ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 11-08-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 123/2021, ಕಲಂ: 279, 337 ಐಪಿಸಿ  ನೇದ್ದರ ವಿವರ...... ನಮೂದಿತ ಆರೋಪಿತ ಇಕ್ಬಾಲ್ ಮಿಯಾ ತಂದೆ ಮೊಹರಂ ಮಿಯಾ, ಪ್ರಾಯ-44 ವರ್ಷ, ಸಾ|| ಮಂಗಳೂರು ರಾಹಾ, ಪ್ಲೋರ್ ಮಿಲ್, ಕುಲಶೇಖರ, ಮಂಗಳೂರು (ಲಾರಿ ನಂ: ಕೆ.ಎ-19/ಎ.ಎ-7090 ನೇದರ ಚಾಲಕ). ಈತನು ದಿನಾಂಕ: 10-08-2021 ರಂದು ಬೆಳಿಗ್ಗೆ 09-00 ಗಂಟೆಗೆ ತನ್ನ ಲಾರಿ ನಂ: ಕೆ.ಎ-19/ಎ.ಎ-7090 ನೇದನ್ನು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ತನ್ನ ಮುಂದೆ ಬರುತ್ತಿದ್ದ ಒಂದು ಲಾರಿಗೆ ಮೊತ್ತೊಂದು ಲಾರಿ ಓವರಟೇಕ್ ಮಾಡಿಕೊಂಡು ಬರುತ್ತಿರುವುದನ್ನು ಕಂಡು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ, ಅಂಕೋಲಾ ತಾಲೂಕಿನ ವಜ್ರಳ್ಳಿ ಗ್ರಾಮದಲ್ಲಿ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ಡಾಂಬರ್ ರಸ್ತೆಯ ಕಚ್ಚಾ ರಸ್ತೆಯಲ್ಲಿರುವ ಮರಕ್ಕೆ ಡಿಕ್ಕಿ ಹೋಡೆದು ಅಪಘಾತ ಪಡಿಸಿ, ತನಗೆ ಸಣ್ಣಪುಟ್ಟ ಗಾಯನೋವು ಮಾಡಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಕ್ಷಿತಕುಮಾರ ತಂದೆ ನೊನಯ್ಯಾ ಸಪಲ್ಯಾ, ಪ್ರಾಯ-23 ವರ್ಷ, ವೃತ್ತಿ-ಲಾರಿ ಕ್ಲೀನರ್, ಸಾ|| ಮನೆ ನಂ: 69/1, ಕಲ್ಲಾಗುಡ್ಡೆ, ಮಲವೂರು, ಪೋ: ಕೆಂಜರು, ಮಂಗಳೂರು, ದಕ್ಷಿಣ ಕನ್ನಡ ರವರು ದಿನಾಂಕ: 11-08-2021 ರಂದು 19-25 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 124/2021, ಕಲಂ: 279 ಐಪಿಸಿ  ನೇದ್ದರ ವಿವರ...... ನಮೂದಿತ ಆರೋಪಿತ ವಿಭೂತಿ ನಾರಾಯಣ ತಂದೆ ರಾಮಚಂದ್ರ ಸಿಂಗ್, ಪ್ರಾಯ-49 ವರ್ಷ, ಸಾ|| ಸರಿಪುರ ಸಾದರ, ಮಿರ್ಜಾಪುರ, ಉತ್ತರ ಪ್ರದೇಶ (ಟ್ರಾಲಿ ಲಾರಿ ನಂ: ಕೆ.ಎ-01/ಎ.ಎಮ್-1615 ನೇದರ ಚಾಲಕ). ಈತನು ದಿನಾಂಕ: 10-08-2021 ರಂದು 20-15 ಗಂಟೆಗೆ ಅಂಕೋಲಾ ತಾಲೂಕಿನ ಸುಂಕಸಾಳದ ಹತ್ತಿರ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ರಸ್ತೆಯಲ್ಲಿ ತನ್ನ ಟ್ರಾಲಿ ಲಾರಿ ನಂ: ಕೆ.ಎ-01/ಎ.ಎಮ್-1615 ನೇದನ್ನು ಅಂಕೋಲಾ ಕಡೆಯಿಂದ ಯಲ್ಲಾಪುರದ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದವನು, ರಸ್ತೆಯ ತಿರುವಿನಲ್ಲಿ ಎದುರಿನಿಂದ ಬರುತ್ತಿದ್ದ ಯಾವುದೋ ವಾಹನವು ರಸ್ತೆಯ ಬಲಕ್ಕೆ ಬರುತ್ತಿರುವುದನ್ನು ನೋಡಿ ಟ್ರಾಲಿ ಲಾರಿಯನ್ನು ರಸ್ತೆಯ ಎಡಕ್ಕೆ ತೆಗೆದುಕೊಂಡಾಗ ಟ್ರಾಲಿ ಲಾರಿಯನ್ನು ನಿಯಂತ್ರಿಸಲಾಗದೇ ರಸ್ತೆಯ ಎಡಬದಿಯಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಟ್ರಾಲಿ ಲಾರಿಯನ್ನು ಡ್ಯಾಮೇಜ್ ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಇಸಾಕ್ ತಂದೆ ಕಾಸಿಮ್ ಸಾಬ್, ಪ್ರಾಯ-40 ವರ್ಷ, ವೃತ್ತಿ-ಕ್ಲೀನರ್, ಸಾ|| ಎಸ್.ಬಿ.ಆರ್ ಹೈಸ್ಕೂಲ್ ಹತ್ತಿರ, ತೋರಣಗಲ್ಲು, ತಾ: ಸಂಡೂರು, ಜಿ: ಬಳ್ಳಾರಿ ರವರು ದಿನಾಂಕ: 11-08-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 109/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963  ನೇದ್ದರ ವಿವರ...... ನಮೂದಿತ ಆರೋಪಿತ ಉಮೇಶ ತಂದೆ ಗಣಪತಿ ನಾಯ್ಕ, ಪ್ರಾಯ-50 ವರ್ಷ, ಸಾ|| ಹಲಸಿನಡಿಕೇರಿ, ಬಳಕೂರ, ತಾ: ಹೊನ್ನಾವರ. ಈತನು ದಿನಾಂಕ: 10-08-2021 ರಂದು 13-30 ಗಂಟೆಗೆ ನೀಲಗೋಡ ಕ್ರಾಸ್ ಹತ್ತಿರವಿರುವ ಗೂಡಂಗಡಿ ಹಿಂದುಗಡೆಯ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಬರ-ಹೋಗುವ ಜನರಿಗೆ ಕೂಗಿ ಕರೆದು ನಿಮಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ, ಅವರಿಂದ ಓ.ಸಿ ಮಟಕಾ ಜೂಗಾರಾಟದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿಸಿ, ಅವರಿಗೆ ಓ.ಸಿ ಮಟಕಾ ಅಂಕೆ-ಸಂಖ್ಯೆಯ ಚೀಟಿಯನ್ನು ಬರೆದು ಕೊಡುತ್ತಾ ಜನರಿಂದ ಹಣ ಪಡೆದುಕೊಂಡು ಓ.ಸಿ ಮಟಕಾ ಜುಗಾರಾಟ ಆಡಿಸುತ್ತಿದ್ದಾಗ ದಾಳಿಯ ಸಮಯಕ್ಕೆ ಆರೋಪಿತನ ತಾಬಾದಲ್ಲಿ ಸಿಕ್ಕ ಒಟ್ಟೂ ನಗದು ಹಣ 1,130/- ರೂಪಾಯಿ, ಓ.ಸಿ ಮಟಕಾ ಸಂಖ್ಯೆಗಳನ್ನು ಬರೆದ ಚೀಟಿ-1, ಕಪ್ಪು ಬಾಲ್ ಪೆನ್-1 ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸುಭಾಷ ಮಾಳಾಬಗಿ, ಪಿ.ಎಸ್.ಐ (ಕಾ&ಸು), ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 11-08-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 110/2021, ಕಲಂ: ಗಂಡಸು ಕಾಣೆ  ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಬಸವನಗೌಡ ತಂದೆ ದ್ಯಾಮನಗೌಡ ಪಾಟೀಲ, ಪ್ರಾಯ-35 ವರ್ಷ, ವೃತ್ತಿ-ಕಾರ ಚಾಲಕ, ಸಾ|| ಸುನ್ನಾಳ, ತಾ: ರಾಮದುರ್ಗ, ಜಿ: ಬೆಳಗಾವಿ. ಈತನು ಕಳೆದ 20 ದಿನಗಳ ಹಿಂದೆ ಊರಿನಿಂದ ಕೆಲಸಕ್ಕೆ ಅಂತಾ ಉಡುಪಿಯಲ್ಲಿರುವ ತನ್ನ ತಮ್ಮನಾದ ಪಿರ್ಯಾದಿಯವರೊಂದಿಗೆ ಹೋಗಿ ಉಳಿದುಕೊಂಡು ಕಾರ್ ಚಾಲಕ ಕೆಲಸ ಮಾಡಿಕೊಂಡಿದ್ದವನು, ನಂತರದಲ್ಲಿ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದವನು, ದಿನಾಂಕ: 09-08-2021 ರಂದು 06-30 ಗಂಟೆಗೆ ಉಡುಪಿ-ಬಾಗಲಕೋಟ ಕೆಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಉಡುಪಿಯಿಂದ ಹತ್ತಿ ತನ್ನ ಊರಾದ ರಾಮದುರ್ಗಕ್ಕೆ ಹೋಗಲು ಹೊರಟವನು, ಮಂಕಿಯ ಮಾವಿನಕಟ್ಟಾದಲ್ಲಿ ಬೆಳಿಗ್ಗೆ 09-15 ಗಂಟೆಯ ಸುಮಾರಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಪ್ರಯಾಣಿಕರನ್ನು ಇಳಿಸಲು ನಿಂತಾಗ ಬಸ್ಸಿನಿಂದ ಇಳಿದವನು, ಮರಳಿ ಬಸ್ ಹತ್ತದೇ, ಮನೆಗೂ ಹೋಗದೆ, ಸಂಬಂಧಿಕರ ಮನೆಗೂ ಹೋಗದೇ ಎಲ್ಲಿಗೋ ಹೋಗಿ ಕಾಣೆಯಾದವನಿಗೆ ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಪ್ರಕಾಶ ತಂದೆ ದ್ಯಾಮನಗೌಡ ಪಾಟೀಲ, ಪ್ರಾಯ-31 ವರ್ಷ, ವೃತ್ತಿ-ಕಾರ್ ಚಾಲಕ, ಸಾ|| ಸುನ್ನಾಳ, ತಾ: ರಾಮದುರ್ಗ, ಜಿ: ಬೆಳಗಾವಿ ರವರು ದಿನಾಂಕ: 11-08-2021 ರಂದು 22-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 80/2021, ಕಲಂ: 324, 326, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವೆಂಕಟೇಶ ಮುಕ್ರಿ, ಅಂದಾಜು ಪ್ರಾಯ-48 ವರ್ಷ, ಸಾ|| ಕಸದಗುಡ್ಡೆ, ತಾ: ಶಿರಸಿ. ದಿನಾಂಕ: 09-08-2021 ರಂದು ರಾತ್ರಿ ಮಂಜುನಾಥ ದೇವಾಡಿಗ ಇವರು ರೋಟರಿ ಆಟೋ ಬಸ್ ಸ್ಟ್ಯಾಂಡಿನಿಂದ ತನ್ನ ಪ್ಯಾಸೆಂಜರ್ ಆಟೋ ರಿಕ್ಷಾದಲ್ಲಿ ನಮೂದಿತ ಆರೋಪಿತನನ್ನು ಕೂಡ್ರಿಸಿಕೊಂಡು ಆರೋಪಿತನ ಮನೆಯಾದ ಶಿರಸಿ ತಾಲೂಕಿನ ಕಸದಗುಡ್ಡೆಗೆ ಬಾಡಿಗೆ ಮೂಲಕ ಬಿಡಲು ಹೋದಾಗ, ಮಂಜುನಾಥ ಈತನು ತಾನು ಚಲಾಯಿಸುತ್ತಿದ್ದ ತನ್ನ ಆಟೋ ರಿಕ್ಷಾ ಸುಮಾರು 23-30 ಗಂಟೆಗೆ ಲಾಲಗೌಡ ನಗರ ರಸ್ತೆಯ ಖೂರ್ಸೆ ಕಂಪೌಂಡ್ ಕ್ರಾಸ್ ಹತ್ತಿರ ಪೆಟ್ರೋಲ್ ಖಾಲಿ ಆಗಿ ಒಮ್ಮಿಂದೊಮ್ಮೇಲೆ ಬಂದಾಗಿ ನಿಂತಿದಕ್ಕೆ, ಮಂಜುನಾಥ ಇವನು ಆರೋಪಿತನಿಗೆ ‘ನಿಮ್ಮ ಮನೆ ಹತ್ತಿರಾನೇ ಬಿಟ್ಟಿದ್ದು, ನೀವು ನಡೆದುಕೊಂಡು ಹೋಗಿ’ ಎಂದು ತಿಳಿಸಿದಂತೆ, ಆರೋಪಿತನು ಒಮ್ಮೇಲೆ ಸಿಟ್ಟಾದವನು ತಾನು ಕುಳಿತ ರಿಕ್ಷಾದಿಂದ ಕೆಳಗಿಳಿದು ಮಂಜುನಾಥನಿಗೆ ಏಕಾಏಕಿಯಾಗಿ ‘ಬೋಳಿ ಮಗನೇ, ನೀನೊಬ್ಬ ಆಟೋ ಚಾಲಕ ಏನು? ಪೆಟ್ರೋಲ್ ಇದೆಯೋ ಇಲ್ವೋ ನೋಡಿಕೊಂಡು ಬರಲು ಗೊತ್ತಾಗಲ್ಲ’ ಎಂದು ಬೈಯ್ಯುತ್ತಾ, ವಿಪರೀತ ಕೋಪಗೊಂಡು ರಸ್ತೆಯ ಬದಿಗೆ ಬಿದ್ದುಕೊಂಡಿದ್ದ ಒಂದು ಗೂಟವನ್ನು ತಂದು ಆಟೋ ಚಾಲಕ ಮಂಜುನಾಥ ಇವನ ಬಲಗೈ ತೋಳಿಗೆ ಮತ್ತು ಪಕ್ಕೆಲುಬು ಹತ್ತಿರ ಹೊಡೆದು ಗಂಭೀರ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ಮಂಜುನಾಥ ಈತನಿಗೆ ಮತ್ತೇ ಉದ್ದೇಶಿಸಿ ‘ಸೂಳೇ ಮಗನೇ, ಇನ್ನೊಂದು ಸಲ ಬಾಡಿಗೆ ಬಂದಾಗ ಇದೆ ತರಹ ಮಾಡಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ’ ಎಂದು ಹೇಳಿ ತನ್ನ ಕೈಯಲ್ಲಿದ್ದ ಗೂಟವನ್ನು ಅಲ್ಲೆ ಬಿಸಾಡಿ ಹೊರಟು ಹೋದ ಬಗ್ಗೆ ಪಿರ್ಯಾದಿ ಶ್ರೀ ನಾರಾಯಣ ತಂದೆ ಈರಾ ದೇವಾಡಿಗ, ಪ್ರಾಯ-38 ವರ್ಷ, ವೃತ್ತಿ-ಆಟೋ ಚಾಲಕ, ಸಾ|| 9 ನೇ ಕ್ರಾಸ್, ಮರಾಠಿಕೊಪ್ಪ, ರಾಜಧಾನಿ ಪೈನಾನ್ಸ್ ಎದರು, ತಾ: ಶಿರಸಿ ರವರು ದಿನಾಂಕ: 11-08-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 66/2021, ಕಲಂ: ಹೆಂಗಸು ಕಾಣೆ  ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ಶ್ರೀಮತಿ ರೇಷ್ಮಾ ತಂದೆ ಹೈದರ್ ಶೇಖ್, ಪ್ರಾಯ-28 ವರ್ಷ, ವೃತ್ತಿ-ಗೃಹಿಣಿ, ಸಾ|| ಸಹಸ್ರಹಳ್ಳಿ, ತಾ: ಯಲ್ಲಾಪುರ, ಹಾಲಿ ಸಾ|| ಅಂಬೇಡ್ಕರ್ ಶಾಲೆಯ ಹತ್ತಿರ, ಮಾರುತಿನಗರ, ದಾಂಡೇಲಿ. ಪಿರ್ಯಾದುದಾರರ ಅಕ್ಕಳಾದ ಇವಳು ದಿನಾಂಕ: 09-08-2021 ರಂದು ಬೆಳಿಗ್ಗೆ 08-30 ಗಂಟೆಗೆ ತನಗೆ ಮಕ್ಕಳು ಆಗದೇ ಇರುವುದರಿಂದ ಅದೇ ವಿಷಯವನ್ನು ತನ್ನ ಮನಸ್ಸಿಗೆ ಹಚ್ಚಿಕೊಂಡು ‘ನಾನು ಯಲ್ಲಾಪುರಕ್ಕೆ ಹೋಗುತ್ತೇನೆ’ ಅಂತಾ ಹೇಳಿ ಮಾರುತಿನಗರದ ಪಿರ್ಯಾದಿಯ ಮನೆಯಿಂದ ಹೋದವಳು, ಯಲ್ಲಾಪುರಕ್ಕೂ ಹೋಗದೇ ಮರಳಿ ಪಿರ್ಯಾದಿಯ ಮನೆಗೂ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಅಕ್ಕಳನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಉಸ್ಮಾನ್ ತಂದೆ ಹೈದರ್ ಶೇಖ್, ಪ್ರಾಯ-27 ವರ್ಷ, ವೃತ್ತಿ-ಚಾಲಕ, ಸಾ|| ಅಂಬೇಡ್ಕರ್ ಶಾಲೆಯ ಹತ್ತಿರ, ಮಾರುತಿ ನಗರ, ದಾಂಡೇಲಿ ರವರು ದಿನಾಂಕ: 11-08-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 67/2021, ಕಲಂ: 406, 420 ಐಪಿಸಿ  ನೇದ್ದರ ವಿವರ...... ನಮೂದಿತ ಆರೋಪಿತ ಅನಿಕೇತ್ ತಂದೆ ಪಂಡಿತ್ ಬೋಕರೆ, ಸಾ|| ಬಣಕಾರ ಪೇಟೆ, ತಾ: ರಾಮದುರ್ಗ, ಜಿ: ಬೆಳಗಾವಿ. ಈತನು ದಿನಾಂಕ: 01-01-2021 ರಿಂದ 13-05-2021 ರವರೆಗೆ ಡೆಲಿವರಿ ಪ್ರೈವೇಟ್ ಲಿಮಿಟೆಡ್ ಕಂಪನಿ ದಾಂಡೇಲಿ ಶಾಖೆಯಲ್ಲಿ ಫೀಲ್ಡ್ ಸೂಪರವೈಸರ್ ಅಂತಾ ಕೆಲಸ ನಿರ್ವಹಿಸುತ್ತಿದ್ದವನು, ಜನವರಿ ಹಾಗೂ ಫೆಬ್ರುವರಿ ತಿಂಗಳ ಕ್ಯಾಶ್ ಆನ್ ಡೆಲಿವರಿಯಿಂದ ಬಂದ ಹಣವನ್ನು ಸರಿಯಾಗಿ ಕಂಪನಿಯ ಬ್ಯಾಂಕ್ ಖಾತೆಗಳಿಗೆ ತುಂಬಿದ್ದು, ಆದರೆ ಮಾರ್ಚ್ ತಿಂಗಳಲ್ಲಿ ಸುಮಾರು 2,40,000/- ರೂಪಾಯಿ ಹಣ ವ್ಯತ್ಯಾಸ ಬಂದಿದ್ದು, ಕಂಪನಿಯವರು ಶೋಕಾಸ್ ನೋಟೀಸ್ ಮೂಲಕ ಕೇಳಲಾಗಿ ‘ಸದ್ರಿ ಹಣವನ್ನು ತಾನು ಸ್ವಂತಕ್ಕೆ ಖರ್ಚು ಮಾಡಿದ್ದು, ಮುಂದೆ ತುಂಬುತ್ತೇನೆ’ ಅಂತಾ ಹೇಳಿದ್ದು, ಆದರೆ ಎಪ್ರಿಲ್ ತಿಂಗಳಲ್ಲಿ ಬಂದ ಡೆಲಿವರಿ ಹಣದಿಂದ ಹಿಂದಿನ ಬಾಕಿ ಹಣವನ್ನು ತುಂಬಿರುವುದಾಗಿ ಕಂಪನಿಗೆ ನಂಬಿಸಿ, ಹೀಗೆ ಪ್ರತಿ ಬಾರಿಯೂ ಡೆಲಿವರಿಯಿಂದ ಬಂದ ಹಣವನ್ನು ಪೂರ್ತಿಯಾಗಿ ತುಂಬದೇ ಅದರಲ್ಲಿ ಸ್ವಲ್ಪ ಹಣವನ್ನು ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದು, ಸದ್ರಿ ಆರೋಪಿತನು ಕೆಲಸಕ್ಕೆ ಸೇರಿದ ದಿನಾಂಕ: 01-01-2021 ರಿಂದ 13-05-2021 ರವರೆಗೆ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಕ್ಯಾಶ್ ಆನ್ ಡೆಲಿವರಿಯಿಂದ ಬಂದ ರೂಪಾಯಿ 1,53,33,397/- ಹಣದಲ್ಲಿ ರೂಪಾಯಿ 1,48,35,831/- ಹಣವನ್ನು ಕಂಪನಿಯ ಬ್ಯಾಂಕ್ ಖಾತೆಗಳಿಗೆ ತುಂಬಿದ್ದು, ಸುಮಾರು ರೂಪಾಯಿ 4,97,566/- ಹಣವನ್ನು ಡೆಲಿವರಿ ಪ್ರೈವೇಟ್ ಲಿಮಿಟೆಡ್ ಕಂಪನಿಯ ಬ್ಯಾಂಕ್ ಖಾತೆಗಳಿಗೆ ತುಂಬದೇ ತನ್ನ ಸ್ವಂತಕ್ಕೆ ಬಳಸಿಕೊಂಡು ಕಂಪನಿಗೆ ಮೋಸ ಮಾಡಿ, ದಿನಾಂಕ: 13-05-2021 ರಂದು ಕಂಪನಿಗೂ ತಿಳಿಸದೇ ಕೆಲಸ ಬಿಟ್ಟು ಹೋಗಿರುತ್ತಾನೆ. ಸದ್ರಿ ಆರೋಪಿತನಿಗೆ ಪ್ರತಿ ಬಾರಿ ಹಣ ಕಟ್ಟು ಅಂತಾ ಕೇಳಲಾಗಿ ಕಟ್ಟುತ್ತೇನೆ ಅಂತಾ ಹೇಳುತ್ತಾ ಹಣವನ್ನು ಕಟ್ಟದೇ ಕಂಪನಿಗೆ ಮೋಸ ಮಾಡಿದ ಬಗ್ಗೆ ಪಿರ್ಯಾದಿ ವಿನೋದ ತಂದೆ ನಟರಾಜನ್, ಪ್ರಾಯ-31 ವರ್ಷ, ವೃತ್ತಿ-ಡೆಲಿವರಿ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಸೆಕ್ಯೂರಿಟಿ ಮ್ಯಾನೇಜರ್, ಸಾ|| ಮನೆ ನಂ: 5, ಬೃಂದಾವನ ನಗರ, ಆವಳಹಳ್ಳಿ, ಪೋ: ವಿರ್ಗೋ ನಗರ, ಬೆಂಗಳೂರು-560049 ರವರು ದಿನಾಂಕ: 11-08-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 91/2021, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ಕುಮಾರಿ: ತೃಪ್ತಿ ತಂದೆ ಅಣ್ಣಪ್ಪಾ ನಾಯ್ಕ, ಪ್ರಾಯ-22 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ತರಳಿ, ಸಂಪಗೋಡ ಗ್ರಾಮ, ತಾ: ಸಿದ್ದಾಪುರ. ಪಿರ್ಯಾದುದಾರನ ಹಿರಿಯ ಮಗಳಾದ ಇವಳು ಶಿರಸಿಯ ರಾಯಪ್ಪಾ ಹುಲೇಕಲ್ ಕಾಲೇಜಿನಲ್ಲಿ ಬಿ.ಎ ಮೊದಲನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕಳೆದ ಸುಮಾರು ಒಂದು ತಿಂಗಳಿನಿಂದ ಕೋವಿಡ್ ಇದುದ್ದರಿಂದ ಕಾಲೇಜಿಗೆ ಹೋಗದೇ ಮನೆಯಲ್ಲಿ ಇದ್ದಳು. ಹೀಗಿರುವಲ್ಲಿ ಕಾಲೇಜಿನಲ್ಲಿ ಕೋವಿಡ್ ಲಸಿಕೆ ಹಾಕುತ್ತಿದ್ದಾರೆ ಅಂತಾ ಮನೆಯಲ್ಲಿ ಹೇಳಿ, ದಿನಾಂಕ: 10-08-2021 ರಂದು ಬೆಳಿಗ್ಗೆ 07-00 ಗಂಟೆಗೆ ಮನೆಯಿಂದ ಹೋಗಿದ್ದವಳು, ಸಂಜೆ 06-00 ಗಂಟೆಗೆ ಮನೆಗೆ ಬರಲು ಲೇಟಾಗುತ್ತದೆ. ಮರಾಠಿಕೊಪ್ಪದಲ್ಲಿರುವ ಫ್ರೆಂಡ್ ಮನೆಯಲ್ಲಿ ಉಳಿಯುವುದಾಗಿ ಹೇಳಿದ್ದಳು. ತದನಂತರ ದಿನಾಂಕ: 11-08-2021 ರಂದು ಬೆಳಿಗ್ಗೆ 06-00 ಗಂಟೆಗೆ ಅವಳ ಮೊಬೈಲ್ ನಂ: 98458XXXXX ನೇದಕ್ಕೆ ಫೋನ್ ಮಾಡಲು ಅವಳ ಫೋನ್ ಸ್ವಿಚ್ ಆಫ್ ಆಗಿದ್ದು, ಈವರೆಗೆ ಸ್ವಿಚ್ ಆನ್ ಆಗಿರುವುದಿಲ್ಲ. ಆದುದರಿಂದ ತನ್ನ ಮಗಳು ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಣ್ಣಪ್ಪಾ ತಂದೆ ಹನುಮಾ ನಾಯ್ಕ, ಪ್ರಾಯ-53 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ತರಳಿ, ಸಂಪಗೋಡ ಗ್ರಾಮ, ತಾ: ಸಿದ್ದಾಪುರ ರವರು ದಿನಾಂಕ: 11-08-2021 ರಂದು 21-25 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 11-08-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 29/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಮಹಮ್ಮದ್ ಸಲ್ಮಾನ್ ತಂದೆ ಜೈನುಲಾಬಿದ್ದೀನ್ ಶೇಖ್, ಪ್ರಾಯ-18 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಕರಿಮೂಲೆ, ಹಳದೀಪುರ, ತಾ: ಹೊನ್ನಾವರ. ಹಾಲಿ ಸಾ|| ನಡುಚಿಟ್ಟೆ, ಕರ್ಕಿ, ತಾ: ಹೊನ್ನಾವರ. ಪಿರ್ಯಾದುದಾರನ ಮಗನಾದ ಈತನು ದಿನಾಂಕ: 11-08-2021 ರಂದು ಸಂಜೆ 05-30 ಗಂಟೆಯಿಂದ ರಾತ್ರಿ 08-00 ಗಂಟೆಯ ನಡುವಿನ ಅವಧಿಯಲ್ಲಿ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು, ಕರ್ಕಿ ನಡುಚಿಟ್ಟೆಯಲ್ಲಿರುವ ಪಿರ್ಯಾದಿಯ ಹೆಂಡತಿಯ ತಮ್ಮ ರಜಾಕ್ ಇವರ ಗುಜರಿ ಇಡುವ ಶೆಡ್ಡಿನ ಮೇಲ್ಛಾವಣಿಯ ಕಬ್ಬಿಣದ ಪಟ್ಟಿಗೆ ನೈಲಾನ್ ಹಗ್ಗದಿಂದ ಕಟ್ಟಿ, ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾನೆಯೇ ವಿನಃ ಅವನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಜೈನುಲಾಬಿದ್ದೀನ್ ತಂದೆ ಇಬ್ರಾಹಿಂ ಶೇಖ್, ಪ್ರಾಯ-36 ವರ್ಷ, ವೃತ್ತಿ-ಹೋಮ್ ಕುಕ್, ಸಾ|| ಕರಿಮೂಲೆ, ಹಳದೀಪುರ, ತಾ: ಹೊನ್ನಾವರ ರವರು ದಿನಾಂಕ: 11-08-2021 ರಂದು 21-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 12-08-2021 04:48 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080