ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 12-09-2021

at 00:00 hrs to 24:00 hrs

 

ಸಂಚಾರ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 18/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪಾಂಡುರಂಗ ತಂದೆ ಹನುಮಂತ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಆಂಬ್ಯುಲೆನ್ಸ್ ಚಾಲಕ, ಸಾ|| ಮೊರಬಾ, ತಾ: ಅಂಕೋಲಾ (ಆಂಬ್ಯುಲೆನ್ಸ್ ವಾಹನ ನಂ: ಕೆ.ಎ-30/ಜಿ-0623 ನೇದರ ಚಾಲಕ). ದಿನಾಂಕ: 11-09-2021 ರಂದು ಪಿರ್ಯಾದಿಯ ಅಣ್ಣನಾದ ಮೃತ: ಪ್ರಶಾಂತ ತಂದೆ ಶ್ರೀಧರ ಬೋರಗಾಂವಕರ ರವರಿಗೆ ಉಸಿರಾಟದ ತೊಂದರೆಯಾಗಿ ಕಾರವಾರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುವ ವೇಳೆ ರೋಗ ಉಲ್ಭಣಗೊಂಡು ಹೆಚ್ಚಿನ ಚಿಕಿತ್ಸೆಗಾಗಿ ಕರ್ನಾಟಕ ಮೆಡಿಕಲ್ ಆಸ್ಪತ್ರೆ, ಹುಬ್ಬಳ್ಳಿಗೆ ಸರ್ಕಾರಿ ಆಂಬ್ಯುಲೆನ್ಸಿನಲ್ಲಿ ರೋಗಿಯನ್ನು ಸಾಗಿಸುವಾಗ ಬಿಣಗಾ ಪೆಟ್ರೋಲ್ ಬಂಕ್ ಹತ್ತಿರ ಆಟೋರಿಕ್ಷಾ ಮತ್ತು ಆಂಬ್ಯುಲೆನ್ಸ್ ಮಧ್ಯ ಅಪಘಾತವಾಗಿ ಆಂಬ್ಯುಲೆನ್ಸನಲ್ಲಿದ್ದ ರೋಗಿ ಆಕಸ್ಮಾತ್ ಮರಣ ಹೊಂದಿರುತ್ತಾನೆ. ಕಾರವಾರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ 02-04 ಗಂಟೆಗೆ ಹೊರಟಿದ್ದು, ಬಿಣಗಾದಲ್ಲಿ 02-30 ಗಂಟೆಯಿಂದ 02-45 ಗಂಟೆಯ ನಡುವಿನ ಅವಧಿಯಲ್ಲಿ ಈ ಅಪಘಾತ ಹೊಂದಿರುತ್ತದೆ. ಜಿಲ್ಲಾ ಸರ್ಕಾರಿ ಆಸ್ಪತ್ರೆ, ಕಾರವಾರದ ಆರೋಪಿ ಆಂಬ್ಯುಲೆನ್ಸ್ ಚಾಲಕನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿ ಈ ಅಪಘಾತ ಮಾಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪ್ರಕಾಶ ತಂದೆ ಶ್ರೀಧರ ಅಣ್ವೇಕರ, ಪ್ರಾಯ-35 ವರ್ಷ, ವೃತ್ತಿ-ಇಲೆಕ್ಟ್ರೀಶಿಯನ್, ಸಾ|| ಸುಂಕೇರಿ, ಕಠಿಣಕೋಣ, ಕಾರವಾರ ರವರು ದಿನಾಂಕ: 12-09-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 135/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತನು ಟ್ಯಾಂಕರ್ ಲಾರಿ ನಂ: ಎಮ್.ಎಚ್-43/ಬಿ.ಪಿ-6916 ನೇದರ ಚಾಲಕನಾಗಿದ್ದು, ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 11-09-2021 ರಂದು ಮಧ್ಯಾಹ್ಷ 12-45 ಗಂಟೆಯ ಸುಮಾರಿಗೆ ತನ್ನ ಟ್ಯಾಂಕರ್ ಲಾರಿ ಲಾರಿ ನಂ: ಎಮ್.ಎಚ್-43/ಬಿ.ಪಿ-6916 ನೇದನ್ನು ಕಾರವಾರದಿಂದ ಅಂಕೋಲಾದ ಕಡೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಮೇಲೆ ತನ್ನ ಲಾರಿಯನ್ನು ಚಲಾಯಿಸಿಕೊಂಡು ಬರುತ್ತಿದ್ದವನು, ಹಾರವಾಡದ ಡಾಂಬರ್ ಪ್ಲಾಂಟ್ ಹತ್ತಿರ ಬಂದಾಗ ಯಾವುದೇ ಸಂಚಾರ ಸೂಚನೆಯನ್ನು ನೀಡದೇ ನಿಷ್ಕಾಳಜಿತನದಿಂದ ತನ್ನ ಟ್ಯಾಂಕರ್ ಲಾರಿಯನ್ನು ಒಮ್ಮೇಲೆ ಎಡಬದಿಗೆ ತಿರುಗಿಸಿ ಲಾರಿಯ ಹಿಂಬದಿಯಿಂದ ಬರುತ್ತಿದ್ದ ಹೋಂಡಾ ಎಕ್ಟಿವಾ ಮೋಟಾರ್ ಸೈಕಲ್ ನಂ: ಕೆ.ಎ-30/ಯು-7913 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರ ಮಹೇಂದ್ರ ಹಾಗೂ ಹಿಂಬದಿಯ ಸವಾರ ಸಂಜಯ ಇವರ ಕೈ ಕಾಲುಗಳಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಹಾಬಲೇಶ್ವರ ತಂದೆ ವಿಠೋಬ ಮುಂಬೈಕರ್, ಪ್ರಾಯ-34 ವರ್ಷ, ಸಾ|| ಗಾಬಿತಕೇಣಿ, ತಾ: ಅಂಕೋಲಾ ರವರು ದಿನಾಂಕ: 12-09-2021 ರಂದು 17-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 144/2021, ಕಲಂ: 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ದಾಮೋದರ ತಂದೆ ದೇವು ಪಟಗಾರ, ಸಾ|| ಭರತನಳ್ಳಿ, ಕುಂದುರ್ಗಿ ಗ್ರಾಮ, ತಾ: ಯಲ್ಲಾಪುರ. ಈತನು ಪಿರ್ಯಾದಿಯ ಪಕ್ಕದ ಮನೆಯವನಿದ್ದು, ಪಿರ್ಯಾದಿಯ ಮೇಲಿನ ಹಳೆ ದ್ವೇಷದಿಂದ ದಿನಾಂಕ: 10-09-2021 ರಂದು ಬೆಳಿಗ್ಗೆ 11-30 ಗಂಟೆಗೆ ಯಲ್ಲಾಪುರ ತಾಲೂಕಿನ ಕುಂದುರ್ಗಿ ಗ್ರಾಮದ ಶ್ರೀ ಗಣೇಶ ಕೋಟಾರಿ ರವರ ಕಿರಾಣಿ ಅಂಗಡಿಯ ಮುಂದೆ ನಿಂತ ಪಿರ್ಯಾದಿಗೆ ‘ತಾಯಿನ ಹಡಾ’ ಅಂತಾ ಅವಾಚ್ಯವಾಗಿ ಬೈಯ್ದು ಕಲ್ಲಿನಿಂದ ತಲೆಗೆ ಹಲ್ಲೆ ಮಾಡಿ ಸಾದಾ ಗಾಯನೊವು ಪಡಿಸಿ, ‘ತಲೆ ಒಡೆದು ಕೊಲೆ ಮಾಡುತ್ತೇನೆ’ ಅಂತಾ ಕೊಲೆ ಮಾಡುವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಗೋವಿಂದ ತಂದೆ ಹನುಮಂತ ನಾಯ್ಕ, ಪ್ರಾಯ-48 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಭರತನಳ್ಳಿ, ಕುಂದುರ್ಗಿ ಗ್ರಾಮ, ತಾ: ಯಲ್ಲಾಪುರ ರವರು ದಿನಾಂಕ: 12-09-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 62/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 17-08-2021 ರಂದು 09-30 ಗಂಟೆಯಿಂದ ದಿನಾಂಕ: 22-08-2021 ರಂದು 20-00 ಗಂಟೆಯ ನಡುವಿನ ಅವಧಿಯಲ್ಲಿ ಶಿರಸಿ ಶಹರದ ನೀಲೇಕಣಿಯ ಭೀಮನಗುಡ್ಡದಲ್ಲಿ ಇರುವ ಪಿರ್ಯಾದಿಯವರ ಮನೆಯ ಡ್ರೆಸಿಂಗ್ ಟೇಬಲಿನ 2 ನೇ ಡ್ರಾವರಿನಲ್ಲಿ ಇಟ್ಟಿದ್ದ 20 ಗ್ರಾಂ ತೂಕದ ಬಂಗಾರದ ಲವಂಗ ಸರ-01, ಅ||ಕಿ|| 50,000/- ರೂಪಾಯಿ ಬೆಲೆಬಾಳುವ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀಮತಿ ಪಾರ್ವತಿ ಕೋಂ. ಕಮಲಾಕರ ನೀಲೇಕಣಿ, ಪ್ರಾಯ-54 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಭೀಮನಗುಡ್ಡ, ನೀಲೇಕಣಿ, ತಾ: ಶಿರಸಿ ರವರು ದಿನಾಂಕ: 12-09-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 59/2021, ಕಲಂ: 279 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತ ಲಾರಿ ನಂ: ಕೆ.ಎ-06/ಡಿ-5634 ನೇದರ ಚಾಲಕನಾಗಿದ್ದು, ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 12-09-2021 ರಂದು 11-30 ಗಂಟೆಯ ಸುಮಾರಿಗೆ ತಾನೂ ಚಾಲನೆ ಮಾಡುತ್ತಿದ್ದ ಲಾರಿ ನಂ: ಕೆ.ಎ-06/ಡಿ-5634 ನೇದನ್ನು ಹಳಿಯಾಳ ಕಡೆಯಿಂದ ದಾಂಡೇಲಿ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯಕಾರಿಯಾಗುವಂತೆ ಚಾಲನೆ ಮಾಡಿಕೊಂಡು ಬಂದು ದಾಂಡೇಲಿಯಿಂದ ಹಳಿಯಾಳ ಕಡೆಗೆ ಅಂದರೆ ಕೆರವಾಡ ಗ್ರಾಮದ ಕ್ರಾಸಿನಲ್ಲಿ ನಿಂತಿದ್ದ ಬಸ್ಸಿಗೆ ಪ್ರಯಾಣಿಕರು ಹತ್ತುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-42/ಎಫ್-706 ನೇದರ ಬಲಬದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಸ್ಥಳದಲ್ಲಿ ಲಾರಿಯನ್ನು ನಿಲ್ಲಿಸದೆ ಚಲಾಯಿಸಿಕೊಂಡು ಹೋಗಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಹಾಂತೇಶ ತಂದೆ ಹಾಲಪ್ಪ ವಡ್ಡರ, ಪ್ರಾಯ-36 ವರ್ಷ, ವೃತ್ತಿ-ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ (ಬಕಲ್ ನಂ: 685), ಸಾ|| ಅಂಬಲಿಕೊಪ್ಪ, ತಾ&ಜಿ: ಧಾರವಾಡ, ಹಾಲಿ ಸಾ|| ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ, ತಾ: ಹಳಿಯಾಳ ರವರು ದಿನಾಂಕ: 12-09-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 12-09-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

 

ಇತ್ತೀಚಿನ ನವೀಕರಣ​ : 16-09-2021 06:17 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080