ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 11-04-2022

at 00:00 hrs to 24:00 hrs

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 43/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮೊಹಮ್ಮದ್ ಮೀರಾನ್ ರುಕ್ನುದ್ದೀನ್ ತಂದೆ ಮೊಹಮ್ಮದ್ ಹುಸೈನ್ ರುಕ್ನುದ್ದೀನ್, ಸಾ|| ಶಾದ್ಲಿ ಸ್ಟ್ರೀಟ್, ತಾ: ಭಟ್ಕಳ (ಆಟೋ ರಿಕ್ಷಾ ನಂ: ಕೆ.ಎ-47/4098 ನೇದರ ಚಾಲಕ). ಈತನು ದಿನಾಂಕ: 11-04-2022 ರಂದು ಬೆಳಗ್ಗೆ 08-45 ಗಂಟೆಯ ಸುಮಾರಿಗೆ ಭಟ್ಕಳ ಶಹರದ ಆಜಾದ್ ನಗರದ 6 ನೇ ಕ್ರಾಸ್ ಜಾಲಿ ರಸ್ತೆಯ ಹತ್ತಿರ ತನ್ನ ಬಾಬ್ತು ಆಟೋ ರಿಕ್ಷಾ ನಂ: ಕೆ.ಎ-47/4098 ನೇದನ್ನು ಬಲಕ್ಕೆ ತಿರುಗಿಸುವ ಇಂಡಿಕೇಟರ್ ಸೂಚನೆ ಅಥವಾ ಕೈ ಸನ್ನೆ ಸೂಚನೆ ನೀಡದೆ ನಿರ್ಲಕ್ಷ್ಯತನದಿಂದ ಒಮ್ಮೇಲೆ ಬಲಕ್ಕೆ ತಿರುಗಿಸಿದ್ದರಿಂದ ಭಟ್ಕಳದ ಜಾಲಿ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಕಡೆಗೆ ಬರುತ್ತಿದ್ದ ಪಿರ್ಯಾದಿಯವರ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-1866 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯವರ ಎಡಗಾಲು, ಎಡಗೈ, ಹಣೆಯ ಎಡಬದಿ ಹಾಗೂ ಬೆನ್ನಿಗೆ ಗಾಯನೋವು ಪಡಿಸಿದ್ದಲ್ಲದೇ, ಮೋಟಾರ್ ಸೈಕಲ್ ಹಿಂಬದಿ ಸವಾರಳಾದ ಅವಾನಾ ಖಾಜಿಯಾ, ಇವಳ ತಲೆಯ ಹಿಂಬದಿಗೆ, ಬೆನ್ನಿಗೆ ಹಾಗೂ ಬಲಗಾಲಿಗೆ ಸಾದಾ ಸ್ವರೂಪದ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಉಬಾದಾ ಬರ್ಮಾವರ್ ತಂದೆ ಮೊಹಮ್ಮದ್ ಜಕ್ರಿಯಾ ಬರ್ಮಾವರ್, ಪ್ರಾಯ-20 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಅಲಿ ಪಬ್ಲಿಕ್ ಶಾಲೆಯ ಹತ್ತಿರ, ಪಿರ್ಧೋಸ್ ನಗರ, ಹೆಬಳೆ, ತಾ: ಭಟ್ಕಳ ರವರು ದಿನಾಂಕ: 11-04-2022 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 11-04-2022

at 00:00 hrs to 24:00 hrs

 

ಮುರ್ಡೇಶ್ವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 16/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ರಾಧಾಕೃಷ್ಣನ್ ಎ. ಯು. ತಂದೆ ಉನ್ನಿಕೃಷ್ಣನ್, ಪ್ರಾಯ-58 ವರ್ಷ, ಸಾ|| ಅಲಥಾ ಹೌಸ್, ತಿರುವಲ್ಲ, ಕವಿಯೂರ, ಪಾಥನಮ್ ತಿಟ್ಟಾ, ಕೇರಳಾ. ಪಿರ್ಯಾದಿಯು ಮ್ಯಾನೇಜರ್ ಅಂತಾ ಕೆಲಸ ಮಾಡಿಕೊಂಡಿರುವ ಮುರ್ಡೇಶ್ವರದ ಭಟ್ರಹಿತ್ಲದಲ್ಲಿರುವ ‘ಆರ್ಯನ್’ ಗೆಸ್ಟ್ ಹೌಸಿನಲ್ಲಿ ದಿನಾಂಕ: 01-04-2022 ರಂದು ನಮೂದಿತ ಮೃತನು ‘ಆರ್ಯನ್’ ಗೆಸ್ಟ್ ಹೌಸಿನ ರೂಮ್ ನಂ: 202 ರಲ್ಲಿ ಬಾಡಿಗೆ ಆಧಾರದಲ್ಲಿ ರೂಮ್ ಮಾಡಿಕೊಂಡು ಉಳಿದುಕೊಂಡಿದ್ದವನು, ಪ್ರತಿದಿನ ಬೆಳಿಗ್ಗೆ ಹಾಗೂ ಸಾಯಂಕಾಲ ಹೊರಗೆ ಹೋಗಿ ತಿರುಗಾಡಿ ರೂಮಿಗೆ ಬಂದು ಉಳಿದುಕೊಳ್ಳುತ್ತಿದ್ದನು. ಸದ್ರಿಯವನು ಎಂದಿನಂತೆ ದಿನಾಂಕ: 10-04-2022 ರಂದು ಹೊರಗೆ ಹೋಗಿ ಮರಳಿ ಸಾಯಂಕಾಲ 07-30 ಗಂಟೆಯ ಸುಮಾರಿಗೆ ರೂಮಿನಲ್ಲಿ ಬಂದು ಉಳಿದುಕೊಂಡಿದ್ದವನು, ದಿನಾಂಕ: 11-04-2022 ರಂದು ‘ಚೆಕ್ ಔಟ್ ಮಾಡುತ್ತೇನೆ’ ಅಂತಾ ತಿಳಿಸಿದ್ದರಿಂದ, ದಿನಾಂಕ: 11-04-2022 ರಂದು ಮಧ್ಯಾಹ್ನ 12-15 ಗಂಟೆಯವರೆಗೆ ರೂಮ್ ಚೆಕ್ ಔಟ್ ಮಾಡದೇ ಇರುವುದರಿಂದ ಪಿರ್ಯಾದಿಯು ರೂಮ್ ಹತ್ತಿರ ಹೋಗಿ ಬಾಗಿಲು ಬಡಿದು ಕೂಗಿದರೂ ಸಹ ಬಾಗಿಲು ತೆಗೆಯದಿದ್ದಾಗ, ರೂಮಿನ ಇನ್ನೊಂದು ಕೀ ಮೂಲಕ ಬಾಗಿಲು ತೆರೆದು ನೋಡಿದಾಗ ನಮೂದಿತ ಮೃತನು ರೂಮಿನ ಬಾತರೂಮಿನಲ್ಲಿ ಓರೆಯಾಗಿ ಬಿದ್ದುಕೊಂಡು ಮೃತಪಟ್ಟಿದ್ದು, ಮೈಕೈಗಳಿಗೆ ರಕ್ತ ತಾಗಿ, ತಲೆಗೆ ಗಾಯವಾಗಿರುತ್ತದೆ. ಸದ್ರಿಯವನು ಯಾವುದೋ ಕಾಯಿಲೆಯಿಂದ ಬಳಲುತ್ತಿದ್ದವನು ಅಥವಾ ಬಾತರೂಮಿಗೆ ಹೋದ ವೇಳೆ ಹೃದಯಘಾತದಿಂದಲೋ ಅಥವಾ ಬೇರೆ ಯಾವುದೋ ರೀತಿಯಲ್ಲಿ ಬಾತರೂಮಿನಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾಗೇಶ ತಂದೆ ರಾಮ ನಾಯ್ಕ, ಪ್ರಾಯ-43 ವರ್ಷ, ವೃತ್ತಿ-ಲಾಡ್ಜ್ ಮ್ಯಾನೇಜರ್ ಕೆಲಸ, ಸಾ|| ಹಿರೇದೊಮ್ಮಿ, ಕೊಟಗಿಮನೆ, ಮಾವಳ್ಳಿ-1, ಮುರ್ಡೇಶ್ವರ, ತಾ: ಭಟ್ಕಳ ರವರು ದಿನಾಂಕ: 11-04-2022 ರಂದು 14-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 25-04-2022 11:11 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080