ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 11-07-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 106/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಯೋಗೇಂದ್ರ ತಂದೆ ವಾಸುರಾವ್ ಉಡುಪಿ, ಪ್ರಾಯ-30 ವರ್ಷ, ಸಾ|| ಓ.ಬಿ.ಸಿ ಬ್ಯಾಂಕ್ ಹತ್ತಿರ, ಬಾಗಲಕೋಟೆ (ಕಾರ್ ನಂ: ಕೆ.ಎ-29/ಎನ್-6417 ನೇದರ ಚಾಲಕ). ಈತನು ದಿನಾಂಕ: 11-07-2021 ರಂದು 17-30 ಗಂಟೆಗೆ ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ತನ್ನ ಕಾರ್ ನಂ: ಕೆ.ಎ-29/ಎನ್-6417 ನೇದನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅಂಕೋಲಾ ತಾಲೂಕಿನ ವಜ್ರಳ್ಳಿ ಗ್ರಾಮದ ಕಳಸದಮಕ್ಕಿ ಕ್ರಾಸ್ ಹತ್ತಿರ ತನ್ನ ಮುಂದಿನಿಂದ ಹೋಗುತ್ತಿದ್ದ ಪಿರ್ಯಾದಿಯವರ ಕಾರ್ ನಂ: ಕೆ.ಎ-01/ಜಿ-6351 ನೇದಕ್ಕೆ ಹಿಂದಿನಿಂದ ಅಪಘಾತ ಪಡಿಸಿದ್ದರಿಂದ ಅದು ಅದರ ಮುಂದಿನಿಂದ ಪೈಲೆಟ್ ಆಗಿ ಹೋಗುತ್ತಿದ್ದ ಪೊಲೀಸ್ ವಾಹನ ನಂ: ಕೆ.ಎ-30/ಜಿ-0550 ನೇದರ ಹಿಂಬದಿಗೆ ಹೋಗಿ ತಾಗಿರುತ್ತದೆ. ಈ ಅಪಘಾತದಿಂದ ಮೂರು ವಾಹನದಲ್ಲಿದ್ದವರಿಗೆ ಯಾವುದೇ ಗಾಯನೋವು ಆಗಿರುವುದಿಲ್ಲ ಹಾಗೂ ಅಪಘಾತ ಪಡಿಸಿದ ಕಾರ್ ನಂ: ಕೆ.ಎ-29/ಎನ್-6417 ನೇದರ ಆರೋಪಿ ಚಾಲಕನ ಮೇಲೆ ಕಾನೂನಿನಂತೆ ಸೂಕ್ತ ಕ್ರಮ ಕೈಗೊಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪ್ರಶಾಂತ ತಂದೆ ರವೀಂದ್ರ ಪವಾರ, ಪ್ರಾಯ-38 ವರ್ಷ, ವೃತ್ತಿ-ಕಾರ ಚಾಲಕ, ಸಾ|| ಮನೆ ನಂ: ಸಿ-4/3, ಕರ್ನಾಟಕ ಉಚ್ಛ ನ್ಯಾಯಾಲಯ ವಸತಿ ಗೃಹ, ಧಾರವಾಡ ರವರು ದಿನಾಂಕ: 11-07-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 133/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹೇಶ ತಂದೆ ಮಾದೇವ ನಾಯ್ಕ, ಪ್ರಾಯ-29 ವರ್ಷ, ವೃತ್ತಿ-ಚಾಲಕ, ಸಾ|| ಹಳದೀಪುರ, ತಾ: ಹೊನ್ನಾವರ (ಬೊಲೆರೋ ಪಿಕ್‍ಅಫ್ ವಾಹನ ನಂ: ಕೆ.ಎ-47/ಎ-0130 ನೇದರ ಚಾಲಕ). ಈತನು ದಿನಾಂಕ: 11-07-2021 ರಂದು 14-15 ಗಂಟೆಗೆ ತಾನು ಚಲಾಯಿಸುತ್ತಿದ್ದ ಬೊಲೆರೋ ಪಿಕ್ಅಫ್ ವಾಹನ ನಂ: ಕೆ.ಎ-47/ಎ-0130 ನೇದನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ನೇದರ ಮೇಲಾಗಿ ಮಿರ್ಜಾನ ಕಡೆಯಿಂದ ಕುಮಟಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ಬಲಕ್ಕೆ ಚಲಾಯಿಸಿ ತನ್ನ ಎದುರಿನಿಂದ ಅಂದರೆ ಕುಮಟಾ ಕಡೆಯಿಂದ ಮಿರ್ಜಾನ ಕಡೆಗೆ ಹೋಗುತ್ತಿದ್ದ ಇನ್ನು ನಂಬರ್ ಬರೆಸದ ಹೊಸದಾದ ಟಿ.ವಿ.ಎಸ್ ಕಂಪನಿಯ ಮೋಟಾರ್ ಸೈಕಲ್ (ಇಂಜಿನ್ ನಂ: CK2CM1803843 ಮತ್ತು ಚೆಸಿಸ್ ನಂ: CK2CM1803843) ನೇದಕ್ಕೆ ಎದುರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರನಾದ ಪಿರ್ಯಾದಿಯವರ ಬಲಗಾಲ ಮೊಣಗಂಟಿನ ಕೆಳ ಭಾಗದಲ್ಲಿ ಮುರಿದಿದ್ದು ಮತ್ತು ಬಲಗಣ್ಣಿನ ಹತ್ತಿರ ಗಾಯ ಪಡಿಸಿ, ಭಾರೀ ಗಾಯವಾಗಲು ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ನಾರಾಯಣ ತಂದೆ ಸುಬ್ರಾಯ ಭಟ್, ಪ್ರಾಯ-42 ವರ್ಷ, ವೃತ್ತಿ-ಪುರೋಹಿತ ಕೆಲಸ ಜೊತೆಗೆ ರೈತಾಬಿ ಕೆಲಸ, ಸಾ|| ಬರಗದ್ದೆ, ತಾ: ಕುಮಟಾ ರವರು ದಿನಾಂಕ: 11-07-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 187/2021, ಕಲಂ: ಹೆಂಗಸು ಮತ್ತು ಮಕ್ಕಳು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದವರು 1]. ಶ್ರೀಮತಿ ಶ್ಯಾಮಲಾ ಕೋಂ. ಕುಮಾರ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಬಡ್ನಕೋಡ, ಹೆರಾವಲಿ, ತಾ: ಹೊನ್ನಾವರ, 2]. ಕುಮಾರ: ರಜತ ತಂದೆ ಕುಮಾರ ನಾಯ್ಕ, ಪ್ರಾಯ-14 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಬಡ್ನಕೋಡ, ಹೆರಾವಲಿ, ತಾ: ಹೊನ್ನಾವರ, 3]. ಕುಮಾರಿ: ಕವಿತಾ ತಂದೆ ಕುಮಾರ ನಾಯ್ಕ, ಪ್ರಾಯ-07 ವರ್ಷ, ವೃತ್ತಿ-ವಿದ್ಯಾರ್ಥಿ ಸಾ|| ಬಡ್ನಕೋಡ, ಹೆರಾವಲಿ, ತಾ: ಹೊನ್ನಾವರ. ಪಿರ್ಯಾದಿಯ ಹೆಂಡತಿಯಾದ ಶ್ರೀಮತಿ ಶ್ಯಾಮಲಾ ಕೋಂ. ಕುಮಾರ ನಾಯ್ಕ ಹಾಗೂ ಮಕ್ಕಳಾದ ರಜತ ತಂದೆ ಕುಮಾರ ನಾಯ್ಕ ಹಾಗೂ ಕವಿತಾ ತಂದೆ ಕುಮಾರ ನಾಯ್ಕ ರವರು ದಿನಾಂಕ: 10-07-2021 ರಂದು ಬೆಳಗ್ಗೆ 10-00 ಗಂಟೆಯಿಂದ 13-30 ಗಂಟೆಯ ನಡುವಿನ ಅವಧಿಯಲ್ಲಿ ಹೆರಾವಲಿಯಲ್ಲಿರುವ ತನ್ನ ಮನೆಯಿಂದ ತನ್ನ ಹೆಂಡತಿಯ ತವರು ಮನೆಯಾದ ಕುಮಟಾದ ಹರೀಟಾ ಗ್ರಾಮಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ತವರು ಮನೆಗೂ ಹೊಗದೇ, ಈವರೆಗೂ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಹೆಂಡತಿ ಮಕ್ಕಳನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಕುಮಾರ ತಂದೆ ಗಣಪತಿ ನಾಯ್ಕ, ಪ್ರಾಯ-44 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಬಡ್ನಕೋಡ, ಹೆರಾವಲಿ, ತಾ: ಹೊನ್ನಾವರ ರವರು ದಿನಾಂಕ: 11-07-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 188/2021, ಕಲಂ: 302, 201 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಕೃಷ್ಣ ತಂದೆ ಶಂಕರ ಮೇಸ್ತಾ, ಪ್ರಾಯ-25 ವರ್ಷ, ಸಾ|| ಚರ್ಚ್ ರೋಡ್, ತಾ: ಹೊನ್ನಾವರ. ಈತನು ಪಿರ್ಯಾದಿಯ ಹಿರಿಯ ಮಗನಿದ್ದು, ಸದ್ರಿಯವನು ಸರಿಯಾಗಿ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ತಿಂದುಂಡು ಓಡಾಡಿಕೊಂಡಿದ್ದರಿಂದ ಆತನಿಗೆ ‘ಸರಿಯಾಗಿ ಕೆಲಸಕ್ಕೆ ಹೋಗು. ಮನೆಯಲ್ಲಿ ಹೆಂಗಸರಂತೆ ಕುಂತು ತಿನ್ನುವುದು ಸರಿಯಲ್ಲ’ ಅಂತಾ ಆತನ ತಮ್ಮ ಅರ್ಜುನ ಈತನು ಈ ಹಿಂದೆ ಹೇಳುತ್ತಿದ್ದಾಗ ಆರೋಪಿತನು ತನ್ನ ತಮ್ಮ ಅರ್ಜುನ ಮೇಸ್ತಾ ಈತನೊಂದಿಗೆ ಜಗಳ ಮಾಡುತ್ತಿದ್ದುದಲ್ಲದೇ ‘ನನಗೆ ಬುದ್ದಿ ಹೇಳಲು ಬಂದರೆ ನಿನ್ನನ್ನು ಸಾಯಿಸಿ ಬಿಡುತ್ತೇನೆ’ ಅಂತಾ ಬೆದರಿಕೆ ಹಾಕುತ್ತಿದ್ದವನು, ದಿನಾಂಕ: 11-07-2021 ರಂದು ಬೆಳಿಗ್ಗೆ 09-00 ಗಂಟೆಯ ಸುಮಾರಿಗೆ ಪಿರ್ಯಾದುದಾರರು ಹೊಟೇಲ್ ಕೆಲಸಕ್ಕೆ ಹೋಗುವಾಗ ಪಿರ್ಯಾದಿಯ ಮಕ್ಕಳಾದ ಅರ್ಜುನ್ ಹಾಗೂ ಕೃಷ್ಣ ಇವರು ಮನೆಯಲ್ಲಿ ಇದ್ದು, ಪಿರ್ಯಾದಿಯವರು ಸಂಜೆ 07-30 ಗಂಟೆಯ ಸುಮಾರಿಗೆ ಹೊಟೇಲ್ ಕೆಲಸ ಮುಗಿಸಿಕೊಂಡು ವಾಪಸ್ ಮನೆಗೆ ಬಂದಾಗ ಮನೆಗೆ ಬೀಗ ಹಾಕಿದ್ದನ್ನು ನೋಡಿ ತಮ್ಮ ಮನೆಯ ಮಾಲೀಕರಾದ ಶ್ರೀಮತಿ ತ್ರೀಜಾ ಇನಾಸ್ ಪಿಂಟೋ ಇವರಿಂದ ಕೃಷ್ಣನಿಗೆ ಪೋನ್ ಮಾಡಿಸಿ ಚಾವಿ ತರಲು ಹೇಳಿದಾಗ, ಆರೋಪಿ ಕೃಷ್ಣ ಈತನು ‘ಮನೆಯ ಬೀಗವನ್ನು ಅರ್ಜುನನು ಹಾಕಿಕೊಂಡು ಕೇರಳ ಕಡೆಗೆ ಕೆಲಸಕ್ಕೆ ಹೋಗಿದ್ದಾನೆ’ ಅಂತಾ ಸುಳ್ಳು ಹೇಳಿದ್ದಲ್ಲದೇ, ಪಿರ್ಯಾದಿಯವರಿಗೆ ಅಜ್ಜಿ ಮನೆಗೆ ಹೋಗಿ ಮಲಗಿಕೊಳ್ಳುವಂತೆ ಹೇಳಿ ಪೋನ್ ಕಟ್ ಮಾಡಿದ್ದರಿಂದ ಪಿರ್ಯಾದುದಾರರು ಮಕ್ಕಳು ಚಾವಿ ತೆಗೆದುಕೊಂಡು ಮನೆಗೆ ಬರಬಹುದು ಅಂತಾ ರಾತ್ರಿ 09-00 ಗಂಟೆವರೆಗೆ ಶ್ರೀಮತಿ ತ್ರಿಜಾ ಇನಾಸ್ ಪಿಂಟೋ ಇವರ ಮನೆಯಲ್ಲಿ ಕುಳಿತು ಕಾದರೂ ಸಹ ಮಕ್ಕಳು ಬರದೇ ಇದ್ದುದರಿಂದ ತಮ್ಮ ಪಕ್ಕದ ಮನೆಯ ವೆಂಕಟೇಶ ಮೇಸ್ತಾ ಇವರ ಸಹಾಯದಿಂದ ಮನೆ ಬೀಗವನ್ನು ಮುರಿದು ರಾತ್ರಿ 09-15 ಗಂಟೆಗೆ ಮನೆಯ ಒಳಗೆ ಹೋಗಿ ನೋಡಲಾಗಿ ಆರೋಪಿತನು ಯಾವುದೋ ಆಯುಧದಿಂದ ತನ್ನ ತಮ್ಮನಾದ ಅರ್ಜುನ ತಂದೆ ಶಂಕರ ಮೇಸ್ತಾ, ಪ್ರಾಯ-23 ವರ್ಷ, ಈತನ ತಲೆಗೆ ಹೊಡೆದು ಭಾರೀ ರಕ್ತಗಾಯ ಪಡಿಸಿ ಕೊಲೆ ಮಾಡಿ, ಆರೋಪಿತನು ಮನೆಗೆ ಬೀಗ ಹಾಕಿಕೊಂಡು ಪರಾರಿಯಾದ ಬಗ್ಗೆ ಪಿರ್ಯಾದಿ ಶ್ರೀಮತಿ ತಾರಾ ಕೋಂ. ಲೇಟ್ ಶಂಕರ ಮೇಸ್ತಾ, ಪ್ರಾಯ-45 ವರ್ಷ, ವೃತ್ತಿ-ಹೊಟೇಲ್ ಕೆಲಸ, ಸಾ|| ಚರ್ಚ ರಸ್ತೆ, ತಾ: ಹೊನ್ನಾವರ ರವರು ದಿನಾಂಕ: 11-07-2021 ರಂದು 22-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 63/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಈಶ್ವರ ತಂದೆ ಅಣ್ಣಪ್ಪ ಮೊಗೇರ, ಪ್ರಾಯ-50 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಮಠದಹಿತ್ಲ, ಕಾಯ್ಕಿಣಿ ಪೋ, ತಾ: ಭಟ್ಕಳ (ಹೀರೋ ಸೂಪರ್ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂ: ಕೆ.ಎ-47/ಕ್ಯೂ-0425 ನೇದರ ಸವಾರ). ದಿನಾಂಕ: 10-07-2021 ರಂದು ರಾತ್ರಿ ಪಿರ್ಯಾದಿಯ ತಂದೆಯಾದ ಶ್ರೀ ವಿನೋದ ತಂದೆ ದಯಾನಂದ ಜೈವಂತ, ಸಾ|| ಜನತಾ ಕಾಲೋನಿ, ಮಾವಳ್ಳಿ-01. ಮುರ್ಡೇಶ್ವರ, ತಾ: ಭಟ್ಕಳ ಇವರು ಪಿರ್ಯಾದಿಯನ್ನು ತನ್ನ ಹೋಂಡಾ ಎಕ್ಟಿವ್ ಮೋಟಾರ್ ಸೈಕಲ್ ನಂ: ಕೆ.ಎ-31/ಎಸ್-7013 ನೇದರಲ್ಲಿ ಹಿಂಬದಿಯ ಸೀಟಿನಲ್ಲಿ ಕೂಡ್ರಿಸಿಕೊಂಡು ಭಟ್ಕಳ ತಾಲೂಕಿನ ಗೊರಟೆಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಮುರ್ಡೇಶ್ವರದಿಂದ ಭಟ್ಕಳ ಕಡೆಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಹೋಗುತ್ತಿದ್ದಾಗ, ಬಸ್ತಿಯಿಂದ ಆರೋಪಿ ಸವಾರನು ಸಹ ತನ್ನ ಹೀರೋ ಸೂಪರ್ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂ: ಕೆ.ಎ-47/ಕ್ಯೂ-0425 ನೇದನ್ನು ಚಲಾಯಿಸಿಕೊಂಡು ಪಿರ್ಯಾದಿಯವರೊಂದಿಗೆ ಸೇರಿ ಭಟ್ಕಳ ಕಡೆಗೆ ಶ್ರೀ ವಿನೋದ ತಂದೆ ದಯಾನಂದ ಜೈವಂತ ಇವರ ಮೋಟಾರ್ ಸೈಕಲ್ ಹಿಂದಿನಿಂದ ಹೋಗುತ್ತಿದ್ದವನು, ತನ್ನ ಮೋಟಾರ್ ಸೈಕಲನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು 20-30 ಗಂಟೆಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಮಾವಿನಕಟ್ಟಾದ ದುರ್ಗಾ ಪರಮೇಶ್ವರಿ ಗ್ಯಾರೇಜ್ ಎದುರು ಶ್ರೀ ವಿನೋದ ತಂದೆ ದಯಾನಂದ ಜೈವಂತ ಇವರ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಗೆ ಎಡಗೈ ಮೊಣಗಂಟಿಗೆ ತೆರಚಿದ ಗಾಯ, ಕುತ್ತಿಗೆಯ ಎಡಭಾಗಕ್ಕೆ ಒಳನೋವು ಮಾಡಿದ್ದಲ್ಲದೇ ಹಾಗೂ ಪಿರ್ಯಾದಿಯ ತಂದೆಯವರಿಗೆ ಎಡಗಾಲ ಮೊಣಗಂಟಿನ ಮೂಳೆ ಮುರಿದು, ಬಲಗಾಲು ಮೊಣಗಂಟಿನ ಕೆಳಗೆ ತೆರಚಿದ ಗಾಯನೋವು ಪಡಿಸಿದ್ದಲ್ಲದೇ, ಆರೋಪಿತನು ತನಗೂ ಸಹ ಬಲಭುಜಕ್ಕೆ ಒಳನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಶಶಾಂಕ ತಂದೆ ವಿನೋದ ಜೈವಂತ, ಪ್ರಾಯ-18 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಜನತಾ ಕಾಲೋನಿ, ಮಾವಳ್ಳಿ-01. ಮುರ್ಡೇಶ್ವರ, ತಾ: ಭಟ್ಕಳ ರವರು ದಿನಾಂಕ: 11-07-2021 ರಂದು 21-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 84/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅನೀಲ ಕುಮಾರ ತಂದೆ ಶಾಬಾಹದ್ದೂರ ಸಿಂಣ್, ಪ್ರಾಯ-39 ವರ್ಷ, ಸಾ|| ಸೋಹಾರ್, ತಾ: ಸಂದೋಳೆ, ಜಿ: ಮಂಡಿ, ಹಿಮಾಚಲ ಪ್ರದೇಶ ರಾಜ್ಯ (ಲಾರಿ ನಂ: ಡಿ.ಎಲ್-01/ಜಿ.ಸಿ-6513 ನೇದರ ಚಾಲಕ). ಈತನು ದಿನಾಂಕ: 11-07-2021 ರಂದು 12-15 ಘಂಟೆಯ ಸಮಯಕ್ಕೆ ತಾನು ಚಲಾಯಿಸುತ್ತಿದ್ದ ಲಾರಿ ನಂ: ಡಿ.ಎಲ್-01/ಜಿ.ಸಿ-6513 ನೇದನ್ನು ಭಟ್ಕಳ ಬದಿಯಿಂದ ಕುಂದಾಪೂರ ಬದಿಗೆ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ಭಟ್ಕಳ ತಾಲೂಕ ಪಂಚಾಯತ್ ಎದುರುಗಡೆ ನೂರಪಳ್ಳಿ ಹತ್ತಿರ ಅದೇ ದಿಸೆಯಲ್ಲಿ ಅಂದರೆ ಭಟ್ಕಳ ಬದಿಯಿಂದ ಕುಂದಾಪೂರ ಬದಿಗೆ ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಕ್ಯೂ-9283 ನೇದಕ್ಕೆ ಅಂತರವನ್ನು ಕಾಯ್ದುಕೊಳ್ಳದೇ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರನಾದ ಅಬ್ದುಲ್ ಖಾದೀರ್ ಇಸ್ತಿಯಾಕ್ ತಂದೆ ಮೊಹಮ್ಮದ್ ಇಸ್ಮಾಯಿಲ್ ಗಂಗಾವಳಿ, ಪ್ರಾಯ-42 ವರ್ಷ, ವೃತ್ತಿ-ವ್ಯಾಪಾರ, ಸಾ|| ಆಯಿಶಾ ಮೆನಸಿನ್, ಜಾಮೀಯಾ ಅಬಾದ ರೋಡ್, ಹೆಬಳೆ, ತಾ: ಭಟ್ಕಳ ಈತನ ತಲೆ, ಎದೆ, ಸೊಂಟ ಹಾಗೂ ಕಾಲುಗಳಿಗೆ ಮಾರಣಾಂತಿಕ ಗಾಯ ಪಡಿಸಿ, ಸ್ಥಳದಲ್ಲಿಯೇ ಮರಣ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಚಿದಾನಂದ ತಂದೆ ಈರಯ್ಯಾ ಗೊಂಡ, ಪ್ರಾಯ-26 ವರ್ಷ, ವೃತ್ತಿ-ಅಟೋ ಚಾಲಕ, ಸಾ|| ಮಾರುಕೇರಿ, ತಾ: ಭಟ್ಕಳ ರವರು ದಿನಾಂಕ: 11-07-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 70/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಗಿರೀಶ ತಂದೆ ಸದಾಶಿವ ಗೌಡ್ರು, ಪ್ರಾಯ-21 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಸಂತೋಳ್ಳಿ, ತಾ: ಶಿರಸಿ. ಪಿರ್ಯಾದಿಯ ತಮ್ಮನಾದ ಈತನು ಶಿರಸಿಯ ಶಕ್ತಿ ಹೀರೋ ಶೋ-ರೂಂ ದಲ್ಲಿ ಕೆಲಸ ಮಾಡಿಕೊಂಡಿದ್ದವನು, ದಿನಾಂಕ: 06-07-2021 ರಂದು ಬೆಳಿಗ್ಗೆ 09-00 ಗಂಟೆಗೆ ಎಂದಿನಂತೆ ಪಿರ್ಯಾದಿಯೊಂದಿಗೆ ಅವರ ಮೋಟಾರ್ ಸೈಕಲ್ ನಂ: ಕೆ.ಎ-31/ವ್ಹಾಯ್-3831 ನೇದರ ಮೇಲೆ ಶಿರಸಿಗೆ ಹೋಗಿದ್ದು, ಪಿರ್ಯಾದಿಯವರು ಶಕ್ತಿ ಶೋ-ರೂಂ ಹತ್ತಿರ ಇಳಿದುಕೊಂಡಿದ್ದು, ಕಾಣೆಯಾದ ಗಿರೀಶ ಈತನು ಆಶ್ವಿನಿ ಸರ್ಕಲ್ ದಲ್ಲಿರುವ ಗೋಡೌನಿಗೆ ಹೋಗಿ, ನಂತರ 10-30 ಗಂಟೆಗೆ ಶಕ್ತಿ ಶೋ-ರೂಂ ಗೆ ಬಂದು ಮೋಟಾರ್ ಸೈಕಲಿನ ಕೀ ಕೊಟ್ಟು ಹೋಗಿದ್ದು, ನಂತರ ಪಿರ್ಯಾದಿಯು ಫೋನ್ ಮಾಡಲಾಗಿ ಫೋನ್ ಸ್ವಿಚ್ ಆಫ್ ಬಂದಿರುತ್ತದೆ. ಈತನು ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ತಮ್ಮನನ್ನು ಹುಡುಕಿ ಕೊಡಬೇಕೆಂದು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಆದರ್ಶ ತಂದೆ ಸದಾಶಿವ ಗೌಡ್ರು, ಪ್ರಾಯ-26 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಸಂತೋಳ್ಳಿ, ತಾ: ಶಿರಸಿ ರವರು ದಿನಾಂಕ: 11-07-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 11-07-2021

at 00:00 hrs to 24:00 hrs

 

ಚಿತ್ತಾಕುಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 10/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನು ಸುಮಾರು 60 ರಿಂದ 65 ವರ್ಷ ಪ್ರಾಯದ ಅಪರಿಚಿತ ಗಂಡಸ್ಸಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದಿಯು ದಿನಾಂಕ: 11-07-2021 ರಂದು ನಾಗಪೊಂಡದ ಸುಖ್ರವಾಡದ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಕಾಳಿ ನದಿಯ ಹಿನ್ನೀರಿನಲ್ಲಿ ನಮೂದಿತ ಮೃತನ ಶವವು ಕಾಳಿ ನದಿಯ ಹಿನ್ನೀರಿನಲ್ಲಿ ತೇಲಿ ಬಂದಿದ್ದು, ಮೃತದೇಹದ ಮೇಲೆ ಹಳದಿ ಬಣ್ಣದ ಅರ್ಧ ತೋಳಿನ ಟೀ-ಶರ್ಟ್ ಇದ್ದು, ಬೂದು ಮಿಶ್ರಿತ ಕಪ್ಪು ಬಣ್ಣದ ಸಾದಾ ಪ್ಯಾಂಟ್ ಇರುತ್ತದೆ. ಮೃತನು ಕಾಳಿ ನದಿಯ ಹಿನ್ನೀರಿನಲ್ಲಿ ಮೀನು ಹಿಡಿಯುವಾಗಲೋ ಅಥವಾ ಈಜಾಡುವಾಗಲೂ ನದಿಯ ನೀರಿನಲ್ಲಿ ಆಯ ತಪ್ಪಿ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಬಗ್ಗೆ ಕಂಡುಬರುತ್ತಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ಕಿಶೋರ ತಂದೆ ಸದಾನಂದ ದೇಸಾಯಿ, ಪ್ರಾಯ-51 ವರ್ಷ, ವೃತ್ತಿ-ಗ್ರಾಮ ಪಂಚಾಯತಿ ಸದಸ್ಯ, ಸಾ|| ಸುಖ್ರುವಾಡ, ನಾಗಪೊಂಡ, ಸದಾಶಿವಗಡ, ಕಾರವಾರ ರವರು ದಿನಾಂಕ: 11-07-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 19/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ರಶ್ಮಿ ಕೋಂ. ಸುಧೀರ ರಾಯ್ಕರ, ಪ್ರಾಯ-48 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಕಾಂಗ್ರೆಸ್ ಬಾವಿ ಗಾರ್ಡನ್, ಮಹಾತ್ಮಗಾಂಧಿ ಕಾಲೋನಿ, ತಿಲಕವಾಡಿ, ಬೆಳಗಾವಿ, ಹಾಲಿ ಸಾ|| ದರ್ಗಾ ಗಲ್ಲಿ, ತಾ: ಯಲ್ಲಾಪುರ. ಪಿರ್ಯಾದಿಯವರ ತಾಯಿಯವರಾದ ಇವರು ಕಳೆದ 10 ವರ್ಷದಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದವರಿಗೆ ಔಷಧೋಪಚಾರ ಮಾಡಿದರೂ ಸಹ ಸರಿಯಾಗಿ ಗುಣಮುಖವಾಗದೇ ಇದ್ದರಿಂದ ಹಾಗೂ ಕೋವಿಡ್ ಕಾಯಿಲೆಯು ಬಂದಿದ್ದರಿಂದ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಬೇಜಾರಿನಿಂದ ಇದ್ದವರು, ದಿನಾಂಕ: 11-07-2021 ರಂದು 15-00 ಗಂಟೆಯಿಂದ 16-30 ಗಂಟೆಯ ನಡುವಿನ ಅವಧಿಯಲ್ಲಿ ಯಲ್ಲಾಪುರ ಪಟ್ಟಣದ ಕಾಳಮ್ಮನಗರ ಗ್ರೌಂಡ್ ಹತ್ತಿರ ಇರುವ ಪಾಳು ಬಿದ್ದ ಬಾವಿಯಲ್ಲಿ ಹಾರಿ ನೀರಿನಲ್ಲಿ ಮುಳಗಿ (ಮೃತಪಟ್ಟಿರುತ್ತಾರೆ) ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಿಖಿಲ ತಂದೆ ಸುಧೀರ ರಾಯ್ಕರ, ಪ್ರಾಯ-28 ವರ್ಷ, ವೃತ್ತಿ-ಫಾರ್ಮಾಸಿಸ್ಟ್ ಕೆಲಸ, ಸಾ|| ಕಾಂಗ್ರೆಸ್ ಬಾವಿ ಗಾರ್ಡನ್, ಮಹಾತ್ಮಗಾಂಧಿ ಕಾಲೋನಿ, ತಿಲಕವಾಡಿ. ಬೆಳಗಾವಿ, ಹಾಲಿ ಸಾ|| ದರ್ಗಾ ಗಲ್ಲಿ, ತಾ: ಯಲ್ಲಾಪುರ ರವರು ದಿನಾಂಕ: 11-07-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 08/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ದೇವರಾಜ ತಂದೆ ಬಾಳಾ ಪೂಜಾರಿ, ಪ್ರಾಯ-41 ವರ್ಷ, ವೃತ್ತಿ-ಟೈಲ್ಸ್ ಫಿಟ್ಟಿಂಗ್ ಕೆಲಸ, ಸಾ|| ಜನತಾ ಪ್ಲಾಟ್, ಧಾರವಾಡ, ಹಾಲಿ ಸಾ|| ಮಾಳಾಪುರ, ತಾ&ಜಿ: ಧಾರವಾಡ. ಪಿರ್ಯಾದಿಯ ಗಂಡನಾದ ಈತನು ದಿನಾಂಕ: 08-07-2021 ರಂದು ಕೂಲಿ ಕೆಲಸಕ್ಕೆ ಶಿರಸಿಗೆ ಹೋಗುತ್ತೇನೆ ಅಂತಾ ಹೇಳಿ ಮನೆಯಿಂದ ಹೋದವನು, ದಿನಾಂಕ: 09-07-2021 ರಂದು ರಾತ್ರಿ ವಿಪರೀತವಾಗಿ ಸರಾಯಿ ಕುಡಿದು ಶಿರಸಿಯ ಶಿವಾನಿ ಹೊಟೇಲ್ ಹತ್ತಿರ ಅಸ್ವಸ್ಥನಾಗಿ ಬಿದ್ದವನಿಗೆ ಸಾರ್ವಜನಿಕರು ದಿನಾಂಕ: 10-07-2021 ರಂದು ಬೆಳಿಗ್ಗೆ 11-00 ಗಂಟೆಗೆ ಶಿರಸಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಸದರಿಯವನು ಚಿಕಿತ್ಸೆಯಲ್ಲಿರುತ್ತಾ ದಿನಾಂಕ: 11-07-2021 ರಂದು ಬೇಳಿಗ್ಗೆ 05-00 ಗಂಟೆಯ ಸುಮಾರಿಗೆ ಮೃತಪಟ್ಟಿರುತ್ತಾನೆ. ಸದರಿಯನ ಮರಣವು ವಿಪರಿತವಾಗಿ ಸರಾಯಿ ಕುಡಿದು ಸರಿಯಾಗಿ ಉಟ ಮಾಡದೇ ಇರುತ್ತಿದ್ದರಿಂದ ನಿಶ್ಯಕ್ತಿ ಹೊಂದಿ ಸಂಭವಿಸಿದ್ದು ಇರುತ್ತದೆ. ಇದರ ಹೊರತಾಗಿ ಮೃತನ ಮರಣದಲ್ಲಿ ಬೇರೇ ಯಾವುದೇ ಸಂಶಯವಿರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಉಮಾ ಕೋಂ. ದೇವರಾಜ ಪೂಜಾರಿ, ಪ್ರಾಯ-37 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜನತಾ ಪ್ಲಾಟ್, ಧಾರವಾಡ, ಹಾಲಿ ಸಾ|| ಮಾಳಾಪುರ, ತಾ&ಜಿ: ಧಾರವಾಡ ರವರು ದಿನಾಂಕ: 11-07-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 22/2021, ಕಲಂ: 174(ಸಿ) ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ನೇತ್ರಾವತಿ ಮಂಜುನಾಥ ಗೌಡ, ಪ್ರಾಯ-26 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಹಾಸಣಗಿ, ಪೋ: ಕಡಬಾಳ, ತಾ: ಶಿರಸಿ. ಪಿರ್ಯಾದಿಯವರ ಅಕ್ಕಳಾದ ಇವಳಿಗೆ ನಾಲ್ಕು ವರ್ಷದ ಹಿಂದೆ ಮಂಜುನಾಥ ಗೌಡ, ಸಾ|| ಹಾಸಣಗಿ, ತಾ: ಶಿರಸಿ ಇವನೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಅವರ ಅನ್ಯೋನ್ಯತೆಯ ಸಂಸಾರದಿಂದ ಈಗ ಎರಡು ವರ್ಷದ ಅವಳಿ ಮಕ್ಕಳು ಇರುತ್ತವೆ. ಹೀಗಿರುವಾಗ ದಿನಾಂಕ: 11-07-2021 ರಂದು ಬೆಳಿಗ್ಗೆ 06-45 ಗಂಟೆಗೆ ಭಾವ ಮಂಜುನಾಥ ಗೌಡ ಈತನು ನನ್ನ ಅಕ್ಕಳಿಗೆ ನಿನ್ನೆ ಬೆಳಿಗ್ಗೆಯಿಂದ ಹೊಟ್ಟೆನೋವಿನ ಸಮಸ್ಯೆಯಾಗಿ ರಾತ್ರಿ ತೀವೃವಾಗಿದ್ದರಿಂದ ಕಾರಿನಲ್ಲಿ ಶಿರಸಿಯ ರಾಮಾ ಹೆಗಡೆ ಆಸ್ಪತ್ರೆ, ಆ ನಂತರ ಶಿರಸಿಯ ಪಂಡಿತ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ದಿನಾಂಕ: 11-07-2021 ರಂದು ಬೆಳಿಗ್ಗೆ 06-30 ಗಂಟೆಗೆ ತಲುಪಿದಾಗ ಅಲ್ಲಿನ ವೈದ್ಯರು ಮೃತಪಟ್ಟಿರುವ ಬಗ್ಗೆ ತಿಳಿಸಿದ್ದನ್ನು ನನಗೆ ಪೋನ್ ಮಾಡಿ ತಿಳಿಸಿರುತ್ತಾನೆ. ಆ ನಂತರ ನಾವೆಲ್ಲ ಬಂದು ನೋಡಿದ್ದು, ಆಸ್ಪತ್ರೆಯಲ್ಲಿದ್ದ ಅಕ್ಕಳ ಬಾಯಿಯಿಂದ ನೊರೆ ಬಂದಿರುವುದರಿಂದ ಹಾಗೂ ನನ್ನ ಅಕ್ಕ ಏಕಾಏಕಿಯಾಗಿ ಒಂದೇ ದಿನದಲ್ಲಿ ತೀವೃ ಸ್ವರೂಪದ ಹೊಟ್ಟೆನೋವಿನಿಂದ ಮೃತಪಟ್ಟಿರುವುದಾಗಿ ತಿಳಿದಿದ್ದರಿಂದ ನನ್ನ ಅಕ್ಕನ ಸಾವಿನ ವಿಚಾರದಲ್ಲಿ ನನಗೆ ಸ್ವಲ್ಪ ಸಂಶಯ ಕಂಡು ಬರುತ್ತಿದೆ. ಕಾರಣ ಈ ಕುರಿತು ಸೂಕ್ತ ತನಿಖೆಯಿಂದ ಮುಂದಿನ ಕಾನೂನು ಕ್ರಮ ಜರುಗಿಸಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಮೇಶ ತಂದೆ ಬೆಳ್ಳು ಗೌಡ, ಪ್ರಾಯ-21 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕುದ್ರಗೋಡ, ಪೋ: ದೇವನಳ್ಳಿ, ತಾ: ಶಿರಸಿ ರವರು ದಿನಾಂಕ: 11-07-2021 ರಂದು 08-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 24/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಪ್ರಭು ತಂದೆ ತಿಪ್ಪಣ್ಣ ಬೆಡಸಗಾಂವ, ಪ್ರಾಯ-50 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಮುಡಸಾಲಿ, ತಾ: ಮುಂಡಗೋಡ. ಪಿರ್ಯಾದಿಯವರ ಚಿಕ್ಕಪ್ಪನಾದ (ಅಜ್ಜನ ತಮ್ಮನ ಮಗನಾದ) ಇವರು ತಮ್ಮ ಹೊಲದ ಮೇಲೆ ಕಾತೂರ ಸ್ವ-ಸಹಾಯ ಸಹಕಾರಿ ಸಂಘದಲ್ಲಿ 02 ಲಕ್ಷ ರೂಪಾಯಿ ಹಾಗೂ ಹೊರಗಡೆ 55 ಸಾವಿರ ರೂಪಾಯಿ, ಹೀಗೆ ಒಟ್ಟೂ 2 ಲಕ್ಷ 55 ಸಾವಿರ ರೂಪಾಯಿ ಸಾಲ ಮಾಡಿಕೊಂಡ ಬಗ್ಗೆ ಬೇಸರದಲ್ಲಿ ಸರಾಯಿ ಕುಡಿದ ನಶೆಯಲ್ಲಿ ದಿನಾಂಕ: 10-07-2021 ರಂದು ಸಾಯಂಕಾಲ 06-00 ಗಂಟೆಯ ಸುಮಾರಿಗೆ ಯಾವುದೊ ಕ್ರಿಮಿನಾಶಕ ವಿಷ ಸೇವಿಸಿದವರಿಗೆ ಹೆಚ್ಚಿನ ಉಪಚಾರಕ್ಕೆ ಕಿಮ್ಸ್ ಆಸ್ಪತ್ರೆ, ಹುಬ್ಬಳ್ಳಿಗೆ ದಾಖಲಿಸಿದ್ದು, ಉಪಚಾರ ಫಲಕಾರಿಯಾಗದೇ ದಿನಾಂಕ: 11-07-2021 ರಂದು ಬೆಳಗ್ಗೆ 11-40 ಗಂಟೆಗೆ ಮರಣಪಟ್ಟಿರುತ್ತಾರೆ. ನಮ್ಮ ಚಿಕ್ಕಪ್ಪನ ಮೃತದೇಹವು ಕಿಮ್ಸ್ ಆಸ್ಪತ್ರೆ, ಹುಬ್ಬಳ್ಳಿಯ ಶವಾಗಾರದಲ್ಲಿರುತ್ತದೆ. ಇದರ ಹೊರತು ನಮ್ಮ ಚಿಕ್ಕಪ್ಪನ ಮರಣದಲ್ಲಿ ಬೇರೆ ಯಾವುದೇ ಸಂಶಯ ವ ಕಾರಣ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾರಾಯಣ ತಂದೆ ಪರಶುರಾಮ ಬೆಡಸಗಾಂವ, ಪ್ರಾಯ-30 ವರ್ಷ, ವೃತ್ತಿ-ಸಿವಿಲ್ ಇಂಜನೀಯರ್, ಸಾ|| ಮುಡಸಾಲಿ, ತಾ: ಮುಂಡಗೋಡ ರವರು ದಿನಾಂಕ: 11-07-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 12-07-2021 06:26 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080