ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 11-10-2021
at 00:00 hrs to 24:00 hrs
ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆ ಕಾರವಾರ
ಅಪರಾಧ ಸಂಖ್ಯೆಃ 17/2021, ಕಲಂ: 420 ಐಪಿಸಿ ಹಾಗೂ ಕಲಂ: 66(ಸಿ)(ಡಿ) ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ನೇದ್ದರ ವಿವರ...... ನಮೂದಿತ ಯಾರೋ ಆರೋಪಿತರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದಿಯವರು ದಿನಾಂಕ: 19-09-2021 ರಂದು ತಮ್ಮ ಫೇಸಬುಕ್ ಖಾತೆಯನ್ನು ನೋಡುತ್ತಿರುವಾಗ DIGITAL INDIA, CSP POINT, MINI BANK ಎಂಬ ಹೆಸರಿನ ಜಾಹೀರಾತು ಬಂದಿದ್ದು, ಅದು ಯಾವ ಜಾಹೀರಾತು ಎಂದು ತಿಳಿದುಕೊಳ್ಳಲು ಅದರ ಮೇಲೆ ಕ್ಲಿಕ್ ಮಾಡಿರುತ್ತಾರೆ. ನಂತರದಲ್ಲಿ ದಿನಾಂಕ: 20-09-2021 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿಯವರ ಮೊಬೈಲ್ ನಂ: 8272952321 ನೇದರಿಂದ ಒಬ್ಬ ವ್ಯಕ್ತಿಯು ಕರೆ ಮಾಡಿ ತಾನು CSP ಕಂಪನಿಯ ಎಕ್ಸಿಕ್ಯೂಟಿವ್ ಇರುವುದಾಗಿ ತಿಳಿಸಿ ‘ತಮ್ಮ ಕಂಪನಿಯಿಂದ ಮಿನಿ ಬ್ಯಾಂಕ ಆ್ಯಪ್ ಇದ್ದು, ಅದನ್ನು ಬಳಸಲು ನಿಮಗೆ 2 ಕಂಪ್ಯೂಟರ್, 4 ಸಿಸಿಟಿವಿ ಕಳುಹಿಸುತ್ತೇವೆ. ನೀವು ನಿಮ್ಮ ಹಳ್ಳಿಯಲ್ಲಿ ಬೇರೆಯವರ ಬ್ಯಾಂಕ್ ಖಾತೆಗಳಿಗೆ ಆನಲೈನ್ ಮೂಲಕ ಹಣ ವರ್ಗಾವಣೆ ಮಾಡಿದ್ದಲ್ಲಿ, ರೀಚಾರ್ಜ್ ಮಾಡಿದ್ದಲ್ಲಿ ಅದಕ್ಕೆ ನಾವು ಕಮೀಶನ್ ನೀಡುತ್ತೇವೆ’ ಎನ್ನುವುದಾಗಿ ತಿಳಿಸಿದ್ದು ಹಾಗೂ ಸದರಿ ಮಿನಿ ಬ್ಯಾಂಕ್ ಪಡೆಯಲು 10,100/- ರೂಪಾಯಿ ಹಣವನ್ನು ತಮ್ಮ ಕಂಪನಿಯ ಎಸ್.ಬಿ.ಐ ಖಾತೆ ಸಂಖ್ಯೆ 39821499950 ನೇದಕ್ಕೆ ಜಮಾ ಮಾಡುವಂತೆ ತಿಳಿಸಿದ್ದು, ಅದನ್ನು ನಂಬಿ ಪಿರ್ಯಾದಿಯವರು 10,100/- ರೂಪಾಯಿ ಹಣ ಜಮಾ ಮಾಡಿದ್ದು, ನಂತರ ದಿನಾಂಕ: 22-09-2021 ರಂದು ಮೊಬೈಲ್ ನಂ: 8697145756 ನೇದರಿಂದ ಒಂದು ಹುಡುಗಿಯು ಕರೆ ಮಾಡಿ ‘ತಾನು DIGITAL INDIA, CSP ಕಂಪನಿಯ ಓ.ಡಿ ಡಿಪಾರ್ಟಮೆಂಟ್ ನಿಂದ ಕರೆ ಮಾಡುತ್ತಿದ್ದೇನೆ’ ಎನ್ನುವುದಾಗಿ ತಿಳಿಸಿ, ‘ತಾವು ಈ ಹಿಂದೆ 10,100/- ರೂಪಾಯಿ ಹಾಕಿದ ಖಾತೆಯಲ್ಲಿ 50,000/- ರೂಪಾಯಿ ಹಣ ಜಮಾ ಇರಬೇಕು. ಆರ್.ಬಿ.ಐ ರವರು ಚೆಕ್ ಮಾಡುವವರಿದ್ದು, ಆದ್ದರಿಂದ ನೀವು 50,000/- ರೂಪಾಯಿ ಹಣವನ್ನು ಸದರಿ ಖಾತೆಗೆ ಜಮಾ ಮಾಡಿ ಅವರು ಚೆಕ್ ಮಾಡಿದ ಬಳಿಕ 1 ಗಂಟೆಯೊಳಗೆ ಮರಳಿ ನಿಮ್ಮ ಖಾತೆಗೆ ಜಮಾ ಮಾಡುತ್ತೇವೆ’ ಎಂದು ತಿಳಿಸಿದ್ದು, ಪಿರ್ಯಾದಿಯವರು ಅದನ್ನು ನಂಬಿ ಸದರಿ ಖಾತೆಗೆ 50,000/- ಹಣ ಜಮಾ ಮಾಡಿದ್ದು, ಆರೋಪಿತರು ತಾವು CSP ಕಂಪನಿಯವರೆಂದು ನಂಬಿಸಿ, ಮಿನಿ ಬ್ಯಾಂಕ್ ಆ್ಯಪ್ ಬಳಸಲು ಕಂಪ್ಯೂಟರ್, ಸಿಸಿಟಿವಿ ನೀಡುತ್ತೇವೆಂದು ಪಿರ್ಯಾದಿಯವರನ್ನು ನಂಬಿಸಿ, ಅವರಿಂದ ಒಟ್ಟು 60,100/- ರೂಪಾಯಿ ಹಣವನ್ನು ತಮ್ಮ ಖಾತೆಗೆ ಜಮಾ ಮಾಡಿಸಿಕೊಂಡು ಮೋಸ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ಮೈದಿನ್ ತಂದೆ ಕಾಸಿಂ ಸಾಬ್, ಪ್ರಾಯ-40 ವರ್ಷ, ವೃತ್ತಿ-ಹೊಟೇಲ್ ವ್ಯವಹಾರ, ಸಾ|| ಟೊಂಕಾ, ಕಾಸರಕೋಡ, ತಾ: ಹೊನ್ನಾವರ ರವರು ದಿನಾಂಕ: 11-10-2021 ರಂದು 17-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹೊನ್ನಾವರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 262/2021, ಕಲಂ: ಹುಡುಗಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಕುಮಾರಿ: ಗಾಯತ್ರಿ ತಂದೆ ರಾಮನಾಥ ನಾಯ್ಕ, ಪ್ರಾಯ-22 ವರ್ಷ, ವೃತ್ತಿ-ಬಿ.ಕಾಂ ವಿದ್ಯಾರ್ಥಿನಿ, ಸಾ|| ಚಿಕ್ಕನಕೋಡ, ತಾ: ಹೊನ್ನಾವರ. ಪಿರ್ಯಾದಿಯವರ ಮಗಳಾದ ಇವಳು ದಿನಾಂಕ: 09-10-2021 ರಂದು ಬೆಳಿಗ್ಗೆ 10-00 ಗಂಟೆಗೆ ’ಹೊನ್ನಾವರಕ್ಕೆ ಕಾಲೇಜಿಗೆ ಹೋಗಿ ಮಾರ್ಕ್ಸ್ ಕಾರ್ಡ್ ತರುತ್ತೇನೆ’ ಅಂತಾ ಹೇಳಿ ಹೋದವಳು, ಮರಳಿ ಮನೆಗೂ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ತನ್ನ ಮಗಳನ್ನು ಸಂಬಂಧಿಕರ ಮನೆಗಳಲ್ಲಿ, ಹೊನ್ನಾವರದ ಸುತ್ತಮುತ್ತ ಎಲ್ಲಾ ಕಡೆ ಹುಡುಕಾಡಿದರೂ ಈವರೆಗೆ ಸಿಗದೇ ಇದ್ದುದರಿಂದ ತನ್ನ ಕಾಣೆಯಾದ ಮಗಳನ್ನು ಹುಡುಕಿ ಕೊಡಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ರಾಮನಾಥ ತಂದೆ ಶಿವರಾಮ ನಾಯ್ಕ, ಪ್ರಾಯ-56 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಚಿಕ್ಕನಕೋಡ, ತಾ: ಹೊನ್ನಾವರ ರವರು ದಿನಾಂಕ: 11-10-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಯಲ್ಲಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 177/2021, ಕಲಂ: 279, 337, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶಿಮೊಂವ್ ತಂದೆ ಲೂಯಿಸ್ ಸಿದ್ದಿ, ಪ್ರಾಯ-58 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹುಣಶೆಟ್ಟಿಕೊಪ್ಪ, ತಾ: ಯಲ್ಲಾಪುರ (ಹೋಂಡಾ ಎಕ್ಟಿವಾ ಸ್ಕೂಟಿ ನಂ: ಕೆ.ಎ-31/ಇ.ಬಿ-1688 ನೇದರ ಸವಾರ). ಈತನು ದಿನಾಂಕ: 11-10-2021 ರಂದು ಮಧ್ಯಾಹ್ನ 02-30 ಗಂಟೆಯ ಸುಮಾರಿಗೆ ತನ್ನ ಬಾಬ್ತು ಹೋಂಡಾ ಎಕ್ಟಿವಾ ಸ್ಕೂಟಿ ನಂ: ಕೆ.ಎ-31/ಇ.ಬಿ-1688 ನೇದನ್ನು ಯಲ್ಲಾಪುರ ತಾಲೂಕಿನ ಹುಣಶೆಟ್ಟಿಕೊಪ್ಪದಿಂದ ಕಳಸೂರಿಗೆ ಹಾಯ್ದು ಹೋದ ರಸ್ತೆಯ ಮೇಲೆ ಬಸಳೇಬೈಲ್ ಕ್ರಾಸ್ ಹತ್ತಿರ ಹುಣಶೆಟ್ಟಿಕೊಪ್ಪದಿಂದ ಕಳಸೂರು ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದವನು, ಕಳಸೂರು ಒಳ ರಸ್ತೆಯಿಂದ ಹುಣಶೆಟ್ಟಿಕೊಪ್ಪ ಕಡೆಗೆ ತನ್ನ ಎಡಬದಿಯಿಂದ ನಿಧಾನವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ಡಬ್ಲ್ಯೂ-2665 ನೇದಕ್ಕೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು, ಈ ಅಪಘಾತದಿಂದ ಮೋಟಾರ್ ಸೈಕಲ್ ನಂ: ಕೆ.ಎ-31/ಡಬ್ಲ್ಯೂ-2665 ನೇದರ ಸವಾರನಾದ ಶ್ರೀ ದಯಾನಂದ ತಂದೆ ಶ್ರೀ ನಾಗೇಂದ್ರ ಕಲ್ಯಾಣಕರ, ಈತನ ತಲೆಗೆ ಭಾರೀ ರಕ್ತದ ಗಾಯ ಪೆಟ್ಟು ಆಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಲ್ಲದೇ, ಹಿಂಬದಿ ಸವಾರನಾದ ಕುಮಾರ: ಹೇಮಂತ ತಂದೆ ವಾಸುದೇವ ಕಲ್ಯಾಣಕರ, ಇವನಿಗೂ ಸಹ ತಲೆಯ ಹಿಂಭಾಗದಲ್ಲಿ ಸಾದಾ ಸ್ವರೂಪದ ಗಾಯ ಪೆಟ್ಟು ಪಡಿಸಿ, ಆರೋಪಿ ಸ್ಕೂಟಿ ಸವರಾನು ತಾನೂ ಸಹ ಹಣೆಯ ಎಡಭಾಗದಲ್ಲಿ ಸಾದಾ ಗಾಯ ಪೆಟ್ಟು ಪಡಿಸಿಕೊಂಡು, ಎರಡು ವಾಹನಗಳನ್ನು ಜಖಗೊಳಿಸಿದ ಬಗ್ಗೆ ಪಿರ್ಯಾದಿ ಶ್ರೀ ಅನಂತ ತಂದೆ ಹರಿಶ್ಚಂದ್ರ ಕಲ್ಯಾಣಕರ, ಪ್ರಾಯ-44 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಳಸೂರು, ತಾ: ಯಲ್ಲಾಪುರ ರವರು ದಿನಾಂಕ: 11-10-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮುಂಡಗೋಡ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 127/2021, ಕಲಂ: ಹುಡುಗಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಕುಮಾರಿ: ಈರವ್ವ ತಂದೆ ಕೃಷ್ಣಪ್ಪ ಲಮಾಣಿ ಪ್ರಾಯ-20 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಅಗಡಿ, ತಾ: ಮುಂಡಗೋಡ. ಪಿರ್ಯಾದಿಯ ಮಗಳಾದ ಇವಳು ದಿನಾಂಕ: 05-09-2021 ರಂದು ಸಂಜೆ 07-30 ಗಂಟೆಗೆ ತನ್ನ ಮನೆಯಿಂದ 100 ಮೀಟರ್ ದೂರದಲ್ಲಿರುವ ಚಿಕ್ಕಪ್ಪನ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವಳು, ಪರತ್ ಮನೆಗೆ ಬರದೇ ಎಲ್ಲಿಯೋ ಹೋಗಿ ಕಾಣೆಯಾದವಳಿಗೆ ಕಲಘಟಗಿ ತಾಲೂಕಿನ ಆಸಕಟ್ಟಿ, ಶಿಗಟ್ಟಿ ಹಾಗೂ ಶಿಗ್ಗಾಂವ ತಾಲೂಕಿನ ಅಂಟಾಳ ಗ್ರಾಮಗಳಲ್ಲಿ ಹಾಗೂ ಮುಂಡಗೋಡ ತಾಲೂಕಿನ ಇಂದೂರು, ಕೊಪ್ಪ, ಹುನಗುಂದ, ಕಾವಲಕೊಪ್ಪ, ಕರಗಿನಕೊಪ್ಪ ಗ್ರಾಮಗಳಲ್ಲಿ ಹುಡಕಾಡಿದರೂ ಸಿಕ್ಕಿದ್ದು ಇರುವದಿಲ್ಲ. ಸದ್ರಿ ಕಾಣೆಯಾದವಳನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಕೃಷ್ಣಪ್ಪ ತಂದೆ ದೇವಪ್ಪ ಲಮಾಣಿ, ಪ್ರಾಯ-49 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅಗಡಿ, ತಾ: ಮುಂಡಗೋಡ ರವರು ದಿನಾಂಕ: 11-10-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ರಾಮನಗರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 75/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಮಧುಕರ ತಂದೆ ವಿಠೋಬಾ ಮಾತೋನಕರ, ಪ್ರಾಯ-47 ವರ್ಷ, ವೃತ್ತಿ-ಮೀನು ವ್ಯಾಪಾರ, ಸಾ|| ಜನತಾ ಪ್ಲಾಟ್, ತಿನೈಘಾಟ್, ತಾ: ಜೋಯಿಡಾ. ಈತನು ದಿನಾಂಕ: 11-10-2021 ರಂದು 18-40 ಗಂಟೆಗೆ ತಿನೈಘಾಟದ ಜನತಾ ಪ್ಲಾಟ್ ನಲ್ಲಿರುವ ತನ್ನ ಮನೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ಸಾರ್ವಜನಿಕರಿಗೆ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ 1). Old Tavern Whisky 180 ML ಅಂತಾ ಬರೆದ ಮದ್ಯ ತುಂಬಿದ 04 ಟೆಟ್ರಾ ಪ್ಯಾಕೆಟ್ ಗಳು, 2). 04 ಪ್ಲಾಸ್ಟಿಕ್ ಗ್ಲಾಸುಗಳು, 3). Old Tavern Whisky ಯ 180 ML ಅಂತಾ ಬರೆದ 02 ಮದ್ಯದ ಖಾಲಿ ಟೆಟ್ರಾ ಪ್ಯಾಕೆಟ್ ಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ವಿನೋದ ಎಸ್. ಕೆ, ಪಿ.ಎಸ್.ಐ (ಕಾ&ಸು), ರಾಮನಗರ ಪೊಲೀಸ್ ಠಾಣೆ ರವರು ದಿನಾಂಕ: 11-10-2021 ರಂದು 19-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 11-10-2021
at 00:00 hrs to 24:00 hrs
ಪ್ರಕರಣಗಳು ದಾಖಲಾಗಿರುವುದಿಲ್ಲ....
======||||||||======