ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 10-10-2021
at 00:00 hrs to 24:00 hrs
ಅಂಕೋಲಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 149/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಗೋಪಾಲ ತಂದೆ ಮಹಾಬಲೇಶ್ವರ ನಾಯ್ಕ, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಸಬಾಕೇಣಿ, ಕೇಣಿ, ತಾ: ಅಂಕೋಲಾ. ಈತನು ದಿನಾಂಕ: 10-10-2021 ರಂದು 10-00 ಗಂಟೆಗೆ ಅಂಕೋಲಾ ತಾಲೂಕಿನ ಬಡಗೇರಿ ಗ್ರಾಮದ ಮೀನು ಮಾರುಕಟ್ಟೆಯ ಹತ್ತಿರ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಯಾವುದೇ ಪಾಸ್ ಯಾ ಪರವಾನಿಗೆ ಇಲ್ಲದೇ ಮಾರಾಟ ಮಾಡುವ ಉದ್ದೇಶದಿಂದ ಸುಮಾರು 2,740.14/- ರೂಪಾಯಿ ಮೌಲ್ಯದ Original Choice, 90 ML ನ 78 ಕರ್ನಾಟಕ ರಾಜ್ಯದ ಮದ್ಯದ ಸ್ಯಾಚೆಟ್ ಗಳನ್ನು ಅಕ್ರಮವಾಗಿ ತಂದು ಸಾಗಾಟ ಮಾಡುತ್ತಿದ್ದಾಗ ದಾಳಿಯ ಕಾಲಕ್ಕೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪ್ರೇಮನಗೌಡ ಪಾಟೀಲ, ಪಿ.ಎಸ್.ಐ-2, ಅಂಕೋಲಾ ಪೊಲೀಸ್ ಠಾಣೆ ರವರು ದಿನಾಂಕ: 10-10-2021 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹೊನ್ನಾವರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 259/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಹತೀಫ್ ಅಲಿ ತಂದೆ ಶಬ್ಬೀರ್ ಶೇಖ್, ಪ್ರಾಯ-26 ವರ್ಷ, ವೃತ್ತಿ-ವ್ಯಾಪಾರ, ಸಾ|| ಟೊಂಕಾ-2, ಕಾಸರಕೋಡ, ತಾ: ಹೊನ್ನಾವರ (ಓಮಿನಿ ವಾಹನ ನಂ: ಕೆ.ಎ-31/ಎಮ್-0673 ನೇದರ ಚಾಲಕ). ಈತನು ದಿನಾಂಕ: 10-10-2021 ರಂದು ರಂದು 12-00 ಗಂಟೆಯ ಸುಮರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಹೊನ್ನಾವರ ಕಾಸರಕೋಡದ ಇಕೋ ಬೀಚ್ ಕ್ರಾಸ್ ಹತ್ತಿರ ತನ್ನ ಬಾಬ್ತು ಓಮಿನಿ ವಾಹನ ನಂ: ಕೆ.ಎ-31/ಎಮ್-0673 ನೇದನ್ನು ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗ ಬರುವ ಏಕಮುಖ ಸಂಚಾರ ರಸ್ತೆಯಲ್ಲಿ ಕಾಸರಕೋಡ ಟೊಂಕಾ ಕಡೆಯಿಂದ ಇಕೋ ಬೀಚ್ ಕ್ರಾಸ್ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಕಾಸರಕೋಡ ಗ್ರಾಮ ಪಂಚಾಯತ ರಸ್ತೆಯ ಕಡೆಗೆ ಹೋಗಲೆಂದು ಯಾವುದೇ ಮುನ್ಸೂಚನೆ ನೀಡದೇ ತನ್ನ ಓಮಿನಿ ವಾಹನವನ್ನು ಒಮ್ಮೇಲೆ ರಸ್ತೆಯ ಎಡಕ್ಕೆ ಚಲಾಯಿಸಿ ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಪಿರ್ಯಾದಿಯು ಪ್ರಯಾಣಿಸುತ್ತಿದ್ದ ಕಾರ್ ನಂ: ಕೆ.ಎ-20/ಎಮ್.ಡಿ-0812 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯ ಕಾರ್ ಹಾಗೂ ತನ್ನ ವಾಹನವನ್ನು ಜಖಂ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಅಮೀತಕುಮಾರ ತಂದೆ ಆನಂದ, ಪ್ರಾಯ-38 ವರ್ಷ, ವೃತ್ತಿ-ವ್ಯಾಪಾರ, ಸಾ|| 2-110, ಗುಂಡ್ಮಿ, ಸಾಸ್ತನ, ತಾ: ಬ್ರಹ್ಮಾವರ, ಜಿ: ಉಡುಪಿ ರವರು ದಿನಾಂಕ: 10-10-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹೊನ್ನಾವರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 260/2021, ಕಲಂ: 323, 341, 447, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ನಾರಾಯಣ ತಂದೆ ಜಟ್ಟಿ ಗೌಡ, ಪ್ರಾಯ-47 ವರ್ಷ, ವೃತ್ತಿ-ವ್ಯಾಪಾರ, ಸಾ|| ಮಾವಿನಕುರ್ವಾ. ಗದ್ದೆಮನೆ, ತಾ: ಹೊನ್ನಾವರ, 2]. ಶ್ರೀಧರ ತಂದೆ ನಾರಾಯಣ ಗೌಡ, ಪ್ರಾಯ-21 ವರ್ಷ, ವೃತ್ತಿ-ವ್ಯಾಪಾರ, ಸಾ|| ಮಾವಿನಕುರ್ವಾ, ಗದ್ದೆಮನೆ, ತಾ: ಹೊನ್ನಾವರ, 3]. ಮಂಜುನಾಥ ತಂದೆ ನಾರಾಯಣ ಗೌಡ, ಪ್ರಾಯ-25 ವರ್ಷ, ವೃತ್ತಿ-ವ್ಯಾಪಾರ, ಸಾ|| ಗದ್ದೆಮನೆ, ಮಾವಿನಕುರ್ವಾ, ತಾ: ಹೊನ್ನಾವರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ಭಾರತೀಯ ಮಜ್ದೂರ್ ಸಂಘದಲ್ಲಿ ಕಾರ್ಮಿಕರ ಕಾರ್ಡ್ ಮಾಡಿ ಕೊಡುವ ಕೆಲಸ ಮಾಡಿಕೊಂಡಿದ್ದವನಿಗೆ ಸಂಘವು ಯಾವುದೋ ಒಂದು ಕಾರಣಕ್ಕೆ ಕೆಲಸದಿಂದ ತಗೆದು ಹಾಕಿದ್ದು. ಪಿರ್ಯಾದಿಯ ಅಣ್ಣನಾದ ಮಂಜುನಾಥ ತಿಮ್ಮಪ್ಪ ನಾಯ್ಕ ಈತನೇ ಏನೋ ಕುಮ್ಮಕ್ಕು ಮಾಡಿ ತನ್ನನ್ನು ಕೆಲಸದಿಂದ ತೆಗೆದು ಹಾಕಿಸಿದ್ದಾನೆ ಅಂತಾ ಭಾವಿಸಿ, ಅಂದಿನಿಂದ ಪಿರ್ಯಾದಿಯವರ ಕುಟುಂಬದವರೊಂದಿಗೆ ಆರೋಪಿ 1 ನೇಯವನ ಕುಟುಂಬದವರು ದ್ವೇಷದಿಂದ ಇದ್ದವರು ಹಾಗೂ ಪಿರ್ಯಾದಿಯ ಮನೆಯ ಜನರನ್ನು ನೋಡಿದಾಗಲೆಲ್ಲಾ ಗುರಾಯಿಸಿ ನೋಡುವುದನ್ನು ಮಾಡುತ್ತಾ ಬಂದವರು, ದಿನಾಂಕ: 09-10-2021 ರಂದು 18-30 ಗಂಟೆಗೆ ಪಿರ್ಯಾದಿಯು ಮನೆಯಿಂದ ಹೊನ್ನಾವರಕ್ಕೆ ಬರುತ್ತಿದ್ದಾಗ ಮಾವಿನಕುರ್ವಾದ ಗದ್ದೆಮನೆ ಶಾಲೆಯ ಹತ್ತಿರ ಆರೋಪಿ 1 ನೇಯವನ ಮಗನಾದ ಆರೋಪಿ 2 ನೇಯವನು ಪಿರ್ಯಾದಿಗೆ ಏಕಾಏಕಿ ಅಡ್ಡಗಟ್ಟಿ ನಿಲ್ಲಿಸಿ ‘ಬೋಳಿ ಮಗನೇ, ನಿಮ್ಮದು ಊರಲ್ಲಿ ಜಾಸ್ತಿಯಾಯಿತು. ನಿಮಗೆ ಸುಮ್ಮನೇ ಬಿಡುವುದಿಲ್ಲ’ ಅಂತಾ ಹೇಳಿ ಹೋಗಿದ್ದು, ಅದರೂ ಸಹ ಪಿರ್ಯಾದಿಯು ಸುಮ್ಮನೇ ಇದ್ದು. ಹೀಗಿರುತ್ತಾ ದಿನಾಂಕ: 10-10-2021 ರಂದು 19-00 ಗಂಟೆಯ ಸುಮಾರಿಗೆ ಪಿರ್ಯಾದಿ ಹಾಗೂ ಮನೆಯ ಜನರು ಮನೆಯಲ್ಲಿದ್ದಾಗ ಆರೋಪಿತರೆಲ್ಲರೂ ಸೇರಿ ಸಂಗನಮತ ಮಾಡಿಕೊಂಡು ಬಂದು, ಪಿರ್ಯಾದಿಯ ಮನೆಯ ಅಂಗಳದಲ್ಲಿ ಅಕ್ರಮ ಪ್ರವೇಶ ಮಾಡಿ, ಅಲ್ಲಿಯೇ ಅಂಗಳದಲ್ಲಿ ಇದ್ದ ಪಿರ್ಯಾದಿಯ ತಂದೆಯಾದ ತಿಮ್ಮಪ್ಪ ತಂದೆ ಸಣ್ಣಕೂಸ ನಾಯ್ಕ, ಪ್ರಾಯ-78 ವರ್ಷ, ವೃತ್ತಿ-ಕೃಷಿ ಕೆಲಸ ರವರಿಗೆ ‘ಏ ಸೂಳೇ ಮಗನೇ, ನಿನ್ನ ಮಗ ಶ್ರೀಧರ ಎಲ್ಲಿದ್ದಾನೆ? ಹೊರಗೆ ಕರಿ ಆ ಬೋಳಿ ಮಗನನ್ನು, ಇಂದು ಮುಗಿಸಿಯೇ ತೀರುತ್ತೇವೆ’ ಅಂತಾ ಅವಾಚ್ಯವಾಗಿ ಬೈಯ್ಯುತ್ತಿದ್ದಾಗ, ಆರೋಪಿತರೆಲ್ಲರೂ ಅವಾಚ್ಯವಾಗಿ ಬೈಯ್ಯುತ್ತಿದ್ದನ್ನು ಕೇಳಿ ಪಿರ್ಯಾದಿ ಹಾಗೂ ಪಿರ್ಯಾದಿಯ ಮನೆಗೆ ಬಂದಿದ್ದ ಜನರು ಹೊರಗೆ ಬಂದು ನೋಡಿದಾಗ ಆರೋಪಿತರೆಲ್ಲರೂ ಸೇರಿ ಪಿರ್ಯಾದಿಯ ತಂದೆಗೆ ಅವಾಚ್ಯವಾಗಿ ಬೈಯ್ಯುತ್ತಾ ದೂಡಾಡುತ್ತಿದ್ದು, ಆಗ ಪಿರ್ಯಾದಿ ಮತ್ತು ಮನೆಗೆ ಬಂದಿದ್ದ ಜನರು ಸೇರಿ ಪಿರ್ಯಾದಿಯ ತಂದೆಗೆ ಅವರಿಂದ ತಪ್ಪಿಸಿದ್ದು, ನಂತರ ಆರೋಪಿತರೆಲ್ಲರೂ ಸೇರಿ ಅಲ್ಲಿಂದ ಹೋಗುತ್ತಾ ಪಿರ್ಯಾದಿ ಹಾಗೂ ಪಿರ್ಯಾದಿಯ ತಂದೆಗೆ ‘ಈ ದಿನ ಬದುಕಿಕೊಂಡಿರಿ. ಇನ್ನೊಂದು ನಿಮ್ಮನ್ನು ಜೀವ ಸಮೇತ ಬಿಡುವುದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಶ್ರೀಧರ ತಂದೆ ತಿಮ್ಮಪ್ಪ ನಾಯ್ಕ, ಪ್ರಾಯ-43 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮಾವಿನಕುರ್ವಾ, ಗದ್ದೆಮನೆ, ತಾ: ಹೊನ್ನಾವರ ರವರು ದಿನಾಂಕ: 10-10-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಯಲ್ಲಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 172/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಚಮನಸಾಬ್ ತಂದೆ ಬಾಷಾಸಾಬ್ ಮುಲ್ಲಾ, ಪ್ರಾಯ-30 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| ಜುಮ್ಮಾ ಮಸೀದಿ ಹತ್ತಿರ, ಪ್ಯಾಟಿ ಓಣಿ, ಮೊರಬ್ ಗ್ರಾಮ, ತಾ&ಜಿ: ಧಾರವಾಡ (ವಿ.ಆರ್.ಎಲ್ ಲಾರಿ ನಂ: ಕೆ.ಎ-25/ಎ-6011 ನೇದರ ಚಾಲಕ). ಈತನು ದಿನಾಂಕ: 10-10-2021 ರಂದು ಮಧ್ಯಾಹ್ನ 01-30 ಗಂಟೆಯ ಸುಮಾರಿಗೆ ತನ್ನ ವಿ.ಆರ್.ಎಲ್ ಲಾರಿ ನಂ: ಕೆ.ಎ-25/ಎ-6011 ನೇದನ್ನು ಕಾರವಾರ-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಲಾರಿಯನ್ನು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು, ಯಲ್ಲಾಪುರ ತಾಲೂಕಿನ ಅರತಿಬೈಲ್ ಸಮೀಪ ಇರುವ ಸಣ್ಣ ತಿರುವಿನಲ್ಲಿ ತನ್ನ ಎದುರಿನಿಂದ ನಿಧಾನವಾಗಿ ರಸ್ತೆಯ ಎಡಬದಿಯಿಂದ ಪಿರ್ಯಾದಿಯು ಚಲಾಯಿಸಿಕೊಂಡು ಹೊರಟ ಮಾರುತಿ ಸ್ವಿಫ್ಟ್ ಕಾರ್ ನಂ: ಕೆ.ಎ-11/ಬಿ-7144 ನೇದಕ್ಕೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯ ಕಾರನ್ನು ಜಖಂಗೊಳಿಸಿದ ಬಗ್ಗೆ ಪಿರ್ಯಾದಿ ಶ್ರೀ ಗೋಪಾಲ ತಂದೆ ಹನುಮಂತ ಅಗಸರ, ಪ್ರಾಯ-25 ವರ್ಷ, ವೃತ್ತಿ-ಕಾರ್ ಚಾಲಕ, ಸಾ|| ನಂದಿಹಾಳ್ ಗ್ರಾಮ, ತಾ: ಬಸವನಬಾಗೇವಾಡಿ, ಜಿ: ವಿಜಯಪುರ ರವರು ದಿನಾಂಕ: 10-10-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಯಲ್ಲಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 173/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಸಜ್ಜೀಮೋಹನ ತಂದೆ ಕೃಷ್ಣ ನಾಯರ್, ಪ್ರಾಯ-45 ವರ್ಷ, ವೃತ್ತಿ-ವೆಲ್ಡಿಂಗ್ ಕೆಲಸ, ಸಾ|| ಉಮ್ಮಚಗಿ, ತಾ: ಯಲ್ಲಾಪುರ. ಈತನು ದಿನಾಂಕ: 10-10-2021 ರಂದು 16-50 ಗಂಟೆಗೆ ಯಲ್ಲಾಪುರ ತಾಲೂಕಿನ ಉಮ್ಮಚಗಿ ಗ್ರಾಮದಲ್ಲಿ ಇರುವ ತನ್ನ ಮನೆಯ ಮುಂದಿನ ಶೆಡ್ಡಿನಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಜನರಿಗೆ ಮುಕ್ತವಾಗಿ ಮದ್ಯವನ್ನು ಕುಡಿಯಲು ಅವಕಾಶ ಮಾಡಿಕೊಟ್ಟಿರುವಾಗ 527/- ರೂಪಾಯಿಯ ORIGINAL CHOICE DELUXE Whisky, 90 ML ಅಳತೆಯ 15 ಮದ್ಯದ ಪ್ಯಾಕೆಟ್ ಗಳು, ORIGINAL CHOICE DELUXE Whisky, 90 ML ಅಳತೆಯ ಖಾಲಿ ಪ್ಯಾಕೆಟ್-03, ಅ||ಕಿ|| 00.00/- ರೂಪಾಯಿ ಹಾಗೂ ಮದ್ಯವನ್ನು ಕುಡಿಯಲು ಬಳಸಿದ 3 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಅನಧೀಕೃತವಾಗಿ ಮದ್ಯವನ್ನು ಕುಡಿಯಲು ಅವಕಾಶ ಮಾಡಿ ಕೊಟ್ಟಾಗ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಕುಮಾರಿ: ಪ್ರಿಯಾಂಕ ನ್ಯಾಮಗೌಡ, ಪಿ.ಎಸ್.ಐ-02, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 10-10-2021 ರಂದು 18-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಯಲ್ಲಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 174/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ರಘುನಾಥ ತಂದೆ ವಾಸು ನಾಯರ್, ಪ್ರಾಯ-72 ವರ್ಷ, ವೃತ್ತಿ-ವ್ಯಾಪಾರ, ಸಾ|| ವಸಂತ ಭವನ, ಉಮ್ಮಚಗಿ, ತಾ: ಯಲ್ಲಾಪುರ. ಈತನು ದಿನಾಂಕ: 10-10-2021 ರಂದು 16-50 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಉಮ್ಮಚಗಿ ಗ್ರಾಮದಲ್ಲಿ ಇರುವ ತನ್ನ ಅಂಗಡಿಯ ಮುಂಬದಿಯ ಶೆಡ್ಡಿನಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಜನರಿಗೆ ಮುಕ್ತವಾಗಿ ಮದ್ಯವನ್ನು ಕುಡಿಯಲು ಅವಕಾಶ ಮಾಡಿಕೊಟ್ಟಿರುವಾಗ 491.82/- ರೂಪಾಯಿಯ Original Choice DELUX WHISKY, 90 ML ಅಳತೆಯ 14 ಮದ್ಯದ ಪ್ಯಾಕೆಟ್ ಗಳು, Original Choice DELUX WHISKY, 90 ML ಅಳತೆಯ ಖಾಲಿ ಪ್ಯಾಕೆಟ್-04, ಅ||ಕಿ|| 00.00/- ರೂಪಾಯಿ ಹಾಗೂ ಮದ್ಯವನ್ನು ಕುಡಿಯಲು ಬಳಸಿದ 4 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು, ಅ||ಕಿ|| 00.00/- ರೂಪಾಯಿ, 1 ಖಾಲಿ ನೀರಿನ ಬಾಟ್ಲಿ, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಅನಧೀಕೃತವಾಗಿ ಮದ್ಯವನ್ನು ಕುಡಿಯಲು ಅವಕಾಶ ಮಾಡಿ ಕೊಟ್ಟಾಗ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸುರೇಶ ಎಚ್. ಯಳ್ಳೂರ, ಪೊಲೀಸ್ ನಿರೀಕ್ಷಕರು, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 10-10-2021 ರಂದು 20-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಯಲ್ಲಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 175/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಸತೀಶ ತಂದೆ ನಾರಾಯಣ ಹೆಗಡೆ ಪ್ರಾಯ-50 ವರ್ಷ, ವೃತ್ತಿ-ಕಿರಾಣಿ ವ್ಯಾಪಾರ, ಸಾ|| ಉಮ್ಮಚಗಿ, ತಾ: ಯಲ್ಲಾಪುರ. ಈತನು ದಿನಾಂಕ: 10-10-2021 ರಂದು 18-00 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಉಮ್ಮಚಗಿ ಗ್ರಾಮದಲ್ಲಿ ಇರುವ ತನ್ನ ಅಂಗಡಿಯ ಹಿಂಬದಿಯ ಶೆಡ್ಡಿನಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಜನರಿಗೆ ಮುಕ್ತವಾಗಿ ಮದ್ಯವನ್ನು ಕುಡಿಯಲು ಅವಕಾಶ ಮಾಡಿಕೊಟ್ಟಿರುವಾಗ 526.95/- ರೂಪಾಯಿಯ Original Choice DELUX WHISKY, 90 ML ಅಳತೆಯ 15 ಮದ್ಯದ ಪ್ಯಾಕೆಟ್ ಗಳು, Original Choice DELUX WHISKY, 90 ML ಅಳತೆಯ ಖಾಲಿ ಪ್ಯಾಕೆಟ್-03, ಅ||ಕಿ|| 00.00/- ರೂಪಾಯಿ ಹಾಗೂ ಮದ್ಯವನ್ನು ಕುಡಿಯಲು ಬಳಸಿದ 3 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು, 00.00/- ರೂಪಾಯಿ, 1 ಖಾಲಿ ನೀರಿನ ಬಾಟ್ಲಿ, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಅನಧೀಕೃತವಾಗಿ ಮದ್ಯವನ್ನು ಕುಡಿಯಲು ಅವಕಾಶ ಮಾಡಿ ಕೊಟ್ಟಾಗ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸುರೇಶ ಎಚ್. ಯಳ್ಳೂರ, ಪೊಲೀಸ್ ನಿರೀಕ್ಷಕರು, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 10-10-2021 ರಂದು 20-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಯಲ್ಲಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 176/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಚಂದ್ರು ತಂದೆ ಮುತ್ತಾ ಶೇರುಗಾರ, ಪ್ರಾಯ-42 ವರ್ಷ, ವೃತ್ತಿ-ಹೊಟೇಲ್ ವ್ಯಾಪಾರ, ಸಾ|| ಉಮ್ಮಚಗಿ, ತಾ: ಯಲ್ಲಾಪುರ. ಈತನು ದಿನಾಂಕ: 10-10-2021 ರಂದು 19-30 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಉಮ್ಮಚಗಿ ಗ್ರಾಮದಲ್ಲಿ ಇರುವ ತನ್ನ ಹೊಟೇಲ್ ಮುಂದಿನ ಶೆಡ್ಡಿನಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಜನರಿಗೆ ಮುಕ್ತವಾಗಿ ಮದ್ಯವನ್ನು ಕುಡಿಯಲು ಅವಕಾಶ ಮಾಡಿಕೊಟ್ಟಿರುವಾಗ 351/- ರೂಪಾಯಿಯ ORIGINAL CHOICE DELUXE Whisky, 90 ML ಅಳತೆಯ 10 ಮದ್ಯದ ಪ್ಯಾಕೆಟ್ ಗಳು, ORIGINAL CHOICE DELUXE Whisky, 90 ML ಅಳತೆಯ ಖಾಲಿ ಪ್ಯಾಕೆಟ್-02, ಅ||ಕಿ|| 00.00/- ರೂಪಾಯಿ ಹಾಗೂ ಮದ್ಯವನ್ನು ಕುಡಿಯಲು ಬಳಸಿದ 2 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಅನಧೀಕೃತವಾಗಿ ಮದ್ಯವನ್ನು ಕುಡಿಯಲು ಅವಕಾಶ ಮಾಡಿ ಕೊಟ್ಟಾಗ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಕುಮಾರಿ: ಪ್ರಿಯಾಂಕ ನ್ಯಾಮಗೌಡ, ಪಿ.ಎಸ್.ಐ-02, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 10-10-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಶಿರಸಿ ನಗರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 67/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಪರಶುರಾಮ ತಂದೆ ಕೃಷ್ಣಾ ನಾಯ್ಕ, ಪ್ರಾಯ-43 ವರ್ಷ, ವೃತ್ತಿ-ಚಾಲಕ, ಸಾ|| ಅಂಬಾಗಿರಿ, ತಾ: ಶಿರಸಿ. ಈತನು ದಿನಾಂಕ: 10-10-2021 ರಂದು 10-30 ಗಂಟೆಗೆ ಶಿರಸಿ ನಗರ ಗಾಂಧಿನಗರದ ಪ್ರೋಗ್ರೆಸಿವ್ ಕಾಲೇಜಿನ ಮೈದಾನದಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಜನರಿಗೆ ಮುಕ್ತವಾಗಿ ಮದ್ಯವನ್ನು ಕುಡಿಯಲು ಅವಕಾಶ ಮಾಡಿಕೊಟ್ಟಿರುವಾಗ 526.95/- ರೂಪಾಯಿಯ HAYWARDS CHEERS WHISKY ಅಂತಾ ಲೇಬಲ್ ಇದ್ದ 90 ML ಅಳತೆಯ 15 ಮದ್ಯದ ಪ್ಯಾಕೆಟ್ ಗಳು, HAYWARDS CHEERS WHISKY ಅಂತಾ ಲೇಬಲ್ ಇದ್ದ 90 ML ಅಳತೆಯ ಖಾಲಿ ಪ್ಯಾಕೆಟ್-02, ಅ||ಕಿ|| 00.00/- ರೂಪಾಯಿ ಹಾಗೂ ಮದ್ಯವನ್ನು ಕುಡಿಯಲು ಬಳಸಿದ ಗಾಜಿನ ಗ್ಲಾಸ್-02, ಅ||ಕಿ|| 00.00/- ರೂಪಾಯಿ, ನೀರಿನ ಖಾಲಿ ಬಾಟಲಿಗಳು-2, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ಅನಧೀಕೃತವಾಗಿ ಮದ್ಯವನ್ನು ಕುಡಿಯಲು ಅವಕಾಶ ಮಾಡಿ ಕೊಟ್ಟಾಗ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಜಕುಮಾರ ಉಕ್ಕಲಿ, ಪಿ.ಎಸ್.ಐ (ಕಾ&ಸು), ಶಿರಸಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 10-10-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹಳಿಯಾಳ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 157/2021, ಕಲಂ: ಹುಡುಗಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಕುಮಾರಿ: ರಿತಿಕಾ ತಂದೆ ಪಕೀರಪ್ಪ ವಡ್ಡರ, ಪ್ರಾಯ-19 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಬೆಲವಂತರ, ತಾ: ಕಲಘಟಗಿ, ಜಿ: ಧಾರವಾಡ. ಪಿರ್ಯಾದಿಯವರ ಮಗಳಾದ ಇವಳು ದಿನಾಂಕ: 05-10-2021 ರಂದು ಹಳಿಯಾಳ ಶಹರದ ಸಿದ್ಧರಾಮೇಶ್ವರ ಗಲ್ಲಿಯ ತಮ್ಮ ಸಂಬಂಧಿಕರಾದ ಸುರೇಶ ತಂದೆ ಶಿವಪ್ಪ ವಡ್ಡರ, ಪ್ರಾಯ-39 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಸಿದ್ದರಾಮೇಶ್ವರ ಗಲ್ಲಿ, ತಾ: ಹಳಿಯಾಳ ಇವರ ಮನೆಗೆ ಬಂದು ಉಳಿದುಕೊಂಡಿದ್ದವಳು, ದಿನಾಂಕ: 08-10-2021 ರಂದು ಸುರೇಶ ಇವರು ಸಾಫ್ಟವೇರ್ ಕೆಲಸಕ್ಕೆ ಅಂತ ಹೊರಗಡೆ ಹೋಗಿದ್ದಾಗ ಕುಮಾರಿ: ರಿತಿಕಾ ಇವಳು ಮನೆಯಲ್ಲಿ ಹಳಿಯಾಳ ಮಾರ್ಕೆಟ್ ಕಡೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು, ಕೆಲಸದಿಂದ ಸುರೇಶ ಇವರು ಪರತ್ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಕಾಣಲಿಲ್ಲ. ನಂತರ ಪಿರ್ಯಾದಿಯವರಿಗೆ ಪೋನ್ ಮಾಡಿ ಕಾಣೆಯಾದ ವಿಷಯ ತಿಳಿಸಿದ್ದು, ಕುಮಾರಿ: ರಿತಿಕಾ ಇವಳು ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಮನೆಯಲ್ಲಿ ಹೇಳದೇ ಕೇಳದೇ, ಸಂಬಂಧಿಕರ ಮನೆಗೂ ಹೋಗದೇ ಎಲ್ಲಿಯೋ ಕಾಣೆಯಾಗಿರುತ್ತಾಳೆ. ಸದ್ರಿ ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಫಕೀರಪ್ಪ ತಂದೆ ಪಕೀರಪ್ಪ ವಡ್ಡರ, ಪ್ರಾಯ-46 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬೆಲವಂತರ, ತಾ: ಕಲಘಟಗಿ, ಜಿ: ಧಾರವಾಡ ರವರು ದಿನಾಂಕ: 10-10-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 10-10-2021
at 00:00 hrs to 24:00 hrs
ಕುಮಟಾ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 29/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ನಾಗೇಶ ರಾಮ ಅಂಬಿಗಾ, ಪ್ರಾಯ-55 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಮಠ ಗ್ರಾಮ, ಧಾರೇಶ್ವರ, ತಾ: ಕುಮಟಾ. ಈತನು ಕಳೆದ ಮೂರು ವರ್ಷಗಳಿಂದ ಮೈ ಕೈ ಕಾಲು ಉರಿಯ ಕಾಯಿಲೆಯಿಂದ ಬಳಲುತ್ತಿದ್ದವನು, ಕಳೆದ ಮೂರು ವರ್ಷಗಳಿಂದ ಯಾವುದೇ ಕೆಲಸ ಕಾರ್ಯವನ್ನು ಮಾಡಲಾಗದೇ ತನಗಿದ್ದ ಕಾಯಿಲೆಯಿಂದ ಮನನೊಂದು ಕಳೆದ 06 ತಿಂಗಳುಗಳಿಂದ ಮಾನಸಿಕವಾಗಿ ಅಸ್ವಸ್ಥನಾದವನು, ಈ ಹಿಂದೆ ಎರಡು ಮೂರು ಬಾರಿ ಆತ್ಮಹತ್ಯೆಯನ್ನು ಮಾಡಿಕೊಳ್ಳುಲು ಪ್ರಯತ್ನಸಿದವನಿಗೆ ಮನೆಯ ಜನರು ತಪ್ಪಿಸಿದ್ದು, ದಿನಾಂಕ: 10-10-2021 ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮಧ್ಯಾಹ್ನ 12-30 ಗಂಟೆಯಿಂದ 13-30 ಗಂಟೆಯ ನಡುವಿನ ಅವಧಿಯಲ್ಲಿ ತನಗಿದ್ದ ಕಾಯಿಲೆಯಿಂದ ಮಾನಸಿಕವಾಗಿ ಅಸ್ವಸ್ಥನಾದವನು, ತಮ್ಮ ಮನೆಯ ಓರೆಯಲ್ಲಿರುವ ಕೋಳಿ (ಜಂತಿ) ಗೆ ಸೀರೆಯನ್ನು ಕಟ್ಟಿಕೊಂಡು ತನ್ನ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಯನ್ನು ಮಾಡಿಕೊಂಡು ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ನಾಗೇಂದ್ರ ತಂದೆ ನಾಗೇಶ ಅಂಬಿಗ, ಪ್ರಾಯ-22 ವರ್ಷ, ವೃತ್ತಿ-ಇಂಜಿನಿಯರಿಂಗ್, ಸಾ|| ಮಠ ಗ್ರಾಮ, ಧಾರೇಶ್ವರ, ತಾ: ಕುಮಟಾ ರವರು ದಿನಾಂಕ: 10-10-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಕುಮಟಾ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 30/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಪುರಂದರ ತಂದೆ ಶಿವಪ್ಪಾ ಶೇಟ್, ಪ್ರಾಯ-85 ವರ್ಷ, ವೃತ್ತಿ-ತೋಟದ ಕೆಲಸ, ಸಾ|| ಬೆಣ್ಣೆ ಓಣಿ, ಬಗ್ಗೋಣ, ತಾ: ಕುಮಟಾ. ಪಿರ್ಯಾದುದಾರರ ತಂದೆಯವರಾದ ಇವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಅಲ್ಲದೇ ನಮ್ಮ ತಾಯಿಯವರು ಕಳೆದ ನಾಲ್ಕು ತಿಂಗಳ ಹಿಂದೆ ತೀರಿಕೊಂಡಿದ್ದು, ಅಣ್ಣನಿಗೂ ಕಳೆದ ಒಂದು ತಿಂಗಳ ಹಿಂದೆ ಹೃದಯಾಘಾತವಾಗಿ ಚಿಕಿತ್ಸೆ ಪಡೆಯುತ್ತಿದ್ದು, ನಮ್ಮ ಮನೆಯಲ್ಲಿ ಆಗುತ್ತಿರುವ ತೊಂದರೆಗಳನ್ನು ಹಾಗೂ ತನಗೆ ಆಗುತ್ತಿರುವ ತೊಂದರೆಗಳನ್ನು ನೆನಪಿಸಿಕೊಂಡು ತನ್ನಿಂದ ತನ್ನ ಮಕ್ಕಳಿಗೆ ಆರ್ಥಿಕವಾಗಿ ತುಂಬಾ ನಷ್ಟ ಆಗುತ್ತದೆ ಎಂದು ಭಾವಿಸಿಯೋ ಅಥವಾ ಅನಾರೋಗ್ಯದ ಕಾರಣದಿಂದಲೋ ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ: 10-10-2021 ರಂದು 14-30 ಗಂಟೆಯಿಂದ 14-50 ಗಂಟೆಯ ಅವಧಿಯಲ್ಲಿ ತಾನು ಕೆಲಸ ಮಾಡುತ್ತಿದ್ದ ರಾಘವೇಂದ್ರ ನಾಯಕ ಇವರ ತೋಟದ ಬಾವಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು ಇರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾಗೇಶ ತಂದೆ ಪುರಂದರ ಶೇಟ್, ಪ್ರಾಯ-47 ವರ್ಷ, ವೃತ್ತಿ-ಬಂಗಾರದ ಕೆಲಸ, ಸಾ|| ಬೆಣ್ಣೆ ಓಣಿ, ಬಗ್ಗೋಣ, ತಾ: ಕುಮಟಾ ರವರು ದಿನಾಂಕ: 10-10-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮಂಕಿ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 08/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ರೂಪಾ ಈಶ್ವರ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಬಾಲಯ್ಯನವಾಡಿ, ಮಂಕಿ, ತಾ: ಹೊನ್ನಾವರ. ಇವಳು ಮಾಲೆ ಹಬ್ಬಕ್ಕೆ ಅಂತಾ ಕಳೆದ 10 ದಿನಗಳ ಹಿಂದೆ ಮಂಕಿ ಗ್ರಾಮದ ಮಾಸ್ತಿಮನೆಯಲ್ಲಿರುವ ತನ್ನ ತವರು ಮನೆಗೆ ಬಂದಿದ್ದಳು, ದಿನಾಂಕ: 10-10-2021 ರಂದು ಮಧ್ಯಾಹ್ನ 13-00 ಗಂಟೆಯ ಸುಮಾರಿಗೆ ತನ್ನ ತವರು ಮನೆಯ ತೋಟದಲ್ಲಿ ಮರದಿಂದ ಬಿದ್ದ ಅಡಿಕೆಗಳನ್ನು ಹೆಕ್ಕಲು ಅಂತಾ ಹೋದವಳು, ತೋಟದಲ್ಲಿರುವ ತೆರೆದ ನೆಲ ಬಾವಿಯ ಹತ್ತಿರ ಬಿದ್ದಿರುವ ಅಡಿಕೆಗಳನ್ನು ಹೆಕ್ಕಲು ಅಂತಾ ಹೋಗಿ ಬಾವಿಯ ಅಂಚಿನ ಹತ್ತಿರ ಆಕಸ್ಮಾತ್ ಕಾಲು ಜಾರಿ ಬಾವಿಯಲ್ಲಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಬಗ್ಗೆ ಪಿರ್ಯಾದಿ ಶ್ರೀ ಸುರೇಶ ತಂದೆ ಮಾಬ್ಲೇಶ್ವರ ನಾಯ್ಕ, ಪ್ರಾಯ-55 ವರ್ಷ, ವೃತ್ತಿ-ಗೂಡಂಗಡಿ ವ್ಯಾಪಾರ, ಸಾ|| ಮಂಕಿ, ಮಾಸ್ತಿಮನೆ, ತಾ: ಹೊನ್ನಾವರ ರವರು ದಿನಾಂಕ: 10-10-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ದಾಂಡೇಲಿ ನಗರ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 10/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ನಾರಾಯಣ ತಂದೆ ಯಲ್ಲಪ್ಪ ಅಂಬೇವಾಡಕರ, ಪ್ರಾಯ-22 ವರ್ಷ, ವೃತ್ತಿ-ಇಲೆಕ್ಟ್ರೀಶಿಯನ್ ಕೆಲಸ, ಸಾ|| ಸುಭಾಷ ನಗರ, ತಾ: ದಾಂಡೇಲಿ. ಸುದ್ದಿದಾರರ ಮಗನಾದ ಈತನು ತನಗೆ ನೌಕರಿ ಸಿಗದೇ ಇರುವ ವಿಷಯನ್ನು ತನ್ನ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 09-10-2021 ರಂದು ರಾತ್ರಿ 22-00 ಗಂಟೆಯಿಂದ ದಿನಾಂಕ: 10-10-2021 ರಂದು 11-00 ಗಂಟೆಯ ನಡುವಿನ ಅವಧಿಯಲ್ಲಿ ಸುದ್ದಿದಾರರು ವಾಸವಾಗಿದ್ದ ಮನೆಯ ಮೇಲ್ಮಹಡಿಯ ರೂಮಿನಲ್ಲಿ ಒಂದು ಕಬ್ಬಿಣದ ಜಂತಿಗೆ ಒಂದು ಸೀರೇಯನ್ನು ಕಟ್ಟಿ ಅದನ್ನು ತನ್ನ ಕುತ್ತಿಗೆಗೆ ಬಿಗಿದುಕೊಂಡು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರ ಹೊರತು ನನ್ನ ಮಗನ ಸಾವಿನಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಯಲ್ಲಪ್ಪ ತಂದೆ ನಾರಾಯಣ ಅಂಬೇವಾಡಕರ, ಪ್ರಾಯ-48 ವರ್ಷ, ವೃತ್ತಿ-ಡಬ್ಲ್ಯೂ.ಸಿ.ಪಿ.ಎಮ್ ನಲ್ಲಿ ಕೆಲಸ, ಸಾ|| ಸುಭಾಷ ನಗರ, ತಾ: ದಾಂಡೇಲಿ ರವರು ದಿನಾಂಕ: 10-10-2021 ರಂದು 11-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======