ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 11-11-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 93/2021, ಕಲಂ: 324, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ನಿತ್ಯಾನಂದ ತಂದೆ ಲಿಂಗಾ ಉಳ್ವೇಕರ್, 2]. ಶ್ರೀಮತಿ ಜ್ಯೋತಿ ಕೋಂ. ನಿತ್ಯಾನಂದ ಉಳ್ವೇಕರ್, ಸಾ|| (ಇಬ್ಬರೂ) ಸರ್ವೋದಯ ನಗರ, ಕೋಡಿಬಾಗ, ಕಾರವಾರ. ದಿನಾಂಕ: 04-11-2021 ರಂದು ಬೆಳಿಗ್ಗೆ 05-30 ಗಂಟೆಗೆ ಪಿರ್ಯಾದಿಯ ಹೆಂಡತಿ ಶ್ರೀಮತಿ ಮಾಲತಿ ಹರಿಕಂತ್ರ ಇವರು ತಮ್ಮ ಮನೆಯ ಅಂಗಳ ಗುಡಿಸಲು ಹೊರಗೆ ಬಂದಾಗ ತಮ್ಮ ಮನೆಯ ಅಂಗಳದಲ್ಲಿ ಅತಿಯಾದ ಕಸ ಬಿದ್ದಿದ್ದನ್ನು ನೋಡಿ ಅಲ್ಲಿಯೇ ಇದ್ದ ಪಕ್ಕದ ಮನೆಯ ನಿವಾಸಿಯಾದ ಆರೋಪಿ 1 ನೇಯವನಿಗೆ ಕೇಳಿದಾಗ ಆತನು ಪಿರ್ಯಾದಿಯ ಹೆಂಡತಿಗೆ ‘ಬೋಳಿ ರಂಡೆ’ ಅಂತಾ ಅವಾಚ್ಯವಾಗಿ ಬೈಯ್ದು, ‘ಈಗಲೇ ಮನೆ ಖಾಲಿ ಮಾಡಿ’ ಅಂತಾ ಹೇಳಿದಾಗ ಪಿರ್ಯಾದಿಯು ಮುಂದೆ ಹೋಗಿ ಆರೋಪಿ 1 ನೇಯವನಿಗೆ ‘ಯಾಕೆ ನಮ್ಮ ಅಂಗಳದಲ್ಲಿ ಕಸ ಹಾಕಿದ್ದಿಯಾ?’ ಅಂತಾ ಕೇಳಿದಾಗ ಆತನು ಒಮ್ಮೇಲೆ ಪಿರ್ಯಾದಿಗೆ ‘ಬೋಳಿ ಮಗನೆ, ಸೂಳೆ ಮಗನೆ’ ಅಂತಾ ಅವಾಚ್ಯವಾಗಿ ಬೈಯ್ದು, ‘ಈಗಿಂದೀಗಲೇ ಮನೆ ಖಾಲಿ ಮಾಡು’ ಅಂತಾ ಹೇಳಿ ಅಲ್ಲಿಯೇ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ಪಿರ್ಯಾದಿಯವರ ಎಡಗಾಲಿನ ಮೇಲೆ ಬೀಳಿಸಿ, ಎಡಗಾಲಿನ ಹೆಬ್ಬೆರಳಿಗೆ ಗಾಯನೋವು ಪಡಿಸಿದ್ದಲ್ಲದೇ, ಸ್ಥಳದಲ್ಲಿ ಹಾಜರಿದ್ದ ಆರೋಪಿ 1 ನೇಯವನ ಹೆಂಡತಿಯಾದ ಆರೋಪಿ 2 ನೇಯವಳು ಪಿರ್ಯಾದಿ ಹಾಗೂ ಪಿರ್ಯಾದಿಯ ಹೆಂಡತಿ ಮಾಲತಿಗೆ ಅವಾಚ್ಯವಾಗಿ ಬೈಯ್ದು, ಅಲ್ಲಿಂದ ಹೋಗುವಾಗ ಆರೋಪಿ 1 ನು ಪಿರ್ಯಾದಿ ಹಾಗೂ ಪಿರ್ಯಾದಿಯ ಹೆಂಡತಿ ಮಾಲತಿಗೆ ‘ಆದಷ್ಟು ಬೇಗ ಮನೆ ಖಾಲಿ ಮಾಡಿ. ಇಲ್ಲದಿದ್ದರೆ ನಿಮ್ಮನ್ನು ಮುಗಿಸುತ್ತೇನೆ’ ಅಂತಾ ಹೇಳಿ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ರಮಾಕಾಂತ ತಂದೆ ಈರಾ ಹರಿಕಂತ್ರ, ಪ್ರಾಯ-48 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಸರ್ವೋದಯ ನಗರ, ಕೋಡಿಬಾಗ, ಕಾರವಾರ ರವರು ದಿನಾಂಕ: 11-11-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 29/2021, ಕಲಂ: 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮನೋಹರ ಹರಿಕಂತ್ರ, 2]. ಸುಮನ ಮನೋಹರ ಹರಿಕಂತ್ರ 3]. ನಿಲೇಶ ಎಮ್. ಹರಿಕಂತ್ರ, 4]. ನವೀನ ಮನೋಹರ ಹರಿಕಂತ್ರ, ಸಾ|| (ಎಲ್ಲರೂ) ಫಿಷರೀಶ್ ಕಾಲೋನಿ, ಹಬ್ಬುವಾಡಾ, ಕಾರವಾರ. ದಿನಾಂಕ: 01-011-2021 ರಂದು ಸಾಯಂಕಾಲ 16-00 ಘಂಟೆಯ ಸುಮಾರಿಗೆ ಹಬ್ಬುವಾಡಾ ಫಿಷರೀಶ್ ಕಾಲೋನಿಯಲ್ಲಿರುವ ತಮ್ಮ ಮನೆಯ ಎದರುಗಡೆ ಆರೋಪಿತರು ಕಂಪೌಂಡ್ ಗೋಡೆಯನ್ನು ಕಟ್ಟಿ, ಅದಕ್ಕೆ ಪೇಟಿಂಗ್ ಮಾಡುತ್ತಿದ್ದು, ಈ ಬಗ್ಗೆ ಪಿರ್ಯಾದಿಯು ವಿಚಾರಿಸಿದ್ದಕ್ಕೆ ಆರೋಪಿ 3 ನೇಯವನು ಸಿಟ್ಟಿನಿಂದ ಪಿರ್ಯಾದಿಗೆ ಅವಾಚ್ಯವಾಗಿ ಬೈಯ್ದು, ‘ಇದು ನಿಮ್ಮಪ್ಪನ ಜಾಗ’ ಅಂತಾ ಬೈಯ್ದಿದ್ದು, ಆ ಸಮಯದಲ್ಲಿ ಪಿರ್ಯಾದಿಯು ಕಂಪೌಂಡ್ ಗೋಡೆ ತೆಗೆದಾಗ ಆರೋಪಿ 3 ನೇಯವನ ಮನೆಯವರಾದ ಆರೋಪಿ 1, 2 ಮತ್ತು 4 ನೇಯವರುಗಳು ಸೇರಿಕೊಂಡು ಪಿರ್ಯಾದಿಗೆ ಅವಾಚ್ಯವಾಗಿ ಬೈಯ್ದು, ‘ಬೋಳಿ ಮಗನೇ, ಸೂಳೆ ಮಗನೇ, ನಿನಗೆ ತೋರಿಸುತ್ತೇನೆ’ ಅಂತಾ ಧಮಕಿ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಮಿಥುನ ತಂದೆ ಪಾಂಡುರಂಗ ತಾಂಡೇಲ್, ಪ್ರಾಯ-36 ವರ್ಷ, ವೃತ್ತಿ-ಸೀಬರ್ಡ್ ನೌಕಾ ನೆಲೆಯಲ್ಲಿ ಕೆಲಸ, ಸಾ|| ಫಿಷರೀಶ್ ಕಾಲೋನಿ, ಹಬ್ಬುವಾಡಾ, ಕಾರವಾರ ರವರು ದಿನಾಂಕ: 11-11-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 170/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಆಕಿಲ್ ಅತಿಮೊಹಮ್ಮದ್, ಪ್ರಾಯ-28 ವರ್ಷ, ಸಾ|| ಗೋರಕಪುರ, ಉತ್ತರ ಪ್ರದೇಶ (ಕಂಟೇನರ್ ಲಾರಿ ನಂ: ಎಮ್.ಎಚ್-14/ಎಚ್.ವಿ-9329 ನೇದರ ಚಾಲಕ). ಈತನು ದಿನಾಂಕ: 10-11-2021 ರಂದು 17-00 ಗಂಟೆಗೆ ಅಂಕೋಲಾ ತಾಲೂಕಿನ ಹಾರವಾಡ ಘಟ್ಟದ ಕರಿದೇವರ ದೇವಸ್ಥಾನದ ಹತ್ತಿರ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಡಾಂಬರ್ ರಸ್ತೆಯ ಮೇಲೆ ತನ್ನ ಕಂಟೇನರ್ ಲಾರಿ ನಂ: ಎಮ್.ಎಚ್-14/ಎಚ್.ವಿ-9329 ನೇದನ್ನು ಅಂಕೋಲಾ ಕಡೆಯಿಂದ ಕಾರವಾರದ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿದ ಪಿರ್ಯಾದಿಯವರ ಕಾರ್ ನಂ: ಕೆ.ಎ-30/ಎಮ್-6505 ನೇದಕ್ಕೆ ಹಿಂಬದಿಯಲ್ಲಿ ಡಿಕ್ಕಿ ಹೊಡೆದು ಅಪಘಾತ ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಡಾ|| ಈಶ್ವರಪ್ಪ ಎಮ್ ತಂದೆ ಮಲ್ಲೇಶಪ್ಪ, ಪ್ರಾಯ-46 ವರ್ಷ, ವೃತ್ತಿ-ವೈದ್ಯರು, ಅಂಕೋಲಾ ಸರ್ಕಾರಿ ಆಸ್ಪತ್ರೆ, ಸಾ|| ತಾಲೂಕಾ ಸರ್ಕಾರಿ ಆಸ್ಪತ್ರೆ, ತಾ: ಅಂಕೋಲಾ ರವರು ದಿನಾಂಕ: 11-11-2021 ರಂದು 11-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 80/2021, ಕಲಂ: 342, 380, 406, 420 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸುರೇಶ, ಸಾ|| ಮೀರಜ ಅಥವಾ ಪುಣೆ, ಮಹಾರಾಷ್ಟ್ರ. ಈತನು ದಿನಾಂಕ: 10-11-2021 ರಂದು ಚಿಕ್ಕೋಡಿಯಿಂದ ಪಿರ್ಯಾದಿಯವಳಿಗೆ ಮದುವೆಯಾಗುತ್ತೇನೆ ಅಂತಾ ಪುಸಲಾಯಿಸಿ, ‘ಗೋಕರ್ಣಕ್ಕೆ ಹೋಗಿ ಬರೋಣ’ ಅಂತಾ ಹೇಳಿ, ಸಮಯ ಸುಮಾರು 07-15 ಗಂಟೆಗೆ ಗೋಕರ್ಣಕ್ಕೆ ಕರೆದುಕೊಂಡು ಬಂದು, ಗೋಕರ್ಣದ ಸಾವಿತ್ರಿ ಲಾಡ್ಜಿನಲ್ಲಿ ರೂಮನ್ನು ಮಾಡಿ ಉಳಿದು, ಪಿರ್ಯಾದಿಯು ಮಲಗಿದ ವೇಳೆ 21-00 ಗಂಟೆಯಿಂದ ದಿನಾಂಕ: 11-11-2021 ರಂದು 01-00 ಗಂಟೆಯ ನಡುವಿನ ಸಮಯದಲ್ಲಿ ಅವಳ ಬ್ಯಾಗಿನಲ್ಲಿದ್ದ ಸುಮಾರು 1,40,000/- ರೂಪಾಯಿ ಮೌಲ್ಯದ 35 ಗ್ರಾಂ ತೂಕದ ಬಂಗಾರದ ಮಂಗಳಸೂತ್ರ ಹಾಗೂ ಸುಮಾರು 12,000/- ರೂಪಾಯಿ ಮೌಲ್ಯದ 03 ಗ್ರಾಂ ತೂಕದ ಕಿವಿಯ ರಿಂಗ್ ಮತ್ತು 1,200/- ರೂಪಾಯಿ ಮೌಲ್ಯದ ನೋಕಿಯಾ ಮೊಬೈಲ್ ಸೆಟ್ ಮತ್ತು 10,000/- ರೂಪಾಯಿ ಬೆಲೆಯ ರೆಡ್ ಮಿ ಮೊಬೈಲ್ ಸೆಟ್ ಮತ್ತು 15,000/- ರೂಪಾಯಿ ನಗದು ಹಣವನ್ನು ಪಿರ್ಯಾದಿಗೆ ಗೊತ್ತಿಲ್ಲದೇ ತೆಗೆದುಕೊಂಡು ಲಾಡ್ಜಿನ ರೂಮಿನ ಬಾಗಿಲಿನ ಚಿಲಕವನ್ನು ಹೊರಬದಿಯಿಂದ ಹಾಕಿ ಹೋಗಿ, ಪಿರ್ಯಾದಿಗೆ ಮೋಸ ಮಾಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಮಾಲವ್ವ ತಂದೆ ಗುರಪ್ಪ ನಡುವಿನಕೇರಿ, ಪ್ರಾಯ-36 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಕರೋಸಿ ಪ್ಲಾಟ್, ಕರೋಶಿ ಗ್ರಾಮ, ತಾ&ಜಿ: ಚಿಕ್ಕೋಡಿ, ಜಿ: ಬೆಳಗಾವಿ ರವರು ದಿನಾಂಕ: 11-11-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 200/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಮಚಂದ್ರ ತಂದೆ ಶಾಂತು ಉಪ್ಪಾರ, ಪ್ರಾಯ-48 ವರ್ಷ, ವೃತ್ತಿ-ಗಾರೆ ಕೆಲಸ, ಸಾ|| ಸಿದ್ದನಭಾವಿ, ತಾ: ಕುಮಟಾ (ಸ್ಕೂಟರ್ ನಂ: ಕೆ.ಎ-30/ಕೆ-5717 ನೇದರ ಚಾಲಕ). ಈತನು ದಿನಾಂಕ: 10-11-2021 ರಂದು-19-00 ಗಂಟೆಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಕುಮಟಾ-ಹೊನ್ನಾವರ ಡಾಂಬರ್ ರಸ್ತೆಯ ಮೇಲೆ ತಾನು ಚಲಾಯಿಸುತ್ತಿದ್ದ ಸ್ಕೂಟರ್ ನಂ: ಕೆ.ಎ-30/ಕೆ-5717 ನೇದನ್ನು ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ಅಳ್ವೆಕೋಡಿಯ ಮಾರುತಿ ದೇವಸ್ಥಾನದ ಹತ್ತಿರ ಜನದಟ್ಟಣೆ ಇದ್ದರೂ ಸಹ ತನ್ನ ಸ್ಕೂಟರಿನ ವೇಗವನ್ನು ನಿಯಂತ್ರಿಸಲಾಗದೇ ರಸ್ತೆಯನ್ನು ದಾಟುತ್ತಿದ್ದ ಶ್ರೀ ಹನುಮಂತ ತಂದೆ ಗೋವಿಂದ ನಾಯ್ಕ, ಪ್ರಾಯ-65 ವರ್ಷ, ವೃತ್ತಿ-ಬಿಸಿನೆಸ್, ಸಾ|| ಅಳ್ವೆಕೋಡಿ, ತಾ: ಕುಮಟಾ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ರಸ್ತೆಯಲ್ಲಿ ಬೀಳುವಂತೆ ಮಾಡಿ, ಅವರ ಬಲಗಾಲ ಮೂಳೆ ಮುರಿದು ತೀವ್ರ ಗಾಯನೋವಾಗಲು ಹಾಗೂ ತನಗೂ ಸಹ ತಲೆಗೆ, ಮುಖಕ್ಕೆ, ಭುಜಕ್ಕೆ ಹಾಗೂ ಬೆನ್ನಿನ ಭಾಗಕ್ಕೆ ತೆರಚಿದ ಹಾಗೂ ಒಳ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ದತ್ತಾತ್ರೇಯ ತಂದೆ ಮಾಧು ನಾಯ್ಕ, ಪ್ರಾಯ-32 ವರ್ಷ, ವೃತ್ತಿ-ಟ್ರಾನ್ಸಪೋರ್ಟ್ ಕೆಲಸ, ಸಾ|| ಅಳ್ವೆಕೋಡಿ, ತಾ: ಕುಮಟಾ ರವರು ದಿನಾಂಕ: 11-11-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 304/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಚನ್ನಗೌಡ ತಂದೆ ನಾಗಪ್ಪ ಲಕ್ಕಶೆಟ್ಟಿ, ಪ್ರಾಯ-39 ವರ್ಷ, ಸಾ|| ಲಿಂಗದಹಳ್ಳಿ, ತಾ: ರಾಣೆಬೆನ್ನೂರ, ಜಿ: ಹಾವೇರಿ, (ಮಿನಿ ಬಸ್ ನಂ: ಕೆ.ಎ-68/1201 ನೇದರ ಚಾಲಕ). ಈತನು ದಿನಾಂಕ: 11-11-2021 ರಂದು ಬೆಳಿಗ್ಗೆ 04-15 ಗಂಟೆಗೆ ತಾನು ಚಲಾಯಿಸುತ್ತಿದ್ದ ಮಿನಿ ಬಸ್ ನಂ: ಕೆ.ಎ-68/1201 ನೇದನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರಲ್ಲಿ ಮಾವಿನಗುಂಡಿ ಕಡೆಯಿಂದ ಗೇರುಸೊಪ್ಪ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಬಂಗಾರ ಕುಸುಮ ಫಾಲ್ಸ್ ಕ್ರಾಸ್ ಹತ್ತಿರ ನಿಯಂತ್ರಣ ತಪ್ಪಿ ಬಸ್ ಪಲ್ಟಿಗೊಳಿಸಿ, ಮಿನಿ ಬಸ್ ನಲ್ಲಿದ್ದ 1). ಶ್ರೀ ಮಾಹಾದೇವಪ್ಪ ತಂದೆ ವಿರುಪಾಕ್ಷಪ್ಪ ಚಕ್ರಸಾಲಿ, ಪ್ರಾಯ-46 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮೆಡ್ಲೇರಿ, ತಾ: ರಾಣೆಬೆನ್ನೂರ, ಜಿ: ಹಾವೇರಿ, 2). ಶ್ರೀ ಮಾಹಾದೇವಪ್ಪ ತಂದೆ ವಿರುಪಾಕ್ಷಪ್ಪ ಚಕ್ರಸಾಲಿ, ಪ್ರಾಯ-46 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಸಾ|| ಮೆಡ್ಲೇರಿ, ತಾ: ರಾಣೆಬೆನ್ನೂರ, ಜಿ: ಹಾವೇರಿ, 3). ಶ್ರೀಮತಿ ಅಕ್ಕಮ್ಮ ಕೋಂ. ಗುಡ್ಡಪ್ಪ ಉಕ್ಕುಂದ, ಪ್ರಾಯ-30 ವರ್ಷ, ವೃತ್ತಿ-ಮನೆವಾರ್ತೆ, ಸಾ|| ವೈಟಿಹೊನ್ನತ್ತಿ, ತಾ: ರಾಣೆಬೆನ್ನೂರ, ಜಿ: ಹಾವೇರಿ, 4). ಶ್ರೀಮತಿ ಶಿಲ್ಪಾ ಕೋಂ. ಗುಡ್ಡಪ್ಪ ದೊಡ್ಡಮನಿ, ಪ್ರಾಯ-34 ವರ್ಷ, ವೃತ್ತಿ-ಮನೆವಾರ್ತೆ, ಸಾ|| ವೈಟಿಹೊನ್ನತ್ತಿ, ತಾ: ರಾಣೆಬೆನ್ನೂರ, ಜಿ: ಹಾವೇರಿ, 5). ಶ್ರೀ ಬಸವರಾಜ ತಂದೆ ಹನುಮಂತಪ್ಪ ಉಪ್ಪಾರ, ಪ್ರಾಯ-37 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗುಡ್ಡದಆನವೇರಿ, ತಾ: ರಾಣೆಬೆನ್ನೂರ, ಜಿ: ಹಾವೇರಿ, 6). ಶ್ರೀ ಚೆನ್ನಪ್ಪ ತಂದೆ ಕೊಟ್ರಪ್ಪ ಬಳ್ಳಾರಿ, ಪ್ರಾಯ-42 ವರ್ಷ, ವೃತ್ತಿ-ಖಾಸಗಿ ಕಂಪನಿ ಕೆಲಸ, ಸಾ|| ಮಣ್ಣೂರ, ತಾ: ರಾಣೆಬೆನ್ನೂರ, ಜಿ: ಹಾವೇರಿ, 7). ಶ್ರೀ ಗುಡ್ಡಪ್ಪ  ತಂದೆ ನಿಂಗಪ್ಪ  ಉಕ್ಕುಂದ, ಪ್ರಾಯ-40 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ವೈಟಿಹೊನ್ನತ್ತಿ, ತಾ: ರಾಣೆಬೆನ್ನೂರ, ಜಿ: ಹಾವೇರಿ, 8). ಶ್ರೀ ಗುಡ್ಡಪ್ಪ ತಂದೆ ಚಿಕ್ಕಪ್ಪ ದೊಡ್ಡಮನಿ, ಪ್ರಾಯ-42 ವರ್ಷ, ವೃತ್ತಿ-ಖಾಸಗಿ ಕಂಪನಿ ಕೆಲಸ, ಸಾ|| ವೈಟಿಹೊನ್ನತ್ತಿ, ತಾ: ರಾಣೆಬೆನ್ನೂರ, ಜಿ: ಹಾವೇರಿ, 9). ಶ್ರೀಮತಿ ಸಂಗೀತಾ ಕೋಂ. ಶಿವಕುಮಾರ ಶಿವಪ್ಪಯ್ಯನವರಮಠ, ಪ್ರಾಯ-19 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಹರಣಗೇರಿ, ತಾ: ರಾಣೆಬೆನ್ನೂರ, ಜಿ: ಹಾವೇರಿ, 10). ಶ್ರೀಮತಿ ಶ್ರುತಿ ಕೋಂ. ಲಕ್ಷ್ಮಣ ವ್ಯಾಪಾರಿ, ಪ್ರಾಯ-26 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಮೆಡ್ಲೇರಿ, ತಾ: ರಾಣೆಬೆನ್ನೂರ, ಜಿ: ಹಾವೇರಿ, ಇವರಿಗೆ ಕೈ ಕಾಲು, ತಲೆ ಹಾಗೂ ಸೊಂಟಕ್ಕೆ ದುಃಖಾಪತ್ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಮಾಹಾದೇವಪ್ಪ ತಂದೆ ವಿರೂಪಾಕ್ಷಪ್ಪ ಚಕ್ರಸಾಲಿ, ಪ್ರಾಯ-46 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮೆಡ್ಲೇರಿ, ತಾ: ರಾಣೆಬೆನ್ನೂರ, ಜಿ: ಹಾವೇರಿ ರವರು ದಿನಾಂಕ: 11-11-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 305/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ನಾಗೇಶ ತಂದೆ ಶಿವಪ್ಪ ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ಸೈಬರ್ ಕೆಲಸ, ಸಾ|| ಸೊಪ್ಪಿನ ಹೊಸಳ್ಳಿ, ಸಂತೆಗೂಳಿ, ತಾ: ಕುಮಟಾ, ಹಾಲಿ ಸಾ|| ರಾಮತೀರ್ಥ, ತಾ: ಹೊನ್ನಾವರ. ಪಿರ್ಯಾದಿಯ ಗಂಡನಾದ ಈತನು ದಿನಾಂಕ: 10-11-2021 ರಂದು ಮಧ್ಯಾಹ್ನ 12-00 ಗಂಟೆಗೆ ಹೊನ್ನಾವರ ತಾಲೂಕಿನ ಹಳದಿಪುರ ಗ್ರಾಮದ ಯಾವುದೋ ಗಾರ್ಮೆಂಟ್ಸ್ ನಲ್ಲಿ ಕೆಲಸ ಇರುವ ಬಗ್ಗೆ ವಿಚಾರಿಸಿ ಬರುವುದಾಗಿ ಹೇಳಿ ಹೋದವನು, ಈವರೆಗೂ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ತನ್ನ ಗಂಡ ಎಲ್ಲಿಯೋ ಹೋಗಿದ್ದು ಬರಬಹುದು ಅಂತಾ ಈವರೆಗೆ ಕಾದು, ಈವರೆಗೂ ಮನೆಗೆ ವಾಪಸ್ ಬಾರದೇ ಇರುವುದರಿಂದ ತಾನು ಹಾಗೂ ತನ್ನ ಗಂಡನ ಮನೆಯವರು ತನ್ನ ಗಂಡನಿಗಾಗಿ ಎಲ್ಲ ಕಡೆಗೆ ಹುಡುಕಾಡಿದರೂ ಪತ್ತೆಯಾಗದೇ ಇರುವುದರಿಂದ ಕಾಣೆಯಾದ ತನ್ನ ಗಂಡನನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ನವ್ಯಾ ಗಂಡ ನಾಗೇಶ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಸೈಬರ್ ಶಾಪ್ ಕೆಲಸ, ಸಾ|| ಸೊಪ್ಪಿನ ಹೊಸಳ್ಳಿ, ಸಂತೆಗೂಳಿ, ತಾ: ಕುಮಟಾ, ಹಾಲಿ ಸಾ|| ರಾಮತೀರ್ಥ, ತಾ: ಹೊನ್ನಾವರ ರವರು ದಿನಾಂಕ: 11-11-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 132/2021, ಕಲಂ: 78(3) ರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಸುಬ್ರಹ್ಮಣ್ಯ ತಂದೆ ಸಣ್ಣತಮ್ಮ ನಾಯ್ಕ, ಪ್ರಾಯ-41 ವರ್ಷ, ವೃತ್ತಿ-ವ್ಯಾಪಾರ, ಸಾ|| ಶಿರಾಲಿ, ಕೋಟೆಬಾಗಿಲು, ತಾ: ಭಟ್ಕಳ. ಈತನು ದಿನಾಂಕ: 11-11-2021 ರಂದು 17-15 ಗಂಟೆಯ ಸಮಯಕ್ಕೆ ಶಿರಾಲಿ ಗ್ರಾಮದ ಜನತಾ ವಿದ್ಯಾಲಯದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ 01/- ರೂಪಾಯಿಗೆ 70/- ರೂಪಾಯಿ ಕೊಡುವ ಶರತ್ತಿನ ಮೇಲೆ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣದ ಪಂಥ ಕಟ್ಟಿಸಿ ಓ.ಸಿ ಜುಗಾರಾಟ ನಡೆಸುತ್ತಿದ್ದಾಗ ದಾಳಿಯ ವೇಳೆ ಓ.ಸಿ ಚೀಟಿ-01, ಬಾಲ್ ಪೆನ್-01 ಹಾಗೂ ನಗದು ಹಣ 2,780/- ರೂಪಾಯಿಯೊಂದಿಗೆ ಸ್ಥಳದಲ್ಲಿ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭರತಕುಮಾರ ವಿ, ಪಿ.ಎಸ್.ಐ (ಕಾ&ಸು), ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 11-11-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 196/2021, ಕಲಂ: 87 ರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ವೆಂಕಣ್ಣ ತಂದೆ ದೇವಣ್ಣ ಗೌಡ, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಲವಳ್ಳಿ, ಪೋ: ಬಾರೆ, ತಾ: ಯಲ್ಲಾಪುರ, 2]. ಪ್ರಸನ್ನ ತಂದೆ ನಾರಾಯಣ ಕುಣಬಿ, ಪ್ರಾಯ-27 ವರ್ಷ, ವೃತ್ತಿ-ಕೂಲಿ ಕೆಲಸ ಸಾ|| ಮಲವಳ್ಳಿ, ಪೋ: ಬಾರೆ, ತಾ: ಯಲ್ಲಾಪುರ, 3]. ಈಶ್ವರ ತಂದೆ ನಾಗು ಕುಣಬಿ, ಪ್ರಾಯ-37 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಲವಳ್ಳಿ, ಪೋ: ಬಾರೆ, ತಾ: ಯಲ್ಲಾಪುರ, 4]. ತಮ್ಮಣ್ಣ ತಂದೆ ಗಣೇಶ ಕುಣಬಿ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಲವಳ್ಳಿ, ಪೋ: ಬಾರೆ, ತಾ: ಯಲ್ಲಾಪುರ. ಈ ನಮೂದಿತ ಆರೋಪಿತರೆಲ್ಲರೂ ಸೇರಿ ದಿನಾಂಕ: 11-11-2021 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಬಾರೆ ಗ್ರಾಮದ ಸೊಸೈಟಿಯ ಹತ್ತಿರ ಸಾರ್ವಜನಿಕ ಸ್ಧಳದಲ್ಲಿ ತಮ್ಮ ಲಾಭದ ಸಲುವಾಗಿ ಕುಟಕುಟಿ ಜೂಗಾರಾಟ ಆಡುತ್ತಿದ್ದಾಗ ಪಿರ್ಯಾದಿಯವರು ದಾಳಿ ನಡೆಸಿದ ಕಾಲಕ್ಕೆ ನಗದು ಹಣ 1,550/- ರೂಪಾಯಿಗಳು ಮತ್ತು ಜೂಗಾರಾಟದ ಸಲಕರಣೆಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಕುಮಾರಿ: ಪ್ರಿಯಾಂಕಾ ನ್ಯಾಮಗೌಡ, ಡಬ್ಲ್ಯೂ.ಪಿ.ಎಸ್.ಐ, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 11-11-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 141/2021, ಕಲಂ: 87 ರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ನಾಗರಾಜ @ ಗುರು ತಂದೆ ಸುಧಾಕರ ಶೇಟ್, ಪ್ರಾಯ-35 ವರ್ಷ,  ವೃತ್ತಿ-ಕೂಲಿ ಕೆಲಸ, ಸಾ|| ಬೇಗಾರ, ತಾ: ಸಿದ್ದಾಪುರ, 2]. ಗಜಾನನ ತಂದೆ ಗಣಪಾ ನಾಯ್ಕ, ಪ್ರಾಯ-37 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಶಿರೂರು, ಬಾಳಗೋಡ ಗ್ರಾಮ, ತಾ: ಸಿದ್ದಾಪುರ, 3]. ವಿಶ್ವಾ ತಂದೆ ಗಣಪತಿ ನಾಯ್ಕ, ಪ್ರಾಯ-21 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಶಿರೂರು, ಬಾಳಗೋಡ ಗ್ರಾಮ, ತಾ: ಸಿದ್ದಾಪುರ, 4]. ಉದಯ ತಂದೆ ತಿಮ್ಮಾ ನಾಯ್ಕ, ಪ್ರಾಯ-46 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಶಿರೂರು, ಬಾಳಗೋಡ ಗ್ರಾಮ, ತಾ: ಸಿದ್ದಾಪುರ, 5]. ಗಣಪತಿ ತಂದೆ ಬಡಿಯಾ ನಾಯ್ಕ, ಪ್ರಾಯ-57 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಶಿರೂರು, ಬಾಳಗೋಡ ಗ್ರಾಮ, ತಾ: ಸಿದ್ದಾಪುರ. ಈ ನಮೂದಿತ ಆರೋಪಿತರು ದಿನಾಂಕ: 11-11-2021 ರಂದು 21-00 ಗಂಟೆಗೆ ಸಿದ್ದಾಪುರ ತಾಲೂಕಿನ ಬೇಗಾರ ಊರಿನಲ್ಲಿ ಆರೋಪಿ 1 ನ ಮನೆಯ ಮುಂದಿನ ಖುಲ್ಲಾ ಜಾಗೆಯ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಜೂಗಾರಾಟ ಆಡುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಸೇರಿ ದಾಳಿ ಮಾಡಿದಾಗ ನಮೂದಿತ ಆರೋಪಿತರ ಪೈಕಿ ಆರೋಪಿ 2 ರಿಂದ 5 ನೇಯವರು 1). ನಗದು ಹಣ 2,050/- ರೂಪಾಯಿ, 2). 52 ಇಸ್ಪೀಟ್ ಎಲೆಗಳು, 3). ಮಂಡಕ್ಕೆ ಹಾಸಿದ್ದ ಒಂದು ಟವೆಲ್, 4). ಅರ್ಧ ಉರಿದ ಮೇಣದ ಬತ್ತಿಗಳು-04, ಇವುಗಳೊಂದಿಗೆ ಸಿಕ್ಕಿದ್ದು ಹಾಗೂ ಆರೋಪಿ 1 ನೇಯವನು ದಾಳಿಯ ಕಾಲಕ್ಕೆ ಓಡಿ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಂತಪ್ಪ ಜಿ. ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 11-11-2021 ರಂದು 23-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 11-11-2021

at 00:00 hrs to 24:00 hrs

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 36/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಕುಮಾರ: ಸಂದೇಶ ತಂದೆ ನಾರಾಯಣ ಕುಣಬಿ, ಪ್ರಾಯ-18 ವರ್ಷ, ವೃತ್ತಿ-ಐ.ಟಿ.ಐ ವಿದ್ಯಾರ್ಥಿ, ಸಾ|| ಬಾರೆ, ಅಳ್ಳೆಮನೆ, ತಾ: ಯಲ್ಲಾಪುರ. ಈತನು ದಿನಾಂಕ: 10-11-2021 ರಂದು ರಾತ್ರಿ 07-00 ಗಂಟೆಗೆ ಯಲ್ಲಾಪುರ ತಾಲೂಕಿನ ಮಲವಳ್ಳಿ ಗ್ರಾಮದ ತನ್ನ ಸಂಬಂಧಿ ಶ್ರೀ ಅನಂತ ಕುಣಬಿ ರವರ ಮನೆಯಿಂದ ಇನ್ನೊಬ್ಬ ಸಂಬಂಧಿ ಶ್ರೀ ಈಶ್ವರ ಕುಣಬಿ ರವರ ಮನೆಗೆ ಹೊಗಲು ಕತ್ತಲಲ್ಲಿ ಕುಮಾರ: ಅಚ್ಚುತ್ ಕುಣಬಿ ರವರೊಂದಿಗೆ ಶ್ರೀ ಈಶ್ವರ ಕುಣಬಿ ರವರ ಮನೆ ಸಮೀಪದ ನೆಲಬಾವಿಯ ದಡದಿಂದ ನಡೆದುಕೊಂಡು ಹೋಗುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ನೆಲಬಾವಿಯಲ್ಲಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾರಾಯಣ ತಂದೆ ತಿಮ್ಮಣ್ಣಾ ಕುಣಬಿ, ಪ್ರಾಯ-46 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಾರೆ, ಅಳ್ಳೆಮನೆ ಗ್ರಾಮ, ತಾ: ಯಲ್ಲಾಪುರ ರವರು ದಿನಾಂಕ: 11-11-2021 ರಂದು 00-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 37/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ನಾರಾಯಣ ತಂದೆ ಗೋವಿಂದ ಪೂಜಾರಿ, ಪ್ರಾಯ-63 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹರಾವರಿ, ಕುಂದರ್ಗಿ, ತಾ: ಯಲ್ಲಾಪುರ.  ಪಿರ್ಯಾದಿಯವರ ತಂದೆಯವರಾದ ಇವರು ವಿಪರೀತ ಸರಾಯಿ ಕುಡಿಯುವ ಚಟ ಅಂಟಿಸಿಕೊಂಡಿದ್ದವರು, ಸರಾಯಿ ಕುಡಿದ ನಶೆಯಲ್ಲಿ ಯಾವುದೋ ವಿಷ ಪದಾರ್ಥ ಸೇವನೆ ಮಾಡಿದವರಿಗೆ ದಿನಾಂಕ: 10-11-2021 ರಂದು 17-45 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಕುಂದರ್ಗಿಯ ಹರಾವರಿಯಿಂದ ಉಪಚಾರದ ಕುರಿತು ಪಂಡಿತ ಸಾರ್ವಜನಿಕ ಆಸ್ಪತ್ರೆ, ಶಿರಸಿಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗಮಧ್ಯದಲ್ಲಿ ಶಿರಸಿಯ ಭೈರುಂಬೆ ಹತ್ತಿರ ಸಂಜೆ 18-30 ಗಂಟೆಯ ಸುಮಾರಿಗೆ ಮೃತಪಟ್ಟಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶಂಕರ ತಂದೆ ನಾರಾಯಣ ಪೂಜಾರಿ, ಪ್ರಾಯ-37 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹರಾವರಿ, ಕುಂದರ್ಗಿ, ತಾ: ಯಲ್ಲಾಪುರ ರವರು ದಿನಾಂಕ: 11-11-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ನಗರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 05/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಕಮಲಾ ಕೋಂ. ಬಸಪ್ಪಾ ಕದಂ, ಪ್ರಾಯ-70 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಬಿ.ಎಸ್.ಎನ್.ಎಲ್ ಟವರ್ ಹತ್ತಿರ, ಮಾರಿಕಾಂಬಾ ನಗರ, ತಾ: ಶಿರಸಿ. ಪಿರ್ಯಾದಿಯ ತಾಯಿಯಾದ ಇವಳು ಕಳೆದ 1 ತಿಂಗಳ ಹಿಂದೆ ಕೈ ಮುರಿದುಕೊಂಡು ಅದನ್ನೇ ಮನಸ್ಸ್ಸಿಗೆ ಹಚ್ಚಿಕೊಂಡಿದ್ದವಳು, ದಿನಾಂಕ: 11-11-2021 ರಂದು 11-15 ಗಂಟೆಯಿಂದ ದಿನಾಂಕ: 11-11-2021 ರಂದು 13-30 ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ಜಂತಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀಮತಿ ರೇಣುಕಾ ತಂದೆ ಬಸಪ್ಪಾ ಕದಂ, ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಿ.ಎಸ್.ಎನ್.ಎಲ್ ಟವರ್ ಹತ್ತಿರ, ಮಾರಿಕಾಂಬಾ ನಗರ, ತಾ: ಶಿರಸಿ ರವರು ದಿನಾಂಕ: 11-11-2021 ರಂದು 16-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ರಾಮನಗರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 13/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಕೃಷ್ಣಾ ತಂದೆ ಗಣಪತಿ ಹೆರೇಕರ, ಪ್ರಾಯ-59 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ವೈಜಗಾಂವ, ತಾ: ಜೋಯಿಡಾ. ಇವರು ಕೃಷಿ ಕೆಲಸ ಮಾಡಿಕೊಂಡು ಇದ್ದವರು, ಎಂದಿನಂತೆ ದಿನಾಂಕ: 11-11-2021 ರಂದು ಮಧ್ಯಾಹ್ನ ಊಟ ಮುಗಿಸಿಕೊಂಡು 16-00 ಗಂಟೆಯ ಸುಮಾರಿಗೆ ತಮ್ಮ ಗದ್ದೆಗೆ ಹೋಗಿ ಗದ್ದೆಯಲ್ಲಿ ಕೆಲಸ ಮಾಡಿಕೊಂಡಿರುವಾಗ 18-00 ಗಂಟೆಯ ಸುಮಾರಿಗೆ ಯಾವುದೋ ವಿಷಪೂರಿತ ಹಾವೊಂದು ಮೃತ ಕೃಷ್ಣಾ ಗಣಪತಿ ಹೆರೇಕರ ರವರ ಬಲಗಾಲಿನ ಪಾದದ ಹಿಮ್ಮಡಿ ಭಾಗದಲ್ಲಿ ಕಚ್ಚಿದ್ದು, ಅವರ ಸಹಾಯಕ್ಕೆ ಯಾರೂ ಇಲ್ಲದೇ ಇದ್ದುದರಿಂದ ಅವರೇ ವೈಜಗಾಂವ ಗೌಳಿವಾಡಾದವರೆಗೆ ಬಂದ ನಂತರ ಅವರನ್ನು ದಾಂಡೇಲಿಯ ಸರ್ಕಾರಿ ಆಸ್ಪತ್ರೆಗೆ ಉಪಚಾರಕ್ಕೆ ತೆಗೆದುಕೊಂಡು ಹೋಗಿದ್ದು, ಅಲ್ಲಿರುವಾಗ ಉಪಚಾರ ಫಲಿಸದೇ ದಿನಾಂಕ: 11-11-2021 ರಂದು 20-00 ಗಂಟೆಗೆ ಮೃತಪಟ್ಟಿರುತ್ತಾರೆ. ಇದರ ಹೊರತು ಅವರ ಸಾವಿನಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮಕ್ಕಾಗಿ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಪ್ರಭಾಕರ ತಂದೆ ಬಾಲಕೃಷ್ಣ ಗಾವಡಾ, ಪ್ರಾಯ-46 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಾಮ್ರಾ, ತಾ: ಜೋಯಿಡಾ ರವರು ದಿನಾಂಕ: 11-11-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

ಇತ್ತೀಚಿನ ನವೀಕರಣ​ : 12-11-2021 05:30 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080