ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 11-12-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 183/2021, ಕಲಂ: 323, 327, 426, 448, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಸುಹಾಸ ತಂದೆ ವಿಷ್ಣು ಶಾನಭಾಗ, ಪ್ರಾಯ-ಅಜಮಾಸು 58 ವರ್ಷ, 2]. ಕು: ಪುಷ್ಪಲತಾ ತಂದೆ ವಿಷ್ಣು ಶಾನಭಾಗ, ಪ್ರಾಯ-ಅಜಮಾಸ 68 ವರ್ಷ, ಸಾ|| (ಇಬ್ಬರೂ) ಕಂತ್ರಿ, ಮಾಧವನಗರ, ತಾ: ಅಂಕೋಲಾ. ಪಿರ್ಯಾದಿಯವರು ದಿನಾಂಕ: 25-10-2021 ರಂದು ದಿನಬಳಕೆಯ ವಸ್ತುಗಳನ್ನು ತೆಗೆದುಕೊಂಡು ಬರುವಾಗ ಪಿರ್ಯಾದಿಯವರ ಮನೆಯ ಮುಂದೆ ನಮೂದಿತ ಆರೋಪಿತರು ಸಂಗನಮತ ಮಾಡಿಕೊಂಡು ಬಂದು ಪಿರ್ಯಾದಿಯವರಿಗೆ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈಯ್ದು, ಕಟ್ಟಿಗೆಯಿಂದ ಹೊಡೆಯಲು ಬಂದಾಗ ಓಡಿ ಹೋಗಿ ತಪ್ಪಿಸಿಕೊಂಡಿರುತ್ತಾರೆ. ನಂತರ ಪಿರ್ಯಾದಿಯವರ ತಲೆಗೆ ಹೊಡೆದಿದ್ದು, ‘ತಲೆ ಒಡೆದು ಹಾಕುತ್ತೇವೆ’ ಎನ್ನುವುದಾಗಿ ಜೀವದ ಬೆದರಿಕೆ ಹಾಕಿರುತ್ತಾರೆ. ಅಲ್ಲದೇ ಪಿರ್ಯಾದಿಯವರ ಆಸ್ತಿಯಲ್ಲಿರುವ ತೆಂಗಿನಕಾಯಿಗಳನ್ನು ಕೊಯ್ದು ಮಾರಾಟ ಮಾಡಿರುತ್ತಾರೆ ಪಿರ್ಯಾದಿಯವರಿಗೆ ಮನೆಗೆ ಹೋಗಲು ಬಿಡುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಸುಮಂಗಲಾ ಗಂಡ ಗಜಾನನ ನಾಯ್ಕ, ಪ್ರಾಯ-64 ವರ್ಷ, ಸಾ|| ಕಂತ್ರಿ, ಮಾಧವ ನಗರ, ತಾ: ಅಂಕೋಲಾ ರವರು ದಿನಾಂಕ: 11-12-2021 ರಂದು 21-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 146/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗಿರೀಶ ತಂದೆ ಸತ್ಯನಾರಾಯಣ ಭಟ್ಟ, ಸಾ|| ಬ್ಯಾಂಕ್ ಕಾಲೋನಿ, ಕನ್ನಿರ ತಟ್ಟಾ ರೋಡ್, ಕೋಟೆಕಾರ ಪೋಸ್ಟ್, ಮಂಗಳೂರು (ಕಾರ್ ನಂ: ಕೆ.ಎ-19/ಎಮ್.ಇ-4054 ನೇದರ ಚಾಲಕ). ಈತನು ದಿನಾಂಕ: 11-12-2021 ರಂದು 07-00 ಗಂಟೆಯ ಸುಮಾರಿಗೆ ತಾನು ಚಲಾಯಿಸುತ್ತಿದ್ದ ಕಾರ್ ನಂ: ಕೆ.ಎ-19/ಎಮ್.ಇ-4054 ನೇದನ್ನು ಮಂಕಿ ಕಡೆಯಿಂದ ಹೊನ್ನಾವರ ಕಡೆಗೆ ಹೋಗಲು ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಗುಣವಂತೆ, ಸಿಂದಾಣೀಕೆರಿ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಮೇಲೆ ತನ್ನ ಕಾರಿನ ವೇಗವನ್ನು ನಿಯಂತ್ರಿಸಲಾಗದೇ ರಸ್ತೆಯ ಬದಿಯ ಗಟಾರದಲ್ಲಿ ಪಲ್ಟಿ ಪಡಿಸಿ, ಕಾರಿನಲ್ಲಿ ಕುಳಿತ ಚೇತನಾ ಗಿರೀಶ ಭಟ್, ಇವರಿಗೆ ತಲೆಗೆ ಮತ್ತು ಕಾಲಿಗೆ ಸಾದಾ ಗಾಯನೋವು ಪಡಿಸಿ ಹಾಗೂ ಯಶೋಧಾ ಗಣಪತಿ ಹೆಗಡೆ, ಇವರಿಗೆ ತಲೆಗೆ ಹಾಗೂ ಮುಖಕ್ಕೆ ರಕ್ತದ ಗಾಯನೋವು ಪಡಿಸಿ, ಆರೋಪಿ ಚಾಲಕನು ತನಗೂ ಕೂಡಾ ಸಣ್ಣಪುಟ್ಟ ಗಾಯನೋವು ಪಡಿಸಿಕೊಂಡು, ಕಾರನ್ನು ಜಖಂ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಲಕ್ಷ್ಮಣ ತಂದೆ ನಾರಾಯಣ ಗೌಡ, ಪ್ರಾಯ-43 ವರ್ಷ, ವೃತ್ತಿ-ಚಾಲಕ, ಸಾ|| ಕಾಸರಕೋಡ, ರೋಷನ್ ಮೊಹಲ್ಲಾ, ತಾ: ಹೊನ್ನಾವರ ರವರು ದಿನಾಂಕ: 11-12-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 147/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 10-12-2021 ರಂದು 20-00 ಗಂಟೆಯಿಂದ ದಿನಾಂಕ: 11-12-2021 ರಂದು ಬೆಳಿಗ್ಗೆ 08-30 ಗಂಟೆಯ ನಡುವಿನ ಅವಧಿಯಲ್ಲಿ ಮಂಕಿಯ ನಿರಂಜನ ನಗರದಲ್ಲಿ ಪಿರ್ಯಾದಿಯು ಬಡಗಿ ಕೆಲಸ ಮಾಡುವ ಅಂಗಡಿಯ ಹಿಂದಿನ ಬಾಗಿಲನ್ನು ತೆರೆದು ಅಂಗಡಿಯಲ್ಲಿದ್ದ ಲಾಕರಿನ ಚಾವಿಯನ್ನು ಯಾವುದೋ ಗಟ್ಟಿ ಪದಾರ್ಥದಿಂದ ಮೀಟಿ ತೆಗೆದು ಅಂಗಡಿಯಲ್ಲಿ ಲಾಕರ್ ನಲ್ಲಿಟ್ಟ ನಗದು ಹಣ 20,000/- ರೂಪಾಯಿಗಳನ್ನು ಕಳುವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಇಜಿದೋರ್ ತಂದೆ ಲೂಯಿಸ್ ಗೊನ್ಸಾಲ್ವೀಸ್, ಪ್ರಾಯ-47 ವರ್ಷ, ವೃತ್ತಿ-ಬಡಗಿತನ, ಸಾ|| ಮೇಲಿನ ಇಡಗುಂಜಿ, ತಾ: ಹೊನ್ನಾವರ ರವರು ದಿನಾಂಕ: 11-12-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 11-12-2021

at 00:00 hrs to 24:00 hrs

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 24/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ದೇವಯ್ಯ ತಂದೆ ಜಟ್ಟಾ ನಾಯ್ಕ, ಪ್ರಾಯ-72 ವರ್ಷ, ಸಾ|| ಕುರಂದೂರ, ಪೋ: ಹಾಡುವಳ್ಳಿ, ತಾ: ಭಟ್ಕಳ. ಈತನು ಕಳೆದ 10 ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಈ ಕುರಿತು ಚಿಕಿತ್ಸೆ ಪಡೆದುಕೊಂಡರು ಸಹ ಕಡಿಮೆ ಆಗದೇ ಇದ್ದುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 09-12-2021 ರಂದು ಬೆಳಿಗ್ಗೆ 09-45 ಗಂಟೆಗೆ ತಮ್ಮ ಮನೆಯಲ್ಲಿ ಇದ್ದ ಗದ್ದೆಗೆ ಹೊಡೆಯುವ ಕೀಟನಾಶಕ ಸೇವಿಸಿದ್ದರಿಂದ ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದವರು ಚಿಕಿತ್ಸೆ ಫಲಕಾರಿ ಆಗದೇ ದಿನಾಂಕ: 11-12-2021 ರಂದು ಮಧ್ಯಾಹ್ನ 01-00 ಗಂಟೆಗೆ ಮೃತಪಟ್ಟಿದ್ದು, ಇದರ ಹೊರತು ಅವರ ಮರಣದಲ್ಲಿ ಬೇರೆ ಏನು ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಜಗದೀಶ ತಂದೆ ದೇವಯ್ಯ ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ಕಾರ್ಪೆಂಟರ್ ಕೆಲಸ, ಸಾ|| ಕುರಂದೂರ, ಪೋ: ಹಾಡುವಳ್ಳಿ, ತಾ: ಭಟ್ಕಳ ರವರು ದಿನಾಂಕ: 11-12-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

ಇತ್ತೀಚಿನ ನವೀಕರಣ​ : 23-12-2021 06:16 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080