Daily District Crime Report
Date:- 12-05-2021
at 00:00 hrs to 24:00 hrs
ಅಂಕೋಲಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 84/2021, ಕಲಂ: 323, 341, 355, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಸಿದ್ದೇಶ ತಂದೆ ಪ್ರಕಾಶ ರೇವಣಕರ, ಪ್ರಾಯ-37 ವರ್ಷ, 2]. ಶ್ರೀಮತಿ ಮಾಯಾ ಪ್ರಕಾಶ ರೇವಣಕರ, ಪ್ರಾಯ-57 ವರ್ಷ, ಸಾ|| ಕಾತ್ಯಾಯಿನಿ ದೇವಸ್ಥಾನದ ರಸ್ತೆ, ಅವರ್ಸಾ, ತಾ: ಅಂಕೋಲಾ. ಈ ನಮೂದಿತ ಆರೋಪಿತರು ದಿನಾಂಕ: 12-05-2021 ರಂದು ಬೆಳಿಗ್ಗೆ ಪಿರ್ಯಾದಿಯವರು ಸ್ಕೂಟರ್ ಮೇಲೆ ತರಕಾರಿ ತರಲು ಅವರ್ಸಾ ಮಾರುಕಟ್ಟೆಗೆ ಹೋಗಲು ತಮ್ಮ ಮನೆಯ ಗೇಟ್ ಹಾಕಿ ತಮ್ಮ ಸ್ಕೂಟರ್ ಬಳಿ ಹೋಗುತ್ತಿದ್ದಾಗ ಆರೋಪಿ 1 ನೇಯವನು ಅವಾಚ್ಯವಾಗಿ ಬೈಯ್ಯುತ್ತಾ ಬಂದು ಪಿರ್ಯಾದಿಯವರಿಗೆ ಅಡ್ಡಗಟ್ಟಿ ಕೈಯಿಂದ ಹೊಡೆದಿರುತ್ತಾನೆ. ಅಲ್ಲದೇ ಪಿರ್ಯಾದಿಯವರಿಗೆ ಆರೋಪಿತೆ 2 ನೇಯವಳು ಬಂದು ಪಿರ್ಯಾದಿಗೆ ಕೈಯಿಂದ ಹೊಡೆದಿರುತ್ತಾಳೆ. ಆಗ ಆರೋಪಿ 1 ನೇಯವನು ಚಪ್ಪಲಿಯಿಂದ ಪಿರ್ಯಾದಿಯವರಿಗೆ ಹೊಡೆದಿರುತ್ತಾನೆ. ನಂತರ ಪಿರ್ಯಾದಿಯವರಿಗೆ ‘ಜೀವಂತ ಇರಲು ಬಿಡುವುದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿ ‘ಬೋಸಡಿಚ್ಚಾ, ರಾಂಡಾ ಪುತ್ತಾ’ ಅಂತಾ ಅವಾಚ್ಯವಾಗಿ ಬೈಯ್ದಿರುತ್ತಾರೆ, ಅಲ್ಲದೇ ಪಿರ್ಯಾದಿಯವರ ಅಣ್ಣನ ಮನೆಯ ಗೇಟ್ ಹತ್ತಿರ ಹೋಗಿ ಅವಾಚ್ಯವಾಗಿ ಬೈಯ್ದಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಶೋಕ ತಂದೆ ವೆಂಕಟರಮಣ ರೇವಣಕರ, ಪ್ರಾಯ-68 ವರ್ಷ, ವೃತ್ತಿ-ಅಕ್ಕಸಾಲಿಗ, ಸಾ|| ಕಾತ್ಯಾಯಿನಿ ದೇವಸ್ಥಾನದ ರಸ್ತೆ, ಅವರ್ಸಾ, ತಾ: ಅಂಕೋಲಾ ರವರು ದಿನಾಂಕ: 12-05-2021 ರಂದು 18-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಅಂಕೋಲಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 85/2021, ಕಲಂ: 323, 341, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಅಶೋಕ ವೆಂಕಟ್ರಮಣ ರೇವಣಕರ, ಪ್ರಾಯ-67 ವರ್ಷ, ವೃತ್ತಿ-ಅಕ್ಕಸಾಲಿಗ, ಸಾ|| ಕಾತ್ಯಾಯಿನಿ ದೇವಸ್ಥಾನ ರಸ್ತೆ, ಅವರ್ಸಾ, ತಾ: ಅಂಕೋಲಾ, 2]. ಶ್ರೀಮತಿ ಜಯಶ್ರೀ ಗಂಡ ಅಶೋಕ ರೇವಣಕರ, ಪ್ರಾಯ-55 ವರ್ಷ, ಸಾ|| ಕಾತ್ಯಾಯಿನಿ ದೇವಸ್ಥಾನದ ರಸ್ತೆ, ಅವರ್ಸಾ, ತಾ: ಅಂಕೋಲಾ. ಈ ನಮೂದಿತ ಆರೋಪಿತರು ದಿನಾಂಕ: 12-05-2021 ರಂದು ಬೆಳಿಗ್ಗೆ ಸುಮಾರು 07-00 ಗಂಟೆಗೆ ಪಿರ್ಯಾದಿಯವರು ವಾಕಿಂಗ್ ಮಾಡುತ್ತಿದ್ದಾಗ ಪಿರ್ಯಾದಿಯವರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈಯ್ದಿರುತ್ತಾರೆ. ಹಾಗೆಯೇ ಸುಮಾರು 09-30 ಗಂಟೆಗೆ ಪಿರ್ಯಾದಿಯವರ ಮಗ ಗಾಯಾಳು ಸಿದ್ದೇಶ ರೇವಣಕರ ಈತನು ಪಿರ್ಯಾದಿಯವರಿಗೆ ‘ಯಾಕೆ ಬೈಯ್ದಿರಿ?’ ಅಂತಾ ಕೇಳಲು ಹೋದಾಗ ಆರೋಪಿ 1 ನೇಯವನು ಪಿರ್ಯಾದಿಯವರ ಮಗನಿಗೆ ಸುಮಾರು 10 ಸಾರಿ ಕೈಯಿಂದ ಹೊಡೆದಿರುತ್ತಾನೆ. ಆಗ ಪಿರ್ಯಾದಿಯವರು ಬಿಡಿಸಲು ಹೋದಾಗ ಆರೋಪಿ 1 ನೇಯವನು ಪಿರ್ಯಾದಿಯವರಿಗೆ ಅಡ್ಡಗಟ್ಟಿ ಮುಷ್ಠಿ ಕಟ್ಟಿ ಕೈಯಿಂದ ಪಿರ್ಯಾದಿಯವರ ಮುಖಕ್ಕೆ, ತಲೆಗೆ ಹೊಡೆದಿದ್ದಲ್ಲದೇ, ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಪಿರ್ಯಾದಿಯವರ ಎಡಗೈಯನ್ನು ತಿರುವಿರುತ್ತಾನೆ. ಅಲ್ಲದೇ ಕೆಳಗೆ ಕೆಡವಿರುತ್ತಾನೆ. ಆಗ ಅಕ್ಕಪಕ್ಕದವರು ಬಂದಾಗ ಆರೋಪಿತನು ಪಿರ್ಯಾದಿಯವರಿಗೆ ‘ಸಾಯಿಸದೇ ಬಿಡುವುದಿಲ್ಲ’ ಎಂದು ಜೀವದ ಬೆದರಿಕೆ ಹಾಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಮಾಯಾ ಗಂಡ ಪ್ರಕಾಶ ರೇವಣಕರ, ಪ್ರಾಯ-56 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಕಾತ್ಯಾಯಿನಿ ದೇವಸ್ಥಾನದ ರಸ್ತೆ, ಅವರ್ಸಾ, ತಾ: ಅಂಕೋಲಾ ರವರು ದಿನಾಂಕ: 12-05-2021 ರಂದು 19-25 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಬನವಾಸಿ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 49/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಕೆಂಚಪ್ಪ ತಂದೆ ಸಿದ್ದಪ್ಪ ನೀಲಗುರಿ, ಪ್ರಾಯ-26 ವರ್ಷ, ಸಾ|| ಸುರಪಗಟ್ಟಿ, ಪೋ: ಕಬನೂರ, ತಾ: ಶಿಗ್ಗಾಂವ, ಜಿ: ಹಾವೇರಿ (ಟಾಟಾ ಇಂಡಿಕಾ ವಿಸ್ತಾ ಕಾರ್ ನಂ: ಕೆ.ಎ-27/ಬಿ-0930 ನೇದರ ಚಾಲಕ). ಈತನು ದಿನಾಂಕ: 12-05-2021 ರಂದು 05-00 ಗಂಟೆಗೆ ದಾಸನಕೊಪ್ಪ-ಬನವಾಸಿ ರಸ್ತೆಯ ಹೆಬ್ಬತ್ತಿ ಕ್ರಾಸ್ ಬಳಿ ತನ್ನ ಟಾಟಾ ಇಂಡಿಕಾ ವಿಸ್ತಾ ಕಾರ್ ನಂ: ಕೆ.ಎ-27/ಬಿ-0930 ನೇದನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ, ಕಾರನ್ನು ರಸ್ತೆಯ ಪಕ್ಕದ ಹೊಂಡಕ್ಕೆ ಬೀಳಿಸಿ ರಸ್ತೆ ಅಪಘಾತ ಪಡಿಸಿ, ಕಾರಿನಲ್ಲಿದ್ದ ಪಿರ್ಯಾದಿಯ ತಲೆಯ ಹಿಂಭಾಗ ಮತ್ತು ಎಡಗಾಲಿಗೆ ರಕ್ತಗಾಯ ಪಡಿಸಿದ್ದಲ್ಲದೇ, ಆರೋಪಿ ಚಾಲಕನು ತನಗೂ ಸಹ ಗಲ್ಲದ ಕೆಳಭಾಗಕ್ಕೆ ರಕ್ತಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮಹೇಶ ತಂದೆ ಪರಸಪ್ಪ ಸೊರಟೂರ, ಪ್ರಾಯ-23 ವರ್ಷ, ವೃತ್ತಿ-ಚಾಲಕ, ಸಾ|| ಮನೆ ನಂ: 155, ಸುರಪಗಟ್ಟಿ, ಪೋ: ಕಬನೂರ, ತಾ: ಶಿಗ್ಗಾಂವ, ಜಿ: ಹಾವೇರಿ ರವರು ದಿನಾಂಕ: 12-05-2021 ರಂದು 09-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಬನವಾಸಿ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 50/2021, ಕಲಂ: 66(ಸಿ), 67 ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ಹಾಗೂ ಕಲಂ: 292 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ ಅಪರಿಚಿತ ಕಿಡಿಗೇಡಿಗಳಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ನಮೂದಿತ ಆರೋಪಿತರು ಕಳೆದ 2-3 ತಿಂಗಳ ಹಿಂದಿನಿಂದಲೂ ಪಿರ್ಯಾದಿಯವರಂತೆ ನಟಿಸಿ ಪಿರ್ಯಾದಿಯ ಹೆಸರಿನಲ್ಲಿ afaaa8013 & Silent_hart_3227 ಎಂಬ ಹೆಸರಿನ ಸಾಮಾಜಿಕ ಮಾಧ್ಯಮವಾದ Instagram ನಲ್ಲಿ ಸುಳ್ಳು ಐಡಿಯನ್ನು ತಯಾರಿಸಿ, ಪಿರ್ಯಾದಿಯ ಭಾವಚಿತ್ರವನ್ನು ಬದಲಾಯಿಸಿ ಅಶ್ಲೀಲ ಭಾವಚಿತ್ರಗಳನ್ನು Instagram ನಲ್ಲಿ ಹರಿಬಿಟ್ಟಿದ್ದು, ಈ ಕುರಿತು ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಶರ್ಫಾ ತಂದೆ ಅಬ್ದುಲ್ ಗಫಾರ್ ಶೇಖ್, ಪ್ರಾಯ-18 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಹರೀಶಿ ಕ್ರಾಸ್, ಕೆರೆಕೊಪ್ಪ ಬಸ್ ನಿಲ್ದಾಣದ ಬಳಿ, ತಾ: ಶಿರಸಿ ರವರು ದಿನಾಂಕ: 12-05-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
Daily District U.D Report
Date:- 12-05-2021
at 00:00 hrs to 24:00 hrs
ಯಲ್ಲಾಪುರ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 11/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಗಜಾನನ ಹೆಗಡೆ, ಪ್ರಾಯ-80 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹಾಸಣಗಿ, ತಾ: ಯಲ್ಲಾಪುರ. ಪಿರ್ಯಾದಿಯವರ ತಂದೆಯಾದ ಇವರು ಒಂದು ವರ್ಷದ ಹಿಂದೆ ಕಿಡ್ನಿ ಸ್ಟೋನ್ ಆಗಿ ಮೂತ್ರ ಬ್ಲಾಕ್ ಆಗುತ್ತಿರುವುದರಿಂದ ಮಂಗಳೂರಿನ ಕೆ.ಎಸ್. ಹೆಗಡೆ ಆಸ್ಪತ್ರೆಗೆ ಹೋಗಿ ಶಸ್ತ್ರ ಚಿಕಿತ್ಸೆ ಮಾಡಿಕೊಂಡು ಬಂದರೂ ಸಹ ಸಂಪೂರ್ಣ ಗುಣಮುಖವಾಗದೇ ನೋವಿನಿಂದ ಬಳಲುತ್ತಿದ್ದವನು, ಕಳೆದ ಒಂದು ವಾರದ ಹಿಂದೆ ಮೃತನ ಹೆಂಡತಿ ನ್ಯುಮೋನಿಯಾ ಖಾಯಿಲೆಯಿಂದ ಮೃತಪಟ್ಟಿದ್ದನ್ನು ಹಾಗೂ ತನ್ನ ಖಾಯಿಲೆಗೆ ಶಸ್ತ್ರ ಚಿಕಿತ್ಸೆ ಮಾಡಿಕೊಂಡರೂ ಗುಣವಾಗದೇ ಇರುವುದರಿಂದ ಮನನೊಂದು ದಿನಾಂಕ: 11-05-2021 ರಂದು ಸಾಯಂಕಾಲ 04-00 ಗಂಟೆಯಿಂದ ದಿನಾಂಕ: 12-05-2021 ರಂದು ಬೆಳಿಗ್ಗೆ 10-00 ಗಂಟೆಯ ನಡುವಿನ ಅವಧಿಯಲ್ಲಿ ಹಾಸಣಗಿ ಗ್ರಾಮದ ತಮ್ಮ ತೋಟದಲ್ಲಿರುವ ಬಾವಿಯಲ್ಲಿ ಹಾರಿ ನೀರನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ರಾಮಚಂದ್ರ ತಂದೆ ಗಜಾನನ ಹೆಗಡೆ, ಸಾ|| ಹಾಸಣಗಿ, ತಾ: ಯಲ್ಲಾಪುರ ರವರು ದಿನಾಂಕ: 12-05-2021 ರಂದು 14-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 02/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಜಲಧರಸಿಂಗ್ ತಂದೆ ರೋಹಿನಿಕಾಂತಸಿಂಗ್, ಪ್ರಾಯ-41 ವರ್ಷ, ಸಾ|| ಹುಲ್ಲುಂಗ ಗ್ರಾಮ, ಪೋ: ಬಾಮಣಿ, ಬನ್ ಬಾಜಾರ್, ಪುರಲಿಯಾ, ಪಶ್ಚಿಮ ಬಂಗಾಳ. ಈತನು ತನ್ನ ಸ್ನೇಹಿತನಿಗೆ ಕೊರೋನಾ ಪಾಸಿಟಿವ್ ಬಂದಿರುವುದರಿಂದ ಮೃತನಿಗೂ ಸಹ ಕೊರೋನಾ ಪರೀಕ್ಷೆಯ ಕುರಿತು ವೈದ್ಯರು ಸ್ವ್ಯಾಬ್ ಸಂಗ್ರಹಿಸಿದ್ದು, ಇದರಿಂದ ಮೃತನು ತನಗೂ ಸಹ ಕೊರೋನಾ ಪಾಸಿಟಿವ್ ಬರಬಹುದು ಅಂತ ತಿಳಿದು ಅಥವಾ ಬೇರೆ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು, ಹೆದರಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 05-05-2021 ರಂದು ಬೆಳಿಗ್ಗೆ 10-00 ಗಂಟೆಯಿಂದ ದಿನಾಂಕ: 12-05-2021 ರಂದು ಮಧ್ಯಾಹ್ನ 12-00 ಗಂಟೆಯ ನಡುವಿನ ಅವಧಿಯಲ್ಲಿ ಸಾತ್ಮನಿ ಗ್ರಾಮಕ್ಕೆ ಸಂಬಂಧಪಡುವ ಸಿದ್ಧನಗುಡ್ಡದ ಹತ್ತಿರ ಅರಣ್ಯದಲ್ಲಿ ಒಂದು ಮರಕ್ಕೆ ತನ್ನ ಕೆಂಪು ಬಣ್ಣದ ಟವೆಲಿನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟು, ಮೃತದೇಹವು ಕೊಳೆತ ಸ್ಥಿತಿಯಲ್ಲಿ ಸಿಕ್ಕಿದ್ದು, ಇದರ ಹೊರತು ಸದ್ರಿಯವನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ಎಸ್. ಕೆ. ಮುರ್ಸಾದ್ ಅನಸಾರಿ ತಂದೆ ಎಸ್. ಕೆ. ಮುಸ್ತಾರಿಕಾ ಅನಸಾರಿ, ಪ್ರಾಯ-28 ವರ್ಷ, ವೃತ್ತಿ-ಸೆಂಟ್ರಿಂಗ್ ಕೆಲಸ, ಸಾ|| ಬೆಲೂಟ್ ಜಾಮಾ ಮಸೀದ್ ಹತ್ತಿರ, ಬೆಲೂಟ ಗ್ರಾಮ, ಪೋ: ನಾತರಡಾಂಗ, ಇಂದಪೂರ, ತಾ: ಖಾತಡಾ ಜಿ: ಬಾಕೂಡಾ (ಬಂಕುರ), ಪಶ್ಚಿಮ ಬಂಗಾಳ ರವರು ದಿನಾಂಕ: 12-05-2021 ರಂದು 14-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======