ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 12-10-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 43/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಜಗದೀಶ ತಂದೆ ತುಕಾರಾಮ ಕಂತ್ರೇಕರ, ಪ್ರಾಯ-48 ವರ್ಷ, ವೃತ್ತಿ-ವ್ಯಾಪಾರ, ಸಾ|| ಮೇಲಿನಕೇರಿ, ಮುದಗಾ, ಅಮದಳ್ಳಿ, ಕಾರವಾರ. ಈತನು ದಿನಾಂಕ: 12-10-2021 ರಂದು 16-00 ಗಂಟೆಯ ಸುಮಾರಿಗೆ ಕಾರವಾರ ತಾಲೂಕಿನ ಅಮದಳ್ಳಿ ಕಂತ್ರಿವಾಡಾ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು 01/- ರೂಪಾಯಿಗೆ 80/- ರೂಪಾಯಿ ಹಣ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಓ.ಸಿ ಮಟಕಾ ಜೂಗರಾಟ ನಡೆಸುತ್ತಿರುವಾಗ ದಾಳಿಯ ಕಾಲ ನಗದು ಹಣ 1,140/- ರೂಪಾಯಿ ಹಾಗೂ ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳಾದ 1). ಅಂಕೆ-ಸಂಖ್ಯೆ ಬರೆದ ಚೀಟಿ-1, 2). ಖಾಲಿ ಹಾಳೆಗಳು-03, 3). ಬಾಲ್ ಪೆನ್-1 ಇವುಗಳೊಂದಿಗೆ ಪಿರ್ಯಾದಿಯವರಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸೀತಾರಾಮ ಪಿ, ಪೊಲೀಸ್ ನಿರೀಕ್ಷಕರು, ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 12-10-2021 ರಂದು 17-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 48/2021, ಕಲಂ: 425 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ರಾಮದಾಸ ಶಂಭಾ ಸಾವಂತ, ಪ್ರಾಯ-52 ವರ್ಷ, ವೃತ್ತಿ-ಅರಣ್ಯ ಇಲಾಖೆಯಲ್ಲಿ ಕೆಲಸ, ಸಾ|| ಶೆಟಗೇರಿ, ಅಸ್ನೋಟಿ, ಕಾರವಾರ, 2]. ಸದಾನಂದ ಶಂಭಾ ಸಾವಂತ, ಪ್ರಾಯ-48 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಶೆಟಗೇರಿ, ಅಸ್ನೋಟಿ, ಕಾರವಾರ. ಪಿರ್ಯಾದಿಯವರು ಸಾವಂತವಾಡದಲ್ಲಿ ಸರ್ವೇ ನಂ: 39/1 ನೇದರಲ್ಲಿ ತನ್ನ ಮನೆಯನ್ನು ಹೊಂದಿದ್ದು, ಆರೋಪಿತರು ಸರ್ವೇ ನಂ: 39/2 ನೇದರಲ್ಲಿರುವ ಮನೆಯಲ್ಲಿ ವಾಸವಾಗಿದ್ದು, ದಿನಾಂಕ: 10-06-2019 ರಂದು ಮಧ್ಯಾಹ್ನ 02-00 ಗಂಟೆಯ ಸುಮಾರಿಗೆ ಆರೋಪಿತರು ತಮಗೆ ಸೇರಿದ ಜಾಗದಲ್ಲಿ ಅನಧೀಕೃತವಾಗಿ ಬೊರವೇಲ್ ಅನ್ನು ಕೊರೆಯಿಸಲು ಪ್ರಾರಭಿಸಿದರು, ಪಿರ್ಯಾದಿಯು ಆರೋಪಿತರಿಗೆ ‘ಬೋರವೆಲ್ ಕೊರೆಸುವುದು ನಿಲ್ಲಿಸಿ’ ಅಂದರೂ ಕೂಡಾ ನಿಲ್ಲಿಸದೇ ಆರೋಪಿತರು ಬೋರವೆಲ್ ಅನ್ನು ಸುಮಾರು 125 ಅಡಿಗಳಷ್ಟು ಆಳ ಕೊರೆಯಿಸಿದ್ದರಿಂದ ಪಿರ್ಯಾದಿಯು ವಾಸವಾಗಿದ್ದ ಮನೆಯು ಬಿರುಕು ಬಂದು ಸುಮಾರು 10,00,000/- ರೂಪಾಯಿ ಗಳಷ್ಟು ಸ್ವತ್ತು  ಹಾನಿಯಾದ ಬಗ್ಗೆ ಪಿರ್ಯಾದಿ ಶ್ರೀ ದಿನಕರ ತಂದೆ ಮಹಾಬಲೇಶ್ವರ ಸಾಳುಂಕೆ, ಪ್ರಾಯ-50 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಶೆಟಗೇರಿ, ಅಸ್ನೋಟಿ, ಕಾರವಾರ ರವರು ದಿನಾಂಕ: 12-10-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 49/2021, ಕಲಂ: 427, 436 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈ ನಮೂದಿತ ಆರೋಪಿತರು ದಿನಾಂಕ: 11-10-2021 ರಂದು ರಾತ್ರಿ ಪಿರ್ಯಾದಿಯವರ ಮೋಟಾರ್ ಸೈಕಲ್ ನಂ: ಕೆ.ಎ-25/ಇ.ವಿ-7011 ನೇದನ್ನು ತಂದು ಶೆಡ್ಡಿನಲ್ಲಿ ಇಟ್ಟ ನಂತರ ರಾತ್ರಿ ಸುಮಾರು ದಿನಾಂಕ: 11-10-2021 ರಂದು ರಾತ್ರಿ 11-50 ಗಂಟೆಯಿಂದ ದಿನಾಂಕ; 12-10-2021 ರಂದು 02-00 ಗಂಟೆಯ ಒಳಗೆ ಪಿರ್ಯಾದಿಯವರ ವಾಹನಗಳಿಗೆ ಹಾಗೂ ವಾಹನ ಇಟ್ಟ ಶೆಡ್ಡಿಗೆ ಬೆಂಕಿ ಇಟ್ಟು ಪಿರ್ಯಾದಿಯವರ ಸುಮಾರು 7,00,000/- ರೂಪಾಯಿ ಮೌಲ್ಯದ ಮೋಟಾರ್ ಸೈಕಲ್ ನಂ: ಕೆ.ಎ-25/ಇ.ವಿ-7011 ನೇದು ಹಾಗೂ ಸುಮಾರು 45,000/- ರೂಪಾಯಿ ಮೌಲ್ಯದ ಮೋಟಾರ್ ಸೈಕಲ್ ನಂ: ಕೆ.ಎ-30/ಕ್ಯೂ-8530 ನೇದು ಹಾಗೂ ಸುಮಾರು 10,000/- ರೂಪಾಯಿ ಮೌಲ್ಯದ ತಗಡಿನ ಶೆಡ್ ಹೀಗೆ ಒಟ್ಟೂ 1.25.000/- ರೂಪಾಯಿ ಗಳಷ್ಟು ಹಾನಿಯಾಗಿರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶುಭಂ ತಂದೆ ವಿಶ್ರಾಮ ನಾಯ್ಕ, ಪ್ರಾಯ-22 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಮೇನ್ ರೋಡ್ ಹತ್ತಿರ, ಗೋಪಿಶಿಟ್ಟಾ, ಕಾರವಾರ ರವರು ದಿನಾಂಕ: 12-10-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 26/2021, ಕಲಂ: ಹುಡುಗಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಕುಮಾರಿ: ಜೈತು ಪಟೇಲ್ ತಂದೆ ಅನ್ಸಾರ್ ಪಟೇಲ್, ಪ್ರಾಯ-22 ವರ್ಷ, ಸಾ|| ಸಿ/ಎ-99, ಅಂಬೆಖಾಂಡ್, ವರೀಮ್, ಬಾರದೇಜ್, ಪಣಜಿ, ಗೋವಾ. ಪಿರ್ಯಾದಿಯ ನಾದಿನಿ (ಹೆಂಡತಿಯ ತಂಗಿ) ಯಾದ ಈಕೆಯು ಬಿ.ಕಾಂ ಪದವೀಧರಳಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವವಹಿಸುವ ತಯಾರಿಯ ಕುರಿತು ಅಭ್ಯಾಸ ಮಾಡುವ ಸಲುವಾಗಿ ತನ್ನ ಅಕ್ಕನ ಮನೆಯಾದ ಮಲ್ಲಾಪುರ ಟೌನಶಿಪ್‍ ನಲ್ಲಿ ಕಳೆದ ಒಂದು ತಿಂಗಳಿನಿಂದ ಬಂದು ಉಳಿದುಕೊಂಡಿದ್ದವಳು, ದಿನಾಂಕ: 11-10-2021 ರಂದು ರಾತ್ರಿ ಊಟ ಮಾಡಿ ಮಲಗಿದ್ದವಳು, ದಿನಾಂಕ: 12-10-2021 ರಂದು ಬೆಳಿಗ್ಗೆ 06-00 ಗಂಟೆಗೆ ಪಿರ್ಯಾದಿಯವರು ಎದ್ದು ನೋಡಿದಾಗ ಕುಮಾರಿ: ಜೈತು ಪಟೇಲ್ ತಂದೆ ಅನ್ಸಾರ್ ಪಟೇಲ್ ಈಕೆಯು ಕಾಣದೇ ಇದ್ದು, ತನ್ನ ಮನೆಯಾದ ಗೋವಾಕ್ಕೂ ಹೋಗದೇ ವಾಪಸ್ ತನ್ನ ಅಕ್ಕನ ಮನೆಗೂ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಸದ್ರಿ ಕಾಣೆಯಾದವಳನ್ನು ಪತ್ತೆ ಮಾಡಿಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಶಬ್ಬೀರ್ ಕುಮಾರ್ ತಂದೆ ಸಯ್ಯದ್ ಅಹಮದ್ ಪಟೇಲ್, ಪ್ರಾಯ-34 ವರ್ಷ, ವೃತ್ತಿ-ಶಿಕ್ಷಕ, ಸಾ|| ಎಲ್-02, ನಾರ್ಥ ಕೈಗಾ ಟೌನಶಿಪ್, ಮಲ್ಲಾಪುರ, ಕಾರವಾರ ರವರು ದಿನಾಂಕ: 12-10-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 150/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ಶರಣಪ್ಪಾ ಗುಡಿಗೇರಿ, ಸಾ|| ತಿಮ್ಮಾಪುರ, ಗದಗ (ಲಾರಿ ನಂ: ಕೆ.ಎ-25/ಎ.ಎ-5258 ನೇದರ ಚಾಲಕ). ಈತನು ದಿನಾಂಕ: 08-10-2021 ರಂದು ಬೆಳಿಗ್ಗೆ 07-40 ಗಂಟೆಗೆ ತನ್ನ ಲಾರಿ ನಂ: ಕೆ.ಎ-25/ಎ.ಎ-5258 ನೇದನ್ನು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಹೋಗಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ಅಂಕೋಲಾ ತಾಲೂಕಿನ ಸುಂಕಸಾಳ ಹತ್ತಿರ ಹಿಂದಿನ ಟಾಯರ್ ಪಂಕ್ಚರ್ ಆಗಿ ನಿಂತ ಲಾರಿ ನಂ: ಸಿ.ಜಿ-04/ಜೆ.ಡಿ-0509 ನೇದರ ಹಿಂಬದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಂಕ್ಚರ್ ಆದ ಟಾಯರ್ ಅನ್ನು ಬದಲಾಯಿಸುತ್ತಿದ್ದ ಪಿರ್ಯಾದಿಗೆ ಎಡಗಾಲಿನ ಹಿಮ್ಮಡಿಯ ಹತ್ತಿರ ಗಂಭೀರ ಸ್ವರೂಪದ ಗಾಯನೋವನ್ನುಂಟು ಮಾಡಿರುತ್ತಾನೆ ಎಂಬ ಶ್ರೀ ಅನಿಲ ತಂದೆ ದಿಗಂಬರ ಕಂಛೇಟವಾಡಾ, ಪ್ರಾಯ-40 ವರ್ಷ, ವೃತ್ತಿ-ಚಾಲಕ, ಸಾ|| ನಾಂದೇಡ, ಅರ್ಧಾಪುರಾ, ಲಾಹಾನ, ಮಹಾರಾಷ್ಟ್ರ ರವರು ದಿನಾಂಕ: 12-10-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 264/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ದೇವೇಂದ್ರ ತಂದೆ ನಾಗಪ್ಪ ಗೌಡ, ವೃತ್ತಿ-ಆಟೋ ಚಾಲಕ, ಸಾ|| ಕಾಸರಕೋಡ, ಬಟ್ಟೆವಿನಾಯಕೇರಿ, ತಾ: ಹೊನ್ನಾವರ (ಆಟೋ ರಿಕ್ಷಾ ನಂ: ಕೆ.ಎ-47/1532 ನೇದರ ಚಾಲಕ). ಪಿರ್ಯಾದಿಯು ದಿನಾಂಕ: 04-10-2021 ರಂದು ಬೆಳಿಗ್ಗೆ 08-45 ಗಂಟೆಗೆ ತನ್ನ ಮೋಟಾತಗ ಸೈಕಲ್ ನಂ: ಕೆ.ಎ-47/ಕ್ಯೂ-3080 ನೇದನ್ನು ಮಂಕಿಯಿಂದ ಹೊನ್ನಾವರದ ಕಾಸರಕೋಡ ಮಲಬಾಕೇರಿಯಲ್ಲಿರು ತನ್ನ ಕಟಿಂಗ್ ಶಾಪಿಗೆ ಹೋಗಲು ಕಾಸರಕೋಡ ಕೆಳಗಿನೂರ ಕಡೆಯಿಂದ ಮಲಬಾರಕೇರಿ ಕಡೆಗೆ ಹೋಗಲು ರಸ್ತೆಯ ಎಡಬದಿಯಿಂದ ಚಲಾಯಿಸಿಕೊಂಡು ಬರುತ್ತಿರುವಾಗ, ಮಲಬಾರಕೇರಿಯ ಕಳಸಿನಮೂಟೆ ಕ್ರಾಸ್ ಹತ್ತಿರ ಇರುವ ಆಟೋ ರಿಕ್ಷಾ ನಿಲ್ಲಿಸುವ ಸ್ಥಳದಿಂದ ಆಟೋ ರಿಕ್ಷಾ ನಂ: ಕೆ.ಎ-47/1532 ನೇದನ್ನು ಆರೋಪಿ ಚಾಲಕನು ಯಾವುದೇ ಸೂಚನೆಯನ್ನು ನೀಡದೇ ಕಳಸಿನಮೂಟೆ ಕಡೆಗೆ ಹೋಗಲು ತನ್ನ ಆಟೋ ರಿಕ್ಷಾವನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ಬಲಕ್ಕೆ ಚಲಾಯಿಸಿ, ಪಿರ್ಯಾದಿಯು ಚಲಾಯಿಸಿಕೊಂಡು ಬರುತ್ತಿದ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಗೆ ಎಡಗೈ ಮಣಿಕಟ್ಟಿನ ಹತ್ತಿರ ಗಾಯವಾಗಲು ಮತ್ತು ಬಲಗೈಗೆ ಹಾಗೂ ಬಲಭುಜಕ್ಕೆ ತೆರಚಿದ ಗಾಯವಾಗಲು ಕಾರಣನಾಗಿದ್ದಲ್ಲದೇ, ಪಿರ್ಯಾದಿಯ ಮೋಟಾರ್ ಸೈಕಲನ್ನು ಸಹ ಜಖಂಗೊಳಿಸಿದ್ದು ಇರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸತೀಶ ತಂದೆ ಮಹಾಬ್ಲೇಶ್ವರ ಕೊಡಿಯಾ, ಪ್ರಾಯ-49 ವರ್ಷ, ವೃತ್ತಿ-ಕಟಿಂಗ್ ಶಾಪ್, ಸಾ|| ಆಡುಕಳ, ಮಂಕಿ, ತಾ: ಹೊನ್ನಾವರ ರವರು ದಿನಾಂಕ: 12-10-2021 ರಂದು 11-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 178/2021, ಕಲಂ: 279, 337, 338, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಜೆಸ್ಟೀನ್ ತಂದೆ ಎಡ್ವಿನ್ ಪಿನೆರೋ, ಪ್ರಾಯ-23 ವರ್ಷ, ವೃತ್ತಿ-ಮೆಕ್ಯಾನಿಕಲ್ ಇಂಜಿನಿಯರ್, ಸಾ|| ಶಾಂತಿನಗರ, ಮನೆ ನಂ: 5/ಎ. ಬೆಂಗೇರಿ, ಹುಬ್ಬಳ್ಳಿ (ಕಾರ್ ನಂ: ಕೆ.ಎ-25/ಜೆಡ್-1268 ನೇದರ ಚಾಲಕ). ಈತನು ದಿನಾಂಕ: 11-10-2021 ರಂದು ರಾತ್ರಿ 09-30 ಗಂಟೆಯ ಸುಮಾರಿಗೆ ತನ್ನ ಕಾರ್ ನಂ: ಕೆ.ಎ-25/ಜೆಡ್-1268 ನೇದರಲ್ಲಿ ಪಿರ್ಯಾದಿ ಮತ್ತು ಸಾಕ್ಷಿದಾರಳಾದ ಕುಮಾರಿ: ಕೃತಿಕಾ ಕುಲಕರ್ಣಿಯವರಿಗೆ ಕೂಡ್ರಿಸಿಕೊಂಡು ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗಿ ಯಲ್ಲಾಪೂರ ತಾಲೂಕಿನ ಜೋಗಿಕೊಪ್ಪಾ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ–63 ರಲ್ಲಿ ತಲುಪಿದಾಗ ಕಾರಿನ ಟೈರ್ ಬ್ಲಾಸ್ಟ್ ಆಗಿ ಕಾರಿನ ವೇಗ ನಿಯಂತ್ರಿಸದೇ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಕಾರಿನಲ್ಲಿದ್ದ ಪಿರ್ಯಾದಿಯ ಎಡ ಪಕ್ಕೆಲುಬುಗಳಿಗೆ ಸಾದಾ ಗಾಯನೋವು ಪಡಿಸಿ, ಸಾಕ್ಷಿದಾರಳಾದ ಕುಮಾರಿ: ಕೃತಿಕಾ ರವರಿಗೆ ಎಡಗಾಲಿಗೆ ಭಾರೀ ಗಾಯನೋವು ಪಡಿಸಿ, ಕಾರನ್ನು ಜಖಂಗೊಳಿಸಿದ್ದಲ್ಲದೇ, ಆರೋಪಿ ಚಾಲಕನು ತನಗೂ ಸಹ ತಲೆಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿಕೊಂಡವನಿಗೆ ಪಿರ್ಯಾದಿಯು ಖಾಸಗಿ ವಾಹನದಲ್ಲಿ ಚಿಕಿತ್ಸೆಯ ಕುರಿತು ಅಪಘಾತ ಸ್ಥಳದಿಂದ ಯಲ್ಲಾಪುರ ತಾಲೂಕಿನ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಪಘಾತದಲ್ಲಿ ಆದ ಗಾಯನೋವಿನಿಂದ ಕಾರ್ ಚಾಲಕನು ದಿನಾಂಕ: 11-10-2021 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ಮೃತಪಟ್ಟ ಬಗ್ಗೆ ಪಿರ್ಯಾದಿ ಕುಮಾರಿ: ಫ್ರಾನ್ಸಿಸ್ ತಂದೆ ಜೇವಿಯರ್ ಭರ್ನಾಬಸ್, ಪ್ರಾಯ– 23 ವರ್ಷ, ವೃತ್ತಿ-ಮರ್ಚೆಂಟ್ ನೇವಿಯಲ್ಲಿ ಕೆಲಸ, ಸಾ|| ಶಾಂತಿ ನಗರ, ಮನೆ ನಂ: 5/ಎ, ಬೆಂಗೇರಿ, ಹುಬ್ಬಳ್ಳಿ ರವರು ದಿನಾಂಕ: 12-10-2021 ರಂದು 03-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 129/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಜ್ಞಾನೇಶ ತಂದೆ ಕಾಳಜ್ಜ ನಾಯ್ಕ, ಪ್ರಾಯ-20 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಕೊಂಡ್ಲಿ, ತಾ: ಸಿದ್ದಾಪುರ (ಮೋಟಾರ್ ಸೈಕಲ್ ನಂ: ಕೆ.ಎ-17/ಇ.ಇ-3277 ನೇದರ ಸವಾರ). ಈತನು ದಿನಾಂಕ: 12-10-2021 ರಂದು ಮಧ್ಯಾಹ್ನ 13-45 ಗಂಟೆಯ ಸುಮಾರಿಗೆ ಮೋಟಾರ್ ಸೈಕಲ್ ನಂ: ಕೆ.ಎ-17/ಇ.ಇ-3277 ನೇದನ್ನು ಸಿದ್ದಾಪುರ-ಕುಮಾಟಾ ಮುಖ್ಯ ರಸ್ತೆಯಲ್ಲಿ ಬೇಡ್ಕಣಿ ಕಡೆಯಿಂದ ಸಿದ್ದಾಪುರ ಕಡೆಗೆ ಅತೀವೇಗವಾಗಿ ಮತ್ತು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಸಿದ್ದಾಪುರ-ಕುಮಟಾ ರಸ್ತೆಯ ಬೇಡ್ಕಣಿಯ ಡಿಗ್ರಿ ಕಾಲೇಜ್ ಕ್ರಾಸ್ ಹತ್ತಿರ ತನ್ನ ಮೋಟಾರ್ ಸೈಕಲನ್ನು ತೀರಾ ಬಲಕ್ಕೆ ಚಲಾಯಿಸಿ, ಸಿದ್ದಾಪುರ ಕಡೆಯಿಂದ ಬೇಡ್ಕಣಿ ಕಡೆಗೆ ಪಿರ್ಯಾದಿಯವರು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-04/ಇ.ಎನ್-7822 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯವರ ಹಣೆಗೆ, ತಲೆಗೆ, ಹಲ್ಲಿಗೆ ಹಾಗೂ ಎರಡು ಕಣ್ಣುಗಳ ಹತ್ತಿರ ಗಾಯನೋವನ್ನುಂಟು ಪಡಿಸಿ, ತನ್ನ ಮೋಟಾರ್ ಸೈಕಲಿನ ಹಿಂಬದಿ ಸವಾರನಾದ ಗಾಯಾಳು ದರ್ಶನ ತಂದೆ ರಾಜು ನಾಯ್ಕ ಈತನಿಗೂ ಸಹ ಅಲ್ಲಲ್ಲಿ ತೆರಚಿದ ನಮೂನೆಯ ಗಾಯನೋವನ್ನುಂಟು ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ಎರಡೂ ಕಾಲಿಗೆ ಹಾಗೂ ಎಡಗೈಗೆ ಗಾಯನೋವನ್ನುಂಟು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಚೈತನ್ಯ ತಂದೆ ಗಣಪತಿ ಹೆಗಡೆ, ಪ್ರಾಯ-45 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕೆರೆಹೊಂಡ, ಚಪ್ಪರಮನೆ ಗ್ರಾಮ, ತಾ: ಸಿದ್ದಾಪುರ ರವರು ದಿನಾಂಕ: 12-10-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 12-10-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 32/2021, ಕಲಂ: 174(ಸಿ) ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಸುದೀಪ ಬಿ. ತಂದೆ ಬೋರಣ್ಣ ಪಿ, ಪ್ರಾಯ-18 ವರ್ಷ, ವೃತ್ತಿ-ದುರ್ಗಾ ಬೇಕರಿಯಲ್ಲಿ ಕೆಲಸ, ಸಾ|| ಕಾತ್ರಿಕಾನಟ್ಟಿ, ಹುಡೆಂ, ತಾ: ಕೂಡ್ಲಗಿ, ಜಿ: ವಿಜಯನಗರ, ಹಾಲಿ ಸಾ|| ದುರ್ಗಾ ಬೇಕರಿ, ಕಾಜುಬಾಗ, ಕಾರವಾರ., ಈತನು ಪಿರ್ಯಾದಿಯ ಮಗನಾಗಿದ್ದು, ಕಾರವಾರ ಕಾಜುಬಾಗದ ದುರ್ಗಾ ಬೇಕರಿಯಲ್ಲಿ  ಬೇಕರಿ ಕೆಲಸ ಮಾಡಿಕೊಂಡಿದ್ದವನು, ದಿನಾಂಕ: 10-10-2021 ರಂದು ರಾತ್ರಿ 23-30 ಗಂಟೆಯಿಂದ ದಿನಾಂಕ: 11-10-2021 ರಂದು ಬೆಳಿಗ್ಗೆ 06-30 ಘಂಟೆಯ ನಡುವಿನ ಅವಧಿಯಲ್ಲಿ ತಾನು ವಾಸವಿದ್ದ ಕೊಠಡಿಯ ಪಕ್ಕದ ಕೊಠಡಿಯಲ್ಲಿ ಡಿಶ್ ಕೇಬಲ್ ದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಅತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಕಂಡು ಬರುತ್ತಿದ್ದು, ತನ್ನ ಮಗನ ಮರಣದಲ್ಲಿ ತನಗೆ ಸಂಶಯ ಕಂಡುಬರುತ್ತಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಶ್ರೀ ಬೋರಣ್ಣ ತಂದೆ ಪಿ. ಪಾಲಯ್ಯ, ಪ್ರಾಯ-51 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಎಸ್.ಟಿ ಕಾಲೋನಿ, ಕಾತ್ರಿಕಾನಟ್ಟಿ, ಹುಡೆಂ, ತಾ: ಕೂಡ್ಲಗಿ, ಜಿ: ವಿಜಯನಗರ ರವರು ದಿನಾಂಕ: 12-10-2021 ರಂದು 09-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 13-10-2021 03:50 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080