ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 12-11-2021
at 00:00 hrs to 24:00 hrs
ಚಿತ್ತಾಕುಲಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 54/2021, ಕಲಂ: 279, 337, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಇಮ್ತಿಯಾಜ್ ಅಹ್ಮದ್ ತಂದೆ ಇಬ್ರಾಹಿಂ ಶೇಖ್, ಪ್ರಾಯ-52 ವರ್ಷ, ಸಾ|| ಹಬ್ಬುವಾಡ, ಕಾರವಾರ (ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-31/ಎಫ್-1399 ನೇದರ ಚಾಲಕ). ದಿನಾಂಕ: 12-11-2021 ರಂದು 12-30 ಗಂಟೆಯ ಸುಮಾರಿಗೆ ಪಿರ್ಯಾದಿಯು ಕಾರವಾರದಿಂದ ಖಾನಾಪುರಕ್ಕೆ ಹೋಗಲು ತಮ್ನ ಮೋಟಾರ್ ಸೈಕಲ್ ನಂ: ನಂ: ಕೆ.ಎ-15/ಕೆ-5275 ನೇದರ ಮೇಲೆ ತಾನು ಮತ್ತು ಮಲಗೌಡ ಚಂಚಿಪಾಟೀಲ ಇಬ್ಬರೂ ಸೇರಿಕೊಂಡು ಹೋಗುತ್ತಿರುವಾಗ ಅಸ್ನೋಟಿಯನ್ನು ದಾಟಿ ಸ್ವಲ್ಪ ಮುಂದೆ ಬಿರಕಿಹೊಳೆ ಬ್ರಿಡ್ಜ್ ಹತ್ತಿರ ಬಂದಾಗ ಎದುರುಗಡೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-31/ಎಫ್-1399 ನೇದರ ಆರೋಪಿ ಚಾಲಕನು ತನ್ನ ಬಸ್ಸನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಎದುರುಗಡೆಯಿಂದ ಅಂದರೆ ಕದ್ರಾ ಕಡೆಯಿಂದ ಬಸ್ಸನ್ನು ರಸ್ತೆಯ ಮಧ್ಯದಲ್ಲಿ ಚಲಾಯಿಸಿಕೊಂಡು ಬಂದವನು, ಒಮ್ಮೇಲೆ ನಮ್ಮ ಎಡಬದಿಗೆ ಬಂದು ಬೆಳಗಾವಿಯ ಕಡೆಗೆ ಹೋಗುತ್ತಿದ್ದ ನಮ್ಮ ಮೋಟಾರ್ ಸೈಕಲ್ ನಂ: ಕೆ.ಎ-15/ಕೆ-5275 ನೇದಕ್ಕೆ ಬಸ್ಸಿನ ಹಿಂಬದಿಯ ಬಲಭಾಗದ ಯಾವುದೋ ಭಾಗವನ್ನು ತಾಗಿಸಿ ಅಫಘಾತ ಪಡಿಸಿ, ಮೋಟಾರ್ ಸೈಕಲನ್ನು ರಸ್ತೆಯ ಮೇಲೆ ಬಲಬದಿಗೆ ಬೀಳುವಂತೆ ಮಾಡಿ, ಮೋಟಾರ್ ಸೈಕಲ್ ಹಿಂಬದಿ ಸವಾರನಾದ ಪಿರ್ಯಾದಿಯ ಬಲಗೈಯ ಅಂಗೈಗೆ ತೆರಚಿದ ಗಾಯ ಪಡಿಸಿ ಹಾಗೂ ಮೋಟಾರ್ ಸೈಕಲ್ ಸವಾರ ಮಲಗೌಡ ತಂದೆ ಗುರುಸಿದ್ಧ ಚಂಚಿಪಾಟೀಲ, ಪ್ರಾಯ-21 ವರ್ಷ, ಸಾ|| ಅಶೋಕನಗರ, ತಾ: ಖಾನಾಪುರ, ಜಿ: ಬೆಳಗಾವಿ, ಈತನಿಗೆ ಬಲಬದಿಯ ಶರೀರಕ್ಕೆ ಮತ್ತು ಹೊಟ್ಟೆಯ ಭಾಗಕ್ಕೆ ಗಂಭೀರವಾದ ಗಾಯ ಪಡಿಸಿದವನಿಗೆ ಚಿಕಿತ್ಸೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆ, ಕಾರವಾರಕ್ಕೆ ದಾಖಲಿಸಿ ಚಿಕಿತ್ಸೆಯಲ್ಲಿದ್ದವನು, ಚಿಕಿತ್ಸೆ ಫಲಕಾರಿಯಾಗದೇ ಅಪಘಾತದಿಂದ ಆದ ಗಾಯಗಳಿಂದಲೇ ಮಲಗೌಡ ಈತನು ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ವಿನೋದ ತಂದೆ ಮಾರುತಿ ಪಾಟೀಲ್, ಪ್ರಾಯ-23 ವರ್ಷ, ವೃತ್ತಿ-ನರ್ಸಿಂಗ್ ವಿದ್ಯಾರ್ಥಿ, ಸಾ|| ಚಂದರಗಿ, ತಾ: ರಾಮದುರ್ಗ, ಜಿ: ಬೆಳಗಾವಿ ರವರು ದಿನಾಂಕ: 12-11-2021 ರಂದು 19-40 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಚಿತ್ತಾಕುಲಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 55/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಲಗೌಡ ತಂದೆ ಗುರುಸಿದ್ಧ ಚಂಚಿಪಾಟೀಲ, ಪ್ರಾಯ-21 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಅಶೋಕನಗರ, ತಾ: ಖಾನಾಪುರ, ಜಿ: ಬೆಳಗಾವಿ (ಮೋಟಾರ್ ಸೈಕಲ್ ನಂ: ಕೆ.ಎ-15/ಕೆ-5275 ನೇದರ ಸವಾರ). ದಿನಾಂಕ: 12-11-2021 ರಂದು ಪಿರ್ಯಾದಿಯು ತನ್ನ ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-31/ಎಫ್-1399 ನೇದನ್ನು ಚಲಾಯಿಸಿಕೊಂಡು ಮಲ್ಲಾಪುರ ಕಡೆಯಿಂದ ಕಾರವಾರ ಕಡೆಗೆ ಬರುತ್ತಿರುವಾಗ ಅಸ್ನೋಟಿ ಸೇತುವೆಯ ಹತ್ತಿರ ತಲುಪಿದಾಗ 12-30 ಗಂಟೆಗೆ ಕಾರವಾರ ಕಡೆಯಿಂದ ವೇಗವಾಗಿ ಬಂದ ಮೋಟಾರ್ ಸೈಕಲ್ ನಂ: ಕೆ.ಎ-15/ಕೆ-5275 ನೇದರ ಆರೋಪಿತ ಸವಾರನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ತನ್ನ ಮೋಟಾರ್ ಸೈಕಲನ್ನು ಚಲಾಯಿಸಿಕೊಂಡು ಬಂದು ಮುಂದಿನಿಂದ ಬರುತಿದ್ದ ಬಸ್ಸನ್ನು ನೋಡಿ ಮೋಟಾರ್ ಸೈಕಲಿನ ನಿಯಂತ್ರಣ ತಪ್ಪಿ, ರಸ್ತೆಯ ಬದಿಗೆ ಬಿದ್ದು ಗಾಯ ಮಾಡಿಕೊಂಡಿರುತ್ತಾನೆ. ಪಿರ್ಯಾದಿಯವರು ಸದರಿ ಬಸ್ಸನ್ನು ನಿಲ್ಲಿಸಿ, ಪಿರ್ಯಾದಿ ಮತ್ತು ಕಂಡಕ್ಟರ್ ಮತ್ತು ನಾಲ್ಕು ಜನರು ಸೇರಿ ನೀರು ಉಪಚಾರ ಮಾಡಿಸಿ, ಆರೋಪಿ ಮೋಟಾರ್ ಸೈಕಲ್ ಸವಾರನನ್ನು ಮಲ್ಲಾಪುರ ಕಡೆಯಿಂದ ಬರುತಿದ್ದ ಕಾರನ್ನು ನಿಲ್ಲಿಸಿ, ಆರೋಪಿತನನ್ನು ಮತ್ತು ಅವನ ಸ್ನೇಹಿತನನ್ನು ಕಾರವಾರದ ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದು, ಆರೋಪಿ ಮೋಟಾರ್ ಸೈಕಲ್ ಸವಾರನು ಅತೀವೇಗವಾಗಿ ಹಾಗೂ ನಿಷ್ಕಾಳಜಿಯಿಂದ ತನ್ನ ಮೋಟಾರ್ ಸೈಕಲನ್ನು ಚಲಾಯಿಸಿ ಬಿದ್ದು ಮೃತಪಟ್ಟಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಇಮ್ತಿಯಾಜ್ ಅಹ್ಮದ್ ತಂದೆ ಇಬ್ರಾಹಿಂ ಶೇಖ್, ಪ್ರಾಯ-52 ವರ್ಷ, ಸಾ|| ಹಬ್ಬುವಾಡ, ಕಾರವಾರ ರವರು ದಿನಾಂಕ: 12-11-2021 ರಂದು 23-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮುರ್ಡೇಶ್ವರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 95/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಾಗರಾಜ ತಂದೆ ಧರ್ಮಾ ನಾಯ್ಕ, ಸಾ|| ಹಿರೇದೊಮ್ಮಿ, ಮಾವಳ್ಳಿ-1, ಮುರ್ಡೇಶ್ವರ, ತಾ: ಭಟ್ಕಳ (ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-4119 ನೇದರ ಸವಾರ). ದಿನಾಂಕ: 12-11-2021 ರಂದು ಪಿರ್ಯಾದಿಯು ತನ್ನ ಮಕ್ಕಳನ್ನು ಹರಿಜನಕೇರಿಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಟ್ಟು ವಾಪಸ್ ತನ್ನ ಹೊಸದಾದ ಮೋಟಾರ್ ಸೈಕಲನ್ನು ನ್ಯಾಷನಲ್ ಕಾಲೋನಿಯಿಂದ ಬಸ್ತಿಮಕ್ಕಿ ಕಡೆಗೆ ಡಾಂಬರ್ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಬರುತ್ತಿರುವಾಗ ಬೆಳಿಗ್ಗೆ 09-00 ಗಂಟೆಗೆ ನ್ಯಾಷನಲ್ ಕಾಲೋನಿಯ ಮೊಹಿದ್ದೀನ್ ಮಸೀದಿಯ ಹತ್ತಿರ ಹಿಂದುಗಡೆಯಿಂದ ಬರುತ್ತಿದ್ದ ಆರೋಪಿತನು ತಾನು ಚಲಾಯಿಸುತ್ತಿದ್ದ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-4119 ನೇದನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ಪಿರ್ಯಾದಿಯ ಮೋಟಾರ್ ಸೈಕಲಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಅಪಘಾತದಿಂದ ಇಬ್ಬರೂ ಮೋಟಾರ್ ಸೈಕಲ್ ಸವಾರರು ರಸ್ತೆಯ ಮೇಲೆ ಬಿದ್ದು, ಪಿರ್ಯಾದಿಗೆ ತಲೆಯ ಹಿಂಭಾಗಕ್ಕೆ ಭಾರೀ ಸ್ವರೂಪದ ಗಾಯನೋವು ಪಡಿಸಿ ಹಾಗೂ ಸೊಂಟಕ್ಕೆ ಮತ್ತು ಬೆನ್ನಿಗೆ ಒಳನೋವು ಪಡಿಸಿದ್ದಲ್ಲದೇ, ಆರೋಪಿ ಸವಾರನು ತಾನೂ ಕೂಡಾ ತಲೆಗೆ ರಕ್ತಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಹನುಮಂತ ತಂದೆ ಭೈರಾ ನಾಯ್ಕ, ಪ್ರಾಯ-39 ವರ್ಷ, ವೃತ್ತಿ-ಸೆಂಟ್ರಿಂಗ್ ಕೆಲಸ, ಸಾ|| ಗದ್ದೆಬೈಲ್ ಮನೆ, ಜನತಾ ಕಾಲೋನಿ, ಮಾವಳ್ಳಿ-1, ಮುರ್ಡೇಶ್ವರ, ತಾ: ಭಟ್ಕಳ ರವರು ದಿನಾಂಕ: 12-11-2021 ರಂದು 20-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 133/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರವಿಕುಮಾರ ಟಿ. ಜೆ. ತಂದೆ ಜವರಿಹಾ, ಸಾ: ತಾವರಕೆರೆ ಕೊಪ್ಪಲು, ಅಬ್ಬುರ, ಮಾಚಗೌಡನಹಳ್ಳಿ, ಹಾಸನ (ಟಾಟಾ ಕಂಟೇನರ್ ವಾಹನ ನಂ: ಕೆ.ಎ-19/ಎ.ಬಿ-9426 ನೇದರ ಚಾಲಕ). ಈತನು ದಿನಾಂಕ: 11-11-2021 ರಂದು 23-30 ಗಂಟೆಗೆ ತಾನು ಚಲಾಯಿಸಿಕೊಂಡು ಬಂದ ಟಾಟಾ ಕಂಟೇನರ್ ವಾಹನ ನಂ: ಕೆ.ಎ-19/ಎ.ಬಿ-9426 ನೇದನ್ನು ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನು, ಸರ್ಪನಕಟ್ಟಾ ಹತ್ತಿರ ಎದುರುಗಡೆಯಿಂದ ಅಂದರೆ ಭಟ್ಕಳ ಕಡೆಯಿಂದ ಕುಂದಾಪುರ ಕಡೆಗೆ ಪಿರ್ಯಾದಿಯು ಚಲಾಯಿಸಿಕೊಂಡು ಹೋಗುತ್ತಿದ್ದ ಟಾಟಾ ಲಾರಿ ನಂ: ಎಮ್.ಎಚ್-11/ಸಿ.ಎಚ್-4573 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಈ ಅಪಘಾತದಲ್ಲಿ ಎರಡು ವಾಹನಗಳನ್ನು ಜಖಂಗೊಳಿಸಿದಲ್ಲದೇ, ಆರೋಪಿ ಚಾಲಕನು ತನ್ನ ಎಡಗೈಗೆ ಪೆಟ್ಟು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಯುವರಾಜ ತಂದೆ ಅರುಣ ಚೌವಾಣ್, ಪ್ರಾಯ-21 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| ದಹಿಗಾಂವ್, ಸತಾರಾ, ಕೋರೆಗಾಂವ್, ಮಹಾರಾಷ್ಟ್ರ ರವರು ದಿನಾಂಕ: 12-11-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಯಲ್ಲಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 197/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಯೋಗೇಶ ತಂದೆ ಬಬಣ ಸಿಂಧೆ. ಪ್ರಾಯ-25 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| ಜಿರಫ್ ಬಾಡಿ, ತಾ: ಪಲ್ಟನ್, ಜಿ: ಸಾತಾರಾ, ಮಹಾರಾಷ್ಟ್ರ ರಾಜ್ಯ (ಲಾರಿ ನಂ: ಎಮ್.ಎಚ್-46/ಎ.ಆರ್-5165 ನೇದರ ಚಾಲಕ). ಈತನು ದಿನಾಂಕ: 12-11-2021 ರಂದು ಬೆಳಗಿನ ಜಾವ 00-45 ಗಂಟೆಗೆ ಯಲ್ಲಾಪುರ ಪಟ್ಟಣದ ಗಾಂಧಿ ಚೌಕ್ ದಲ್ಲಿ ಹಾಯ್ದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಲಾರಿ ನಂ: ಎಮ್.ಎಚ್-46/ಎ.ಆರ್-5165 ನೇದನ್ನು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ತನ್ನ ಮುಂದೆ ರಸ್ತೆಯ ಎಡಬದಿಯ ಕಚ್ಚಾ ರಸ್ತೆಯಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುತ್ತಿದ್ದ ಪಿರ್ಯಾದಿಯವರ ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-26/ಎಫ್-1042 ನೇದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಬಸ್ಸಿನಲ್ಲಿದ್ದ ನಿರ್ವಾಹಕನಾದ ಪಿರ್ಯಾದಿಗೆ ಮತ್ತು ಪ್ರಯಾಣಿಕ ಸಾಕ್ಷಿದಾರರಾದ ಶ್ರೀ ವಿಜಯ ತಂದೆ ವಿಠ್ಠಲ್ ಶೆಟ್ಟಿ, ಶ್ರೀ ಪ್ರಭಾಕರ ತಂದೆ ರಾಜು ಶೆಟ್ಟಿ, ಶ್ರೀ ಸೂರಜ್ ತಂದೆ ಕಾಳಪ್ಪಾ ಶೆಟ್ಟಿ ರವರಿಗೆ ಸಾದಾ ಮತ್ತು ಶ್ರೀಮತಿ ದೀಪಾ ಕೋಂ. ಸೂರಜ್ ಶೆಟ್ಟಿ ರವರಿಗೆ ಭಾರೀ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಸೋಮರಾಜ್ ತಂದೆ ಹಾಲಪ್ಪಾ ಬೆಂಡಿಗೇರಿ, ಪ್ರಾಯ-45 ವರ್ಷ, ವೃತ್ತಿ-ಬಸ್ ನಿರ್ವಾಹಕ, ಸಾ|| ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ, ತಾ: ಗಜೇಂದ್ರಗಡ, ಜಿ: ಗದಗ ರವರು ದಿನಾಂಕ: 12-11-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ದಾಂಡೇಲಿ ನಗರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 90/2021, ಕಲಂ: 323, 324, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಸಚೀನ್ ಮಹೇಶ ಬೇನೆಕರ, ಪ್ರಾಯ-26 ವರ್ಷ, 2]. ಪ್ರಜ್ವಲ ಯಮನಪ್ಪ ಡಾಳಿ, ಪ್ರಾಯ-19 ವರ್ಷ, 3]. ಶುಭಂ ಮಹೇಶ ಬೇನೆಕರ, ಪ್ರಾಯ-23 ವರ್ಷ, ಸಾ|| (ಎಲ್ಲರೂ) ಮಾರುತಿ ನಗರ, ದಾಂಡೇಲಿ. ಈ ನಮೂದಿತ ಆರೋಪಿತರಲ್ಲಿ ಆರೋಪಿ 2 ನೇಯವನು ದಿನಾಂಕ: 11-11-2021 ರಂದು 22-00 ಗಂಟೆಗೆ ಪಿರ್ಯಾದಿ ಹಾಗೂ ಇರ್ಫಾನ್, ಜೈಲಾನಿ ರವರೊಂದಿಗೆ ಪಿರ್ಯಾದಿಯು ಮೋಟಾರ್ ಸೈಕಲ್ ತೆಗೆದುಕೊಂಡು ಮೈ ಮೇಲೆ ಬಂದ ವಿಷಯದ ಕುರಿತು ಮಾತನಾಡುತ್ತಿದ್ದಾಗ ಆರೋಪಿ 1 ನೇಯವನು ಅಲ್ಲಿಗೆ ಬಂದವನೇ ಪಿರ್ಯಾದಿಗೆ ‘ಹೇ ನೀನು ಪ್ರಜ್ವಲ್ ಈತನೊಂದಿಗೆ ಏಕೆ ಜಗಳ ಮಾಡುತ್ತಿದ್ದೀಯಾ?’ ಅಂತಾ ಹೇಳಿದವನೇ ತನ್ನ ಕೈಯಲ್ಲಿದ್ದ ಸ್ಟೀಲಿನ ಕಡದಿಂದ ತಲೆಗೆ ಹೊಡೆದಿದ್ದು, ಆರೋಪಿ 2 ನೇಯವನು ಸಹ ಕೈಯಲ್ಲಿದ್ದ ಸ್ಟೀಲಿನ ಕಡವನ್ನು ತೆಗೆದು ಪಿರ್ಯಾದಿಗೆ ಮೈಗೆ ಹಾಗೂ ಬೆನ್ನಿಗೆ ಹೊಡೆದು ಗಾಯನೋವು ಪಡೆಸಿದ್ದು, ಅಷ್ಟರಲ್ಲಿ ಅಲ್ಲಿಗೆ ಬಂದ ಆರೋಪಿ 3 ನೇಯವನು ಪಿರ್ಯಾದಿಗೆ ಮತ್ತು ಅಲ್ಲಿಗೆ ಬಂದಿದ್ದ ಪಿರ್ಯಾದಿಯ ತಮ್ಮ ಅಬ್ದುಲ್ ಗಫಾರ್ ಈತನಿಗೆ ‘ಸೂಳೆ ಮಕ್ಕಳಾ’ ಅಂತಾ ಅವಾಚ್ಯವಾಗಿ ಬೈಯ್ಯುತ್ತಾ, ತನ್ನ ಕೈಯಲ್ಲಿದ್ದ ಸ್ಟೀಲಿನ ಕಡದಿಂದ ಅಬ್ದುಲ್ ಗಫಾರ್ ಈತನಿಗೆ ತಲೆಗೆ ಹಾಗೂ ಮೈಗೆ ಹೊಡೆದು ಗಾಯನೋವು ಪಡಿಸಿದ್ದಲ್ಲದೇ, ಮೂರು ಜನರು ಆರೋಪಿತರು ಸೇರಿಕೊಂಡು ಪಿರ್ಯಾದಿಗೆ ಮತ್ತು ಪಿರ್ಯಾದಿಯ ತಮ್ಮ ಅಬ್ದುಲ್ ಗಫಾರ್ ಈತನಿಗೆ ಸ್ಟೀಲಿನ ಕಡ ಮತ್ತು ಕೈಗಳಿಂದ ಹೊಡೆದು, ‘ಇನ್ನೊಮ್ಮೆ ಸಿಕ್ಕರೆ ಜೀವ ಸಹಿತ ಬಿಡುವುದಿಲ್ಲ‘ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಇಮಾಮ್ ಹುಸೇನ್ ತಂದೆ ಮಹಮ್ಮದ್ ಗೌಸ್ ಸಜ್ಜು, ಪ್ರಾಯ-34 ವರ್ಷ, ವೃತ್ತಿ-ಕಾರ್ಪೆಂಟರ್, ಸಾ|| ಮಾರುತಿ ನಗರ, ದಾಂಡೇಲಿ ರವರು ದಿನಾಂಕ: 12-11-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 12-11-2021
at 00:00 hrs to 24:00 hrs
ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ....
======||||||||======