Feedback / Suggestions

Daily District Crime Report

Date:- 10-03-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 16/2021, ಕಲಂ: 3, 5 ಸ್ಪೋಟಕ ವಸ್ತುಗಳ ಅಧಿನಿಯಮ-1908 ಹಾಗೂ ಕಲಂ: 9(ಬಿ) ಸ್ಫೋಟಕ ಅಧಿನಿಯಮ-1884 ನೇದ್ದರ ವಿವರ...... ನಮೂದಿತ ಆರೋಪಿತರು 1]. ಸುರೇಶ ಎಸ್. ತಂದೆ ಸದಾಶಿವನ್, ಪ್ರಾಯ-32 ವರ್ಷ, ವೃತ್ತಿ-ಬಾವಿ ರಿಂಗ್ ಕಾಂಟ್ರ್ಯಾಕ್ಟರ್, ಸಾ|| ರಾಧಾ ವಿಲಾಸಮ್, ಕಡೈಕ್ಕೋಡು, ಕರೀಪು, ಕೊಲ್ಲಮ್ಮ, ಕೇರಳ ಹಾಲಿ ಸಾ|| ಅಸ್ನೋಟಿ, ಕಾರವಾರ, 2]. ರಾಜಾ ತಂದೆ ರಾಮಸ್ವಾಮಿ, ಸಾ|| ಬಂಗಾರಪ್ಪ ನಗರ, ಶಿರವಾಡ, ಕಾರವಾರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ಕಾರವಾರ ತಾಲೂಕಿನ ಶಿರವಾಡದ ಬಂಗಾರಪ್ಪ ನಗರದಲ್ಲಿ ಬಾವಿ ತೆಗೆಯುವ ಕಾಂಟ್ರ್ಯಾಕ್ಟ್ ಹಿಡಿದು ಬಾವಿ ತೆಗೆಯುತ್ತಿದ್ದಾಗ ಬಾವಿಯಲ್ಲಿ ಕಲ್ಲು ಬಂದಿದ್ದರಿಂದ ಕಲ್ಲು ಬ್ಲ್ಯಾಸ್ಟ್ ಮಾಡಿಸುವ ಸಲುವಾಗಿ ಆರೋಪಿ 2 ನೇಯವನ ಮುಖಾಂತರ ಸ್ಪೋಟಕ ವಸ್ತುಗಳನ್ನು ಸಂಬಂಧಪಟ್ಟ ಅಧಿಕಾರಿಯವರಿಂದ ಯಾವುದೇ ಅನುಮತಿ ಪತ್ರ/ಪರವಾನಿಗೆ ಪಡೆದುಕೊಳ್ಳದೆ ಅಕ್ರಮವಾಗಿ ತರಿಸಿಕೊಂಡು ತಮ್ಮ ವಶದಲ್ಲಿ ಇಟ್ಟುಕೊಂಡು ದಿನಾಂಕ: 10-03-2021 ರಂದು 14-45 ಗಂಟೆಯ ಸಮಯಕ್ಕೆ ಬಾವಿಯೊಳಗಿನ ಕಲ್ಲನ್ನು ಬ್ಲ್ಯಾಸ್ಟ್ ಮಾಡುವ ತಯಾರಿಯಲ್ಲಿದ್ದಾಗ, ಆರೋಪಿ 1 ನೇಯವನು ಸೆರೆ ಸಿಕ್ಕಿದ್ದು ಹಾಗೂ ಆರೋಪಿ 2 ನೇಯವನು ಓಡಿ ಹೋಗಿ ಪರಾರಿಯಾದ ಬಗ್ಗೆ ಪಿರ್ಯಾದಿ ಶ್ರೀ ರೇವಣಸಿದ್ದಪ್ಪ ಜಿರಂಕಲಗಿ, ಪಿ.ಎಸ್.ಐ, ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 10-03-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 17/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಹನುಮಂತ ತಂದೆ ಸತ್ಯಪ್ಪ ಭಜಂತ್ರಿ, ಸಾ|| ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ, ಕಾರವಾರ (ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-42/ಎಫ್-973 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 10-03-2021 ರಂದು 15-45 ಗಂಟೆಯ ಸಮಯಕ್ಕೆ ಬಾಬ್ತು ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-42/ಎಫ್-973 ನೇದನ್ನು ಅಂಕೋಲಾ ಕಡೆಯಿಂದ ಚಲಾಯಿಸಿಕೊಂಡು ಬಂದವನು ಮುದಗಾ ಘಟ್ಟದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಹೆದ್ದಾರಿಯು ತಿರುವಾಗಿ ಇಳಿಜಾರಾಗಿದ್ದರೂ ಕೂಡಾ ಸದ್ರಿ ಬಸ್ ಅನ್ನು ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಒಮ್ಮೇಲೆ ಹೆದ್ದಾರಿಯ ಬಲಬದಿಗೆ ಚಲಾಯಿಸಿದ್ದರಿಂದ ಕಾರವಾರ ಕಡೆಯಿಂದ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-0908 ನೇದನ್ನು ಸವಾರಿ ಮಾಡಿಕೊಂಡು ಬಂದಿದದ್ದ ದೀಪೇಶ ತಂದೆ ಮೋಹನ ನಾಯ್ಕ, ಪ್ರಾಯ-24 ವರ್ಷ, ಸಾ|| ದೇವರಹಕ್ಕಲ್, ತಾ: ಕುಮಟಾ ಈತನಿಗೆ ಸದ್ರಿ ಬಸ್ಸಿನ ಮುಂದಿನ ಬಲಬದಿಯ ಹೆಡ್ ಲೈಟಿನ ಹತ್ತಿರ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಸದ್ರಿ ಮೋಟಾರ್ ಸೈಕಲ್ ಸವಾರನು ಮೋಟಾರ್ ಸೈಕಲ್ ಸಮೇತವಾಗಿ ಹೆದ್ದಾರಿಯಲ್ಲಿ ಬಿದ್ದು, ಆತನ ಎದೆಯ ಭಾಗಕ್ಕೆ ಒಳ ಪೆಟ್ಟಾಗಿದ್ದು ಹಾಗೂ ಬಾಯಿಂದ ರಕ್ತ ಬಂದು ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ವಾಸು ತಂದೆ ಸುಕ್ರು ಗೊಂಡಾ, ಪ್ರಾಯ-30 ವರ್ಷ, ವೃತ್ತಿ-ಮೈಕ್ರೋ ಫೈನಾನ್ಸ್ ನಲ್ಲಿ ಕೆಲಸ, ಸಾ|| ತೆಂಗಿನಗುಂಡಿ (ಹೆರ್ತಾರ), ತಾ: ಭಟ್ಕಳ, ಹಾಲಿ ಸಾ|| ಕುರ್ಸಾವಾಡಾ, ಕಾರವಾರ ರವರು ದಿನಾಂಕ: 10-03-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 18/2021, ಕಲಂ: ಮನುಷ್ಯ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮನುಷ್ಯ ಶ್ರೀ ಅರವಿಂದ ತಂದೆ ಘನಶ್ಯಾಮ ದೇಸಾಯಿ, ಪ್ರಾಯ-67 ವರ್ಷ, ಸಾ|| ದೇಸಾಯಿವಾಡಾ, ಚಿತ್ತಾಕುಲಾ, ಕಾರವಾರ. ಪಿರ್ಯಾದಿಯ ಸಹೋದರನಾದ ಈತನು B.Sc ಪದವೀಧರನಿದ್ದು, ಗೋವಾ ರಾಜ್ಯದ MRF ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವನು, ಕಳೆದ 10 ವರ್ಷದ ಹಿಂದೆ VRS ಪಡೆದುಕೊಂಡು ನಮ್ಮ ಮನೆಯ ಒಂದು ಕೋಣೆಯಲ್ಲಿ ವಾಸವಾಗಿದ್ದನು. ಅವನು ಮನಸ್ಸಿಗೆ ಬಂದ ಹಾಗೆ ವರ್ತಿಸುತ್ತಿದ್ದು, ಯಾರಿಗೂ ಹೇಳದೇ ಕೇಳದೇ ಎಲ್ಲಿಗಾದರೂ ಹೋಗಿ 3-4 ತಿಂಗಳು ಉಳಿದು ಮರಳಿ ಬರುತ್ತಿದ್ದವನು,  ಕಳೆದ 2019 ನೇ ಸಾಲಿನಲ್ಲಿ ತಾನು ಹಾಗೂ ತನ್ನ ಹೆಂಡತಿ ಆರೋಗ್ಯ ಪರೀಕ್ಷೆಗೆ ಮುಂಬೈಗೆ ಹೋಗಿ ದಿನಾಂಕ: 16-01-2020 ರಂದು ಮರಳಿ ಬಂದಾಗ ತನ್ನ ತಮ್ಮ ಮನೆಯಲ್ಲಿ ಇರದೇ, ನಮಗೂ ಹೇಳದೇ ಎಲ್ಲಿಗೋ ಹೋಗಿ ಕಾಣೆಯಾದವನಿಗೆ ಇದುವರೆಗೆ ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿದ್ದು ಇರುವುದಿಲ್ಲ. ಕಾರಣ ಕಾಣೆಯಾದ ತನ್ನ ತಮ್ಮನನ್ನು ಹುಡುಕಿಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ದತ್ತಾತ್ರೇಯ ತಂದೆ ಘನಶ್ಯಾಮ ದೇಸಾಯಿ, ಪ್ರಾಯ-75 ವರ್ಷ, ವೃತ್ತಿ-ನಿವೃತ್ತ ಉಪನ್ಯಾಸಕ, ಸಾ|| ದೇಸಾಯಿವಾಡಾ, ಚಿತ್ತಾಕುಲಾ, ಕಾರವಾರ ರವರು ದಿನಾಂಕ: 10-03-2021 ರಂದು 21-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕದ್ರಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 04/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಆಕಾಶ ತಂದೆ ಸಹದೇವ ಚಲವಾದಿ, ಪ್ರಾಯ-27 ವರ್ಷ, ಸಾ|| ಗಾಂಧಿಕೇರಿ ಗಲ್ಲಿ, ತಾ: ಹಳಿಯಾಳ (ಬಿಳಿ ಬಣ್ಣದ ಮಾರುತಿ ಸುಜುಕಿ ಸ್ವಿಫ್ಟ್ ಡಿಸೈರ್ ಕಾರ್ ನಂ: ಕೆ.ಎ-51/ಸಿ-2922 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 10-03-2021 ರಂದು 11-45 ಗಂಟೆಗೆ ತನ್ನ ಬಿಳಿ ಬಣ್ಣದ ಮಾರುತಿ ಸುಜುಕಿ ಸ್ವಿಫ್ಟ್ ಡಿಸೈರ್ ಕಾರ್ ನಂ: ಕೆ.ಎ-51/ಸಿ-2922 ನೇದನ್ನು ಹಳಿಯಾಳ ಕಡೆಯಿಂದ ಕಾರವಾರದ ಕಡೆಗೆ ಕಾರನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ರಾಜ್ಯ ಹೆದ್ದಾರಿ ಸಂಖ್ಯೆ-34 ರ ಮೇಲೆ ಫಾರೆಸ್ಟ್ ತನಿಖಾ ಠಾಣೆಯ ಗೇಟ್ ಇದ್ದರೂ ಸಹ ಲೆಕ್ಕಿಸದೆ, ತನಿಖಾ ಠಾಣೆಯ ಹತ್ತಿರ ನಿಧಾನವಾಗಿ ಎಡಬದಿಗೆ ತನ್ನ ಸ್ಕೂಟಿ ನಂ: ಕೆ.ಎ-30/ಯು-4042 ನೇದನ್ನು ನಿಲ್ಲಿಸಲು ಹೋಗುತ್ತಿದ್ದ ಇಮ್ರಾನ್ ಅಬ್ದುಲ್ ಶಿಖುರ್ ಶೇಖ್, ಪ್ರಾಯ-33 ವರ್ಷ, ಸಾ|| ಬಾಳೆಮನೆ, ಕದ್ರಾ, ಕಾರವಾರ, ಹಾಲಿ ಸಾ|| ಶಿಂಗೇವಾಡಿ, ಕದ್ರಾ, ಕಾರವಾರ ಇವನಿಗೆ ಹಿಂದಿನಿಂದ ಸೈಡಿಗೆ ಡಿಕ್ಕಿ ಹೊಡೆದು ಇಮ್ರಾನ್ ಈತನ ಬಲಗಾಲು ಸ್ವಾಧೀನ ತಪ್ಪಿ ಜೋತಾಡುವಂತೆ, ಹಿಮ್ಮಡಿ ಹತ್ತಿರ ಹಾಗೂ ಬಲಗೈ ಮೊಣಗಂಟಿನ ಹತ್ತಿರ ಭಾರೀ ಮತ್ತು ಸಾದಾ ಗಾಯನೋವು ಪಡಿಸಿದ್ದಲ್ಲದೇ, ಎರಡೂ ವಾಹನಗಳನ್ನು ಜಖಂಗೊಳಿಸಿದ ಬಗ್ಗೆ ಪಿರ್ಯಾದಿ ಶ್ರೀ ರಿಜ್ವಾನ್ ಅಬ್ದುಲ್ ಶಿಖುರ್ ಶೇಖ್, ಪ್ರಾಯ-32 ವರ್ಷ, ವೃತ್ತಿ-ಚಾಲಕ, ಸಾ|| ಬಾಳೆಮನೆ, ಕದ್ರಾ, ಕಾರವಾರ, ಹಾಲಿ ಸಾ|| ಶಿಂಗೇವಾಡಿ, ಕದ್ರಾ, ಕಾರವಾರ ರವರು ದಿನಾಂಕ: 10-03-2021 ರಂದು 12-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 46/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಂದ ಯಾದವ್, ಪ್ರಾಯ-25 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಿಹಾರ ರಾಜ್ಯ (ಮೋಟಾರ್ ಸೈಕಲ್ ನಂ: ಕೆ.ಎ-27/ಜೆ-7114 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 08-03-2021 ರಂದು ಸುಮಾರು ಮಧ್ಯಾಹ್ನ 02-15 ಗಂಟೆಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-27/ಜೆ-7114 ನೇದನ್ನು ಮಾದನಗೇರಿ ಕಡೆಯಿಂದ ಹೊಸಕಂಬಿ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಗುಂಡಬಾಳ ಗ್ರಾಮದಲ್ಲಿ ಹಾಯ್ದಿರುವ ರಾಷ್ಡ್ರೀಯ ಹೆದ್ದಾರಿ ಸಂಖ್ಯೆ-143 ರ ಡಾಂಬರ್ ರಸ್ತೆಯ ಮೇಲೆ ರಸ್ತೆಯಲ್ಲಿ ತಿರುವು ಇರುವುದನ್ನು ನೋಡಿ ತನ್ನ ಮೋಟಾರ್ ಸೈಕಲ್ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ರಸ್ತೆಯ ಎಡಕ್ಕೆ ಬಂದವನು, ರಸ್ತೆಯ ತನ್ನ ಎಡಬದಿಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದ ಕಾರ್ ನಂ: ಕೆ.ಎ-03/ಎಮ್.ವಾಯ್-4831 ನೇದಕ್ಕೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ತನಗೆ ಸಾದಾ ಸ್ವರೂಪದ ಗಾಯನೋವು ಪಡಿಸಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ದರ್ಶನ ಆರ್. ತಂದೆ ರಾಜಪ್ಪ ಎ. ಎಸ್, ಪ್ರಾಯ-30 ವರ್ಷ, ವೃತ್ತಿ-ಇಂಜಿನಿಯರ್, ಸಾ|| ಮನೆ ನಂ: 44, ಮಲ್ಲಪ್ಪನಹಳ್ಳಿ, ತಾ: ಹೊಸದುರ್ಗ, ಜಿ: ಚಿತ್ರದುರ್ಗ ರವರು ದಿನಾಂಕ: 10-03-2021 ರಂದು 14-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 47/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಈಶ್ವರ ತಂದೆ ಅಂಬಾದಾಸ ಮಾಸಲಕರ, ಸಾ|| ಬೀಡ, ಮಹಾರಾಷ್ಟ್ರ ರಾಜ್ಯ (ಗ್ಯಾಸ್ ಟ್ಯಾಂಕರ್ ಲಾರಿ ನಂ: ಎಮ್.ಎಚ್-16/ಸಿ.ಸಿ-9100 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 10-03-2021 ರಂದು ಬೆಳಿಗ್ಗೆ 09-30 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ರಾಮನಗುಳಿಯಲ್ಲಿ ಹಾಯ್ದಿರುವ ರಾಷ್ಡ್ರೀಯ ಹೆದ್ದಾರಿ ಸಂಖ್ಯೆ-63 ರ ಡಾಂಬರ್ ರಸ್ತೆಯ ಮೇಲೆ ತನ್ನ ಗ್ಯಾಸ್ ಟ್ಯಾಂಕರ್ ಲಾರಿ ನಂ: ಎಮ್.ಎಚ್-16/ಸಿ.ಸಿ-9100 ನೇದನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ಯಾವುದೋ ವಾಹನಕ್ಕೆ ಓವರಟೇಕ್ ಮಾಡಲು ಹೋಗಿ ತನ್ನ ಸೈಡ್ ಬಿಟ್ಟು ರಸ್ತೆಯ ಬಲಕ್ಕೆ ಬಂದು, ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಪಿರ್ಯಾದಿಯ ಬಾಬ್ತು ಟ್ಯಾಂಕರ್ ಲಾರಿ ನಂ: ಕೆ.ಎ-26/ಬಿ-0007 ನೇದರ ಬಲಬದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಟ್ಯಾಂಕರ್ ಲಾರಿ ಕ್ಯಾಬಿನ್, ಟ್ಯಾಂಕರ್ ಹಾಗೂ ಬಾಡಿ ಭಾಗ ಜಖಂಗೊಳಿಸಿದ್ದಲ್ಲದೇ, ಆರೋಪಿ ಚಾಲಕನು ತನಗೂ ಕೂಡ ಸಾದಾ ಸ್ವರೂಪದ ಗಾಯನೋವು ಪಡಿಸಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಿಶಾಂತ ತಂದೆ ಶಂಕರಗೌಡ ಪಾಟೀಲ್, ಪ್ರಾಯ-36 ವರ್ಷ, ವೃತ್ತಿ-ಪೆಟ್ರೋಲ್ ಬಂಕ್ ವ್ಯವಹಾರ, ಸಾ|| ಮಲ್ಲಸಮುದ್ರ, ಗದಗ ಜಿಲ್ಲೆ ರವರು ದಿನಾಂಕ: 10-03-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 46/2021, ಕಲಂ: 380, 420 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ ಇಬ್ಬರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 03-03-2021 ರಂದು ಬೆಳಿಗ್ಗೆ 11-12 ಗಂಟೆಗೆ ಪಿರ್ಯಾದಿಯವರ ಅಲಂಕಾರ್ ಜ್ಯುವೆಲರ್ಸ್ ಅಂಗಡಿಗೆ ಬಿಳಿ ಬಣ್ಣದ ಶರ್ಟ ಮತ್ತು ಕಪ್ಪು ಬಣ್ಣದ ನಮೂನೆಯ ಪ್ಯಾಂಟ್ & ಚೆಕ್ಸ್ ಬಣ್ಣದ ಶರ್ಟ್ ಹಾಗೂ ತಿಳಿ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಹಾಕಿಕೊಂಡು ಗ್ರಾಹಕರ ಸೋಗಿನಲ್ಲಿ ಮುಖಕ್ಕೆ ಮಾಸ್ಕ ಧರಿಸಿಕೊಂಡು ಬಂದ ಇಬ್ಬರು ಅಪರಿಚಿತ ಆರೋಪಿತರು ಅಂಗಡಿಯ ಮಾಲೀಕರು ವ ಪಿರ್ಯಾದಿಯವರಿಗೆ ಕಾಸ್ಟಿಂಗ್ ಓಲೆ ವಿತ್ ಸ್ಟೋನ್ & ಪ್ಲೇನ್ ಡಿಸೈನ್ ಉಳ್ಳ ಆಭರಣವನ್ನು ತೋರಿಸುವಂತೆ ಹೇಳಿ, ಪಿರ್ಯಾದಿಯವರು ಸುಮಾರು 400 ಗ್ರಾಂ. ತೂಕದ ವಿವಿಧ ನಮೂನೆಯ ಬಂಗಾರದ ಕಿವಿ ಓಲೆಯ ಆಭರಣಗಳಿದ್ದ ಬಾಕ್ಸ್ ಅನ್ನು ತೆಗೆದು ಅಪರಿಚಿತ ಆರೋಪಿತರುಗಳಿಗೆ ತೋರಿಸುತ್ತಿದ್ದ ವೇಳೆ, ಅಪರಿಚಿತ ಆರೋಪಿತರು ಸದರ ಬಾಕ್ಸ್ ನಿಂದ 1). ಸುಮಾರು 17 ಗ್ರಾಂ. ತೂಕದ ಬಂಗಾರದ ಹರಳಿನ ಹ್ಯಾಂಗಿಂಗ್, 2). ಸುಮಾರು 10 ಗ್ರಾಂ. ತೂಕದ ಬಂಗಾರದ ಕಿವಿ ಓಲೆ, 3). ಸುಮಾರು 8 ಗ್ರಾಂ. ತೂಕದ ಸ್ಟಡ್ ಹ್ಯಾಂಗಿಂಗ್, 4). ಸುಮಾರು 7 ಗ್ರಾಂ. ತೂಕದ ಬಂಗಾರದ ಸ್ಟಡ್ (ಹರಳಿನ) ಹ್ಯಾಂಗಿಂಗ್, 5). ಸುಮಾರು 07 ಗ್ರಾಂ. ತೂಕದ ಬಂಗಾರದ ಹರಳಿನ ಹ್ಯಾಂಗಿಂಗ್, 6). ಸುಮಾರು 8 ಗ್ರಾಂ. ತೂಕದ ಬಂಗಾರದ ಪ್ಲೇನ್ ಹ್ಯಾಂಗಿಂಗ್, 7). ಸುಮಾರು 5 ಗ್ರಾಂ. ತೂಕದ ಬಂಗಾರದ ಹರಳಿನ ಸ್ಟಡ್, 8). ಸುಮಾರು 03 ಗ್ರಾಂ. ತೂಕದ ಬಂಗಾರದ ಹರಳಿನ ಓಲೆ, 9). ಸುಮಾರು 03 ಗ್ರಾಂ. ತೂಕದ ಬಂಗಾರದ ಹರಳಿನ ಓಲೆ, 10). ಸುಮಾರು 04 ಗ್ರಾಂ. ತೂಕದ ಬಂಗಾರದ ಹರಳಿನ ಓಲೆ, 11). ಸುಮಾರು 02 ಗ್ರಾಂ. ತೂಕದ ಬಂಗಾರದ ಪ್ಲೇನ್ ಓಲೆ, 12). ಸುಮಾರು 03 ಗ್ರಾಂ. ತೂಕದ ಬಂಗಾರದ ಪ್ಲೇನ್ ಓಲೆ, 13). ಸುಮಾರು 08 ಗ್ರಾಂ. ತೂಕದ ಬಂಗಾರದ ಪ್ಲೇನ್ ಓಲೆ, 14). ಸುಮಾರು 06 ಗ್ರಾಂ. ತೂಕದ ಪ್ಲೇನ್ ಓಲೆ, 15). ಸುಮಾರು 04 ಗ್ರಾಂ. ತೂಕದ ಪ್ಲೇನ್ ಓಲೆ ಸೇರಿದಂತೆ ಹೀಗೆ ಒಟ್ಟೂ 95 ಗ್ರಾಂ. ತೂಕದ ಸುಮಾರು 4,00,000/- ರೂಪಾಯಿ. ಮೌಲ್ಯದ ಬಂಗಾರದ ಆಭರಣಗಳನ್ನು ಪಿರ್ಯಾದಿಯವರಿಗೆ ತಿಳಿಯದ ರೀತಿಯಲ್ಲಿ ವಂಚಿಸಿ, ಕಳುವು ಮಾಡಿಕೊಂಡು ಹೋಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಧು ತಂದೆ ಗಣಪಯ್ಯ ಕುಡಾಳಕರ, ಪ್ರಾಯ-49 ವರ್ಷ, ವೃತ್ತಿ-ಬಂಗಾರದ ಆಭರಣಗಳ ಅಂಗಡಿ ವ್ಯಾಪಾರಸ್ಥರು, ವಾಸ|| ಕೆ.ಸಿ ರೋಡ್, ಗಣಪತಿ ದೇವಸ್ಥಾನದ ಎದುರು, ತಾ: ಅಂಕೋಲಾ ರವರು ದಿನಾಂಕ: 10-03-2021 ರಂದು 21-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 46/2021, ಕಲಂ: 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ ಇಬ್ಬರು ಕಳ್ಳರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈ ನಮೂದಿತ ಆರೋಪಿತರು ದಿನಾಂಕ: 07-03-2021 ರಂದು ರವಿವಾರ ರಾತ್ರಿ 10-37 ಗಂಟೆಗೆ ಕುಮಟಾ ಶಹರದ ಮೂರೂರು ಕ್ರಾಸಿನಲ್ಲಿ ಇರುವ ವಿ.ಎಮ್ ಮಿರ್ಜಾನಕರ & ಕಂ. ಎಂಬ ಹೆಸರಿನ ಪೆಟ್ರೋಲ್ ಬಂಕಿನಲ್ಲಿ ಒಂದು ಮೋಟಾರ್ ಸೈಕಲ್ ಮೇಲೆ ಬಂದು, ಅವರ ಪೈಕಿ ಒಬ್ಬನು ಆಯಿಲ್ ಖರೀದಿ ಮಾಡುವ ನೆಪ ಮಾಡಿ ಪೆಟ್ರೋಲ್ ಬಂಕ್ ಆಫೀಸ್ ಒಳಗಡೆ ಹೋಗಿ ಕೆಲಸಗಾರ ಗಣಪತಿ ಮುಕ್ರಿ ಇವರಿಂದ ಬೇರೆ ಬೇರೆ ಕಂಪನಿಯ ಆಯಿಲ್ ಬಾಟಲಿಗಳನ್ನು ತರಿಸಿಕೊಂಡು ನೋಡಿದಂತೆ ನಟಿಸಿ, ಗಣಪತಿ ಮುಕ್ರಿ ಈತನು ಹೊರಗಡೆ ಆಯಿಲ್ ತರಲು ಹೋದ ಸಮಯದಲ್ಲಿ ಡ್ರಾವರ್ ದಲ್ಲಿ ಕೈ ಹಾಕಿ ಅದರಲ್ಲಿದ್ದ ನಗದು ಹಣ 99,192/- ರೂಪಾಯಿಯನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಪಿರ್ಯಾದಿ ಶ್ರೀ ಸತೀಶ ತಂದೆ ಕೃಷ್ಣ ಶೆಟ್ಟಿ, ಪ್ರಾಯ-62 ವರ್ಷ, ವೃತ್ತಿ-ಪೆಟ್ರೋಲ್ ಬಂಕ್ ಮಾಲಿಕರು, ಸಾ|| ಸಿದ್ದನಬಾವಿ, ತಾ: ಕುಮಟಾ ರವರು ದಿನಾಂಕ: 10-03-2021 ರಂದು 13-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 71/2021, ಕಲಂ: 279, 337, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ನಾರಾಯಣ ನಾಗಪ್ಪ ಗೌಡ, ಪ್ರಾಯ-23 ವರ್ಷ, ಸಾ|| ಮಾಳ್ಕೋಡ, ಮಾನ್ಯ, ತಾ: ಹೊನ್ನಾವರ (ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-0358 ನೇದರ ಸವಾರ). 2]. ಯಾಸಿನ್ ಅಮೀರ್ ಶೇಖ್, ಸಾ|| ರಾಮತೀರ್ಥ, ತಾ: ಹೊನ್ನಾವರ (ಲಾರಿ ನಂ: ಕೆ.ಎ-47/ಎ-2046 ನೇದರ ಚಾಲಕ). ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 10-3-2021 ರಂದು 15-15 ಗಂಟೆಗೆ ಹೊನ್ನಾವರದ ಶರಾವತಿ ಸೇತುವೆ ಮೇಲೆ ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-0358 ನೇದನ್ನು ಕಾಸರಕೋಡ ಕಡೆಯಿಂದ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ತನ್ನ ಬಲಬದಿಗೆ ಚಲಾಯಿಸಿ ಎದುರಿನಿಂದ ತನ್ನ ಬದಿಯಿಂದ ಅಂದರೆ ಹೊನ್ನಾವರ ಕಡೆಯಿಂದ ಕಾಸರಕೋಡ ಕಡೆಗೆ ಬರುತ್ತಿದ್ದ ಪಿರ್ಯಾದಿಯ ಅಣ್ಣ ಪ್ರಕಾಶ ತಂದೆ ನಾಗಪ್ಪ ಶೆಟ್ಟಿ, ಪ್ರಾಯ-50 ವರ್ಷ, ಸಾ|| ಚಿತ್ರಾಪುರ, ಶಿರಾಲಿ, ತಾ: ಭಟ್ಕಳ ಇವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಯು-5854 ನೇದಕ್ಕೆ ಡಿಕ್ಕಿ ಪಡಿಸಿ ಪ್ರಕಾಶ ಶೆಟ್ಟಿ ಬಿದ್ದಾಗ, ಅದೇ ವೇಳೆ ಹೊನ್ನಾವರ ಕಡೆಯಿಂದ ಲಾರಿ ನಂ: ಕೆ.ಎ-47/ಎ-2046 ನೇದರ ಚಾಲಕನಾದ ಆರೋಪಿ 2 ನೇಯವನು ತನ್ನ ಲಾರಿಯನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪ್ರಕಾಶ ಈತನಿಗೆ ಡಿಕ್ಕಿ ಪಡಿಸಿ ಸ್ಥಳದಲ್ಲೇ ಮರಣ ಪಡಿಸಿದ್ದಲ್ಲದೇ, ಆರೋಪಿ 1 ನೇಯವನ ಮೋಟಾರ್ ಸೈಕಲ್ ಹಿಂಬದಿ ಸವಾರ ಸಂದೀಪ ತಂದೆ ತಿಮ್ಮಣ್ಣ ಗೌಡ, ಸಾ|| ಪಡುಕುಳಿ, ತಾ: ಹೊನ್ನಾವರ ಇವನಗೆ ತಲೆ ದುಃಖಾಪತ್ ಪಡಿಸಿ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ಬಲಗಾಲಿನ ಪಾದ ಹಾಗೂ ಭುಜಕ್ಕೆ ದುಃಖಾಪತ್ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಪ್ರದೀಪ ತಂದೆ ನಾಗಪ್ಪ ಶೆಟ್ಟಿ, ಪ್ರಾಯ-48 ವರ್ಷ, ವೃತ್ತಿ-ವ್ಯಾಪಾರ, ಸಾ|| ರಥಬೀದಿ, ತಾ: ಹೊನ್ನಾವರ ರವರು ದಿನಾಂಕ: 10-03-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 31/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತೆ ಶ್ರೀಮತಿ ಪಿರ್ಧೋಸ್ ಮೌಸಿನ್ ಜುಪಾಪು, ಸಾ|| ಜುಬೇದಾ ಮೆನ್ಷನ್, ಆಜಾದ್ ನಗರ, 2 ನೇ ಕ್ರಾಸ್, ತಾ: ಭಟ್ಕಳ (ಹುಂಡೈ ಕಂಪನಿಯ GRAND I-10 (NIOS) VIN NO : MALB351CYLM ನೇದರ ಚಾಲಕಿ). ನಮೂದಿತ ಆರೋಪಿತಳು ದಿನಾಂಕ: 21-02-2021 ರಂದು ಸಾಯಂಕಾಲ 18-30 ಗಂಟೆಯ ಸುಮಾರಿಗೆ ತಾನು ಚಲಾಯಿಸಿಕೊಂಡು ಬಂದ ಹುಂಡೈ ಕಂಪನಿಯ GRAND I-10 (NIOS) VIN NO : MALB351CYLM ನೇದನ್ನು ನಾಸ್ತಾರ ಕಡೆಯಿಂದ ಮುಂಡಳ್ಳಿ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವಳು ಮುಂಡಳ್ಳಿಯಲ್ಲಿ ಹೊಸದಾಗಿ ನಿರ್ಮಾಣವಾದ ಬ್ರಿಡ್ಜ್ ಹತ್ತಿರ ತನ್ನ ಮುಂದೆ ಹೋಗುತ್ತಿದ್ದ ಪಿರ್ಯಾದಿಯ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ: ಕೆ.ಎ-47/ಆರ್-2573 ನೇದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಈ ಅಪಘಾತದಲ್ಲಿ ಪಿರ್ಯಾದಿ ಹಾಗೂ ಪಿರ್ಯಾದಿಯ ಸಂಗಡ ಮೋಟಾರ್ ಸೈಕಲ್ ಹಿಂಬದಿಯಲ್ಲಿ ಕುಳಿತುಕೊಂಡಿದ್ದ 2 ಜನ ಸವಾರರು ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದಿದರಿಂದ ಕಾರಿನ ಎಡಬದಿಯ ಚಕ್ರ ಪಿರ್ಯಾದಿಯ ಎಡಗಾಲಿನ ಮೇಲೆ ಹಾಗೂ ಪಿರ್ಯಾದಿ ತಂಗಿಯ ಎಡಗಾಲಿನ ಮೇಲೆ ಮತ್ತು ಪಿರ್ಯಾದಿಯ ಹೆಂಡತಿ ಹೊಟ್ಟೆಯ ಮೇಲೆ ಹಾಯ್ದಿರುವ ಪರಿಣಾಮ ಈ ಅಪಘಾತದಿಂದ ಪಿರ್ಯಾದಿಯ ಎಡಗಾಲಿನ ಪಾದಕ್ಕೆ ಭಾರೀ ಗಾಯ ಹಾಗೂ ಪಿರ್ಯಾದಿಯ ತಂಗಿ ರಮೀಜಾಗೆ ಎಡಗಾಲಿನ ಮೊಣಕಾಲಿನ ಕೆಳಗೆ ಹಾಗೂ ಎಡಗೈಗೆ ಭಾರೀ ಗಾಯ ಮತ್ತು ಪಿರ್ಯಾದಿಯ ಹೆಂಡತಿ ಶ್ರೀಮತಿ ರುಕ್ಸಾರ್ ಕೋಂ. ಹಸನ್ ಶೇಖ್ ಇವರಿಗೆ ಅಲ್ಲಲ್ಲಿ ತೆರಚಿದ ಗಾಯವಾದ ಬಗ್ಗೆ ಪಿರ್ಯಾದಿ ಶ್ರೀ ಹಸನ್ ತಂದೆ ಶಾವಲ್ ಹಮೀದ್ ಶೇಖ್, ಪ್ರಾಯ-22 ವರ್ಷ, ವೃತ್ತಿ-ಮೆಕ್ಯಾನಿಕ್, ಸಾ|| ಸಯ್ಯದ್ ಇಸ್ಮಾಯಿಲ್ ಎದುರಿನ ರಸ್ತೆ, ಕೆ.ಬಿ ರೋಡ್, ಪುರವರ್ಗ, ತಾ: ಭಟ್ಕಳ ರವರು ದಿನಾಂಕ: 10-03-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 28/2021, ಕಲಂ: 8(c), 20 (b)(ii)(A) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತ 1]. ಪರಶುರಾಮ ತಂದೆ ಕೃಷ್ಣ ಗಾಡಿ, ಪ್ರಾಯ-42 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಶಿವಪುರ, ತಾ: ಹಳಿಯಾಳ, 2]. ಅಲ್ತಾಫ್ ಮುನಿಯಾರ್, ಸಾ|| ಸಿದ್ದರಾಮೇಶ್ವರ ಗಲ್ಲಿ, ತಾ: ಹಳಿಯಾಳ. ಈ ನಮೂದಿತ ಆರೋಪಿತರು ಕೂಡಿಕೊಂಡು ದಿನಾಂಕ: 10-03-2021 ರಂದು 12:00 ಗಂಟೆಯ ಸುಮಾರಿಗೆ ದಾಂಡೇಲಿಯ ಅಂಬೇವಾಡಿಯ ಆದರ್ಶ ಶಾಲೆಯ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪಾಸ್ ಯಾ ಪರವಾನಗಿ ಇಲ್ಲದೇ ಅನಧೀಕೃತವಾಗಿ ಸುಮಾರು 8,000/- ರೂಪಾಯಿ ಮೌಲ್ಯದ 426 ಗ್ರಾಂ ತೂಕದ ಒಣಗಿರುವ ಗಾಂಜಾವನ್ನು ತಮ್ಮ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಾ ದಾಳಿಯ ಕಾಲಕ್ಕೆ ಗಾಂಜಾ ಹಾಗೂ ಗಾಂಜಾ ಮಾರಾಟದಿಂದ ಸಂಗ್ರಹಿಸಿದ ನಗದು ಹಣ 810/- ರೂಪಾಯಿ, ಹಳದಿ ಬಣ್ಣದ ಕೈ ಚೀಲ-01, ಸಣ್ಣ ಪ್ಲಾಸ್ಟಿಕ್ ಕವರಗಳು-18 ಇವುಗಳೊಂದಿಗೆ ಆರೋಪಿ 1 ನೇಯವನು ಪಿರ್ಯಾದಿಯವರಿಗೆ ಸೆರೆ ಸಿಕ್ಕಿದ್ದು ಹಾಗೂ ಆರೋಪಿ 2 ನೇಯವನು ಓಡಿ ಹೋಗಿ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಯಲ್ಲಪ್ಪ ಎಸ್, ಪಿ.ಎಸ್.ಐ, ದಾಂಡೇಲಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 10-03-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 36/2021, ಕಲಂ: ಹುಡುಗಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಕುಮಾರಿ: ಚೈತ್ರಾ ತಂದೆ ಜಯರಾಮ ಜಾಧವ, ಪ್ರಾಯ-19 ವರ್ಷ. ವೃತ್ತಿ-ಮನೆ ಕೆಲಸ, ಸಾ|| ತಮ್ಯಾನಕೊಪ್ಪ, ತಾ: ಮುಂಡಗೋಡ. ಪಿರ್ಯಾದಿಯವರ ಮಗಳಾದ ಇವಳು ದಿನಾಂಕ: 09-03-2021 ರಂದು ಬೆಳಿಗ್ಗೆ 11-00 ಗಂಟೆಗೆ ಮುಂಡಗೋಡಕ್ಕೆ ಬಟ್ಟೆ ಹೊಲಿಯಲು ಕೊಟ್ಟು ಬರುತ್ತೇನೆ ಅಂತಾ ತಮ್ಯಾನಕೊಪ್ಪದ ತಮ್ಮ ಸಂಬಂಧಿಕರ ಬಳಿ ಹೇಳಿ ಹೋದವಳು, ಪರತ್ ಮನೆಗೆ ಬರದೇ ಎಲ್ಲಿಯೋ ಹೋಗಿ ಕಾಣೆಯಾದವಳಿಗೆ ಮುಂಡಗೋಡದಲ್ಲಿ ಹಾಗೂ ತಮ್ಯಾನಕೊಪ್ಪದಲ್ಲಿ ನಮ್ಮ ಸಂಬಂಧಿಕರಲ್ಲಿ ವಿಚಾರಿಸಿದರಲ್ಲಿ ಪತ್ತೆಯಾಗದೇ ಇದ್ದು,ಕಾರಣ ಕಾಣೆಯಾದವಳನ್ನು ಹುಡುಕಿಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಜಯರಾಮ ತಂದೆ ಧನಸಿಂಗ್ ಜಾಧವ, ಪ್ರಾಯ-51 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ತಮ್ಯಾನಕೊಪ್ಪ, ತಾ: ಮುಂಡಗೋಡ ರವರು ದಿನಾಂಕ: 10-03-2021 ರಂದು 1-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 28/2021, ಕಲಂ: 279, 338, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವೆಂಕಟ್ರಮಣ ತಂದೆ ಗಣಪತಿ ನಾಯ್ಕ, ಪ್ರಾಯ-ಅಂದಾಜು 32 ವರ್ಷ, ವೃತ್ತಿ-ಚಾಲಕ, ಸಾ|| ಹೆಗ್ಗಾರಬೈಲ್, ತಾ: ಸಿದ್ದಾಪುರ (ಬೊಲೆರೋ ವಾಹನ ನಂ: ಕೆ.ಎ-31/8845 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 09-03-2021 ರಂದು ಬೆಳಿಗ್ಗೆ ತನ್ನ ಬೊಲೆರೋ ವಾಹನ ನಂ: ಕೆ.ಎ-31/8845 ನೇದನ್ನು ಹೆರೂರ ಹೆಗ್ಗರಣೆಯ ಒಳ ರಸ್ತೆಯಲ್ಲಿ ಹೆಗ್ಗರಣೆ ಕಡೆಯಿಂದ ಹೆರೂರ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬರುತ್ತಿದ್ದವನು 09-30 ಗಂಟೆಯ ಸುಮಾರಿಗೆ ಮಾಗೋಡ ಜಡ್ಡಿ ಹತ್ತಿರದ ಪಡಂಬೈಲ್ ಎನ್ನುವ ಸ್ಥಳದಲ್ಲಿ ಎಡ ತಿರುವು ಇದ್ದ ರಸ್ತೆಯಲ್ಲಿ ವಾಹನವನ್ನು ನಿಷ್ಕಾಳಜೀತನದಿಂದ ಕಟ್ ಹೊಡೆದು ವಾಹನವನ್ನು ಪೂರ್ತಿ ಅವನ ಬಲಕ್ಕೆ ಚಲಾಯಿಸಿ ಎದುರಿನಿಂದ ಏರಾದ ರಸ್ತೆಯಲ್ಲಿ ರಸ್ತೆಯ ಎಡಬದಿಯಿಂದ ಸೈಕಲ್ ದೂಡಿಕೊಂಡು ನಡೆದುಕೊಂಡು ಶಾಲೆಗೆ ಹೋಗುತ್ತಿದ್ದ ಪಿರ್ಯಾದಿಯ ಮಗಳು ಕುಮಾರಿ: ಸಹನ ತಂದೆ ಜಟ್ಟಪ್ಪ ಪಟಗಾರ, ಸಾ|| ಹೊಸಗದ್ದೆ, ಪೋ & ಗ್ರಾಮ: ಹುಲ್ಲುಂಡೆ, ತಾ; ಸಿದ್ದಾಪುರ, ಇವಳ ತಲೆಗೆ ವಾಹನದ ಬಲ ಬದಿಯ ಹಿಂದಿನ ಬಾಡಿಯನ್ನು ಬಡಿಸಿ ಅಪಘಾತ ಪಡಿಸಿ ತಲೆಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀಮತಿ ಮಾಲಿನಿ ಕೋಂ. ಜಟ್ಟಪ್ಪ ಪಟಗಾರ, ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೊಸಗದ್ದೆ, ಪೋ & ಗ್ರಾಮ: ಹುಲ್ಲುಂಡೆ, ತಾ: ಸಿದ್ದಾಪುರ ರವರು ದಿನಾಂಕ: 09-03-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರು ದಾಖಲಿಸಿದ್ದನ್ನು ಠಾಣಾ ಗುನ್ನಾ ನಂ: 28/2021, ಕಲಂ: 279, 338 ಐಪಿಸಿ ನೇದರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಈ ಪ್ರಕರಣವು ತನಿಖೆಯಲ್ಲಿರುವಾಗ ದಿನಾಂಕ: 10-03-2021 ರಂದು 11-00 ಗಂಟೆಗೆ ಪಿರ್ಯಾದಿಯ ಗಂಡನಾದ ಶ್ರೀ ಜಟ್ಟಪ್ಪ ತಂದೆ ಭೀರಪ್ಪ ಪಟಗಾರ, ಪ್ರಾಯ-52 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೊಸಗದ್ದೆ, ಪೋ & ಗ್ರಾಮ: ಹುಲ್ಲುಂಡೆ, ತಾ: ಸಿದ್ದಾಪುರ ಇವರು ಠಾಣೆಗೆ ಹಾಜರಾಗಿ ದಿನಾಂಕ: 09-03-2021 ರಂದು ಅಪಘಾತದಲ್ಲಿ ಗಾಯನೋವು ಹೊಂದಿದ್ದ ತನ್ನ ಮಗಳಿಗೆ ಶಿರಸಿಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಎಸ್.ಡಿ.ಎಮ್ ಆಸ್ಪತ್ರೆಗೆ ದಾಖಲು ಮಾಡಿದ್ದೆವು. ಆದರೆ ಎಸ್.ಡಿ.ಎಮ್ ಆಸ್ಪತ್ರೆಯ ವೈದ್ಯರು ಮಗಳು ಕೋಮಾ ಸ್ಥಿತಿಯಲ್ಲಿರುವುದರಿಂದ ರಿಕವರಿ ಆಗಲು ಒಂದೆರೆಡು ತಿಂಗಳು ಆಗಬಹುದು. ಅಲ್ಲಿಯವರೆಗೆ ಮನೆಯಲ್ಲೇ ಔಷಧೋಪಚಾರ ನೀಡಿ ಅಂತಾ ಸಲಹೆ ನೀಡಿ ಡಿಸ್ಚಾರ್ಜ್ ಮಾಡಿದ್ದರು. ಆದರೆ ಅಪಘಾತದಲ್ಲಿ ತಲೆಗೆ ಆದ ಮಾರಣಾಂತಿಕ ಗಾಯದಿಂದ ದಿನಾಂಕ: 10-03-2021 ರಂದು 06-30 ಗಂಟೆಗೆ ಮಗಳು ನಮ್ಮ ಮನೆಯಲ್ಲಿ ಮೃತಪಟ್ಟಿರುತ್ತಾಳೆ ಅಂತಾ ದೂರು ನೀಡಿದ್ದರಿಂದ, ಸದರ ಪ್ರಕರಣಕ್ಕೆ ಕಲಂ: 304(ಎ) ಐಪಿಸಿ ನೇದನ್ನು ಸೇರ್ಪಡಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

Daily District U.D Report

Date:- 10-03-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 14/2021, ಕಲಂ: 174(ಸಿ) ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಗುರುರಾಜ ತಂದೆ ನಾಗರಾಜ ಅಣ್ವೇಕರ, ಸಾ|| ಓಲ್ಡ್ ಮೇದಾರ ಓಣಿ, ಸರ್ವೇಶ್ವರ ಗುಡಿ, ತಾ: ಹೊಸಪೇಟೆ, ಜಿ: ಬಳ್ಳಾರಿ. ಈತನು ವಿಪರೀತ ಸಾರಾಯಿ ಕುಡಿತದ ಚಟದವನಿದ್ದು, ಯಾವುದೋ ಕಾರಣದಿಂದ ಎಲ್ಲಿಂದಲೋ ಬಂದು ಅಂಕೋಲಾ ಶಹರದಲ್ಲಿರುವ ಜೈಹಿಂದ್ ಲಾಡ್ಜಿನಲ್ಲಿ ದಿನಾಂಕ: 03-03-2021 ರಂದು ಸಂಜೆ 17-00 ಗಂಟೆಗೆ ಬಂದು ದಿನಾಂಕ: 07-03-2021 ರ ರಾತ್ರಿ 21-30 ಗಂಟೆಯವರೆಗೆ ಉಳಿದುಕೊಂಡು ಖಾಲಿ ಮಾಡಿಕೊಂಡು ಹೋದವನು, ಲಾಡ್ಜ್ ದಿನದ ವೇಳೆಯಲ್ಲಿ ತೆರೆದಿದ್ದ ಸಮಯದಲ್ಲಿ ದಿನಾಂಕ: 07-03-2021 ರಂದು ರಾತ್ರಿ 09-30 ಗಂಟೆಯಿಂದ ದಿನಾಂಕ: 10-03-2021 ರ ರಾತ್ರಿ 08-30 ಗಂಟೆಯ ಅವಧಿಯಲ್ಲಿ ಲಾಡ್ಜ್ ಒಳಗೆ ಬಂದು ಪ್ರಿಡ್ಜ್ ಇಡುವ ಸಂಧಿಯಲ್ಲಿ ಕುಳಿತುಕೊಂಡವನು ಯಾವುದೋ ಕಾರಣದಿಂದ ಕುಳಿತ ಸ್ಥಿತಿಯಲ್ಲಿಯೇ ಮೃತಪಟ್ಟಿರುತ್ತಾನೆ. ಈತನ ಮರಣದಲ್ಲಿ ಸಂಶಯವಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪ್ರಸಾದ ತಂದೆ ಗಂಗಾಧರ ಶೆಟ್ಟಿ, ಪ್ರಾಯ: 52 ವರ್ಷ, ವೃತ್ತಿ: ಜೈಹಿಂದ್ ಲಾಡ್ಜ್ ಬಾಡಿಗೆ ಮಾಲಿಕರು, ಸಾ|| ಗುಡಿಗಾರಗಲ್ಲಿ, ತಾ: ಅಂಕೋಲಾ ರವರು ದಿನಾಂಕ: 10-03-2021 ರಂದು 21-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮಂಕಿ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 01/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಪದ್ಮನಾಭ ತಂದೆ ನಾರಾಯಣ ಭಟ್, ಪ್ರಾಯ-45 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಬೈಲಾರ, ಮೇಲಿನ ಇಡಗುಂಜಿ, ತಾ: ಹೊನ್ನಾವರ. ಈತನು ದಿನಾಂಕ: 08-03-2021 ರಂದು 17-00 ಗಂಟೆಯಿಂದ ದಿನಾಂಕ: 10-03-2021 ರಂದು ಬೆಳಿಗ್ಗೆ 11-30 ಗಂಟೆಯ ನಡುವಿನ ಅವಧಿಯಲ್ಲಿ ಮೇಲಿನ ಇಡಗುಂಜಿಯ ಬೈಲಾರಕೇರಿಯಲ್ಲಿ ಶ್ರೀಮತಿ ದೇವಕಿ ಕೋಂ. ಮಹಾಬಲೇಶ್ವರ ಭಟ್ ಇವರ ಅಡಿಕೆ ತೋಟದಲ್ಲಿದ್ದ ಬಾವಿಯಿಂದ ತೋಟಕ್ಕೆ ನೀರು ಬಿಡಲು ಅಂತಾ ಬಾವಿಯ ನೀರನ್ನು ನೋಡಲು ಬಾವಿಯ ಅಂಚಿನಲ್ಲಿ ಹೋದಾಗ ಆಕಸ್ಮಾತ್ ಆಗಿ ಕಾಲು ಜಾರಿ 25 ಫೂಟ್ ಆಳದ ಬಾವಿಯಲ್ಲಿ ಬಿದ್ದು ನೀರಿನಲ್ಲಿ ಮುಳುಗಿದವನು, ನೀರಿನಿಂದ ಮೇಲೆ ಬರಲಾಗದೆ ನೀರಿನಲ್ಲಿ ಮುಳುಗಿ ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ಮಹಾಬಲೇಶ್ವರ ತಂದೆ ಮಂಜುನಾಥ ಭಟ್, ಪ್ರಾಯ-42 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮಂಕಿ, ಹಡಿಕಲ್, ತಾ: ಹೊನ್ನಾವರ ರವರು ದಿನಾಂಕ: 10-03-2021 ರಂದು 14-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 07/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಕುಮಾರಿ: ಖುಷಿ ತಂದೆ ಕುಜರತ್ಅಲಿ ಗಾಡಿ, ಪ್ರಾಯ-1½ ವರ್ಷ, ಸಾ|| ಅಡಿಕೆಹೂಸೂರ, ತಾ: ಹಳಿಯಾಳ. ಪಿರ್ಯಾದಿಯವರ ಮಗಳಾದ ಇವಳು ಯಲ್ಲಾಪುರದ ಉದ್ಯಮನಗರದಲ್ಲಿ ಬಾಡಿಗೆ ಮನೆಯಲ್ಲಿ ಇದ್ದವಳು, ದಿನಾಂಕ: 10-03-2021 ರಂದು 17-30 ಗಂಟೆಗೆ ಆಟ ಆಡುತ್ತಾ ಮನೆಯ ಹೊರಗೆ ಬಂದವಳು ಬಾವಿಯ ಬದಿಯಲ್ಲಿ ಹಾಕಿರುವ ಮಣ್ಣಿನ ಮೇಲೆ ಹೋಗಿ ಆಟ ಆಡುತ್ತಿರುವಾಗ ಆಕಸ್ಮಿಕವಾಗಿ ಜಾರಿ ಬಾವಿಯಲ್ಲಿ ಬಿದ್ದು ಬಾವಿಯ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಇರುತ್ತದೆ. ಇದರ ಹೊರತು ಅವಳ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಕುಜರತ್ಅಲಿ ತಂದೆ ಆದಮ್ ಸಾಬ್ ಗಾಡಿ, ಪ್ರಾಯ-26 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಅಡಿಕೆಹೂಸೂರ, ತಾ: ಹಳಿಯಾಳ ರವರು ದಿನಾಂಕ: 10-03-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 09/2021, ಕಲಂ: 174 ಸಿ.ಆರ್.ಪಿ.ಸಿ  ನೇದ್ದರ ವಿವರ...... ಮೃತಳಾದ ಕುಮಾರಿ: ಸುಕನ್ಯ ತಂದೆ ಯಲ್ಲರೆಡ್ಡಿ ಚಾಕಲಬ್ಬಿ, ಪ್ರಾಯ-14 ವರ್ಷ, ವೃತ್ತಿ-9 ನೇ ತರಗತಿ ವಿದ್ಯಾರ್ಥಿನಿ, ಸಾ|| ಚಾಕಲಬ್ಬಿ, ತಾ: ಕುಂದಗೋಳ, ಜಿ: ಧಾರವಾಡ. ಪಿರ್ಯಾದಿಯ ಮಗಳಾದ ಇವಳಿಗೆ 2019 ರಂದು 8 ನೇ ತರಗತಿಯಿಂದ ಚಿಪಗಿಯ ಜೆ.ಎಮ್.ಜೆ ವಸತಿ ಸಹಿತ ಶಿಕ್ಷಣ ಸಂಸ್ಥೆಯ ಹಾಸ್ಟೆಲಿನಲ್ಲಿ ಓದಲು ಇಟ್ಟಿದ್ದು, ಅವಳು ದಿನಾಂಕ: 10-03-2021 ರಂದು 17-20 ಗಂಟೆಯಿಂದ 17-30 ಗಂಟೆಯ ಸುಮಾರಿಗೆ ತನ್ನ ರೂಮ್ ನಲ್ಲಿಯ ಸಹಪಾಠಿಗಳು ಪ್ರಾರ್ಥನೆಗೆ ಹೋಗಿದ್ದಾಗ, ಅವರಲ್ಲಿ ದಿವ್ಯಾ ಎಂಬುವವಳ ಅನುಮತಿ ಇಲ್ಲದೆ ಅವಳ ಬ್ಯಾಗಿನಿಂದ ತಿಂಡಿ ತೆಗೆದಿದ್ದನ್ನು ಕಂಡ ದಿವ್ಯ ಅವಳಿಗೆ ‘ನೀನು ಹೀಗೆ ಮಾಡಬಾರದಾಗಿತ್ತು, ಈ ವಿಷಯ ಇನ್ನುಳಿದ ಸ್ನೇಹಿತರಿಗೆ ಮತ್ತು ವಾರ್ಡನ್ಮೇಡಂಗೆ ತಿಳಿಸುತ್ತೇನೆ’ ಎನ್ನುವುದಾಗಿ ಹೇಳಿ ಹೋಗಿದ್ದರಿಂದ, ಹೆದರಿ ಎಲ್ಲ ಸಹಪಾಠಿಗಳ ಎದುರು ತನ್ನ ಮರ್ಯಾದೆ ಹೋಗಿ ಬಿಡುತ್ತದೆ ಎಂದು ಯೋಚಿಸಿ, ಉದ್ವೇಗಕ್ಕೊಗಾಗಿ ಏಕಾಏಕಿಯಾಗಿ ವೇಲ್ ನೊಂದಿಗೆ ಬಾತ್ ರೂಮಿಗೆ ಹೋಗಿ ಕಿಟಕಿಯ ಕಬ್ಬಿಣದ ಸರಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯ ಮಾಡಿಕೊಂಡಿರುತ್ತಾಳೆಯೇ ಹೊರತು ಪಡಿಸಿದರೆ ಮಗಳ ಮರಣದಲ್ಲಿ ಬೇರೇ ಯಾವುದೇ ಸಂಶಯ ಕಂಡು ಬರುವುದಿಲ್ಲ. ಈ ಕಾರಣ ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಿಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಯಲ್ಲರೆಡ್ಡಿ ತಂದೆ ಸೋಮರೆಡ್ಡಿ ಚಾಕಲಬ್ಬಿ, ಪ್ರಾಯ-50 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಚಾಕಲಬ್ಬಿ, ತಾ: ಕುಂದಗೋಳ, ಜಿ: ಧಾರವಾಡ ರವರು ದಿನಾಂಕ: 10-03-2021 ರಂದು 21-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 11/2021, ಕಲಂ: 174 ಸಿ.ಆರ್.ಪಿ.ಸಿ  ನೇದ್ದರ ವಿವರ...... ಮೃತನಾದ ಶ್ರೀ ಕೃಷ್ಣ ತಂದೆ ಅಣ್ಣಪ್ಪ ಪೂಜಾರಿ, ಪ್ರಾಯ-46 ವರ್ಷ, ವೃತ್ತಿ-ನಿರುದ್ಯೋಗಿ, ಸಾ|| ಜಡ್ಡಿಕೇರಿ, ಹೊಸ್ತೋಟ ಗ್ರಾಮ, ತಾ: ಸಿದ್ದಾಪುರ. ಈತನು ಪಿರ್ಯಾದಿಯ ಮಗನಿದ್ದು, ಚಿಕ್ಕವನಿರುವಾಗಿನಿಂದಲೂ ಪಿಡ್ಸ್ ಹಾಗೂ ಮಾನಸಿಕ ಅಸ್ವಸ್ಥತೆಯ ಖಾಯಿಲೆಯಿಂದ ಬಳಲುತ್ತಿದ್ದವನು, ಅಲ್ಲದೇ ಕಳೆದ 10 ವರ್ಷಗಳಿಂದ ವಿಚಿತ್ರವಾಗಿ ವರ್ತಿಸುತ್ತಾ ರಾತ್ರೋ ರಾತ್ರಿ ಮನೆಯಿಂದ ಎದ್ದು ಹೊರಗಡೆ ಹೋಗಿ ಎಲ್ಲೆಲ್ಲಿಯೋ ಸುತ್ತಾಡಿಕೊಂಡು ಬರುತ್ತಿದ್ದವನಿಗೆ ಕಳೆದ ವರ್ಷ ಧಾರವಾಡದ ಮಾನಸಿಕ ಆಸ್ಪತ್ರೆಯಲ್ಲಿ 3 ತಿಂಗಳುಗಳ ಕಾಲ ಅಲ್ಲಿಯೇ ಇಟ್ಟು ಚಿಕಿತ್ಸೆ ಕೊಡಿಸಿ ನಂತರ ಮನೆಗೆ ಕರೆದುಕೊಂಡು ಬಂದಿದ್ದು. ನಂತರದ ದಿನಗಳಲ್ಲಿ ಮೃತನಿಗೆ ಮಾನಸಿಕ ಅಸ್ವಸ್ಥತೆ ಜಾಸ್ತಿಯಾಗಿ ವಿಚಿತ್ರವಾಗಿ ವರ್ತಿಸುತ್ತಿದ್ದವನು. ದಿನಾಂಕ: 08-03-2021 ರ ರಾತ್ರಿ 09-30 ಗಂಟೆಯಿಂದ ದಿನಾಂಕ: 09-03-2021 ರಂದು ರಾತ್ರಿ 11-45 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಮನೆಯಿಂದ ಸ್ವಲ್ಪ ದೂರದಲ್ಲಿರುವ ಸಿದ್ದಾಪುರ ತಾಲೂಕಿನ ಉಂಚಳ್ಳಿಯ ಮಾಸ್ತಿಬೈಲ್‍ ದಲ್ಲಿರುವ ಸಾರ್ವಜನಿಕ ಬಾವಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀಮತಿ ಲಕ್ಷ್ಮೀ ಕೋಂ. ಅಣ್ಣಪ್ಪ ಪೂಜಾರಿ, ಪ್ರಾಯ-75 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಜಡ್ಡಿಕೇರಿ, ಹೊಸ್ತೋಟ ಗ್ರಾಮ, ತಾ: ಸಿದ್ದಾಪುರ ರವರು ದಿನಾಂಕ: 10-03-2021 ರಂದು 03-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

Last Updated: 11-03-2021 02:13 PM Updated By: SP KARWAR


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Uttara Kannada District Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080