ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 12-12-2021
at 00:00 hrs to 24:00 hrs
ಕುಮಟಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 215/2021, ಕಲಂ: 143, 147, 148, 341, 323, 324, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಅಂದಾಜು 25 ರಿಂದ 35 ವರ್ಷದ 10 ರಿಂದ 20 ಜನ ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 11-12-2021 ರಂದು ಪಿರ್ಯಾದಿಯವರು ತನ್ನ ಸ್ನೇಹಿತರಾದ 1). ಅರ್ಶದ್ ಅಬ್ದುಲ್ ವ್ಮಜೀದ್, 2). ಈಶ್ವರ ಮಾಳು ನಾಯ್ಕ, 3). ಸೋಮಶೇಖರ ರಾಮಕೃಷ್ಣಾ ನಾಯ್ಕ, 4). ಭಾರ್ಗವ ಗಣಪತಿ ನಾಯ್ಕ ಇವರೊಂದಿಗೆ ಮಾರುತಿ ಓಮಿನಿ ವಾಹನ ನಂ: ಕೆ.ಎ-31/ಎನ್-2788 ನೇದರ ರಿಪೇರಿಗೆ ಅಂತಾ ಕುಮಟಾಕ್ಕೆ ಬಂದು ಸಾಯಂಕಾಲ ಗಾಳ ಹಾಕಿ ಮೀನು ಹಿಡಿಯಲು ಸದರ ಓಮಿನಿ ವಾಹನದ ಮೇಲಾಗಿ ಕುಮಟಾ ತಾಲೂಕಿನ ಮೊಸಳೆಸಾಲ ಗ್ರಾಮಕ್ಕೆ ಬಂದು, ಮೊಸಳೆಸಾಲ ಹತ್ತಿರ ಹರಿದಿರುವ ಅಘನಾಶಿನಿ ನದಿಯ ಹಿನ್ನೀರಿನಲ್ಲಿ ಗಾಳ ಹಾಕಿ ಮೀನು ಹಿಡಿಯುತ್ತಿದ್ದಾಗ, ರಾತ್ರಿ 20-15 ಗಂಟೆಯ ಸುಮಾರಿಗೆ ನಮೂದಿತ ಆರೋಪಿತರು ಗುಂಪು ಕಟ್ಟಿಕೊಂಡು ಬಂದು, ಪಿರ್ಯಾದಿಯವರನ್ನು ಹಾಗೂ ಅವರ ಸ್ನೇಹಿತರನ್ನು ಉದ್ದೇಶಿಸಿ ‘ಬೋಳಿ ಮಕ್ಕಳಾ, ಸೂಳೆ ಮಕ್ಕಳಾ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ‘ನೀವು ಯಾವ ಊರಿನವರು? ಇಲ್ಲಿಗೆ ಯಾಕೆ ಬಂದಿರಾ? ಇಲ್ಲಿ ಮೀನು ಹಿಡಿಯಲು ನಿಮಗೆ ಯಾರು ಹೇಳಿದರು?’ ಅಂತಾ ಹೇಳಿ ಆರೋಪಿತರೆಲ್ಲಾ ಸೇರಿ ಪಿರ್ಯಾದಿಗೆ ಹಾಗೂ ತನ್ನ ಸ್ನೇಹಿತರಾದ ನಾಲ್ಕು ಜನರಿಗೆ ಕೈಯಿಂದ ಹೊಡೆದು, ಅಲ್ಲದೇ ಅವರಲ್ಲಿದ್ದ ಇಬ್ಬರು ಅಲ್ಲಿಯೇ ಬಿದ್ದಿದ್ದ ತೆಂಗಿನ ಸೊಟ್ಟೆಯಿಂದ ಅರ್ಷದ್ ಮತ್ತು ಭಾರ್ಗವ್ ಈತನಿಗೆ ಮೈಮೇಲೆ ಹೊಡೆದು ಹಲ್ಲೆ ಮಾಡಿದ್ದು, ಅವರಿಂದ ತಪ್ಪಿಸಿಕೊಂಡು ಮಾರುತಿ ಓಮಿನಿ ವಾಹನದ ಮೇಲಾಗಿ ಹೋಗುತ್ತಿದ್ದಾಗ ಓಮಿನಿ ವಾಹನವನ್ನು ಅಡ್ಡಗಟ್ಟಿ ತಡೆದು, ‘ಇನ್ನೊಂದು ಸಾರಿ ಈ ಕಡೆ ಬಂದರೆ ನಿಮ್ಮನ್ನು ಕೊಂದು ಹಾಕಿ ಅಲ್ಲದೇ ಓಮಿನಿಯನ್ನು ಸಹ ಹೊಳೆಗೆ ದೂಡಿ ಹಾಕಿ ನಾಪತ್ತೆ ಮಾಡುತ್ತೇವೆ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ತಿಮ್ಮ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ರೇವಣಕಟ್ಟೆ ಪಿ.ಎಚ್.ಸಿ ಯಲ್ಲಿ ಡಿ ದರ್ಜೆಯ ನೌಕರ, ಸಾ|| ಹೆಗ್ಗರಣೆ, ತಾ: ಸಿದ್ದಾಪುರ ರವರು ದಿನಾಂಕ: 12-12-2021 ರಂದು 00-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹೊನ್ನಾವರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 339/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಕೃಷ್ಣ ತಂದೆ ವೆಂಕಟೇಶ ಮೇಸ್ತ, ಪ್ರಾಯ-50 ವರ್ಷ. ವೃತ್ತಿ-ಆಟೋ ರಿಕ್ಷಾ ಚಾಲಕ, ಸಾ|| ಜೋಡುಕಟ್ಟೆ ಹತ್ತಿರ, ಕೆಳಗಿನಪಾಳ್ಯ, ತಾ: ಹೊನ್ನಾವರ (ಆಟೋ ರಿಕ್ಷಾ ನಂ: ಕೆ.ಎ-47/9708 ನೇದರ ಚಾಲಕ). ಈತನು ದಿನಾಂಕ: 11-12-2021 ರಂದು 20-00 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಹೊನ್ನಾವರ ಶಹರದ ಹೈವೇ ಸರ್ಕಲ್ ದಲ್ಲಿ ತನ್ನ ಬಾಬ್ತು ಆಟೋ ರಿಕ್ಷಾ ನಂ: ಕೆ.ಎ-47/9708 ನೇದನ್ನು ಗೇರುಸೊಪ್ಪ ಸರ್ಕಲ್ ಕಡೆಯಿಂದ ಶರಾವತಿ ಸರ್ಕಲ್ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬಜಾರ್ ರಸ್ತೆಯ ಕಡೆಯಿಂದ ಚರ್ಚ್ ರೋಡ್ ಕಡೆಗೆ ಹೋಗಲೆಂದು ನಡೆದುಕೊಂಡು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯನ್ನು ದಾಟುತ್ತಿದ್ದ ಗಾಯಾಳು ಶ್ರೀಮತಿ ಪದ್ಮಾವತಿ ಕೋಂ. ವೆಂಕಟೇಶ ತಾಂಡೇಲ್, ಪ್ರಾಯ-45 ವರ್ಷ, ವೃತ್ತಿ-ಪಿಗ್ಮಿ ಕಲೆಕ್ಟರ್, ಸಾ|| ಚರ್ಚ್ ರೋಡ್, ತಾ: ಹೊನ್ನಾವರ ಇವಳಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ತಲೆಗೆ ಹಾಗೂ ಮೈಮೇಲೆ ಅಲ್ಲಲ್ಲಿ ಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಕಿರಣ ತಂದೆ ಜನಾರ್ದನ ಮೇಸ್ತ, ಪ್ರಾಯ-43 ವರ್ಷ, ವೃತ್ತಿ-ಆಟೋ ರಿಕ್ಷಾ ಚಾಲಕ, ಸಾ|| ಕೆಳಗಿನಪಾಳ್ಯ, ತಾ: ಹೊನ್ನಾವರ ರವರು ದಿನಾಂಕ: 12-12-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 152/2021, ಕಲಂ: 279, 337, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಬಾಲಪ್ಪ ತಂದೆ ಗ್ಯಾನಪ್ಪ ಬಂಟರ್, ಸಾ|| ಕಾರವಾರ (ಆಂಬ್ಯುಲೆನ್ಸ್ ವಾಹನ ನಂ: ಕೆ.ಎ-30/ಎ-2840 ನೇದರ ಚಾಲಕ). ಈತನು ದಿನಾಂಕ: 12-12-2021 ರಂದು 17-00 ಗಂಟೆಯ ಸಮಯಕ್ಕೆ ತಾನು ಭಟ್ಕಳ ಕಡೆಯಿಂದ ಕುಂದಾಪುರ ಕಡೆಗೆ ಚಲಾಯಿಸಿಕೊಂಡು ಬಂದ ಆಂಬ್ಯುಲೆನ್ಸ್ ವಾಹನ ನಂ: ಕೆ.ಎ-30/ಎ-2840 ನೇದನ್ನು ಸೋಡಿಗದ್ದೆ ದೇವಸ್ಥಾನದ ಕ್ರಾಸ್ ಹತ್ತಿರ ಇರುವ ರಸ್ತೆಯ ಡಿವೈಡರ್ ನಲ್ಲಿ ಒಮ್ಮೇಲೆ ಬಲಕ್ಕೆ ತೆಗೆದುಕೊಂಡಿದ್ದರಿಂದ ನಿಯಂತ್ರಣ ತಪ್ಪಿ ರಸ್ತೆಯ ಮಧ್ಯ ಡಿವ್ಶೆಡರ್ ನಲ್ಲಿ ರಸ್ತೆ ದಾಟಲು ನಿಂತ ಮೋಟಾರ್ ಸೈಕಲ್ ನಂ: ಕೆ.ಎ-47/ವಿ-2175 ನೇದಕ್ಕೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಹಿಂಬದಿ ಕುಳಿತ ಪಿರ್ಯಾದಿಯ ತಲೆಗೆ, ಹಣೆಗೆ, ಮುಖಕ್ಕೆ ಹಾಗೂ ಕೈಕಾಲುಗಳಿಗೆ ತೆರಚಿದ ಗಾಯ ಪಡಿಸಿ, ಮೋಟಾರ್ ಸೈಕಲ್ ಸವಾರನಾದ ಮೃತ ಶ್ರೀ ರಮೇಶ ತಂದೆ ಜೋಗಿ ಗೊಂಡ, ಪ್ರಾಯ-41 ವರ್ಷ, ವೃತ್ತಿ-ಸಿಂಗಾರ ವ್ಯಾಪಾರ, ಸಾ|| ಬೆಸೆ, ಕೋಣಾರ, ತಾ: ಭಟ್ಕಳ ಈತನ ತಲೆಗೆ ಹಾಗೂ ಮುಖಕ್ಕೆ ಗಾಯವಾಗಿ ಹೆಚ್ಚಿನ ಉಪಚಾರಕ್ಕೆ ಉಡುಪಿಗೆ ಕರೆದುಕೊಂಡು ಹೋಗುತ್ತಿರುವಾಗ ಬ್ರಹ್ಮಾವರ ಸರ್ಕಲ್ ದಲ್ಲಿ 19-30 ಗಂಟೆಗೆ ಆಂಬ್ಯುಲೆನ್ಸ್ ವಾಹನದಲ್ಲೇ ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ನಾಗಪ್ಪ ತಂದೆ ನಾರಾಯಣ ನಾಯ್ಕ, ಪ್ರಾಯ-51 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಬೆಸೆ, ಕೋಣಾರ, ತಾ: ಭಟ್ಕಳ ರವರು ದಿನಾಂಕ: 12-12-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಬನವಾಸಿ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 122/2021, ಕಲಂ: 279, 338, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಕೃಷ್ಣ ತಂದೆ ಲಕ್ಷ್ಮಪ್ಪ ಮಂಡಿಗೊಡ್ಲಿ, ಸಾ|| ಯಲ್ಲಾಪುರ (ಸ್ಕೂಟಿ ನಂ: ಕೆ.ಎ-31/ವಾಯ್-9755 ನೇದರ ಸವಾರ). ಈತನು ದಿನಾಂಕ: 12-12-2021 ರಂದು 17-15 ಗಂಟೆಯ ಸುಮಾರಿಗೆ ತನ್ನ ಸ್ಕೂಟಿ ನಂ: ಕೆ.ಎ-31/ವಾಯ್-9755 ನೇದನ್ನು ಶಿರಸಿ ಕಡೆಯಿಂದ ದಾಸನಕೊಪ್ಪಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂತೆಯಿಂದ ಚಲಾಯಿಸಿಕೊಂಡು ಬಂದು, ಬೋರನಗುಡ್ಡಾ ಶ್ರೀ ಭೂತೇಶ್ವರ ದೇವಸ್ಥಾನದ ಬಳಿ ತಿರುವಿನ ರಸ್ತೆಯಲ್ಲಿ ವೇಗದ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಗಾಯಾಳು ಶ್ರೀಮತಿ ಪಾರ್ವತಿ ಯಲಪ್ಪ ವಡ್ಡರ, ಪ್ರಾಯ-60 ವರ್ಷ, ಸಾ|| ಬುಗಡಿಕೊಪ್ಪ ಗ್ರಾಮ, ಬೆಣಗಿ, ಪೋ: ಮಳಲಗಾಂವ, ತಾ: ಶಿರಸಿ ಇವಳಿಗೆ ಡಿಕ್ಕಿ ಹೊಡೆದು ರಸ್ತೆ ಅಪಘಾತ ಪಡಿಸಿ, ಬಲಗಾಲಿಗೆ ಗಂಭೀರ ಸ್ವರೂಪದ ರಕ್ತ ಗಾಯ ಪಡಿಸಿ, ಸ್ಥಳದಿಂದ ಸ್ವಲ್ಪ ಮುಂದಿನ ಬೋರನಗುಡ್ಡಾ ಬ್ರಿಡ್ಜ್ ಕಟ್ಟೆಗೆ ಹೊಡೆದು, ತಲೆಯು ಬ್ರಿಡ್ಜ್ ಕಟ್ಟೆಗೆ ತಾಗಿ ಮಾರಣಾಂತಿಕ ರಕ್ತದ ಗಾಯನೋವು ಪಡಿಸಿಕೊಂಡು, ಮೇಲಿನಿಂದ ನೀರಿನಲ್ಲಿ ಬಿದ್ದು ತನ್ನ ಸಾವಿಗೆ ತಾನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಶಿವಾನಂದ ತಂದೆ ಯಲಪ್ಪ ವಡ್ಡರ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬುಗಡಿಕೊಪ್ಪ ಗ್ರಾಮ, ಬೆಣಗಿ, ಪೋ: ಮಳಲಗಾಂವ, ತಾ: ಶಿರಸಿ ರವರು ದಿನಾಂಕ: 12-12-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ರಾಮನಗರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 88/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಲಕ್ಷಪ್ಪ ತಂದೆ ಯಲ್ಲಪ್ಪ ತಳವಾರ ಪ್ರಾಯ-50 ವರ್ಷ, ವೃತ್ತಿ-ಶಿಕ್ಷಕ, ಸಾ|| ಸಾಯಿ ಗಲ್ಲಿ, ರಾಮನಗರ, ತಾ: ಜೋಯಿಡಾ (ಮೋಟಾರ್ ಸೈಕಲ್ ನಂ: ಕೆ.ಎ-24/ಯು-3345 ನೇದರ ಸವಾರ). ಪಿರ್ಯಾದಿಯವರು ಸಮನ್ಸ್ ಜಾರಿ ಕುರಿತು ರಾಮನಗರಕ್ಕೆ ಬರುತ್ತಿರುವಾಗ ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-4ಎ ದಲ್ಲಿ ದಿನಾಂಕ: 11-12-2021 ರಂದು 14-40 ಗಂಟೆಯ ಸುಮಾರಿಗೆ ರಾಮನಗರದ ರಾಜ ಪ್ಯಾಲೇಸ್ ಹೋಟೆಲ್ ಹತ್ತಿರ ಊಟಕ್ಕೆ ಹೋಗಲು ಕಾರಿನ ಇಂಡಿಕೇಟರ್ ಹಾಕಿಕೊಂಡು ನಿಂತಾಗ ಎದುರುಗಡೆಯಿಂದ ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-24/ಯು-3345 ನೇದರ ಸವಾರನಾದ ನಮೂದಿತ ಆರೋಪಿತನು ತನ್ನ ಎದುರುಗಡೆ ಬರುತ್ತಿದ್ದ ಸ್ಕೂಟಿಯನ್ನು ಓವರಟೇಕ್ ಮಾಡಿಕೊಂಡು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನೇ ನಿಲ್ಲಿಸಿದ್ದ ಪಿರ್ಯಾದಿಯವರ ಕಾರ್ ನಂ: ಕೆ.ಎ-49/ಎಮ್-7404 ನೇದಕ್ಕೆ ಡಿಕ್ಕಿ ಹೊಡೆದು ಮೋಟಾರ್ ಸೈಕಲ್ ಸಮೇತ ಡಾಂಬರ್ ರಸ್ತೆಯ ಮೇಲೆ ಬಿದ್ದು ತನ್ನ ಎಡಭುಜದಲ್ಲಿ ಫ್ರ್ಯಾಕ್ಚರ್, ತನ್ನ ಮುಖದ ಎಡಭಾಗದಲ್ಲಿ ತೆರಚಿದ ನಮೂನೆಯ ರಕ್ತಗಾಯ ಮಾಡಿಕೊಂಡು ಪಿರ್ಯಾದಿಯವರ ಕಾರಿನ ಎಡಭಾಗದ ಮಿರರ್ ಡ್ಯಾಮೇಜ್, ಎಡಬದಿಯ ಡೋರ್ ಡ್ಯಾಮೇಜ್ ವಲ್ಲ್ದ ಬಗ್ಗೆ ಪಿರ್ಯಾದಿ ಶ್ರೀ ವಿವೇಕಾನಂದ ತಂದೆ ಬನಪ್ಪ ವಡೇರ, ಪ್ರಾಯ-32 ವರ್ಷ, ವೃತ್ತಿ-ಪೊಲೀಸ್ ಕಾನ್ಸಟೇಬಲ್, ಸಾ|| ವಡೇರಹಟ್ಟಿ, ತಾ: ಮುಡಲಗಿ, ಜಿ: ಬೆಳಗಾವಿ, ಹಾಲಿ ಸಾ|| ಖಾನಾಪುರ ಪೊಲೀಸ್ ಠಾಣೆ ರವರು ದಿನಾಂಕ: 12-12-2021 ರಂದು 11-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 12-12-2021
at 00:00 hrs to 24:00 hrs
ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ....
======||||||||======