ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 11-01-2022

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 03/2022, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶೇಖ್ ನೂರ್ ಅಹಮ್ಮದ್, ಪ್ರಾಯ-44 ವರ್ಷ, ಸಾ|| ಶಕ್ತಿ ನಗರ, ಎಮಿಗನೂರು, ಆಂಧ್ರಪ್ರದೇಶ ರಾಜ್ಯ (ಕಾರ್ ನಂ: ಎ.ಪಿ-21/ಎ.ಎಕ್ಸ್-7449 ನೇದರ ಚಾಲಕ). ಈತನು ತನ್ನ ಕಾರ್ ನಂ: ಎ.ಪಿ-21/ಎ.ಎಕ್ಸ್-7449ನೇದನ್ನು ದಿನಾಂಕ: 11-01-2022 ರಂದು ಮಧ್ಯಾಹ್ನ 14-30 ಗಂಟೆಗೆ ಅಂಕೋಲಾ ತಾಲೂಕಿನ ಹೆಬ್ಬುಳ್ಳ ಗ್ರಾಮದಲ್ಲಿ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ಡಾಂಬರ್ ರಸ್ತೆಯಲ್ಲಿ ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ, ಯಾವುದೋ ಲಾರಿಯ ಚಾಲಕನು ತನ್ನ ಲಾರಿಯನ್ನು ಒಂದು ವಾಹನವನ್ನು ಓವರಟೇಕ್ ಮಾಡಿಕೊಂಡು ಎದುರಿಗೆ ಬಂದವನಿಗೆ, ಆರೋಪಿ ಕಾರ್ ಚಾಲಕನು ಅದನ್ನು ತಪ್ಪಿಸಲು ಹೋಗಿ ತನ್ನ ಕಾರಿನ ಚಾಲನೆಯ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ಹೋಗಿ, ರಸ್ತೆಯ ಎಡಬದಿಯ ಕಚ್ಚಾ ರಸ್ತೆಯ ಮೇಲಿದ್ದ ಕೆ.ಇ.ಬಿ ಲೈನ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ರವಿಪ್ರಕಾಶ ತಂದೆ ನಾಗೇಶ್ವರರಾವ್ ಬಿ. ಕೆ, ಪ್ರಾಯ-44 ವರ್ಷ, ವೃತ್ತಿ-ಪುರೋಹಿತ, ಸಾ|| ಮುಗತಿಪೇಟಾ ಗ್ರಾಮ, ಎಮ್ಮಿಗನೂರು, ಮಂಡಲ್, ಕರ್ನೂಲ್, ಆಂಧ್ರ ಪ್ರದೇಶ ರಾಜ್ಯ ರವರು ದಿನಾಂಕ: 11-01-2022 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 01/2022, ಕಲಂ: ಹೆಂಗಸು ಮತ್ತು ಮಕ್ಕಳು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದವರು 1]. ಶ್ರೀಮತಿ ರೇಖಾ ಕೋಂ. ಮಂಜುನಾಥ ಮುಕ್ರಿ, ಪ್ರಾಯ-23 ವರ್ಷ, 2]. ಕು: ಚಿನ್ಮಯ ತಂದೆ ಮಂಜುನಾಥ ಮುಕ್ರಿ, ಪ್ರಾಯ-07 ವರ್ಷ, 3]. ಕು: ಸಿಂಚನಾ ತಂದೆ ಮಂಜುನಾಥ ಮುಕ್ರಿ, ಪ್ರಾಯ-05 ವರ್ಷ, ಸಾ|| (ಎಲ್ಲರೂ) ಬೇಲೆಖಾನ್, ಗೋಕರ್ಣ, ತಾ: ಕುಮಟಾ. ಪಿಯಾದಿಯವರ ಮಗಳಾದ ಶ್ರೀಮತಿ ರೇಖಾ ಕೋಂ. ಮಂಜುನಾಥ ಮುಕ್ರಿ ಇವಳು ಪಿರ್ಯಾದಿಯ ಮನೆ ಬೇಲೆಖಾನ್ ದಲ್ಲಿದ್ದವಳು, ದಿನಾಂಕ: 08-01-2022 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ಮನೆಯಿಂದ ತನ್ನ ಮಕ್ಕಳಾದ ಕು: ಚಿನ್ಮಯ ತಂದೆ ಮಂಜುನಾಥ ಮುಕ್ರಿ ಹಾಗೂ ಕು: ಸಿಂಚನಾ ತಂದೆ ಮಂಜುನಾಥ ಮುಕ್ರಿ ಇವರನ್ನು ಕರೆದುಕೊಂಡು ‘ಮಕ್ಕಳ ಐಡಿ ಕಾರ್ಡ್ ಮಾಡಿಸಲು ತದಡಿಗೆ ಹೋಗಿ ಬರುತ್ತೇನೆ’ ಅಂತಾ ಹೇಳಿ ಮಕ್ಕಳನ್ನು ತನ್ನ ಸಂಗಡ ಕರೆದುಕೊಂಡು ಹೋದವಳು, ವಾಪಸ್ ಮನೆಗೆ ಬರದೇ ಎಲ್ಲಿಯೋ ಹೋಗಿರುತ್ತಾರೆ. ಸದ್ರಿ ಕಾಣೆಯಾದ ನನ್ನ ಮಗಳು ಹಾಗೂ ಮೊಮ್ಮಕ್ಕಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಬಲಿಯಮ್ಮ ಕೋಂ. ದಿ: ಬೀರಾ ಮುಕ್ರಿ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬೇಲೆಖಾನ್, ಗೋಕರ್ಣ, ತಾ: ಕುಮಟಾ ರವರು ದಿನಾಂಕ: 11-01-2022 ರಂದು 11-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 05/2022, ಕಲಂ: 279, 337, 323, 504 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಾಗರಾಜ ತಂದೆ ಕುಪ್ಪ ಹರಿಕಂತ್ರ, ಪ್ರಾಯ-32 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಮನಾಲಿ ಗಾರ್ಡನ್, ಮುರ್ಡೇಶ್ವರ, ತಾ: ಭಟ್ಕಳ (ಮೋಟಾರ್ ಸೈಕಲ್ ನಂ: ಕೆ.ಎ-47/ಆರ್-2841 ನೇದರ ಚಾಲಕ). ಪಿರ್ಯಾದಿಯು ದಿನಾಂಕ: 11-01-2021 ರಂದು ತನ್ನ ಆಟೋ ರಿಕ್ಷಾ ನಂ: ಕೆ.ಎ-47/4219 ನೇದರಲ್ಲಿ ಮುರ್ಡೇಶ್ವರದ ಓಲಗ ಮಂಟಪದ ಹತ್ತಿರದಿಂದ ಪ್ರಯಾಣಿಕನನ್ನು ಕರೆದುಕೊಂಡು ಆಚಾರಿಕೇರಿ ಕಡೆಗೆ ಹೊರಟಿದ್ದು, ಮುರ್ಡೇಶ್ವರದ ಐಕ್ಯೆ ವೈನ್ ಶಾಪ್ ಹತ್ತಿರ ಹೋಗುತ್ತಿದ್ದಂತೆ ಆಟೋದಲ್ಲಿದ್ದ ಪ್ರಯಾಣಿಕನು ತನ್ನ ಮೊಬೈಲ್ ರಿಪೇರಿಗಾಗಿ ಮೊಬೈಲ್ ಅಂಗಡಿಗೆ ಹೋಗಬೇಕು ಅಂತಾ ಹೇಳಿದ್ದರಿಂದ ಪಿರ್ಯಾದಿಯು ಆಟೋವನ್ನು ನಿಧಾನ ಮಾಡಿ, ಎಕ್ಸಿಸ್ ಬ್ಯಾಂಕ್ ಎ.ಟಿ.ಎಮ್ ಪಕ್ಕದಲ್ಲಿದ್ದ ಮೊಬೈಲ್ ಅಂಗಡಿಗೆ ಹೋಗಲು ಇಂಡಿಕೇಟರ್ ಸಿಗ್ನಲ್ ನೀಡಿ, ಆಟೋವನ್ನು ಬಲಬದಿಗೆ ತೆಗೆದುಕೊಂಡಾಗ 21-00 ಗಂಟೆಗೆ ನಮೂದಿತ ಆರೋಪಿತನು ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಆರ್-2841 ನೇದನ್ನು ಮುರ್ಡೇಶ್ವರ ನಾಕಾ ಕಡೆಯಿಂದ ಮುರ್ಡೇಶ್ವರ ಪೇಟೆ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಪಿರ್ಯಾದಿಯ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ತಾನು ಕೆಳಗೆ ಬಿದ್ದು ಮೈಕೈಗೆ ತೆರಚಿದ ಗಾಯನೋವು ಮಾಡಿಕೊಂಡಿದ್ದು, ಪಿರ್ಯಾದಿಯು ಆರೋಪಿತನಿಗೆ ‘ನಿಧಾನವಾಗಿ ಬರಬಾರದೇ?’ ಅಂತಾ ಕೇಳಲಾಗಿ, ಆರೋಪಿತನು ಪಿರ್ಯಾದಿಯನ್ನು ಉದ್ದೇಶಿಸಿ ‘ಸೂಳೆ ಮಗನೇ, ಬೋಳಿ ಮಗನೇ, ಏನ್ ಗಾಡಿ ಚಲಾಯಿಸುತ್ತಿ?’ ಅಂತಾ ಅವಚ್ಯವಾಗಿ ಬೈಯ್ದು, ಕೈಯಿಂದ ಎಡಬದಿಯ ಕಿವಿಯ ಹತ್ತಿರ ಹೊಡೆದು ದುಃಖಾಪತ್ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಮಾರುತಿ ತಂದೆ ಮಾದೇವ ನಾಯ್ಕ, ಪ್ರಾಯ-31 ವರ್ಷ, ವೃತ್ತಿ-ರಿಕ್ಷಾ ಚಾಲಕ, ಸಾ|| ಗುಮ್ಮನಹಕ್ಲು, ಮಾವಳ್ಳಿ-2, ಮುರ್ಡೇಶ್ವರ, ತಾ: ಭಟ್ಕಳ ರವರು ದಿನಾಂಕ: 11-01-2022 ರಂದು 22-40 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 05/2022, ಕಲಂ: 78(3) ಕರ್ನಾಟಕ ಪೊಲೀಸ್ ಕಾಯ್ದೆ-1963 ನೇದ್ದರ ವಿವರ...... ನಮೂದಿತ ಆರೋಪಿತ ದಾಮೋದರ ತಂದೆ ಅಶೋಕ ಗಾಯತೊಂಡೆ, ಪ್ರಾಯ-37 ವರ್ಷ, ವೃತ್ತಿ-ಪಾನ್ ಅಂಗಡಿ, ಸಾ|| ಅಂಬಾಗಿರಿ, 1 ನೇ ಅಡ್ಡ ರಸ್ತೆ, ತಾ: ಶಿರಸಿ. ಈತನು ದಿನಾಂಕ: 11-01-2022 ರಂದು 18-45 ಗಂಟೆಯ ಸುಮಾರಿಗೆ ಶಿರಸಿ ಶಹರದ ಶಿವಾಜಿ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಓ.ಸಿ ಮಟಕಾ ಜುಗಾರಾಟ ನಡೆಸುತ್ತಿರುವಾಗ ಓ.ಸಿ ಮಟಕಾ ಜುಗಾರಾಟದ ಸಲಕರಣೆಗಳಾದ ನಗದು ಹಣ ಒಟ್ಟೂ 1,060/- ರೂಪಾಯಿ, ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-01, ಬಾಲ್ ಪೆನ್-01 ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಜಕುಮಾರ ಎಸ್. ಉಕ್ಕಲಿ, ಪಿ.ಎಸ್.ಐ (ಕಾ&ಸು), ಶಿರಸಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 11-01-2022 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 11-01-2022

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 03/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ವಿಶ್ವ ತಂದೆ ವಿಠ್ಠಲ ಮೇಸ್ತಾ, ಪ್ರಾಯ-37 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಉದ್ಯಮನಗರ, ತಾ: ಹೊನ್ನಾವರ. ಪಿರ್ಯಾದಿಯ ಅಣ್ಣನಾದ ಈತನು ವಿಪರೀತ ಸರಾಯಿ ಕುಡಿಯುವ ಚಟದವನಿದ್ದು, ದಿನಾಂಕ: 09-01-2022 ರಂದು 14-00 ಗಂಟೆಯಿಂದ ದಿನಾಂಕ: 11-01-2022 ರಂದು ಬೆಳಿಗ್ಗೆ 06-00 ಗಂಟೆಯ ನಡುವಿನ ಅವಧಿಯಲ್ಲಿ ಮೀನು ಹಿಡಿಯಲು ಹೋದವನು, ಅಕಸ್ಮಾತ್ ಆಗಿ ಆಯ ತಪ್ಪಿ ಶರಾವತಿ ನದಿಯ ನೀರಿನಲ್ಲಿ ಬಿದ್ದು ಮುಳುಗಿ ಮೃತಪಟ್ಟಿದ್ದು, ಮೃತದೇಹವು ಕಾಸರಕೋಡದ ಟೊಂಕಾ ಹತ್ತಿರ ಶರಾವತಿ ನದಿಯಲ್ಲಿ ಇರುತ್ತದೆ. ಇದರ ಹ್ರೆರತು ಮೃತನ ಸಾವಿನಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸಂತೋಷ ತಂದೆ ವಿಠ್ಠಲ ಮೇಸ್ತಾ, ಪ್ರಾಯ-35 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಉದ್ಯಮನಗರ, ತಾ: ಹೊನ್ನಾವರ ರವರು ದಿನಾಂಕ: 11-01-2022 ರಂದು 08-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 01/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ನಾಗರಾಜ ತಂದೆ ಭರಮಾಜಿ ಮರಾಠೆ, ಪ್ರಾಯ-47 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ತಾನಾಜಿ ಗಲ್ಲಿ, ಹಳಿಯಾಳ ಶಹರ. ಪಿರ್ಯಾದಿಯವರ ತಮ್ಮನಾದ ಈತನು ದಿನಾಂಕ: 07-01-2022 ರಂದು ರಾತ್ರಿ 08-00 ಗಂಟೆಯ ಸುಮಾರಿಗೆ ಹಳಿಯಾಳ ಶಹರದ ಗೌಳಿ ಗಲ್ಲಿಯಲ್ಲಿ ನಡೆದುಕೊಂಡು ತನ್ನ ಮನೆಗೆ ನಡದುಕೊಂಡು ಹೋಗುತ್ತಿದ್ದಾಗ ಪಿಡ್ಸ್ ಕಾಯಿಲೆ ಬಂದು ಡಾಂಬರ್ ರಸ್ತೆಯ ಮೇಲೆ ಬಿದ್ದು ತಲೆಗೆ ಗಾಯನೋವು ಪಡಿಸಿಕೊಂಡವನಿಗೆ ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಉಪಚಾರವನ್ನು ಕೊಡಿಸಿ, ಹೆಚ್ಚಿನ ಉಪಚಾರಕ್ಕಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದವನಿಗೆ ಉಪಚಾರ ಫಲಕಾರಿಯಾಗದೇ ದಿನಾಂಕ: 10-01-2022 ರಂದು ರಾತ್ರಿ 10-00 ಗಂಟೆಗೆ ಮೃತಪಟ್ಟಿರುತ್ತಾನೆ. ಇದರ ಹೊರತು ಮೃತನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಕೊಂಡು ಮೃತದೇಹ ಬಿಟ್ಟುಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶಿವಾಜಿ ತಂದೆ ಭರಮಾಜಿ ಮರಾಠೆ, ಪ್ರಾಯ-55 ವರ್ಷ, ವೃತ್ತಿ-ಹೊಲಮನಿ ಕೆಲಸ, ಸಾ|| ಗೌಳಿ ಗಲ್ಲಿ, ಹಳಿಯಾಳ ಶಹರ ರವರು ದಿನಾಂಕ: 11-01-2022 ರಂದು 09-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 19-01-2022 05:22 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080