ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 11-06-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 97/2021, ಕಲಂ: 324, 341 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶಿವಾನಂದ ತಂದೆ ಗುತ್ತಿ ನಾಯ್ಕ, ಪ್ರಾಯ-58 ವರ್ಷ, ವೃತ್ತಿ-ಗ್ಯಾರೇಜ್ ಕೆಲಸ, ಸಾ|| ಹನುಮಟ್ಟಾ ಗ್ರಾಮ, ವಂದಿಗೆ, ತಾ: ಅಂಕೋಲಾ. ದಿನಾಂಕ: 11-06-2021 ರಂದು ಬೆಳಿಗ್ಗೆ 07-00 ಗಂಟೆಗೆ ಪಿರ್ಯಾದಿಯವರು ದಿನಪತ್ರಿಕೆ ತರಲು ಹೋಗುವಾಗ ನಮೂದಿತ ಆರೋಪಿತನು ಪಿರ್ಯಾದಿಯವರನ್ನು ತನ್ನ ಮನೆಯ ಮುಂದೆ ರಸ್ತೆಯ ಮೇಲೆ ಅಡ್ಡಗಟ್ಟಿ ಕುಟಾರಿಯಿಂದ ತೆಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗಣಪತಿ ತಂದೆ ಬೊಮ್ಮಯ್ಯ ನಾಯ್ಕ, ಪ್ರಾಯ-60 ವರ್ಷ, ವೃತ್ತಿ-ಗುತ್ತಿಗೆದಾರರು, ಸಾ|| ಹನುಮಟ್ಟಾ ಗ್ರಾಮ, ವಂದಿಗೆ, ತಾ: ಅಂಕೋಲಾ ರವರು ದಿನಾಂಕ: 11-06-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 98/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ಕಳಸಣ್ಣನವರ, ಸಾ|| ಕೆರೂರು, ಬಾದಾಮಿ (ಟ್ಯಾಂಕರ್ ಲಾರಿ ನಂ: ಕೆ.ಎ-28/ಸಿ-5992 ನೇದರ ಚಾಲಕ). ಈತನು ದಿನಾಂಕ: 10-06-2021 ರಂದು 22-30 ಗಂಟೆಗೆ ತನ್ನ ಟ್ಯಾಂಕರ್ ಲಾರಿ ನಂ: ಕೆ.ಎ-28/ಸಿ-5992 ನೇದನ್ನು ಅಂಕೋಲಾ ತಾಲೂಕಿನ ರಾಮನಗುಳಿಯಲ್ಲಿ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ಡಾಂಬರ್ ರಸ್ತೆಯಲ್ಲಿ ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು ತನ್ನ ಟ್ಯಾಂಕರ್ ಲಾರಿಯನ್ನು ನಿಯಂತ್ರಿಸಲಾಗದೇ ಟಾಯರ್ ಒಡೆದು ಹೋಗಿ ರಸ್ತೆಯ ತನ್ನ ಬದಿಯಲ್ಲಿ ನಿಂತಿದ್ದ ಪಿರ್ಯಾದಿಯ ಚಲಾಯಿಸಿಕೊಂಡು ಬಂದ ಲಾರಿ ನಂ: ಕೆ.ಎ-25/ಎ.ಎ-7070 ನೇದಕ್ಕೆ ಹಿಂಬದಿಯಲ್ಲಿ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಎರಡೂ ವಾಹನಗಳನ್ನು ಡ್ಯಾಮೇಜ್ ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಈಶ್ವರಪ್ಪ ತಂದೆ ಭೀಮಪ್ಪ ನಾಯ್ಕರ್, ಪ್ರಾಯ-26 ವರ್ಷ, ವೃತ್ತಿ-ಚಾಲಕ, ಸಾ|| ಶಂಕದಾಳ, ತಾ: ನರಗುಂದ, ಜಿ: ಗದಗ ರವರು ದಿನಾಂಕ: 11-06-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 162/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನಾವರ ತಾಲೂಕಿನ ಕಾಸರಕೋಡ ಹಿರೇಮಠದಲ್ಲಿರುವ ಗಜಾನನ ಹೊಟೇಲ್ ಹತ್ತಿರ ಪಿರ್ಯಾದಿಯ ತಮ್ಮನವರಾದ ರಾಜು ತಂದೆ ಗಣಪಯ್ಯ ಗೌಡ, ಸಾ|| ಅಪ್ಸರಕೊಂಡಾ, ತಾ: ಹೊನ್ನಾವರ ಇವರಿಗೆ ಸಂಬಂಧಿಸಿದ ಅ||ಕಿ|| 75,000/- ರೂಪಾಯಿ ಮೌಲ್ಯದ ಯಮಹಾ ಎಫ್.ಝೆಡ್ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-8320 ನೇದನ್ನು ದಿನಾಂಕ: 06-06-2021 ರಂದು 15-00 ಗಂಟೆಯಿಂದ 16-00 ಗಂಟೆ ನಡುವಿನ ಅವಧಿಯಲ್ಲಿ ಕಳುವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ರಾಮಾ ತಂದೆ ಗಣಪಯ್ಯ ಗೌಡ, ಪ್ರಾಯ-48 ವರ್ಷ, ವೃತ್ತಿ-ಚಹಾ ಅಂಗಡಿ, ಸಾ|| ಅಪ್ಸರಕೊಂಡಾ, ತಾ: ಹೊನ್ನಾವರ ರವರು ದಿನಾಂಕ: 11-06-2021 ರಂದು 17-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 71/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮೊಹಮ್ಮದ್ ಮುಜಮೀಲ್ ತಂದೆ ಉಸ್ಮಾನ್ ಜಬ್ಬರ್, ಪ್ರಾಯ-24 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಿಲಾಲ್ ಸ್ಟ್ರೀಟ್, ಮುಗ್ದುಮ್ ಕಾಲೋನಿ, ತಾ: ಭಟ್ಕಳ (ಮೋಟಾರ್ ಸೈಕಲ್ ನಂ: ಕೆ.ಎ-47/ಜೆ-8976 ನೇದರ ಸವಾರ). ಈತನು ದಿನಾಂಕ: 05-06-2021 ರಂದು 11-30 ಗಂಟೆಯ ಸುಮಾರಿಗೆ ಭಟ್ಕಳ ಶಹರದ ಮುಖ್ಯ ರಸ್ತೆಯ ಪೋಸ್ಟ್ ಆಫೀಸ್ ಕ್ರಾಸ್ ಹತ್ತಿರ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-47/ಜೆ-8976 ನೇದನ್ನು ಭಟ್ಕಳದ ಮುಖ್ಯ ರಸ್ತೆಯ ಕಡೆಯಿಂದ ಪೋಸ್ಟ್ ಆಫೀಸ್ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಾ ಪೋಸ್ಟ್ ಆಫೀಸ್ ಕಡೆಯಿಂದ ಮುಖ್ಯ ರಸ್ತೆಯ ಕಡೆಗೆ ಕಿರಣ ತಂದೆ ನಾಗಪ್ಪ ನಾಯ್ಕ, ಪ್ರಾಯ-28 ವರ್ಷ, ವೃತ್ತಿ-ಪೋಸ್ಟಮೆನ್, ಸಾ|| ಮುನ್ನನ ಮನೆ, ಮುಟ್ಟಳ್ಳಿ, ತಾ: ಭಟ್ಕಳ, ಇವರು ಚಲಾಯಿಸಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ47/ಯು-1058 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಹಿಂಬದಿಯ ಪಿರ್ಯಾದಿಯವರಿಗೆ ಬಲಗಾಲಿನ ಹತ್ತಿರ ಸಾದಾ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀಮತಿ ಮಂಗಲಾ ಕೋಂ. ಸಂಜಯ ನಾಯ್ಕ, ಪ್ರಾಯ-39 ವರ್ಷ, ವೃತ್ತಿ-ಪೋಸ್ಟ್ ಆಫೀಸಿನಲ್ಲಿ ಸ್ವೀಪರ್ ಕೆಲಸ, ಸಾ|| ತಿಲಕನಗರ, ಹಡಿನ್, ಸರ್ಪನಕಟ್ಟಾ, ತಾ: ಭಟ್ಕಳ ರವರು ದಿನಾಂಕ: 11-06-2021 ರಂದು 11-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 89/2021, ಕಲಂ: 338 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ದತ್ತು ತಂದೆ ಕೃಷ್ಣ ಮರಾಠಿ, 2]. ನಾಗೇಶ ತಂದೆ ಮಂಜು ಮರಾಠಿ, ಸಾ|| (ಇಬ್ಬರೂ) ಹಡಿಕಲ್ ಗ್ರಾಮ, ತಾ: ಹೊನ್ನಾವರ ಹಾಗೂ ಇನ್ನಿತರರು. ದಿನಾಂಕ: 17-05-2021 ರಂದು 18-00 ಗಂಟೆಗೆ ಹಡಿಕಲ್-ನೆಸಲನೀರ್ ರಸ್ತೆಯ ಬದಿಯಲ್ಲಿರುವ 11 ಕೆ.ವಿ ಮಾರ್ಗದ ಲೈನ್ ಫಾಲ್ಟ್ ಅನ್ನು ಸರಿಪಡಿಸಲು ಅಂತಾ ಗಾಯಾಳು ಜೂನಿಯರ್ ಪವರ್ ಮ್ಯಾನ್ ಶ್ರೀನಿವಾಸ ಖವಾಸಿ ಇವರು ತೆಗೆದಿಟ್ಟ ಜಿ.ಓ.ಎಸ್ ಮತ್ತು 11 ಕೆ.ವಿ ಜಂಪ್ ಅನ್ನು ನಮೂದಿತ ಆರೋಪಿತರು ನಿರ್ಲಕ್ಷ್ಯತನದಿಂದ ಹಾಕಿ ವಿದ್ಯುತ್ ಹರಿಸಿದ್ದರಿಂದ ಸದ್ರಿ 11 ಕೆ.ವಿ ಜಂಪ್ ತೆಗೆಯಲು ಕಂಬ ಹತ್ತಿದ ಶ್ರೀನಿವಾಸ ಇವರಿಗೆ ವಿದ್ಯುತ್ ಸ್ಪರ್ಷವಾಗಿ ಕಂಬದ ಮೇಲಿನಿಂದ ಕೆಳಗೆ ಬಿದ್ದು, ಕೈಗಳಿಗೆ ಭಾರೀ ಗಾಯಗಳಾದ ಬಗ್ಗೆ ಪಿರ್ಯಾದಿ ಶ್ರೀ ಪ್ರಸಾದ ಎಮ್. ನಾಯ್ಕ, ಪ್ರಾಯ-34 ವರ್ಷ, ವೃತ್ತಿ-ಶಾಖಾಧಿಕಾರಿಗಳು, ಸಾ|| ಹೆಸ್ಕಾಂ ಶಾಖೆ, ಕಾಸರಕೋಡ, ತಾ: ಹೊನ್ನಾವರ ರವರು ದಿನಾಂಕ: 11-06-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 76/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಗಣೇಶಸಿಂಗ್ ತಂದೆ ರಾಮಸಿಂಗ್ ರಜಪೂತ್, ಪ್ರಾಯ-26 ವರ್ಷ, ವೃತ್ತಿ-ಅಲ್ಯೂಮಿನಿಯಂ ಕೆಲಸ, ಸಾ|| ಗಾಂಧಿನಗರ, ತಾ: ಮುಂಡಗೋಡ, 2]. ಪೀರಸಾಬ್ ತಂದೆ ರಫೀಕಸಾಬ್ ಹಳ್ಳಿಕೇರಿ, ಪ್ರಾಯ-25 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಂಬಾರಗಟ್ಟಿ ಪ್ಲಾಟ್, ತಾ: ಮುಂಡಗೋಡ, 3]. ರುದ್ರಪ್ಪ ತಂದೆ ಯಲ್ಲಪ್ಪ ಸುಣಗಾರ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗಣೇಶ ನಗರ, ತಾ: ಮುಂಡಗೋಡ, 4]. ಗಣೇಶದಾಸ ತಂದೆ ನಾರಾಯಣದಾಸ, ಪ್ರಾಯ-29 ವರ್ಷ, ವೃತ್ತಿ-ಹೊಟೇಲ್ ಕೆಲಸ, ಸಾ|| ನದಿಯಾ ಗ್ರಾಮ, ಪಶ್ಚಿಮ ಬಂಗಾಳ ರಾಜ್ಯ, ಹಾಲಿ ಸಾ|| ಸಿಂಡಿಕೇಟ್ ಬ್ಯಾಂಕ್ ಹತ್ತಿರ, ತಾ: ಮುಂಡಗೋಡ. ಈ ನಮೂದಿತ ಆರೋಪಿತರು 11-06-2021 ರಂದು ಸಂಜೆ 19-20 ಗಂಟೆಗೆ ಮುಂಡಗೋಡ ಪಟ್ಟಣದ ಎ.ಪಿ.ಎಮ್.ಸಿ ಪಕ್ಕದ ಅರಣ್ಯದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನೆಲಕ್ಕೆ ನ್ಯೂಸ್ ಪೇಪರನ್ನು ಹಾಸಿ ತಮ್ಮ ತಮ್ಮ ಲಾಭದ ಸಲುವಾಗಿ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ ಅಂದರ್-ಬಾಹರ್ ಇಸ್ಪೀಟ್ ಜುಗಾರಾಟ ಆಡುತ್ತಾ ನಗದು ಹಣ 1,100/- ರೂಪಾಯಿ ಹಾಗೂ ಜುಗಾರಾಟದ ಸಲಕರಣೆಗಳಾದ ನ್ಯೂಸ್ ಪೇಪರ್, ಒಂದು ಮೇಣದ ಬತ್ತಿ ಹಾಗೂ 52 ಇಸ್ಪೀಟ್ ಎಲೆಗಳು. ಇವುಗಳೊಂದಿಗೆ ಆರೋಪಿತರೆಲ್ಲರೂ ದಾಳಿಯ ಕಾಲಕ್ಕೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಬಸವರಾಜ ಮಬನೂರ, ಪಿ.ಎಸ್.ಐ, ಮುಂಡಗೋಡ ಪೊಲೀಸ್ ಠಾಣೆ ರವರು ದಿನಾಂಕ: 11-06-2021 ರಂದು 20-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 11-06-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 16/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಅಭಿಷೇಕ್ ತಂದೆ ಹನುಮಂತ ಬೊಯಾ, ಪ್ರಾಯ-25 ವರ್ಷ, ವೃತ್ತಿ-ನಿರುದ್ಯೋಗಿ, ಸಾ|| ಹೊಸಲಿಂಗಾಪುರ, ತಾ&ಜಿ: ಕೊಪ್ಪಳ. ಈತನು ಕಳೆದ ಎರಡು ತಿಂಗಳ ಹಿಂದೆ ತನ್ನ ಅಕ್ಕಳಾದ ಪಿರ್ಯಾದುದಾರರ ಜೊತೆಯಲ್ಲಿ ಕುಮಟಾದಲ್ಲಿ ವಾಸವಾಗಿದ್ದು, ದಿನಾಂಕ: 10-06-2021 ರಂದು 14-30 ಗಂಟೆಗೆ ತನ್ನ ಅಕ್ಕ ಅನುಷಾ ಇವರನ್ನು ತಾವು ವಾಸವಾಗಿರುವ ಬಾಡಿಗೆ ಮನೆಯಿಂದ ತನ್ನ ಅಕ್ಕ ಕೆಲಸ ಮಾಡುವ ಕುಮಟಾದ ಎಸ್.ಬಿ.ಐ ಬ್ಯಾಂಕಿಗೆ ಸ್ಕೂಟಿ ನಂ: ಕೆ.ಎ-03/ಎಚ್.ಎಲ್-6353 ನೇದದರಲ್ಲಿ ಕರೆದುಕೊಂಡು ಹೋಗಿ ಬಿಟ್ಟು, ತನ್ನ ಅಕ್ಕನಿಗೆ ತಾನು ವನ್ನಳ್ಳಿ ಬೀಚಿಗೆ ಹೋಗಿ ಬರುವುದಾಗಿ ಹೇಳಿ ಹೋದವನು, ವನ್ನಳ್ಳಿ ಬೀಚಿಗೆ ಹೋಗಿ ಅರಬ್ಬಿ ಸಮುದ್ರದ ದಂಡೆಯ ಮೇಲೆ ಇರುವ ಕಲ್ಲು ಬಂಡೆಯ ಮೇಲೆ ನಿಂತಿರುವಾಗ 17-30 ಗಂಟೆಯ ಸುಮಾರಿಗೆ ಸಮುದ್ರದ ಅಲೆಗಳ ಹೊಡೆತಕ್ಕೆ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರದ ನೀರಿನಲ್ಲಿ ಬಿದ್ದು, ಸಮುದ್ರದ ಅಲೆಗೆ ನೀರಿನಲ್ಲಿ ಮುಳುಗಿದವನು, ದಿನಾಂಕ: 11-06-2021 ರಂದು ಬೆಳ್ಳಿಗೆ 07-00 ಗಂಟೆಯ ಸುಮಾರಿಗೆ ಅಳ್ವೆಕೋಡಿಯ ಸಮುದ್ರದ ದಡದಲ್ಲಿ ಮೃತದೇಹವು ದೊರೆತಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮವನ್ನು ಕೈಗೊಳ್ಳುವ ಬಗ್ಗೆ ಪಿರ್ಯಾದಿ ಶ್ರೀಮತಿ ಅನುಷಾ ಹನುಮಂತ ಬೊಯಾ, ಪ್ರಾಯ-27 ವರ್ಷ, ವೃತ್ತಿ-ಎಸ್.ಬಿ.ಐ ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್, ಸಾ|| ಹೊಸಲಿಂಗಾಪುರ ತಾ&ಜಿ: ಕೊಪ್ಪಳ, ಹಾಲಿ ಸಾ|| ಕುಮಟಾ ರವರು ದಿನಾಂಕ: 11-06-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 11/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಕುಳ್ಳ ತಂದೆ ಸೋಮಯ್ಯ ಗೊಂಡ, ಪ್ರಾಯ-48 ವರ್ಷ, ವೃತ್ತಿ-ರಿಕ್ಷಾ ಚಾಲಕ, ಸಾ|| ಕಿತ್ರೆ, ಮಾರುಕೇರಿ, ತಾ: ಭಟ್ಕಳ. ಈತನು ಕಳೆದ 4 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಮತ್ತು ಕುಡಿತದ ಚಟದವನಿದ್ದು ಮತ್ತು ಮನೆ ನಿರ್ವಹಣೆಗಾಗಿ ಸಾಲ ಮಾಡಿಕೊಂಡಿದ್ದವನು ಈ ಬಗ್ಗೆ ಬೇಸರದಿಂದ ಇದ್ದವನು, ಜೀವನದಲ್ಲಿ ಜಿಗೂಪ್ಸೆಗೊಂಡು ದಿನಾಂಕ: 11-06-2021 ರಂದು 14-25 ರಿಂದ 14-45 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಮನೆಯ ಹತ್ತಿರದಲ್ಲಿ ಇರುವ ಗೇರು ಮರಕ್ಕೆ ನೈಲಾನ್ ಬಳ್ಳಿ ಕಟ್ಟಿ ಅದೇ ಬಳ್ಳಿಯಿಂದ ಕುತ್ತಿಗೆಗೆ ಉರುಳು ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು, ಇದರ ಹೊರತು ಅವನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಾಮಾ ತಂದೆ ಕುಪ್ಪ ಗೊಂಡ  ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಿತ್ರೆ, ಮಾರುಕೇರಿ ತಾ: ಭಟ್ಕಳ ವರು ದಿನಾಂಕ: 11-06-2021 ರಂದು 15-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 14/2021, ಕಲಂ: 174(ಸಿ) ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ರವಿಚಂದ್ರ ತಂದೆ ಭೀಮಪ್ಪಾ ಮಲಸಣ್ಣವರ, ಪ್ರಾಯ-40 ವರ್ಷ, ವೃತ್ತಿ-ಚಾಲಕ, ಸಾ|| ಮಂಜುನಾಥ ನಗರ, ತಾ: ಯಲ್ಲಾಪುರ. ಪಿರ್ಯಾದಿಯವರ ತಮ್ಮನಾದ ಈತನು ಕಳೆದ ಒಂದು ವರ್ಷದಿಂದ ವಿಪರೀತವಾಗಿ ಸರಾಯಿ ಕುಡಿಯವ ಚಟವನ್ನು ಬೆಳಸಿಕೊಂಡಿದ್ದು, ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಮನನೊಂದು ದಿನಾಂಕ: 11-06-2021 ರಂದು ಸಮಯ ಸುಮಾರು ಬೆಳಗಿನ ಜಾವ 02-00 ಗಂಟೆಯಿಂದ 06-00 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಮನೆಯಾದ ಯಲ್ಲಾಪುರ ಪಟ್ಟಣದ ಮಂಜುನಾಥ ನಗರದಲ್ಲಿರುವ ತನ್ನ ಮನೆಯ ಪಕಾಶಿಗೆ ವೇಲ್ ನಿಂದ ತನ್ನ ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತಪಟ್ಟಿರುತ್ತಾನೆ ಅಥವಾ ಇನ್ನಾವುದೋ ರೀತಿಯಲ್ಲಿ ಮೃತಪಟ್ಟಿದ್ದು, ಸದ್ರಿಯವನ ಮರಣದಲ್ಲಿ ಸಂಶಯ ಇದ್ದು, ಈ ಕುರಿತು ಸೂಕ್ತ ಕಾನೂನು ತನಿಖೆ ಆಗಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ಪ್ರಕಾಶ ತಂದೆ ಭೀಮಪ್ಪಾ ಮಲಸಣ್ಣವರ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನೂತನ ನಗರ, ತಾ: ಯಲ್ಲಾಪುರ ರವರು ದಿನಾಂಕ: 11-06-2021 ರಂದು 07-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 15/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಭೈರವ ತಂದೆ ನಾರಾಯಣ ಪಟಗಾರ, ಪ್ರಾಯ-54 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜನತಾ ಕಾಲೋನಿ, ತಾರಗೋಡ ತಾ: ಶಿರಸಿ. ಪಿರ್ಯಾದಿಯವರ ತಂದೆಯಾದ ಇವರು ಕಳೆದ 30 ವರ್ಷಗಳಿಂದ ವೀಪರಿತ ಸರಾಯಿ ಕುಡಿಯುವ ಚಟ ಹೊಂದಿದ್ದವರು, ದಿನಾಂಕ: 09-06-2021 ರಂದು ಸಂಜೆ 17-00 ಗಂಟೆಯ ಸುಮಾರಿಗೆ ಮನೆಯಿಂದ ಹೊರಗಡೆ ಹೋಗಿ ಎಲ್ಲಿಯೋ ವಿಪರೀತ ಸರಾಯಿ ಕುಡಿದು ಪುನಃ ಮನೆಗೆ ಬರದೆ ಶಿರಸಿ-ಯಲ್ಲಾಪುರ ರಸ್ತೆಯಲ್ಲಿ ದಾಸನಗದ್ದೆ ಗ್ರಾಮದ ಸುಬ್ರಾಯ ಹೆಗಡೆ ರವರ ಮನೆಯ ಹತ್ತಿರ ನಿರ್ಮಿಸಿದ ತಡೆಗೋಡೆಯ ಪಕ್ಕದ ಬೇಲಿಯಲ್ಲಿ ಕುಡಿದ ಅಮಲಿನಲ್ಲಿ ಕೆಳಗೆ ಬಿದ್ದು ನೀರು ಹರಿಯುವ ಕಾಲುವೆಯಿಂದ ಏರಿ ಮೇಲೆ ಬರುವಾಗ ಕೆಸರು ಮಣ್ಣಿನಲ್ಲಿ ಕಾಲುಗಳು ಸಿಲುಕಿ ಮೇಲೆ ಏಳಲಾಗದೇ ಅಲ್ಲಿಯೇ ಮಲಗಿ ದಿನಾಂಕ: 11-06-2021 ರಂದು 07-00 ಗಂಟೆಯ ನಡುವಿನ ಅವಧಿಯಲ್ಲಿ ಅಶಕ್ತತೆಯಿಂದ ಮೃತಪಟ್ಟಿರುತ್ತಾರೆಯೇ ಹೊರತು ಅವರ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸಂತೋಷ ತಂದೆ ಭೈರವ ಪಟಗಾರ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜನತಾ ಕಾಲೋನಿ, ತಾರಗೋಡ, ತಾ: ಶಿರಸಿ ರವರು ದಿನಾಂಕ: 11-06-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 16/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಕುಮಾರಿ: ಜಿ. ಧನ್ಯಾ, ಪ್ರಾಯ-18 ವರ್ಷ, ವೃತ್ತಿ-ವಿದ್ಯಾರ್ಥಿನಿ, ಸಾ|| ಹಿತ್ಲಳ್ಳಿ, ತಾ: ಯಲ್ಲಾಪುರ, ಹಾಲಿ ಸಾ|| ಸಹಸ್ರಳ್ಳಿ, ಯಡಳ್ಳಿ, ತಾ: ಶಿರಸಿ. ಪಿರ್ಯಾದಿಯ ಮಗಳಾದ ಇವಳು ಶಿರಸಿಯ ಮಾರಿಕಾಂಬಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದವಳು. ಕಾಲೇಜಿಗೆ ಮೊದಲನೇ ರ್ಯಾಂಕ್ ಬರಬೇಕೆಂದು ಹಠದಿಂದ ಮನಸ್ಸಿಟ್ಟುಕೊಂಡು ಚೆನ್ನಾಗಿ ಅಭ್ಯಾಸ ಮಾಡುತ್ತಿದ್ದಳು. ಈ ಕೋವಿಡ್-19 ಕೊರೋನಾ ವೈರಸ್ ಹಿನ್ನಲೆಯಲ್ಲಿ ಲಾಕಡೌನ್ ನಿಮಿತ್ತ ಕಾಲೇಜುಗಳು ಬಂದಾಗಿ, ಮನೆಯಲ್ಲಿಯೇ ಆನಲೈನ್ ಮುಖಾಂತರ ಅಂತಿಮ ಪರೀಕ್ಷೆಯ ಕುರಿತು ಅಭ್ಯಾಸ ಮಾಡುತ್ತಿದ್ದವಳು, ಇತ್ತೀಚಿನ ದಿನಗಳಲ್ಲಿ ದ್ವಿತೀಯ ಪಿಯುಸಿಯ ಅಂತಿಮ ಪರೀಕ್ಷೆ ರದ್ದಾಗಿ, ಪ್ರಥಮ ಪಿಯುಸಿ ಫಲಿತಾಂಶದ ಆಧಾರದ ಮೇಲೆ ಈಗಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಫಲಿತಾಂಶ ನೀಡಲಾಗುವುದನ್ನು ತಿಳಿದು ತಾನು ಹಗಲು-ರಾತ್ರಿ ಎನ್ನದೆ ಅಭ್ಯಾಸ ಮಾಡಿ ವ್ಯರ್ಥವಾಯಿತು ಎಂದು ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ದಿನಾಂಕ: 11-06-2021 ರಂದು 15-00 ಗಂಟೆಯಿಂದ 18-00 ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ಜಂತಿಗೆಗೆ ಸೀರೆಯಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರಲ್ಲಿ ಯಾವುದೇ ಸಂಶಯ ಇರುವುದಿಲ್ಲ. ಆದರೂ ಅವಳು ಇನ್ನಾವುದಾದರು ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವುಳೋ ಹೇಗೋ ಎನ್ನುವ ಬಗ್ಗೆ ಕೂಲಂಕುಷವಾಗಿ ತನಿಖೆ ಮಾಡಿ ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗಂಗಾಧರ ತಂದೆ ದೇವಪ್ಪ ಆಚಾರಿ, ಪ್ರಾಯ-44 ವರ್ಷ, ವೃತ್ತಿ-ಆಚಾರಿ ಕೆಲಸ, ಸಾ|| ಹಿತ್ಲಳ್ಳಿ, ತಾ: ಯಲ್ಲಾಪುರ, ಹಾಲಿ ಸಾ|| ಸಹಸ್ರಳ್ಳಿ, ಪೋ: ಯಡಳ್ಳಿ, ತಾ: ಶಿರಸಿ ರವರು ದಿನಾಂಕ: 11-06-2021 ರಂದು 22-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 18/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಕುಮಾರಿ: ದೀಕ್ಷಾ ತಂದೆ ಲಕ್ಷ್ಮಣ ಕೋಣನಕೇರಿ, ಪ್ರಾಯ-06 ವರ್ಷ, ಸಾ|| ಚವಡಳ್ಳಿ, ತಾ: ಮುಂಡಗೋಡ. ಸುದ್ದಿದಾರನ ಮಗಳಾದ ಇವಳು ದಿನಾಂಕ: 06-06-2021 ರಂದು ಬೆಳಿಗ್ಗೆ 07-30 ಗಂಟೆಗೆ ಆಕಸ್ಮಿಕವಾಗಿ ತಿಳಿಯದೆಯೇ ಕಳೆನಾಶಕದ ಬಾಟಲಿಯ ಮುಚ್ಚಳದಲ್ಲಿ ಹಾಲನ್ನು ಹಾಕಿ ಕುಡಿದು ಅಸ್ವಸ್ಥಳಾದವಳಿಗೆ ಮುಂಡಗೋಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ, ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ದಿನಾಂಕ: 11-06-2021 ರಂದು 01-10 ಗಂಟೆಗೆ ಚಿಕಿತ್ಸೆ ಫಲಿಸದೇ ಮೃತಪಟ್ಟಿರುತ್ತಾಳೆ. ಅವಳ ಮೃತದೇಹವು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿರುತ್ತದೆ. ಇದರ ಹೊರತು ಅವಳ ಮರಣದಲ್ಲಿ ಬೇರೇನೂ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ತನಿಖೆ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಲಕ್ಷ್ಮಣ ತಂದೆ ಲೋಕಪ್ಪ ಕೋಣನಕೇರಿ, ಪ್ರಾಯ-36 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಚವಡಳ್ಳಿ, ತಾ: ಮುಂಡಗೋಡ ರವರು ದಿನಾಂಕ: 11-06-2021 ರಂದು 07-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

ಇತ್ತೀಚಿನ ನವೀಕರಣ​ : 13-06-2021 01:35 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080