ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 11-02-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 28/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ರಿತೇಶ ತಂದೆ ಅರವಿಂದ ಬಾಡಕರ, ಪ್ರಾಯ-36 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಪದ್ಮನಾಭನಗರ, ದೇವಳಿವಾಡಾ, ಬಾಡ, ಕಾರವಾರ. ನಮೂದಿತ ಆರೋಪಿತನು ದಿನಾಂಕ: 10-02-2021 ರಂದು 18-30 ಗಂಟೆಗೆ ಗುರುಮಠ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ತನ್ನ ಲಾಭದ ಸಲುವಾಗಿ 01/- ರೂಪಾಯಿಗೆ 80/- ರೂಪಾಯಿ ಕೊಡುವ ಷರತ್ತಿನ ಮೇಲೆ ಅದೃಷ್ಠದ ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿ ಜನರಿಂದ ಹಣ ಪಡೆದು ಓ.ಸಿ ಮಟಕಾ ಜೂಜಾಟ ನಡೆಸುತ್ತಿರುವ ಕಾಲಕ್ಕೆ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ ಹಿಡಿದು, ದಾಳಿಯ ಕಾಲ ಆರೋಪಿತನ ತಾಬಾ ಸಿಕ್ಕ 1). ಒಟ್ಟೂ ನಗದು ಹಣ 4,080/- ರೂಪಾಯಿ, 2). ಓ.ಸಿ ಮಟಕಾ ಜೂಜಾಟದ ಅಂಕೆ-ಸಂಖ್ಯೆ ಬರೆದ ಚೀಟಿ-01, 3). ಬಾಲ್ ಪೆನ್–01, 4). ಸ್ಯಾಮ್ಸಂಗ್ ಅಂಡ್ರಾಯ್ಡ್ ಮೊಬೈಲ್–01. ಇವುಗಳನ್ನು ಪಂಚನಾಮೆಯಂತೆ ವಶಕ್ಕೆ ಪಡೆದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂತೋಷ ಕುಮಾರ ಎಮ್, ಪಿ.ಎಸ್.ಐ, ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 11-02-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 12/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ರಾಮನಾಥ ತಂದೆ ವಿಷ್ಣು ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಾಜುವಾಡಾ, ಸದಾಶಿವಗಡ, ಕಾರವಾರ. ನಮೂದಿತ ಆರೋಪಿತನು ದಿನಾಂಕ: 11-02-2021 ರಂದು 15-15 ಘಂಟೆಗೆ ಆರೋಪಿತನಾದ ರಾಮನಾಥ ವಿಷ್ಣು ನಾಯ್ಕ ಈತನು ಸದಾಶಿವಗಡ ಕಾಜುವಾಡಾದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ದೊಡ್ಡದಾಗಿ ಕೂಗಿ ಕರೆದು ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿಸಿಕೊಂಡು ಚೀಟಿಯನ್ನು ಬರೆದುಕೊಡುತ್ತಿದ್ದವನಿಗೆ ದಾಳಿ ನಡೆಸಿ, ಹಿಡಿದು ಅವನಿಂದ ನಗದು ಹಣ 2,025/- ರೂಪಾಯಿ ಹಾಗೂ ಅಂಕೆ-ಸಂಖ್ಯೆ ಬರೆದ ಚೀಟಿ ಮತ್ತು ಬಾಲ್ ಪೆನ್ ಅನ್ನು ವಶಪಡಿಸಿಕೊಂಡಿದ್ದು, ಆರೋಪಿತನು ಜನರಿಂದ ಹಣ ಪಡೆದುಕೊಂಡು ಓ.ಸಿ ಮಟಕಾ ಜೂಜಾಟ ಆಡಿಸುತ್ತಿರುವಾಗ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಪ್ರವೀಣಕುಮಾರ ಆರ್, ಪಿ.ಎಸ್.ಐ (ಕಾ&ಸು), ಚಿತ್ತಾಕುಲಾ ಪೊಲೀಸ್ ಠಾಣೆ ರವರು ದಿನಾಂಕ: 11-02-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 13/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ 1]. ಆಯಿಶಾ ಶೇಖ್ ಕೋಂ. ಮುಜಾಯಿದ್ ಅಲಿ ಶೇಖ್, ಪ್ರಾಯ-46 ವರ್ಷ, ಸಾ|| ಸದಾಶಿವಗಡ, ಕಾರವಾರ, 2]. ಸೋಗ್ರಾ ಖಾನ್ ಕೋಂ. ಲಿಯಾಕತ್ ಖಾನ್, ಪ್ರಾಯ-52 ವರ್ಷ, ಸಾ|| ಪಿಂಗಾವಾಡಾ, ಕಾಜುಬಾಗ, ಕಾರವಾರ, 3]. ರಜಿಯಾ ರಫಿಕ್ ಶೇಖ್, ಪ್ರಾಯ-56 ವರ್ಷ, ಸಾ|| ಸದಾಶಿವಗಡ, ಕಾರವಾರ. ಈ ನಮೂದಿತ ಆರೋಪಿತರು ಪಿರ್ಯಾದಿಯ ಸಂಬಂಧಿಗಳಾಗಿದ್ದು, ಪಿರ್ಯಾದಿಯು ತಾನು ತನ್ನ ಮಗಳ ವಿದ್ಯಾಭ್ಯಾಸದ ಕುರಿತು ಬೆಂಗಳೂರಿನಲ್ಲಿ ಇದ್ದು, ಆಗಾಗ ಮನೆಗೆ ಬಂದು ಮನೆ ಕ್ಲೀನ್ ಮಾಡಿ ಹೋಗುತ್ತೇನೆ. ತಾನು ಮನೆಯಲ್ಲಿ ಇಲ್ಲದ ಸಮಯದಲ್ಲಿ ತನ್ನ ಸಂಬಂಧಿಗಳಾದ ನಮೂದಿತ ಆರೋಪಿತರು ತಮ್ಮ ಮನೆಯ ಮುಂದಿನ ಬಾಗಿಲಿಗೆ ಹಾಕಿದ ಬೀಗವನ್ನು ಒಡೆದು, ಮನೆಯೊಳಗಿದ್ದ ಸುಮಾರು 43,200/- ರೂಪಾಯಿ ಬೆಲೆ ಬಾಳುವ 1). Inverter and Exide Battery, 2). Mahindra Rodio two wheeler No: KA-30/Q-0891, 3). Nut Bolt Bag, 50 Kg, 4). Study Table, 5). Dining Table 12 mm Glass, 6). Flour Mill sale deed Paper, 7). Some Receipt of amount transfer to Siraj’s Sister A/c, 8). Hardware Items. ಇತ್ಯಾದಿಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀಮತಿ ಸಭೀನಾ ಶಿರಾಜ ಶೇಖ್, ಪ್ರಾಯ-50 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಮನೆ ನಂ: 994, ಅಬ್ಬಾಸ ಮಂಜಿಲ್, ಚಿತ್ತಾಕುಲಾ ಪೊಲೀಸ್ ಠಾಣೆ ಎದುರುಗಡೆ, ಸದಾಶಿವಗಡ, ಕಾರವಾರ ರವರು ದಿನಾಂಕ: 11-02-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 35/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹೇಶ ತಂದೆ ಸುಬ್ರಾಯ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಚಾಲಕ, ಸಾ|| ನಗರೆ, ತಾ: ಹೊನ್ನಾವರ (ಆಟೋ ರಿಕ್ಷಾ ನಂ: ಕೆ.ಎ-47/ಎ-0699 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 08-02-2021 ರಂದು ಸಂಜೆ 17-00 ಗಂಟೆಯ ಸುಮಾರಿಗೆ ತಾನು ಚಲಾಯಿಸುತ್ತಿದ್ದ ಆಟೋ ರಿಕ್ಷಾ ನಂ: ಕೆ.ಎ-47/ಎ-0699 ನೇದನ್ನು ಹಳಗೇರಿ ಕಡೆಯಿಂದ ಮುಗ್ವಾ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಸುರಕಟ್ಟೆ ಶಾಲೆಯ ಹತ್ತಿರ ದನ ಅಡ್ಡ ಬಂದಿದ್ದರಿಂದ ಒಮ್ಮೆಲೆ ರಿಕ್ಷಾವನ್ನು ನಿರ್ಲಕ್ಷ್ಯತನದಿಂದ ಎಡಕ್ಕೆ ಚಲಾಯಿಸಿ ಪಲ್ಟಿಗೊಳಿಸಿ ಅಪಘಾತ ಪಡಿಸಿ, ಆಟೋ ರಿಕ್ಷಾ ಪ್ರಯಾಣಿಕರಾದ ಪರಮೇಶ್ವರ ತಂದೆ ಸುಬ್ರಾಯ ಗೌಡ, ಪ್ರಾಯ-65 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಳಗೇರಿ, ತಾ: ಹೊನ್ನಾವರ ಇವರಿಗೆ ಹಣೆಯ ಎಡಬದಿಗೆ ಹಾಗೂ ಎಡಗಾಲಿಗೆ ದುಃಖಾಪತ್ ಪಡಿಸಿದ್ದಲ್ಲದೇ, ಪಿರ್ಯಾದಿಗೂ ಸಹ ತೆರಚಿದ ದುಃಖಾಪತ್ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಈಶ್ವರ ತಂದೆ ನಾಗಪ್ಪ ಗೌಡ, ಪ್ರಾಯ-44 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ದೇವಸ್ಥಾನಕೇರಿ, ಹೊಸಪಟ್ಟಣ, ತಾ: ಹೊನ್ನಾವರ ರವರು ದಿನಾಂಕ: 11-02-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 36/2021, ಕಲಂ: 143, 147, 148, 323, 326, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಕನ್ಯಾ ತಂದೆ ಸುಬ್ಬಯ್ಯ ಗೌಡ, ಪ್ರಾಯ-55 ವರ್ಷ, ವೃತ್ತಿ-ರೈತಾಬಿ ಕೆಲಸ, 2]. ವಾಸು ತಂದೆ ಕನ್ಯಾ ಗೌಡ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, 3]. ದೇವಾ ತಂದೆ ಸುಬ್ಬಯ್ಯ ಗೌಡ, ಪ್ರಾಯ-60 ವರ್ಷ, ವೃತ್ತಿ-ರೈತಾಬಿ ಕೆಲಸ, 4]. ಮಾರುತಿ ತಂದೆ ದೇವಾ ಗೌಡ, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, 5]. ರಾಮಚಂದ್ರ ತಂದೆ ದೇವಾ ಗೌಡ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| (ಎಲ್ಲರೂ) ಕೊಳಗದ್ದೆ, ಪೋ: ಖರ್ವಾ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ಹಾಗೂ ಪಿರ್ಯಾದಿಯು ದಾಯಾದಿಗಳಾಗಿದ್ದು, ಪಿರ್ಯಾದಿಯೊಂದಿಗೆ ಆರೋಪಿತರು ಸಣ್ಣಪುಟ್ಟ ವಿಷಯಕ್ಕೆ ಜಗಳ ಮಾಡುತ್ತಾ ದ್ವೇಷದಿಂದ ಇದ್ದವರು, ದಿನಾಂಕ: 11-02-2021 ರಂದು ರಾತ್ರಿ 20-30 ಗಂಟೆಯ ಸುಮಾರಿಗೆ ಪಿರ್ಯಾದಿಯು ಖರ್ವಾದ ಕೊಳಗದ್ದೆಯ ತಮ್ಮ ಮನೆಯ ಮುಂದಿನ ರಸ್ತೆಯಲ್ಲಿ ನಿಂತುಕೊಂಡಿದ್ದಾಗ ಆರೋಪಿ 1 ರಿಂದ 5 ನೇಯವರೆಲ್ಲರೂ ಸೇರಿ ಪಿರ್ಯಾದಿಯಿದ್ದಲ್ಲಿಗೆ ಬಂದು ಪಿರ್ಯಾದಿಯನ್ನು ಉದ್ದೇಶಿಸಿ ‘ಸೂಳೆ ಮಗನೆ, ಬೋಳಿ ಮಗನೆ, ನಮ್ಮ ತಂಟೆಗೆ ಬರುತ್ತೀಯಾ?’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಎಲ್ಲರೂ ಸೇರಿ ಕೈಯಿಂದ ಮೈಮೇಲೆ ಹೊಡೆದಿದ್ದಲ್ಲದೇ, ಆರೋಪಿ 1 ನೇಯವನು ತನ್ನ ಕೈಯಲ್ಲಿದ್ದ ಕತ್ತಿಯಿಂದ ಪಿರ್ಯಾದಿ ಎಡಭುಜಕ್ಕೆ ಹೊಡೆದು ರಕ್ತಗಾಯ ಪಡಿಸಿದ್ದಲ್ಲದೇ, ಆರೋಪಿ 2 ನೇಯವನು ತನ್ನ ಕೈಯಲ್ಲಿದ್ದ ರಾಡಿನಿಂದ ಪಿರ್ಯಾದಿಯ ಸೊಂಟದ ಮೇಲೆ ಹೊಡೆದು ಗಾಯ ಪಡಿಸಿದ್ದಲ್ಲದೇ, ಆರೋಪಿ 4 ನೇಯವನು ಪಿರ್ಯಾದಿ ಶರ್ಟ್ ಅನ್ನು ಹರಿದು ಹಾಕಿ, ಆರೋಪಿತರೆಲ್ಲರೂ ಸೇರಿ ಪಿರ್ಯಾದಿಗೆ ‘ಇನ್ನೊಮ್ಮೆ ಸಿಕ್ಕಾಗ ನಿನ್ನನ್ನು ಜೀವ ಸಮೇತ ಬಿಡುವುದಿಲ್ಲ’ ಅಂತಾ ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ವಿನಾಯಕ ತಂದೆ ರಾಮಾ ಗೌಡ, ಪ್ರಾಯ-35 ವರ್ಷ, ವೃತ್ತಿ-ವ್ಯಾಪಾರ, ಸಾ|| ಕೊಳಗದ್ದೆ, ಪೋ: ಖರ್ವಾ, ತಾ: ಹೊನ್ನಾವರ ರವರು ದಿನಾಂಕ: 11-02-2021 ರಂದು 22-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 37/2021, ಕಲಂ: 323, 324, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ರಾಮಾ ತಂದೆ ಅಣ್ಣು ಗೌಡ, ಪ್ರಾಯ-60 ವರ್ಷ, ವೃತ್ತಿ-ರೈತಾಬಿ ಕೆಲಸ, 2]. ವಿನಾಯಕ ರಾಮಾ ಗೌಡ, ಪ್ರಾಯ-40 ವರ್ಷ, ವೃತ್ತಿ-ವ್ಯಾಪಾರ, 3]. ವಿನೋದ ತಂದೆ ರಾಮಾ ಗೌಡ, ಪ್ರಾಯ-33 ವರ್ಷ, ವೃತ್ತಿ-ವ್ಯಾಪಾರ, 4]. ಗಜಾನನ ತಂದೆ ಗಣಪತಿ ಗೌಡ, ಪ್ರಾಯ-28 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| (ಎಲ್ಲರೂ) ಕೊಳಗದ್ದೆ, ಪೋ: ಖರ್ವಾ, ತಾ: ಹೊನ್ನಾವರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ಪಿರ್ಯಾದಿಯ ದೊಡ್ಡಪ್ಪನ ಮಗನಿದ್ದು, ಆರೋಪಿ 2 ಮತ್ತು 3 ನೇಯವರು ಆರೋಪಿ 1 ನೇಯವನ ಮಕ್ಕಳಿದ್ದು, ಆರೋಪಿ 4 ನೇಯವನು ಆರೋಪಿ 1 ನೇಯವನ ಅಣ್ಣನ ಮಗನಿದ್ದು, ಆರೋಪಿ 1 ರಿಂದ 4 ನೇಯವರು ಪಿರ್ಯಾದಿಯೊಂದಿಗೆ ಮೊದಲಿನಿಂದಲೂ ಜಗಳ ಮಾಡುತ್ತಾ ದ್ವೇಷದಿಂದ ಇದ್ದವರು, ದಿನಾಂಕ: 11-02-2021 ರಂದು 20-30 ಗಂಟೆಯ ಸುಮಾರಿಗೆ ಪಿರ್ಯಾದಿಯು ಕೊಳಗದ್ದೆ ಖರ್ವಾದಲ್ಲಿರುವ ತನ್ನ ಮನೆಯಿಂದ ಹೊರಗಡೆ ಬಂದು ಮನೆಯ ಮುಂದಿನ ರಸ್ತೆಯಲ್ಲಿ ನಿಂತುಕೊಂಡಿದ್ದಾಗ ಆರೋಪಿ 1 ರಿಂದ 4 ನೇಯವರು ಸೇರಿಕೊಂಡು ಬಂದು ಪಿರ್ಯಾದಿಗೆ ‘ಸೂಳೆ ಮಗನೇ, ಬೋಳಿ ಮಗನೇ, ನಮ್ಮ ತಂಟೆಗೆ ಬರುತ್ತೀಯಾ?’ ಅಂತಾ ಅವಾಚವಾಗಿ ಬೈಯ್ದು ಕೈಯಿಂದ ಮೈಮೇಲೆ ಹೊಡೆದು ದೂಡಿ ಹಾಕಿದ್ದಲ್ಲದೇ, ಆರೋಪಿ 2 ನೇಯವನು ತನ್ನ ಕೈಯಲ್ಲಿದ್ದ ಕಟ್ಟಿಗೆಯ ದೊಣ್ಣೆಯಿಂದ ಪಿರ್ಯಾದಿಯ ತಲೆಗೆ ಹೊಡೆದು ಗಾಯ ಪಡಿಸಿದ್ದಲ್ಲದೇ, ಆರೋಪಿ 1 ರಿಂದ 4 ನೇಯವರು ಪಿರ್ಯಾದಿಗೆ ‘ಇನ್ನೊಮ್ಮೆ ಸಿಕ್ಕಾಗ ನಿನಗೆ ಜೀವ ಸಮೇತ ಬಿಡುವುದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಕನ್ಯಾ ತಂದೆ ಸುಬ್ಬಯ್ಯ ಗೌಡ, ಪ್ರಾಯ-58 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕೊಳಗದ್ದೆ, ಪೋ: ಖರ್ವಾ, ತಾ: ಹೊನ್ನಾವರ ರವರು ದಿನಾಂಕ: 11-02-2021 ರಂದು 23-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 15/2021, ಕಲಂ: ಹುಡುಗಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಕುಮಾರಿ: ದಿವ್ಯಾ ತಂದೆ ಅನಂತ ಮರಾಠಿ, ಪ್ರಾಯ-19 ವರ್ಷ, ವೃತ್ತಿ-ಗಾರ್ಮೆಂಟ್ ಕೆಲಸ, ಸಾ|| ಗೌಡ್ರಮನೆ, ಕುಚ್ಚೋಡಿ, ಪೋ: ಗೋಳಿಕುಂಬ್ರಿ, ತಾ: ಭಟ್ಕಳ. ಪಿರ್ಯಾದಿಯ ಮಗಳಾದ ಇವಳು ಮಂಕಿಯ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಯವರೆಗೆ ಕಲಿತು ಒಂದು ವರ್ಷ ಮನೆಯಲ್ಲಿಯೇ ಇದ್ದವಳು, ನಂತರ ಕಳೆದ 2 ವರ್ಷಗಳಿಂದ ಪಿರ್ಯಾದಿಯ ಹಿರಿಯ ಮಗಳಾದ ರೇವತಿ ಹಾಗೂ ದಿವ್ಯ ಸೇರಿಕೊಂಡು ಮಂಗಳೂರು ಸುರತ್ಕಲ್ ದಲ್ಲಿರುವ ಸ್ಟರ್ಲಿನ್ ಫುಡ್ಸ್ ಎಂಬ ಶೆಟ್ಲಿ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಹೋಗಿ ಅಲ್ಲಿಯೇ ರೂಮ್ ಮಾಡಿಕೊಂಡು ಉಳಿದವರು, ದಿನಾಂಕ: 01-01-2021 ರಂದು ರೇವತಿ ಹಾಗೂ ದಿವ್ಯ ಇಬ್ಬರು ಸೇರಿಕೊಂಡು 15 ದಿವಸ ರಜೆ ತೆಗೆದುಕೊಂಡು ಮನೆಗೆ ಬಂದಾಗ ಮನೆಯಲ್ಲಿ ಬೇಜಾರು ಬಂದಿದ್ದರಿಂದ ದಿನಾಂಕ: 05-01-2021 ರಂದು ರೇವತಿ ಹಾಗೂ ದಿವ್ಯ ಇಬ್ಬರು ಸೇರಿಕೊಂಡು ಸೂಳೆಬೀಳುವಿನಲ್ಲಿರುವ ಎಮ್.ಜಿ ಗಾರ್ಮೆಂಟ್ಸ್ ನಲ್ಲಿ ಕೆಲಸಕ್ಕೆ ಹೋಗಿ ಅಲ್ಲಿಯೇ ಗಾರ್ಮೆಂಟ್ ಕಂಪೌಂಡಿನಲ್ಲಿರುವ ಲೇಡಿಸ್ ಹಾಸ್ಟೆಲಿನಲ್ಲಿ ಉಳಿದುಕೊಂಡವರು, ದಿನಾಂಕ: 10-01-2021 ರಂದು ಮಧ್ಯಾಹ್ನ ದಿವ್ಯಾ ಒಬ್ಬಳೆ ಮನೆಗೆ ಬಂದು ಆ ದಿನ ಮನೆಯಲ್ಲಿಯೇ ಇದ್ದಳು. ದಿನಾಂಕ: 11-01-2021 ರಂದು ಸಾಯಂಕಾಲ 04-00 ಗಂಟೆಗೆ ದಿವ್ಯಾ ಇವಳು ಕುಚ್ಚೋಡಿಯಲ್ಲಿರುವ ಗೆಳತಿ ಯಮುನಾ ದುರ್ಗು ಮರಾಠಿ ಇವಳ ಮನೆಗೆ ಹೋಗಿ ಬರುತ್ತೇನೆ ಎಂದು ತಾಯಿಯ ಹತ್ತಿರ ಹೇಳಿ ಹೋದವಳು, ಗೆಳತಿಯ ಮನೆಗೆ ಹೋಗದೇ, ಪಿರ್ಯಾದಿಯ ಮನೆಗೂ ಬಾರದೇ ಹಾಗೂ ಕೆಲಸಕ್ಕೂ ಹೋಗದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ. ಕಾರಣ ಕಾಣೆಯಾದ ತನ್ನ ಮಗಳನ್ನು ಹುಡುಕಿಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಅನಂತ ತಂದೆ ನಾರಾಯಣ ಮರಾಠಿ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗೌಡ್ರಮನೆ, ಕುಚ್ಚೋಡಿ, ಪೋ: ಗೋಳಿಕುಂಬ್ರಿ, ತಾ: ಭಟ್ಕಳ ರವರು ದಿನಾಂಕ: 11-02-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 16/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಬ್ದುಲ್ ಬ್ಯಾರಿ ತಂದೆ ಅಬು ಮಹ್ಮದ್ ಗುಲಮಾ, ಸಾ|| ಮುರ್ಡೆಶ್ವರ, ತಾ: ಭಟ್ಕಳ (ನೋಂದಣಿ ಸಂಖ್ಯೆ ನಮೂದಿರದ ಹೀರೋ ಫ್ಯಾಷನ್ ಪ್ರೋ ಮೋಟಾರ್ ಸೈಕಲ್ ಸವಾರ). ನಮೂದಿತ ಆರೋಪಿತನು ದಿನಾಂಕ: 10-02-2021 ರಂದು ರಾತ್ರಿ 19-35 ಗಂಟೆಗೆ ತಾನು ಚಲಾಯಿಸಿಕೊಂಡು ಬಂದ ನೋಂದಣಿ ಸಂಖ್ಯೆ ನಮೂದಿರದ ಹೀರೋ ಫ್ಯಾಷನ್ ಪ್ರೋ ಮೋಟಾರ್ ಸೈಕಲನ್ನು ಭಟ್ಕಳ ಕಡೆಯಿಂದ ಮುರ್ಡೆಶ್ವರ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನು, ಶಿರಾಲಿ ಶಾರದಹೊಳೆ ಹನುಮಂತ ದೇವಸ್ಥಾನ ಹತ್ತಿರ ರಸ್ತೆ ದಾಟುತ್ತಿರುವ  ಪಾದಚಾರಿ ನಾಗಪ್ಪ ತಂದೆ ಗೋವಿಂದ ನಾಯ್ಕ, ಪ್ರಾಯ-62 ವರ್ಷ, ವೃತ್ತಿ-ರೈಸ್ ಮಿಲ್ ದಲ್ಲಿ ಕೆಲಸ, ಸಾ|| ಶಾರದಹೊಳೆ, ಶಿರಾಲಿ, ಕಪ್ಳಕನಮನೆ, ತಾ: ಭಟ್ಕಳ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಈ ಅಪಘಾತದಲ್ಲಿ ನಾಗಪ್ಪ ಇವರ ತಲೆಗೆ, ಕಾಲಿಗೆ, ಕೈಗೆ ಹಾಗೂ ಮುಖದ ಭಾಗಕ್ಕೆ ಗಾಯ ಪಡಿಸಿ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ತಲೆಗೆ ಹಾಗೂ ಕೈಗೆ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ಬೈರಪ್ಪ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಶಿಲ್ಪಿ ಕೆಲಸ, ಸಾ|| ಶಾರದಹೊಳೆ, ಶಿರಾಲಿ, ಕಪ್ಳಕನಮನೆ, ತಾ: ಭಟ್ಕಳ ರವರು ದಿನಾಂಕ: 11-02-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 17/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಸುನೀಲ್ ತಂದೆ ಮಾಸ್ತಪ್ಪ ನಾಯ್ಕ, ಪ್ರಾಯ-24 ವರ್ಷ, ವೃತ್ತಿ-ವ್ಯಾಪಾರ, ಸಾ|| ಪುರವರ್ಗ, ಮುಗಳಿಹೊಂಡ, ತಾ: ಭಟ್ಕಳ. ನಮೂದಿತ ಆರೋಪಿತನು ದಿನಾಂಕ: 11-02-2021 ರಂದು 15-00 ಗಂಟೆಯ ಸಮಯಕ್ಕೆ ಭಟ್ಕಳದ ಅನ್ಫಾಲ್ ಸೂಪರ್ ಮಾರ್ಕೆಟ್ ಹಿಂದುಗಡೆ ಕೌಷಿಕ ಹೊಟೇಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ 01/- ರೂಪಾಯಿಗೆ 80/- ರೂಪಾಯಿ ಕೊಡುವ ಶರತ್ತಿನ ಮೇಲೆ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣದ ಪಂಥ ಕಟ್ಟಿಸಿ ಓ.ಸಿ ಜುಗಾರಾಟ ನಡೆಸುತ್ತಿದ್ದಾಗ ಓ.ಸಿ. ಚೀಟಿ-01, ಬಾಲ್ ಪೆನ್-01 ಹಾಗೂ ನಗದು ಹಣ 1,010/- ರೂಪಾಯಿಯೊಂದಿಗೆ ಆರೋಪಿತನು ಸ್ಥಳದಲ್ಲಿ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಎಚ್. ಬಿ. ಕುಡುಗುಂಟಿ, ಪಿ.ಎಸ್.ಐ (ಪ್ರಭಾರ), ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 11-02-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಜೊಯಿಡಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 09/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 28-11-2020 ರಂದು ರಾತ್ರಿ 00-30 ಗಂಟೆಯಿಂದ ಬೆಳಿಗ್ಗೆ 08-30 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯ ಮನೆಯ ಮುಂದಿನ ಅಂಗಳದಲ್ಲಿ ಇರುವ ಅಟ್ಟದಲ್ಲಿ ಒಣಗಿಸಲು ಹಾಕಿದ್ದ ಅಂದಾಜು 2.50 ಕ್ವಿಂಟಾಲ್ ಅಡಿಕೆ (ಅಂದಾಜು ಮೌಲ್ಯ 1,20,000/- ರೂಪಾಯಿ) ಯನ್ನು ಕಳುವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಗಜಾನನ ತಂದೆ ಸುಬ್ರಾಯ ಬಾಗವತ್, ಪ್ರಾಯ-47 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಬೆಡಸಗದ್ದೆ, ಪೋ: ಗುಂದ, ತಾ: ಜೊಯಿಡಾ ರವರು ದಿನಾಂಕ: 11-02-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 23/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರುಬಿನ್ ತಂದೆ ಬಸ್ತ್ಯಾಂವ್ ಸಿದ್ದಿ, ಪ್ರಾಯ-23 ವರ್ಷ, ವೃತ್ತಿ-ಚಾಲಕ, ಸಾ|| ಕೇಗದಾಳ, ಪೋ: ಬೊಮ್ಮನಹಳ್ಳಿ, ತಾ: ಹಳಿಯಾಳ, ಹಾಲಿ ಸಾ|| ದಾಂಡೇಲಿ (ಕಾರ್ ನಂ: ಕೆ.ಎ-53/ಎ-7354 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 10-02-2021 ರಂದು 17-00 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಅರಬೈಲ್ ಗ್ರಾಮದಲ್ಲಿ ಬೀರಗದ್ದೆ ದೇವಸ್ಧಾನ ಹತ್ತಿರ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಬಾಬ್ತು ಕಾರ್ ನಂ: ಕೆ.ಎ-53/ಎ-7354 ನೇದನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಮತ್ತು ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ತನ್ನ ವಾಹನವನ್ನು ನಿಯಂತ್ರಣದಲ್ಲಿಟ್ಟುಕೊಳ್ಳದೇ ಅದೇ ವೇಳೆ ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ತನ್ನ ರಸ್ತೆಯ ಸೈಡಿನಿಂದ ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-25/ಎಚ್.ಎ-8195 ನೇದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರನಾದ ಶ್ರೀ ಕೋಟೆಪ್ಪ ತಂದೆ ಷಣ್ಮುಖಪ್ಪ ಹೆಬ್ಬಾಳಿ, ಸಾ|| ತಬ್ಬಗಡವನಳ್ಳಿ, ತಾ: ಕಲಘಟಗಿ, ಜಿ: ಧಾರವಾಡ, ಹಾಲಿ ಸಾ|| ರವೀಂದ್ರನಗರ, ತಾ: ಯಲ್ಲಾಪುರ ಇವರ ತಲೆಗೆ, ಬಲಗೈ ಬೆರಳಿಗೆ ಹಾಗೂ ಮೈಕೈಗೆ ಗಾಯನೋವು ಪಡಿಸಿದ್ದಲ್ಲದೇ, ಮೋಟಾರ್ ಸೈಕಲ್ ಹಿಂಬದಿಯ ಸೀಟಿನಲ್ಲಿ ಕುಳಿತ ಸಾಕ್ಷಿದಾರ ಅಯ್ಯಪ್ಪ ತಂದೆ ಯಲ್ಲಪ್ಪ ಹಲಗಿ, ಸಾ|| ರವೀಂದ್ರನಗರ, ತಾ: ಯಲ್ಲಾಪುರ ಇವರಿಗೆ ಸೊಂಟದ ಹತ್ತಿರ ಮತ್ತು ಮೈಕೈಗೆ ಗಾಯನೋವು ಪಡಿಸಿ, ಎರಡು ವಾಹನಗಳನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಲಕ್ಷ್ಮೀಕಾಂತ ತಂದೆ ಶೇಖಪ್ಪ ಭೋವಿವಡ್ಡರ, ಪ್ರಾಯ-40 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ರವೀಂದ್ರನಗರ, ತಾ: ಯಲ್ಲಾಪುರ ರವರು ದಿನಾಂಕ: 11-02-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 14/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಗಣೇಶ ತಂದೆ ನಾಗಪ್ಪ ಪೂಜಾರಿ, ಪ್ರಾಯ-48 ವರ್ಷ, ವೃತ್ತಿ-ಕಿರಾಣಿ ವ್ಯಾಪಾರ, ಸಾ|| ಶಿವಳ್ಳಿ ಬಸ್ ನಿಲ್ದಾಣ ಹತ್ತಿರ, ಪೋ: ಬಪ್ಪನಳ್ಳಿ, ತಾ: ಶಿರಸಿ. ನಮೂದಿತ ಆರೋಪಿತನು ದಿನಾಂಕ: 11-02-2021 ರಂದು 16-00 ಗಂಟೆಯ ಸುಮಾರಿಗೆ ಶಿರಸಿ ತಾಲೂಕಿನ ಶಿವಳ್ಳಿ ಗ್ರಾಮದ ಆರೋಪಿತನಿಗೆ ಸೇರಿದ ತನ್ನ ಪಾನ್ ಬೀಡಾ ಮತ್ತು ಟೀ ಅಂಗಡಿಯ ಎದುರಿನಲ್ಲಿ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟ ಕಾಲಕ್ಕೆ ದಾಳಿ ಮಾಡಿ, ದಾಳಿಯ ಕಾಲಕ್ಕೆ 1). Hayward's Cheers Whisky ಹೆಸರಿನ 90 ML ಅಳತೆಯ ಪ್ಯಾಕೆಟ್ ಗಳು-15, ತಲಾ ಒಂದಕ್ಕೆ 35.13/- ರೂಪಾಯಿಯಂತೆ ಒಟ್ಟೂ ಅ||ಕಿ|| 526.95/- ರೂಪಾಯಿ, 2). Hayward's Cheers Whisky ಹೆಸರಿನ 90 ML ಅಳತೆಯ ಖಾಲಿ ಪ್ಯಾಕೆಟ್ ಗಳು-04, ಅ||ಕಿ|| 00.00/- ರೂಪಾಯಿ, 3). ಮದ್ಯಪಾನ ಕುಡಿಯಲು ಉಪಯೋಗಿಸಿದ Use & Through Plastic Glass-6, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನಂಜಾನಾಯ್ಕ್ ಎನ್, ಪಿ.ಎಸ್.ಐ, ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 11-02-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 16/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತ ಮಾದೇವ ತಂದೆ ಶಿವಪ್ಪ ಮಾನೆನವರ, ಪ್ರಾಯ-56 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ವಿವೇಕಾನಂದ ನಗರ, ತಾ: ಶಿರಸಿ. ನಮೂದಿತ ಆರೋಪಿತನು ದಿನಾಂಕ: 11-02-2021 ರಂದು 18-45 ಗಂಟೆಗೆ ಶಿರಸಿ ನಗರದ ಮರಾಠಿಕೊಪ್ಪ ಮುಖ್ಯ ರಸ್ತೆಯಲ್ಲಿ ಪುಟ್ಟನಮನೆ ರಸ್ತೆಯ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ ಅದೃಷ್ಟದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿದರೆ 01/- ರೂಪಾಯಿಗೆ 80/- ರೂಪಾಯಿ ಹಣವನ್ನು ಕೊಡುತ್ತೇನೆ ಅಂತಾ ಹೇಳಿ ಜನರಿಗೆ ಕರೆದು ಜನರಿಂದ ಹಣವನ್ನು ಅದೃಷ್ಟದ ಅಂಕೆ-ಸಂಖ್ಯೆಗಳ ಪಂಥವಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ಪಿರ್ಯಾದಿಯವರು ಪಂಚರು ಮತ್ತು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದಾಗ ಓ.ಸಿ ಮಟಕಾ ಜೂಗಾರಾಟದಿಂದ ಸಂಗ್ರಹವಾದ ನಗದು ಹಣ 1,210/- ರೂಪಾಯಿ ಹಾಗೂ ಓ.ಸಿ ಜೂಗರಾಟಕ್ಕೆ ಬಳಸಿದ ಅಂಕೆ-ಸಂಖ್ಯೆ ಬರೆದ ಚೀಟಿ-01, ಅಕಿ|| 00.00/- ರೂಪಾಯಿ ಮತ್ತು ಬಾಲ್ ಪೆನ್-01, ಅಕಿ|| 00.00/- ರೂಪಾಯಿ. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನಾಗಪ್ಪ, ಪಿ.ಎಸ್.ಐ, ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 11-02-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 24/2021, ಕಲಂ: 323, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಸುಭಾನಸಾಬ್ ತಂದೆ ನಬಿಸಾಬ್ ಹುಲಗೂರ, 2]. ಮೌಲಾಲಿ ತಂದೆ ನಬಿಸಾಬ್ ಹುಲಗೂರ, 3]. ಶ್ರೀಮತಿ ಫಾತಿಮಾಬಿ ಕೋಂ. ನಬಿಸಾಬ್ ಹುಲಗೂರ, 4]. ಶ್ರೀಮತಿ ಅಮ್ಮಾಜಾನ್ ಕೋಂ. ಅಬ್ದುಲ್ ತಡಸದ, ಸಾ|| (ಎಲ್ಲರೂ) ಹುಲಿಹೊಂಡಾ ಗ್ರಾಮ, ತಾ: ಮುಂಡಗೋಡ. ಈ ನಮೂದಿತ ಆರೋಪಿತರ ಅಜ್ಜಿಯಾದ ಶ್ರೀಮತಿ ಹಯಾತಬಿ ಹುಲಗೂರ ಇವರು ಸುಮಾರು 30 ವರ್ಷಗಳ ಹಿಂದೆ ಪಾಂಡಪ್ಪಾ ರಾಯ್ಕರ ಇವರಿಗೆ ಮಾರಾಟ ಮಾಡಿದ ಹೊಲದಲ್ಲಿನ ಕಲ್ಲಿನ ಗೋಡೆಯ ಸಂಬಂಧ ನಾಣು ಅವರಿಗೆ ಕೇಳಲು ಹೋದಾಗ ನನ್ನ ಮೇಲೆ ದ್ವೇಷ ಭಾವನೆ ಹೊಂದಿದ್ದ ಆರೋಪಿ 1 ಹಾಗೂ 2 ನೇಯವರು ಹಾಗೂ ಅವರ ತಾಯಿಯಾದ ಆರೋಪಿ 3 ನೇಯವರು ಮತ್ತು ಸಹೋದರಿಯಾದ ಆರೋಪಿ 4 ನೇಯವರುಗಳು ಸೇರಿ ನನಗೆ ಕೈಯಿಂದ ಮೈಮೇಲೆ ಹೊಡೆದು, ನನ್ನ ಕೊರಳಿಗೆ ಟವೆಲನ್ನು ಸುತ್ತಿ, ನನ್ನನ್ನು ನೆಲಕ್ಕೆ ಕೆಡವಿ ಕಾಲಿನಿಂದ ಒದ್ದು, ನನ್ನ ಎಡಬದಿಯ ಪಕ್ಕೆಲುಬಿಗೆ ಒಳನೋವು ಪಡಿಸಿದ್ದಲ್ಲದೇ, ನನ್ನ ಎಡಗೈಗೆ ರಕ್ತಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಮಕಬೂಲಸಾಬ್ ತಂದೆ ಯಾಕೂಬಸಾಬ್ ಹುಲಗೂರ, ಪ್ರಾಯ-62 ವರ್ಷ. ವೃತ್ತಿ-ರೈತಾಬಿ ಕೆಲಸ, ಸಾ|| ಹುಲಿಹೊಂಡಾ, ತಾ: ಮುಂಡಗೋಡ ರವರು ದಿನಾಂಕ: 11-02-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 26/2021, ಕಲಂ: 454, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 11-02-2021 ರಂದು ಬೆಳಿಗ್ಗೆ 11-00 ಗಂಟೆಯಿಂದ ಮಧ್ಯಾಹ್ನ 12-45 ಗಂಟೆಯ ನಡುವಿನ ಅವಧಿಯಲ್ಲಿ ಬೆಡಸಗಾಂವದಲ್ಲಿರುವ ತಮ್ಮ ಮನೆಯ ಮುಂದಿನ ಬಾಗಿಲಗೆ ಹಾಕಿದ ಬೀಗವನ್ನು ಮೀಟಿ ತೆಗೆದು ಮನೆಯ ಒಳ ಹೊಕ್ಕಿ ಮನೆಯ ಮಲಗುವ ಕೋಣೆಯ ಟ್ರೆಜರಿಯಲ್ಲಿಟ್ಟಿದ್ದ ಒಟ್ಟೂ 18 ಗ್ರಾಂ ತೂಕದ 81,000/- ರೂಪಾಯಿ ಬೆಲೆಬಾಳುವ ಬಂಗಾರದ ಆಭರಣಗಳನ್ನು ಹಾಗೂ 15 ಗ್ರಾಂ ತೂಕದ 2,000/- ರೂಪಾಯಿ ಬೆಲೆಬಾಳುವ ಬೆಳ್ಳಿಯ ಆಭರಣಗಳನ್ನು ಹಾಗೂ ನಗದು ಹಣ 25,000/- ರೂಪಾಯಿ ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಕೃಷ್ಣ ತಂದೆ ಚಾಳಪ್ಪ ನಾಯ್ಕ, ಪ್ರಾಯ-45 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಬೆಡಸಗಾಂವ ಗ್ರಾಮ, ತಾ: ಮುಂಡಗೋಡ ರವರು ದಿನಾಂಕ: 11-02-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 42/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಸುಭಾಷ ತಂದೆ ನಾರಾಯಣ ಗೌಡ, ಪ್ರಾಯ-39 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಜನಗಾ, ತಾ: ಹಳಿಯಾಳ. ನಮೂದಿತ ಆರೋಪಿತನು ದಿನಾಂಕ: 11-02-2021 ರಂದು 19-35 ಗಂಟೆಗೆ ಹಳಿಯಾಳ ಶಹರದ ಎಲ್.ಪಿ ಕ್ರಾಸ್ ಹತ್ತಿರ ಹಳಿಯಾಳ-ಮುರ್ಕವಾಡ ಡಾಂಬರ್ ರಸ್ತೆಯಲ್ಲಿ ಒಂದ ಹಳದಿ ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಅನಧೀಕೃತವಾಗಿ 1). 35/- ರೂಪಾಯಿ ಬೆಲೆಯ 90 ML ನ ORIGINAL CHOICE ಅಂತಾ ಲೇಬಲ್ ಇರುವ ಟೆಟ್ರಾ ಪ್ಯಾಕೆಟ್ ಗಳು-60, ಅ||ಕಿ|| 2,100/- ರೂಪಾಯಿ, 2). 55/- ರೂಪಾಯಿ ಬೆಲೆಯ 180 ML ನ DK FINE WHISKY ಅಂತಾ ಲೇಬಲ್ ಇರುವ ಟೆಟ್ರಾ ಪ್ಯಾಕೆಟ್ ಗಳು-42, ಅ||ಕಿ|| 2,310/- ರೂಪಾಯಿ. ಹೀಗೆ ಒಟ್ಟೂ 4,410/- ರೂಪಾಯಿ ಮೌಲ್ಯದ ಕರ್ನಾಟಕ ರಾಜ್ಯದಲ್ಲಿ ಮಾರಾಟಕ್ಕೆ ಮಾತ್ರ ಅಂತಾ ನಮೂದಿರುವ ಸರಾಯಿ ಟೆಟ್ರಾ ಪ್ಯಾಕೆಟ್ ಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಹೊತ್ತುಕೊಂಡು ಹೋಗುತ್ತಿದ್ದಾಗ ದಾಳಿ ಕಾಲಕ್ಕೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಯಲ್ಲಾಲಿಂಗ ಕುನ್ನೂರ, ಪಿ.ಎಸ್.ಐ (ಎಲ್&ಓ), ಹಳಿಯಾಳ ಪೊಲೀಸ್ ಠಾಣೆ ರವರು ದಿನಾಂಕ: 11-02-2021 ರಂದು 21-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 22/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಗುರುದಾಸ ತಂದೆ ವಿಠ್ಠಲ್ ದೊಂಡ, ಪ್ರಾಯ-54 ವರ್ಷ, ವೃತ್ತಿ-ಹೊಟೆಲ್ ವ್ಯಾಪಾರ, ಸಾ|| ಭಗತ್‍ಸಿಂಗ ಸರ್ಕಲ್, ಸಿದ್ದಾಪುರ ಶಹರ, 2]. ನಾರಾಯಣ ತಂದೆ ಕುಪ್ಪಣ್ಣ ಬೇಡರ್, ಅಂದಾಜು ಪ್ರಾಯ-52 ವರ್ಷ, ಸಾ|| ಎಲ್.ಬಿ ನಗರ, ಹೊಸೂರು, ಸಿದ್ದಾಪುರ ಶಹರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 10-02-2021 ರಂದು 18-00 ಗಂಟೆಗೆ ತನ್ನ ಅನ್ಯಾಯದ ಲಾಭಕ್ಕೋಸ್ಕರ ಸಿದ್ದಾಪುರ ಶಹರದ ಭಗತ್ ಸಿಂಗ್ ವೃತ್ತದ ವೈಭವ ಹೊಟೇಲ್ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಓ.ಸಿ ಮಟಕಾ ಜುಗಾರಾಟ ನಡೆಸುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ ಆರೋಪಿ 1 ನೇಯವನು 1). ನಗದು ಹಣ 1,100/- ರೂಪಾಯಿ, 2). ಒಂದು ಬಾಲ್ ಪೆನ್, 3). ಒಂದು ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿಯೊಂದಿಗೆ ಸಿಕ್ಕಿದ್ದು ಹಾಗೂ ಆರೋಪಿ 2 ನೇಯವನು ಆರೋಪಿ 1 ನೇಯವನು ಸಂಗ್ರಹಿಸುವ ಓ.ಸಿ ಮಟಕಾ ಜುಗಾರಾಟದ ಹಣವನ್ನು ಸ್ವೀಕರಿಸುವವನಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹೇಶ ಎನ್, ಪೊಲೀಸ್ ನಿರೀಕ್ಷಕರು, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 11-02-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 23/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ದತ್ತಾತ್ರೇಯ ತಂದೆ ಗಣಪತಿ ಹೆಗಡೆ, ಪ್ರಾಯ-45 ವರ್ಷ, ವೃತ್ತಿ-ಟಿ.ಎಸ್.ಎಸ್ ನಲ್ಲಿ ಸಹಾಯಕ ಕೆಲಸ, ಸಾ|| ಬಾಳಗೋಡ, ಪೋ: ವಂದಾನೆ, ತಾ: ಸಿದ್ದಾಪುರ. ನಮೂದಿತ ಆರೋಪಿತನು ದಿನಾಂಕ: 10-02-2021 ರಂದು ಸಂಜೆ 19-40 ಗಂಟೆಗೆ ಸಿದ್ದಾಪುರ ಶಹರದ ಎ.ಪಿ.ಎಮ್.ಸಿ ಗೇಟ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಓ.ಸಿ ಮಟಕಾ ಜುಗಾರಾಟದ ಅಂಕೆ-ಸಂಖ್ಯೆಗಳ ಮೇಲೆ ಜನರಿಂದ ಹಣವನ್ನು ಪಂಥವಾಗಿ ಕಟ್ಟಿಸಿಕೊಂಡು ಅವರಿಗೆ ಓ.ಸಿ ಮಟಕಾ ಜುಗಾರಾಟದ ಅಂಕೆ-ಸಂಖ್ಯೆಗಳ ಚೀಟಿಯನ್ನು ಬರೆದು ಕೊಟ್ಟು, ಓ.ಸಿ ಮಟಕಾ ಜುಗಾರಾಟ ನಡೆಸುತ್ತಿದ್ದಾಗ ದಾಳಿಯ ಕಾಲಕ್ಕೆ ಓ.ಸಿ ಜುಗಾರಾಟದ ಸಲಕರಣೆಗಳಾದ ಬಾಲ್ ಪೆನ್-1, ಓ.ಸಿ ಚೀಟಿ-1 ಮತ್ತು ನಗದು ಹಣ 560/- ರೂಪಾಯಿಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜುನಾಥ ಬಾರ್ಕಿ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 11-02-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಅಂಬಿಕಾನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 01/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಅರುಣ ತಂದೆ ಗೋವಿಂದ ಬಾಂದೇಕರ, ಪ್ರಾಯ-70 ವರ್ಷ, ವೃತ್ತಿ-ಕಿರಾಣಿ ಅಂಗಡಿ, ಸಾ|| ಕುಳಗಿ, ಅಂಬಿಕಾನಗರ, ದಾಂಡೇಲಿ. ನಮೂದಿತ ಆರೋಪಿತನು ದಿನಾಂಕ: 11-02-2021 ರಂದು ಬೆಳಿಗ್ಗೆ 07-00 ಗಂಟೆಗೆ ಕುಳಗಿ ಸರ್ಕಲ್ ಹತ್ತಿರ ತನ್ನ ಕಿರಾಣಿ ಅಂಗಡಿಯ ಮುಂದಿನ ಸಾರ್ವಜನಿಕ ರಸ್ತೆಯ ಪಕ್ಕದ ಕಟ್ಟೆಯ ಮೇಲೆ ಸರಾಯಿ ಪ್ಯಾಕೆಟ್ ಗಳನ್ನು ಕುಡಿಯಲು ಅನುವು ಮಾಡಿಕೊಡುತ್ತಿರುವಾಗ 180 ML ನ OLD TAVERN ವಿಸ್ಕಿ ಪ್ಯಾಕೆಟ್‍ ಗಳು-7, 180 ML ನ BAGPIPER ವಿಸ್ಕಿ ಪ್ಯಾಕೆಟ್‍ ಗಳು-5, 90 ML ನ BAGPIPER ವಿಸ್ಕಿ ಪ್ಯಾಕೆಟ್‍ ಗಳು-1 (ಒಟ್ಟೂ 1,206/- ರೂಪಾಯಿ) ಹಾಗೂ ಸ್ಟೀಲ್ ಗ್ಲಾಸ್-1. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಅನಿಲಕುಮಾರ ಟಿ. ನಾಯಕ, ಪಿ.ಎಸ್.ಐ, ಅಂಬಿಕಾನಗರ ಪೊಲೀಸ್ ಠಾಣೆ ರವರು ದಿನಾಂಕ: 11-02-2021 ರಂದು 21-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 11-02-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 08/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಬಾಬು ಆಚಾರಿ ಪ್ರಾಯ-ಸುಮಾರು 60-65 ವರ್ಷ, ಸಾ|| ಬಾಸಲ್, ತಾ: ಯಲ್ಲಾಪುರ (ಸರಿಯಾದ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ). ಈತನು ದಿನಾಂಕ: 03-02-2021 ರಂದು 10-30 ಗಂಟೆಗೆ ಅಂಕೋಲಾ ತಾಲೂಕಿನ ಹಿಲ್ಲೂರ ಕ್ರಾಸಿನ ಬಸ್ ನಿಲ್ದಾಣದಲ್ಲಿ ಮಲಗಿದ ಸ್ಥಿತಿಯಲ್ಲಿ ಪಿರ್ಯಾದಿಯವರಿಗೆ ಸಿಕ್ಕವನಿಗೆ 108 ಅಂಬ್ಯುಲೆನ್ಸ್ ಮುಖಾಂತರ ಅಂಕೋಲಾದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುತ್ತಾರೆ. ನಂತರ ಹೆಚ್ಚಿನ ಉಪಚಾರಕ್ಕೆ ಕಾರವಾರದ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದು, ದಿನಾಂಕ: 11-02-2021 ರಂದು ರಾತ್ರಿ 01-30 ಗಂಟೆಗೆ ತನಗಾದ ಅನಾರೋಗ್ಯದಿಂದ ಅಥವಾ ಇನ್ನಾವುದೋ ಕಾರಣದಿಂದ ಅಸ್ವಸ್ಥಗೊಂಡು ಮೃತಪಟ್ಟಿರುತ್ತಾನೆ. ಕಾರಣ ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸಂತೋಷ ತಂದೆ ನೂನಾ ತಳೇಕರ, ಪ್ರಾಯ-42 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹೆಬ್ಬುಳ, ಸುಂಕಸಾಳ, ತಾ: ಅಂಕೋಲಾ ರವರು ದಿನಾಂಕ: 11-02-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 12-02-2021 10:45 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080