ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 13-04-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 70/2021, ಕಲಂ: 279, 337, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತನು ಲಾರಿ ನಂ: ಎಮ್.ಎಚ್-09/ಇ.ಎಮ್-5656 ನೇದರ ಚಾಲಕನಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 13-04-2021 ರಂದು ಬೆಳಿಗ್ಗೆ 06-30 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಹೆಬ್ಬುಳದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ಡಾಂಬರ್ ರಸ್ತೆಯ ಮೇಲೆ ತನ್ನ ಬಾಬ್ತು ಲಾರಿ ನಂ: ಎಮ್.ಎಚ್-09/ಇ.ಎಮ್-5656 ನೇದನ್ನು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದವನು, ಲಾರಿಯ ಮೇಲಿನ ತನ್ನ ನಿಯಂತ್ರಣವನ್ನು ಕಳೆದುಕೊಂಡು ರಸ್ತೆಯ ಬಲಕ್ಕೆ ಬಂದವನು, ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ರಸ್ತೆಯ ತನ್ನ ಬದಿಯಿಂದ ಹೋಗುತ್ತಿದ್ದ ಕಾರ್ ನಂ: ಜಿ.ಎ-06/ಇ-1605 ನೇದಕ್ಕೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ 1). ಗುರುಪ್ರಸಾದ ತಂದೆ ಅಶೋಕ ಅಣ್ವೇಕರ, ಸಾ|| ಅವರ್ಸಾ, ತಾ: ಅಂಕೋಲಾ, 2). ಕುಮಾರಿ: ಸಂಜನಾ ತಂದೆ ಸಂತೋಷ ರಾಯ್ಕರ್, ಸಾ|| ಚಂದನವಾಡಿ, ಥಾಣೆ, ಮಹಾರಾಷ್ಟ್ರ ಇವರಿಗೆ ಗಂಬೀರ ಸ್ವರೂಪದ ಗಾಯನೋವು ಪಡಿಸಿ, ಸ್ಥಳದಲ್ಲಿಯೇ ಮರಣವನ್ನುಂಟು ಮಾಡಿದ್ದಲ್ಲದೇ, 3). ಶ್ರೀ ಪ್ರೀತಮ್ ತಂದೆ ಪ್ರಕಾಶ ರೇವಣಕರ, ಸಾ|| ಅವರ್ಸಾ, ತಾ: ಅಂಕೋಲಾ ಇವರ ಬಲಗಾಲಿಗೆ ಗಂಭೀರ ಸ್ವರೂಪದ ಮತ್ತು 4). ಶ್ರೀ ಸಂತೋಷ ತಂದೆ ಸುರೇಶ ರಾಯ್ಕರ್, 5). ಶ್ರೀಮತಿ ಅಶ್ವಿನಿ ಸಂತೋಷ ರಾಯ್ಕರ್, 6). ಕುಮಾರ: ಸೋಹಮ್ ಸಂತೋಷ ರಾಯ್ಕರ್, ಸಾ|| (ಎಲ್ಲರೂ) ಚಂದನವಾಡಿ, ಥಾಣೆ, ಮಹಾರಾಷ್ಟ್ರ ಇವರ ತಲೆಗೆ, ಕೈಗೆ ಸಾದಾ ಸ್ವರೂಪದ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಕೃಷ್ಣ ತಂದೆ ದುರ್ಗು ನಾಯ್ಕ, ಪ್ರಾಯ-39 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹೆಬ್ಬುಳ, ತಾ: ಅಂಕೋಲಾ ರವರು ದಿನಾಂಕ: 13-04-2021 ರಂದು 09-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 32/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತನು ಅಜ್ಗರ್ ಅಲಿ, ಸಾ|| ಕಿಮಾನಿ, ತಾ: ಕುಮಟಾ (ಮೋಟಾರ್ ಸೈಕಲ್ ನಂ: ಕೆ.ಎ-47/ಎಸ್-7268 ನೇದರ ಸವಾರ). ಈತನು ದಿನಾಂಕ: 12-04-2021 ರಂದು ಸಾಯಂಕಾಲ 17-45 ಗಂಟೆಯ ಸುಮಾರಿಗೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಮೂಲೇಕೇರಿ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-47/ಎಸ್-7268 ನೇದನ್ನು ಮಾದನಗೇರಿ ಕಡೆಯಿಂದ ಗೋಕರ್ಣ ಕಡೆಗೆ ತನ್ನ ಎದುರುಗಡೆಯಿಂದ ಹೋಗುತ್ತಿದ್ದ ಯಾವುದೇ ವಾಹನವನ್ನು ಓವರಟೇಕ್ ಮಾಡಿಕೊಂಡು ಅತೀವೇಗದಿಂದ ರಸ್ತೆಯ ತೀರಾ ಬಲಕ್ಕೆ ಬಂದು ಗೋಕರ್ಣ ಕಡೆಯಿಂದ ಮಾದನಗೇರಿ ಕಡೆಗೆ ಪಿರ್ಯಾದಿಯವರು ಚಲಾಯಿಸಿಕೊಂಡು ಹೊಗುತ್ತಿದ್ದ ಮಹೀಂದ್ರ ಪಿಕ್‍ಆಪ್ ವಾಹನ ನಂ: ಕೆ.ಎ-47/ಎ-2133 ನೇದಕ್ಕೆ ನಿರ್ಲಕ್ಷ್ಯತನದಿಂದ ಬಲಬದಿಯ ಬಾಡಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಸ್ವಲ್ಪ ದೂರ ಹೋಗಿ ಧರೆಗೆ ಬಡಿದುಕೊಂಡು ತನಗೆ ಬಲಗಾಲಿನ ಮಂಡಿಗೆ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಹೇಮಂತ ತಂದೆ ವೆಂಕಟ್ರಮಣ ನಾಯ್ಕ, ಪ್ರಾಯ-24 ವರ್ಷ, ವೃತ್ತಿ-ಚಾಲಕ, ಸಾ|| ತೆಂಗಿನಗುಂಡಿ, ಹೆಬ್ಲೆ, ತಾ: ಭಟ್ಕಳ ರವರು ದಿನಾಂಕ: 13-04-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 33/2021, ಕಲಂ: 323, 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಹೊನ್ನಾ ತಂದೆ ಬಿಕ್ಕಿ ಆಗೇರ, ಸಾ|| ಹನೇಹಳ್ಳಿ, ತಾ: ಕುಮಟಾ. ನಮೂದಿತ ಆರೋಪಿತನ ಹೆಂಡತಿಯ ಮೈಗೆ ಆರಾಮ ಇಲ್ಲದ ಕಾರಣ ಆರೋಪಿತನ ಹೆಂಡತಿಯ ತಮ್ಮನಾದ ಪಿರ್ಯಾದಿಯವರು ತನ್ನ ತಾಯಿಯ ಸಂಗಡ ಆಸ್ಪತ್ರೆಗೆ ಕಳುಹಿಸಿಕೊಟ್ಟ ವಿಷಯವನ್ನು ತಿಳಿದು ಆರೋಪಿತನು ದಿನಾಂಕ: 13-04-2021 ರಂದು ಮಧ್ಯಾಹ್ನ 13-00 ಗಂಟೆಯ ಸುಮಾರಿಗೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಹನೇಹಳ್ಳಿ ಗ್ರಾಮದಲ್ಲಿ ಪಿರ್ಯಾದಿಯ ಮನೆಯ ಹತ್ತಿರ ಬಂದು ಪಿರ್ಯಾದಿಗೆ ಉದ್ದೇಶಿಸಿ ‘ತನ್ನ ಹೆಂಡತಿಗೆ ಆಸ್ಪತ್ರೆಗೆ ಕಳುಹಿಸಿಕೊಡಲು ನೀನು ಯಾರು ಬೋಳಿ ಮಗನೇ?’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ಕೈಯಿಂದ ಹೊಡೆದು ಕಲ್ಲಿನಿಂದ ಎಡಗಣ್ಣಿನ ಕೆಳಭಾಗದಲ್ಲಿ ಜಜ್ಜಿ ಹೊಡೆದು ದುಃಖಾಪತ್ ಪಡಿಸಿದ್ದಲ್ಲದೇ, ‘ಇದು ಇಷ್ಟಕ್ಕೆ ಮುಗಿದಿಲ್ಲ. ಇನ್ನೂ ಎಲ್ಲಿಯಾದರೂ ಸಿಗು, ನಿನಗೆ ಒಂದು ಗತಿ ಕಾಣಿಸುತ್ತೇನೆ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ತಿಮ್ಮಪ್ಪ ಆಗೇರ, ಪ್ರಾಯ-33 ವರ್ಷ, ವೃತ್ತಿ-ಉಪ್ಪಿನಾಗಾರ ಸಾಣಿಕಟ್ಟಾದಲ್ಲಿ ಕೆಲಸ, ಸಾ|| ಜೊರ್ಗೆ, ಹನೇಹಳ್ಳಿ, ತಾ: ಕುಮಟಾ ರವರು ದಿನಾಂಕ: 13-04-2021 ರಂದು 18-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 53/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಾಗಪ್ಪ ತಂದೆ ಬಡಿಯಾ ಗೊಂಡ, ಪ್ರಾಯ-43 ವರ್ಷ, ಸಾ|| ಹದ್ಲೂರು ತಾ: ಭಟ್ಕಳ (ಕಾರ್ ನಂ: ಕೆ.ಎ-19/ಎಮ್.ಎ-9752 ನೇದರ ಚಾಲಕ). ಈತನು ದಿನಾಂಕ: 10-04-2021 ರಂದು 14-00 ಗಂಟೆಯ ಸಮಯಕ್ಕೆ ತನ್ನ ಕಾರ್ ನಂ: ಕೆ.ಎ-19/ಎಮ್.ಎ-9752 ನೇದನ್ನು ಬೆಣಂದೂರು ಕಡೆಯಿಂದ ಸರ್ಪನಕಟ್ಟಾ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ತನ್ನ ಎದುರುಗಡೆಯಿಂದ ಅಂದರೆ ಸರ್ಪನಕಟ್ಟಾ ಕಡೆಯಿಂದ ಬೆಣಂದೂರು ಕಡೆಗೆ ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಕೆ-1426 ನೇದರ ಸವಾರನಾದ ಮನೋಜ ತಂದೆ ಲಚ್ಮಯ್ಯ ನಾಯ್ಕ, ಪ್ರಾಯ-31 ವರ್ಷ, ವೃತ್ತಿ-ಸಿದ್ಧಿ ವಿನಾಯಕ ಬ್ಯಾಂಕಿನಲ್ಲಿ ಕೆಲಸ, ಸಾ|| ವಿ.ವಿ ರೋಡ್, 2 ನೇ ಕ್ರಾಸ್, ಹೈಡಕಿ, ತಾ: ಭಟ್ಕಳ ಇವರಿಗೆ ಎದುರುಗಡೆಯಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದರ ಪರಿಣಾಮ ಮನೋಜ ಈತನ ಬಲಗಾಲ ಪಾದಕ್ಕೆ ಭಾರೀ ಗಾಯ ಮತ್ತು ಪಿರ್ಯಾದಿಗೆ ಸಾದಾಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಮಾಸ್ತಿ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮೂಡ ಭಟ್ಕಳ, ತಾ: ಭಟ್ಕಳ ರವರು ದಿನಾಂಕ: 13-04-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 47/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಗಣಪತಿ ತಂದೆ ತಿಮ್ಮಾ ನಾಯ್ಕ, ಪ್ರಾಯ-65 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗಿಳಸೆ, ಕುಂಬ್ರಿ, ಕೆಳಗಿನಮನೆ ಗ್ರಾಮ, ತಾ: ಸಿದ್ದಾಪುರ. ಈತನು ದಿನಾಂಕ: 13-04-2021 ರಂದು 17-30 ಗಂಟೆಗೆ ಸಿದ್ದಾಪುರ ತಾಲೂಕಿನ ಕೆಳಗಿನಮನೆ ಗ್ರಾಮದ ಗಿಳಸೆಕುಂಬ್ರಿಯಲ್ಲಿ ಇರುವ ತನ್ನ ಮನೆಯ ಎದುರಿನ ಅಂಗಳದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಅನಧೀಕೃತವಾಗಿ ಸಾರ್ವಜನಿಕರಿಗೆ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ, 1). CAPTAIN MARTINS WHISKY 90 ML ಅಂತಾ ಬರೆದ ಮದ್ಯ ತುಂಬಿದ 8 ಪ್ಯಾಕೆಟ್ ಗಳು. ತಲಾ ಒಂದಕ್ಕೆ 35.13/- ರಂತೆ ಒಟ್ಟು ಅ||ಕಿ|| 281/- ರೂಪಾಯಿ, 2). 2 ಪ್ಲಾಸ್ಟಿಕ್ ಗ್ಲಾಸುಗಳು, ಅ||ಕಿ|| 00.00/- ರೂಪಾಯಿ, 3). CAPTAIN MARTINS WHISKY 90 ML ಅಂತಾ ಬರೆದ 2 ಮದ್ಯದ ಕಾಲಿ ಪ್ಯಾಕೆಟ್ ಗಳು. ಅ||ಕಿ|| 00.00/- ರೂಪಾಯಿ, 4). ಕೈ ಚೀಲ-1, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತಪ್ಪ ಜಿ. ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 13-04-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 41/2021, ಕಲಂ: 78(3) ಕರ್ನಾಟಕ ಪೊಲಿಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಪರಶುರಾಮ ತಂದೆ ಓಬಣ್ಣ, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬದನಗೋಡ, ತಾ: ಶಿರಸಿ. ಈತನು ದಿನಾಂಕ: 13-04-2021 ರಂದು 12-35 ಗಂಟೆಗೆ ದಾಸನಕೊಪ್ಪ-ಮಳಗಿ ರಸ್ತೆಯಲ್ಲಿರುವ ಬದನಗೋಡ ಗ್ರಾಮದ ಬದನಗೋಡ ಬಸ್ ನಿಲ್ದಾಣದ ಎದುರಿನ ಸಾರ್ವಜನಿಕ ರಸ್ತೆಯಲ್ಲಿ ತನ್ನ ಅಕ್ರಮ ಲಾಭಕೋಸ್ಕರ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರನ್ನು ಕೂಗಿ ಕರೆದು ಜನರಿಂದ ಹಣವನ್ನು ಪಡೆದು ತನ್ನ ಕೈಯಲ್ಲಿರುವ ಚೀಟಿಯಲ್ಲಿ ಅಂಕೆ-ಸಂಖ್ಯೆಗಳನ್ನು ಬರೆದು ಕೊಡುತ್ತಿರುವಾಗ ದಾಳಿ ಮಾಡಿ ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳಾದ 1). ಓ.ಸಿ ಚೀಟಿ-01, 2). ನಗದು ಹಣ 810/- ರೂಪಾಯಿ, 3). ಬಾಲ್ ಪೆನ್-01 ನೇದವುಗಳೊಂದಿಗೆ ಸೆರೆವ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಹಣಮಂತ ಎಸ್. ಬಿರಾದಾರ, ಪಿ.ಎಸ್.ಐ, ಬನವಾಸಿ ಪೊಲೀಸ್ ಠಾಣೆ ರವರು ದಿನಾಂಕ: 13-04-2021 ರಂದು 14-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 13-04-2021

at 00:00 hrs to 24:00 hrs

 

ಚಿತ್ತಾಕುಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 07/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಅಬ್ದುಲ್ ಖಾದರ್ ತಂದೆ ಅಲ್ಲಾಭಕ್ಷ್ ಶೇಖ್, ಪ್ರಾಯ-68 ವರ್ಷ, ವೃತ್ತಿ-ಚಹಾ ಅಂಗಡಿ ವ್ಯಾಪಾರ, ಸಾ|| ದ್ವಾರಕಾ ಹೊಟೇಲ್ ಹತ್ತಿರ, ಹಬ್ಬುವಾಡಾ, ಕಾರವಾರ. ಪಿರ್ಯಾದಿಯ ತಂದೆಯಾದ ಈತನು ದಿನಾಂಕ: 13-04-2021 ರಂದು ಕಾರವಾರದ ಹಬ್ಬುವಾಡಾದಲ್ಲಿ ಸಣ್ಣ ಚಹಾ ಅಂಗಡಿ ನಡೆಸುತ್ತಿದ್ದು, ಕಳೆದ ವರ್ಷ ನಗರಸಭೆಯವರು ರಸ್ತೆ ಅಗಲೀಕರಣದ ಸಮಯದಲ್ಲಿ ಅಂಗಡಿ ಖುಲ್ಲಾ ಪಡಿಸಿದ್ದು, ಅಂದಿನಿಂದ ಕೆಲಸವಿಲ್ಲದೇ ಮಾನಸಿಕ ಒತ್ತಡಕ್ಕೊಳಗಾಗಿ ಬಿ.ಪಿ ಶುಗರ್ ಖಾಯಿಲೆಯಾಗಿ ಔಷಧಿ ಪಡೆದುಕೊಳ್ಳುತ್ತಿದ್ದವರು, ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 12-04-2021 ರಂದು ರಾತ್ರಿ 20-00 ಘಂಟೆಯಿಂದ ದಿನಾಂಕ: 13-04-2021 ರ ಮಧ್ಯಾಹ್ನ 13-15 ಘಂಟೆಯ ನಡುವಿನ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಕಾಳಿ ನದಿ ನೀರಿಗೆ ಹಾರಿ, ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ಮೊಹಮ್ಮದ್ ಜಾಸೀಮ್ ತಂದೆ ಅಬ್ದುಲ್ ಖಾದರ್ ಶೇಖ್, ಪ್ರಾಯ-18 ವರ್ಷ, ವೃತ್ತಿ-ಕಾರವಾರ ಸರ್ದಾರ್ಜಿ ಪೆಟ್ರೋಲ್ ಪಂಪ್ ನಲ್ಲಿ ಕೆಲಸ, ಸಾ|| ದ್ವಾರಕಾ ಹೊಟೇಲ್ ಹತ್ತಿರ, ಹಬ್ಬುವಾಡಾ, ಕಾರವಾರ ರವರು ದಿನಾಂಕ: 13-04-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 14/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಸೈಮನ್ ತಂದೆ ಫ್ರಾನ್ಸಿಸ್ ಡಿಸೋಜಾ, ಪ್ರಾಯ-56 ವರ್ಷ, ಸಾ|| ಕೂಡ್ಲ, ಪೋ: ವಲ್ಕಿ, ತಾ: ಹೊನ್ನಾವರ. ಸುದ್ದಿದಾರರ ಅಣ್ಣನಾದ ಈತನು ದಿನಾಂಕ: 12-04-2021 ರಂದು ಬೆಳಿಗ್ಗೆ 07-30 ಗಂಟೆಗೆ ಕೂಡ್ಲ ಹೊಳೆಯಲ್ಲಿ ಇಳಿದು ನೀರಿನಲ್ಲಿ ಈಜಾಡುತ್ತಿದ್ದಾಗ ಈಜಾಡಲು ಆಗದೇ ಆಯಾಸಗೊಂಡು, ಕೈ ಸೋತು ನೀರಿನಲ್ಲಿ ಮುಳುಗಿ ಹೋಗಿದ್ದನು. ಅವನನ್ನು ನಾವು ಹುಡುಕಿದರೂ ಸಿಕ್ಕಿರಲಿಲ್ಲ. ಹೊಳೆಯಲ್ಲಿ ಅವನನ್ನು ಹುಡುಕುತ್ತಿದ್ದಾಗ ದಿನಾಂಕ: 13-04-2021 ರಂದು ಬೆಳಿಗ್ಗೆ 07-00 ಗಂಟೆಗೆ ಅವನ ಮೃತದೇಹವು ಕೂಡ್ಲ ಹೊಳೆಯಲ್ಲಿ ತೇಲಿ ಬಂದಿರುತ್ತದೆ. ನನ್ನ ಅಣ್ಣನು ದಿನಾಂಕ: 12-04-2021 ರಂದು ಬೆಳಿಗ್ಗೆ 07-30 ಗಂಟೆಗೆ ಕೂಡ್ಲ  ಹೊಳೆಯಲ್ಲಿ ಈಜಾಡುತ್ತಿದ್ದಾಗ ಈಜಾಡಲು ಆಗದೇ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತನಾಗಿರುತ್ತಾನೆ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿಸುತ್ತೇನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಆಗ್ನೇಲ್ ತಂದೆ ಫ್ರಾನ್ಸಿಸ್ ಡಿಸೋಜಾ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೂಡ್ಲ, ಪೋ: ವಲ್ಕಿ, ತಾ: ಹೊನ್ನಾವರ ರವರು ದಿನಾಂಕ: 13-04-2021 ರಂದು 08-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 15/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಶ್ರೀಧರ ತಂದೆ ಭಾಸ್ಕರ ಅಂಬಿಗ, ಪ್ರಾಯ-27 ವರ್ಷ, ವೃತ್ತಿ-ಅನೂಪ್ ಇಂಡಸ್ಟ್ರಿಯಲ್ಲಿ ಜೆ.ಸಿ.ಬಿ ಆಪರೇಟರ್, ಸಾ|| ಕೊಳಗಿ, ಶಿರಳಗಿ ಗ್ರಾಮ, ತಾ: ಸಿದ್ದಾಪುರ. ಸುದ್ದಿದಾರನ ಮಗನಾದ ಈತನು ಸೂಕ್ಷ್ಮ ಸ್ವಭಾವದವನಾಗಿದ್ದನು. ಸಿದ್ದಾಪುರ ಶಹರದ ಅನೂಪ್ ಇಂಡಸ್ಟ್ರಿಯಲ್ಲಿ ಜೆ.ಸಿ.ಬಿ ಆಪರೇರ್ ಆಗಿ ಕೆಲಸ ಮಾಡುತ್ತಿದ್ದನು. ಅವನು ಪ್ರೀತಿಸಿದ್ದ ಹುಡುಗಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಹೀಗಿರುವಲ್ಲಿ ದಿನಾಂಕ: 12-04-2021 ರಂದು ಬೆಳಿಗ್ಗೆ ಎಂದಿನಂತೆ ತನ್ನ ಮೋಟಾರ್ ಸೈಕಲ್ ಮೇಲೆ ಕೆಲಸಕ್ಕೆ ಹೋದವನು ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ದಿನಾಂಕ: 13-04-2021 ರಂದು ಬೆಳಿಗ್ಗೆ ಹುಡುಕುತ್ತಿರುವಾಗ ಸಿದ್ದಾಪುರ ಶಹರದ ಪುಟ್ಟಪ್ಪನ ಕೆರೆಯ ಹತ್ತಿರ ಅವನ ಮೋಟಾರ್ ಸೈಕಲ್ ನಿಂತ ಬಗ್ಗೆ ವಿಷಯ ತಿಳಿದು ಅಲ್ಲಿಗೆ ಹೋಗಿ ನೋಡಲು ಕೆರೆಯ ಪಕ್ಕದಲ್ಲಿ ಅವನ ಮೋಟಾರ್ ಸೈಕಲ್ ಹಾಗೂ ಮೆಟ್ಟಿಲಿನ ಮೇಲೆ ಅವನ ಚಪ್ಪಲಿಗಳು ಕಂಡಿರುತ್ತವೆ. ವಿಷಯ ತಿಳಿದು ಬಂದ ಅಗ್ನಿಶಾಮಕ ದಳದವರು ಅವನ ಶವವನ್ನು ಮೇಲಕ್ಕೆ ತೆಗೆದಿರುತ್ತಾರೆ. ಮಗ ಶ್ರೀಧರನು ಮದುವೆಯ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡೋ ಅಥವಾ ಇನ್ನಾವುದೋ ಬೇರೆ ಕಾರಣಕ್ಕೆ ದಿನಾಂಕ: 12-04-2021 ರಂದು ರಾತ್ರಿ 09-30 ಗಂಟೆಯಿಂದ 11-00 ಗಂಟೆಯ ನಡುವಿನ ಅವಧಿಯಲ್ಲಿ ಈ ರೀತಿ ನೀರಿನಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಇದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಭಾಸ್ಕರ ತಂದೆ ಸುಬ್ರಾಯ ಅಂಬಿಗ, ಪ್ರಾಯ-57 ವರ್ಷ, ವೃತ್ತಿ-ಕೃಷಿ/ಕೂಲಿ ಕೆಲಸ, ಸಾ|| ಕೊಳಗಿ, ಶಿರಳಗಿ ಗ್ರಾಮ, ತಾ: ಸಿದ್ದಾಪುರ ರವರು ದಿನಾಂಕ: 13-04-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 16/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಅಕ್ಷತಾ ಕೋಂ. ರಮೇಶ ನಾಯ್ಕ, ಪ್ರಾಯ-27 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಕೋಲಶಿರ್ಶಿ, ತಾ: ಸಿದ್ದಾಪುರ. ಹಾಲಿ ಸಾ|| ಬೇಡ್ಕಣಿ, ತಾ: ಸಿದ್ದಾಪುರ. ಸುದ್ದಿದಾರನ ಮಗಳಾದ ಇವಳು ಕಳೆದ ವರ್ಷ ಮೇ ತಿಂಗಳಿನಲ್ಲಿ ವಿವಾಹವಾಗಿದ್ದವಳು, ಅಲ್ಲದೇ ಕಳೆದ 6 ತಿಂಗಳಿನಿಂದ ಹೆರಿಗೆಗೆಂದು ತನ್ನ ತವರು ಮನೆಯಾದ ಸಿದ್ದಾಪುರ ತಾಲೂಕಿನ ಬೇಡ್ಕಣಿಗೆ ಬಂದು ಉಳಿದು ಕೊಂಡಿದ್ದವಳು, ಕಳೆದ 2 ತಿಂಗಳ ಹಿಂದೆ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದವಳು. ಗಂಡ ಹಾಗೂ ತನ್ನ ಮನೆಯವರೊಂದಿಗೆ ಅನ್ಯೋನ್ಯವಾಗಿ ಇದ್ದವಳು. ಕಳೆದ 5-6 ದಿವಸಗಳಿಂದ ತನ್ನ ತಲೆಯಲ್ಲಿ ಏನೋ ಆಗುತ್ತಲಿದೆ ಎಂದು ತಲೆಯನ್ನು ಹಿಡಿದುಕೊಂಡು ಒತ್ತಿಕೊಳ್ಳುತ್ತಾ ಬಾಯಿಗೆ ಬಂದಂತೆ ಏನೇನೋ ಹೇಳುತ್ತಾ ವಿಚಿತ್ರವಾಗಿ ವರ್ತಿಸುತ್ತಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದವಳು. ದಿನಾಂಕ: 13-04-2021 ರಂದು ರಾತ್ರಿ 08-30 ಗಂಟೆಯಿಂದ 09-00 ಗಂಟೆಯ ನಡುವಿನ ಅವಧಿಯಲ್ಲಿ ಸಿದ್ದಾಪುರ ತಾಲೂಕಿನ ಬೇಡ್ಕಣಿಯ ತಾನು ವಾಸವಿದ್ದ ಮನೆಯ ಹತ್ತಿರ ಇದ್ದ ಸಾರ್ವಜನಿಕ ಬಾವಿಯಲ್ಲಿ ಹಾರಿ ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ಪರಶುರಾಮ ತಂದೆ ವೆಂಕಟ ನಾಯ್ಕ, ಪ್ರಾಯ-62 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಬೇಡ್ಕಣಿ, ತಾ: ಸಿದ್ದಾಪುರ ರವರು ದಿನಾಂಕ: 13-04-2021 ರಂದು 23-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ರಾಮನಗರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 03/2021, ಕಲಂ: 174 ಸಿ.ಆರ್.ಪಿ.ಸಿ  ನೇದ್ದರ ವಿವರ...... ಮೃತರಾದವರು 1]. ಕುಮಾರಿ: ರಕ್ಷಿತಾ ತಂದೆ ರಾಜಕುಮಾರ ಚಿದ್ರಿ, ಪ್ರಾಯ-20 ವರ್ಷ, ವೃತ್ತಿ-ಬಿ.ಇ ವಿದ್ಯಾರ್ಥಿ, ಸಾ|| ಚಿದ್ರಿ, ತಾ&ಜಿ: ಬೀದರ, 2]. ಪುರುಷೋತ್ತಮ ವಿಜಯಕುಮಾರ ಪಾಟೀಲ್, ಪ್ರಾಯ-21 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಚವಳಿ, ತಾ&ಜಿ: ಬೀದರ. ದಿನಾಂಕ: 12-04-2021 ರಂದು ಆಟೋ ರಿಕ್ಷಾ ಒಂದರ ಮೇಲೆ ಗಣೇಶಗುಡಿಗೆ ತಿರುಗಾಡಿಕೊಂಡು ಹೋಗಲು ಬಂದಂತಹ ನಮೂದಿತ ಮೃತರಾದ ಕುಮಾರಿ: ರಕ್ಷಿತಾ ತಂದೆ ರಾಜಕುಮಾರ ಚಿದ್ರಿ ಹಾಗೂ ಪುರುಷೋತ್ತಮ ವಿಜಯಕುಮಾರ ಪಾಟೀಲ್ ಇವರು ದಿನಾಂಕ: 12-04-2021 ರಂದು ಮಧ್ಯಾಹ್ನ 03-00 ಗಂಟೆಯ ಸುಮಾರಿಗೆ ಗಣೇಶಗುಡಿಯ ಕಾಳಿ ನದಿಯ ಸೇತುವೆ ಮೇಲೆ ನಿಂತು ಫೋಟೋ ತೆಗೆದುಕೊಳ್ಳುತ್ತಿರುವಾಗ ಕಾಲು ಜಾರಿ ಅಥವಾ ಆಯ ತಪ್ಪಿ ಸೇತುವೆಯ ಮೇಲಿಂದ ಕಾಳಿ ನದಿಯಲ್ಲಿ ಬಿದ್ದವರು, ದಿನಾಂಕ: 13-04-2021 ರಂದು ಬೆಳಿಗ್ಗೆ 09-15 ಗಂಟೆಗೆ ಮೃತ ಸ್ಥಿತಿಯಲ್ಲಿ ಸಿಕ್ಕಿರುತ್ತಾರೆ. ಈ ಸಾವುಗಳು ಆಕಸ್ಮಿಕವಾಗಿ ಕಾಲು ಜಾರಿ ಅಥವಾ ಆಯ ತಪ್ಪಿ ಸೇತುವೆಯ ಮೇಲಿಂದ ಕಾಳಿ ನದಿಯಲ್ಲಿ ಬಿದ್ದು ಆಗಿರುತ್ತವೆ. ಈ ಸಾವುಗಳಲ್ಲಿ ನನಗೆ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಸುನಿತಾ ರಾಜಕುಮಾರ ಚಿದ್ರಿ, ಪ್ರಾಯ-38 ವರ್ಷ, ವೃತ್ತಿ-ಗೃಹಿಣಿ, ಸಾ|| ಚಿದ್ರಿ, ತಾ&ಜಿ: ಬೀದರ ರವರು ದಿನಾಂಕ: 13-04-2021 ರಂದು 10-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 14-04-2021 01:23 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080