ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 11-05-2021

at 00:00 hrs to 24:00 hrs

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 32/2021, ಕಲಂ: 269, 271, 332, 353, 504, 506 ಐಪಿಸಿ ಹಾಗೂ ಕಲಂ: 51(ಬಿ) ವಿಪತ್ತು ನಿರ್ವಹಣಾ ಕಾಯ್ದೆ-2005 ಮತ್ತು ಕಲಂ: 5(1) ಕರ್ನಾಟಕ ಎಪಿಡೆಮಿಕ್ ಎಕ್ಟ್-2020 ನೇದ್ದರ ವಿವರ...... ನಮೂದಿತ ಆರೋಪಿತ ಉದಯ ಕುಮಾರ ಟಿ. ತಂದೆ ತುಳಸಿಧರನ್, ಸಾ|| ಉದಯಭವನ, ಕಡಾಯಿಕೋಡು, ಕೊಟ್ಟಾರ್ಕರ್, ಕೇರಳಾ, ಹಾಲಿ ಸಾ|| ಹೊಸಾಳಿ ಕ್ರಾಸ್, ಸದಾಶಿವಗಡ, ಕಾರವಾರ. ದಿನಾಂಕ: 11-05-2021 ರಂದು 13-00 ಘಂಟೆಗೆ ಪಿರ್ಯಾದಿ ಹಾಗೂ ಸಿ.ಎಚ್.ಸಿ-722, ವಾಸುದೇವ ಕೋನೇರಿ ರವರು ಸೇರಿಕೊಂಡು ಹೊಸಾಳಿ ಕ್ರಾಸ್ ಹತ್ತಿರ ನಮೂದಿತ ಆರೋಪಿತನನ್ನು ವಿಚಾರಣೆ ಮಾಡುತ್ತಿರುವಾಗ ಪಿರ್ಯಾದಿಗೆ ಏಕಾಏಕಿ ಮೈಮೇಲೆ ಏರಿ ಬಂದು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಧಮಕಿ ಹಾಕಿ, ಪಿರ್ಯಾದಿಯ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಆತಂಕ ಪಡಿಸಿದ್ದಲ್ಲದೇ, ತನ್ನ ಸಮವಸ್ತ್ರವನ್ನು ಹಿಡಿದು ಎಳೆದಾಡಿದ್ದಲ್ಲದೇ, ಕೋವಿಡ್-19 ಮಾರಕ ರೋಗ ಇರುವಾಗ ಘನ ಸರಕಾರದ ಲಾಕಡೌನ್ ಆದೇಶವನ್ನು ಉಲ್ಲಂಘಿಸಿ, ಮಾಸ್ಕ್ ಧರಿಸಿದೇ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ ಸಾರ್ವಜನಿಕವಾಗಿ ತಿರುಗಾಡಿ ಕೊರೋನಾ ವೈರಸ್ ನಂತಹ ಮಾರಕ ರೋಗ ಹರಡಲು ಕಾರಣವಾಗಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸಂತೋಷ ಅಣ್ಣಪ್ಪಾ ಲಮಾಣಿ, ಪೊಲೀಸ್ ಹೆಡ್ ಕಾನ್ಸಟೇಬಲ್ (ಸಿ.ಎಚ್.ಸಿ-1120), ಚಿತ್ತಾಕುಲಾ ಪೊಲೀಸ್ ಠಾಣೆ ರವರು ದಿನಾಂಕ: 11-05-2021 ರಂದು 14-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 76/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ಹಾಗೂ ಕಲಂ: 263, 270 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಂಜು ತಂದೆ ರಾಮ ಗೌಡ, ಪ್ರಾಯ-40 ವರ್ಷ, ವೃತ್ತಿ-ಚಿಲ್ಲರೆ ವ್ಯಾಪಾರ, ಸಾ|| ಆಡುಕುಳ, ಖೈರಗದ್ದೆ, ಮಂಕಿ, ತಾ: ಹೊನ್ನಾವರ, 2]. ಸೀತಾರಾಮ ರಾಮ ನಾಯ್ಕ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮುಂಡಾರ, ಮಂಕಿ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ದಿನಾಂಕ: 11-05-2021 ರಂದು 2045 ಗಂಟೆಗೆ ಮುಂಡಾರ ಸರ್ಕಲಿನಲ್ಲಿ ವೆಲ್ಡಿಂಗ್ ಶಾಪ್ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಬೀದಿ ದೀಪದ ಬೆಳಕಿನಲ್ಲಿ ಕುಳಿತು ಸರಾಯಿ ಕುಡಿಯಲು ಲೈಸನ್ಸ್ ಇಲ್ಲದೇ 180 ML ಅಳತೆಯ ‘Officers Choice Star supreme whisky’ ಅಂತಾ ಬರೆದಿರುವ ಸರಾಯಿ ಪ್ಯಾಕೆಟ್ ಗಳಲ್ಲಿದ್ದ ಸರಾಯಿಯನ್ನು ಕುಡಿಯುತ್ತಿದ್ದಾಗ ದಾಳಿಯ ಸಮಯದಲ್ಲಿ 180 ML ನ Officers Choice Star supreme whisky ಪ್ಯಾಕೆಟ್-01, 180 ML ನ Officers Choice Star supreme whisky ಖಾಲಿ ಪ್ಯಾಕೆಟ್-02, ಪ್ಲಾಸ್ಟಿಕ್ ಗ್ಲಾಸ್-02 ಹಾಗೂ 1 ಲೀಟರಿನ ಖಾಲಿ ಬಾಟಲ್-01. ಸದರಿ ಸ್ವತ್ತುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪರಮಾನಂದ ಬಿ. ಕೊಣ್ಣೂರ, ಪಿ.ಎಸ್.ಐ (ಕಾ&ಸು), ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 11-05-2021 ರಂದು 22-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 70/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತನು ಮಾರುತಿ ಸ್ವಿಫ್ಟ್ ಕಾರ್ ನಂ: ಕೆ.ಎ-25/ಎಮ್.ಎ-4001 ನೇದರ ಚಾಲಕನಾಗಿದ್ದು, ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 09-05-2021 ರಂದು 18-10 ಗಂಟೆಯ ಸಮಯಕ್ಕೆ ತನ್ನ ಮಾರುತಿ ಸ್ವಿಫ್ಟ್ ಕಾರ್ ನಂ: ಕೆ.ಎ-25/ಎಮ್.ಎ-4001 ನೇದನ್ನು ಭಟ್ಕಳ ಕಡೆಯಿಂದ ಮಾರುಕೇರಿ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಭಟ್ಕಳ-ಸಾಗರ ಡಾಂಬರ್ ರಸ್ತೆಯ ಕಿತ್ರೆ ಕ್ರಾಸ್ ಹತ್ತಿರ ತನ್ನ ವಾಹನವನ್ನು ರಸ್ತೆಯ ಎಡಬದಿಯಲ್ಲಿ ಪಲ್ಟಿ ಕೆಡವಿ ಅಪಘಾತ ಪಡಿಸಿ, ವಾಹನವನ್ನು ಸ್ಥಳದಲ್ಲಿ ಬಿಟ್ಟು ಹೆದರಿ ಓಡಿ ಹೋದ ಬಗ್ಗೆ ಪಿರ್ಯಾದಿ ಶ್ರೀ ನಾಗೇಶ ತಂದೆ ಗಣೇಶ ಹೆಬ್ಬಾರ, ಪ್ರಾಯ-34 ವರ್ಷ, ವೃತ್ತಿ-ಚಾಲಕ, ಸಾ|| ಮಾರುಕೇರಿ, ತಾ: ಭಟ್ಕಳ ರವರು ದಿನಾಂಕ: 11-05-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 11-05-2021

at 00:00 hrs to 24:00 hrs

 

ಹಳಿಯಾಳ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 10/2021, ಕಲಂ: 174(ಸಿ) ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಸಂಗಪ್ಪ ತಂದೆ ಭೀಮಪ್ಪ ಕೋಮಾರ, ಪ್ರಾಯ-35  ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮರಿಗೇರಿ, ತಾ: ಕಿತ್ತೂರು, ಜಿ: ಬೆಳಗಾವಿ. ಪಿರ್ಯಾದಿಯವರ ಮಗನಾದ ಈತನು ವಿಪರೀತ ಸರಾಯಿ ಕುಡಿಯುವ ಚಟದವನಾಗಿದ್ದು, ಕಳೆದ 15 ವರ್ಷಗಳ ಹಿಂದೆ ಹಳಿಯಾಳ ತಾಲೂಕಿನ ಶಿವಪುರ ಗ್ರಾಮದ ಭೀಮಪ್ಪ ಬಸಪ್ಪ ಬಾಗೋಡಿ ಇವರ ಮಗಳಾದ ಗೀತವ್ವ ಇವಳಿಗೆ ಮದುವೆಯಾಗಿದ್ದವನು, ಯಾವಾಗಲೂ ಸರಾಯಿ ಕುಡಿದು ಬಂದು ತನ್ನ ಹೆಂಡತಿಯೊಂದಿಗೆ ಜಗಳ ತೆಗೆದು ಹೊಡೆಬಡೆ ಮಾಡುತ್ತಿದ್ದವನು, ಕಳೆದ 15 ದಿನಗಳ ಹಿಂದೆ ತನ್ನ ಹೆಂಡತಿಯೊಂದಿಗೆ ಜಗಳವಾಡಿ, ಅಳ್ನಾವರ ತಾಲೂಕಿನ ಕಾಶೀನಟ್ಟಿ ಗ್ರಾಮದಲ್ಲಿ ತನ್ನ ಹೆಂಡತಿ ಗೀತವ್ವ ಇವಳಿಗೆ ಮತ್ತು ತನ್ನ ಎರಡು ಮಕ್ಕಳಿಗೆ ಗೀತವ್ವನ ಸಂಬಂಧಿಕರ ಮನೆಯಲ್ಲಿ ಬಿಟ್ಟು ಹೋದವನು, ಮರುದಿವಸ ಕಾಶೀನಟ್ಟಿಗೆ ಹೋಗಿ ಗೀತವ್ವಳ ಸಂಬಂಧಿಕರೊಂದಿಗೆ ಜಗಳವಾಡಿದ್ದರಿಂದ, ಗೀತವ್ವ ಇವಳು ತನ್ನ ತಮ್ಮನಾದ ಬಸು ಭೀಮಪ್ಪ ಬಾಗೋಡಿ ಇವನೊಂದಿಗೆ ತನ್ನ ತವರು ಮನೆಯಾದ ಹಳಿಯಾಳ ತಾಲೂಕಿನ ಶಿವಪುರಕ್ಕೆ ಬಂದಿದ್ದು, ಮೃತನು ದಿನಾಂಕ: 10-05-2021 ರಂದು 21-00 ಗಂಟೆಗೆ ವಿಪರೀತ ಸರಾಯಿ ಕುಡಿದು ಹಳಿಯಾಳ ತಾಲೂಕಿನ ಶಿವಪುರದ ತನ್ನ ಹೆಂಡತಿಯ ತವರು ಮನೆಗೆ ಬಂದು ‘ತನ್ನ ಮಕ್ಕಳಿಗೆ ಕಳಿಸಿ ಕೊಡ್ರಿ’ ಅಂತಾ ಕೇಳಿದ್ದಕ್ಕೆ, ಗೀತವ್ವನ ತಂದೆ-ತಾಯಿಯವರು ‘ಈಗ ನೀನು ತುಂಬಾ ಸರಾಯಿ ಕುಡಿದಿದ್ದೀಯಾ. ಮಕ್ಕಳಿಗೆ ಕರೆದುಕೊಂಡು ರಾತ್ರಿ ವೇಳೆ ಬೈಕ್ ಮೇಲೆ ಹೋಗುವುದು ಸರಿ ಅಲ್ಲ. ಬೆಳಿಗ್ಗೆ ನಿಮ್ಮ  ಹಿರಿಯರಿಗೆ ಕರೆದುಕೊಂಡು ಬಂದು ನಿನ್ನ ಹೆಂಡತಿ ಮಕ್ಕಳಿಗೆ ಕರೆದುಕೊಂಡು ಹೋಗು’ ಅಂತಾ ಹೇಳಿದ್ದಕ್ಕೆ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಬೇಸರಗೊಂಡು ದಿನಾಂಕ: 10-05-2021 ರಂದು 21-15 ಗಂಟೆಯಿಂದ ದಿನಾಂಕ: 11-05-2021 ರಂದು 06-00 ಗಂಟೆಯ ನಡುವಿನ ಅವಧಿಯಲ್ಲಿ ಹಳಿಯಾಳ ತಾಲೂಕಿನ ಶಿವಪುರದ ತನ್ನ ಹೆಂಡತಿ ಮನೆಯ ಹಿತ್ತಲದಲ್ಲಿರುವ ಪಾಯಿಖಾನೆಯ ಸಿಮೆಂಟ್ ಬಾಗಿಲಿಗೆ ಹಗ್ಗದಿಂದ ಉರುಳು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಆದರೂ ಕೂಡ ಮೃತನ ಮರಣದಲ್ಲಿ ಸಂಶಯ ಇದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಭೀಮಪ್ಪ ತಂದೆ ಯಲ್ಲಪ್ಪ ಕೋಮಾರ, ಪ್ರಾಯ-65 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮರಿಗೇರಿ, ತಾ: ಕಿತ್ತೂರು, ಜಿ: ಬೆಳಗಾವಿ ರವರು ದಿನಾಂಕ: 11-05-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 20/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಗುರುರಾಜ ತಂದೆ ದತ್ತಾತ್ರೇಯ ಭಟ್ಕಳಕರ್, ಪ್ರಾಯ-48 ವರ್ಷ, ವೃತ್ತಿ-ನಿರುದ್ಯೋಗಿ, ಸಾ|| ಸಿದ್ದಾಪುರ ಶಹರ. ಸುದ್ದಿದಾರನ ದೊಡ್ಡಪ್ಪನ ಮಗನಾದ ಈತನು. ಕಳೆದ 20 ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದವನು, ಸರಿಯಾಗಿ ಊಟ, ನಿದ್ರೆ ಮಾಡದೆ ಆರೋಗ್ಯವನ್ನು ಹದಗೆಡಿಸಿಕೊಂಡು ಅನಾರೋಗ್ಯದಿಂದ ಬಳಲುತ್ತಾ, ಹರಕಲು ಬಟ್ಟೆಯನ್ನು ಹಾಕಿಕೊಂಡು ತಲೆ ಕೂದಲು ಹಾಗೂ ಗಡ್ಡವನ್ನು ಬಿಟ್ಟುಕೊಂಡು ಹುಚ್ಚನಂತೆ ಸಿದ್ದಾಪುರ ಶಹರದಲ್ಲಿ ಅಲೆದಾಡುತ್ತಾ, ಎಲ್ಲೆಂದರಲ್ಲಿ ಮಲಗುತ್ತಿದ್ದವನು. ದಿನಾಂಕ: 11-05-2021 ರಂದು ಬೆಳಿಗ್ಗೆ 06-30 ಗಂಟೆಯಿಂದ ಮಧ್ಯಾಹ್ನ 01-00 ಗಂಟೆಯ ನಡುವಿನ ಅವಧಿಯಲ್ಲಿ ಸಿದ್ದಾಪುರ ಶಹರದ ತರಕಾರಿ ಮಾರುಕಟ್ಟೆಯ ಹತ್ತಿರ ಇರುವ ಸಾರ್ವಜನಿಕ ಬಾವಿಯ ಪಕ್ಕದಲ್ಲಿ ಮಲಗಿದ್ದಲ್ಲಿಯೇ ಮೃತಪಟ್ಟಿದ್ದು. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಿ ಕೊಡಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ರಾಮಚಂದ್ರ ತಂದೆ ದಿಗಂಬರ ಭಟ್ಕಳಕರ್, ಪ್ರಾಯ-46 ವರ್ಷ, ವೃತ್ತಿ-ವ್ಯವಹಾರ, ಸಾ|| ಗಣಪತಿ ಗಲ್ಲಿ, ಹೊಸಪೇಟೆ, ಸಿದ್ದಾಪುರ ಶಹರ ರವರು ದಿನಾಂಕ: 11-05-2021 ರಂದು 14-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 12-05-2021 04:22 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080