ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 10-11-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 92/2021, ಕಲಂ: 504, 506, 507 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತನು ಮೊಬೈಲ್ ನಂ: 9110832167 ನೇದರಿಂದ ಕರೆ ಮಾಡಿದ ವ್ಯಕ್ತಿಯಾಗಿದ್ದು, ಅವನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 07-11-2021 ರಂದು ಪಿರ್ಯಾದಿಯವರು ತಮ್ಮ ಕುಟುಂಬದವರೊಂದಿಗೆ ಗೋವಾಕ್ಕೆ ಹೋಗಲು ಹೋಗುತ್ತಿರುವಾಗ ಮಧ್ಯಾಹ್ನ 14-15 ಘಂಟೆಗೆ ಕಾರವಾರ ಆರ್.ಟಿ.ಓ ಕಚೇರಿ ಹತ್ತಿರ ತಲುಪಿದಾಗ ನಮೂದಿತ ಆರೋಪಿತನು ತನ್ನ ಮೊಬೈಲ್ ನಂ: 9110832167 ನೇದರಿಂದ ಪಿರ್ಯಾದಿಯ ಮೊಬೈಲ್ ನಂ: 80885XXXXX ನೇದಕ್ಕೆ ಕರೆ ಬಂದಿದ್ದು, ಪಿರ್ಯಾದಿಯು ಕರೆ ಸ್ವೀಕರಿಸಿ ಮಾತನಾಡಿದಾಗ ಕರೆ ಮಾಡಿದ ಆರೋಪಿತ ವ್ಯಕ್ತಿಯು ತನ್ನ ಪರಿಚಯ ನೀಡದೇ ‘ಆವಯ್ ಝವಣ್ಯಾ’ ಅಂತಾ ಅವಾಚ್ಯವಾಗಿ ಬೈಯ್ದು, ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ರವಿರಾಜ ತಂದೆ ಚಂದ್ರಹಾಸ ಅಂಕೋಲೇಕರ್, ಪ್ರಾಯ-34 ವರ್ಷ, ವೃತ್ತಿ-ಫ್ಯಾಬ್ರಿಕೇಷನ್ ಕೆಲಸ, ಸಾ|| ಹೈಚರ್ಚ್ ರಸ್ತೆ, ಕಾರವಾರ ರವರು ದಿನಾಂಕ: 10-11-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 29/2021, ಕಲಂ: 279, 338 ಐಪಿಸಿ ಹಾಗೂ ಕಲಂ: 134(A&B) ಐ.ಎಮ್.ವಿ ಎಕ್ಟ್ನೇದ್ದರ ವಿವರ...... ನಮೂದಿತ ಆರೋಪಿತನು ಯಾವುದೋ ಅಪರಿಚಿತ ವಾಹನದ ಚಾಲಕನಾಗಿದ್ದು, ವಾಹನದ ನಂಬರ್ ಹಾಗೂ ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 10-11-2021 ರಂದು 02-30 ಗಂಟೆಗೆ ತನ್ನ ವಾಹನವನ್ನು ಮಲ್ಲಾಪುರ ಕಡೆಯಿಂದ ದೇವಳಮಕ್ಕಿ, ಕಾರವಾರ ಕಡೆಗೆ ಹೋಗಲು ರಾಜ್ಯ ಹೆದ್ದಾರಿ ಸಂಖ್ಯೆ-06 ನೇದರ ಮೇಲೆ ಮಾನವೀಯ ಪ್ರಾಣಕ್ಕೆ ಹಾನಿ ಉಂಟಾಗುವಂತೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ವಾಹನದ ಪ್ರಕರವಾದ ಹೆಡ್ ಲೈಟ್ ಬೆಳಕನ್ನು ಹಾಕಿ ಚಲಾಯಿಸಿಕೊಂಡು ಬಂದು ಕೆರವಡಿ ಕಡೆಯಿಂದ ಮಲ್ಲಾಪುರ ಕಡೆಗೆ ಪಿರ್ಯಾದಿಯು ಚಲಾಯಿಸಿಕೊಂಡು ಬರುತ್ತಿದ್ದ ನೋಂದಣಿ ಮಾಡಿಸದೇ ಇರುವ ಹೊಸದಾದ ಹೋಂಡಾ ಸಿ.ಡಿ-110 ಕಂಪನಿಯ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಕೆಡವಿ, ಪಿರ್ಯಾದಿಯ ಬಲಗಾಲು ಮಂಡಿಯ ಕೆಳಭಾಗದಲ್ಲಿ ಮೂಳೆ ಮುರಿದು ಭಾರೀ ಗಾಯ ಮತ್ತು ಹಣೆಯ ಮೇಲೆ ಗಾಯ ಪಡಿಸಿ, ಸ್ಥಳದಲ್ಲಿ ವಾಹನವನ್ನು ನಿಲ್ಲಿಸದೇ ಹಾಗೂ ಅಪಘಾತದ ಸುದ್ದಿಯನ್ನು ಪೊಲೀಸರಿಗೆ ತಿಳಿಸದೆ ಮತ್ತು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸದೇ ಆರೋಪಿತನು ತನ್ನ ವಾಹನವನ್ನು ಚಲಾಯಿಸಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಕೃಷ್ಣಾ ತಂದೆ ನಾರಾಯಣ ಗಾಂವಕರ್, ಪ್ರಾಯ-55 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಗೋಳಗಾರ್, ಬಾರೆ, ತಾ: ಯಲ್ಲಾಪುರ ರವರು ದಿನಾಂಕ: 10-11-2021 ರಂದು 04-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 134/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಗಸ್ಟಿನ್ ತಂದೆ ಡುಮ್ಮಿಂಗ್ ಲೋಬೋ, ಪ್ರಾಯ-46 ವರ್ಷ, ಸಾ|| ಬೆಳ್ಳಿಮಕ್ಕಿ, ಕೊಡಾಣಿ, ತಾ: ಹೊನ್ನಾವರ (ಮೋಟಾರ್ ಸೈಕಲ್ ನಂ: ಕೆ.ಎ-47/ಎಸ್-2313 ನೇದರ ಚಾಲಕ). ಈತನು ದಿನಾಂಕ: 10-11-2021 ರಂದು 14-30 ಗಂಟೆಯ ಸುಮಾರಿಗೆ ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಎಸ್-2313 ನೇದನ್ನು ಬಳ್ಕೂರ ಕಡೆಯಿಂದ ಹೊನ್ನಾವರ ಕಡೆಗೆ ಹೋಗಲು ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಚೆನ್ಮನೆಹಕ್ಲ ಗುಡ್ಡದ ಹತ್ತಿರ ರಸ್ತೆಯ ಇಳಿಜಾರಿನಲ್ಲಿ ಅದೇ ವೇಗದಲ್ಲಿ ಹೋಗಿ ರಸ್ತೆಯ ತಿರುವಿನಲ್ಲಿ ತನ್ನ ಮೋಟಾರ್ ಸೈಕಲಿನ ವೇಗವನ್ನು ನಿಯಂತ್ರಿಸಲಾಗದೇ ರಸ್ತೆಯ ಬದಿಯ ಗಟಾರದಲ್ಲಿ ಮೋಟಾರ್ ಸೈಕಲ್ ಸಮೇತ ಬಿದ್ದು, ಮೋಟಾರ್ ಸೈಕಲ್ ಹಿಂಬದಿಯಲ್ಲಿ ಕುಳಿತ ಪಿರ್ಯಾದಿಯ ಎಡಗೈ ಕಿರುಬೆರಳಿಗೆ ಮತ್ತು ಮೈ ಕೈಗೆ ಸಣ್ಣಪುಟ್ಟ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಚಾಲಕನು ತನ್ನ ಬಲಗಾಲಿನ ಪಾದಕ್ಕೆ ಹಾಗೂ ಬಲಗೆನ್ನೆಯ ಹತ್ತಿರ ಭಾರೀ ರಕ್ತಗಾಯ ಮತ್ತು ಒಳನೋವನ್ನುಂಟು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ವಿನಾಯಕ ತಂದೆ ವಿಠ್ಠಲ ನಾಯ್ಕ, ಪ್ರಾಯ-36 ವರ್ಷ, ವೃತ್ತಿ-ಕರೆಂಟ್ ಬಿಲ್ ಕಲೆಕ್ಟರ್, ಸಾ|| ಬೇರಂಕಿ, ಹೊಳೆಬದಿಕೇರಿ, ತಾ: ಹೊನ್ನಾವರ ರವರು ದಿನಾಂಕ: 10-11-2021 ರಂದು 17-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 144/2021, ಕಲಂ: 323, 341, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಲಿಕ್ ತಂದೆ ಮೊಹಮ್ಮದ್ ಹುಸೇನ್ ರುಕ್ನುದ್ದೀನ್, ಪ್ರಾಯ-52 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ಮೌಲಾನಾ ಆಜಾದ್ ರೋಡ್, ತಾ: ಭಟ್ಕಳ. ಈತನು ಪಿರ್ಯಾದಿಯವರ ಹೆಂಡತಿಯ ಅಣ್ಣನಾಗಿದ್ದು, ಪಿರ್ಯಾದಿಯೊಂದಿಗೆ ದಿನಾಲೂ ವಿನಾಕಾರಣ ಜಗಳ ಮಾಡಿ ಕಿರಿಕಿರಿ ಉಂಟು ಮಾಡುತ್ತಿದ್ದವನು, ದಿನಾಂಕ: 09-11-2021 ರಂದು ರಾತ್ರಿ 23-30 ಗಂಟೆಯ ಸುಮಾರಿಗೆ ಸದ್ರಿ ಆರೋಪಿತನು ಭಟ್ಕಳ ಶಹರದ ಕಿದ್ವಾಯಿ ರೋಡ್ ಅಮೀನಾ ಅಪಾರ್ಟಮೆಂಟ್ ನಲ್ಲಿರುವ ಪಿರ್ಯಾದಿಯರ ಮನೆಯ ಹತ್ತಿರ ಬಂದು, ಪಿರ್ಯಾದಿಯವ ಮನೆಯಲ್ಲಿದ್ದ ವಯಸ್ಸಾದ ತನ್ನ ತಂದೆ-ತಾಯಿಯವರ ಹತ್ತಿರ ವಿನಾಕಾರಣ ಗಲಾಟೆ ಮಾಡುತ್ತಿದ್ದವನಿಗೆ ಪಿರ್ಯಾದಿಯವರು ಸದ್ರಿ ಆರೋಪಿತನಿಗೆ ‘ನೀನು ವಯಸ್ಸಾದ ನಿನ್ನ ತಂದೆ-ತಾಯಿಯವರ ಹತ್ತಿರ ಯಾಕೆ ಗಲಾಟೆ ಮಾಡುತ್ತಿದ್ದೀಯಾ? ದಿನಾಲೂ ನಿನ್ನ ಗಲಾಟೆಯನ್ನು ಕೇಳಿ ಕೇಳಿ ಸಾಕಾಗಿದೆ. ನೀನು ಗಲಾಟೆ ಮಾಡುವುದಾದರೆ ನಿಮ್ಮ ತಂದೆ ತಾಯಿಯನ್ನು ನಿಮ್ಮ ಮನೆಗೆ ಕರೆದುಕೊಂಡು ಹೋಗಿ ಗಲಾಟೆ ಮಾಡು. ನಮ್ಮ ಮನೆಯಲ್ಲಿ ಬೇಡ’ ಅಂತಾ ಹೇಳಿದ್ದರಿಂದ ಆರೋಪಿತನು ಒಮ್ಮೇಲೆ ಸಿಟ್ಟಿನಿಂದ ಪಿರ್ಯಾದಿಯವರ ಮೈ ಮೇಲೆ ಏರಿ ಬಂದು ‘ಸೂಳೆ ಮಗನೇ, ನೀನು ಯಾರು ಅದನ್ನು ಕೇಳುವವನು? ತಾನು ತನ್ನ ಅಕ್ಕನ ಮನೆಯಲ್ಲಿ ಇದ್ದೇನೆ, ನೀನು ಬೇಕಾದರೆ ಮನೆಯನ್ನು ಬಿಟ್ಟು ಹೋಗು’ ಅಂತಾ ಹೇಳಿದವನೇ ಪಿರ್ಯಾದಿಯವರಿಗೆ ಅಡ್ಡಗಟ್ಟಿ ಹಿಡಿದು ‘ಮಾದರ ಚೋದ್’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಪಿರ್ಯಾದಿಗೆ ಕೈಯಿಂದ ಎದೆಯ ಭಾಗಕ್ಕೆ ಗುದ್ದಿ, ಮುಖವನ್ನು ಹಿಡಿದು ಮನೆಯ ಗೋಡೆಗೆ ತಾಗಿಸಿ ದುಃಖಾಪತ್ ಪಡಿಸಿದ್ದಲ್ಲದೇ, ‘ಈಗ ತಪ್ಪಿಸಿಕೊಂಡಿದ್ದಿಯಾ. ಇನ್ನೊಮ್ಮೆ ತನ್ನ ತಂಟೆಗೆ ಬಂದರೆ ನಿನ್ನನ್ನು ಜೀವ ಸಮೇತ ಬಿಡುವುದಿಲ್ಲ’ ಅಂತಾ ಧಮಕಿ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಖಾಜಾ ಜವೂಪಾ ತಂದೆ ಅಬು ಮೊಹಮ್ಮದ್, ಪ್ರಾಯ-67 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಅಮೀನಾ ಅಪಾರ್ಟಮೆಂಟ್, ಕಿದ್ವಾಯಿ ರೋಡ್, ತಾ: ಭಟ್ಕಳ ರವರು ದಿನಾಂಕ: 10-11-2021 ರಂದು 17-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಜೋಯಿಡಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 40/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶಶಿಕುಮಾರ ತಂದೆ ಷಣ್ಮುಖಪ್ಪ ಹೂಗಾರ, ಪ್ರಾಯ-45 ವರ್ಷ, ವೃತ್ತಿ-ಚಾಲಕ, ಸಾ|| ಹೊಸಳ್ಳಿ, ಕುರ್ತಕೋಟಿ, ತಾ&ಜಿ: ಗದಗ (ಕಾರ್ ನಂ: ಕೆ.ಎ-25/ಎ.ಎ-9650 ನೇದರ ಚಾಲಕ). ಈತನು ದಿನಾಂಕ: 09-11-2021 ರಂದು 11-30 ಗಂಟೆಯ ಸುಮಾರಿಗೆ ತನ್ನ ಕಾರ್ ನಂ: ಕೆ.ಎ-25/ಎ.ಎ-9650 ನೇದನ್ನು ಅಣಶಿ ಕಡೆಯಿಂದ ಉಳವಿ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು, ಅಣಶಿಯ ನೇಚರ್ ಕ್ಯಾಂಪ್ ಹತ್ತಿರ ರಸ್ತೆಯ ತಿರುವಿನಲ್ಲಿ ಎದುರಿನಿಂದ ಚಲಾಯಿಸಿಕೊಂಡು ಬರುತ್ತಿದ್ದ ಪಿರ್ಯಾದಿಯ ಮೋಟಾರ್ ಸೈಕಲ್ ನಂ: ಕೆ.ಎ-30/ವಿ-8458 ನೇದಕ್ಕೆ ಎದುರಿನಿಂದ ಡಿಕ್ಕಿ ಪಡಿಸಿ, ಪಿರ್ಯಾದಿಯ ಬಲಗಾಲಿಗೆ ಭಾರೀ ರಕ್ತಗಾಯ ಉಂಟು ಪಡಿಸಿ, ಪಿರ್ಯಾದಿಯ ಮೋಟಾರ್ ಸೈಕಲಿನ ಹಿಂಬದಿಯಲ್ಲಿ ಕುಳಿತಿದ್ದ ಗಾಯಾಳು ಶ್ರೀಮತಿ ವಸಂತಿ ಕೋಂ. ವಸಂತ ನಾಯ್ಕ, ಇವರಿಗೆ ಬಲಗಾಲಿಗೆ ಹಾಗೂ ಬಲಭುಜಕ್ಕೆ ತೆರಚಿದ ರಕ್ತಗಾಯ ಉಂಟು ಪಡಿಸಿದ್ದಲ್ಲದೇ, ಎರಡು ವಾಹನಗಳನ್ನು ಜಖಂ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಪಾಂಡುರಂಗ ತಂದೆ ವಸಂತ ನಾಯ್ಕ, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಾಲಾಂಗಿಣಿ, ಚಾಪೋಲಿ, ತಾ: ಜೋಯಿಡಾ ರವರು ದಿನಾಂಕ: 10-11-2021 ರಂದು 13-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 110/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸುಧಾಮ ತಂದೆ ನಿಂಗಪ್ಪ ಶಿಂಧೆ, ಪ್ರಾಯ-39 ವರ್ಷ, ಸಾ|| ಹಾಲಗಿ, ಪೋ: ಹಾಲಗಿ, ತಾ: ಹಾವೇರಿ (ಟಿಪ್ಪರ್ ಲಾರಿ ನಂ: ಕೆ.ಎ-27/ಬಿ-9799 ನೇದರ ಚಾಲಕ). ಈತನು ದಿನಾಂಕ: 10-11-2021 ರಂದು 16-00 ಗಂಟೆಯ ಸುಮಾರಿಗೆ ತನ್ನ ಟಿಪ್ಪರ್ ಲಾರಿ ನಂ: ಕೆ.ಎ-27/ಬಿ-9799 ನೇದನ್ನು ಹಾವೇರಿ ಕಡೆಯಿಂದ ಶಿರಸಿ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ಶಿರಸಿ-ಹುಬ್ಬಳ್ಳಿ ರಸ್ತೆಯ ಹುಲದೇವನಸರ ಕ್ರಾಸ್ ಹತ್ತಿರದ ತಿರುವು ಮತ್ತು ಇಳಿಜಾರಿನ ರಸ್ತೆಯಲ್ಲಿ ತನ್ನ ಲಾರಿಯ ವೇಗವನ್ನು ನಿಯಂತ್ರಿಸಲಾಗದೇ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ, ಧರೆಗೆ ಡಿಕ್ಕಿ ಹೊಡೆದು ಪಲ್ಟಿ ಕೆಡವಿ ಅಪಘಾತ ಪಡಿಸಿ, ಲಾರಿಯನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸುರೇಶ ತಂದೆ ಭೀಮಪ್ಪ ಹಂಚಿನಮನಿ, ಪ್ರಾಯ-40 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಚೆತ್ರಾ ಗ್ರಾಮ, ಪೋ: ಕಾಕೋಳ, ತಾ: ಬ್ಯಾಡಗಿ, ಜಿ: ಹಾವೇರಿ ರವರು ದಿನಾಂಕ: 10-11-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 10-11-2021

at 00:00 hrs to 24:00 hrs

 

ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

 

 

 

ಇತ್ತೀಚಿನ ನವೀಕರಣ​ : 12-11-2021 05:28 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080