Daily District Crime Report
Date:- 12-04-2022
at 00:00 hrs to 24:00 hrs
ಕುಮಟಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 76/2022, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಶಿವರಾಜ ತಂದೆ ಬೀರಪ್ಪ ನಾಯ್ಕ, ಪ್ರಾಯ-32 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ವನ್ನಳ್ಳಿ, ತಾ: ಕುಮಟಾ, 2]. ಪರಮೇಶ್ವರ ಬಲಿಯಾ ಗೌಡ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಾಂತಗಲ್, ತಾ: ಕುಮಟಾ, 3]. ಸಂತೋಷ ಆಗ್ನೇಲ್ ಡಯಾಸ್, ಪ್ರಾಯ-30 ವರ್ಷ, ವೃತ್ತಿ-ಚಾಲಕ, ಸಾ|| ಸಂತೆಗುಳಿ, ತಾ: ಕುಮಟಾ, 4]. ಹರಿಶ್ಚಂದ್ರ ಮಂಜುನಾಥ ಗೌಡ, ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹರವಳ್ಳಿ, ಸಂತೆಗುಳಿ, ತಾ: ಕುಮಟಾ, 5]. ವಿಷ್ಣು ಜಟ್ಟಿ ನಾಯ್ಕ, ಪ್ರಾಯ-54 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಅಲಗಾರ್, ಸಂತೆಗುಳಿ, ತಾ: ಕುಮಟಾ, 6]. ಮಂಜುನಾಥ ಗೋಯ ಮರಾಠಿ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಉಳ್ಳೂರು ಮಠ, ತಾ: ಕುಮಟಾ, 7]. ಸಲಾಧರ್ ಕ್ರಿಸ್ತನ್ ಫರ್ನಾಂಡೀಸ್, ಪ್ರಾಯ-37 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ದೀವಳ್ಳಿ, ತಾ: ಕುಮಟಾ, 8]. ಮಾರುತಿ ವೆಂಕಟ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಕ್ಯಾಶ್ಯೂ ಪ್ಯಾಕ್ಟರಿ ಕೆಲಸ, ಸಾ|| ಉಳ್ಳೂರು ಮಠ, ತಾ: ಕುಮಟಾ, 9]. ಗಣೇಶ ರಾಮ ನಾಯ್ಕ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಉಳ್ಳೂರು ಮಠ, ತಾ: ಕುಮಟಾ, 10]. ಹನುಮಂತ ವೆಂಕು ಮರಾಠಿ, ಪ್ರಾಯ-24 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಉಳ್ಳೂರು ಮಠ, ತಾ: ಕುಮಟಾ, 11]. ಶೇಖರ ದಾಸ ನಾಯ್ಕ, ಪ್ರಾಯ-46 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಉಳ್ಳೂರು ಮಠ, ತಾ: ಕುಮಟಾ, 12]. ನವೀನ ಕೇಶವ ಗೌಡ, ಪ್ರಾಯ-26 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಧರ್ಮಶಾಲೆ, ನವೀಲಗೋಣ, ತಾ: ಹೊನ್ನಾವರ ಹಾಗೂ ಇನ್ನಿತರರು. ಈ ನಮೂದಿತ ಆರೋಪಿತರು ದಿನಾಂಕ: 11-04-2022 ರಂದು 23-30 ಗಂಟೆಗೆ ಕುಮಟಾ ತಾಲೂಕಿನ ಉಳ್ಳೂರು ಮಠದ ಮಾಸ್ತಿಮನೆ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತಮ್ಮ ಅಕ್ರಮ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಅಂದರ್ -ಬಾಹರ್ ಜೂಜಾಟ ಆಡುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ನಡೆಸಿದ ಕಾಲಕ್ಕೆ ನಗದು ಹಣ 10,460/- ರೂಪಾಯಿ ಹಾಗೂ ಇಸ್ಪೀಟ್ ಜೂಗಾರಾಟದ ಸಲಕರಣೆಗಳೊಂದಿಗೆ 12 ಜನ ಆರೋಪಿತರು ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನವೀನ ಎಸ್. ನಾಯ್ಕ, ಪಿ.ಎಸ್.ಐ (ಕಾ&ಸು), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 12-04-2022 ರಂದು 02-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಕುಮಟಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 77/2022, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಜ್ಞಾನೇಶ್ವರ ತಂದೆ ವೆಂಕಪ್ಪ ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ಚಾಲಕ, ಸಾ|| ಹೊಲನಗದ್ದೆ, ತಾ: ಕುಮಟಾ (ಟಾಟಾ ಏಸ್ ವಾಹನ ನಂ: ಕೆ.ಎ-47/5895 ನೇದರ ಚಾಲಕ). ಈತನು ದಿನಾಂಕ: 11-04-2022 ರಂದು ಬೆಳಿಗ್ಗೆ 10-30 ಗಂಟೆಗೆ ತನ್ನ ಟಾಟಾ ಏಸ್ ವಾಹನ ನಂ: ಕೆ.ಎ-47/5895 ನೇದನ್ನು ಕುಮಟಾ ಕಡೆಯಿಂದ ಕಾಗಲ್ ಕಡೆಗೆ ಹೋಗಲು ಅತೀವೇಗವಾಗಿ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹೊಲನಗದ್ದೆ ಬಸ್ ನಿಲ್ದಾಣದ ಹತ್ತಿರ ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದ ಒಂದು ಪ್ಯಾಸೆಂಜರ್ ವಾಹನವನ್ನು ಓವರಟೇಕ್ ಮಾಡಿ ಮುಂದೆ ಹೋಗಿ ವಾಹನದ ಮೇಲಿನ ನಿಯಂತ್ರಣ ತಪ್ಪಿ ತನ್ನ ಎದುರಿನಿಂದ ಅಂದರೆ ಕಾಗಲ್ ಕಡೆಯಿಂದ ಕುಮಟಾ ಕಡೆಗೆ ಹೋಗಲು ಬರುತ್ತಿದ್ದ ಲಗೇಜ್ ರಿಕ್ಷಾ ನಂ: ಕೆ.ಎ-47/475 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಲಗೇಜ್ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಶ್ರೀಮತಿ ನಾಗವೇಣಿ ಗಂಡ ಸುಕ್ರಪ್ಪ ನಾಯ್ಕ, ಪ್ರಾಯ-60 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಕಾಗಲ್, ತಾ: ಕುಮಟಾ ಇವರ ಎಡಗಾಲಿನ ಪಾದದ ಮೇಲ್ಭಾಗದಲ್ಲಿ ಮೂಳೆ ಹೊರ ಬಂದು ಭಾರೀ ನೋವು ಆಗಲು ಕಾರಣನಾಗಿದ್ದಲ್ಲದೇ, ಎರಡು ವಾಹನಗಳು ಜಖಂ ಆಗಲು ಆರೋಪಿ ಚಾಲಕನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಸುಕ್ರಪ್ಪ ತಂದೆ ಮಂಕಾಳಿ ನಾಯ್ಕ, ಪ್ರಾಯ-65 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಾಗಲ್ ಗ್ರಾಮ, ತಾ: ಕುಮಟಾ ರವರು ದಿನಾಂಕ: 12-04-2022 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹೊನ್ನಾವರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 139/2022, ಕಲಂ: 279, 337 ಐಪಿಸಿ ಹಾಗೂ 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಯಾವುದೋ ಒಂದು ಮೋಟಾರ್ ಸೈಕಲ್ ಸವಾರನಾಗಿದ್ದು, ಮೋಟಾರ್ ಸೈಕಲ್ ನಂಬರ್ ಹಾಗೂ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 11-04-2022 ರಂದು ರಾತ್ರಿ 22-15 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಶರಾವತಿ ಸರ್ಕಲ್ ದಲ್ಲಿ ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲನ್ನು ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಪ್ರಕರಣದ ಗಾಯಾಳು ಶ್ರೀ ರಘುನಂದನ ತಂದೆ ಪಾಂಡುರಂಗ ನಾಯ್ಕ, ಪ್ರಾಯ-45 ವರ್ಷ, ವೃತ್ತಿ-ವ್ಯಾಪಾರ, ಸಾ|| ಸಾಲೇಹಿತ್ಲ, ತಾ: ಹೊನ್ನಾವರ ಇವರು ತನ್ನ ಮೋಟಾರ್ ಸೈಕಲ್ ನಂ: ಕೆ.ಎ-47/ಎಚ್-2859 ನೇದರ ಹಿಂಬದಿಗೆ ಶ್ರೀ ಗಣೇಶ ತಂದೆ ಗಂಗಾಧರ ನಾಯ್ಕ, ಪ್ರಾಯ-45 ವರ್ಷ, ವೃತ್ತಿ-ವ್ಯಾಪಾರ, ಸಾ|| ಜಡ್ಡಿಕೇರಿ, ತಾ: ಹೊನ್ನಾವರ ಇವರಿಗೆ ಕೂರಿಸಿಕೊಂಡು ತನ್ನ ಮೋಟಾರ್ ಸೈಕಲನ್ನು ಗೇರುಸೊಪ್ಪ ಸರ್ಕಲ್ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಶರಾವತಿ ಸರ್ಕಲ್ ಕಡೆಗೆ ಚಲಾಯಿಸಿಕೊಂಡು ಬಂದು, ಬಸ್ ನಿಲ್ದಾಣದ ರಸ್ತೆಯ ಕಡೆಗೆ ಹೋಗಲೆಂದು ತನ್ನ ಮೋಟಾರ ಸೈಕಲಿಗೆ ಬಲಗಡೆಯ ಇಂಡಿಕೇಟರ್ ಹಾಕಿ ಬಲಗೈ ಸನ್ನೆ ಮಾಡಿ, ತನ್ನ ಮೋಟಾರ್ ಸೈಕಲನ್ನು ರಸ್ತೆಯ ಬಲಕ್ಕೆ ತಿರುಗಿಸುತ್ತಿದ್ದಾಗ, ಮೋಟಾರ್ ಸೈಕಲ್ ನಂ: ಕೆ.ಎ-47/ಎಚ್-2859 ನೇದಕ್ಕೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರನಾದ ಶ್ರೀ ರಘುನಂದನ ತಂದೆ ಪಾಂಡುರಂಗ ನಾಯ್ಕ, ಈತನಿಗೆ ತಲೆಯ ಹಿಂಬದಿಗೆ ಗಾಯನೋವು ಪಡಿಸಿದ್ದಲ್ಲದೇ, ಮೋಟಾರ್ ಸೈಕಲ್ ಹಿಂಬದಿ ಸವಾರನಾದ ಶ್ರೀ ಗಣೇಶ ತಂದೆ ಗಂಗಾಧರ ನಾಯ್ಕ, ಈತನಿಗೆ ಬಲಗಣ್ಣಿನ ಹುಬ್ಬಿಗೆ ಹಾಗೂ ಮೈಮೇಲೆ ಗಾಯನೋವು ಪಡಿಸಿದ್ದಲ್ಲದೇ, ಅಪಘಾತದ ನಂತರ ಆರೋಪಿ ಮೋಟಾರ್ ಸೈಕಲ್ ಸವಾರನು ತನ್ನ ಮೋಟಾರ್ ಸೈಕಲನ್ನು ನಿಲ್ಲಿಸದೇ ಚಲಾಯಿಸಿಕೊಂಡು ಪರಾರಿಯಾದ ಬಗ್ಗೆ ಪಿರ್ಯಾದಿ ಶ್ರೀ ಸಂಜಯ ತಂದೆ ಸುರೇಶ ಶೇಟ್, ಪ್ರಾಯ-39 ವರ್ಷ, ವೃತ್ತಿ-ವ್ಯಾಪಾರ, ಸಾ|| ದುರ್ಗಾಕೇರಿ, ತಾ: ಹೊನ್ನಾವರ ರವರು ದಿನಾಂಕ: 12-04-2022 ರಂದು 00-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಯಲ್ಲಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 85/2022, ಕಲಂ: 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತನು ಯಾರೋ ಅಪರಿಚಿತ ವ್ಯಕ್ತಿಯಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ನಮೂದಿತ ಆರೋಪಿತನು ದಿನಾಂಕ: 10-04-2022 ರಂದು ಬೆಳಿಗ್ಗೆ 12-00 ಗಂಟೆಯಿಂದ 12-30 ಗಂಟೆಯ ನಡುವಿನ ಅವಧಿಯಲ್ಲಿ ಯಲ್ಲಾಪುರ ಶಹರದ ಡಿ.ಟಿ ರಸ್ತೆಯಲ್ಲಿರುವ ಪಿರ್ಯಾದಿಯ ಎ.ಪಿ.ಎಮ್ ಕ್ಲಿನಿಕ್ ಮತ್ತು ನರ್ಸಿಂಗ್ ಹೋಮ್ ನ ಸ್ಕ್ಯಾನಿಂಗ್ ರೂಮಿನಲ್ಲಿ ಇಟ್ಟಿರುವ ಇ.ಸಿ.ಜಿ ಸಾಪ್ಟವೇರ್ ಇರುವ ಅ||ಕಿ|| 35,000/- ರೂಪಾಯಿ ಬೆಲೆಯ ಕಾಂಪ್ಯಾಕ್ ಕಂಪನಿಯ ಲ್ಯಾಪಟಾಪ್ ಅನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಡಾ|| ವಿಶಾಲ್ ತಂದೆ ಶ್ರೀಧರ ಪಂಡಿತ, ಪ್ರಾಯ-52 ವರ್ಷ, ವೃತ್ತಿ-ವೈದ್ಯರು, ಸಾ|| ಎ.ಪಿ.ಎಮ್ ಕ್ಲಿನಿಕ್ ಮತ್ತು ನರ್ಸಿಂಗ್ ಹೋಮ್, ಡಿ.ಟಿ ರಸ್ತೆ, ತಾ: ಯಲ್ಲಾಪುರ, ಹಾಲಿ ಸಾ|| ರವೀಂದ್ರ ನಗರ, ತಾ: ಯಲ್ಲಾಪುರ ರವರು ದಿನಾಂಕ: 12-04-2022 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ದಾಂಡೇಲಿ ನಗರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 29/2022, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಹಮ್ಮದ್ ಅಲಿ ತಂದೆ ಮೈನುದ್ದೀನ್ ಕಳಸಾಪುರ, ಪ್ರಾಯ-65 ವರ್ಷ, ವೃತ್ತಿ-ಪಾನ ಅಂಗಡಿ ವ್ಯಾಪಾರ, ಸಾ|| ಗಾಂವಠಾಣಾ, ಪಂಚಾಯತ ಆಫೀಸ್ ಹತ್ತಿರ, ತಾ: ದಾಂಡೇಲಿ, 2]. ಹನುಮಂತ ಬಾಲಾರಾಮ್ ಅಂಬೆವಾಡಕರ, ಸಾ|| ಸುಭಾಷನಗರ, ತಾ: ದಾಂಡೇಲಿ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 12-04-2022 ರಂದು 18-20 ಗಂಟೆಗೆ ದಾಂಡೇಲಿ ನಗರ ಠಾಣಾ ವ್ಯಾಪ್ತಿಯ ದಾಂಡೇಲಿಯ ಡಬ್ಲ್ಯೂ.ಸಿ.ಪಿ.ಎಮ್ ಪೆಟ್ರೋಲ್ ಪಂಪ್ ಹಿಂದುಗಡೆಯ ಸಂಡೇ ಮಾರ್ಕೆಟ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ನಿಂತು ತಮ್ಮ ತಮ್ಮ ಲಾಭಕ್ಕಾಗಿ ಅದೃಷ್ಟದ ಅಂಕೆ ಬಂದಲ್ಲಿ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥಕ್ಕೆ ಕಟ್ಟಿಸಿಕೊಂಡು ಓ.ಸಿ ಮಟಕಾ ಜುಗಾರಾಟ ಆಡಿಸುತ್ತಾ ದಾಳಿಯ ಕಾಲಕ್ಕೆ ಒಂದು ಬಾಲ್ ಪೆನ್, ಓ.ಸಿ ಅಂಕೆ-ಸಂಖ್ಯೆ ಬರೆದಿರುವ ಚೀಟಿ ಹಾಗೂ ನಗದು ಹಣ 1,250/- ರೂಪಾಯಿಗಳ ಸಮೇತ ಸೆರೆ ಸಿಕ್ಕಿದ್ದು ಹಾಗೂ ಆರೋಪಿ 2 ನೇಯವನು ಆರೋಪಿ 1 ನೇಯವನಿಗೆ ಕಮೀಷನ್ ನೀಡಿ ಓ.ಸಿ ಮಟಕಾ ಜೂಗಾರಾಟ ಆಡಿಸಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಕಿರಣ ಬಿ. ಪಾಟೀಲ್, ಪಿ.ಎಸ್.ಐ (ಕಾ&ಸು), ದಾಂಡೇಲಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 12-04-2022 ರಂದು 20-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮುಂಡಗೋಡ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 63/2022, ಕಲಂ: 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಪ್ರಕಾಶ ತಂದೆ ನಾಮದೇವ ಜಾಧವ, ಸಾ|| ಪಾರೆ, ತಾ: ಸಂಗೋಲಾ, ಜಿ: ಸೊಲ್ಲಾಪುರ, ಮಹಾರಾಷ್ಟ್ರ ರಾಜ್ಯ, 2]. ನಾರಾಯಣ ತಂದೆ ತುಕಾರಾಮ ಚೌಕಳಿಕರ್, ಸಾ|| ಮೈನಳ್ಳಿ ಗ್ರಾಮ, ತಾ: ಮುಂಡಗೋಡ, 3]. ಪ್ರಿನ್ಸ್ ತಂದೆ ತಂಗಚ್ಚನ್, ಸಾ|| ಪುತ್ತೂರ, ತಾ: ಕೊಟ್ಟಾರಿಕರ್, ಜಿ: ಕೊಲಂ, ಕೇರಳಾ ರಾಜ್ಯ, 4]. ಸಾಜಿ ತಂದೆ ತಂಗಚ್ಚನ್, ಸಾ|| ಪುತ್ತೂರ, ತಾ: ಕೊಟ್ಟಾರಿಕರ್, ಜಿ: ಕೊಲಂ, ಕೇರಳಾ ರಾಜ್ಯ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 12-04-2022 ರಂದು ಮಧ್ಯಾಹ್ನ 03-00 ಗಂಟೆಯ ಸುಮಾರಿಗೆ ಮುಂಡಗೋಡ ತಾಲೂಕಿನ ಹನುಮಾಪುರ ಗ್ರಾಮದ ಹಿಂಭಾಗದ ಪೈಪ್ ಲೈನ್ ಕಾಲುವೆಯ ಏರಿಯ ಮೇಲೆ ಕಾಲುವೆಗೆ ಉರುಳಿ ಹೋಗುವಂತೆ ನಿರ್ಲಕ್ಷ್ಯತನದಿಂದ, ಜೀವಕ್ಕೆ ಅಪಾಯವಾಗುವಂತೆ ಎಮ್.ಎಸ್ ಪೈಪ್ ಅನ್ನು ತಂದಿಟ್ಟ್ಟಿದ್ದು, ಅದನ್ನು ನೋಡಿದ ಆರೋಪಿ 2, 3 ಹಾಗೂ 4 ನೇಯವರು ಸದರಿ ಕಾಮಗಾರಿಯ ಮೇಲ್ವಿಚಾರಕರಾಗಿದ್ದರು ಸಹ ಯಾವುದೇ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದ ಆರೋಪಿ 1 ನೇಯವನು ತಂದಿಟ್ಟಿದ್ದ ಎಮ್.ಎಸ್ ಪೈಪ್ ಉರುಳಿ ಕಾಲುವೆಗೆ ಹೋಗಿ ಪಿರ್ಯಾದಿಯ ಮಾವನಾದ ಶ್ರೀ ರಾಜು ತಂದೆ ಪುಲದೇವರಾಯ ಯಾದವ, ಪ್ರಾಯ-33 ವರ್ಷ, ಸಾ|| ಬಲುಸಿಕಂದರ್ ಗ್ರಾಮ, ಈತನ ಮೈಮೇಲೆ ಬಿದ್ದು, ಸ್ಥಳದಲ್ಲಿಯೇ ಮೃತಪಡಿಸಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅರವಿಂದ ಕುಮಾರ ತಂದೆ ಮಹೇಶ ಪ್ರಸಾದ ಯಾದವ್, ಪ್ರಾಯ-22 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮುಸಹಾರಿತೊಲಾ, ಪೋ: ಕರ್ನೊಲ್, ಜಿ: ಮುಜಾಪರ್ ಪುರ, ಬಿಹಾರ ರಾಜ್ಯ ರವರು ದಿನಾಂಕ: 12-04-2022 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹಳಿಯಾಳ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 57/2022, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ನಾಗರಾಜ ತಂದೆ ಸಿದ್ದಪ್ಪ ಮಾಳ್ವಿ, ಪ್ರಾಯ-44 ವರ್ಷ, ವೃತ್ತಿ-ಚಾಲಕ, ಸಾ|| ಮುರ್ಕವಾಡ ಗ್ರಾಮ, ತಾ: ಹಳಿಯಾಳ, 2]. ಚಂದ್ರಕಾಂತ ತಂದೆ ಸಿದ್ದಪ್ಪ ಗೊಂದಳಿ, ಪ್ರಾಯ-42 ವರ್ಷ, ವೃತ್ತಿ-ಚಾಲಕ, ಸಾ|| ಮೇದಾರ ಗಲ್ಲಿ, ಹಳಿಯಾಳ ಶಹರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ಓ.ಸಿ ಬುಕ್ಕಿಯಾದ ಆರೋಪಿ 2 ನೇಯವನಿಗೆ ಓ.ಸಿ ಜುಗರಾಟದಿಂದ ಬಂದ ಹಣ ಕೊಡುವ ಸಲುವಾಗಿ ದಿನಾಂಕ: 12-04-2022 ರಂದು 19-00 ಗಂಟೆಗೆ ಹಳಿಯಾಳ ಶಹರದ ಸರ್ಕಾರಿ ಆಸ್ಪತ್ರೆಯ ಮುಂದೆ ಇರುವ ಧಾರವಾಡ ರಸ್ತೆಯ ಬದಿಯ ಸಾರ್ವಜನಿಕ ಸ್ಥಳದಲ್ಲಿ ನಿಂತು ತಮ್ಮ ತಮ್ಮ ಅಕ್ರಮ ಲಾಭಕ್ಕಾಗಿ ಬರ-ಹೋಗುವ ಜನರಿಗೆ ಕರೆದು, ಅದೃಷ್ಟ ಸಂಖ್ಯೆಗಳ ಮೇಲೆ ಹಣ ಪಂಥ ಕಟ್ಟಿರಿ, ಅದೃಷ್ಟ ಸಂಖ್ಯೆ ತಾಗಿದರೆ 01/- ರೂಪಾಯಿಗೆ 80/- ರೂಪಾಯಿ ಹಣ ಕೊಡುತ್ತೇನೆ ಅಂತಾ ಜನರ ಮನವೊಲಿಸಿ ಅವರಿಂದ ಹಣ ಪಡೆದು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿದ್ದು, ದಾಳಿಯ ಕಾಲಕ್ಕೆ ಜೂಗಾರಾಟದ ಸಾಮಗ್ರಿಗಳಾದ 1). ನಗದು ಹಣ 1,530/- ರೂಪಾಯಿ, 2). ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ, 3). ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-3, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಪಿರ್ಯಾದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಿವಾನಂದ ಕೆ. ನಾವದಗಿ, ಪಿ.ಎಸ್.ಐ (ಕಾ&ಸು), ಹಳಿಯಾಳ ಪೊಲೀಸ್ ಠಾಣೆ ರವರು ದಿನಾಂಕ: 12-04-2022 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
Daily District U.D Report
Date:- 12-04-2022
at 00:00 hrs to 24:00 hrs
ಶಿರಸಿ ಗ್ರಾಮೀಣ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 19/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಕುಮಾರ: ನಂದನ ತಂದೆ ಮಹೇಶ ಮಡಿವಾಳ ಪ್ರಾಯ-41/2 (ನಾಲ್ಕುವರೆ) ವರ್ಷ, ಸಾ|| ಬನಗಟ್ಟು, ಪೋ: ಅಮ್ಮಿನಳ್ಳಿ, ತಾ: ಶಿರಸಿ. ಪಿರ್ಯಾದಿಯ ಕಿರಿಯ ಮಗನಾದ ಈತನು ದಿನಾಂಕ: 12-04-2022 ರಂದು ಮಧ್ಯಾಹ್ನ 16-30 ಗಂಟೆಯಿಂದ ಸಾಯಂಕಾಲ 18-30 ಗಂಟೆಯ ನಡುವಿನ ಅವಧಿಯಲ್ಲಿ ಶಿರಸಿ ತಾಲೂಕಿನ ಬನಗಟ್ಟು ಊರಿನಲ್ಲಿರುವ ತಮ್ಮ ಹಳೆಯ ಮನೆಯ ಓರೆಯಲ್ಲಿರುವ ಬಾವಿಯಲ್ಲಿ ಇಣುಕಿ ನೋಡಲು ಹೋಗಿಯೋ ಅಥವಾ ಯಾವುದೋ ವಸ್ತುವನ್ನು ಬಾವಿಯಲ್ಲಿ ಬಿಸಾಡಿ, ವಸ್ತುವನ್ನು ಬಿಸಾಡಿದ ನಂತರ ಬಾವಿಯಲ್ಲಿ ಬರುವ ಶಬ್ದವನ್ನು ಕೇಳಲು ಇಣುಕಿ ನೋಡಲು ಹೋಗಿ ಆಕಸ್ಮಾತ್ ಆಗಿ ಬಾವಿಯಲ್ಲಿ ಮಗುಚಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ. ಇದರ ಹೊರತು ಅವನ ಮರಣದಲ್ಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ತನ್ನ ಮಗನ ಶವವು ತಮ್ಮ ಹಳೆಯ ಮನೆಯಲ್ಲಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಹೇಶ ತಂದೆ ರಾಮಾ ಮಡಿವಾಳ, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬನಗಟ್ಟು, ಪೋ: ಅಮ್ಮಿನಳ್ಳಿ, ತಾ: ಶಿರಸಿ ರವರು ದಿನಾಂಕ: 12-04-2022 ರಂದು 21-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======