ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 11-04-2021

at 00:00 hrs to 24:00 hrs

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 29/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಜ್ಞಾನೇಶ ಪಿ. ಎಸ್. ತಂದೆ ಬಿ. ಸಣ್ಣೇಗೌಡ, ಸಾ|| ಶಿವಮೊಗ್ಗ (ಕಾರ್ ನಂ: ಕೆ.ಎ-01/ಎಮ್.ಎನ್-3073 ನೇದರ ಚಾಲಕ). ದಿನಾಂಕ: 10-04-2021 ರಂದು ಸಾಯಂಕಾಲ 19-00 ಗಂಟೆಯ ಸುಮಾರಿಗೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಮಾದನಗೇರಿ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-5666 ನೇದರ ಸವಾರನಾದ ಸತ್ಯನಾರಾಯಣ ತಂದೆ ದೇವು ಗೌಡ, ಪ್ರಾಯ-38 ವರ್ಷ, ಸಾ|| ಮಾದನಗೇರಿ, ಗೋಕರ್ಣ, ತಾ: ಕುಮಟಾ ಈತನು ಮಾದನಗೇರಿ ಕಡೆಯಿಂದ ಸದರ ಮೋಟಾರ್ ಸೈಕಲನ್ನು ಚಲಾಯಿಸಿಕೊಂಡು ಬಂದು ರಸ್ತೆಯ ಬಲಬದಿಗೆ ಇರುವ ತನ್ನ ಮನೆ ಕಡೆಗೆ ಹೋಗಲು ಬಲಬದಿಯ ಇಂಡಿಕೇಟರನ್ನು ಚಲಾಯಿಸಿ ರಸ್ತೆ ದಾಟುತ್ತಿದ್ದಾಗ ಗೋಕರ್ಣ ಕಡೆಯಿಂದ ಮಾದನಗೇರಿ ಕಡೆಗೆ ಕಾರ್ ನಂ: ಕೆ.ಎ-01/ಎಮ್.ಎನ್-3073 ನೇದರ ಆರೋಪಿ ಚಾಲಕನು ಸದರ ಕಾರನ್ನು ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು, ಸತ್ಯನಾರಾಯಣ ಈತನು ಚಲಾಯಿಸುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಸತ್ಯನಾರಾಯಣ ಗೌಡ ಈತನಿಗೆ ಬಲಗಾಲಿನ ಮಂಡಿಯ ಕೆಳಗೆ, ಎಡಗಾಲಿನ ಹಿಮ್ಮಡಿಗೆ ಹಾಗೂ ಎದೆಗೆ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಆನಂದು ತಂದೆ ರಾಮ ಗೌಡ, ಪ್ರಾಯ-60 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಮಾದನಗೇರಿ, ಗೋಕರ್ಣ, ತಾ: ಕುಮಟಾ ರವರು ದಿನಾಂಕ: 11-04-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 106/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಹರೀಶ ತಂದೆ ಶಂಕರ ಹುಲೇಶ್ವರ, ಪ್ರಾಯ-20 ವರ್ಷ, ವೃತ್ತಿ-ಸೆಂಟ್ರಿಂಗ್ ಕೆಲಸ, ಸಾ|| ಅಂಬೇಡ್ಕರ ಕಾಲೋನಿ, ಅಳ್ಳಂಕಿ, ತಾ: ಹೊನ್ನಾವರ. ಈತನು ದಿನಾಂಕ: 10-04-2021 ರಂದು 21-45 ಗಂಟೆಗೆ ಹೊನ್ನಾವರ ಪಟ್ಟಣದ ಎಲ್.ಐ.ಸಿ ಆಫೀಸ್ ಹತ್ತಿರದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಬದಿಯ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಯಾವದೇ ಪರವಾನಿಗೆ ಇಲ್ಲದೇ KINGFISHER STRONG ಅಂತಾ ಬರೆದ 500 ML ಅಳತೆಯ ಖಾಲಿ ಸಾರಾಯಿ ಟಿನ್ ಬಾಟಲಿ-02 ನೇದಲ್ಲಿಯ ಸರಾಯಿಯನ್ನು ಸಾರ್ವಜನಿಕ ಸ್ಥಳದಲ್ಲಿ ಕುಡಿದು ಅಪರಾಧ ಎಸಗಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಶಿಕುಮಾರ ಸಿ. ಆರ್, ಪಿ.ಎಸ್.ಐ (ಕಾ&ಸು), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 11-04-2021 ರಂದು 23-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 21/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಸೀಮ್ ತಂದೆ ನಾಸೀರ್ ಅಹ್ಮದ್, ಪ್ರಾಯ-20 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಸಿದ್ದಾಪುರ, ತಾ: ಅರಕಲಗೂಡು, ಜಿ: ಹಾಸನ (ಟೊಯೋಟಾ ಇಟಿಯೋಸ್ ಕಾರ್ ನಂ: ಕೆ.ಎ-18/ಜೆಡ್-0297 ನೇದರ ಚಾಲಕ). ಈತನು ದಿನಾಂಕ: 11-04-2021 ರಂದು 11-30 ಗಂಟೆಯ ಸುಮಾರಿಗೆ ತಾನು ಚಾಲನೆ ಮಾಡುತ್ತಿದ್ದ ಟೊಯೋಟಾ ಇಟಿಯೋಸ್ ಕಾರ್ ನಂ: ಕೆ.ಎ-18/ಜೆಡ್-0297 ನೇದನ್ನು ಹಳಿಯಾಳ ಕಡೆಯಿಂದ ದಾಂಡೇಲಿ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯಕಾರಿಯಾಗುವಂತೆ ಚಾಲನೆ ಮಾಡಿಕೊಂಡು ಬರುತ್ತಾ ಆಲೂರು ಪಂಪ್ ಹೌಸ್ ಹತ್ತಿರ ರಾಜ್ಯ ಹೆದ್ದಾರಿಯ ಮೇಲೆ ಕಾರಿನ ವೇಗವನ್ನು ನಿಯಂತ್ರಿಸಲಾಗದೇ ಕಾರನ್ನು ಪಲ್ಟಿ ಪಡಿಸಿ, ಕಾರಿನಲ್ಲಿದ್ದ ತನ್ನ ಸ್ನೇಹಿತರಾದ ಪಿರ್ಯಾದಿ, ಅಮೀರ ಸೊಹೆಲ್ ತಂದೆ ನಾಸೀರ್ ಅಹ್ಮದ್, ಮಹಮ್ಮದ್ ಆಕೀಫ್ ತಂದೆ ಜಾಕೀರ್ ಅಹ್ಮದ್, ಸೈಯದ್ ಅಫನಾನ್ ತಂದೆ ಅತ್ತಾಹರ್, ಸಾ|| (ಎಲ್ಲರೂ) ಸಿದ್ದಾಪುರ, ತಾ: ಅರಕಲಗೂಡು, ಜಿ: ಹಾಸನ ಇವರಿಗೆ ಮೈಮೇಲೆ ಅಲ್ಲಲ್ಲಿ ಸಾದಾ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಮಹಮ್ಮದ ಉಮೇರ್ ತಂದೆ ಮಹಮ್ಮದ್ ಪೀರ್, ಪ್ರಾಯ-20 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಹಿಟ್ಟಿನ ಗಿರಣಿ ಹತ್ತಿರ, ಸಿದ್ದಾಪುರ, ತಾ: ಅರಕಲಗೂಡು, ಜಿ: ಹಾಸನ ರವರು ದಿನಾಂಕ: 11-04-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 35/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಈಶ್ವರ ತಂದೆ ಗೋವಿಂದ ಪೂಜಾರಿ, ಪ್ರಾಯ-52 ವರ್ಷ, ವೃತ್ತಿ-ಹೊಟೇಲ್ ವ್ಯಾಪಾರ, ಸಾ|| ವಿದ್ಯಾನಗರ, ಇಸಳೂರ, ಪೋ: ಇಸಳೂರ, ತಾ: ಶಿರಸಿ. ಈತನು ದಿನಾಂಕ: 11-04-2021 ರಂದು 17-30 ಗಂಟೆಯ ಸುಮಾರಿಗೆ ಶಿರಸಿ ತಾಲೂಕಿನ ಇಸಳೂರ ಗ್ರಾಮದ ವಿದ್ಯಾನಗರದಲ್ಲಿರುವ ತನಗೆ ಸೇರಿದ ಶ್ರೀ ಮೂಕಾಂಬಿಕಾ ಹೊಟೇಲ್ ಎದುರಿನಲ್ಲಿ ಮದ್ಯಪಾನ ಕುಡಿಯಲು ಅವಕಾಶ ಮಾಡಿಕೊಟ್ಟ ಕಾಲಕ್ಕೆ ಪಿರ್ಯಾದಿಯವರು ದಾಳಿ ಮಾಡಿ, ದಾಳಿಯ ಕಾಲಕ್ಕೆ 1). BAGPIPER DELUXE WHISKY ಹೆಸರಿನ 180 ML ಅಳತೆಯ ಸರಾಯಿ ಇದ್ದ ಪ್ಯಾಕೆಟ್ ಗಳು-04, ತಲಾ ಒಂದಕ್ಕೆ ಅ||ಕಿ|| 106.23/- ರೂಪಾಯಿಗಳಂತೆ ಒಟ್ಟೂ ಅ||ಕಿ|| 424.92/- ರೂಪಾಯಿ, 2). BAGPIPER DELUXE WHISKY ಹೆಸರಿನ 180 ML ಅಳತೆಯ ಖಾಲಿ ಇದ್ದ ಪ್ಯಾಕೆಟ್ ಗಳು-04, ಅ||ಕಿ|| 00.00/- ರೂಪಾಯಿ, 3). KINGFISHER STRONG PREMIUM BEER ಹೆಸರಿನ 500 ML ಅಳತೆಯ ಟಿನ್ ಗಳು-3, ತಲಾ ಒಂದಕ್ಕೆ ಅ||ಕಿ|| 120/- ರೂಪಾಯಿಗಳಂತೆ ಒಟ್ಟೂ ಅ||ಕಿ|| 360/- ರೂಪಾಯಿ, 4). KINGFISHER STRONG PREMIUM BEER ಹೆಸರಿನ 500 ML ಅಳತೆಯ ಖಾಲಿ ಟಿನ್ ಗಳು-04, ಅ||ಕಿ|| 00.00/- ರೂಪಾಯಿ, 5). ಮದ್ಯಪಾನ ಕುಡಿಯಲು ಉಪಯೋಗಿಸಿದ Use & Through Plastic Glass-05, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶ್ಯಾಮ್ ವಿ. ಪಾವಸ್ಕರ, ಪಿ.ಎಸ್.ಐ (ಕ್ರೈಂ), ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 11-04-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 80/2021, ಕಲಂ: 323, 324, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಸತೀಶ ತಂದೆ ಹೊಳೆಪ್ಪಾ ಮಾಚಕ, ಪ್ರಾಯ-27 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಮುರ್ಕವಾಡ, ತಾ: ಹಳಿಯಾಳ, 2]. ಶ್ರೀಮತಿ ರುಕ್ಮಾ ಕೋಂ. ಹೊಳೆಪ್ಪಾ ಮಾಚಕ, ಪ್ರಾಯ-40 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಮುರ್ಕವಾಡ, ತಾ: ಹಳಿಯಾಳ, 3]. ಶ್ರೀನಾಥ ತಂದೆ ಹೊಳೆಪ್ಪಾ ಮಾಚಕ, ಪ್ರಾಯ-23 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಮುರ್ಕವಾಡ, ತಾ: ಹಳಿಯಾಳ. ಈ ನಮೂದಿತ ಆರೋಪಿತರು ಪಿರ್ಯಾದಿ ಹಾಗೂ ಪಿರ್ಯಾದಿಯ ಮನೆಯ ಜನರೊಂದಿಗೆ ಮನೆಯ ಸಮಾಯಿಕ ಗೋಡೆ ಹಾಗೂ ಮನೆಯ ಮಳೆ ನೀರಿನ ಸಲುವಾಗಿ ವೈಮನಸ್ಸಿನಿಂದ ಇದ್ದವರು. ದಿನಾಂಕ: 10-04-2021 ರಂದು 08-00 ಗಂಟೆಗೆ ಪಿರ್ಯಾದಿಯು ಕೂಲಿ ಕೆಲಸಕ್ಕೆ ಹೋಗುವ ಸಲುವಾಗಿ ಮನೆಯಿಂದ ಹೊರ ಬಂದಾಗ ಆರೋಪಿ 1 ನೇಯವನು ಪಿರ್ಯಾದಿಗೆ ‘ನಿಮ್ಮ ಮನೆಯ ಮಳೆಯ ನೀರನ್ನು ತಮ್ಮ ಮನೆಯ ಮುಂದಿನ ಗಟಾರಕ್ಕೆ ಬಿಡಬೇಡ. ನಿಮ್ಮೌನ್ ಹಡಸು ಸೂಳೆ ಮಗನಾ, ನಿಮ್ಮ ತಾಯಿನಾ ಹಡಾ’ ಅಂತಾ ಅವಾಚ್ಯವಾಗಿ ಬೈಯ್ಯುತ್ತಾ ಮೈಮೇಲೆ ಏರಿ ಬಂದು ಕಪಾಳಕ್ಕೆ ಕೈಯಿಂದ ಹೊಡೆದು, ನೆಲಕ್ಕೆ ದೂಡಿ ನಂತರ ಅಲ್ಲಿಯೇ ಬಿದ್ದ ಒಂದು ಕೈ ಅಗಲದ ಕಲ್ಲಿನಿಂದ ಬೆನ್ನು, ಕೈ ಹಾಗೂ ಕಾಲಿನ ಮೊಣಗಂಟಿಗೆ ಹೊಡೆದು ಒಳಪೆಟ್ಟು ಪಡಿಸಿದ್ದು, ಪಿರ್ಯಾದಿಯ ಹೆಂಡತಿ ರೇಷ್ಮಾ ಇವರಿಗೆ ಆರೋಪಿ 2 ನೇಯವಳು ಕೈಯಿಂದ ಜಗ್ಗಾಡಿ, ನೆಲಕ್ಕೆ ದೂಡಿ ಹಾಕಿ ಕೈಯಿಂದ ಹೊಡೆ-ಬಡೆ ಮಾಡಿರುತ್ತಾಳೆ. ಹಾಗೂ ಆರೋಪಿ 3 ನೇಯವನು ಪಿರ್ಯಾದಿಗೆ ‘ರಂಡಿ ಮಗಾ, ಸೂಳೆ ಮಗಾ’ ಅಂತಾ ಅವಾಚ್ಯವಾಗಿ ಬೈಯ್ದಿದ್ದಲ್ಲದೇ, ಆರೋಪಿತರು ಅಲ್ಲಿಂದ ಹೋಗುವಾಗ ಪಿರ್ಯಾದಿ ಹಾಗೂ ಆತನ ಹೆಂಡತಿ ರೇಷ್ಮಾ ಇವರಿಗೆ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮೋಹನ ತಂದೆ ಶಿವರಾಯ ಕೊರವೇಕರ, ಪ್ರಾಯ-47 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮುರ್ಕವಾಡ ಗ್ರಾಮ, ತಾ: ಹಳಿಯಾಳ ರವರು ದಿನಾಂಕ: 11-04-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 82/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಲ್ಲಾಭಕ್ಷ ತಂದೆ ಮಹಮದ್‍ಅಲಿ ಇಟ್ಟಂಗಿವಾಲೆ, ಪ್ರಾಯ-30 ವರ್ಷ, ವೃತ್ತಿ-ಮೀನು ವ್ಯಾಪಾರ, ಸಾ|| ಹೊಸುರು ಗಲ್ಲಿ, ಹಳಿಯಾಳ ಶಹರ (ಮೋಟಾರ್ ಸೈಕಲ್ ನಂ: ಜಿ.ಎ-02/ಎನ್-8321 ನೇದರ ಚಾಲಕ). ಈತನು ದಿನಾಂಕ: 11-04-2021 ರಂದು 19-45 ಗಂಟೆಗೆ ಹಳಿಯಾಳ ಶಹರದ ಶಿವಾಜಿ ಸರ್ಕಲ್ ಕಡೆಯಿಂದ ಯಲ್ಲಾಪುರ ನಾಕಾ ಕಡೆಗೆ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಜಿ.ಎ-02/ಎನ್-8321 ನೇದನ್ನು ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕೆನರಾ ಲಾಡ್ಜ್ ಹತ್ತಿರ ಯಾವುದೇ ಸನ್ನೆ, ಇಂಡಿಕೇಟರ್ ಮುನ್ಸೂಚನೆ ನೀಡದೆ ಡಾಂಬರ್ ರಸ್ತೆಯನ್ನು ಕ್ರಾಸ್ ಮಾಡಿ ಯಲ್ಲಾಪುರ ನಾಕಾ ಕಡೆಯಿಂದ ಶಿವಾಜಿ ಸರ್ಕಲ್ ಕಡೆಗೆ ಬರುತ್ತಿದ್ದ ಪಿರ್ಯಾದಿಯವರ ಮೋಟಾರ್ ಸೈಕಲ್ ನಂ: ಕೆ.ಎ-22/ಇ.ಡಬ್ಲ್ಯೂ-4173 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಸಾಧಾರಣ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ವಾಹನಗಳನ್ನು ಜಖಂಗೊಳಿಸಿ ತನಗೂ ಸಹ ಸಾಧಾರಣ ಸ್ವರೂಪದ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ದೇವೇಂದ್ರ ತಂದೆ ರುದ್ರಪ್ಪ ತಳವಾರ, ಪ್ರಾಯ-30 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| ಜುಂಜವಾಡ ಕೆ.ಎನ್, ಪೋ: ಬೇಕವಾಡ, ತಾ: ಖಾನಾಪುರ, ಜಿ: ಬೆಳಗಾವಿ ರವರು ದಿನಾಂಕ: 11-04-2021 ರಂದು 21-40 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 43/2021, ಕಲಂ: 279, 337, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಜುನೈದ್ ತಂದೆ ಇಮ್ದಾದ್‍ಅಲಿ ಶೇಖ್, ಪ್ರಾಯ-30 ವರ್ಷ, ಸಾ|| ಸರಳಗಿ, ಪೋ: ಗೇರುಸೊಪ್ಪ, ತಾ: ಹೊನ್ನಾವರ (ಕಾರ್ ನಂ: ಜಿ.ಎ-07/ಸಿ-8075 ನೇದರ ಚಾಲಕ). ಈತನು ದಿನಾಂಕ: 11-04-2021 ರಂದು ಮಧ್ಯಾಹ್ನ ತನ್ನ ಕಾರ್ ನಂ: ಜಿ.ಎ-07/ಸಿ-8075 ನೇದನ್ನು ಸಿದ್ದಾಪುರ-ಶಿರಸಿ ರಾಜ್ಯ ಹೆದ್ದಾರಿಯಲ್ಲಿ ಸಿದ್ದಾಪುರ ಕಡೆಯಿಂದ ಶಿರಸಿ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದವನು 12-45 ಗಂಟೆಯ ಸುಮಾರಿಗೆ ಸಿದ್ದಾಪುರ-ಶಿರಸಿ ರಸ್ತೆಯಲ್ಲಿ ಬರುವ ಸಿದ್ದಾಪುರ ತಾಲೂಕಿನ ವಿದ್ಯಾಗಿರಿಯ ಹತ್ತಿರ ಕಾರನ್ನು ನಿಯಂತ್ರಿಸಲಾಗದೇ ರಸ್ತೆ ಬದಿಯ ಧರೆಗೆ ಡಿಕ್ಕಿ ಹೊಡೆದು ರಸ್ತೆ ಬದಿಯಲ್ಲಿ ಕಾರನ್ನು ಪಲ್ಟಿಯಾಗಿಸಿ ಅಪಘಾತ ಪಡಿಸಿ, ಕಾರಿನಲ್ಲಿದ್ದ ತನ್ನ ತಂಗಿಯಾದ ಪಿರ್ಯಾದಿಯವಳ ತಲೆಯ ಹಿಂಬದಿಗೆ ಗಾಯನೋವು ಪಡಿಸಿ, ತನ್ನ ತಂದೆಯಾದ ಶ್ರೀ ಇಮ್ದಾದ್‍ಅಲಿ ತಂದೆ ಅಬ್ದುಲ್‍ವಹಾಬ್ ಶೇಖ್, ಪ್ರಾಯ-60 ವರ್ಷ, ಸಾ|| ಸರಳಗಿ, ಪೋ: ಗೇರುಸೊಪ್ಪ, ತಾ: ಹೊನ್ನಾವರ ಇವರ ತಲೆಗೆ, ಕುತ್ತಿಗೆಗೆ ಹಾಗೂ ಕಿವಿಯ ಹತ್ತಿರ ಭಾರೀ ಗಾಯನೋವು ಹಾಗೂ ತನ್ನ ತಾಯಿ ಶ್ರೀಮತಿ ಜುಬೇದಾ ಕೋಂ. ಇಮ್ದಾದ್‍ಅಲಿ ಶೇಖ್ ಇವರ ಬಲಗೈಗೆ, ಬಲಗಾಲಿಗೆ ಹಾಗೂ ಸೊಂಟಕ್ಕೆ ಮತ್ತು ತನ್ನ ಹೆಂಡತಿ ಶ್ರೀಮತಿ ತಂಜಿಮಾ ಕೋಂ. ಜುನೈದ್ ಶೇಖ್ ಇವರ ಮುಖಕ್ಕೆ ಹಾಗೂ ಬಲಗೈಗೆ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಚಾಲಕನು ತನಗೂ ಸಹ ಸಣ್ಣಪುಟ್ಟ ಗಾಯನೋವು ಪಡಿಸಿಕೊಂಡಿದ್ದು, ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಗಾಯಾಳು ಶ್ರೀ ಇಮ್ದಾದ್‍ಅಲಿ ತಂದೆ ಅಬ್ದುಲ್‍ವಹಾಬ್ ಶೇಖ್ ಇವರನ್ನು ಹೆಚ್ಚಿನ ಚಿಕಿತ್ಸೆಗೆಗಾಗಿ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗಮಧ್ಯ ಮಧ್ಯಾಹ್ನ 01-45 ಗಂಟೆಯ ಸುಮಾರಿಗೆ ಮೃತಪಟ್ಟ ಬಗ್ಗೆ ಪಿರ್ಯಾದಿ ಕುಮಾರಿ: ರಫತ್ ತಂದೆ ಇಮ್ದಾದ್‍ಅಲಿ ಶೇಖ್, ಪ್ರಾಯ-28 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಸರಳಗಿ, ಪೋ: ಗೇರುಸೊಪ್ಪ, ತಾ: ಹೊನ್ನಾವರ ರವರು ದಿನಾಂಕ: 11-04-2021 ರಂದು 14-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 44/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಪ್ರದೀಪ ತಂದೆ ಕೃಷ್ಣಮೂರ್ತಿ ಹೆಗಡೆ, ಪ್ರಾಯ-42 ವರ್ಷ, ವೃತ್ತಿ-ಪೂರ್ಣಿಮಾ ಲಾಡ್ಜಿನಲ್ಲಿ ಕೆಲಸ, ಸಾ|| ಹಲಗೇರಿ, ತಾ: ಸಿದ್ದಾಪುರ, 2]. ಸತ್ಯನಾರಾಯಣ ಕೃಷ್ಣ ಆಚಾರ್ಯ, ಪ್ರಾಯ-43 ವರ್ಷ, ವೃತ್ತಿ-ಕಾರ್ಪೆಂಟರ್, ಸಾ|| ಹೊಸೂರು. ಸಂಪಕೇರಿ, ಸಿದ್ದಾಪುರ ಶಹರ, 3]. ಉಮೇಶ ತಂದೆ ಬೊಮ್ಮ ಮಾಡಿವಾಳ, ಪ್ರಾಯ-39 ವರ್ಷ, ವೃತ್ತಿ-ಫಾಸ್ಟಪುಡ್ ಅಂಗಡಿ ವ್ಯಾಪಾರ, ಸಾ|| ಹೊಸೂರು, ಹಕ್ಕಲಕೇರಿ, ಸಿದ್ದಾಪುರ ಶಹರ, 4]. ನವೀನ ತಂದೆ ಮಲ್ಲಿಕಾರ್ಜುನ ಗೌಡರ್, ಪ್ರಾಯ-33 ವರ್ಷ, ವೃತ್ತಿ-ಗೊಬ್ಬರ ಸೇಲ್ಸಮೆನ್, ಸಾ|| ಕೊರಟಗೇರೆ, ಹೊಸ ಬಸ್ ನಿಲ್ದಾಣದ ಹತ್ತಿರ, ತುಮಕೂರ, ಹಾಲಿ ಸಾ|| ಪೂರ್ಣಿಮಾ ಲಾಡ್ಜ್, ಸಿದ್ದಾಪುರ ಶಹರ, 5]. ಜಗದೀಶ ತಂದೆ ಭಾಸ್ಕರ ಮಡಿವಾಳ, ಪ್ರಾಯ-28 ವರ್ಷ, ವೃತ್ತಿ-ಹೊಟೇಲ್ ಕೆಲಸ, ಸಾ|| ಜನತಾ ಕಾಲೋನಿ, ಹೊಸೂರು, ಸಿದ್ದಾಪುರ ಶಹರ. ಈ ನಮೂದಿತ ಆರೋಪಿತರು ದಿನಾಂಕ: 11-04-2021 ರಂದು ಸಂಜೆ 17-30 ಗಂಟೆಗೆ ಸಿದ್ದಾಪುರ ಶಹರದ ಶಂಕರಮಠ ಎದುರಿನ ಚಿಲಿಮೆ ಗುಡ್ಡೆಯ ಬೆಟ್ಟದಲ್ಲಿ ಅಂದರ್-ಬಾಹರ್ ಇಸ್ಪೀಟ್ ಜುಗಾರಾಟ ಆಡುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಸೇರಿ ದಾಳಿ ಮಾಡಿದಾಗ ಆರೋಪಿತರ ಪೈಕಿ ಆರೋಪಿ 1 ರಿಂದ 3 ನೇಯವರು 1). ನಗದು ಹಣ 1,300/- ರೂಪಾಯಿ, 2). 52 ಇಸ್ಪೀಟ್ ಎಲೆಗಳು, 3). ಮಂಡಕ್ಕೆ ಹಾಸಿದ್ದ ಒಂದು ಪ್ಲಾಸ್ಟಿಕ್ ಚೀಲ, ಇವುಗಳೊಂದಿಗೆ ಸೆರೆ ಸಿಕ್ಕಿದ್ದು ಹಾಗೂ ಆರೋಪಿ 4 ಮತ್ತು 5 ನೇಯವರು ದಾಳಿಯ ಕಾಲಕ್ಕೆ ಓಡಿ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜೇಶ್ವರ ವಿ. ಚಂದಾವರ, ಪಿ.ಎಸ್.ಐ (ಕ್ರೈಂ), ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 11-04-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 38/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ರಾಜು ತಂದೆ ಭರ್ಮಪ್ಪ ಚಲುವಾದಿ, ಪ್ರಾಯ-48 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬೆಂಗಳೆ, ತಾ: ಶಿರಸಿ. ಈತನು ದಿನಾಂಕ: 11-04-2021 ರಂದು 11-35 ಗಂಟೆಗೆ ಬೆಂಗಳೆ ಗ್ರಾಮದಲ್ಲಿರುವ ತನ್ನ ಅಂಗಡಿಯ ಪಕ್ಕದ ಸಾರ್ವಜನಿಕ ಸ್ಥಳದ ತಾತ್ಕಾಲಿಕ ಶೆಡ್ಡಿನಲ್ಲಿ ಸಾರ್ವಜನಿಕರಿಗೆ ಮದ್ಯ ಸೇವಿಸಲು ಅನುವು ಮಾಡಿಕೊಡುತ್ತಿರುವಾಗ ಅಬಕಾರಿ ಸ್ವತ್ತುಗಳಾದ 1). Haywards Cheers Whisky-90 ML ಟೆಟ್ರಾ ಪ್ಯಾಕೆಟ್ ಗಳು-09, ಅ||ಕಿ|| 316.17/- ರೂಪಾಯಿ, 2). Haywards Cheers Whisky-90 ML ಅಂತಾ ಲೇಬಲ್ ಮದ್ಯದ ಖಾಲಿ ಟೆಟ್ರಾ ಪ್ಯಾಕ್-02, ಅ||ಕಿ|| 00.00/- ರೂಪಾಯಿ, 3). ನಗದು ಹಣ 210/- ರೂಪಾಯಿ. ಇವುಗಳನ್ನು ಪಿರ್ಯಾದಿಯವರು  ದಾಳಿ ಮಾಡಿ ಹಿಡಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಹಣಮಂತ ಬಿರಾದಾರ, ಪಿ.ಎಸ್.ಐ (ಕಾ&ಸು), ಬನವಾಸಿ ಪೊಲೀಸ್ ಠಾಣೆ ರವರು ದಿನಾಂಕ: 11-04-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 35/2021, ಕಲಂ: 323, 341, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಕಾರ್ ನಂ: ಕೆ.ಎ-36/ಪಿ-1044 ನೇದರಲ್ಲಿ ಬಂದ ಯಾರೋ ಮೂರು ಜನ ಅಪರಿಚಿರತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದಿಯವರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಮುರಳಿ ನಾಯರ್ ಎಂಬುವವರ ಲಾರಿ ನಂ: ಎಮ್.ಎಚ್-09/ಸಿ.ಯು-3392 ನೇದರ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 10-04-2021 ರಂದು ಬೆಳಿಗ್ಗೆ ಸದರಿ ಲಾರಿಯಲ್ಲಿ ಕಲ್ಲುಕಡಿಯನ್ನು ಲೋಡ್ ಮಾಡಿಕೊಂಡು ಅದನ್ನು ಕದ್ರಾ ಡ್ಯಾಂ ಏರಿಯಾದಲ್ಲಿ ಅನಲೋಡ್ ಮಾಡಿ ಸಾಯಂಕಾಲದ ಸುಮಾರಿಗೆ ಅಲ್ಲಿಂದ ಹೊರಟು ಬಂದು, ದಿನಾಂಕ: 10-04-2021 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ರಾಮನಗರದ ಭಾರತ್ ಪೆಟ್ರೋಲ್ ಬಂಕಿನಲ್ಲಿ ಡಿಸೈಲ್ ಹಾಕಿಸಿಕೊಂಡು ರಾಮನಗರದ ಬದಿಗೆ ಹೋಗುತ್ತಿರುವಾಗ ಪಿರ್ಯಾದಿಯವರು ಚಲಾಯಿಸಿಕೊಂಡು ಹೋಗುತ್ತಿದ್ದ ಲಾರಿ ನಂ: ಎಮ್.ಎಚ್-09/ಸಿ.ಯು-3392 ನೇದರ ಎದುರುಗಡೆಯಿಂದ ಕಾರ್ ಒಂದು ಹೈ ಭೀಮ್ ಲೈಟ್ ಹಚ್ಚಿಕೊಂಡು ಬರುತ್ತಿರುವಾಗ, ಪಿರ್ಯಾದಿಯವರಿಗೆ ತಮ್ಮ ವಾಹನವನ್ನು ಚಲಾಯಿಸಕೊಂಡು ಹೋಗಲು ರಸ್ತೆ ಸರಿಯಾಗಿ ಕಾಣಿಸದೇ ಇರುವಾಗ ಎದುರುಗಡೆಯ ಕಾರಿನವರಿಗೆ ಪಿರ್ಯಾದಿಯವರು ನಿಲ್ಲಿಸಿ ಮಾತಾಡುತ್ತಿರುವಾಗ, ಪಿರ್ಯಾದಿಯವರ ಹಿಂದಿನಿಂದ ಚಲಾಯಿಸಿಕೊಂಡು ಬಂದ ಕಾರ್ ನಂ: ಕೆ.ಎ-36/ಪಿ-1044 ನೇದರಲ್ಲಿದ್ದ ಯಾರೋ ಮೂರು ಜನ ಆರೋಪಿತರು ಪಿರ್ಯಾದಿಯವರ ಲಾರಿಗೆ ತಮ್ಮ ಕಾರಿನಿಂದ ಅಡ್ಡ ಹಾಕಿ ತಡೆದು, ಪಿರ್ಯಾದಿಯವರಿಗೆ ತಿಳಿಯದ ಯಾವುದೋ ಭಾಷೆಯಲ್ಲಿ ಏನೇನೋ ಅನ್ನುತ್ತಾ ಬಂದು, ಯಾರೋ ಮೂರು ಜನ ಆರೋಪಿತರು ಪಿರ್ಯಾದಿಯವರ ಲಾರಿ ಹತ್ತಿ ಒಳಗೆ ಬಂದು, ಪಿರ್ಯಾದಿಯವರಿಗೆ ಕೈಯಿಂದ ಮುಖ ಹಾಗೂ ತಲೆಯ ಭಾಗದಲ್ಲಿ ಹಿಗ್ಗಾಮುಗ್ಗಾ ಹೊಡೆದು, ಕೊಲೆ ಮಾಡುವುದಾಗಿ ಕೈ ಸನ್ನೆ ಮಾಡುತ್ತಾ ಆರೋಪಿತರು ತಾವು ಬಂದಿದ್ದ ಕಾರ್ ನಂ: ಕೆ.ಎ-36/ಪಿ-1044 ನೇದರಲ್ಲಿ ಹತ್ತಿಕೊಂಡು ಹೋಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಹೀನ್ ಕೆ. ಎಂ. ತಂದೆ ಕೆ. ಎಚ್. ಮೊಹಿದ್ದೀನ್ ಕುಂಜು, ಪ್ರಾಯ-40 ವರ್ಷ, ವೃತ್ತಿ-ಚಾಲಕ, ಸಾ|| ಕುಟ್ಟಿಕಾಟ್ಟು ಹೌಸ್, ಕುಂಬಲಮ್, ತಾ: ಕನ್ನಯನೂರು, ಜಿ: ಎರ್ನಾಕುಲಂ, ಹಾಲಿ ಸಾ|| ಗೋಕುಲಂ ಸಿಮೆಂಟ್ ಕಂಪನಿ, ಯಲ್ಲಾಪುರ ರವರು ದಿನಾಂಕ: 11-04-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 11-04-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 09/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಅಕ್ವಿಲ್  ತಂದೆ ಜಾರ್ಜ್ ಬೆಂಜಮಿನ್, ಪ್ರಾಯ-40 ವರ್ಷ, ಸಾ|| ಪ್ರಭಾತ ನಗರ, ತಾ: ಹೊನ್ನಾವರ, ಹಾಲಿ ಸಾ|| ಹೌಸ್ ನಂ: 30, ರೈಲ್ ನಗರ, ರಾಜೀವ ನಗರ, 2 ನೇ ಸ್ಟೇಜ್, ವಿಧ್ಯಾನಗರ, ಹುಬ್ಬಳ್ಳಿ. ಪಿರ್ಯಾದಿಯ ಗಂಡನಾದ ಈತನು ವಿಪರೀತ ಸರಾಯಿಯನ್ನು ಕುಡಿಯುವ ಚಟವನ್ನು ಕಲಿತಿದ್ದು, ಈತನು ದಿನಾಂಕ: 08-04-2021 ರಂದು 11-00 ಗಂಟೆಯ ಸುಮಾರಿಗೆ ಪಾರ್ಶ್ವವಾಯು ಆದ ತನ್ನ ತಂದೆಯವರನ್ನು ನೋಡಿಕೊಂಡು ಬರಲು ಹುಬ್ಬಳ್ಳಿಯ ತನ್ನ ಮನೆಗೆ ಹೋಗುತ್ತೇನೆ ಅಂತಾ ಹೇಳಿ ಹೋದವನು, ಈತನು  ಕುಮಟಾದ ಹೊಸ ಬಸ್ ಸ್ಟ್ಯಾಂಡ್ ಎದುರಿಗೆ ಇರುವ ರಾವ್ ಕಂಫರ್ಟ್ ಲಾಡ್ಜಿನಲ್ಲಿ ರೂಮ್ ಮಾಡಿಕೊಂಡು ಉಳಿದವನು, ಹೃದಯಾಘಾತದಿಂದಲೋ ಅಥವಾ ಇನ್ನಾವುದೋ ಕಾರಣದಿಂದಲೋ ದಿನಾಂಕ: 09-04-2021 ರಂದು 17-00 ಗಂಟೆಯಿಂದ ದಿನಾಂಕ: 11-04-2021 ರಂದು ಬೆಳಿಗ್ಗೆ 08-00 ಗಂಟೆಯ ನಡುವಿನ ಅವಧಿಯಲ್ಲಿ ಮೃತಪಟ್ಟಿದ್ದು ಇರುತ್ತದೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪಿರ್ಯಾದಿ ಶ್ರೀಮತಿ ನಯನಾ ಕೋಂ. ಅಕ್ವಿಲ್ ಬೆಂಜಮಿನ್, ಪ್ರಾಯ-38 ವರ್ಷ, ವೃತ್ತಿ-ಶಿಕ್ಷಕಿ, ಸಾ|| ಪ್ರಭಾತ ನಗರ, ತಾ: ಹೊನ್ನಾವರ, ಹಾಲಿ ಸಾ|| ಹೌಸ್ ನಂ: 30, ರೈಲ್ ನಗರ, ರಾಜೀವ ನಗರ, 2 ನೇ ಸ್ಟೇಜ್, ವಿಧ್ಯಾನಗರ, ಹುಬ್ಬಳ್ಳಿ ರವರು ದಿನಾಂಕ: 11-04-2021 ರಂದು 12-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 08/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಲಕ್ಷ್ಮೀ (ಹೊಳೆಮ್ಮಾ) ಕೋಂ. ನಿಂಗಪ್ಪ ಕಬ್ಬೇರ, ಪ್ರಾಯ-29 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಹುಲಿಹೊಂಡಾ, ತಾ: ಮುಂಡಗೋಡ. ಸುದ್ದಿದಾರರ ಮಗಳಾದ ಇವಳು ತನಗಿದ್ದ ಹೊಟ್ಟೆನೋವಿನ ಖಾಯಿಲೆಯಿಂದ ಬಳಲುತ್ತಿದ್ದವಳು, ಎಷ್ಟೇ ಚಿಕಿತ್ಸೆಯನ್ನು ಕೊಡಿಸಿದರೂ ಸಹ ತನಗಿದ್ದ ಖಾಯಿಲೆ ಕಡಿಮೆ ಆಗಲಿಲ್ಲ ಅಂತಾ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 10-04-2021 ರಂದು ರಾತ್ರಿ 12-00 ಗಂಟೆಯಿಂದ ದಿನಾಂಕ: 11-04-2021 ರಂದು ಬೆಳಿಗ್ಗೆ 05-00 ಗಂಟೆಯ ಅವಧಿಯಲ್ಲಿ ತನ್ನ ಮನೆಯ ಮೊದಲನೆಯ ಕೋಣೆಯಲ್ಲಿಯ ಜಂತಿಗೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ಇದರ ಹೊರತು ಅವಳ ಮರಣದಲ್ಲಿ ನನಗೆ ಬೇರೇ ಯಾವುದೇ ಸಂಶಯ ಇರುವುದಿಲ್ಲ. ನನ್ನ ಮಗಳ ಮೃತದೇಹವು ಹುಲಿಹೊಂಡದ ಅವಳ ಗಂಡನ ಮನೆಯಲ್ಲಿಯೇ ಇದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಬಸಪ್ಪ ತಂದೆ ಪರಪ್ಪ ಹುಂಚಣ್ಣನವರ, ಪ್ರಾಯ-62 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಸಾಪುರ, ತಾ: ಮುಂಡಗೋಡ ರವರು ದಿನಾಂಕ: 11-04-2021 ರಂದು 08-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 12-04-2021 06:40 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080