ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 12-01-2022

at 00:00 hrs to 24:00 hrs

 

ಸಂಚಾರ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 02/2022, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವೆಂಕಟೇಶ ತಂದೆ ಪುಂಡಲೀಕ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಚಾಲಕ, ಸಾ|| ಹಟ್ಟಿಕೇರಿ, ಆವರ್ಸಾ, ತಾ: ಅಂಕೋಲಾ (ಟಿಪ್ಪರ್ ಲಾರಿ ನಂ: ಕೆ.ಎ-19/ಎ.ಸಿ-3408 ನೇದರ ಚಾಲಕ). ದಿನಾಂಕ: 12-01-2022 ರಂದು ಬೆಳಗ್ಗೆ 08-30 ಗಂಟೆಯ ಅವಧಿಯಲ್ಲಿ ಪಿರ್ಯಾದಿಯ ಚಿಕ್ಕಮ್ಮನ ಮಕ್ಕಳಾದ ಸಾಯಿಪ್ರಸಾದ ತಂದೆ ರಾಜೇಶ ನಾಯಕ, ಇವರ ಮೋಟಾರ್ ಸೈಕಲ್ ನಂ: ಕೆ.ಎ-30/ಡಬ್ಲ್ಯೂ-6060 ನೇದರ ಹಿಂದಿನ ಸೀಟಿನಲ್ಲಿ ತನ್ನ ತಮ್ಮನಾದ ಸಾಯಿಪ್ರೇಮ್ ತಂದೆ ರಾಜೇಶ ನಾಯಕ, ಈತನನ್ನು ಕೂರಿಸಿಕೊಂಡು ಪಣಜಿ-ಮಂಗಳೂರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮುಖಾಂತರ ಅಂಕೋಲಾ ಕಡೆಯಿಂದ ಕಾರವಾರ ಕಡೆಗೆ ಮೋಟಾರ್ ಸೈಕಲ್ ಮೇಲೆ ಬರುತ್ತಿರುವಾಗ ಬಿಣಗಾದ ಮಿರ್ಚಿ ಹೋಟೆಲ್ ಎದುಗಡೆ ಇರುವ ಐ.ಆರ್.ಬಿ ಕಂಪನಿಯ ಸೈಟ್ ಕಡೆಯಿಂದ ಟಿಪ್ಪರ್ ಲಾರಿ ನಂ: ಕೆ.ಎ-19/ಎ.ಸಿ-3408 ನೇದರ ಆರೋಪಿ ಚಾಲಕನು ತನ್ನ ಲಾರಿಯನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಒಮ್ಮೇಲೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಸ್ತೆಯಲ್ಲಿ ಅಡ್ಡ ಚಲಾಯಿಸಿ, ತನ್ನ ಲಾರಿಯ ಬಲಭಾಗದಿಂದ ಪಿರ್ಯಾದಿಯ ಚಿಕ್ಕಮ್ಮನ ಮಗ ಚಲಾಯಿಸಿಕೊಂಡು ಬರುತ್ತಿದ್ದ ಮೋಟಾರ್ ಸೈಕಲಿನ ಮುಂದಿನ ಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯ ಚಿಕ್ಕಮ್ಮನ ಮಕ್ಕಳಾದ 1). ಸಾಯಿಪ್ರಸಾದ ತಂದೆ ರಾಜೇಶ ನಾಯಕ, ಈತನಿಗೆ ಬಲಗೈ ಮೊಣಕೈ ಕೆಳಗೆ ಮೂಳೆ ಮುರಿತವಾಗಿ ಭಾರೀ ಗಾಯ, ಬಲಬದಿಯ ಸೊಂಟದ ಕೆಳಗೆ ತೊಡೆಯ ಭಾಗದಲ್ಲಿ ಮೂಳೆ ಮುರಿತವಾಗಿ ಭಾರೀ ಗಾಯ, ಬಲಗಾಲಿನ ಮಂಡಿಯ ಮೇಲೆ ರಕ್ತಗಾಯ ಹಾಗೂ ಒಳನೋವು, ಕುತ್ತಿಗೆಯ ಕೆಳಗೆ ಗಾಯ ಹಾಗೂ ಒಳನೋವು ಪಡಿಸಿ, ಮೋಟಾರ್ ಸೈಕಲಿನ ಹಿಂದಿನ ಸೀಟಿನಲ್ಲಿ ಕುಳಿತ ಸಾಯಿಪ್ರೇಮ್ ತಂದೆ ರಾಜೇಶ ನಾಯಕ, ಈತನಿಗೆ ತಲೆಯ ಮೇಲೆ ರಕ್ತಗಾಯ ಹಾಗೂ ಒಳನೋವು, ತಲೆಯ ಎಡಭಾಗದಲ್ಲಿ ರಕ್ತಗಾಯ ಹಾಗೂ ಒಳನೋವು, ಬಲಗಾಲಿನ ಮಂಡಿಯ ಕೆಳಗೆ ಒಳನೋವು ಹಾಗೂ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ನೀರಜ್ ತಂದೆ ಕೇಶವ ನಾಯ್ಕ, ಪ್ರಾಯ-37 ವರ್ಷ, ವೃತ್ತಿ-ಖಾಸಗೀ ಕೆಲಸ, ಸಾ|| ಕಾಜುಭಾಗ, ಕಾರವಾರ ರವರು ದಿನಾಂಕ: 12-01-2022 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 04/2022, ಕಲಂ: 279, 338, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹಮ್ಮದ್ ಶರೀಫ್, ಪ್ರಾಯ-42 ವರ್ಷ, ಸಾ|| ಕಾಸರಕೋಡ, ಕೇರಳಾ (ಕಾರ್ ನಂ: ಕೆ.ಎಲ್-14/ಎ.ಎ-4916 ನೇದರ ಚಾಲಕ). ಈತನು ದಿನಾಂಕ: 12-01-2022 ರಂದು ಬೆಳಿಗ್ಗೆ 05-20 ಗಂಟೆಯ ಸುಮಾರಿಗೆ ಅಂಕೋಲಾ ಶಹರದ ಹುಲಿದೇವರವಾಡ ಕ್ರಾಸ್ ದಿಂದ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಡಾಂಬರ್ ರಸ್ತೆಯಲ್ಲಿ ತನ್ನ ಕಾರ್ ನಂ: ಕೆ.ಎಲ್-14/ಎ.ಎ-4916 ನೇದನ್ನು ಕುಮಟಾ ಕಡೆಯಿಂದ ಕಾರವಾರ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನು, ತನ್ನ ಬಲಬದಿಯಿಂದ ಹೋಗಲು ರಸ್ತೆ ಖುಲ್ಲಾ ಇದ್ದರೂ ಸಹ ಮುಂದಿನಿಂದ ತನ್ನ ಸೈಡಿನಿಂದ ಹೋಗುತ್ತಿದ್ದ ಲಾರಿ ನಂ: ಕೆ.ಎ-01/ಎ.ಕೆ-4393 ನೇದಕ್ಕೆ ಹಿಂದಿನಿಂದ ಡಿಕ್ಕಿ ಅಪಘಾತ ಪಡಿಸಿ, ಆರೋಪಿ ಕಾರ್ ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತ ಅಬುಬಕ್ಕರ್ @ ಅನ್ಸಾರ್ ತಂದೆ ಅಬ್ದುಲ್ ರೆಹಮಾನ್, ಪ್ರಾಯ-32 ವರ್ಷ, ಸಾ|| ಪಾವೂರ, ಮಂಜೇಶ್ವರ, ಕಾಸರೋಡ, ಕೇರಳಾ ಈತನಿಗೆ ಹಣೆಗೆ, ಬಲಭಾಗದ ಮುಖಕ್ಕೆ ಹಾಗೂ ತಲೆಗೆ ಭಾರೀ ಗಾಯನೋವಾಗಿ ಸ್ಥಳದಲ್ಲಿಯೇ ಮರಣವನ್ನುಂಟು ಮಾಡಿದ್ದಲ್ಲದೇ, ಕಾರಿನ ಹಿಂದಿನ ಸೀಟಿನಲ್ಲಿ ಕುಳಿತ ಮಹಮ್ಮದ್ ಇಸಾಕ್ ತಂದೆ ಅಬ್ದುಲ್ ಖಾದರ್, ಪ್ರಾಯ-24 ವರ್ಷ, ಸಾ|| ಕಾಸರಕೋಡ, ಕೇರಳಾ ಇವನಿಗೆ ಎಡಬದಿಯ ಭುಜಕ್ಕೆ ಭಾರೀ ಒಳ ದುಃಖಾಪತ್ ಪಡಿಸಿ, ಆರೋಪಿ ಕಾರ್ ಚಾಲಕನು ತನಗೂ ಸಹ ತಲೆಗೆ, ಕುತ್ತಿಗೆಗೆ ಭಾರೀ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮಂಜರ್ ಹುಸೇನ್ ತಂದೆ ಮಹಮ್ಮದ್ ಯಾಸೀನ್ ಸೈಯದ್, ಪ್ರಾಯ-58 ವರ್ಷ, ವೃತ್ತಿ-ಇಂಜಿನಿಯರ್, ಸಾ|| ಅಜ್ಜಿಕಟ್ಟಾ, ತಾ: ಅಂಕೋಲಾ ರವರು ದಿನಾಂಕ: 12-01-2022 ರಂದು 08-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 14/2022, ಕಲಂ: 78(A)(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಂಜುನಾಥ ತಂದೆ ಬಡಚಾ ಗೌಡ, ಪ್ರಾಯ-60 ವರ್ಷ, ವೃತ್ತಿ-ಹೋಟೆಲ್ ವ್ಯಾಪಾರ, ಸಾ|| ಗದ್ದೆಮನೆ, ಮಾವಿನಕುರ್ವಾ, ತಾ: ಹೊನ್ನಾವರ, 2]. ಗಣಪತಿ ನಾರಾಯಣ ಗೌಡ, ಸಾ|| ಹೊಂಡದಗದ್ದೆ, ಮಾವಿನಕುರ್ವಾ, ತಾ: ಹೊನ್ನಾವರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 12-01-2022 ರಂದು 11-30 ಗಂಟೆಗೆ ಹೊನ್ನಾವರ ತಾಲೂಕಿನ ಹೊಸಾಡ ಗ್ರಾಮದ ಬ್ರಿಡ್ಜ್ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಸಾರ್ವಜನಿಕರಿಂದ ಹಣವನ್ನು ಪಡೆದು ಓ.ಸಿ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವನ್ನಾಗಿ ಕಟ್ಟಿಸಿಕೊಂಡು, ಓ.ಸಿ ಮಟಕಾ ಜುಗಾರಾಟ ಆಡಿಸುತ್ತಿದ್ದಾಗ ದಾಳಿಯ ವೇಳೆ ಆರೋಪಿ 1 ನೇಯವನ ತಾಬಾದಲ್ಲಿ 1). ಒಟ್ಟು ನಗದು ಹಣ 2,000/- ರೂಪಾಯಿ, 2). ಬಾಲ್ ಪೆನ್-01, 3). ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-01, ಇವುಗಳೊಂದಿಗೆ ಸಿಕ್ಕಿದ್ದು, ಸದರಿ ಆರೋಪಿ 1 ನೇಯವನು ಒಟ್ಟಾದ ಹಣವನ್ನು ಹಾಗೂ ಓ.ಸಿ ಚೀಟಿಯನ್ನು ಓ.ಸಿ ಬುಕ್ಕಿಯಾದ ಆರೋಪಿ 2 ನೇಯವನಿಗೆ ನೀಡುತ್ತಿದ್ದ ಕುರಿತು ತಿಳಿಸಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತೇಶ ಉದಯ ನಾಯಕ. ಪಿ.ಎಸ್.ಐ (ಕಾ.ಸು & ಸಂಚಾರ), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 12-01-2022 ರಂದು 12-55 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 15/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸುನೀಲ ತಂದೆ ಮಾಬ್ಲೇಶ್ವರ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಚಾಲಕ, ಸಾ|| ದೇವಸ್ಥಾನಕೇರಿ, ಕುದ್ರಗಿ, ತಾ: ಹೊನ್ನಾವರ (ಆಟೋ ರಿಕ್ಷಾ ನಂ: ಕೆ.ಎ-47/ಎ-1057 ನೇದರ ಚಾಲಕ). ಈತನು ದಿನಾಂಕ: 11-01-2022 ರಂದು ಬೆಳಿಗ್ಗೆ 08-30 ಗಂಟೆಗೆ ಹೊನ್ನಾವರ ತಾಲೂಕಿನ ಕುದ್ರಗಿಯ ಕಾಯಿಹಿತ್ತಲಕೇರಿಯ ಮಾವಿನಹೊಳೆ ತಾರಿ ಹತ್ತಿರ ಕುದ್ರಗಿ ತೂಗು ಸೇತುವೆಯ ಕಡೆಗೆ ಮುಖ ಮಾಡಿ ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿದ್ದ ತನ್ನ ಆಟೋ ರಿಕ್ಷಾ ನಂ: ಕೆ.ಎ-47/ಎ-1057 ನೇದನ್ನು ಒಂದೇ ಸಮನೆ ಯಾವುದೇ ಸೂಚನೆಯನ್ನು ನೀಡದೇ, ನಿಷ್ಕಾಳಜಿತನದಿಂದ ಅತೀವೇಗವಾಗಿ ರಸ್ತೆಯ ಬಲಕ್ಕೆ ಚಲಾಯಿಸಿ, ಆಟೋರಿಕ್ಷಾದ ಹಿಂದಿನಿಂದ ಅಂದರೆ ನಗರಬಸ್ತಿಕೇರಿ ಕಡೆಯಿಂದ ಸಂಶಿ ಕಡೆಗೆ ರಾಜೇಶ ತಂದೆ ಮಾಬ್ಲೇಶ್ವರ ನಾಯ್ಕ, ಪ್ರಾಯ-26 ವರ್ಷ, ವೃತ್ತಿ-ಮೆಕ್ಯಾನಿಕ್, ಸಾ|| ಸಾರಸ್ವತಕೇರಿ, ಮಂಕಿ, ತಾ: ಹೊನ್ನಾವರ ಈತನು ಮೋಟಾರ್ ಸೈಕಲ್ ನಂ: ಕೆ.ಎ-47/ಎಸ್-2378 ನೇದರ ಹಿಂದೆ ಕಾರ್ತಿಕ ತಂದೆ ಅರುಣ ನಾಯ್ಕ, ಪ್ರಾಯ-19 ವರ್ಷ, ವೃತ್ತಿ-ವಿದ್ಯಾರ್ಥಿ ಮತ್ತು ಕುಮಾರಿ: ಕೃತಿಕಾ ತಂದೆ ಅರುಣ ನಾಯ್ಕ, ಪ್ರಾಯ-17 ವರ್ಷ, ವೃತ್ತಿ-ವಿದ್ಯಾರ್ಥಿನಿ, ಸಾ|| (ಇಬ್ಬರೂ) ಕುಂಬಾರಕೇರಿ, ಕುದ್ರಗಿ, ತಾ: ಹೊನ್ನಾವರ ಇವರನ್ನು ಕೂರಿಸಿಕೊಂಡು ಬರುತ್ತಿದ್ದ ಮೋಟಾರ್ ಸೈಕಲಿಗೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಕಾರ್ತಿಕನಿಗೆ ಬಲಗಾಲಿಗೆ ಮತ್ತು ಮುಖದ ಬಲಬದಿಗೆ ತೆರಚಿದ ಗಾಯನೋವು, ಕೃತಿಕಾಳಿಗೆ ಬಲಬದಿ ಪಕ್ಕೆಲುಬಿಗೆ ಒಳನೋವು ಮತ್ತು ಮೈಮೇಲೆ ಅಲ್ಲಲ್ಲಿ ತೆರಚಿದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಬಾಬು ತಂದೆ ಶೇಷಗಿರಿ ನಾಯ್ಕ, ಪ್ರಾಯ-55 ವರ್ಷ, ವೃತ್ತಿ-ಚಾಲಕ, ಸಾ|| ಆಚಾರಿಹಿತ್ತಲ, ಅಳ್ಳಂಕಿ, ತಾ: ಹೊನ್ನಾವರ ರವರು ದಿನಾಂಕ: 12-01-2022 ರಂದು 14-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 16/2022, ಕಲಂ: 323, 324, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಾಸ್ತಿ ತಂದೆ ನಾಗು ಮುಕ್ರಿ, ಪ್ರಾಯ-65 ವರ್ಷ, 2]. ಯಮುನಾ ತಂದೆ ಮಾಸ್ತಿ ಮುಕ್ರಿ, ಪ್ರಾಯ-35 ವರ್ಷ, ವೃತ್ತಿ-ಗೃಹಿಣಿ, ಸಾ|| (ಇಬ್ಬರೂ) ನಡುಚಿಟ್ಟೆ, ಕರ್ಕಿ, ತಾ: ಹೊನ್ನಾವರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 11-01-2022 ರಂದು ಮಧ್ಯಾಹ್ನ 01-00 ಗಂಟೆಯ ಸುಮಾರಿಗೆ ಕರ್ಕಿ ನಡುಚಿಟ್ಟೆಯಲ್ಲಿ ತನ್ನ ಮನೆಯ ಕೆಲಸಕ್ಕೆ ಬಂದಿದ್ದ ಆಳುಗಳು ಲೈಟ್ ಕಂಬವನ್ನು ಪಿರ್ಯಾದಿಯವರ ಬೋರವೆಲ್ ಗೆ ತಾಗಿಸಿದ್ದು, ಆಗ ಪಿರ್ಯಾದಿಯು ‘ನಿಧಾನವಾಗಿ ಕೆಲಸ ಮಾಡಿ ಬೋರವೆಲ್ ಹಾಳಾಗುತ್ತದೆ’ ಅಂತಾ ತಿಳಿಸಿದ್ದನ್ನು ಕೇಳಿ, ಸಿಟ್ಟಾದ ಆರೋಪಿ 2 ನೇಯವಳು ಪಿರ್ಯಾದಿಯವರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈಯ್ದು ‘ಅದನ್ನು ಹೇಳುವುದಕ್ಕೆ ನೀನು ಯಾರು?’ ಅಂತಾ ಹೇಳಿ ತನ್ನ ಕೈಯಲ್ಲಿದ್ದ ಚಾಕುವಿನಿಂದ ಪಿರ್ಯಾದಿಯ ಭುಜಕ್ಕೆ ಚುಚ್ಚಿದ್ದು. ಆರೋಪಿ 1 ನೇಯವನು ಪಿರ್ಯಾದಿಯನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದು, ಇದನ್ನು ನೋಡಿ ತಡೆಯಲು ಬಂದ ಪಿರ್ಯಾದಿಯ ಅಣ್ಣನ ಮಗ ಹರೀಶ ತಂದೆ ಕಣಿಯಾ ಮುಕ್ರಿ, ಪ್ರಾಯ-16 ವರ್ಷ, ಈತನಿಗೆ ಆರೋಪಿ 1 ನೇಯವನು ಎದೆಗೆ ಒದ್ದಿದ್ದು ಇರುತ್ತದೆ. ನಂತರ ಆರೋಪಿತರಿಬ್ಬರೂ ಸೇರಿ ಪಿರ್ಯಾದಿ ಹಾಗೂ ಪಿರ್ಯಾದಿಯ ಅಣ್ಣನ ಮಗ ಹರೀಶನಿಗೆ ಕೈಯಿಂದ ಹೊಡೆದಿದ್ದು, ಇದನ್ನು ಪಿರ್ಯಾದಿಯ ಅಣ್ಣನ ಹೆಂಡತಿ ಪರಮೇಶ್ವರಿ ಇವರು ತಪ್ಪಿಸಿದಾಗ, ಆರೋಪಿ 1 ಮತ್ತು 2 ನೇಯವರು ಸೇರಿ ಪಿರ್ಯಾದಿ ಹಾಗೂ ಪಿರ್ಯಾದಿಯ ಅಣ್ಣನ ಮಗನನ್ನು ಉದ್ದೇಶಿಸಿ ‘ಬೋಳಿ ಮಕ್ಕಳಾ, ಇವತ್ತು ನೀವು ಉಳಿದುಕೊಂಡಿರಿ. ಇನ್ನೊಂದು ದಿನಾ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಕೊಲೆ ಮಾಡುತ್ತೇನೆ’ ಅಂತಾ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಕನ್ನೆ ತಂದೆ ನಾಗು ಮುಕ್ರಿ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನಡುಚಿಟ್ಟೆ, ಕರ್ಕಿ, ತಾ: ಹೊನ್ನಾವರ ರವರು ದಿನಾಂಕ: 12-01-2022 ರಂದು 15-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 07/2022, ಕಲಂ: 447, 323, 326, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ನೀಲಕಂಠ ತಂದೆ ಮಾದೇವ ಮಿರಾಶಿ, ಪ್ರಾಯ-50 ವರ್ಷ, ವೃತ್ತಿ-ರೈತಾಬಿ ಕೆಲಸ, 2]. ಶ್ರೀಮತಿ ದೀಪಾ ನೀಲಕಂಠ ಮಿರಾಶಿ, ಪ್ರಾಯ-42 ವರ್ಷ, ವೃತ್ತಿ-ಅಂಗನವಾಡಿ ಹೆಲ್ಪರ್ ಕೆಲಸ, ಸಾ|| (ಇಬ್ಬರೂ) ಅರಳಿಕೊಪ್ಪಾ, ಕನ್ನಡಗಲ್ ಗ್ರಾಮ, ತಾ: ಯಲ್ಲಾಪುರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ಪಿರ್ಯಾದಿಯ ಸೊದರ ಮಾವನಾಗಿದ್ದು, ಆರೋಪಿ 2 ನೇಯವಳು ಪಿರ್ಯಾದಿಯ ಅತ್ತೆಯವರಿದ್ದು, ಪಿರ್ಯಾದಿಯ ಊರು ಅರಳಿಕೊಪ್ಪಾ ಗ್ರಾಮದಲ್ಲಿ ಈ ಮೊದಲು ಆರೋಪಿತರ ಮನೆಯ ಸಮೀಪ ಇದ್ದ ಅಂಗನವಾಡಿ ಕೇಂದ್ರವನ್ನು ಊರಿನವರು ಪಿರ್ಯಾದಿಯ ಮನೆಯ ಹತ್ತಿರ ಸ್ಥಳಾಂತರಿಸಿದ್ದು, ಅದಕ್ಕೆಲ್ಲಾ ಪಿರ್ಯಾದಿಯ ತಮ್ಮ ಸಾಕ್ಷಿದಾರ ಕುಮಾರ ಈತನೇ ಕಾರಣ ಅಂತಾ ತಪ್ಪಾಗಿ ತಿಳಿದ ಆರೋಪಿತರಿಬ್ಬರೂ ಏಕೋದ್ದೇಶದಿಂದ ದಿನಾಂಕ: 11-01-2022 ರಂದು ಸಾಯಂಕಾಲ 4-00 ಗಂಟೆಗೆ ಅರಳಿಕೊಪ್ಪಾ ಗ್ರಾಮದಲ್ಲಿ ಇರುವ ಪಿರ್ಯಾದಿಯ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ, ಪಿರ್ಯಾದಿಯ ತಮ್ಮ ಸಾಕ್ಷಿದಾರ ಶ್ರೀ ಕುಮಾರ ಈತನಿಗೆ ಉದ್ದೇಶಿಸಿ ಮರಾಠಿ ಭಾಷೆಯಲ್ಲಿ ‘ರಾಂಡೇಚ್ಯಾ, ತುಜಿ ಕಿರಿಕಿರಿ ಲೈ ಜಾಲಿ, ತುಲಾ ಅಜಾ ದಾಖುತಾ’ ಅಂತಾ ಅವಾಚ್ಯ ಬೈಯ್ದು, ತನ್ನ ಕೈಯಲ್ಲಿರುವ ಕೊಡಲಿಯಿಂದ ಸಾಕ್ಷಿದಾರ ಕುಮಾರ ಈತನ ಎಡಗೈಗೆ ಬಲವಾಗಿ ಹೊಡೆದು ಕೈ ಮುರಿದು ಭಾರೀ ಗಾಯ ಪಡಿಸಿದ್ದಲ್ಲದೇ, ಆರೋಪಿ 2 ನೇಯವಳು ಸಾಕ್ಷಿದಾರ ಕುಮಾರ ಈತನ ಮೂುಗಿನ ಮೇಲೆ ಹಲ್ಲೆ ಮಾಡಿ ಸಾದಾ ಗಾಯನೋವು ಪಡಿಸಿ ‘ಅಜ ರಾವಲೇ ಅನಿ ಎಕೆ ದಿವಸ ಇವುನ ತುಕಾ ಸೊಡನಾ ಜೀವನ್ ಮಾರತಾ’ ಅಂತಾ ಕೊಲೆ ಮಾಡುವ ಬೆದರಿಕೆ ಹಾಕಿ, ಕೃತ್ಯಕ್ಕೆ ಬಳಸಿದ ಕೊಡಲಿಯನ್ನು ಅಲ್ಲೇ ಬಿಸಾಡಿ ಹೋದ ಬಗ್ಗೆ ಪಿರ್ಯಾದಿ ಶ್ರೀ ರಾಮಚಂದ್ರ ತಂದೆ ನಾರಾಯಣ ಮರಾಠಿ, ಪ್ರಾಯ-35 ವರ್ಷ, ವೃತ್ತಿ-ಕೆ.ಇ.ಬಿ ಗುತ್ತಿಗೆದಾರರು, ಸಾ|| ಅರಳಿಕೊಪ್ಪಾ, ಕನ್ನಡಗಲ್ ಗ್ರಾಮ, ತಾ: ಯಲ್ಲಾಪುರ, ಹಾಲಿ ಸಾ|| ಬೆಲ್ ರಸ್ತೆ, ತಾ: ಯಲ್ಲಾಪುರ ರವರು ದಿನಾಂಕ: 12-01-2022 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 08/2022, ಕಲಂ: 323, 324, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಸತೀಶ ತಂದೆ ಅನಂತ ಸಿದ್ದಿ, ಪ್ರಾಯ-29 ವರ್ಷ, ವೃತ್ತಿ-ಕೂಲಿ ಕೆಲಸ, 2]. ಪ್ರಕಾಶ ತಂದೆ ಅನಂತ ಸಿದ್ದಿ, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, 3]. ಸವಿತಾ ಕೋಂ. ಅನಂತ ಸಿದ್ದಿ, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| (ಎಲ್ಲರೂ) ಬಿಗಾರ, ತಾ: ಯಲ್ಲಾಪುರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ಮತ್ತು 2 ನೇಯವರು ಪಿರ್ಯಾದಿಯವರ ಅಣ್ಣನ ಮಕ್ಕಳಾಗಿದ್ದು ಹಾಗೂ ಆರೋಪಿ 3 ನೇಯವಳು ಪಿರ್ಯಾದಿಯವರ ಅಣ್ಣನ ಹೆಂಡತಿಯಾಗಿರುತ್ತಾಳೆ. ಈ ನಮೂದಿತ ಆರೋಪಿತರು ಪಿರ್ಯಾದಿಯವರೊಂದಿಗೆ ದ್ವೇಷದಿಂದ ಇದ್ದವರು, ದಿನಾಂಕ: 02-01-2022 ರಂದು 18-00 ಗಂಟೆಗೆ ಯಲ್ಲಾಪುರ ತಾಲೂಕಿನ ಬಿಗಾರ ಗ್ರಾಮದಲ್ಲಿ ಪಿರ್ಯಾದಿವರ ಮನೆಗೆ ಹೋಗುವ ದಾರಿಯಲ್ಲಿ ಪಿರ್ಯಾದಿಯವರು ಸಂಗ್ರಹಿಸಿಟ್ಟ ಕಟ್ಟಿಗೆಯನ್ನು ಆರೋಪಿ 1 ಮತ್ತು 3 ನೇಯವರು ತೆಗೆದುಕೊಂಡು ಹೋಗುತ್ತಿರುವಾಗ ನೋಡಿದ ಪಿರ್ಯಾದಿಯವರು ‘ಯಾಕೆ ತಾನು ಸಂಗ್ರಹಿಟ್ಟ ಕಟ್ಟಿಗೆಯನ್ನು ತೆಗೆದುಕೊಂಡು ಹೋಗುತ್ತೀರಾ?’ ಅಂತಾ ಕೇಳಿದ್ದಕ್ಕೆ ಆರೋಪಿ 1 ಮತ್ತು 3 ನೇಯವರು ಸಿಟ್ಟುಗೊಂಡು ಕಟ್ಟಿಗೆಯ ದೊಣ್ಣೆಯಿಂದ ಪಿರ್ಯಾದಿಯವರ ತಲೆಗೆ, ಭುಜಕ್ಕೆ, ಹೊಟ್ಟೆಗೆ, ಕಾಲಿಗೆ ಹೊಡೆದು ದುಃಖಾಪತ್ ಪಡಿಸಿದ್ದಲ್ಲದೇ, ಆರೋಪಿ 2 ನೇಯವನು ಹಿಂದಿನಿಂದ ಬಂದು ಕೈಯಿಂದ ಪಿರ್ಯಾದಿಯವರಿಗೆ ಹೊಡೆದು, ಕಾಲಿನಿಂದ ತುಳಿದು ‘ಜೀವ ಸಹಿತ ಬಿಡುವುದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸುಬ್ರಾಯ ತಂದೆ ಬಾರಕೆಲ ಸಿದ್ದಿ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಿಗಾರ ಗ್ರಾಮ, ತಾ: ಯಲ್ಲಾಪುರ  ರವರು ದಿನಾಂಕ: 12-01-2022 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 02/2022, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಆನಂದಸಿಂಗ್ ತಂದೆ ಲಕ್ಷ್ಮಣಸಿಂಗ್ ಠಾಕೂರ, ಪ್ರಾಯ-32 ವರ್ಷ, ವೃತ್ತಿ-ಹುಬ್ಬಳ್ಳಿಯ 104 ಆರೋಗ್ಯ ಸಹಾಯವಾಣಿಯಲ್ಲಿ ಸೂಪರವೈಸರ್ ಕೆಲಸ, ಸಾ|| ಮನೆ ನಂ: 200, 03 ನೇ ಕ್ರಾಸ್, ಶೀಲಾ ಕಾಲೋನಿ, ಮಂಟೂರ ರಸ್ತೆ, ಹುಬ್ಬಳ್ಳಿ. ಪಿರ್ಯಾದಿಯ ತಮ್ಮನಾದ ಈತನು ದಿನಾಂಕ: 12-01-2022 ರಂದು ಸಂಜೆ 05-00 ಗಂಟೆಗೆ ತನ್ನ ಗೆಳೆಯರೊಂದಿಗೆ ದಾಂಡೇಲಿಯ ಮೌಳಂಗಿ ಪಾರ್ಕ್ ಪಕ್ಕ ಹರಿಯುತ್ತಿರುವ ಕಾಳಿ ನದಿಯಲ್ಲಿ ಸ್ನಾನ ಮಾಡಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಸದ್ರಿ ಕಾಣೆಯಾದ ತನ್ನ ತಮ್ಮನನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪ್ರಶಾಂತಸಿಂಗ್ ತಂದೆ ಲಕ್ಷ್ಮಣಸಿಂಗ್ ಠಾಕೂರ, ಪ್ರಾಯ-37 ವರ್ಷ, ವೃತ್ತಿ-ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ, ಸಾ|| ಮನೆ ನಂ: 200, 03 ನೇ ಕ್ರಾಸ್, ಶೀಲಾ ಕಾಲೋನಿ, ಮಂಟೂರ ರಸ್ತೆ, ಹುಬ್ಬಳ್ಳಿ ರವರು ದಿನಾಂಕ: 12-01-2022 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 04/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಪ್ಪು ತಂದೆ ರಾವಯಳು ಗಾವಡೆ, ಪ್ರಾಯ-32 ವರ್ಷ, ಸಾ|| ವಿಟ್ನಾಳ, ತಾ: ದಾಂಡೇಲಿ (ಮೋಟಾರ್ ಸೈಕಲ್ ನಂ: ಕೆ.ಎ-31/ಎಸ್-4870 ನೇದರ ಚಾಲಕ). ಈತನು ದಿನಾಂಕ: 12-01-2022 ರಂದು 13-30 ಗಂಟೆಗೆ ದಾಂಡೇಲಿಯ ಬರ್ಚಿ ರಸ್ತೆಯ ಕ್ವಾನೆಂಟ್ ಶಾಲೆಯ ಹತ್ತಿರ ಹಾದು ಹೋದ ಡಾಂಬರ್ ರಸ್ತೆಯ ಮೇಲೆ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-31/ಎಸ್-4870 ನೇದನ್ನು ದಾಂಡೇಲಿ ಪಟ್ಟಣದ ಕಡೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಮೋಟಾರ್ ಸೈಕಲನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳದೇ ರಸ್ತೆಯ ತೀರಾ ಬಲಕ್ಕೆ ಬಂದು ಬರ್ಚಿ ಕಡೆಯಿಂದ ದಾಂಡೇಲಿ ಕಡೆಗೆ ರಸ್ತೆಯ ಎಡ ಸೈಡಿನಿಂಡ ಬರುತ್ತಿದ್ದ ಇನ್ನೂ ನೋಂದಣಿಯಾಗದ ಹೊಸ ಯಮಹಾ ಕಂಪನಿಯ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಯಮಹಾ ಕಂಪನಿಯ ಮೋಟಾರ್ ಸೈಕಲ್ ಸವಾರನಾದ ಪಿರ್ಯಾದಿಗೆ ಎಡಗಾಲಿಗೆ ಮತ್ತು ಹಿಂಬದಿಯ ಸವಾರನಾದ ಸಾಕ್ಷಿದಾರ ಹಸನ್ ತಂದೆ ಮುಗಟಸಾಬ್ ತಿಗ್ರೋಳ್ಳಿ, ಈತನಿಗೆ ಎಡಗಾಲಿಗೆ ತೆರಚಿದ ಮತ್ತು ಹೊಟ್ಟೆಗೆ ಒಳನೋವು ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೆ ತಾನೇ ಹಣೆಗೆ ಮತ್ತು ತಲೆಗೆ ಸಾದಾ ಸ್ವರೂಪದ ಗಾಯನೋವು ಪಡಿಸಿಕೊಂಡಿದ್ದಲ್ಲದೇ, ಎರಡು ವಾಹನಗಳನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸೊಹೇಲ್ ತಂದೆ ಖುತಬು ತಿಗ್ರೋಳ್ಳಿ, ಪ್ರಾಯ-19 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗಾಂವಠಾಣಾ, ತಾ: ದಾಂಡೇಲಿ ರವರು ದಿನಾಂಕ: 12-01-2022 ರಂದು 15-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 12-01-2022

at 00:00 hrs to 24:00 hrs

 

ಶಿರಸಿ ನಗರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 01/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಗಣಪತಿಸಿಂಗ್ ತಂದೆ ಲಕ್ಷ್ಮಣಸಿಂಗ್ ಕಾರ್ಪೆಂಟರ್, ಪ್ರಾಯ-35 ವರ್ಷ, ವೃತ್ತಿ-ಕಾರ್ಪೆಂಟರ್, ಸಾ|| ಕೊಪ್ಪರಸಿಕೊಪ್ಪಾ, ತಾ: ಹಾನಗಲ್, ಜಿ: ಹಾವೇರಿ. ಪಿರ್ಯಾದಿಯ ಸಹೋದರನಾದ ಈತನು ದಿನಾಂಕ: 08-01-2022 ರಂದು ಶಿರಸಿ ಶಹರದ ಶಿವಾಜಿ ಚೌಕ ಹತ್ತಿರ ವಿಪರೀತ ಸಾರಾಯಿ ಕುಡಿದು ತೀವ್ರ ಅಸ್ವಸ್ಥನಾಗಿ ಬಿದ್ದವನಿಗೆ ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಅಂದಿನಿಂದ ಚಿಕಿತ್ಸೆಯಲ್ಲಿದ್ದವನು, ದಿನಾಂಕ: 11-01-2022 ರಂದು ಚಿಕಿತ್ಸೆ ಫಲಕಾರಿ ಆಗದೇ 20-30 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ತಿಳಿದು ಬಂದಿದ್ದು, ಇದರ ಹೊರತು ಮೃತನ ಸಾವಿನಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗೋಪಾಲಸಿಂಗ್ ತಂದೆ ಲಕ್ಷ್ಮಣಸಿಂಗ್ ಕಾರ್ಪೆಂಟರ್, ಪ್ರಾಯ-51 ವರ್ಷ, ವೃತ್ತಿ-ಕಾರ್ಪೆಂಟರ್, ಸಾ|| ಕೊಪ್ಪರಸಿಕೊಪ್ಪಾ, ತಾ: ಹಾನಗಲ್, ಜಿ: ಹಾವೇರಿ ರವರು ದಿನಾಂಕ: 12-01-2022 ರಂದು 09-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 20-01-2022 07:05 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080