ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 12-03-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 39/2021, ಕಲಂ: 406, 420 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಶಿವರಾಜ ರಂಗರೆಸು, ಪ್ರಾಯ-38 ವರ್ಷ, 2]. ನಾಸೀರ್, 3]. ಗೋವಿಂದರಾಜು, ಸಾ|| ಮಾರುತಿ ದೇವಸ್ಥಾನದ ಹತ್ತಿರ, ಕೆ.ಇ.ಬಿ ರಸ್ತೆ, ಕಾರವಾರ. ಈ ನಮೂದಿತ ಆರೋಪಿತರು ಕಾರವಾರದ ಕಾಜುಬಾಗದಲ್ಲಿ ಶ್ರೀ ಗಣಪತಿ ಅಣ್ವೇಕರ್ ಇವರ ಬಾಬ್ತು ಅಂಗಡಿಯನ್ನು ಗೃಹಬಳಕೆಯ ಸಾಮಾನುಗಳನ್ನು ಮಾರಾಟ ಮಾಡುವುದಾಗಿ ಹೇಳಿ ಪಿರ್ಯಾದಿಯವರಿಗೆ ಗೃಹ ಬಳಕೆಯ ಸೋಫಾ, 2 ಕಬ್ಬಿಣದ ಮಂಚ, ವಾಷಿಂಗ್ ಮಶೀನ್, ಕಪಾಟು ಹಾಗೂ ಇತರೆ ಅಡಿಗೆ ಪಾತ್ರೆಗಳನ್ನು ತಂದುಕೊಡುವುದಾಗಿ ಹೇಳಿ ನಂಬಿಸಿ ಪಿರ್ಯಾದಿಯವರಿಂದ 1,13,000/- ರೂ ಹಣವನ್ನು ಮುಂಚಿತವಾಗಿ ಪಡೆದು ಪಿರ್ಯಾದಿಯವರಿಗೆ ಗೃಹಬಳಕೆಯ ಸಾಮಾನು ಹಾಗೂ ಪಾತ್ರೆಗಳನ್ನು ತಂದು ನೀಡದೇ ಹಣವನ್ನು ಸಹ ಮರಳಿ ನೀಡದೇ, ಇದೇ ರೀತಿಯಲ್ಲಿ ಇನ್ನು ಹಲವಾರು ಗ್ರಾಹಕರಿಗೆ ಗೃಹ ಬಳಕೆಯ ಸಾಮಾನು ಹಾಗೂ ಇತರೇ ಸಾಮಾನುಗಳನ್ನು ತಂದು ಕೊಡುವುದಾಗಿ ಹೇಳಿ ನಂಬಿಸಿ, ಸುಮಾರು 08 ಲಕ್ಷ ರೂಪಾಯಿ ಹಣವನ್ನು ಗ್ರಾಹಕರಿಂದ ಮುಂಚಿತವಾಗಿ ಪಡೆದುಕೊಂಡು ಗ್ರಾಹಕರಿಗೆ ಗೃಹಬಳಕೆಯ ಸಾಮಾನು ಹಾಗೂ ಇತರೇ ಸಾಮಾನುಗಳನ್ನು ತಂದು ನೀಡದೇ ಮೋಸ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ಸಮರ್ಥ ತಂದೆ ನರೇಶ ನೇತಾಳಕರ್, ಪ್ರಾಯ-28 ವರ್ಷ, ವೃತ್ತಿ-ವಿ ಗಾರ್ಡ್ ಕಂಪನಿಯ ಸಾಮಾಗ್ರಿಗಳ ರಿಪೇರಿ ಕೆಲಸ, ಸಾ|| ಮಾಡಿಬಾಗ, ಕಡವಾಡ, ಕಾರವಾರ ರವರು ದಿನಾಂಕ: 12-03-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 49/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಜಿನ್ ನಾಯ್ಕ, ಪ್ರಾಯ-27 ವರ್ಷ, ಸಾ|| ಬೆಟ್ಕುಳಿ, ತಾ: ಕುಮಟಾ (ಬೊಲೆರೋ ಜೀಪ್ ನಂ: ಕೆ.ಎ-56/1789 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 12-03-2021 ರಂದು 09-30 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ರಾಮನಗುಳಿಯಲ್ಲಿ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ಡಾಂಬರ್ ರಸ್ತೆಯ ಮೇಲೆ ತನ್ನ ಬಾಬ್ತು ಬೊಲೆರೋ ಜೀಪ್ ನಂ: ಕೆ.ಎ-56/1789 ನೇದನ್ನು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದವನು, ತನ್ನ ಮುಂದಿನಿಂದ ಹೋಗುತ್ತಿದ್ದ ಒಂದು ಗ್ಯಾಸ್ ಟ್ಯಾಂಕರ್ ಲಾರಿಯನ್ನು ಓವರಟೇಕ್ ಮಾಡಿಕೊಂಡು ರಸ್ತೆಯ ಬಲಕ್ಕೆ ಬಂದವನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಹೋಗುತ್ತಿದ್ದ ಲಾರಿ ನಂ: ಕೆ.ಎ-01/ಎ.ಎಲ್-9993 ನೇದಕ್ಕೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಭರತ ಶೆಟ್ಟಿ, ಸಾ|| ಕುಂದಾಪುರ ಇವರಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ತನಗೂ ಕೂಡ ಸಾದಾ ಸ್ವರೂಪದ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ವಿಕ್ನೇಶ ತಂದೆ ವೆಲೈಯ್ಯನ್, ಪ್ರಾಯ-23 ವರ್ಷ, ವೃತ್ತಿ-ಚಾಲಕ, ಸಾ|| ನಂ: 59, ಮತ್ತುರಾಜ ಪಾಳಯಮ್, ಪೋ: ಪಿಲ್ಲಾಪಾಳೆಯಮ್, ತಾ: ಮುಸರಿ, ಜಿ: ತಿರುಚನಾಪಳ್ಳಿ, ತಮಿಳುನಾಡು ರಾಜ್ಯ ರವರು ದಿನಾಂಕ: 12-03-2021 ರಂದು 21-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 73/2021, ಕಲಂ: ಹುಡುಗಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಕುಮಾರಿ: ಸುಜಾತಾ ತಂದೆ ಮಂಜು ನಾಯ್ಕ, ಪ್ರಾಯ-18 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಜನಕಡ್ಕಲ್, ತಾ: ಹೊನ್ನಾವರ. ಪಿರ್ಯಾದಿಯ ಮಗಳಾದ ಇವಳು ದಿನಾಂಕ: 08-03-2021 ರಂದು ಪಿರ್ಯಾದಿಯೊಂದಿಗೆ ಧರ್ಮಸ್ಥಳಕ್ಕೆ ಹೋಗಲು ಬೆಳಿಗ್ಗೆ 07-00 ಗಂಟೆಯ ಸುಮಾರಿಗೆ ಮನೆಯಿಂದ ಹೊರಟು ನಂತರ 08-00 ಗಂಟೆಯ ಸುಮಾರಿಗೆ ಹೊನ್ನಾವರದ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಬಂದಾಗ ತನ್ನ ಮಗಳು ನೀರು ತರಲು ಅಂಗಡಿಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದವಳು, ಈವರೆಗೆ ವಾಪಸ್ ಬಾರದೇ ಕಾಣೆಯಾಗಿದ್ದು, ಕಾಣೆಯಾದ ತನ್ನ ಮಗಳನ್ನು ಹುಡುಕಿಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಂಜು ತಂದೆ ಕನ್ಯಾ ನಾಯ್ಕ, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜನಕಡ್ಕಲ್, ತಾ: ಹೊನ್ನಾವರ ರವರು ದಿನಾಂಕ: 12-03-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 74/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶಶಿಕಾಂತ ತಂದೆ ಗಣೇಶ ದೇಶಭಂಡಾರಿ, ಪ್ರಾಯ-42 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಧಾರೇಶ್ವರ, ತಾ: ಕುಮಟಾ (ಮೋಟಾರ್ ಸೈಕಲ್ ನಂ: ಕೆ.ಎ-47/ಎಚ್-3153 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 11-03-2021 ರಂದು 20-30 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಹೊನ್ನಾವರ ಕರ್ಕಿಯ ವಾಟರ್ ಫ್ಯಾಕ್ಟರಿ ಹತ್ತಿರ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-47/ಎಚ್-3153 ನೇದನ್ನು ಕುಮಟಾ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬಲಬದಿಯಿಂದ ರಸ್ತೆಯ ಎಡಕ್ಕೆ ವಾಟರ್ ಫ್ಯಾಕ್ಟರಿ ಕಡೆಗೆ ಹೋಗಲೆಂದು ನಡೆದುಕೊಂಡು ರಸ್ತೆಯನ್ನು ದಾಟುತ್ತಿದ್ದ ಪಿರ್ಯಾದಿಯ ಅಣ್ಣನಾದ ಗಾಯಾಳು ಸುರೇಶ ತಂದೆ ಮಂಜುನಾಥ ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ಸೆಂಟ್ರಿಂಗ್ ಕೆಲಸ, ಸಾ|| ಕರ್ಕಿ, ರಾಮೇಶ್ವರಕಂಬಿ, ತಾ: ಹೊನ್ನಾವರ ಈತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ತಲೆಗೆ ಹಾಗೂ ಎಡ ಮತ್ತು ಬಲ ಕಣ್ಣಿನ ಹತ್ತಿರ ಗಾಯ ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತಾನೂ ಸಹ ತನ್ನ ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು, ತನ್ನ ತಲೆಗೆ ಹಾಗೂ ಮೈಮೇಲೆ ಅಲ್ಲಲ್ಲಿ ಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ದೇವರಾಯ ತಂದೆ ಮಂಜುನಾಥ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಸೆಂಟ್ರಿಂಗ್ ಕೆಲಸ, ಸಾ|| ಕರ್ಕಿ, ರಾಮೇಶ್ವರಕಂಬಿ, ತಾ: ಹೊನ್ನಾವರ ರವರು ದಿನಾಂಕ: 12-03-2021 ರಂದು 11-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 10/2021, ಕಲಂ: 4,12 The Karanataka Prevenation of Slaughter And Preservation of Cattale Ordinance–2020 ನೇದ್ದರ ವಿವರ...... ನಮೂದಿತ ಆರೋಪಿತರು 1]. ಸಿಕಂದರ್ ತಂದೆ ಅಲ್ಲಾಭಕ್ಷ ರೊಟ್ಟಿವಾಲೆ, ಪ್ರಾಯ 34 ವರ್ಷ, ಸಾ|| ಯಲ್ಲಾಪುರ ನಾಕಾ, ತಾ: ಹಳಿಯಾಳ, 2]. ಮೊಹಮ್ಮದ್ ಯಾಸೀನ್ ತಂದೆ ಅಬ್ದುಲ್ ರಶೀದ್ ಬೇಪಾರಿ, ಸಾ|| ದಲಾಯತ ಗಲ್ಲಿ, ತಾ: ಹಳಿಯಾಳ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 12-03-2021 ರಂದು ಹಳಿಯಾಳದ ದಯಾಲತ್ ಗಲ್ಲಿಯಿಂದ ಆರೋಪಿ 2 ನೇಯವನಿಂದ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೆ ದನದ ಮಾಂಸವನ್ನು ಟಾಟಾ ಏಸ್ ವಾಹನ ನಂ: ಕೆ.ಎ-65/0613 ನೇದರಲ್ಲಿ ತುಂಬಿಕೊಂಡು ಮಾರಾಟ ಮಾಡಿ ಲಾಭಗಳಿಸುವ ಉದ್ದೇಶದಿಂದ ದಾಂಡೇಲಿಗೆ ಸಾಗಾಟ ಮಾಡುತ್ತಿರುವಾಗ ದಿನಾಂಕ: 12-03-2021 ರಂದು ಬೆಳಿಗ್ಗೆ 07-00 ಗಂಟೆಗೆ ದಾಂಡೇಲಿ-ಹಳಿಯಾಳ ರಸ್ತೆಯ ಕೆರವಾಡ ಗ್ರಾಮದ ಕ್ರಾಸಿನಲ್ಲಿ ಪಿರ್ಯಾದಿಯವರು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ಮಾಡಿದಾಗ ಆರೋಪಿ 1 ನೇಯವನು ಸೆರೆ ಸಿಕ್ಕಿದ್ದು ಹಾಗೂ ಆರೋಪಿ 1 ನೇಯವನಿಂದ ದನದ ಮಾಂಸ ಹಾಗೂ ವಾಹನವನ್ನು ಜಪ್ತ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಹಣಮಂತ ಎಸ್. ಬಿರಾದಾರ, ಪಿ.ಎಸ್.ಐ (ಕಾ&ಸು), ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 12-03-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 11/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರವೀಣ ತಂದೆ ಪರಶುರಾಮ ಪಟ್ಟಣ, ಪ್ರಾಯ-24 ವರ್ಷ, ವೃತ್ತಿ-ಬಟ್ಟೆ ಅಂಡಗಿಯಲ್ಲಿ ಕೆಲಸ, ಸಾ|| ಕರ್ಮಿಪೇಟೆ, ಹುಬ್ಬಳ್ಳಿ (ಮೋಟಾರ್ ಸೈಕಲ್ ನಂ: ಕೆ.ಎ-65/ಎಚ್-8865 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 11-03-2021 ರಂದು 17-00 ಗಂಟೆಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-65/ಎಚ್-8865 ನೇದನ್ನು ಹಳಿಯಾಳ ಕಡೆಯಿಂದ ದಾಂಡೇಲಿ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮಾನವಿಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ದಾಂಡೇಲಿ ತಾಲೂಕಿನ ಆಲೂರು ಪಂಪ್ ಹೌಸ್ ಸಮೀಪ ಬಂದು ತಲುಪಿದಾಗ ತನ್ನ ಮೋಟಾರ್ ಸೈಕಲನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದೇ ರಾಜ್ಯ ಹೆದ್ದಾರಿಯ ಪಕ್ಕದ ಕಚ್ಚಾ ರಸ್ತೆಯ ಮೇಲೆ ಸ್ಕಿಡ್ ಆಗಿ ಬಿದ್ದು ಅಪಘಾತ ಪಡಿಸಿಕೊಂಡು ಮೋಟಾರ್ ಸೈಕಲ್ ಹಿಂಬದಿಯಲ್ಲಿ ಕುಳಿತ್ತಿದ್ದ ಪಿರ್ಯಾದಿಗೆ ಬಲ ಮೊಣಕಾಲಿನ ಕೆಳಗೆ ತೀವೃ ಸ್ವರೂಪದ ಗಾಯ ಪಡಿಸಿ, ತಲೆಗೆ ಮತ್ತು ಹಣೆಗೆ ರಕ್ತಗಾಯ ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ಗದ್ದಕ್ಕೆ, ಮುಖಕ್ಕೆ, ಎಡಗೈಗೆ, ಬಲ ಮೊಣಕಾಲಿಗೆ, ಎಡಗಡೆಯ ಕಿವಿಗೆ ಹಾಗೂ ಎದೆಗೆ ಗಾಯನೋವು ಪಡಿಸಿಕೊಂಡು, ತನ್ನ ಹಲ್ಲುಗಳು ಮುರಿಯುವಂತೆ ಮಾಡಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಪ್ರಶಾಂತ ತಂದೆ ರಾಜಕುಮಾರ ಕಲಾಲ್, ಪ್ರಾಯ-27 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ನವ ಅಯೋಧ್ಯಾನಗರ, 4 ನೇ ಕ್ರಾಸ್, ಹಳೇ ಹುಬ್ಬಳ್ಳಿ, ಧಾರವಾಡ ರವರು ದಿನಾಂಕ: 12-03-2021 ರಂದು 18-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 38/2021, ಕಲಂ: 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಚನ್ನವೀರಗೌಡ ತಂದೆ ನಿಂಗನಗೌಡ ಪಾಟೀಲ, ಸಾ|| ಚಿಗಳ್ಳಿ, ತಾ: ಮುಂಡಗೋಡ. ನಮೂದಿತ ಆರೋಪಿತನು ದಿನಾಂಕ: 12-03-2021 ರಂದು ಮಧ್ಯಾಹ್ನ 12-00 ಗಂಟೆಗೆ ಪಿರ್ಯಾದಿಯ ತಾಯಿ ಮತ್ತು ಅವರ ತಂದೆಯವರೊಂದಿಗೆ ಸಾಲಗಾಂವದ ಜಮೀನಿನ ವಿಷಯದಲ್ಲಿ ಜಗಳ ಮಾಡಿ ‘ಮಿಂಡ್ರಿಗೆ ಇಟ್ಟುಕೊಂಡಾಕಿ, ನನ್ನ ಹೆಸರಿಗೆ ಜಮೀನು ಮಾಡಿ ಕೊಡದೇ ಮಿಂಡರ ಹೆಸರಿಗೆ ಮಾಡಿಕೊಡುತ್ತೀಯಾ?’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿರುವಾಗ, ನನ್ನ ಅಜ್ಜ ನಾಗಪ್ಪಾ ಇವರು ‘ನಿನ್ನ ಹೆಸರಿಗೆ ಜಮೀನು ಮಾಡಿಕೊಡುತ್ತೇನೆ’ ಎಂದು ಹೇಳಿದರೂ ಸಹ ಕೇಳದೇ ‘ಜಮೀನನ್ನು ನನ್ನ ಹೆಸರಿಗೆ ಮಾಡದೇ ಇದ್ದಲ್ಲಿ ಮುಂದೊಂದು ದಿವಸ ನಿಮ್ಮೆಲ್ಲರನ್ನೂ ಮುಗಿಸಿಯೇ ಬಿಡುತ್ತೇನೆ’ ಎಂದು ಹೇಳಿ ಮನೆಯಲ್ಲಿದ್ದ ಕತ್ತಿಯಿಂದ ನನ್ನ ತಾಯಿಯ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ಪುನೀತ ತಂದೆ ಚನ್ನವೀರಗೌಡ ಪಾಟೀಲ, ಪ್ರಾಯ-18 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಚಿಗಳ್ಳಿ, ತಾ: ಮುಂಡಗೋಡ ರವರು ದಿನಾಂಕ: 12-03-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 54/2021, ಕಲಂ: 8, 20(b)(ii)(A) N.D.P.S. ACT-1985 ನೇದ್ದರ ವಿವರ...... ನಮೂದಿತ ಆರೋಪಿತ ನಾಗರಾಜ್ ತಂದೆ ಸುಭಾಷ ವಾಸ್ತೆಗೌಡರ, ಪ್ರಾಯ-29 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಶಿವಪುರ, ತಾ: ಹಳಿಯಾಳ. ನಮೂದಿತ ಆರೋಪಿತನು ದಿನಾಂಕ: 12-03-2021 ರಂದು 17-00 ಗಂಟೆಗೆ ಹಳಿಯಾಳ ತಾಲೂಕಿನ ಶಿವಪುರ ಗ್ರಾಮದ ಕೆಂಚಳಾಪುರ ಬಸ್ ಸ್ಟಾಪ್ ಹತ್ತಿರ ತನ್ನ ಅಕ್ರಮ ಲಾಭಕ್ಕಾಗಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದಾಗ ದಾಳಿಯ ಕಾಲಕ್ಕೆ 1). 462 ಗ್ರಾಂ ಹಸಿ ಗಾಂಜಾ, ಅ||ಕಿ|| 4,600/- ರೂಪಾಯಿ, 2). ಕೆಂಪು ಬಣ್ಣದ ಚೀಲ್-01, ಅ||ಕಿ|| 00.00/- ರೂಪಾಯಿ, 3). ನಗದು ಹಣ 300/- ರೂಪಾಯಿ. ಇವುಗಳೊಂದಿಗೆ ದಾಳಿಯ ಕಾಲಕ್ಕೆ ಸೆರೆ ಸಿಕ್ಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಯಲ್ಲಾಲಿಂಗ ಕುನ್ನೂರ, ಪಿ.ಎಸ್.ಐ (ಕಾ&ಸು), ಹಳಿಯಾಳ ಠಾಣೆ ರವರು ದಿನಾಂಕ: 12-03-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 55/2021, ಕಲಂ: 3, 7 ಅಗತ್ಯ ವಸ್ತುಗಳ ಕಾಯ್ದೆ-1955 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮೈನುದ್ದೀನ್ ಅಂಕೋಲೆಕರ, ಸಾ|| ಮಹಮ್ಮದ್ ಅಲಿ ರಸ್ತೆ, ತಾ: ಹಳಿಯಾಳ, 2]. ಮಹಮ್ಮದ್ ಯೂನಸ್ ತಂದೆ ನಿಸಾರ್ ಅಹಮ್ಮದ್ ತಾಮೀಟಕರ, ಪ್ರಾಯ-33 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕರಿಯಮ್ಮ ದೇವಸ್ಥಾನದ ಹತ್ತಿರ, ದೇಶಪಾಂಡೆ ನಗರ, ಹಳಿಯಾಳ ಶಹರ, 3]. ಬಾಬು, ಸಾ|| ಮುಂಬೈಚಾಳಾ, ದಾಂಡೇಲಿ, 4]. ಇರ್ಪಾನ್ ಮಜೀದ್ ಸೌದತ್ತಿ, ಸಾ|| ಖಾಜಿಗಲ್ಲಿ, ತಾ: ಹಳಿಯಾಳ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನ ನಿರ್ದೇಶನದಂತೆ ಆರೋಪಿ 2, 3 ಹಾಗೂ 4 ನೇಯವರು ಸರ್ಕಾರದಿಂದ ವಿತರಣೆಯಾಗುವ 20,860/- ರೂಪಾಯಿ ಮೌಲ್ಯದ 596.25 ಕೆ.ಜಿ ತೂಕದ ಪಡಿತರ ಅಕ್ಕಿ ಮತ್ತು 1,820/- ರೂಪಾಯಿ ಮೌಲ್ಯದ 52.15 ಕೆ.ಜಿ ತೂಕದ ಗೋಧಿಯನ್ನು ದಾಂಡೇಲಿಯಲ್ಲಿ ಬಡಜನರಿಂದ ತಮ್ಮ ಅಕ್ರಮ ಲಾಭಕ್ಕಾಗಿ ಖರೀದಿಸಿ, ಮಾರಾಟ ಮಾಡುವ ಉದ್ದೇಶದಿಂದ ಅವುಗಳನ್ನು ಪ್ಲ್ಯಾಸ್ಟಿಕ್ ಚೀಲಗಳಲ್ಲಿ ತುಂಬಿ, ದಿನಾಂಕ: 12-03-2021 ರಂದು ಆರೋಪಿ 2 ನೆಯವನು ಟಾಟಾ ಏಸ್ ವಾಹನ ನಂ: ಕೆ.ಎ-25/ಸಿ-7125 ನೇದರ ಮೇಲೆ ಯಾವುದೇ ದಾಖಲೆ ಇಲ್ಲದೇ ದಾಂಡೇಲಿಯಿಂದ ಹಳಿಯಾಳಕ್ಕೆ ಯಡೋಗಾ ಗ್ರಾಮದ ಮಾರ್ಗದಿಂದ ಸಾಗಾಟ ಮಾಡುತ್ತಿದ್ದಾಗ ಸಮಯ 19-40 ಗಂಟೆಯ ಸುಮಾರಿಗೆ ಹಳಿಯಾಳ ಶಹರದ ಕಿಲ್ಲಾ ಸರ್ಕಲ್ ಹತ್ತಿರ ಸೆರೆ ಸಿಕ್ಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ರಾಮಪ್ಪ ಮೇತ್ರಿ, ಪ್ರಾಯ-40 ವರ್ಷ, ವೃತ್ತಿ-ಆಹಾರ ನಿರೀಕ್ಷಕರು, ಹಳಿಯಾಳ, ಸಾ|| ಮನೆ ನಂ: 704, ನವಗ್ರಾಮ, ಬೇವಾಡಿ ಗೌಟನ್, ದಾಂಡೇಲಿ ರವರು ದಿನಾಂಕ: 12-03-2021 ರಂದು 22-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕe:- 12-03-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

 

 

ಇತ್ತೀಚಿನ ನವೀಕರಣ​ : 13-03-2021 10:00 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080