ತಾಲೂಕಿನ ಕಾತೂರ ಗ್ರಾಮದ ಪಿರ್ಯಾದಿಯ ಮನೆಯ ಮುಂದೆ ನಿಲ್ಲಿಸಿಟ್ಟ ಪಿರ್ಯಾದಿಯ ಬಾಬ್ತು ಅ||ಕಿ|| 15,000/- ರೂಪಾಯಿ ಬೆಲೆಬಾಳುವ ಕಪ್ಪು ಬಣ್ಣ್ಣದ ಹೀರೋ ಸ್ಪ್ಲೆಂಡರ್ ಪ್ರೋ ಮೋಟಾರ್ ಸೈಕಲ್ ನಂ: ಕೆ.ಎ-31/ಯು-0084 (ಚಾಸಿಸ್ ನಂ: MALHA10ASCHJ12141 ಹಾಗೂ ಇಂಜಿನ್ ನಂ: HA10ELCHJ12895) ನೇದನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸಿರಾಜ್ ತಂದೆ ಬಾಷಾಸಾಬ್ ಬೊಮ್ಮನಳ್ಳಿ, ಪ್ರಾಯ-26 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ಕಾತೂರ, ತಾ: ಮುಂಡಗೋಡ ರವರು ದಿನಾಂಕ: 10-06-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 53/2021, ಕಲಂ: 323, 324, 448, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಚಿದಂಬರ ತಾನಾಜಿ ಗುರವ, 2]. ಧಾನು ತಾನಾಜಿ ಗುರವ, ಸಾ|| (ಇಬ್ಬರೂ) ವಾಟ್ಲಾ, ಅಖೇತಿ, ತಾ: ಜೋಯಿಡಾ. ಈ ನಮೂದಿತ ಆರೋಪಿತರ ಹಾಗೂ ಪಿರ್ಯಾದಿಯವರ ಮನೆಗಳು ಒಂದೇ ಲೈನಿನಲ್ಲಿದ್ದು, ಆರೋಪಿತರು ತಮ್ಮ ಮನೆಯ ಪ್ರಾರಂಭದಲ್ಲಿ ಕಟ್ಟಿಗೆಯ ಬೇಲಿ ಮಾಡಿಕೊಂಡು ಅದಕ್ಕೆ ಗೇಟ್ ಮಾಡಿಕೊಂಡಿದ್ದು, ಪಿರ್ಯಾದಿಯ ಮನೆಯ ಜನರು ತಮ್ಮ ವಾಹನವನ್ನು ಆರೋಪಿತನ ಮನೆಯ ಅಂಗಳದಿಂದ ಪಾಸ್ ಮಾಡಿಕೊಂಡು ಹೋಗುತ್ತಿದ್ದರು. ಆರೋಪಿತರು ಪಿರ್ಯಾದಿಯವರ ಕಡೆಯವರು ಕಾರ್ ಪಾಸಾಗದಂತೆ ತಮ್ಮ ಗೇಟನ್ನು ಸಣ್ಣಗೆ ಮಾಡಿದ್ದು, ದಿನಾಂಕ: 09-06-2021 ರಂದು ಬೆಳಿಗ್ಗೆ ಪಿರ್ಯಾದಿಯವರ ಮಗ: ಅರುಣ ಇವನು ತನ್ನ ಹೆಂಡತಿ-ಮಗುವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಕಾರ್ ಪಾಸಾಗದೇ ಇರುವುದರಿಂದ ಬೇಲಿಯ ಗೂಟವನ್ನು ಕಿತ್ತು ಕಾರ್ ಪಾಸ್ ಮಾಡಿಕೊಂಡು ಹೋಗಿದ್ದು, ಬೇಲಿಯ ಗೇಟ್ ಸಣ್ಣಗೆ ಮಾಡಿದ ವಿಷಯದಲ್ಲಿ ಪಿರ್ಯಾದಿಯವರು ಆರೋಪಿತರ ತಾಯಿಗೆ ‘ನಿನ್ನ ಮಕ್ಕಳಿಗೆ ಈ ಹಿಂದಿನಂತೆ ಗೇಟನ್ನು ಇಡಲು ಹೇಳು, ಈ ರೀತಿ ಗೇಟ್ ಸಣ್ಣಗೆ ಮಾಡಿದರೆ ನಮ್ಮ ಕಾರ್ ತೆಗೆದುಕೊಂಡು ಹೋಗುವದು ಹೇಗೆ?’ ಅಂತಾ ಕೇಳಿದ್ದಕ್ಕೆ ಮಾತಿಗೆ ಮಾತು ಆಗಿದ್ದು, ಆ ವಿಷಯವಾಗಿ ಸಾಯಂಕಾಲ 18-30 ಗಂಟೆಗೆ ಆರೋಪಿತರಿಬ್ಬರು ಪಿರ್ಯಾದಿಯವರ ಮನೆಯ ಎದುರುಗಡೆ ಬಂದು ‘ರಂಡೆ, ನಮ್ಮ ಗೇಟ್ ಯಾಕೆ ಮುರಿದಿದ್ದು, ನಮ್ಮ ಗೇಟ್ ಮುರಿದು ನಮ್ಮ ತಾಯಿಗೆ ಮಕ್ಕಳಿಗೆ ತಿಳಿ ಹೇಳು ಅಂತಾ ಹೇಳುತ್ತಿಯಾ, ನಿನಗೆ ತೋರಿಸುತ್ತೇವೆ ಹೊರಗೆ ಬಾ’ ಅಂತಾ ಕೂಗುತ್ತಿರುವಾಗ ಮನೆಯಲ್ಲಿದ್ದ ಪಿರ್ಯಾದಿ ಹಾಗೂ ಅವರ ಮಗ: ಅರುಣ ಹೊರಗಡೆ ಬಂದು ‘ಯಾಕೆ ಕೂಗಾಡುತ್ತಿರುವಿರಿ?’ ಅಂತಾ ಕೇಳಿದ್ದಕ್ಕೆ ಆರೋಪಿ 2 ನೇಯವನು ಗಟ್ಟಿಯಾಗಿ ಹಿಡಿದುಕೊಂಡಿದ್ದು, ಆರೋಪಿ 1 ನೇಯವನು ತನ್ನ ಹೊಸ್ತಿಲಿನಲ್ಲಿ ನಿಂತಿದ್ದ ಪಿರ್ಯಾದಿಗೆ ಕಲ್ಲಿನಿಂದ ಬೀಸಿ ಹೊಡೆದಿದ್ದು, ಅದು ಅವರ ಎಡಗಾಲ ಮೊಣಗಂಟಿನ ಕೆಳ ಭಾಗದಲ್ಲಿ ತಾಗಿ ರಕ್ತಗಾಯವಾಗಿದ್ದು, ಅಷ್ಟಕ್ಕೆ ಸುಮ್ಮನಾಗದ ಅವನು ಪಿರ್ಯಾದಿಯ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಕೈಯಿಂದ ಮೈ ಮೇಲೆ ಹೊಡೆದು, ಅಲ್ಲಿಂದ ಹೋಗುತ್ತಾ ‘ನಮ್ಮ ಬೇಲಿಯನ್ನು ತೆಗೆಯುವುದು ಮಾಡಿದರೆ ನಿಮ್ಮನ್ನು ಮುಗಿಸಿಯೇ ಬಿಡುತ್ತೇವೆ’ ಅಂತಾ ಧಮಕಿ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀಮತಿ ಸರಸ್ವತಿ ಕೋಂ. ಬುದ್ದೋ ಗುರವ, ಪ್ರಾಯ-52 ವರ್ಷ, ವೃತ್ತಿ-ಗೃಹಿಣಿ, ಸಾ|| ವಾಟ್ಲಾ, ಅಖೇತಿ, ತಾ: ಜೋಯಿಡಾ ರವರು ದಿನಾಂಕ: 10-06-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 10-06-2021

at 00:00 hrs to 24:00 hrs

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 03/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಪುಷ್ಪಾ ಕೋಂ. ವಿಠ್ಠಲ ಗುಂಡುಪ್ಕರ್, ಪ್ರಾಯ-25 ವರ್ಷ, ವೃತ್ತಿ-ಗೃಹಿಣಿ, ಸಾ|| ಹಂದಲಿ, ತಾ: ಹಳಿಯಾಳ. ನಮೂದಿತ ಇವಳಿಗೆ ಕಳೆದ 5 ವರ್ಷದ ಹಿಂದೆ ಹಳಿಯಾಳ ತಾಲೂಕಿನ ಹಂದಲಿ ಗ್ರಾಮದ ವಿಠ್ಠಲ ತಂದೆ ಪುಂಡಲಿಕ ಗುಂಡುಪ್ಕರ್ ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಅವರಿಗೆ ಒಂದು ಹೆಣ್ಣು ಮಗುವಾದ ನಂತರ ಗಂಡ ಹೆಂಡತಿಯ ಸಂಸಾರದಲ್ಲಿ ಹೊಂದಾಣಿಕೆ ಆಗದೇ ಇರುವುದರಿಂದ ಅವರ ಸಂಸಾರದಲ್ಲಿ ವೈಮನಸ್ಸು ಉಂಟಾಗಿ, ಮೃತಳು ಕಳೆದ 4 ವರ್ಷದಿಂದ ತನ್ನ ಗಂಡನ ಮನೆಯನ್ನು ಬಿಟ್ಟು ತನ್ನ ತವರು ಮನೆಯಲ್ಲಿ ಬಂದು ಉಳಿದಿದ್ದು, ತನ್ನ ಗಂಡನ ಮನೆಯವರು ತನಗೆ ಕರೆದುಕೊಂಡು ಹೋಗದೇ ಇದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದವಳು, ತನ್ನ ಗಂಡ ಕಳೆದ 2 ವರ್ಷದ ಹಿಂದೆ ವಿಚ್ಛೇದನಕ್ಕೆ (ಡೈವೋರ್ಸಿಗೆ) ಅರ್ಜಿ ಹಾಕಿದ್ದು, ಆಗಿನಿಂದ ಮೃತಳು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದವಳು, ಧಾರವಾಡದ ಪಾಂಡುರಂಗ ಮನೋವೈದ್ಯರಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದವಳು, ದಿನಾಂಕ: 10-06-2021 ರಂದು ಮಧ್ಯಾಹ್ನ 02-00 ಗಂಟೆಯಿಂದ ಸಂಜೆ 05-00 ಗಂಟೆಯ ನಡುವಿನ ಅವಧಿಯಲ್ಲಿ ತನಗಿದ್ದ ಮಾನಸಿಕ ಖಾಯಿಲೆಯಿಂದ ನೊಂದು ಜೀವನದಲ್ಲಿ ಜುಗುಪ್ಸೆಗೊಂಡು ಹಳಿಯಾಳ ತಾಲೂಕಿನ ಆಲೂರು ಗ್ರಾಮದ ತನ್ನ ತವರು ಮನೆಯಲ್ಲಿನ ಜಂತಿಗೆ ತನ್ನ ಚೂಡಿದಾರ ವೇಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರ ಹೊರತು ಸದ್ರಿಯವಳ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಲಕ್ಷ್ಮೀ ಕೋಂ. ಪರಶುರಾಮ ಪಿಸಾಳೆ, ಪ್ರಾಯ-52 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಆಲೂರು, ತಾ: ಹಳಿಯಾಳ ರವರು ದಿನಾಂಕ: 10-06-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 26/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ರಾಮಚಂದ್ರ ತಂದೆ ತಿಮ್ಮಾ ನಾಯ್ಕ, ಪ್ರಾಯ-33 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಘಟ್ಟಿಕೈ, ತಾ: ಸಿದ್ದಾಪುರ. ಸುದ್ದಿದಾರಳ ಗಂಡನಾದ ಈತನು ಕಟ್ಟಡ ಕಟ್ಟುವ, ಕೆಡುವ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ಹೀಗಿರುವಲ್ಲಿ ಕಳೆದ 3 ದಿವಸಗಳ ಹಿಂದೆ ಸಿದ್ದಾಪುರ ತಾಲೂಕಿನ ಕಾನಸೂರಿನಲ್ಲಿರುವ ಮನೋರಮಾ ಶಾನಭಾಗ ಇವರ ಮನೆಯನ್ನು ಕೆಡುವವ ಕೆಲಸವನ್ನು ಅವರ ಮಗಳು ಶ್ರೀಮತಿ ಜ್ಯೋತಿ ಕೋಂ. ಭರತ ತಲ್ಲೂರ ಇವರು ಹೇಳಿದಂತೆ ಇನ್ನೂ 2 ಜನ ಆಳುಗಳೊಂದಿಗೆ ಮನೆ ಕೆಡುವ ಕೆಲಸ ಮಾಡಿಕೊಂಡು ಬಂದಿದ್ದು, ಹೀಗಿರುವಲ್ಲಿ ದಿನಾಂಕ: 10-06-2021 ರಂದು ಸಂಜೆ 04-30 ಗಂಟೆಗೆ ಮನೆಯ ಹಿಂದುಗಡೆ ಇರುವ ಬಚ್ಚಲು ಮನೆಯ ಬಾಗಿಲನ್ನು ಕೀಳುತ್ತಿರುವಾಗ ಬಚ್ಚಲು ಮನೆಯ ಸ್ಲಾಬ್ ಆಕಸ್ಮಿಕವಾಗಿ ಕುಸಿದು ಅವನ ಮೇಲೆ ಬಿದ್ದು ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಇದೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಇಂದಿರಾ ರಾಮಚಂದ್ರ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಘಟ್ಟಿಕೈ, ತಾ: ಸಿದ್ದಾಪುರ ರವರು ದಿನಾಂಕ: 10-06-2021 ರಂದು 18-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 11-06-2021 12:45 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080