ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 10-05-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 105/2021, ಕಲಂ: 380, 454 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 09-05-2021 ರಂದು ಬೆಳಿಗ್ಗೆ 10-00 ರಿಂದ ದಿನಾಂಕ: 09-05-2021 ರಂದು ಸಾಯಂಕಾಲ 06-30 ಗಂಟೆಯ ನಡುವಿನ ಅವಧಿಯಲ್ಲಿ ಕುಮಟಾ ತಾಲೂಕಾ ಮಣಕಿ ಗ್ರಾಮ ಕಾಗಾಲ ಮಾನೀರದಲ್ಲಿ ಇರುವ ಪಿರ್ಯಾದಿಯವರ ಮನೆಯ ಹಿಂಬಾಗಿಲು ಮುರಿದು ಒಳ ಹೊಕ್ಕಿ, ಮನೆಯ ಪ್ರಧಾನ ಬಾಗಿಲ ಬೀಗವನ್ನು ಮುರಿದು ಮನೆಯೊಳಗಿದ್ದ ಟ್ರಂಕ್ ಬೀಗವನ್ನು ಕೂಡ ಮುರಿದು ಅದರಲ್ಲಿದ್ದ 1). ಬಂಗಾರದ ಕುಡುಕು ಮತ್ತು ಡ್ರಾಪ್ಸ್-1 ಜೊತೆ, ತೂಕ 3 ಗ್ರಾಂ, ಅ||ಕಿ|| 15,000/- ರೂ, 2). ಬೆಳ್ಳಿ ಸರಗಳು-2, ತೂಕ 30 ಗ್ರಾಂ, ಅ||ಕಿ|| 7,000/- ರೂ, 3). ಬಂಗಾರದ ತಾಳಿ ಗುಂಡು-1, ತೂಕ 0.5 ಗ್ರಾಂ, ಅ||ಕಿ|| 2,000/- ರೂ ಮತ್ತು 4). ನಗದು ಹಣ 700-800 ರೂಪಾಯಿಯನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಪಿರ್ಯಾದಿ ಶ್ರೀಮತಿ ಶೈಲಾ ಕೋಂ. ಚಂದ್ರಕಾಂತ ಅಂಬಿಗ, ಪ್ರಾಯ-36 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಾಗಾಲ, ಮಾನೀರ, ಮೂರೂರು ರೋಡ, ತಾ: ಕುಮಟಾ ರವರು ದಿನಾಂಕ: 10-05-2021 ರಂದು 09-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 142/2021, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ಶ್ರೀಮತಿ ಡೈಸಿ ಮಾರಿಯಾ ಡಿಸೋಜಾ ಕೋಂ. ದೀಪಕ ಡಿಸೋಜಾ, ಪ್ರಾಯ-34 ವರ್ಷ, ಸಾ|| ರೋಶನದೀಪ್, ಚಿನ್ನಪಳ್ಳಿ, ಕಚೂರ್ ಗ್ರಾಮ, ಪೋ: ಬಾರ್ಕೂರ್, ಉಡುಪಿ, ಹಾಲಿ ಸಾ|| ಪ್ರೇಮಧಾಮ, ಮಾನಸಿಕ ಚಿಕಿತ್ಸಾ ವಿಭಾಗ, ಸೇಂಟ್ ಇಗ್ನೇಷಿಯಸ್ ಆಸ್ಪತ್ರೆ, ತಾ: ಹೊನ್ನಾವರ. ಇವಳು ಮಾನಸಿಕ ಖಾಯಿಲೆಯಿಂದ ಅಸ್ವಸ್ಥಗೊಂಡವಳಿಗೆ ದಿನಾಂಕ: 25-05-2019 ರಂದು ಚಿಕಿತ್ಸೆಯ ಕುರಿತು ಸೇಂಟ್ ಇಗ್ನೇಷಿಯಸ್ ಆಸ್ಪತ್ರೆಯ ಪ್ರೇಮಧಾಮ ಮಾನಸಿಕ ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ದಾಖಲಿಸಿದ್ದು, ಅವಳು ಅಂದಿನಿಂದ ಈವರೆಗೆ ಚಿಕಿತ್ಸೆ ಪಡೆಯುತ್ತಿದ್ದವಳು. ದಿನಾಂಕ: 10-05-2021 ರಂದು ಬೆಳಿಗ್ಗೆ 07-00 ಗಂಟೆಯ ಸುಮಾರಿಗೆ ಬೆಳಗಿನ ಉಪಹಾರ ಸೇವನೆಯ ಸಮಯದಲ್ಲಿ ಚೆಕ್ ಮಾಡಿದಾಗ ಎಲ್ಲಿಯೂ ಕಾಣದೇ ಇದ್ದಾಗ ಆಸ್ಪತ್ರೆಯ ಸುತ್ತಮುತ್ತ, ಒಳಗೆ ಎಲ್ಲಾ ಕಡೆ ಹುಡುಕಾಡಿದರೂ ಎಲ್ಲಿಯೂ ಸಿಗದೇ ಇದ್ದಾಗ ಆಸ್ಪತ್ರೆಯ ಸಿ.ಸಿ.ಟಿ.ವಿ ಫೂಟೇಜ್ಜ ಅನ್ನು ಚೆಕ್ ಮಾಡಲಾಗಿ ಶ್ರೀಮತಿ ಡೈಸಿ ಮಾರಿಯಾ ಡಿಸೋಜಾ ಇವಳು ದಿನಾಂಕ: 10-05-2021 ರಂದು ರಾತ್ರಿ 02-00 ಗಂಟೆಯಿಂದ 02-15 ಗಂಟೆಯ ನಡುವಿನ ಅವಧಿಯಲ್ಲಿ ಆಸ್ಪತ್ರೆಯ ಗೇಟಿನಿಂದ ಹೊರಗೆ ಹೋಗಿ ಕಾಣೆಯಾಗಿದ್ದು, ಪ್ರಭಾತನಗರ, ಹೊನ್ನಾವರ, ಆರೋಳ್ಳಿ ಮುಂತಾದ ಕಡೆಗಳಲ್ಲಿ ಹುಡುಕಾಡಿದರೂ ಸಹ ಎಲ್ಲಿಯೂ ಪತ್ತೆಯಾಗದೇ ಇದ್ದುದರಿಂದ ಆಸ್ಪತ್ರೆಯ ಆಡಳಿತ ಮಂಡಳಿಯವರಲ್ಲಿ ಚರ್ಚಿಸಿ, ಕಾಣೆಯಾದ ಶ್ರೀಮತಿ ಡೈಸಿ ಮಾರಿಯಾ ಡಿಸೋಜಾ ಇವಳನ್ನು ಹುಡುಕಿ ಕೊಡಬೇಕು ಎಂಬ ಬಗ್ಗೆ ಸಿಸ್ಟರ್|| ಲೀನಾ ವಿ. ಜೆ. ತಂದೆ ಜೋಸ್ ವಿ. ಜೆ, ಪ್ರಾಯ-49 ವರ್ಷ, ವೃತ್ತಿ-ಚೀಫ್ ಸೆಕ್ರೆಟರಿ, ಪ್ರೇಮಧಾಮ, ಸೇಂಟ್ ಇಗ್ನೇಷಿಯಸ್ ಆಸ್ಪತ್ರೆ, ಹೊನ್ನಾವರ, ಸಾ|| ಸೇಂಟ್ ಇಗ್ನೇಷಿಯಸ್ ಕೊನ್ವೆಂಟ್, ಪ್ರಭಾತನಗರ, ತಾ: ಹೊನ್ನಾವರ ರವರು ದಿನಾಂಕ: 10-05-2021 ರಂದು 11-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 143/2021, ಕಲಂ: 323, 447, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸುಬ್ರಹ್ಮಣ್ಯ ತಂದೆ ಗಣಪತಿ ನಾಯ್ಕ, ಪ್ರಾಯ-42 ವರ್ಷ, ವೃತ್ತಿ-ಚಾಲಕ, ಸಾ|| ಹುಡಗೋಡಮಕ್ಕಿ, ಅರೇಅಂಗಡಿ, ತಾ: ಹೊನ್ನಾವರ. ಈತನು ಪಿರ್ಯಾದಿಯೊಂದಿಗೆ ಈ ಹಿಂದಿನಿಂದಲೂ ದ್ವೇಷದಿಂದ ಇದ್ದವನು, ದಿನಾಂಕ: 09-05-2021 ರಂದು ಬೆಳಗ್ಗೆ 11-30 ಗಂಟೆಯ ಸುಮಾರಿಗೆ ಪಿರ್ಯಾದಿಯ ಹೆಸರಿನಲ್ಲಿದ್ದ ಹೊಸಾಕುಳಿ ಗ್ರಾಮದ ಸರ್ವೇ ನಂ: 171/ಅ-6/2 ನೇದರ ಜಾಗದಲ್ಲಿ 0-8-0 ಕ್ಷೇತ್ರ ಜಾಗದಲ್ಲಿ ಅಕ್ರಮ ಪ್ರವೇಶ ಮಾಡಿ ‘ಬೋಳಿ ಮಗನೇ, ಸೂಳಾ ಮಗನೇ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಎಡಗೈಯಿಂದ ಗಟ್ಟಿಯಾಗಿ ಪಿರ್ಯಾದಿಯ ಕುತ್ತಿಗೆ ಹಿಸುಕಿ, ಬಲಗೈಯಿಂದ ಪಿರ್ಯಾದಿಯ ಕೆನ್ನೆಗೆ ಹಾಗೂ ಕಿವಿಯ ಮೇಲೆ ಬಲವಾಗಿ ಹೊಡೆದು ಗಾಯಗೊಳಿಸಿ, ಪಿರ್ಯಾದಿಯನ್ನು ಉದ್ದೇಶಿಸಿ ‘ನಿನ್ನನ್ನು ಇಷ್ಟಕ್ಕೆ ಬಿಡುವುವದಿಲ್ಲ’ ಅಂತಾ ಕಾಲಿನಿಂದ ಒದ್ದು ದೂಡಿ ಹಾಕಿ ‘ನಿನ್ನನ್ನು ಹೊಡೆದು ಸಾಯಿಸುತ್ತೇನೆ’ ಅಂತಾ ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಶಿವಾನಂದ ತಂದೆ ಗಣಪತಿ ನಾಯ್ಕ, ಪ್ರಾಯ-45 ವರ್ಷ, ವೃತ್ತಿ-ಫಾರೆಸ್ಟ್ ಕಛೇರಿಯಲ್ಲಿ ದಿನಗೂಲಿ ನೌಕರ, ಸಾ|| ಹುಡಗೋಡಮಕ್ಕಿ, ಅರೇಅಂಗಡಿ, ತಾ: ಹೊನ್ನಾವರ ರವರು ದಿನಾಂಕ: 10-05-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 83/2021, ಕಲಂ: ಹುಡುಗಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಕುಮಾರಿ: ನಕಲಿಬಾಯಿ ತಂದೆ ಬಾಗು ಪಾಲೆ, ಪ್ರಾಯ-21 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಖಾರೇವಾಡ, ತಾ: ಯಲ್ಲಾಪುರ. ಪಿರ್ಯಾದುದಾರರ ಅಣ್ಣನ ಮಗಳಾದ ಇವಳು ದಿನಾಂಕ: 08-05-2021 ರಂದು 17-00 ಗಂಟಯ ಸುಮಾರಿಗೆ ತನ್ನ ಊರಿನಲ್ಲಿರುವ ಚಿಕ್ಕಪ್ಪ ಮನೆಯಾದ ವಿಠ್ಠಲ ಪಾಲೆ ಇವರ ಮನೆಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋದವಳು, ಈವರೆಗೂ ಮನೆಗೆ ಬಾರದೇ, ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಸದ್ರಿ ಕಾಣೆಯಾದವಳನ್ನು ಹುಡುಕಿಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಪ್ಪರಾವ್ ತಂದೆ ಬಾಗು ಪಾಲೆ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಖಾರೇವಾಡ, ತಾ: ಯಲ್ಲಾಪುರ ರವರು ದಿನಾಂಕ: 10-05-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 10-05-2021

at 00:00 hrs to 24:00 hrs

 

ಮುರ್ಡೇಶ್ವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 12/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಯೋಗೇಶ ತಂದೆ ಸೋಮಯ್ಯ ನಾಯ್ಕ, ಪ್ರಾಯ-28 ವರ್ಷ, ವೃತ್ತಿ-ಶಿಲ್ಪಿ ಕೆಲಸ, ಸಾ|| ಈರಯ್ಯನಮನೆ, ದೇವಿಕಾನ್, ಕಾಯ್ಕಿಣಿ, ತಾ: ಭಟ್ಕಳ. ಪಿರ್ಯಾದಿಯ ಮಗನಾದ ಈತನು ಕಳೆದ 2 ವರ್ಷಗಳಿಂದ ಮೂರ್ಛೆ ಕಾಯಿಲೆಯಿಂದ ಬಳಲುತ್ತಾ, ಆಗಾಗ ಮೂರ್ಛೆ ಬೀಳುತ್ತಿದ್ದವನಿಗೆ ಕಳೆದ 1 ವರ್ಷದ ಹಿಂದೆ ಹೊನ್ನಾವರದ ಸೇಂಟ್ ಇಗ್ನೇಶಿಯಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು ಇರುತ್ತದೆ. ಯೋಗೇಶ ಸೋಮಯ್ಯ ನಾಯ್ಕ ಈತನು ದಿನಾಂಕ: 10-05-2021 ರಂದು ಬೆಳಿಗ್ಗೆ 05-00 ಗಂಟೆಗೆ ಮನೆಯಿಂದ ಎದ್ದು ಹೊರಗೆ ಹೋದವನು, ಬೆಳಿಗ್ಗೆ 06-00 ಗಂಟೆಯ ಸುಮಾರಿಗೆ ಮನೆ ಸಮೀಪದ ಮಂಜುನಾಥ ನಾರಾಯಣ ನಾಯ್ಕ ಇವರ ಗದ್ದೆಯಲ್ಲಿ ಮೂರ್ಛೆ ಬಿದ್ದ ವಿಷಯ ತಿಳಿದು ಪಿರ್ಯಾದಿಯು ಸ್ಥಳಕ್ಕೆ ಹೋಗಿ ನೋಡಿದ್ದು, ಆತನಿಗೆ ಬಲಗಣ್ಣಿನ ಹತ್ತಿರ, ಹಣೆಯ ಮೇಲೆ ಮತ್ತು ಬಲಗಾಲ ಮೊಣಗಂಟಿಗೆ ಗಾಯವಾದವನಿಗೆ ವಿಶ್ರಾಂತಿ ಪಡೆಯಲೆಂದು ಮನೆಯಲ್ಲಿ ತಂದು ಮಲಗಿಸಿದಾಗ ಮಧ್ಯಾಹ್ನ 12-00 ಗಂಟೆಯ ಸುಮಾರಿಗೆ ಆರೋಗ್ಯದಲ್ಲಿ ಏರುಪೇರಾಗಿ ತುಂಬಾ ನರಳಾಡಲು ಪ್ರಾರಂಭಿಸಿದ್ದರಿಂದ ಉಪಚಾರಕ್ಕಾಗಿ ಮಧ್ಯಾಹ್ನ 01-40 ಗಂಟೆಯ ಸುಮಾರಿಗೆ ಭಟ್ಕಳದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿ ಆಸ್ಪತ್ರೆಗೆ ತರುವ ಪೂರ್ವದಲ್ಲಿಯೇ ಮೃತಪಟ್ಟಿರುದಾಗಿ ತಿಳಿಸಿದ್ದು, ಮೃತನು ಮೂರ್ಛೆ ಕಾಯಿಲೆಯಿಂದ ಬಳಲಿ ಮೂರ್ಛೆ ಬಿದ್ದು ಮೃತಪಟ್ಟಿದ್ದು, ಮೃತದೇಹವು ಭಟ್ಕಳ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಸೋಮಯ್ಯ ತಂದೆ ಮಾಸ್ತಿ ನಾಯ್ಕ, ಪ್ರಾಯ-52 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಈರಯ್ಯನಮನೆ, ದೇವಿಕಾನ್, ಕಾಯ್ಕಿಣಿ, ತಾ: ಭಟ್ಕಳ ರವರು ದಿನಾಂಕ: 10-05-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 13/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಸೌಭದ್ರ ದುಗ್ಗು ಗೌಡ, ಪ್ರಾಯ-40 ವರ್ಷ, ಸಾ|| ಗಣೇಶನಮನೆ, ಶಿರಗುಣಿ, ಪೋ: ಕಕ್ಕಳ್ಳಿ, ತಾ: ಶಿರಸಿ. ಪಿರ್ಯಾದಿಯ ತಂಗಿಯಾದ ಇವಳು ತನಗೆ ಕಳೆದ 3 ವರ್ಷದ ಹಿಂದೆ ಬಂದ ಬಿ.ಪಿ ಶುಗುರ್ ಖಾಯಿಲೆ ಇರುವ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದವಳು, ದಿನಾಂಕ: 10-05-2021 ರಂದು ಬೆಳಿಗ್ಗೆ 10-00 ಗಂಟೆಯಿಂದ ಮಧ್ಯಾಹ್ನ 02-00 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ತಂಗಿಯ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ತನ್ನ ಮನೆಯ ಹತ್ತಿರ ಗದ್ದೆಯಲ್ಲಿರುವ ಒಂದು ಗೇರು ಮರದ ಕೊಂಬೆಗೆ ಸೀರೆಯಿಂದ ತನ್ನ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾಳೆ. ಇದರ ಹೊರತು ತನ್ನ ತಂಗಿಯ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಆದರೂ ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಹುಲಿಯಾ ತಂದೆ ವಾಸು ಗೌಡ. ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗಣೇಶನಮನೆ, ಶಿರಗುಣಿ, ಪೊ: ಕಕ್ಕಳ್ಳಿ, ತಾ: ಶಿರಸಿ ರವರು ದಿನಾಂಕ: 10-05-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 11-05-2021 12:45 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080