ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 11-09-2021

at 00:00 hrs to 24:00 hrs

 

ಮಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 24/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ದಿಪೇಶ ತಂದೆ ಬಾಬು ನಾಯ್ಕ, ಪ್ರಾಯ-36 ವರ್ಷ, ವೃತ್ತಿ-ಚಾಲಕ/ವೆಲ್ಡಿಂಗ್ ಕೆಲಸ, ಸಾ|| ಮಳಾರ, ದೇವಳಮಕ್ಕಿ, ಕಾರವಾರ, 2]. ರೂಮಾನ್ ತಂದೆ ವಿಕ್ಟರ್ ಕಾರ್ದೋಜ್, ಪ್ರಾಯ-34 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಳಾರ, ದೇವಳಮಕ್ಕಿ, ಕಾರವಾರ, 3]. ಶಾಂತಾರಾಮ ತಂದೆ ದಿನಕರ ನಾಯ್ಕ, ಪ್ರಾಯ-26 ವರ್ಷ, ವೃತ್ತಿ-ಪೇಂಟಿಂಗ್ ಕೆಲಸ, ಸಾ|| ಗ್ರಾಮ ಪಂಚಾಯತ ಎದುರು, ದೇವಳಮಕ್ಕಿ, ಕಾರವಾರ, 4]. ಸಂತೋಷ ತಂದೆ ಗಣಪತಿ ನಾಯ್ಕ, ಪ್ರಾಯ-55 ವರ್ಷ, ವೃತ್ತಿ-ದಿನಗೂಲಿ ಪೋಸ್ಟಮೆನ್ ಕೆಲಸ, ಸಾ|| ಮಳಾರ, ದೇವಳಮಕ್ಕಿ, ಕಾರವಾರ. ಈ ನಮೂದಿತ ಆರೋಪಿತರು ದಿನಾಂಕ: 11-09-2021 ರಂದು 08-00 ಗಂಟೆಗೆ ದೇವಳಮಕ್ಕಿಯ ದೇವಿ ಗುಡಿಯ ಹತ್ತಿರದ ಖುಲ್ಲಾ ಸಾರ್ವಜನಿಕ ಸ್ಥಳದಲ್ಲಿ ಒಂದು ಚಾಪೆ ಹಾಸಿ ಅದರ ಮೇಲೆ ಕುಳಿತು ತಮ್ಮ ತಮ್ಮ ಲಾಭಕ್ಕೋಸ್ಕರ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳ ಆಧಾರದ ಮೇಲೆ ಅಂದರ್-ಬಾಹರ್ ಜೂಗಾರಾಟ ಆಡುತ್ತಿದ್ದಾಗ ನಗದು ಹಣ ಒಟ್ಟೂ 4,785/- ರೂಪಾಯಿ ಮತ್ತು ಇಸ್ಪೀಟ್ ಜೂಗಾರಾಟಕ್ಕೆ ಉಪಯೋಗಿಸಿದ 52 ಇಸ್ಪೀಟ್ ಎಲೆಗಳು ಹಾಗೂ 01 ನೈಲಾನ್ ನಮೂನೆಯ ಚಾಪೆಯ ಸಮೇತ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಿದ್ದಪ್ಪ ಗುಡಿ, ಪಿ.ಎಸ್.ಐ, ಮಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 11-09-2021 ರಂದು 09-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 134/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತನು ಆಟೋ ರಿಕ್ಷಾ ನಂ: ಕೆ.ಎ-30/9741 ನೇದರ ಚಾಲಕನಾಗಿದ್ದು, ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 09-09-2021 ರಂದು ಪಿರ್ಯಾದಿಯ ತಂದೆಯವರಾದ ಅಜಿತ್ ರತ್ನಾಕರ ಅರ್ಗೇಕರ ಇವರು ಬಾಳೆಗುಳಿಯಲ್ಲಿ ಕೆಲಸ ಮುಗಿಸಿ ಮರಳಿ ಅಂಕೋಲಾ ಕಡೆಗೆ ಬರುತ್ತಿರುವಾಗ ರಾತ್ರಿ 21-30 ಗಂಟೆಯ ಸುಮಾರಿಗೆ ಆಟೋ ರಿಕ್ಷಾ ರಿಕ್ಷಾ ನಂ: ಕೆ.ಎ-30/9741 ನೇದರ ಆರೋಪಿ ಚಾಲಕನು ತನ್ನ ಟೋ ರಿಕ್ಷಾವನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದವನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಹುಲಿದೇವರವಾಡ ಬಳಿ ಬಾಳೆಗುಳಿ ಕಡೆಯಿಂದ ಅಂಕೋಲಾ ಕಡೆಗೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಜಿತ್ ರತ್ನಾಕರ ಅರ್ಗೇಕರ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ತಲೆಯ ಹಿಂಭಾಗಕ್ಕೆ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಖಿಲ ತಂದೆ ಅಜಿತ್ ಅರ್ಗೇಕರ, ಪ್ರಾಯ-19 ವರ್ಷ, ಸಾ|| ಸುಂದರ ನಾರಾಯಣ ದೇವಸ್ಥಾನದ ಕ್ರಾಸ್ ಹತ್ತಿರ, ತಾ: ಅಂಕೋಲಾ ರವರು ದಿನಾಂಕ: 11-09-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 240/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ನಾರಾಯಣ ತಂದೆ ರಾಮ ಅಂಬಿಗ ಪ್ರಾಯ-38 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಬ್ಯಾಲೆಹಿತ್ತಲು, ಗೋಕರ್ಣ, ತಾ: ಕುಮಟಾ. ಪಿರ್ಯಾದಿಯ ಗಂಡನಾದ ಈತನು ಕಳೆದ ಮೂರು ದಿನದ ಹಿಂದೆ ಮಂಗಳೂರಿನಿಂದ ಮೀನುಗಾರಿಕೆ ಕೆಲಸದಿಂದ ತನ್ನ ಹೆಂಡತಿಯ ತವರು ಮನೆಯಾದ ತನ್ಮಡಗಿ ನಗರೆ ಹೊನ್ನಾವರಕ್ಕೆ ಬಂದವನು, ತನಗೆ ಮಂಗಳೂರಿನಲ್ಲಿ ಬೋಟಿ (ಮೀನುಗಾರಿಕೆ) ಕೆಲಸ, ಮಾಡುವಾಗ ಬಿದ್ದು ಹುಷಾರು ಇರುವುದಿಲ್ಲ ಅಂತಾ ಹೇಳಿದವನಿಗೆ ಕವಲಕ್ಕಿ ಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ಔಷಧೋಪಚಾರ ಮಾಡಿಸಿದ್ದರೂ ಸಹಿತ ತನಗೆ ಬೋಟಿ ಮೇಲಿನಿಂದ ಬಿದ್ದುದ್ದರಿಂದಲೇ ಜ್ವರ, ವಾಂತಿ, ಮೈ ಕೈ ನೋವು ಬರುತ್ತಾ ಇದೆ ಅಂತಾ ಅದನ್ನೇ ಚಿಂತೆ ಮಾಡುತ್ತಾ ಇದ್ದವನು, ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿಕೊಂಡವನು, ದಿನಾಂಕ: 11-09-2021 ರಂದು ಬೆಳಿಗಿ ಜಾವ 04-30 ಗಂಟೆಗೆ ‘ತನಗೆ ಬಾಯಾರಿಕೆ ಆಗುತ್ತಿದೆ. ಬಿಸಿ ನೀರು ಬೇಕು’ ಅಂತಾ ಹೇಳಿದಾಗ ಪಿರ್ಯಾದಿಯು ಬಿಸಿ ನೀರು ಕೊಟ್ಟಿದ್ದು, ನೀರು ಕುಡಿದು ಮಲಗಿಕೊಂಡವನು ಪಿರ್ಯಾದಿ ಮತ್ತು ಪಿರ್ಯಾದಿಯ ಮನೆಯವರು ಬೆಳಿಗ್ಗೆ 06-00 ಗಂಟೆಗೆ ಎದ್ದು ನೋಡಿದಾಗ ನಾರಾಯಣ ತಂದೆ ರಾಮ ಅಂಬಿಗ ಈತನು ಮಲಗಿಕೊಂಡ ಸ್ಥಳದಲ್ಲಿ ಇರದೇ ಇದ್ದಾಗ ಹೊರಗಡೆ ಬಹಿರ್ದೆಸೆಗೋ ಅಥವಾ ಮತ್ತ್ಯಾವ ಕಾರಣಕ್ಕೋ ಮನೆಯಿಂದ ಹೊರ ಹೋಗಿರಬಹುದು ಅಂತಾ ಸುಮ್ಮನಾಗಿದ್ದು, ನಂತರ ಎಷ್ಟೊತ್ತಾದರೂ ನಾರಾಯಣ ಈತನು ಮನೆಗೆ ಬಾರದೇ ಇರುವಾಗ ಮನೆಯವರೆಲ್ಲರೂ ಸೇರಿ ಊರ ಜನರಲ್ಲಿ ವಿಚಾರಿಸಿ ಹುಡುಕಾಡಿ, ಪಿರ್ಯಾದಿ ಗಂಡನ ಮನೆಯವರಿಗೆ, ಸಂಬಂಧಿಕರಲ್ಲಿ ಕರೆ ಮಾಡಿ ವಿಚಾರಿಸಲಾಗಿ ಯಾವುದೇ ಮಾಹಿತಿ ಇಲ್ಲದೇ, ಈವರೆಗೆ ವಾಪಸ್ ಮನೆಗೆ ಬಾರದೆ, ತನ್ನ ಇರುವಿಕೆಯ ಬಗ್ಗೆ ಸಹ ತಿಳಿಸದೆ ಕಾಣೆಯಾದ ಬಗ್ಗೆ ಪಿರ್ಯಾದಿ ಶ್ರೀಮತಿ ಗುಲಾಬಿ ಗಂಡ ನಾರಾಯಣ ಅಂಬಿಗ, ಪ್ರಾಯ-32 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಬ್ಯಾಲೆಹಿತ್ತಲು, ಗೋಕರ್ಣ, ತಾ: ಕುಮಟಾ, ಹಾಲಿ ಸಾ|| ನಗರೆ, ತನ್ಮಡಗಿ, ತಾ: ಹೊನ್ನಾವರ ರವರು ದಿನಾಂಕ: 11-09-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 123/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಶ್ರೀಧರ ಚಂದ್ರು ಗೌಡ, ಪ್ರಾಯ-29 ವರ್ಷ, ಸಾ|| ಕಳಸಿನ ಮೋಟೆ, ತಾ: ಹೊನ್ನಾವರ, 2]. ರವಿ ಗಣಪಯ್ಯ ಗೌಡ, ಪ್ರಾಯ-29 ವರ್ಷ, ಸಾ|| ಕಾಸರಕೋಡ, ತಾ: ಹೊನ್ನಾವರ, 3]. ಮಂಜುನಾಥ ಗಣಪತಿ ಗೌಡ, ಪ್ರಾಯ-29 ವರ್ಷ, ಸಾ|| ಕಳಸಿನ ಮೋಟೆ, ತಾ: ಹೊನ್ನಾವರ, 4]. ಬಾಲಚಂದ್ರ ಕೃಷ್ಣ ಗೌಡ, ಪ್ರಾಯ-38 ವರ್ಷ, ಸಾ|| ಕೆಳಗಿನೂರು, ತಾ:ಹೊನ್ನಾವರ, 5]. ಗಣೇಶ ನಾರಾಯಣ ಅಂಬಿಗ, ಪ್ರಾಯ-29 ವರ್ಷ, ಸಾ|| ಮಲಬಾರಕೇರಿ, ಕಳಸಿನ ಮೋಟೆ, ತಾ: ಹೊನ್ನಾವರ. ಈ ನಮೂದಿತ ಆರೋಪಿತರೆಲ್ಲರೂ ಸೇರಿಕೊಂಡು ದಿನಾಂಕ: 11-09-2021 ರಂದು 00-40 ಗಂಟೆಗೆ ಕಳಸಿನ ಮೋಟೆಯಲ್ಲಿ ಆರೋಪಿ 1 ನೇಯವನ ಮನೆಯ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ತಮ್ಮ ತಮ್ಮ ಲಾಭಕ್ಕೋಸ್ಕರ ಹಣವನ್ನು ಇಸ್ಪೀಟ್ ಎಲೆಗಳ ಮೇಲೆ ಪಂಥವಾಗಿ ಕಟ್ಟಿ ಇಸ್ಪೀಟ್ ಜೂಗಾರಾಟ ಆಡುತ್ತಿದ್ದಾಗ ದಾಳಿಯ ಸಮಯದಲ್ಲಿ ಜೂಗಾರಾಟಕ್ಕೆ ಬಳಸಿದ ಸಲಕರಣೆಗಳು ಹಾಗೂ ನಗದು ಹಣ 6,155/- ರೂಪಾಯಿಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಅಶೋಕ ಮಾಳಾಬಗಿ, ಪಿ.ಎಸ್.ಐ (ಕಾ&ಸು), ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 11-09-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 85/2021, ಕಲಂ: 279, 337, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹೇಶ ತಂದೆ ಶರಣಪ್ಪ ದೇವರಮನಿ, ಪ್ರಾಯ-40 ವರ್ಷ, ವೃತ್ತಿ-ಕೆ.ಇ.ಬಿ ಗುತ್ತಿಗೆದಾರ, ಸಾ|| ನಗನೂರ ಗ್ರಾಮ, ತಾ: ಸುರಪುರ, ಜಿ: ಯಾದಗಿರಿ (ಫೋರ್ಡ್ ಫಿಗೋ ಕಾರ್ ನಂ: ಕೆ.ಎ-32/ಎನ್ 1495 ನೇದರ ಚಾಲಕ). ಪಿರ್ಯಾದಿ, ಪಿರ್ಯಾದಿಯ ಸಂಬಂಧಿಕನಾದ ಶಂಕ್ರಪ್ಪ ತಂದೆ ಸೋಮಲಿಂಗಪ್ಪ, ಸಾ|| ವಡಗೇರಿ ಹಾಗೂ ಆರೋಪಿ ಚಾಲಕನೊಂದಿಗೆ ಸೇರಿಕೊಂಡು ಪಿರ್ಯಾದಿಯ ಬಾಬ್ತು ಫೋರ್ಡ್ ಫಿಗೋ ಕಾರ್ ನಂ: ಕೆ.ಎ-32/ಎನ್ 1495 ನೇದರಲ್ಲಿ ದಿನಾಂಕ: 07-09-2021 ರಂದು ಯಾದಗಿರಿಯಿಂದ ಹೊರಟು ಧರ್ಮಸ್ಥಳ, ಕುಕ್ಕೆಶ್ರೀ, ಮಡಿಕೇರಿ, ಉಡುಪಿ ಕಡೆಗಳಲ್ಲಿ ಪ್ರವಾಸ ಮುಗಿಸಿಕೊಂಡು ಮುರ್ಡೇಶ್ವರಕ್ಕೆ ಹೊರಟು ದಿನಾಂಕ: 10-09-2021 ರಂದು ರಾತ್ರಿ ಭಟ್ಕಳ ದಾಟಿ ಬಸ್ತಿ ಮಾರ್ಗವಾಗಿ ಓಲಗ ಮಂಟಪ ದಾಟಿ ಮುರ್ಡೇಶ್ವರ ದೇವಸ್ಥಾನದ ಕಡೆಗೆ ಹೋಗುತ್ತಿದ್ದಾಗ ಆರೋಪಿ ಕಾರ್ ಚಾಲಕನು ತಾನು ಚಲಾಯಿಸುತ್ತಿದ್ದ ಕಾರನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸಮಯ 22-25 ಗಂಟೆಗೆ ಮುರ್ಡೇಶ್ವರದ ಇಂದ್ರಪ್ರಸ್ಥ ಹೊಟೇಲ್ ಎದುರಿಗೆ ಸಿಮೆಂಟ್ ರಸ್ತೆಯ ಮಧ್ಯದಲ್ಲಿರುವ ರೋಡ್ ಡಿವೈಡರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಕಾರಿನಲ್ಲಿದ್ದ ಪಿರ್ಯಾದಿ ಶಿವಪುತ್ರ ಇವರಿಗೆ ಹಣೆಯ ಮೇಲೆ ತೆರಚಿದ ಗಾಯ, ಬಲಗಾಲು ಮೊಣಗಂಟಿಗೆ ಒಳನೋವು ಆಗಿದ್ದು ಹಾಗೂ ಶಂಕ್ರಪ್ಪ ಇವರಿಗೆ ತಲೆಯ ಮೇಲೆ ತೆರಚಿದ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಚಾಲಕನು ತನಗೂ ಸಹ ತಲೆಗೆ ತೆರಚಿದ ಗಾಯ ಮತ್ತು ಎದೆಗೆ ಭಾರೀ ಸ್ವರೂಪದ ಒಳನೋವು ಪಡಿಸಿಕೊಂಡು ಚಿಕಿತ್ಸೆಗೆ ಕರೆದುಕೊಂಡು ಹೋಗುವಾಗ ದಾರಿಯ ಮಧ್ಯದಲ್ಲಿ ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ಶಿವಪುತ್ರಪ್ಪ ತಂದೆ ಕಾಳಪ್ಪ ಉಲಕಲ್, ಪ್ರಾಯ-42 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ರಾಜಾಪುರ ಬಿ, ತಾ: ಶಹಾಪುರ, ಜಿ: ಯಾದಗಿರಿ ರವರು ದಿನಾಂಕ: 11-09-2021 ರಂದು 08-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 143/2021, ಕಲಂ: 279, 337 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಲ್ಲಿಕಾರ್ಜುನ ತಂದೆ ಶಿವನಪ್ಪ ಕಂಠಿ, ಪ್ರಾಯ-32 ವರ್ಷ, ವೃತ್ತಿ-ಚಾಲಕ, ಸಾ|| ಕಲ್ಮಠ ಗಲ್ಲಿ, ಬೈಲ್‍ಹೊಂಗಲ್, ತಾ: ಬೈಲ್‍ಹೊಂಗಲ್, ಜಿ: ಬೆಳಗಾವಿ (ಕಾರ್ ನಂ: ಕೆ.ಎ-22/ಸಿ-5243 ನೇದರ ಚಾಲಕ), 2]. ಇನೋವಾ ಕಂಪನಿಯ ಸಿಲ್ವರ್ ಬಣ್ಣದ ಕಾರಿನ ಚಾಲಕ, ಕಾರ್ ನಂಬರ್ ಹಾಗೂ ಚಾಲಕನ ಹೆಸರು ವಿಳಾಸ ನಮೂದಿರುವುದಿಲ್ಲ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 11-09-2021 ರಂದು ಸಮಯ ಸುಮಾರು 11-30 ಗಂಟೆಗೆ ಯಲ್ಲಾಪುರ ತಾಲೂಕಿನ ಡೋಮಗೇರಿ ಗ್ರಾಮದಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಬಾಬ್ತು ಕಾರ್ ನಂ: ಕೆ.ಎ-22/ಸಿ-5243 ನೇದನ್ನು ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ತನ್ನ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡು ಅದೇ ವೇಳೆಗೆ ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ಪಿರ್ಯಾದಿಯವರು ತನ್ನ ರಸ್ತೆಯ ಸೈಡಿನಿಂದ ನಿಧಾನವಾಗಿ ಚಲಾಯಿಸಿಕೊಂಡು ಬರುತ್ತಿದ್ದ ಕಾರ್ ನಂ: ಕೆ.ಎ-04/ಎಮ್.ಕೆ-5563 ನೇದಕ್ಕೆ ಎದುರಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಪಿರ್ಯಾದಿಯವರ ವಾಹನದ ಹಿಂದೆ ಆರೋಪಿ 2 ನೇಯವನು ಯಾವುದೋ ಇನೋವಾ ಕಂಪನಿಯ ಸಿಲ್ವರ್ ಬಣ್ಣದ ಕಾರನ್ನು ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ತನ್ನ ಕಾರನ್ನು ಅತೀವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿಯವರ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿರುತ್ತಾನೆ. ಈ ಅಪಘಾತದಿಂದ ಪಿರ್ಯಾದಿಯವರಿಗೆ ಮೈ ಕೈಗೆ ಗಾಯನೋವು ಆಗಿದ್ದು, ಪಿರ್ಯಾದಿಯವರ ಕಾರಿನಲ್ಲಿದ್ದ ಸಾಕ್ಷಿದಾರ ವಿನಾಯಕ ಎಸ್. ಎ, ಸಾ|| ಧಾರವಾಡ ಇವರ ಹಣೆಗೂ ಸಹ ಸಾದಾ ಗಾಯನೋವು ಪಡಿಸಿ, ವಾಹನಗಳನ್ನು ಜಖಂಗೊಳಿಸಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಪೇಕ್ಷಿತ್ ತಂದೆ ವೀರಭದ್ರಗೌಡ ಪಾಟೀಲ್, ಪ್ರಾಯ-24 ವರ್ಷ, ವೃತ್ತಿ-ಖಾಸಗಿ ನೌಕರ್ (ಇಂಜಿನೀಯರ್), ಸಾ|| ಮದಿಹಾಳ, ಧಾರವಾಡ ರವರು ದಿನಾಂಕ: 11-09-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 147/2021, ಕಲಂ: 323, 341, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಬಸವರಾಜ ತಂದೆ ಪರಶುರಾಮ ವಡ್ಡರ, ಪ್ರಾಯ-25 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಫಿಶ್ ಸರ್ಕಲ್, ಹಳಿಯಾಳ ಶಹರ. ಪಿರ್ಯಾದಿಯ ಗಂಡನಾದ ದಾದಾಪೀರ್ ಬೇಟಗೇರಿ ಸಾ|| ದೇಶಪಾಂಡೆ ನಗರ, ತಾ: ಹಳಿಯಾಳ ಶಹರ ಈತನು ತನ್ನ ಮನೆಯ ಪಕ್ಕದ ಮನೆಯ ಮಂಜುಳ ವಡ್ಡರ ಇವರ ಮಗ ನಿಖಿಲ (12 ವರ್ಷ) ಈತನಿಗೆ ದಿನಾಂಕ: 11-09-2021 ರಂದು 16-30 ಗಂಟೆಗೆ ಮನೆಯ ಹತ್ತಿರ ರಸ್ತೆಯ ಮೇಲೆ ನಿಂತಾಗ ತನ್ನ ಮಕಳ್ಳಿಬ್ಬರಿಗೂ ಆಟ ಆಡುತ್ತಾ ಕರೆದುಕೊಂಡು ಹೋಗಿ ‘ಎಲ್ಲಿಯೂ ಬಿಟ್ಟ ಬರಬೇಡ’ ಅಂತಾ ತಿಳಿ ಹೇಳುತ್ತಿದ್ದಾಗ, ನಮೂದಿತ ಆರೋಪಿತನು ‘ನನ್ನ ಮಕ್ಕಳಿಗೆ ಏನ ಬುದ್ಧಿ ಹೇಳುತ್ತೀ?’ ಅಂತಾ ಪಿರ್ಯಾದಿಯ ಗಂಡ ದಾದಾಪೀರ್ ಈತನಿಗೆ ಅಡ್ಡಗಟ್ಟಿ ‘ಬೋಸಡಿ ಮಗನಾ, ರಂಡಿ ಮಗನಾ’ ಅಂತಾ ಅವಾಚ್ಯವಾಗಿ ಬೈಯ್ದು, ಕೈಯಿಂದ ಮುಷ್ಟಿ ಮಾಡಿ ಮುಖಕ್ಕೆ, ಮೈಗೆ ಹೊಡೆ ಬಡೆ ಮಾಡಿ, ಮುಖಕ್ಕೆ ಹಾಗೂ ಕಾಲಿಗೆ ಗಾಯನೋವು ಪಡಿಸಿ ದುಃಖಾಪತ್ ಪಡಿಸಿದ್ದಲ್ಲದೇ, ಅಲ್ಲಿಂದ ಹೋಗುವಾಗ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಮಮತಾಜ್ಕೋಂ. ದಾದಾಪೀರ್ ಬೆಟಗೇರಿ, ಪ್ರಾಯ-30 ವರ್ಷ, ವೃತ್ತಿ-ಮನೆ ಕೆಲಸ, ಸಾ|| ದೇಶಪಾಂಡೆ ನಗರ, ಹಳಿಯಾಳ ಶಹರ ರವರು ದಿನಾಂಕ: 11-09-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 87/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಇಸ್ಮಾಯಿಲ್ @ ಕೆಂಪ್ಯಾ ತಂದೆ ಬಾಬುಸಾಬ್, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜನತಾ ಕಾಲೋನಿ, ಬನವಾಸಿ, ತಾ: ಶಿರಸಿ, 2]. ಯುವರಾಜ ತಂದೆ ಮಂಜುನಾಥ ಗೌಡ, ಪ್ರಾಯ-30 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಲಮಾಣಿ ತಾಂಡಾ, ಅಂಡಗಿ, ತಾ: ಶಿರಸಿ, 3]. ಉಸ್ಮಾನ್ ತಂದೆ ಅಬ್ದುಲ್ ಗಫಾರ್ ಪಟೇಗಾರ, ಪ್ರಾಯ-33 ವರ್ಷ, ಕೂಲಿ ಕೆಲಸ, ಸಾ|| ಹೊಸಕಟ್ಟೆ, ಶಿರಸಿ ರಸ್ತೆ, ಬನವಾಸಿ, 4]. ಮುನೀರ ತಂದೆ ಖಾಸೀಂಸಾಬ್, 5]. ಜಗನ್ನಾಥ ತಂದೆ ಮಹಾದೇವಪ್ಪ ಲಮಾಣಿ, 6]. ಮಲ್ಲಿಕ್ ತಂದೆ ಪುಟ್ಟಪ್ಪಾ ಗೌಡ, 7]. ಪುಟ್ಟಸ್ವಾಮಿ ತಂದೆ ಬಸವರಾಜ ಗೌಡ, ಸಾ|| (ಎಲ್ಲರೂ) ಅಂಡಗಿ, ತಾ: ಶಿರಸಿ. ಈ ನಮೂದಿತ ಆರೋಪಿತರೆಲ್ಲರೂ ಸೇರಿಕೊಂಡು ದಿನಾಂಕ: 11-09-2021 ರಂದು 20-50 ಗಂಟೆಗೆ ಅಂಡಗಿ ಲಮಾಣಿ ತಾಂಡಾದ ಕೇರಿ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ತಮ್ಮ ಅಕ್ರಮ ಲಾಭಕ್ಕೋಸ್ಕರ ಅನಧೀಕೃತವಾಗಿ ಹಣವನ್ನು ಪಂಥವನ್ನಾಗಿ ಕಟ್ಟಿ ಇಸ್ಪಿಟ್ ಎಲೆಗಳ ಮೇಲೆ ಅಂದರ್-ಬಾಹರ್ ಜೂಗಾರಾಟ ನಡೆಸಿ, ನಗದು ಹಣ 14,180/- ರೂಪಾಯಿ ಹಾಗೂ ಇಸ್ಪೀಟ್ ಜೂಗಾರಾಟದ ಸಲಕರಣೆಗಳೊಂದಿಗೆ ಆರೋಪಿ 1 ರಿಂದ 3 ನೇಯವರು ಸ್ಥಳದಲ್ಲಿ ಸಿಕ್ಕಿದ್ದು ಹಾಗೂ ಆರೋಪಿ  4 ರಿಂದ 7 ನೇಯವರು ಸ್ಥಳದಿಂದ ಓಡಿ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಹಣಮಂತ ಬಿರಾದಾರ, ಪಿ.ಎಸ್.ಐ (ಕಾ&ಸು), ಬನವಾಸಿ ಠಾಣೆ ರವರು ದಿನಾಂಕ: 11-09-2021 ರಂದು 22-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 11-09-2021

at 00:00 hrs to 24:00 hrs

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 26/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಗಣಪತಿ ತಂದೆ ವೆಂಕಟ್ರಮಣ ಗೌಡ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಿರೇಕಳವೆ, ಪೋ: ಕಳವೆ, ತಾ: ಶಿರಸಿ. ಪಿರ್ಯಾದಿಯ ಅಣ್ಣನಾದ ಈತನು ದಿನಾಂಕ: 07-09-2021 ರಂದು ಬೆಳಿಗ್ಗೆ 10-30 ಗಂಟೆಯ ಸುಮಾರಿಗೆ ತನ್ನ ಮನೆಯಲ್ಲಿರುವ ಒಲೆಯ ಹತ್ತಿರ ಚಳಿ ಕಾಯಿಸುತ್ತಾ ಕುಳಿತುಕೊಂಡಿದ್ದಾಗ ತಾನು ಧರಿಸಿಕೊಂಡಿದ್ದ ಲುಂಗಿಗೆ ಆಕಸ್ಮಿಕವಾಗಿ ಬೆಂಕಿಯು ತಾಗಿ, ನಂತರ ಬೆಂಕಿಯು ಅಂಗಿಗೆ ಹತ್ತಿಕೊಂಡು ಮೈ ಸುಟ್ಟುಕೊಂಡಿದ್ದವನಿಗೆ ಚಿಕಿತ್ಸೆಯ ಕುರಿತು ಕೂಡಲೇ ಪಂಡಿತ ಸರ್ಕಾರಿ ಆಸ್ಪತ್ರೆ, ಶಿರಸಿಗೆ ಕರೆದುಕೊಂಡು ಹೋಗಿ ದಾಖಲು ಮಾಡಿ, ನಂತರ ಅಲ್ಲಿಯ ವೈದ್ಯರ ಸಲಹೆ ಮೇರೆಗೆ ಅದೇ ದಿನ ಅಲ್ಲಿಂದ ಹೆಚ್ಚಿನ ಉಪಚಾರದ ಕುರಿತು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಚಿಕಿತ್ಸೆಗೆ ದಾಖಲು ಮಾಡಿದ್ದು ಇರುತ್ತದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ತನ್ನ ಅಣ್ಣನು ದಿನಾಂಕ: 10-09-2021 ರಂದು 23-20 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಇರುತ್ತದೆ. ಅಣ್ಣನು ತನ್ನ ಮನೆಯಲ್ಲಿರುವ ಒಲೆಯ ಹತ್ತಿರ ಚಳಿಗೆ ಬೆಂಕಿಯನ್ನು ಕಾಯಿಸುತ್ತಾ ಕುಳಿತುಕೊಂಡಿರುವಾಗ ಆಕಸ್ಮಿಕವಾಗಿ ಅವನು ಧರಿಸಿದ್ದ ಲುಂಗಿ ಮತ್ತು ಶರ್ಟಿಗೆ ಬೆಂಕಿಯು ತಾಗಿ ಮೈ ಸುಟ್ಟು ಮೃತಪಟ್ಟಿರುತ್ತಾನೆಯೇ ಹೊರತು ಅವನ ಸಾವಿನಲ್ಲಿ ನಮಗೆ ಬೇರೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ವೆಂಕಟ್ರಮಣ ಗೌಡ, ಪ್ರಾಯ-41 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹಿರೇಕಳವೆ, ಪೋ: ಕಳವೆ, ತಾ: ಶಿರಸಿ ರವರು ದಿನಾಂಕ: 11-09-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 16-09-2021 03:39 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080