ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 11-03-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 47/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಉಮೇಶ ಕುಮಾರ ತಂದೆ ರಾಮ ಆಶೀಸ್ ತಿವಾರಿ, ಪ್ರಾಯ-25 ವರ್ಷ, ವೃತ್ತಿ-ಚಾಲಕ, ಸಾ|| ತಿನೋಹಾನ್, ದಿನಾರ್, ಪೋ: ರಾಜಪುರ, ಪರ್ಸೋವ್, ತಾ: ಮೊತಿಗಂಜಿ, ಜಿ: ಗೊಂಡಾ, ಉತ್ತರ ಪ್ರದೇಶ (ಪ್ಯಾಸೆಂಜರ್ ಬೊಲೆರೋ ವಾಹನ ನಂ: ಜಿ.ಎ-04/ಸಿ-4817 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 11-03-2021 ರಂದು 12-15 ಗಂಟೆಗೆ ತಾನು ಚಲಾಯಿಸುತ್ತಿದ್ದ ಪ್ಯಾಸೆಂಜರ್ ಬೊಲೆರೋ ವಾಹನ ನಂ: ಜಿ.ಎ-04/ಸಿ-4817 ನೇದನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ನೇದರಲ್ಲಿ ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಕೊಂಡು ಬಂದವನು, ಹಂದಿಗೋಣದ ಮಲ್ಲಿಕಾ ಪ್ಯಾಲೇಸ್ ಹೊಟೇಲ್ ಎದುರು ಪಿರ್ಯಾದಿಯ ಚಿಕ್ಕಪ್ಪನಾದ ನಾಗಪ್ಪ ತಂದೆ ತಿಪ್ಪಯ್ಯ ಪಟಗಾರ, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಂದಿಗೋಣ, ತಾ: ಕುಮಟಾ ಇವರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ನೇದರಲ್ಲಿ ರಸ್ತೆ ನಡೆದುಕೊಂಡು ದಾಟುತ್ತಿದ್ದನ್ನು ನೋಡಿಯು ಸಹ ತಾನು ಚಲಾಯಿಸುತ್ತಿದ್ದ ಬೊಲೆರೋ ವಾಹನದ ವೇಗವನ್ನು ನಿಯಂತ್ರಿಸದೇ, ಅಜಾಗರೂಕತೆಯಿಂದ ಬೊಲೆರೋ ವಾಹನದ ಎಡಭಾಗವನ್ನು ತಾಗಿಸಿ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ರಸ್ತೆಯಲ್ಲಿ ಬೀಳುವಂತೆ ಮಾಡಿ ಮೈ ಕೈಗಳಿಗೆ ಗಾಯವಾಗಿ, ತಲೆಯ ಬಲಭಾಗಕ್ಕೆ ಹಾಗೂ ಬಲಕಿವಿಗೆ ತೀವೃ ಗಾಯನೋವು ಪಡಿಸಿದ್ದು, ಗಾಯಗೊಂಡ ನಾಗಪ್ಪ ಪಟಗಾರ ಈತನಿಗೆ ಚಿಕಿತ್ಸೆಗಾಗಿ ಕುಮಟಾದ ಸರ್ಕಾರಿ ಆಸ್ಪತ್ರೆಗ ದಾಖಲಿಸಿದ್ದು, ಅಲ್ಲಿನ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಕುರಿತು ಮಂಗಳೂರಿಗೆ ಕರೆದುಕೊಂಡು ಹೋಗುತ್ತಿರುವಾಗ ಮುರ್ಡೇಶ್ವರದ ಹತ್ತಿರ 13-20 ಗಂಟೆಯಲ್ಲಿ ಮೃತನಾದ ಬಗ್ಗೆ ಪಿರ್ಯಾದಿ ಶ್ರೀ ತುಳಸಿದಾಸ ತಂದೆ ರಾಮ ಪಟಗಾರ, ಪ್ರಾಯ-32 ವರ್ಷ, ವೃತ್ತಿ-ಪೇಂಟಿಂಗ್ ಕೆಲಸ, ಸಾ|| ಹಂದಿಗೋಣ, ತಾ: ಕುಮಟಾ ರವರು ದಿನಾಂಕ: 11-03-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 48/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಬೀಲ್ ಹುಸೇನ್ ಶೇಖ್, ಸಾ|| ಚಂದಾವರ, ತಾ: ಹೊನ್ನಾವರ (ಮಹೀಂದ್ರಾ ಗೂಡ್ಸ್ ವಾಹನ ನಂ: ಕೆ.ಎ-47/ಎ-0643 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 11-03-2021 ರಂದು 13-30 ಗಂಟೆಗೆ ತನ್ನ ಮಹೀಂದ್ರಾ ಗೂಡ್ಸ್ ವಾಹನ ನಂ: ಕೆ.ಎ-47/ಎ-0643 ನೇದನ್ನು ಮಾಸೂರು ಕಡೆಯಿಂದ ಹೆಗಡೆ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಮಾಸೂರು ಹೊಂಡಮಾಂವ್ ತಿರುವಿನಲ್ಲಿ ವೇಗವನ್ನು ನಿಯಂತ್ರಿಸದೇ, ಹೆಗಡೆ ಕಡೆಯಿಂದ ಮಾಸೂರು ಕಡೆಗೆ ಪಿರ್ಯಾದಿಯವರು ಸವಾರಿ ಮಾಡಿಕೊಂಡು ಬರುತ್ತಿದ್ದ ಬಜಾಜ್ ಡಿಸ್ಕವರಿ ಮೋಟಾರ್ ಸೈಕಲ್ ನಂ: ಕೆ.ಎ-47/ಜೆ-8937 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮವಾಗಿ ಪಿರ್ಯಾದಿಯವರು ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು, ಅವರ ಬಲಗಾಲಿನ ಪಾದಕ್ಕೆ, ಮೊಣಗಂಟಿಗೆ ಹಾಗೂ ಬಲಗೈಗೆ ಗಾಯವಾಗಿದ್ದು ಮತ್ತು ಮೋಟಾರ್ ಸೈಕಲ್ ಹಿಂಬದಿಗೆ ಕುಳಿತಿದ್ದ ಪಿರ್ಯಾದಿಯ ಹೆಂಡತಿ ಶ್ರೀಮತಿ ಲಕ್ಷ್ಮೀ ಇವರ ತಲೆಯ ಹಿಂಬದಿಗೆ ಗಾಯವಾಗಲು ಮತ್ತು ಎರಡೂ ವಾಹನಗಳು ಜಖಂ ಆಗಲು ಆರೋಪಿ ಚಾಲಕನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಶೇಖರ ತಂದೆ ಬೀರಪ್ಪಾ ಮುಕ್ರಿ, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೆಗಡೆ, ತಾರಿಬಾಗಿಲ, ತಾ: ಕುಮಟಾ ರವರು ದಿನಾಂಕ: 11-03-2021 ರಂದು 20-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 18/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರವೀಣ ತಂದೆ ಜಟ್ಟು ಗೌಡ, ಪ್ರಾಯ-23 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ವಂದೂರ, ತಾ: ಹೊನ್ನಾವರ (ಮೋಟಾರ್ ಸೈಕಲ್ ನಂ: ಕೆ.ಎ-47/ಆರ್-6095 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 11-03-2021 ರಂದು 19-30 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರಲ್ಲಿ ಹೊನ್ನಾವರ ಶಹರದ ಹೋಲಿ ರೋಜರಿ ಸ್ಕೂಲ್ ಎದುರಿಗೆ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-47/ಆರ್-6095 ನೇದನ್ನು ಹೊನ್ನಾವರ ಕಡೆಯಿಂದ ಗೇರುಸೊಪ್ಪ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಮೋಟಾರ್ ಸೈಕಲನ್ನು ಒಮ್ಮೇಲೆ ರಸ್ತೆಯ ಬಲಕ್ಕೆ ಚಲಾಯಿಸಿ, ಕವಲಕ್ಕಿ ಕಡೆಯಿಂದ ಹೊನ್ನಾವರ ಶಹರದ ಕಡೆಗೆ ಗಾಯಾಳು ವಿನಾಯಕ ತಂದೆ ಬುಧವಂತ ಮೇಸ್ತ, ಪ್ರಾಯ-36 ವರ್ಷ, ವೃತ್ತಿ-:ಕೂಲಿ ಕೆಲಸ, ಸಾ|| ಪ್ರಭಾತನಗರ, ತಾ: ಹೊನ್ನಾವರ. ಈತನು ಚಲಾಯಿಸಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಆರ್-9981 ನೇದಕ್ಕೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಬಲಗೆನ್ನೆಗೆ ಗಾಯ ಪಡಿಸಿ ಹಾಗೂ ಬಲಗಣ್ಣಿಗೆ ಪೆಟ್ಟನ್ನುಂಟು ಪಡಿಸಿದ್ದಲ್ಲದೇ, ಸದರ ಗಾಯಾಳುವಿನ ಮೋಟಾರ್ ಸೈಕಲ್ ಹಿಂದಿನಿಂದ ಕವಲಕ್ಕಿ ಕಡೆಯಿಂದ ಹೊನ್ನಾವರ ಕಡೆಗೆ ಪಿರ್ಯಾದಿಯು ಚಲಾಯಿಸಿಕೊಂಡು ಬರುತ್ತಿದ್ದ ಪಿರ್ಯಾದಿಯ ಬಾಬ್ತು ಕಾರ್ ನಂ: ಕೆ.ಎ-47/ಎಮ್-8247 ನೇದಕ್ಕೂ ಸಹ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಪಿರ್ಯಾದಿಯ ಕಾರನ್ನು ಜಖಂ ಪಡಿಸಿದ್ದಲ್ಲದೇ, ತಾನೂ ಸಹ ತನ್ನ ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು ತನ್ನ ಎಡಗೈಗೆ, ಎಡಗಾಲಿನ ಮೊಣಗಂಟಿಗೆ ಹಾಗೂ ಪಾದಕ್ಕೆ ಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ವಿನೋದ ತಂದೆ ಚಂದ್ರಕಾಂತ ಭಟ್, ಪ್ರಾಯ-28 ವರ್ಷ, ವೃತ್ತಿ-ಬ್ಯಾಂಕ್ ಉದ್ಯೋಗಿ, ಸಾ|| ಬೇರೊಳ್ಳಿ. ಪೋ: ನಗರೆ, ತಾ: ಹೊನ್ನಾವರ ರವರು ದಿನಾಂಕ: 11-03-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 42/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 10-03-2021 ರಂದು 22-00 ಗಂಟೆಯಿಂದ 11-03-2021 ರಂದು ಬೆಳಿಗ್ಗೆ 06-00 ಗಂಟೆಯ ನಡುವಿನ ಅವಧಿಯಲ್ಲಿ ಮಂಕಿಯ ನಗರ ಮನೆಯಲ್ಲಿರುವ ಪಿರ್ಯಾದಿಯ ವಾಸದ ಮನೆಯ ಮುಂದಿನ ಅಂಗಳದ ಜಾಗದಲ್ಲಿ ಪಿರ್ಯಾದಿಯವರು 20 ಗೋಣಿ ಚೀಲಗಳಲ್ಲಿ ತುಂಬಿಟ್ಟ ಸುಮಾರು 1,20,000/- ರೂಪಾಯಿ ಮೌಲ್ಯದ 4 ಕ್ವಿಂಟಾಲ್ ಆಗುವಷ್ಟು ಸುಲಿದ ಅಡಿಕೆಗಳನ್ನು ಚೀಲಗಳ ಸಮೇತ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಕೇಶವ  ತಂದೆ ಸಣ್ತಮ್ಮ ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ವ್ಯಾಪಾರ, ಸಾ|| ನಗರ ಮನೆ, ಪೋ: ತಾಳಮಕ್ಕಿ, ತಾ: ಹೊನ್ನಾವರ ರವರು ದಿನಾಂಕ: 11-03-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 37/2021, ಕಲಂ: 341, 323, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅವಿನಾಶ ತಂದೆ ನಾರಾಯಣ ಪವಾರ, ಪ್ರಾಯ-32 ವರ್ಷ, ಸಾ|| ತಮ್ಯಾನಕೊಪ್ಪ, ತಾ: ಮುಂಡಗೋಡ. ನಮೂದಿತ ಆರೋಪಿತನು ದಿನಾಂಕ: 11-03-2021 ರಂದು 16-00 ಗಂಟೆಯ ಸುಮಾರಿಗೆ ಒಂದು ಸಿಗರೇಟ್ ಕೊಡಿಸುವಂತೆ ಗಾಯಾಳು ಉತ್ತಮ ಕುಮಾರನಲ್ಲಿ ಕೇಳಿದಾಗ ‘ತನ್ನ ಹತ್ತಿರ ಹಣವಿಲ್ಲ’ ಅಂತಾ ಹೇಳಿದಾಗ, ಉತ್ತಮ ಕುಮಾರ ಮತ್ತು ಆರೋಪಿತನ ನಡುವೆ ಮಾತಿಗೆ ಮಾತಾಗಿ ಜಗಳ ಪ್ರಾರಂಭವಾಯಿತು. ಆಗ ಆರೋಪಿತನು ಉತ್ತಮನಿಗೆ ಅಡ್ಡಗಟ್ಟಿ ತಡೆದು ನಿಲ್ಲಿಸಿ ‘ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ, ಬೋಸಡಿ ಮಗನೆ, ಸೂಳೆ ಮಗನೆ’ ಅಂತಾ ಬೈಯ್ದು ಕೈಯಿಂದ ಉತ್ತಮ ಕುಮಾರನಿಗೆ ಎಡಗಣ್ಣಿನ ಭಾಗದಲ್ಲಿ ಹಾಗೂ ಎಡಗೆನ್ನೆಗೆ ಹೊಡೆದನು. ಆಗ ಇಬ್ಬರೂ ಕೈಕೈ ಮಿಲಾಯಿಸಿಕೊಂಡು ದೂಡಾಡಿಕೊಂಡಾಗ ಆರೋಪಿತನು ಉತ್ತಮ ಕುಮಾರನಿಗೆ ಜೋರಾಗಿ ದೂಡಿ ಹಾಕಿದಾಗ, ಉತ್ತಮ ಕುಮಾರನು ನಮ್ಮ ಅಂಗಡಿಯ ಎದುರಿನ ಗಟಾರದ ಹತ್ತಿರ ಬಿದ್ದನು. ಆಗ ಅವನಿಗೆ ಸ್ಥಳದಲ್ಲಿದ್ದ ಕಲ್ಲಿಗೆ ತಲೆ ಬಡಿದು ಎಡಬದಿಯ ತಲೆಗೆ ರಕ್ತ ಗಾಯವಾಗಿದ್ದು, ಆತನ ಎಡಕಿವಿಯಿಂದ ರಕ್ತ ಬರುವಂತೆ ಮಾಡಿರುತ್ತಾನೆ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಕುಮಾರ ತಂದೆ ಲುಂಬು ರಾಠೋಡ, ಪ್ರಾಯ-32 ವರ್ಷ, ವೃತ್ತಿ-ವ್ಯಾಪಾರ, ಸಾ|| ತಮ್ಯಾನಕೊಪ್ಪ, ತಾ: ಮುಂಡಗೋಡ ರವರು ದಿನಾಂಕ: 11-03-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 29/2021, ಕಲಂ: 395, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಶ್ರೀಪತಿ ತಂದೆ ಗಜಾನನ ಕೋಡ್ಸರ, ಪ್ರಾಯ-60 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕೋಡ್ಸರ, ತಾ: ಸಿದ್ದಾಪುರ, 2]. ಶ್ರೀಮತಿ ಸರೋಜಾ ಕೋಂ. ಶ್ರೀಪತಿ ಕೋಡ್ಸರ, ಪ್ರಾಯ-57 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕೋಡ್ಸರ, ತಾ: ಸಿದ್ದಾಪುರ, 3]. ವಿನುತಾ ತಂದೆ ಶ್ರೀಪತಿ ಕೋಡ್ಸರ, ಪ್ರಾಯ-25 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕೋಡ್ಸರ, ತಾ: ಸಿದ್ದಾಪುರ, 4]. ವಿನಯಾ ತಂದೆ ಶ್ರೀಪತಿ ಕೋಡ್ಸರ, ಪ್ರಾಯ-29 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕೋಡ್ಸರ, ತಾ: ಸಿದ್ದಾಪುರ, 5]. ಶ್ರೀ ಸುರೇಶ ತಂದೆ ಈಶ್ವರ ನಾಯ್ಕ, ಪ್ರಾಯ-46 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಾನಗೋಡು, ತಾ: ಶಿರಸಿ, 6]. ಶ್ರೀ ರಾಮಚಂದ್ರ ಡಿ ನಾಯ್ಕ, ಪ್ರಾಯ-60 ವರ್ಷ,  ವೃತ್ತಿ-ಕೃಷಿ ಕೆಲಸ, ಸಾ|| ಕಾನಗೋಡು, ತಾ: ಶಿರಸಿ, 7]. ಗಂಗಾಧರ ತಂದೆ ರಾಮಕೃಷ್ಣ ಹೆಗಡೆ, ಪ್ರಾಯ-65 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ನವಣಗೆರೆ, ತಾ: ಶಿರಸಿ. ಈ ನಮೂದಿತ ಆರೋಪಿತರು ಸೇರಿಕೊಂಡು ದಿನಾಂಕ: 10-12-2020  ರಂದು 10-00 ಗಂಟೆಯ ಸಮಯಕ್ಕೆ ಪಿರ್ಯಾದಿಯವರ ತಂದೆಯವರಾದ ಗಜಾನನ ಸುಬ್ಬಯ್ಯ ಕೋಡ್ಸರ ರವರ ಬಾಬ್ತು ಪಿರ್ಯಾದಿಯ ಸಹಿತವಾಗಿ ಎಲ್ಲ ವಾರಸುದಾರರಿಗೆ ಇರುವ ಹಕ್ಕಿನ ತೋಟದಲ್ಲರುವ ಅಂದಾಜು 8,00,000/- ರೂಪಾಯಿ ಮೌಲ್ಯದ ಅಡಿಕೆಗಳನ್ನು ದರೋಡೆ ಮಾಡಿ ತೆಗೆದುಕೊಂಡು ಬರಲು ಹೋದಾಗ, ಅದನ್ನು ತಡೆಯಲು ಹೋದಂತಹ ಪಿರ್ಯಾದಿ ಹಾಗೂ ಸಾಕ್ಷಿದಾರರಿಗೆ ಅವಾಚ್ಯವಾಗಿ ಬೈಯ್ದು, ಜೀವದ ಬೆದರಿಕೆ ಹಾಕಿ ಅಡಿಕೆಗಳನ್ನು ದರೋಡೆ ಮಾಡಿಕೊಂಡು ಹೋಗಿರುವ ಬಗ್ಗೆ ಪಿರ್ಯಾದಿ ಶ್ರೀ ಸತೀಶ ತಂದೆ ಗಜಾನನ ಕೋಡ್ಸರ, ಪ್ರಾಯ-37 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕೋಡ್ಸರ, ತಾ: ಸಿದ್ದಾಪುರ ರವರು ದಿನಾಂಕ: 11-03-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 11-03-2021

at 00:00 hrs to 24:00 hrs

 

ಹಳಿಯಾಳ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 06/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಕಸ್ತೂರಿ ಕೋಂ. ಸುಭಾಷ ಹುಡೇದ, ಪ್ರಾಯ-56 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ತೇರಗಾಂವ, ತಾ: ಹಳಿಯಾಳ. ಪಿರ್ಯಾದಿಯ ಹೆಂಡತಿಯಾದ ಇವಳು ದಿನಾಂಕ: 03-03-2021 ರಂದು ಮಧ್ಯಾಹ್ನ 03-00 ಗಂಟೆಯ ಸುಮಾರಿಗೆ ಪಿರ್ಯಾದಿಯ ಹೊಲದ ಮನೆಯ ಅಟ್ಟಲಿಗೆ ತಾಡಪಾಲ್ ತರಲು ಏಣಿಯ ಮೂಲಕ ಹತ್ತುತ್ತಿದ್ದವಳು, ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ತಲೆಗೆ, ಎಡಗಣ್ಣಿನ ಹತ್ತಿರ ಹಾಗೂ ಎಡಗೈಗೆ ಗಾಯನೋವು ಆಗಿದ್ದು, ಪ್ರಜ್ಞೆ ಇರಲಿಲ್ಲ. ಅವಳಿಗೆ ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಉಪಚಾರದಲ್ಲಿದ್ದವಳು, ತನಗಾದ ಗಾಯನೋವಿನಿಂದ ಚೇತರಿಸಿಕೊಳ್ಳದೇ ದಿನಾಂಕ: 11-03-2021 ರಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಬೆಳಿಗ್ಗೆ 06-40 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಇದರ ಹೊರತು ಅವಳ ಮರಣದಲ್ಲಿ ನಮಗೆ ಬೇರೇ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸುಭಾಷ ತಂದೆ ತವನಪ್ಪ ಹುಡೇದ, ಪ್ರಾಯ-63 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ತೇರಗಾಂವ, ತಾ: ಹಳಿಯಾಳ ರವರು ದಿನಾಂಕ: 11-03-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 07/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ದೇಮಣ್ಣಾ ತಂದೆ ರಾಮಾ ಗೋಡಿಮನಿ, ಪ್ರಾಯ-52 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಜನಗಾ, ತಾ: ಹಳಿಯಾಳ. ಪಿರ್ಯಾದಿಯ ಅಣ್ಣನಾದ ಇವನು ದಿನಾಂಕ: 11-03-2021 ರಂದು ಹಳಿಯಾಳ ತಾಲೂಕಿನ ಜನಗಾ ಗ್ರಾಮದಲ್ಲಿರುವ ತನ್ನ ಹೊಲದ ಕೆಲಸಕ್ಕೆ ಬಂದವನು, ತನ್ನ ಹೊಲಕ್ಕೆ ತನ್ನ ಹೊಲದ ಪಕ್ಕದಲ್ಲಿರುವ ತಟ್ಟಿಹಳ್ಳದಿಂದ ಪಂಪ್ ಸೆಟ್ ನಲ್ಲಿ ನೀರು ಕಡಿಮೆ ಬರುತ್ತಿದ್ದ ಕಾರಣ ಪಂಪ್ ಸೆಟ್ ಅನ್ನು ತಟ್ಟಿಹಳ್ಳದಲ್ಲಿ ಹೆಚ್ಚು ನೀರಿರುವ ಸ್ಥಳದಲ್ಲಿಡಲು ಹೋದವನು, ಸಾಯಂಕಾಲ 05-00 ಗಂಟೆಯಿಂದ ರಾತ್ರಿ 07-30 ಗಂಟೆಯ ಪೂರ್ವದ ಅವಧಿಯಲ್ಲಿ ಪಂಪ್ ಸೆಟ್‍ ನ ವಿದ್ಯುತ್ ಆಕಸ್ಮಿಕವಾಗಿ ತಗುಲಿಯೋ ಅಥವಾ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದು ಮುಳುಗಿ ಮೃತಪಟ್ಟಂತೆ ಕಂಡುಬರುತ್ತದೆ. ಇದರ ಹೊರತು ಅವನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿಠ್ಠಲ ತಂದೆ ರಾಮಾ ಗೋಡಿಮನಿ, ಪ್ರಾಯ-48 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಜನಗಾ, ತಾ: ಹಳಿಯಾಳ ರವರು ದಿನಾಂಕ: 11-03-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 13-03-2021 09:59 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080