ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 12-04-2021

at 00:00 hrs to 24:00 hrs

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 30/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ರಾಜು ಮಂಕಾಳಿ ಗೌಡ, ಪ್ರಾಯ-36 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ದೇವಣಾ, ಗೋಕರ್ಣ, ತಾ: ಕುಮಟಾ, 2]. ಅಶೀಫ ತಂದೆ ಹಯಾತ್, ಪ್ರಾಯ-28 ವರ್ಷ, ವೃತ್ತಿ-ಮೀನು ವ್ಯಾಪಾರ, ಸಾ|| ತದಡಿ, ತಾ: ಕುಮಟಾ, 3]. ದಾಮೋದರ ಗಣಪಯ್ಯಾ ಹರಿಕಂತ್ರ, ಪ್ರಾಯ-45 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಗೋಕರ್ಣ, ತೋರಗಜನಿ, ತಾ: ಕುಮಟಾ, 4]. ಹುಲಿಯಪ್ಪಾ ಗೊಯ್ದು ಗೌಡ, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ದೇವಣಾ, ಗೋಕರ್ಣ, ತಾ: ಕುಮಟಾ. ಈ ನಮೂದಿತ ಆರೋಪಿತರು ದಿನಾಂಕ: 11-04-2021 ರಂದು ಮಧ್ಯಾಹ್ನ 15-30 ಗಂಟೆಯ ಸುಮಾರಿಗೆ ತೊರ್ಕೆ ಗ್ರಾಮದ ಶಾಲೆಯ ಹಿಂಬದಿಯ ಖುಲ್ಲಾ ಪ್ರದೇಶದಲ್ಲಿ ತಮ್ಮ ತಮ್ಮ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ ಅಂದರ್-ಬಾಹರ್ ಇಸ್ಪೀಟ್ ಜೂಗಾರಾಟ ಮಾಡುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ಮಾಡಿದ ಕಾಲಕ್ಕೆ 1). ನಗದು ಹಣ 6,520/- ರೂಪಾಯಿ, 2). 52 ಇಸ್ಪೀಟ್ ಎಲೆಗಳು, 3). ಮಂಡಕ್ಕೆ ಹಾಸಿದ ಬಿಳಿ ನಮೂನೆಯ ಪ್ಲಾಸ್ಟಿಕ್ ಚೀಲ-01. ಸದರಿ ಸ್ವತ್ತಿನೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನವೀನ್ ಎಸ್. ನಾಯ್ಕ, ಪಿ.ಎಸ್.ಐ (ಕಾ&ಸು), ಗೋಕರ್ಣ ಪೊಲೀಸ್ ಠಾಣೆ ರವರು ದಿನಾಂಕ: 12-04-2021 ರಂದು 11-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 31/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಪ್ರಭಾಕರ ದಶರಥ ಪೆಡ್ನೇಕರ್, ಪ್ರಾಯ-30 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ದುಬ್ಬನಶಶಿ, ಗೋಕರ್ಣ, ತಾ: ಕುಮಟಾ, 2]. ಸುಧೀರ ಲಕ್ಷ್ಮಣ ಕುರ್ಲೆ, ಪ್ರಾಯ-24 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ದುಬ್ಬನಶಶಿ, ಗೋಕರ್ಣ, ತಾ: ಕುಮಟಾ, 3]. ವಸಂತ ಅಂಕೋಲೇಕರ್, ಸಾ|| ದುಬ್ಬನಶಶಿ, ಗೋಕರ್ಣ, ತಾ: ಕುಮಟಾ, 4]. ದತ್ತಾ ಜಾಧವ, ಸಾ|| ದುಬ್ಬನಶಶಿ, ಗೋಕರ್ಣ, ತಾ: ಕುಮಟಾ. ಈ ನಮೂದಿತ ಆರೋಪಿತರು ದಿನಾಂಕ: 11-04-2021 ರಂದು ಸಾಯಂಕಾಲ 18-15 ಗಂಟೆಯ ಸುಮಾರಿಗೆ ದುಬ್ಬನಶಶಿ ಗ್ರಾಮದ ಸಮುದ್ರದ ತೀರದ ಖುಲ್ಲಾ ಜಾಗದಲ್ಲಿ ತಮ್ಮ ತಮ್ಮ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ ಅಂದರ್-ಬಾಹರ್ ಇಸ್ಪೀಟ್ ಜೂಗಾರಾಟ ಮಾಡುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ಮಾಡಿದ ಕಾಲಕ್ಕೆ 1). ನಗದು ಹಣ 4,450/- ರೂಪಾಯಿ, 2). 52 ಇಸ್ಪೀಟ್ ಎಲೆಗಳು, 3). ಮಂಡಕ್ಕೆ ಹಾಸಿದ ಬಿಳಿ ನಮೂನೆಯ ಪ್ಲಾಸ್ಟಿಕ್ ಚೀಲ-01. ಸದರಿ ಸ್ವತ್ತಿನೊಂದಿಗೆ ಆರೋಪಿ 1 ಮತ್ತು 2 ನೇಯವರು ಸೆರೆ ಸಿಕ್ಕಿದ್ದು ಹಾಗೂ ಆರೋಪಿ 3 ಮತ್ತು 4 ನೇಯವರು ಓಡಿ ಹೋಗಿ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನವೀನ್ ಎಸ್. ನಾಯ್ಕ, ಪೊಲೀಸ್ ಉಪ-ನಿರೀಕ್ಷಕರು (ಕಾ&ಸು), ಗೋಕರ್ಣ ಪೊಲೀಸ್ ಠಾಣೆ ರವರು ದಿನಾಂಕ: 12-04-2021 ರಂದು 11-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 84/2021, ಕಲಂ: 323, 341, 353, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಜಾಫರ್ ಸಾಧೀಕ್ ತಂದೆ ಪರೀದ್ ಶೇಖ್, ಸಾ|| ಕೀರ್ತಿಗದ್ದೆ, ತಾ: ಕುಮಟಾ. ಪಿರ್ಯಾದಿಯವರು ಅರಣ್ಯ ಇಲಾಖೆಯಲ್ಲಿ ಕ್ಷೇಮಾಭಿವೃದ್ಧಿ ದಿನಗೂಲಿ ನೌಕರ ಅಂತ ಕೆಲಸ ಮಾಡುತ್ತಿದ್ದು, ದಿನಾಂಕ: 11-04-2021 ರಂದು 16-30 ಗಂಟೆಗೆ ಕೀರ್ತಿಗದ್ದೆ, ಸಸ್ಯ ಪಾಲನಾಲಯದ ಪಕ್ಕದಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಬಾಸೊಳ್ಳಿ ಗ್ರಾಮದ ಅರಣ್ಯ ಸರ್ವೇ ನಂ: 17 ನೇದರ ಕೀರ್ತಿಗದ್ದೆ ನರ್ಸರಿ ಆವರಣದಲ್ಲಿ ತಂತಿ ಬೇಲಿ ಹಾಕಲು ಪಿರ್ಯಾದಿಯವರ ಹಿರಿಯ ಅಧಿಕಾರಿ ಸೂಚಿಸಿದ ಮೇರೆಗೆ ಇಬ್ಬರು ಕೂಲಿ ಕೆಲಸಕ್ಕೆ ಬಂದ ಜನರೊಂದಿಗೆ ಬಾಸೊಳ್ಳಿ ಗ್ರಾಮದ ಅರಣ್ಯ ಸರ್ವೇ ನಂ: 17 ನೇದರ ಕೀರ್ತಿಗದ್ದೆ ನರ್ಸರಿ ಆವರಣದಲ್ಲಿ ತಂತಿ ಬೇಲಿ ಹಾಕಲು ಗುಂಡಿ ತೋಡಿ ಕಂಬ ಹುಗಿಯುತ್ತಿದ್ದಾಗ, ನಮೂದಿತ ಆರೋಪಿತನು ಸ್ಥಳಕ್ಕೆ ಬಂದು ಪಿರ್ಯಾದಿಯವರಿಗೆ ಉದ್ದೇಶಿಸಿ ‘ಬೋಳಿ ಮಗನೆ, ತಾಯನ ಹಡಾ, ಇದು ನಿನ್ನ ಅಪ್ಪನ ಜಾಗಾನಾ? ಇಲ್ಲಿ ಯಾಕೆ ಬೇಲಿ ಹಾಕುತ್ತಿದ್ದೀಯಾ?’ ಅಂತ ಅವಾಚ್ಯ ಶಬ್ದಗಳಿಂದ ಬೈಯ್ದು, ಪಿರ್ಯಾದಿಯವರಿಗೆ ಅಡ್ಡಗಟ್ಟಿ, ಪಿರ್ಯಾದಿಯವರು ಧರಿಸಿದ್ದ ಸಮವಸ್ತ್ರದ ಶರ್ಟ್ ಕಾಲರ್ ಹಿಡಿದು ಜಗ್ಗಿ, ಶರ್ಟ್ ಹರಿದು, ಕೈಯಿಂದ ಪಿರ್ಯಾದಿಯ ಎದೆಗೆ ಮತ್ತು ಹಣೆಗೆ ಹೊಡೆದು ದೂಡಿ ಹಾಕಿ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಜಟ್ಟಿ ತಂದೆ ತಿಪ್ಪಯ್ಯ ನಾಯ್ಕ, ಪ್ರಾಯ-57 ವರ್ಷ, ವೃತ್ತಿ-ಅರಣ್ಯ ಇಲಾಖೆಯಲಿಯಲ್ಲಿ ಕ್ಷೇಮಾಭಿವೃದ್ಧಿ ನೌಕರ, ಸಾ|| ಕೀರ್ತಿಗದ್ದೆ, ಬಾಸೊಳ್ಳಿ, ತಾ: ಕುಮಟಾ ರವರು ದಿನಾಂಕ: 12-04-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 39/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಶೋಕ ತಂದೆ ಈಶ್ವರ ಆಚಾರಿ, ಪ್ರಾಯ-48 ವರ್ಷ, ವೃತ್ತಿ-ಶಿಕ್ಷಣ ಸಂಯೋಜಕರು, ಬಿ.ಇ.ಓ ಕಛೇರಿ, ಭಟ್ಕಳ, ಸಾ|| ದೊಡ್ಡಬಲಸೆ, ಬೈಲೂರು, ತಾ: ಭಟ್ಕಳ (ಮೋಟಾರ್ ಸೈಕಲ್ ನಂ: ಕೆ.ಎ-47/ಎಸ್-2022 ನೇದರ ಸವಾರ). ನಮೂದಿತ ಆರೋಪಿತನು ತನ್ನ ಮೋಟಾರ್ ಸೈಕಲ್ ನಂ: ಕೆ.ಎ-47/ಎಸ್-2022 ನೇದನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ತನ್ನ ಪಥವನ್ನು ಬಿಟ್ಟು ಇನ್ನೊಂದು ಪಥದಲ್ಲಿ ವಿರುದ್ಧ ದಿಕ್ಕಿನಲ್ಲಿ ಮುರ್ಡೇಶ್ವರ ಕಡೆಯಿಂದ ಭಟ್ಕಳ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಬೆಂಗ್ರೆಯ ಮಾಲೆಕೊಡ್ಲು ಹತ್ತಿರ ದಿನಾಂಕ: 12-04-2021 ರಂದು ಬೆಳಿಗ್ಗೆ 10-00 ಗಂಟೆಗೆ ಶಿರಾಲಿ ಕಡೆಯಿಂದ ಮುರ್ಡೇಶ್ವರ ಕಡೆಗೆ ತನ್ನ ಬದಿಯಲ್ಲಿ ಪಿರ್ಯಾದಿಯು ಚಲಾಯಿಸಿಕೊಂಡು ಹೋಗುತ್ತಿದ್ದ ಔರಾ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-6924 ನೇದಕ್ಕೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯ ಹಣೆಗೆ, ಎಡಗಣ್ಣಿನ ಹತ್ತಿರ, ಬಲಗೈ ಮಣಿಕಟ್ಟು, ಎಡಗೈ ಮುಂಗೈ ಹಾಗೂ ಎಡಗಾಲು ಮೊಣಗಂಟಿನ ಹತ್ತಿರ ಸಾದಾ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನೂ ತನಗೆ ತಾನೇ ಎರಡು ಕಾಲುಗಳ ಪಾದದ ಹತ್ತಿರ ತೆರಚಿದ ಗಾಯ, ಎಡಕಿವಿಯಿಂದ ರಕ್ತ ಸೋರಿ ಹಾಗೂ ಎದೆಗೆ ಗಂಭೀರ ಸ್ವರೂಪದ ಒಳನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಸುಭಾಷ ತಂದೆ ನೀಲಕಂಠಪ್ಪ ಕಲಾಲ್, ಪ್ರಾಯ-42 ವರ್ಷ, ವೃತ್ತಿ-ಮಟನ್ ವ್ಯಾಪಾರ, ಸಾ|| ಕೋಟೆಬಾಗಿಲು, ಶಿರಾಲಿ, ತಾ: ಭಟ್ಕಳ ರವರು ದಿನಾಂಕ: 12-04-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 48/2021, ಕಲಂ: 353, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಲಕ್ಷ್ಮಣ ತಂದೆ ನಾಗಪ್ಪ ನಾಯ್ಕ, ಪ್ರಾಯ-32 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ಹುರುಳಿಸಾಲ, ತಾ: ಭಟ್ಕಳ, 2]. ನಾಗರಾಜ ತಂದೆ ಕಣ್ಣಯ್ಯ ನಾಯ್ಕ, ಪ್ರಾಯ-29 ವರ್ಷ, ವೃತ್ತಿ-ಚಾಲಕ, ಸಾ|| ಹುರುಳಿಸಾಲ, ತಾ: ಭಟ್ಕಳ, 3]. ರವಿ ತಂದೆ ಚಂದ್ರು ನಾಯ್ಕ, ಪ್ರಾಯ-32 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ಕಾರಗದ್ದೆ, ತಾ: ಭಟ್ಕಳ. ಈ ನಮೂದಿತ ಆರೋಪಿತರು ದಿನಾಂಕ: 11-04-2021 ರಂದು ರಾತ್ರಿ 23-30 ಗಂಟೆಯ ಸುಮಾರಿಗೆ ಭಟ್ಕಳ ಶಹರದ ಮುರಿನಕಟ್ಟೆಯ ಹತ್ತಿರ ರಾತ್ರಿ ಕರ್ತವ್ಯದ ಮೇಲಿದ್ದ ಪಿರ್ಯಾದಿಯವರು ಆರೋಪಿತರಿಗೆ ‘ರಾತ್ರಿ ಕಾಲಕ್ಕೆ ಇಲ್ಲಿ ಏಕೆ ಬಂದಿದ್ದಿರಿ? ಮನೆಗೆ ಹೋಗಿ’ ಅಂತಾ ಹೇಳಿದಾಗ ಸದರಿ ಆರೋಪಿತರು ಸಂಗನಮತದಿಂದ ‘ತಾವು ಹೋಗುವುದಿಲ್ಲ, ಇಲ್ಲಿಯೇ ಇರುತ್ತೇವೆ. ಅದನ್ನು ಕೇಳುವವನು ನೀನು ಯಾರು? ನೀವು ಏನು ಬೇಕಾದರೂ ಮಾಡಿಕೊಳ್ಳಿ, ನೀವು ಪೊಲೀಸರದು ಅತೀ ಆಯಿತು. ತಾವು ಇಲ್ಲಿಯೇ ಇರುತ್ತೇವೆ, ಇಲ್ಲಿಂದ ಹೋಗುವುದಿಲ್ಲ. ನಿಮ್ಮಿಂದ ತಮಗೆ ಏನು ಮಾಡಲು ಸಾಧ್ಯವಿಲ್ಲ. ತಮಗೆ ಹೊಡೆಯುತ್ತೀರಾ? ಹೊಡೆ ಬನ್ನಿ ನೋಡುವಾ, ಈ ಪೊಲೀಸ್ ಸೂಳೆ ಮಕ್ಕಳಿಗೆ ಇವತ್ತು ಬಿಡುವುದು ಬೇಡಾ, ತಾವು ಏನು ಅಂತಾ ಇವರಿಗೆ ತೋರಿಸುವಾ’ ಅಂತಾ ಹೇಳುತ್ತಾ ಮೂವರು ಆರೋಪಿತರು ಕೂಡಿ ಪಿರ್ಯಾದಿಯವರ ಮೈಮೇಲೆ ಏರಿ ಹೋಗಿ ದೂಡಿ ಹಾಕಿದ್ದಲ್ಲದೇ, ‘ಇವತ್ತು ಇಷ್ಟಕ್ಕೆ ಬಿಟ್ಟಿದ್ದೇವೆ. ಮತ್ತೊಂದು ದಿವಸ ಯಾರಾದರೂ ತಮ್ಮನ್ನು ಕೇಳಿದರೆ ಒಂದು ಗತಿ ಕಾಣಿಸುತ್ತೇವೆ’ ಅಂತಾ ಧಮಕಿ ಹಾಕಿ ಪಿರ್ಯಾದಿಯವರ ಕರ್ತವ್ಯಕ್ಕೆ ಅಡ್ಡಿ ಆತಂಕವನ್ನುಂಟು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಚಂದ್ರಕಾಂತ ತಂದೆ ಗಣಪು ಗೌಡ, ಪೊಲೀಸ್ ಕಾನ್ಸಟೇಬಲ್ (ಸಿಪಿಸಿ-1150), ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 12-04-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಜೋಯಿಡಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 22/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಘವೇಂದ್ರ ತಂದೆ ನಾಗಪ್ಪ, ಪ್ರಾಯ-35 ವರ್ಷ, ವೃತ್ತಿ-ಚಾಲಕ, ಸಾ|| ಶಿಯಾತಲಾಪ, ತಾ&ಜಿ: ರಾಯಚೂರು (ಟೆಂಪೋ ಟ್ರಾವೆಲರ್ ನಂ: ಕೆ.ಎ-03/ಎ.ಬಿ-1908 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 11-04-2021 ರಂದು 19-30 ಗಂಟೆಯ ಸುಮಾರಿಗೆ ಜೋಯಿಡಾ-ಕಾರವಾರ ರಾಜ್ಯ ರಸ್ತೆಯ ಬರಪಾಲಿ ಗ್ರಾಮದ ಹತ್ತಿರ ತಾನು ಚಲಾಯಿಸುತ್ತಿದ್ದ ಟೆಂಪೋ ಟ್ರಾವೆಲರ್ ನಂ: ಕೆ.ಎ-03/ಎ.ಬಿ-1908 ನೇದನ್ನು ಜೋಯಿಡಾ ಬದಿಯಿಂದ ಕಾರವಾರ ಬದಿಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಅಣಶಿ ಘಾಟದ ಬರಪಾಲಿ ಗ್ರಾಮದ ಹತ್ತಿರ ರಸ್ತೆಯ ಬಲಬದಿಯ ಕಲ್ಲು ಬಂಡೆಗೆ ಡಿಕ್ಕಿ ಪಡಿಸಿ ಸದರ ವಾಹನದಲ್ಲಿ ಪಿರ್ಯಾದಿ, ಸುಧಾಕರ, ಲಕ್ಷ್ಮಣ, ಶೇಕ್ಷಾವಲಿ, ಕೃಷ್ಣ, ಹನಮಂತ ಇವರಿಗೆ ಭಾರೀ ಗಾಯ ಪಡಿಸಿ ಹಾಗೂ ಇನ್ನಿತರರಿಗೆ ಸಾದಾ ಗಾಯ ಪಡಿಸಿ, ತಾನು ಚಲಾಯಿಸುತ್ತಿದ್ದ ಟೆಂಪೋ ಟ್ರಾವೆಲರ್ ನಂ: ಕೆ.ಎ-03/ಎ.ಬಿ-1908 ನೇದನ್ನು ಜಖಂ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಚನ್ನಬಸನಗೌಡ ತಂದೆ ದೇವೇಂದ್ರಗೌಡ, ಪ್ರಾಯ-36 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಹೊಸಹಳ್ಳಿ, ತಾ: ಸಿಂಧನೂರ, ಜಿ: ರಾಯಚೂರು ರವರು ದಿನಾಂಕ: 12-04-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 60/2021, ಕಲಂ: 78(3) ಕರ್ನಾಟಕ ಪೊಲಿಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ರಾಮಾ ತಂದೆ ನಾರಾಯಣ ದೇವಾಡಿಗ, ಪ್ರಾಯ-49 ವರ್ಷ, ವೃತ್ತಿ-ಎ.ಪಿ.ಎಮ್.ಸಿ.ಯಲ್ಲಿ ಕೂಲಿ ಕೆಲಸ, ಸಾ|| ಸಬಗೇರಿ, ತಾ: ಯಲ್ಲಾಪುರ. ನಮೂದಿತ ಆರೋಪಿತನು ಯಲ್ಲಾಪುರ ಪಟ್ಟಣದ ಶಿರಸಿ ರಸ್ತೆ ಎ.ಪಿ.ಎಮ್.ಸಿ ಎದುರು ಗಾರ್ಡನ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ದಿನಾಂಕ: 12-04-2021 ರಂದು 17-15 ಗಂಟೆಗೆ ಓ.ಸಿ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ ತನ್ನ ಲಾಭಕ್ಕಾಗಿ 01/- ರೂಪಾಯಿಗೆ 80/- ರೂಪಾಯಿ ಕೊಡುವ ಕರಾರಿನ ಮೇಲೆ ಓ.ಸಿ ಜುಗಾರಾಟ ನಡೆಸುತ್ತಿದ್ದಾಗ ಪಿರ್ಯಾದಿಯವರು ತಮ್ಮ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸೇರಿ ದಾಳಿ ಮಾಡಿದಾಗ ಓ.ಸಿ ಆಟದ ಸಲಕಣೆಗಳಾದ ಓ.ಸಿ ಚೀಟಿ-1, ಬಾಲ್ ಪೆನ್-01 ಮತ್ತು ನಗದು ಹಣ 610/- ರೂಪಾಯಿಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜುನಾಥ ಗೌಡರ, ಪಿ.ಎಸ್.ಐ, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 12-04-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 61/2021, ಕಲಂ: 78(3) ಕರ್ನಾಟಕ ಪೊಲಿಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ರಾಘವೇಂದ್ರ ತಂದೆ ಸುಬ್ರಾಯ ಹೆಗಡೆ, ಪ್ರಾಯ-41 ವರ್ಷ, ವೃತ್ತಿ-ಎ.ಪಿ.ಎಮ್.ಸಿ ಯಲ್ಲಿ ನೌಕರಿ, ಸಾ|| ಕಾಳಮ್ಮನಗರ, ತಾ: ಯಲ್ಲಾಪುರ. ನಮೂದಿತ ಆರೋಪಿತನು ದಿನಾಂಕ: 12-04-2021 ರಂದು 19-30 ಗಂಟೆಗೆ ಯಲ್ಲಾಪುರ ಎ.ಪಿ.ಎಮ್.ಸಿ ಯ ಸಾರ್ವಜನಿಕ ಸ್ದಳದಲ್ಲಿ ತನ್ನ ಲಾಭಕ್ಕಾಗಿ ಓ.ಸಿ ಮಟಕಾ ಎಂಬ ಜೂಗಾರಾಟದ ಬಗ್ಗೆ ಜನರಿಗೆ ಆಸೆ ತೋರಿಸಿ ಅವರಿಂದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಎಂಬ ಜೂಗಾರಾಟ ಆಡಿಸುತ್ತಿರುವಾಗ ನಗದು ಹಣ 900/- ರೂಪಾಯಿ ಮತ್ತು ಓ.ಸಿ ಮಟಕಾ ಜೂಗಾರಾಟದ ಅಂಕೆ-ಸಂಖ್ಯೆ ಬರೆದ ಪೇಪರ್-01 ಹಾಗೂ ಬಾಲ್ ಪೆನ್-01 ಇವುಗಳೊಂದಿಗೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜುನಾಥ ಗೌಡರ್, ಪಿ.ಎಸ್.ಐ-1, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 12-04-2021 ರಂದು 22-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 62/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮುತ್ತು ತಂದೆ ಅಶೋಕ ಬಿರದಾರ, ಪ್ರಾಯ-27 ವರ್ಷ, ವೃತ್ತಿ-ಚಾಲಕ, ಸಾ|| ಹಿತ್ನನಹಳ್ಳಿ ಫಾರಂ, ಬಿಜಾಪುರ (ಬೊಲೆರೋ ಪಿಕ್‍ಆಫ್ ವಾಹನ ನಂ: ಕೆ.ಎ–28/ಡಿ-8706 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 12-04-2021 ರಂದು 15-45 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಶಿರಲೆ ಫಾಲ್ಸ್ ಕ್ರಾಸ್ ಹತ್ತಿರ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಬಾಬ್ತು ಬೊಲೆರೋ ಪಿಕ್‍ಆಫ್ ವಾಹನ ನಂ: ಕೆ.ಎ–28/ಡಿ-8706 ನೇದನ್ನು ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀವೇಗವಾಗಿ ಮತ್ತು ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು, ತನ್ನ ವಾಹನವನ್ನು ನಿಯಂತ್ರಣದಲ್ಲಿಟ್ಟುಕೊಳ್ಳದೇ ತನ್ನ ಮುಂದಿನಿಂದ ಹೋಗುತ್ತಿದ್ದ ಬಸ್ಸನ್ನು ಓವರಟೇಕ್ ಮಾಡಲು ಹೋಗಿ ಅದೇ ವೇಳೆ ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ತನ್ನ ರಸ್ತೆಯ ಸೈಡಿನಿಂದ ನಿಧಾನವಾಗಿ ಪಿರ್ಯಾದಿಯವರು ಚಲಾಯಿಸಿಕೊಂಡು ಬರುತ್ತಿದ್ದ ಕಾರ್ ನಂ: ಕೆ.ಎ–51/ಎಮ್.ಇ-4295 ನೇದಕ್ಕೆ ಎದರುನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯವರ ಕಾರಿನಲ್ಲಿದ್ದ ಪ್ರಯಾಣಿಸುತ್ತಿದ್ದ ಸಾಕ್ಷಿದಾರರಾದ ಶ್ರೀಮತಿ ಸುಜಾತಾ ಕೆ ಹಾಗೂ ಶ್ರೀಮತಿ ವೀಣಾ ಕೋಂ. ದೀಪಕ ಶೇರುಗಾರ, ಇವರ ಮೈ ಕೈಗೆ ಗಾಯನೋವು ಪಡಿಸಿ, ಎರಡು ವಾಹನಗಳನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಖೀಲೇಶ ಕೆ, ಪ್ರಾಯ-24 ವರ್ಷ, ವೃತ್ತಿ-ವ್ಯವಹಾರ, ಸಾ|| ಸೋಮೇಶ್ವರ ರೋಡ್, ಫಡುವರಿ, ತಾ: ಬೈಂದೂರು, ಜಿ: ಉಡುಪಿ ರವರು ದಿನಾಂಕ: 12-04-2021 ರಂದು 23-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 17/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಪರಶುರಾಮ ತಂದೆ ಕೃಷ್ಣ ನಾಯ್ಕ, ಪ್ರಾಯ-43 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅಂಬಾಗಿರಿ, ಮೇನ್ ರೋಡ್, ತಾ: ಶಿರಸಿ. ನಮೂದಿತ ಆರೋಪಿತನು ದಿನಾಂಕ: 12-04-2021 ರಂದು 19-15 ಗಂಟೆಯ ಸುಮಾರಿಗೆ ಶಿರಸಿ ಶಹರದ ಬಿಡ್ಕಿ ಸರ್ಕಲ್ ಹತ್ತಿರ ಸಂತೆ ಮಾರ್ಕೆಟ್ ದಲ್ಲಿ ಸಾರ್ವಜನಿಕ ಸ್ಥಳದಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಓ.ಸಿ ಮಟಕಾ ಜುಗಾರಾಟ ನಡೆಸುತ್ತಿರುವಾಗ ಓ.ಸಿ ಮಟಕಾ ಜುಗಾರಾಟದ ಸಲಕರಣೆಗಳಾದ ನಗದು ಹಣ ಒಟ್ಟೂ 1,110/- ರೂಪಾಯಿ, ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-01, ಬಾಲ್ ಪೆನ್-01 ಇವುಗಳೊಂದಿಗೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಬಿ. ಯು. ಪ್ರದೀಪ, ಪೊಲೀಸ್ ವೃತ್ತ ನಿರೀಕ್ಷಕರು, ಶಿರಸಿ ವೃತ್ತ, ಶಿರಸಿ ರವರು ದಿನಾಂಕ: 12-04-2021 ರಂದು 20-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 18/2021, ಕಲಂ: 15(ಎ) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಸತೀಶ ತಂದೆ ಶ್ರೀನಿವಾಸ ಶೆಟ್ಟಿ, ಪ್ರಾಯ-35 ವರ್ಷ, ವೃತ್ತಿ-ಹೊಟೇಲ್ ವ್ಯಾಪಾರ, ಸಾ|| ರಾಮನಗರ, ಹುಲೇಕಲ್ ರೋಡ್, ತಾ: ಶಿರಸಿ. ನಮೂದಿತ ಆರೋಪಿತನು ಶಿರಸಿ ಶಹರದ ರಾಮನಗರದ ಹುಲೇಕಲ್ ರೋಡಿನ ಪಂಜುರ್ಲಿ ಹೊಟೇಲಿನ ಮಾಲೀಕನಿದ್ದು, ದಿನಾಂಕ: 12-04-2021 ರಂದು 20-00 ಗಂಟೆಗೆ ತನ್ನ ಹೊಟೇಲಿನ ಒಳಗೆ ತನ್ನ ಅನ್ಯಾಯದ ಲಾಭಕ್ಕೋಸ್ಕರ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಮದ್ಯವನ್ನು ಮಾರಾಟ ಮಾಡಿ ಮದ್ಯ ಕುಡಿಯಲು ತನ್ನ ಹೊಟೇಲಿನ ಒಳಗೆ ಅನುವು ಮಾಡಿಕೊಟ್ಟು, 421/- ರೂಪಾಯಿಯ HAYWARDS CHEERS WHISKY ಅಂತಾ ಲೇಬಲ್ ಇದ್ದ 90 ML ಅಳತೆಯ-12 ಮದ್ಯದ ಪ್ಯಾಕೆಟ್ ಗಳು, HAYWARDS CHEERS WHISKY ಅಂತಾ ಲೇಬಲ್ ಇದ್ದ 90 ML ಅಳತೆಯ ಖಾಲಿ ಪ್ಯಾಕೆಟ್-02, ಅ||ಕಿ|| 00.00/- ರೂಪಾಯಿ ಹಾಗೂ ಮದ್ಯವನ್ನು ಕುಡಿಯಲು ಬಳಸಿದ ಗಾಜಿನ ಗ್ಲಾಸ್-02, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ಅನಧೀಕೃತವಾಗಿ ಮದ್ಯವನ್ನು ಮಾರಾಟ ಮಾಡುತ್ತಿರುವಾಗ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಿವಾನಂದ ನಾವದಗಿ, ಪಿ.ಎಸ್.ಐ (ಕಾ&ಸು), ಶಿರಸಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 12-04-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 36/2021, ಕಲಂ: ಹುಡುಗಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಕುಮಾರಿ: ಪದ್ಮಾ ತಂದೆ ರಾಮಚಂದ್ರ ಶಿಳ್ಳೆಕ್ಯಾತರ್, ಪ್ರಾಯ-21 ವರ್ಷ, ಸಾ|| 2 ನೇ ಕ್ರಾಸ್, ಕಸದಗುಡ್ಡೆ, ಬಚಗಾಂವ, ಪೋ: ಚಿಪಗಿ, ತಾ: ಶಿರಸಿ. ಪಿರ್ಯಾದಿಯವರ ತಂಗಿಯಾದ ಇವಳು ದಿನಾಂಕ: 12-04-2021 ರಂದು ಸಂಜೆ 17-15 ಗಂಟೆಗೆ ತಮ್ಮ ಮನೆಯ ಮುಂದಿನ ಕಟ್ಟೆಯ ಮೇಲೆ ಕುಳಿತುಕೊಂಡಿದ್ದವಳು, ಮನೆಯಲ್ಲಿ ಯಾರಿಗೂ ಹೇಳದೇ ಕೇಳದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ. ಕಾಣೆಯಾದ ತನ್ನ ತಂಗಿಯನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ರಾಮಚಂದ್ರ ಶಿಳ್ಳೆಕ್ಯಾತರ್, ಪ್ರಾಯ-24 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| 2 ನೇ ಕ್ರಾಸ್, ಕಸದಗುಡ್ಡೆ, ಬಚಗಾಂವ, ಪೋ: ಚಿಪಗಿ, ತಾ: ಶಿರಸಿ ರವರು ದಿನಾಂಕ: 12-04-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 38/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಈರಣ್ಣಾ ತಂದೆ ನಾರಾಯಣಪ್ಪ ಅಮಾಸಿ, ಪ್ರಾಯ-31 ವರ್ಷ, ವೃತ್ತಿ-ಕೇಬಲ್ ಕಲೆಕ್ಷನ್, ಸಾ|| ಸೂರೇಬಾನ್, ತಾ: ರಾಮದುರ್ಗಾ, ಜಿ: ಬೆಳಗಾವಿ, ಹಾಲಿ ಸಾ|| 4 ನೇ ಅಡ್ಡ ರಸ್ತೆ, ವಿವೇಕಾನಂದ ನಗರ, ತಾ: ಶಿರಸಿ. ನಮೂದಿತ ಆರೋಪಿತನು ದಿನಾಂಕ: 12-04-2021 ರಂದು 17-25 ಗಂಟೆಗೆ ಶಿರಸಿ ವಿವೇಕಾನಂದ ನಗರದ ಶ್ರೀ ಗಣಪತಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ ಅದೃಷ್ಟದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿದರೆ 01/- ರೂಪಾಯಿಗೆ 80/- ರೂಪಾಯಿ ಹಣವನ್ನು ಕೊಡುತ್ತೇನೆ ಅಂತಾ ಹೇಳಿ ಜನರಿಗೆ ಕರೆದು ಜನರಿಂದ ಹಣವನ್ನು ಅದೃಷ್ಟದ ಅಂಕೆ-ಸಂಖ್ಯೆಗಳ ಪಂಥವಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ಪಿರ್ಯಾದಿಯವರು ಪಂಚರು ಮತ್ತು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ನಡೆಸಿದಾಗ ಓ.ಸಿ ಮಟಕಾ ಜೂಗಾರಾಟದಿಂದ ಸಂಗ್ರಹವಾದ ನಗದು ಹಣ 1370/- ರೂಪಾಯಿ ಹಾಗೂ ಓ.ಸಿ ಜೂಗಾರಾಟಕ್ಕೆ ಬಳಸಿದ ಅಂಕೆ-ಸಂಖ್ಯೆ ಬರೆದ ಚೀಟಿ-01, ಅ||ಕಿ|| 00.00/- ರೂಪಾಯಿ, ಖಾಲಿ ಪೇಪರ್ ತುಂಡುಗಳು-08, ಅ||ಕಿ|| 00.00/- ರೂಪಾಯಿ ಮತ್ತು ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನಾಗಪ್ಪ, ಪಿ.ಎಸ್.ಐ, ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 12-04-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 45/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ರಮಾಕಾಂತ ತಂದೆ ಸುಬ್ರಾಯ ಅಂಬಿಗ, ಪ್ರಾಯ-37 ವರ್ಷ, ವೃತ್ತಿ-ಪೇಂಟಿಂಗ್ ಕೆಲಸ, ಸಾ|| ರವೀಂದ್ರ ನಗರ, ಸಿದ್ದಾಪುರ ಶಹರ, 2]. ಹರೀಶ ತಂದೆ ಕನ್ನಾ ನಾಯ್ಕ, ಪ್ರಾಯ-27 ವರ್ಷ, ವೃತ್ತಿ-ಚಾಲಕ, ಸಾ|| ಭಗತಸಿಂಗ್ ಸರ್ಕಲ್, ಸಿದ್ದಾಪುರ ಶಹರ, 3]. ಗುರುರಾಜ ತಂದೆ ಗೋವಿಂದ ಅಂಬಿಗ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ರವೀಂದ್ರ ನಗರ, ಸಿದ್ದಾಪುರ ಶಹರ, 4]. ರಾಘವೇಂದ್ರ ತಂದೆ ರಾಮಾ ಪೂಜಾರಿ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಐ.ಬಿ ಹತ್ತಿರ, ಸಿದ್ದಾಪುರ ಶಹರ, 5]. ಶಶಿಧರ ನಾಯ್ಕ, ಪ್ರಾಯ-27 ವರ್ಷ, ಸಾ|| ಹಂಜಗಿ, ತಾ: ಸಿದ್ದಾಪುರ, 6]. ಜೈವಂತ ನಾಯ್ಕ, ಪ್ರಾಯ-27 ವರ್ಷ, ಸಾ|| ಬಿಕ್ಕಳಸೆ, ತಾ: ಸಿದ್ದಾಪುರ. ಈ ನಮೂದಿತ ಆರೋಪಿತರು ದಿನಾಂಕ: 12-04-2021 ರಂದು ಸಂಜೆ 16-30 ಗಂಟೆಗೆ ಸಿದ್ದಾಪುರ ಶಹರದ ರವೀಂದ್ರನಗರದ ಬೆಟ್ಟದಲ್ಲಿ ಅಂದರ್-ಬಾಹರ್ ಇಸ್ಪೀಟ್ ಜುಗಾರಾಟ ಆಡುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಸೇರಿ ದಾಳಿ ಮಾಡಿದಾಗ ಆರೋಪಿತರ ಪೈಕಿ ಆರೋಪಿ 1 ರಿಂದ 3 ನೇಯವರು 1). ನಗದು ಹಣ 3,200/- ರೂಪಾಯಿ, 2). 52 ಇಸ್ಪೀಟ್ ಎಲೆಗಳು, 3). ಮಂಡಕ್ಕೆ ಹಾಸಿದ್ದ ಒಂದು ಪ್ಲಾಸ್ಟಿಕ್ ಚೀಲ, ಇವುಗಳೊಂದಿಗೆ ಸೆರೆ ಸಿಕ್ಕಿದ್ದು ಹಾಗೂ ಆರೋಪಿ 4 ರಿಂದ 6 ನೇಯವರು ಓಡಿ ಹೋಗಿ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜೇಶ್ವರ ವಿ. ಚಂದಾವರ, ಪಿ.ಎಸ್.ಐ (ಕ್ರೈಂ), ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 12-04-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 39/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಯೋಗೇಶ ತಂದೆ ನಾಗರಾಜ ಚನ್ನಯ್ಯ, ಪ್ರಾಯ-30 ವರ್ಷ, ಸಾ|| ಜಗಟೂರು, ಜಡೆ, ತಾ: ಸೊರಬಾ, ಜಿ: ಶಿವಮೊಗ್ಗ (ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ: ಕೆ.ಎ-15/ಇ.ಇ-3620 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 11-04-2021 ರಂದು 20-30 ಗಂಟೆಗೆ ತಾನು ಚಲಾಯಿಸಿಕೊಂಡು ಬಂದ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ: ಕೆ.ಎ-15/ಇ.ಇ-3620 ನೇದನ್ನು ಮಳಗಿ-ಬನವಾಸಿ ರಸ್ತೆಯಲ್ಲಿ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹೊಸಕೊಪ್ಪ ಕ್ರಾಸ್ ಬಳಿ ತನ್ನ ಮೋಟಾರ್ ಸೈಕಲ್ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ತೀರಾ ಬಲಕ್ಕೆ ಚಲಾಯಿಸಿ ಮೋಟಾರ್ ಸೈಕಲ್ ಸಮೇತ ಪಲ್ಟಿ ಪಡಿಸಿ, ಸ್ವಯಂಕೃತ ಅಪಘಾತ ಪಡಿಸಿಕೊಂಡು ತನ್ನ ಮುಖಕ್ಕೆ, ಭುಜಕ್ಕೆ ಹಾಗೂ ಅಲ್ಲಲ್ಲಿ ರಕ್ತಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಸುಬ್ರಮಣ್ಯ ತಂದೆ ನಾಗಪ್ಪ ಚನ್ನಯ್ಯ, ಪ್ರಾಯ-30 ವರ್ಷ, ವೃತ್ತಿ-ಹೊಟೇಲ್ ಕೆಲಸ, ಸಾ|| ಮನೆ ನಂ: 67, ಕಿರವತ್ತಿ, ಪೋ: ಕುಪ್ಪಗಡ್ಡೆ, ತಾ: ಶಿರಸಿ ರವರು ದಿನಾಂಕ: 12-04-2021 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 40/2021, ಕಲಂ: ಹುಡುಗಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಕುಮಾರಿ: ಜಯಲಕ್ಷ್ಮೀ ತಂದೆ ವೀರೇಶ ಕಪಲೇರ, ಪ್ರಾಯ-18 ವರ್ಷ, ವೃತ್ತಿ-ಮನೆ ಕೆಲಸ, ಸಾ|| ದೊಡ್ಡಕೇರಿ, ಬನವಾಸಿ, ತಾ: ಶಿರಸಿ. ಕಾಣೆಯಾದ ಇವಳು ಪಿ.ಯು.ಸಿ ಪ್ರಥಮ ವರ್ಷ ಮುಗಿಸಿ ಮನೆಯಲ್ಲಿ ತನ್ನ ತಾಯಿ, ಅಣ್ಣ-ಅತ್ತಿಗೆಯವರೊಂದಿಗೆ ಕೂಡಿ ವಾಸವಾಗಿದ್ದು, ಮನೆಯಲ್ಲಿಯೇ ಮನೆ ಕೆಲಸ ಮಾಡಿಕೊಂಡಿದ್ದವಳು, ದಿನಾಂಕ: 11-04-2021 ರಂದು ಸಾಯಂಕಾಲ 20-30 ಗಂಟೆಗೆ ಬಹಿರ್ದೆಸೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು, ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದವಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ದೀಪಕ ತಂದೆ ವೀರೇಶ ಕಪಲೇರ, ಪ್ರಾಯ-24 ವರ್ಷ, ವೃತ್ತಿ-ಗಾರೆ ಕೆಲಸ, ಸಾ|| ದೊಡ್ಡಕೇರಿ, ಬನವಾಸಿ, ತಾ: ಶಿರಸಿ ರವರು ದಿನಾಂಕ: 12-04-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 12-04-2021

at 00:00 hrs to 24:00 hrs

 

ಮುಂಡಗೋಡ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 09/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಘಾಟು ತಂದೆ ಬೀರು ಸಿಂದೆ, ಪ್ರಾಯ-31 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕಾಳೆಕೇರಿ, ಮೈನಳ್ಳಿ, ತಾ: ಮುಂಡಗೋಡ. ಸುದ್ದಿದಾರನ ಮಗನಾದ ಈತನು ದಿನಾಂಕ: 11-04-2021 ರಂದು ತಮ್ಮ ಹೊಲದ ಕೆಲಸಕ್ಕೆ ಹೋದವನು, ಕೆಲಸವನ್ನು ಮುಗಿಸಿಕೊಂಡು ಮರಳಿ ಮನೆಯ ಎದುರು ತಲುಪಿದಾಗ ಜೋರಾದ ಮಳೆ ಗಾಳಿ ಬೀಸಿ ಗುಡುಗು ಸಿಡಿಲು ಪ್ರಾರಂಭವಾಗಿ, ಸಂಜೆ 07-15 ಗಂಟೆಗೆ ಸಿಡಿಲು ಆತನ ಎದೆಯ ಭಾಗಕ್ಕೆ, ಎರಡು ಕೈಗಳಿಗೆ ಬಡಿದು ಸುಟ್ಟ ಗಾಯವಾದ ಪರಿಣಾಮ ಮರಣ ಪಟ್ಟಿರುತ್ತಾನೆ. ನನ್ನ ಮಗ ಪ್ರಕೃತಿ ವಿಕೋಪದ ಕಾರಣದಿಂದ ಮರಣಪಟ್ಟ ಬಗ್ಗೆ ಪಿರ್ಯಾದಿ ಶ್ರೀ ಬೀರು ತಂದೆ ಕೊಂಡು ಸಿಂದೆ, ಪ್ರಾಯ-63 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಾಳೆಕೇರಿ, ಮೈನಳ್ಳಿ, ತಾ: ಮುಂಡಗೋಡ ರವರು ದಿನಾಂಕ: 12-04-2021 ರಂದು 00-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 13-04-2021 05:49 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080