ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 12-06-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 115/2021, ಕಲಂ: 4, 5, 6, 7, 12 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020 ಮತ್ತು ಕಲಂ: 11(1)(A)(D)(E)  Prevention Of Cruelty to Animals Act-1960  ಹಾಗೂ ಕಲಂ: 192(A) Indian Motor Vehicles Act-1988 ನೇದ್ದರ ವಿವರ...... ನಮೂದಿತ ಆರೋಪಿತರು 1]. ಅನೀಲಕುಮಾರ ತಂದೆ ಚಾರಂಜಿತ್ ರತನ್. ಪ್ರಾಯ-45 ವರ್ಷ, ವೃತ್ತಿ-ಚಾಲಕ, ಸಾ|| ಪ್ರೇಮಚಂದ್ ವಾರ್ಡ್ ನಂ: 02, ಖಮನೊನ್, ಪಾಟೇಗಾರ ಸಾಹಿಬ್, ಪಂಜಾಬ್, ಹಾಲಿ ಸಾ|| ಮನೆ ನಂ: 109, ಗುರ್ತೇಗಬಾದ್ ನಗರ್, ಖರಾಡ್, ಖರಾಡ್, ಮೊಹಾಲಿ, 2]. ಜಗದೀಪ್ ಸಿಂಗ್ ತಂದೆ ಮಜೋರ್ ಸಿಂಗ್, ಪ್ರಾಯ-30 ವರ್ಷ, ವೃತ್ತಿ-ಕ್ಲೀನರ್, ಸಾ|| ಮನ್ಸೂರ್‍ಪುರ್, ಖಮನೊನ್, ಪಾಟೇಗಾರ ಸಾಹಿಬ್, ಪಂಜಾಬ್. ಈ ನಮೂದಿತ ಆರೋಪಿತರು ದಿನಾಂಕ: 12-06-2021 ರಂದು 09-15 ಗಂಟೆಯ ಸುಮಾರಿಗೆ ಟಾಟಾ ಕಂಪನಿಯ ಲಾರಿ ನಂ: ಪಿ.ಬಿ-23/ಎಫ್-4141 ನೇದರ ಮೇಲೆ ಕಪ್ಪು ಮತ್ತು ಬಿಳಿ ಬಣ್ಣದ ಜರ್ಸಿ ತಳಿಯ ಆಕಳುಗಳು, ಒಟ್ಟೂ 14 ಜಾನುವಾರುಗಳನ್ನು ತುಂಬಿಕೊಂಡು ಜಾನುವಾರಗಳಿಗೆ ನಿಂತುಕೊಳ್ಳಲು, ಮಲಗಲು ಕಂಪಾರ್ಟಮೆಂಟಿನ ವ್ಯವಸ್ಥೆ ಮಾಡದೇ ಹಾಗೂ ಮೇವು ಮತ್ತು ನೀರಿನ ವ್ಯವಸ್ಥೆ ಇಲ್ಲದೇ ಹಿಂಸಾತ್ಮಕವಾಗಿ ಕಟ್ಟಿ ವಧೆ ಮಾಡುವ ಉದ್ದೇಶದಿಂದ ಸರಕು ಸಾಗಣೆಯ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಆನಂದಮೂರ್ತಿ ಸಿ, ಪಿ.ಎಸ್.ಐ (ಕಾ&ಸು-01), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 12-06-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 163/2021, ಕಲಂ: 78(ಎ)(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಮಾರುತಿ ತಂದೆ ಸುಬ್ರಾಯ ಬಂಡಾರಿ, ಪ್ರಾಯ-42 ವರ್ಷ, ವೃತ್ತಿ-ಪಾನ್ ಬೀಡಾ ಅಂಗಡಿ, ಸಾ|| ಕಮಟೇಹಿತ್ತಲು, ತಾ: ಹೊನ್ನಾವರ. ಈತನು ದಿನಾಂಕ: 11-06-2021 ರಂದು 11-45 ಗಂಟೆಗೆ ಹೊನ್ನಾವರ ತಾಲೂಕಿನ ಹೊನ್ನಾವರ ಪಟ್ಟಣದ ದುರ್ಗಾಕೇರಿಯ ಶ್ರೀ ದಂಡಿನ ದುರ್ಗಾದೇವಿ ದೇವಸ್ಥಾನದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಸಾರ್ವಜನಿಕರಿಂದ ಹಣವನ್ನು ಪಡೆದು ಓ.ಸಿ ಅಂಕೆ-ಸಂಖ್ಯೆಗಳ ಮೇಲೆ ಪಂಥವನ್ನಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಜುಗಾರಾಟ ಆಡುತ್ತಿದ್ದಾಗ ದಾಳಿಯ ವೇಳೆ ಆರೋಪಿತನ ತಾಬಾದಲ್ಲಿ 1). ಒಟ್ಟು ನಗದು ಹಣ 470/- ರೂಪಾಯಿ, 2). ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ, 3). ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-01, ಅ||ಕಿ|| 00.00/- ರೂಪಾಯಿ ನೇದವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತೇಶ ಉದಯ ನಾಯಕ, ಪಿ.ಎಸ್.ಐ (ಕಾ&ಸು-02), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 12-06-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 72/2021, ಕಲಂ: 4, 12 THE KARNATAKA PREVENTION OF SLAUGHTER ANDPRESERVATION OF CATTLE ORDINANCE-2020 ಹಾಗೂ ಕಲಂ: 11(1)(D) PREVENTION OF CRUELTY TO ANIMALS ACT-1960 ನೇದ್ದರ ವಿವರ...... ನಮೂದಿತ ಆರೋಪಿತರು 1]. ಸೈಯದ್ ಅದ್ನಾನ್ ತಂದೆ ಸೈಯದ್ ಹಾಸೀಂ, ಪ್ರಾಯ-22 ವರ್ಷ, ವೃತ್ತಿ-ಪಾನಶಾಪ್, ಸಾ|| ಮದೀನಾ ಕಾಲೋನಿ, ಖಡಿ ಮಸೀನ್, ಅಬುಬಕರ್ ಪಳ್ಳಿ ಹತ್ತಿರ, ತಾ: ಭಟ್ಕಳ, 2]. ಹುಸೇನ ದಸ್ತಗಿರ್ ತಂದೆ ಹಸನ್ ಶೇಖ್, ಪ್ರಾಯ-27 ವರ್ಷ, ವೃತ್ತಿ-ಚಾಲಕ, ಸಾ|| ನಾಗಪ್ಪ ನಾಯ್ಕ ರೋಡ್, 2 ನೇ ಕ್ರಾಸ್, ಇಮಾಮ್ ಮಸೀದಿ ಹತ್ತಿರ, ತಾ: ಭಟ್ಕಳ. ಈ ನಮೂದಿತ ಆರೋಪಿತರು ವಧೆ ಮಾಡುವ ಉದ್ದೇಶದಿಂದ 40,000/- ರೂಪಾಯಿ ಮೌಲ್ಯದ 02 ಕೋಣಗಳನ್ನು ಯಾವುದೇ ಪಾಸ್ ಯಾ ಪರವಾನಿಗೆ ಇಲ್ಲದೇ ಟಾಟಾ ಡೆಕೋ ವಾಹನ ನಂ: ಕೆ.ಎ-23/ಎ-7388 ನೇದರಲ್ಲಿ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ತುಂಬಿಕೊಂಡು ಸಾಗಾಟ ಮಾಡಿಕೊಂಡು ಹೋಗುತ್ತಿರುವಾಗ ಭಟ್ಕಳ ಶಹರದ ಬಂದರ ರೋಡ್ 1 ನೇ ಕ್ರಾಸ್ ಹತ್ತಿರ ದಿನಾಂಕ: 12-06-2021 ರಂದು ಬೆಳಗಿನ ಜಾವ 06-15 ಗಂಟೆಯ ಸುಮಾರಿಗೆ ಪಿರ್ಯಾದಿಯವರ ದಾಳಿಯ ಕಾಲಕ್ಕೆ 2 ಕೋಣಗಳು ಹಾಗೂ ಟಾಟಾ ಡೆಕೋ ವಾಹನ ನಂ: ಕೆ.ಎ-23/ಎ-7388 ಮತ್ತು ಹಗ್ಗ-02 ನೇದವುಗಳ ಸಮೇತ ಪಿರ್ಯಾದಿಯವರಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಎಚ್. ಬಿ. ಕುಡುಗುಂಟಿ, ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 12-06-2021 ರಂದು 09-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 82/2021, ಕಲಂ: 447, 448, 341, 323, 326, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಂಜು ಮೊಗೇರ, 2]. ಗಣಪಿ ಮೊಗೇರ, 3]. ರಾಘವೇಂದ್ರ ಮೊಗೇರ, 4]. ದೇವರಾಜ ಮೊಗೇರ, ಸಾ|| (ಎಲ್ಲರೂ) ಬೆಳಕೆ, ಮೊಗೇರಕೇರಿ, ತಾ: ಭಟ್ಕಳ. ಈ ನಮೂದಿತ ಆರೋಪಿತರು ಬೆಳಕೆ, ಮೊಗೇರಕೇರಿ ಗ್ರಾಮದ ನಿವಾಸಿಗಳು ಇದ್ದು, ಪಿರ್ಯಾದಿಯ ಮಾವನ ಮನೆಯ ಜಾಗದ ವಿಷಯವಾಗಿ ಪಿರ್ಯಾದಿಯ ಮನೆಯ ಜನರಿಗೆ ಹಾಗೂ ಆರೋಪಿತರಿಗೆ ಈ ವಿಷಯವಾಗಿ ಆಗಾಗ ಜಗಳವಾಗುತ್ತಿದ್ದು, ಈ ಬಗ್ಗೆ ಹಲವು ಬಾರಿ ರಾಜಿ ಸಂಧಾನವಾಗಿದ್ದು ಇರುತ್ತದೆ. ದಿನಾಂಕ: 08-06-2021 ರಂದು ತಕರಾರು ಇರುವ ಜಾಗದಲ್ಲಿ ಆರೋಪಿ 1 ನೇಯವನ ಮಗ ಆರೋಪಿ 3 ಮತ್ತು 4 ಇವರುಗಳು ಕಂಪೌಂಡ್ ಕಟ್ಟುತ್ತಿದ್ದು, ಈ ವಿಚಾರವಾಗಿ ಪಿರ್ಯಾದಿಯ ಗಂಡ ಜಗದೀಶ ಹಾಗೂ ಪಿರ್ಯಾದಿಯ ಮೈದುನ ಗುರುದಾಸ ಇವರುಗಳು ಆರೋಪಿತರಿಗೆ ‘ನೀವು ಕಂಪೌಂಡ್ ಕಟ್ಟಬೇಡಿ. ಸರ್ವೇ ಆದ ನಂತರ ಕಟ್ಟಿ’ ಅಂತಾ ಹೇಳಿದಕ್ಕೆ, ಆರೋಪಿ 3 ಮತ್ತು 4 ನೇಯವರು ಪಿರ್ಯಾದಿಯ ಗಂಡ ಮತ್ತು ಮೈದುನನ ಮೈ ಮೇಲೆ ಏರಿ ಹೋಗಿ ‘ಬೋಳಿ ಮಕ್ಕಳಾ, ನಾವು ಕಂಪೌಂಡ್ ಕಟ್ಟುತ್ತೇವೆ. ನಿಲ್ಲಿಸಲು ಬಂದರೇ ನಿಮ್ಮನು ಇಲ್ಲೇ ಹೂತು ಹಾಕುತ್ತೇವೆ’ ಅಂತಾ ಜೀವದ ಬೆದರಿಕೆ ಹಾಕಿದ್ದು, ಈ ಬಗ್ಗೆ ಪೋಲಿಸ್ ಠಾಣೆಯಲ್ಲಿ ಅರ್ಜಿ ದಾಖಲಾಗಿ ಆರೋಪಿತರು ಮುಚ್ಚಳಿಕೆ ಬರೆಯಿಸಿ ಕೊಟ್ಟಿದ್ದು ಇರುತ್ತದೆ. ದಿನಾಂಕ: 08-06-2021 ರಂದು ರಾತ್ರಿ 08-00 ಗಂಟೆಗೆ ಆರೋಪಿ 3 ನೇಯವನು ಪಿರ್ಯಾದಿಯ ಮನೆಗೆ ಅಕ್ರಮ ಪ್ರವೇಶ ಮಾಡಿ, ಪಿರ್ಯಾದಿಯ ಅತ್ತೆ ಮಾದೇವಿ ಇವರಿಗೆ ಉದ್ದೇಶಿಸಿ ‘ನಿನ್ನ ಮಕ್ಕಳನ್ನು ಕೊಂದು ಹಾಕಿ ಕಂಪೌಂಡ್ ಕಟ್ಟುತ್ತೇವೆ’ ಅಂತಾ ಧಮಕಿ ಹಾಕಿದ್ದು, ನಂತರ ಆರೋಪಿ 3 ನೇಯವನು ಪಿರ್ಯಾದಿಯ ಮೈದುನನಿಗೆ ಬೇರೆ ನಂಬರಿನಿಂದ ಕರೆ ಮಾಡಿ ‘ತಾನು ಪೋಲಿಸ್ ಡಿಪಾರ್ಟಮೆಂಟ್‍ ನಲ್ಲಿ ಇದ್ದು, ತನಗೆ ಏನು ಮಾಡಬೇಕು ಅಂತಾ ಗೊತ್ತು’ ಅಂತಾ ಜೀವದ ಬೆದರಿಕೆ ಹಾಕುತ್ತಿದ್ದು, ದಿನಾಂಕ: 11-06-2021 ರಾತ್ರಿ 22-00 ಗಂಟೆಗೆ ಅರೋಪಿತರು ಪಿರ್ಯಾದಿಯ ಮೈದುನ ಗುರುದಾಸ ಇವರು ಮೋಟಾರ್ ಸೈಕಲ್ ಮೇಲೆ ಬರುವಾಗ ಆರೋಪಿತರು ಅವರ ಮೋಟಾರ್ ಸೈಕಲನ್ನು ಅಡ್ಡಗಟ್ಟಿ ತಡೆದು ಕೈಯಿಂದ ಹಲ್ಲೆ ಮಾಡಿ, ದೊಣ್ಣೆಯಿಂದ ಭುಜದ ಹಾಗೂ ಬೆನ್ನಿನ ಭಾಗಕ್ಕೆ ಹೊಡೆದು ಭಾರೀ ಗಾಯ ಪಡಿಸಿದ್ದಲ್ಲದೇ, ಬಿಡಿಸಲು ಬಂದ ಪಿರ್ಯಾದಿಯ ಗಂಡ ಜಗದೀಶ ಈತನಿಗೂ ಸಹ ಕೈಯಿಂದ ಹಲ್ಲೆ ಮಾಡಿದ್ದಲ್ಲದೇ, ಆರೋಪಿ 1 ನೇಯವನು ತನ್ನ ಕೈಯಲ್ಲಿದ್ದ ಕತ್ತಿಯನ್ನು ಪಿರ್ಯಾದಿಯ ಮೈದುನಿಗೆ ಬೀಸಿದ್ದರರಿಂದ ಅದು ತಪ್ಪಿ ಕೆಳಗೆ ಬಿದ್ದಿದು, ಈ ಘಟನೆಯಲ್ಲಿ ಗಾಯಗೊಂಡ ಇಬ್ಬರು ಕುಂದಾಪುರದ ಆಸ್ಪತ್ರೆಗೆ ದಾಖಲಾದ ಬಗ್ಗೆ ಪಿರ್ಯಾದಿ ಶ್ರೀಮತಿ ಶಾಂತಿ ಜಗದೀಶ ಮೊಗೇರ, ಪ್ರಾಯ-37 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಸುಕ್ರನಮನೆ, ಬೆಳಕೆ, ಮೊಗೇರಕೇರಿ, ತಾ: ಭಟ್ಕಳ ರವರು ದಿನಾಂಕ: 12-06-2021 ರಂದು 11-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 37/2021, ಕಲಂ: 37, 323, 120(ಬಿ), 448 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಶ್ರೀಮತಿ ತೇಜಶ್ವಿನಿ ಕೋಂ. ಅಂಕುಷ ಸುತಾರ, ಪ್ರಾಯ-29 ವರ್ಷ, ವೃತ್ತಿ-ಗೃಹಣಿ, ಸಾ|| ಅಂಬಾಭವಾನಿ ದೇವಸ್ಥಾನದ ಎದುರಿಗೆ, ಗಾಂವಠಾಣ, ತಾ: ದಾಂಡೇಲಿ, 2]. ಗಣೇಶ ತಂದೆ ಶಾಂತಾರಾಮ ಪಾಟೀಲ್, ಸಾ|| ನಂದಗಡ, ಬೆಳಗಾವಿ, 3]. ರಾಮಾ ತಂದೆ ಕೃಷ್ಣಾ ಹುಂದರೆ, ಸಾ|| ನಂದಗಡ, ಬೆಳಗಾವಿ, 4]. ವನೀತಾ ಚವ್ಹಾಣ, ಸಾ|| ಗಣೇಶಪುರ, ಬೆಳಗಾವಿ. ಈ ನಮೂದಿತ ಆರೋಪಿತರ ಪೈಕಿ ಆರೋಪಿ 1 ನೇಯವಳು ಪಿರ್ಯಾದಿಯ ಹೆಂಡತಿಯಾಗಿದ್ದು, ಪಿರ್ಯಾದಿಯೊಂದಿಗೆ ಕಳೆದ 8 ವರ್ಷದ ಹಿಂದೆ ಮದುವೆ ಆದವಳು, ಸಂಸಾರ ನಡೆಸಲು ಇಷ್ಟ ಇರದೇ ಇರುವುದರಿಂದ ಪಿರ್ಯಾದಿಯನ್ನು ಕೊಲೆ ಮಾಡುವ ಉದ್ದೇಶದಿಂದ ಸುಪಾರಿ ನೀಡುವ ಕುರಿತು ಆರೋಪಿ 4 ನೇಯವಳೊಂದಿಗೆ ಮಾತನಾಡಿಕೊಂಡು, ಅವಳಿಗೆ ಪರಿಚಯ ಇರುವ ಆರೋಪಿ 2 ಮತ್ತು 3 ನೇಯವರಿಗೆ 30,000/- ರೂಪಾಯಿ ಕೊಡುವುದಾಗ ಮಾತನಾಡಿಕೊಂಡು, ಆರೋಪಿ 1 ಮತ್ತು 2 ನೇಯವರಿಗೆ ದಿನಾಂಕ: 11-06-2021 ರಂದು 23-00 ಗಂಟೆಗೆ ದಾಂಡೇಲಿ ತಾಲೂಕಿನ ಗಾಂವಠಾಣ ಗ್ರಾಮದ ತನ್ನ (ಪಿರ್ಯಾದಿಯ) ಮನೆಯ ಹಿಂದಿನ ಬಾಗಿಲಿನಿಂದ ಮನೆಯ ಒಳಗೆ ಬರ ಮಾಡಿಕೊಂಡು, ಮನೆಯ ಒಳಗೆ ಮಲಗಿದ್ದ ಪಿರ್ಯಾದಿಯನ್ನು ಕೊಲೆ ಮಾಡಲು ಹೇಳಿದಂತೆ, ಆರೋಪಿ 3 ನೇಯವನು ಪಿರ್ಯಾದಿಯ ಕಾಲನ್ನು ಹಿಡಿದುಕೊಂಡಿದ್ದು, ಆರೋಪಿ 2 ನೇಯವನು ಪಿರ್ಯಾದಿಯ ಎದೆಯ ಮೇಲೆ ಕುಳಿತುಕೊಂಡು ಕುತ್ತಿಗೆಯನ್ನು ಹಿಡಿದು ಹಿಚುಕಿ ಕೊಲೆ ಮಾಡಲು ಪ್ರಯತ್ನಿಸಿದ್ದು, ಆಗ ಪಿರ್ಯಾದಿಯ ಕುತ್ತಿಗೆ ಹಿಚುಕುತ್ತಿದ್ದವನ ಕೈಯನ್ನು ದೂಕಿ, ಜೋರಾಗಿ ಕೂಗಿಕೊಂಡಿದ್ದು, ಆಗ ಆರೋಪಿ 2 ಮತ್ತು 3 ನೇಯವರು ಪಿರ್ಯಾದಿಯ ಮನೆಯಿಂದ ಓಡಿ ಹೋಗಿರುತ್ತಾರೆ. ಕಾರಣ ಆರೋಪಿ 1 ರಿಂದ 4 ನೇಯವರು ಪಿರ್ಯಾದಿಯನ್ನು ಕೊಲೆ ಮಾಡಲು ಪ್ರಯತ್ನಪಟ್ಟಿದ್ದರಿಂದ ಸದ್ರಿ 4 ಜನ ಆರೋಪಿತರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಅಂಕುಷ ತಂದೆ ರಾಮಾ ಸುತಾರ, ಪ್ರಾಯ-38 ವರ್ಷ, ವೃತ್ತಿ-ಕಮ್ಮಾರಿಕೆ ಕೆಲಸ, ಸಾ|| ಅಂಬಾಭವಾನಿ ದೇವಸ್ಥಾನದ ಎದುರಿಗೆ, ಗಾಂವಠಾಣ, ದಾಂಡೇಲಿ ರವರು ದಿನಾಂಕ: 12-06-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 60/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 27-04-2021 ರಂದು ಸಾಯಂಕಾಲ 17-00 ಗಂಟೆಯಿಂದ ದಿನಾಂಕ: 08-06-2021 ರಂದು ಬೆಳಿಗ್ಗೆ 10-00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದುದಾರರು ಕರ್ತವ್ಯ ನಿರ್ವಹಿಸುತ್ತಿದ್ದ ಪ್ರೌಢಶಾಲೆಯ ದಾಸ್ತಾನು ಕೊಠಡಿಯ ಬಾಗಿಲನ್ನು ಯಾವುದೋ ಗಟ್ಟಿಯಾದ ವಸ್ತುವಿನಿಂದ ಮುರಿದು ಕೊಠಡಿಯಲ್ಲಿಟ್ಟಿರುವ 1). ಬಿಪಿಎಲ್ ಕಂಪನಿಯ 40 ಇಂಚಿನ ಎಲ್.ಇ.ಡಿ. ಟಿ.ವಿ-01 (1,500/- ರೂಪಾಯಿ), 2). ಬ್ಯಾಟರಿ-01 (600/- ರೂಪಾಯಿ) ಹಾಗೂ 3). ಕೊಠಡಿಯ ಮೇಲ್ಛಾವಣಿಗೆ ಅಳವಡಿಸಿರುವ ಸೋಲಾರ್ ಪ್ಲೇಟ್ ಗಳು-02 (300/- ರೂಪಾಯಿ), ಹೀಗೆ ಒಟ್ಟೂ 2,400/- ರೂಪಾಯಿ ಬೆಲೆಯ ಸ್ವತ್ತುಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ವಿನಾಯಕ ತಂದೆ ಪ್ರಭಾಕರ ಪೈ, ಪ್ರಾಯ-50 ವರ್ಷ, ವೃತ್ತಿ-ಮುಖ್ಯೋಪಾಧ್ಯಾಯರು, ಸರ್ಕಾರಿ ಪ್ರೌಢಶಾಲೆ, ಬೈಲಪಾರ, ಶಿರಸಿ ಶೈಕ್ಷಣಿಕ ಜಿಲ್ಲೆ, ತಾ: ಜೋಯಿಡಾ, ಸಾ|| ಬೊಂಬೆನಾಥ ದೇವಸ್ಥಾನದ ಎದುರು, ಹೆರವಟ್ಟಾ, ತಾ: ಕುಮಟಾ, ಹಾಲಿ ಸಾ|| ಕಾಮತ್ ಕಂಪೌಂಡ್, ಕುಂಬಾರವಾಡಾ, ತಾ: ಜೋಯಿಡಾ ರವರು ದಿನಾಂಕ: 12-06-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 77/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ಹಾಗೂ ಕಲಂ: 269, 270 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮೈಲಾರಿ ಮಹಾದೇವಪ್ಪಾ ಸಾಗರ, ಪ್ರಾಯ-29 ವರ್ಷ, 2]. ಮಂಜುನಾಥ ಹನುಮಂತಪ್ಪಾ ಉಪಾಧ್ಯಾಯ, ಪ್ರಾಯ-40 ವರ್ಷ, 3]. ಬಸವಂತಪ್ಪ ಲಕ್ಷ್ಮಣ ಮಡ್ಲಿ, ಪ್ರಾಯ-49 ವರ್ಷ, 4]. ಮಂಜುನಾಥ ನಾಗಪ್ಪ ಧರ್ಮೋಜಿ, ಪ್ರಾಯ-38 ವರ್ಷ, ಸಾ|| (ಎಲ್ಲರೂ) ನ್ಯಾಸರ್ಗಿ, ತಾ: ಮುಂಡಗೋಡ. ಈ ನಮೂದಿತ ಆರೋಪಿತರು ದಿನಾಂಕ: 12-06-2021 ರಂದು ರಾತ್ರಿ 02-00 ಗಂಟೆಗೆ ಮುಂಡಗೋಡ ತಾಲೂಕಿನ ನ್ಯಾಸರ್ಗಿ ಗ್ರಾಮದ ಕೊಟ್ಟೆ ಗುಂಡಿಯ ಹತ್ತಿರ ರಸ್ತೆಯ ಪಕ್ಕದಲ್ಲಿಯ ಸಾರ್ವಜನಿಕ ಸ್ಥಳದಲ್ಲಿ ಕೋವಿಡ್-19 ಕೊರೋನಾ ರೋಗ ಹರಡುವ ಸಂಭವ ಇದ್ದ ಬಗ್ಗೆ ಮಾನ್ಯ ಕರ್ನಾಟಕ ಸರ್ಕಾರದ ಹಾಗೂ ಜಿಲ್ಲಾಧಿಕಾರಿಯವರ ಲಾಕಡೌನ್ ಆದೇಶ ಇದ್ದ ಬಗ್ಗೆ ಗೊತ್ತಿದ್ದರೂ ಸಹ ವಿಧಿ ವಿರುದ್ಧವಾಗಿ ನಿರ್ಲಕ್ಷ್ಯತನದಿಂದ ಉದ್ದೇಶಪೂರ್ವಕವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೇ ಒಬ್ಬರ ಪಕ್ಕದಲ್ಲಿ ಒಬ್ಬರು ಕುಳಿತು ಕೊರೋನಾ ರೋಗದ ಸೋಂಕು ಹರಡಿ ಮಾನವನ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಕುಳಿತುಕೊಂಡು ನೆಲಕ್ಕೆ ನ್ಯೂಸ್ ಪೇಪರನ್ನು ಹಾಸಿ ಮೇಣದ ಬತ್ತಿಯ ಬೆಳಕಿನಲ್ಲಿ ತಮ್ಮ ತಮ್ಮ ಲಾಭದ ಸಲುವಾಗಿ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವನ್ನಾಗಿ ಕಟ್ಟಿ ಅಂದರ್-ಬಾಹರ್ ಇಸ್ಪೀಟ್ ಜೂಗಾರಾಟ ಆಡುತ್ತಾ ನಗದು ಹಣ 2,200/- ರೂಪಾಯಿ ಹಾಗೂ ಇಸ್ಪೀಟ್ ಜೂಗಾರಾಟದ ಸಲಕರಣೆಗಳಾದ ನ್ಯೂಸ್ ಪೇಪರ್, 52 ಇಸ್ಪೀಟ್ ಎಲೆಗಳು, ಮೇಣದ ಬತ್ತಿಯ ತುಂಡುಗಳು-02. ಇವುಗಳೊಂದಿಗೆ ಆರೋಪಿತರೆಲ್ಲರೂ ದಾಳಿಯ ಕಾಲಕ್ಕೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನಿಂಗಪ್ಪ ಡಿ. ಜಕ್ಕಣ್ಣವರ, ಪಿ.ಎಸ್.ಐ, ಮುಂಡಗೋಡ ಪೊಲೀಸ್ ಠಾಣೆ ರವರು ದಿನಾಂಕ: 12-06-2021 ರಂದು 03-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 78/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಜಯ ತಂದೆ ಮಂಜುನಾಥ ರಾಜೆಗೌಡಾ, ಸಾ|| ಮನೆ ನಂ: 05, 1 ನೇ ಕ್ರಾಸ್, ಮಾದನಾಯಕನಹಳ್ಳಿ, ನೆಲಮಂಗಲ, ಬೆಂಗಳೂರು (ಕ್ಯಾಂಟರ್ ಲಾರಿ ನಂ: ಕೆ.ಎ-53/ಎ-9584 ನೇದರ ಚಾಲಕ). ಈತನು ದಿನಾಂಕ: 12-06-2021 ರಂದು  ಮಧ್ಯಾಹ್ನ 01-30 ಗಂಟೆಯ ಸುಮಾರಿಗೆ ತನ್ನ ಕ್ಯಾಂಟರ್ ಲಾರಿ ನಂ: ಕೆ.ಎ-53/ಎ-9584 ನೇದನ್ನು ಮುಂಡಗೋಡ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಗುಂಜಾವತಿ ಗ್ರಾಮಕ್ಕಿಂತ ಹಿಂದೆ ಸುಮಾರು 500 ಮೀಟರ್ ನಷ್ಟು ಮುಂಡಗೋಡ ಕಡೆಗೆ ಇರುವ ಕ್ರಾಸಿನಲ್ಲಿ ಡಾಂಬರ್ ರಸ್ತೆಯ ಮೇಲೆ ಯಲ್ಲಾಪುರ ಕಡೆಯಿಂದ ಮುಂಡಗೋಡ ಕಡೆಗೆ ಬರುತ್ತಿದ್ದ ಸ್ವಿಫ್ಟ್ ಕಾರ್ ನಂ: ಕೆ.ಎ-16/ಡಿ-1072 ನೇದಕ್ಕೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಸ್ವಿಫ್ಟ್ ಕಾರಿನಲ್ಲಿದ್ದ ಶ್ರೀ ಗುಂಡಪ್ಪ ತಂದೆ ಕುಂಟಲಕ್ಷ್ಮಣ ಶಿತಗುಂಡ್ಲೆಪ್ಪ ಇವರಿಗೆ ಬಲಬದಿಯ ಹಣೆಗೆ, ಬಲ ಮೊಣಕೈಗೆ, ಶ್ರೀನಿವಾಸ ತಂದೆ ಗುಂಡಪ್ಪ ಶಿತಗುಂಡ್ಲೆಪ್ಪ ಇವರಿಗೆ ಬಲಬದಿಯ ಹಣೆಗೆ, ತಲೆಗೆ ಭಾರೀ ಗಾಯನೋವು ಪಡಿಸಿದ್ದಲ್ಲದೇ, ಶ್ರೀಮತಿ ಭಾಗ್ಯ ಕೋಂ. ಪ್ರಕಾಶ ಕಂಠೀರ ಇವರಿಗೆ ಬಲಗಾಲಿನ ಪಾದದ ಮೇಲೆ, ಎಡಗಾಲಿಗೆ ಮತ್ತು ಪಿರ್ಯಾದಿಗೆ ಎಡಕಣ್ಣು ಹಾಗೂ ಬಲಗೈಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಅನಿಲ್ ಕುಮಾರ ತಂದೆ ವೀರಣ್ಣಾ ಪೂಜಾರಿ, ಪ್ರಾಯ-48 ವರ್ಷ, ವೃತ್ತಿ-ಕಾರ್ ಚಾಲಕ, ಸಾ|| ದೇವಸಮುದ್ರ, ತಾ: ಮೊಣಕಾಲ್ಮೂರ್, ಜಿ: ಚಿತ್ರದುರ್ಗ ರವರು ದಿನಾಂಕ: 12-06-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 12-06-2021

at 00:00 hrs to 24:00 hrs

 

ಮುಂಡಗೋಡ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 19/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ದೇವೇಂದ್ರಪ್ಪ ತಂದೆ ಈರಪ್ಪ ತೆಗ್ಗಳ್ಳಿ, ಪ್ರಾಯ-60 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಅರಶಿಣಗೇರಿ, ತಾ: ಮುಂಡಗೋಡ. ಸುದ್ದಿದಾರನ ತಂದೆಯಾದ ಇವರು ಅರಶಿಣಗೇರಿ ಗ್ರಾಮದ ಸರ್ವೇ ನಂ: 39/5 ರಲ್ಲಿ 01 ಎಕರೆ 06 ಗುಂಟೆ, ಸರ್ವೇ ನಂ: 93 ರಲ್ಲಿ 02 ಎಕರೆ 09 ಗುಂಟೆ, ಸರ್ವೇ ನಂ: 117/38 ರಲ್ಲಿ 25 ಗುಂಟೆ ಒಟ್ಟು 04 ಎಕರೆ ಜಮೀನು ಹೊಂದಿದವರಿದ್ದು, ಸದ್ರಿ ಹೊಲದಲ್ಲಿ ಶೇಂಗಾ ಬೆಳೆ ಬಿತ್ತಲು ಸುಮಾರು 1 ಲಕ್ಷ 20 ಸಾವಿರ ರೂಪಾಯಿಯಷ್ಟು ಖರ್ಚು ಮಾಡಿದ್ದರು. ಆದರೆ ಈ ವರ್ಷ ಬೆಳೆ ತೆಗೆಯುವಾಗ ಮಳೆ ಬಂದು ಬೆಳೆ ಹಾಳಾಗಿ ಬೆಳೆ ಸರಿಯಾಗಿ ಕೈಗೆ ಬರದೇ ಇದ್ದುದರಿಂದ ಬೇಸರದಲ್ಲಿರುತ್ತಿದ್ದವರು ಹಾಗೂ ಮೃತರು ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದ ವೀರೇಶ್ವರ ಸೇವಾ ಸಹಕಾರಿ ಬ್ಯಾಂಕ್ಕ ನಿಯಮಿತದಲ್ಲಿ ಸುಮಾರು 01 ಲಕ್ಷ ರೂ ಬೆಳೆ ಸಾಲ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಹುನಗುಂದದಲ್ಲಿ ಸುಮಾರು 02 ಲಕ್ಷ ರೂ ಸಾಲ ಮಾಡಿದ್ದರು ಹಾಗೂ ಸುದ್ದಿದಾರನ ತಾಯಿಯ ಹೆಸರಲ್ಲಿ ಧರ್ಮಸ್ಥಳ ಸಂಘದಲ್ಲಿ ಮನೆ ಮೇಲೆ 50,000/- ರೂಪಾಯಿ ಸಾಲ ಮಾಡಿಕೊಂಡವರು ಮನನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ: 12-06-2021 ರಂದು ಬೆಳಿಗ್ಗೆ 08-00 ರಿಂದ ಮಧ್ಯಾಹ್ನ 11-30 ಗಂಟೆಯ ನಡುವಿನ ಅವಧಿಯಲ್ಲಿ ಅರಶಿಣಗೇರಿ ಗ್ರಾಮದ ಅರಣ್ಯದಲ್ಲಿ ಯಾವುದೋ ಕಾಡು ಜಾತಿಯ ಮರಕ್ಕೆ ವಾಯರ್ ಹಗ್ಗದಿಂದ ತನ್ನ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತು ಮುಂದಿನ ಕಾನೂನು ತನಿಖೆ ಕೈಗೊಳ್ಳಲು ಕೋರಿದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶಿವಪ್ಪ ತಂದೆ ದೇವೇಂದ್ರಪ್ಪ ತೆಗಳ್ಳಿ, ಪ್ರಾಯ-37 ವರ್ಷ, ವೃತ್ತಿ-ರೈತಾಬಿ ಕೆಲಸ. ಸಾ|| ಅರಶಿಣಗೇರಿ, ತಾ: ಮುಂಡಗೋಡ ರವರು ದಿನಾಂಕ: 12-06-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 20/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಮಂಜುನಾಥ ತಂದೆ ನಾಗಪ್ಪಾ ಧರ್ಮೋಜಿ. ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ. ಸಾ|| ನ್ಯಾಸರ್ಗಿ, ತಾ: ಮುಂಡಗೋಡ. ಸುದ್ದಿದಾರರ ಚಿಕ್ಕಪ್ಪನ ಮಗನಾದ ಈತನಿಗೆ ದಿನಾಂಕ: 12-06-2021 ರಂದು ಬೆಳಗಿನ ಜಾವ 06-00 ಗಂಟೆಯ ಸುಮಾರಿಗೆ ಆತನ ಹಾಸಿಗೆ ಕೆಳಗೆ ಇಟ್ಟಿದ್ದ ಸೀಮೆ ಎಣ್ಣೆ ದೀಪದಿಂದ ಆಕಸ್ಮಿಕವಾಗಿ ಬೆಂಕಿಯು ಆತನು ಮಲಗಿದ್ದ ಹಾಸಿಗೆಗೆ ತಾಗಿ ಸುಟ್ಟ ಗಾಯಗಳಾಗಿದವನಿಗೆ ಹೆಚ್ಚಿನ ಉಪಚಾರಕ್ಕೆ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ದಾಖಲಾದವನು, ಚಿಕಿತ್ಸೆ ಫಲಿಸದೇ ದಿನಾಂಕ: 12-06-2021 ರಂದು ಮಧ್ಯಾಹ್ನ 02-45 ಗಂಟೆಗೆ ಮೃತಪಟ್ಟಿರುತ್ತಾನೆ. ಇದರ ಹೊರತು ಆತನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ನನ್ನ ಚಿಕ್ಕಪ್ಪನ ಮಗನಾದ ಮಂಜುನಾಥ ಈತನ ಮೃತದೇಹವು ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಯ ಶವಾಗಾರದಲ್ಲಿ ಇದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶಿವಾಜಿ ತಂದೆ ಶಂಕ್ರಪ್ಪ ಧರ್ಮೋಜಿ, ಪ್ರಾಯ-51 ವರ್ಷ, ವೃತ್ತಿ-ಕಿರಾಣಿ ಅಂಗಡಿ ವ್ಯಾಪಾರ, ಸಾ|| ನ್ಯಾಸರ್ಗಿ, ತಾ: ಮುಂಡಗೋಡ ರವರು ದಿನಾಂಕ: 12-06-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

ಇತ್ತೀಚಿನ ನವೀಕರಣ​ : 14-06-2021 04:53 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080