ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 13-04-2022

at 00:00 hrs to 24:00 hrs

 

ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆ, ಕಾರವಾರ

ಅಪರಾಧ ಸಂಖ್ಯೆಃ 08/2022, ಕಲಂ: 420 ಐಪಿಸಿ ಹಾಗೂ ಕಲಂ: 66(ಸಿ)(ಡಿ) ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ನೇದ್ದರ ವಿವರ...... ನಮೂದಿತ ಆರೋಪಿತನು ಮೊಬೈಲ್ ನಂ: 7684880294 ನೇದರ ಬಳಕೆದಾರನಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 21-03-2022 ರಂದು SBI YONO App ನ KYC Update ಮಾಡಿ ಅಂತಾ ತನ್ನ ಮೊಬೈಲ್ ನಂ: 7684880294 ನೇದರಿಂದ ಪಿರ್ಯಾದಿಯವರ ಮೊಬೈಲ್ ನಂಬರಿಗೆ ಮೆಸೇಜ್ ಮಾಡಿದ್ದು, ಅದರಲ್ಲಿ ಒಂದು ಲಿಂಕ್ ನೀಡಿದ್ದು, ಸದರಿ ಲಿಂಕ್ ಉಪಯೋಗಿಸಿ Update ಮಾಡುವಂತೆ ನಮೂದು ಇರುತ್ತದೆ. ಪಿರ್ಯಾದಿಯವರು ದಿನಾಂಕ: 22-03-2022 ರಂದು ಬೆಳಿಗ್ಗೆ 10-44 ಗಂಟೆಯ ಸುಮಾರಿಗೆ ಸದರಿ ಲಿಂಕ್ ಅನ್ನು ಪ್ರೆಸ್ ಮಾಡಿದಾಗ ಯಾವುದೋ ನೆಟ್ ಬ್ಯಾಂಕಿಂಗ್ ಆ್ಯಪ್ ಓಪನ್ ಆಗಿದ್ದು, ನಂತರ ಪಿರ್ಯಾದಿಯವರು SಃI ಬ್ಯಾಂಕಿನ ಆನಲೈನ್ ಯೂಸರ್ ನೇಮ್, ಪಾಸವರ್ಡ್, ಅಕೌಂಟ್ ನಂಬರ್  ಮಾಹಿತಿ ಭರಣ ಮಾಡಿದಾಗ ಅವರ ಮೊಬೈಲಿಗೆ ಒಂದು ಓ.ಟಿ.ಪಿ ಬಂದಿದ್ದು, ಸದರಿ ಓ.ಟಿ.ಪಿ ಯನ್ನು ಸದರಿ ಲಿಂಕಿಕ್ ನಲ್ಲಿ ಹಾಕಿದಾಗ ಪಿರ್ಯಾದಿಯವರ ಬ್ಯಾಂಕ್ ಖಾತೆಯಿಂದ 25,000/- ರೂಪಾಯಿ, 31,800/- ರೂಪಾಯಿ ಮತ್ತು 99/- ರೂಪಾಯಿ. ಹೀಗೆ ಒಟ್ಟೂ 56,899/- ರೂಪಾಯಿ ಹಣ ಕಡಿತವಾದ ಬಗ್ಗೆ ಪಿರ್ಯಾದಿ ಶ್ರೀ ಪ್ರಕಾಶ ತಂದೆ ಕಮಲಾಕರ ಹೆಗಡೆ, ಪ್ರಾಯ-51 ವರ್ಷ, ವೃತ್ತಿ-ಮಾಜಿ ಸೈನಿಕ, ಸಾ|| 5 ನೇ ಕ್ರಾಸ್, ಖುರ್ಸೆ ಕಂಪೌಂಡ್, ಗುರುಪ್ರಕಾಶ ಬಿಲ್ಡಿಂಗ್, ಬನವಾಸಿ ರಸ್ತೆ, ತಾ: ಶಿರಸಿ ರವರು ದಿನಾಂಕ: 13-04-2022 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಂಚಾರ ಪೊಲೀಸ್ ಠಾಣೆ, ಕಾರವಾರ

ಅಪರಾಧ ಸಂಖ್ಯೆಃ 15/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಂತೋಷಕುಮಾರ ತಂದೆ ಶ್ರೀಕಾಂತ ನಾಯ್ಕ, ಪ್ರಾಯ-39 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಶಿವಪುರ ಕಾಲೋನಿ, ಗೋಕುಲ ರಸ್ತೆ, ಹುಬ್ಬಳ್ಳಿ (ಕಾರ್ ನಂ: ಕೆ.ಎ-51/ಎಮ್.ಡಿ-9614 ನೇದರ ಚಾಲಕ). ದಿನಾಂಕ: 13-04-2022 ರಂದು ಮಧ್ಯಾಹ್ನ 14-05 ಗಂಟೆಗೆ ಪಿರ್ಯಾದಿಯವರು ತನ್ನ ಪರಿಚಯದವರಾದ ಅಜಾರುದ್ದೀನ್ ತಂದೆ ಹಾರೂನ್ ಶೇಖ್, ಪ್ರಾಯ-33 ವರ್ಷ, ವೃತ್ತಿ-ರಿಕ್ಷಾ ಚಾಲಕ, ಸಾ|| ಉರ್ದು ಶಾಲೆ ಹತ್ತಿರ, ಸುಂಕೇರಿ, ಕಾರವಾರ. ಇವರ ಆಟೋ ರಿಕ್ಷಾ ನಂ: ಕೆ.ಎ-30/ಎ-3744 ನೇದರ ಮೇಲೆ ಪಣಜಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಮುಖಾಂತರ ಕಾರವಾರ ಕಡೆಯಿಂದ ಬೈತಕೋಲ್ ಕಡೆಗೆ ಪ್ರಯಾಣಿಸುತ್ತಿರುವಾಗ ಅಂಕೋಲಾ ಕಡೆಯಿಂದ ಬಂದಂತ ಕಾರ್ ನಂ: ಕೆ.ಎ-51/ಎಮ್.ಡಿ-9614 ನೇದರ ಆರೋಪಿ ಚಾಲಕನು ತನ್ನ ಕಾರನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಕಾರವಾರದ ಲಂಡನ್ ಬ್ರಿಡ್ಜ್ ಹತ್ತಿರ ಪಿರ್ಯಾದಿಯವರು ಪ್ರಯಾಣಿಸುತ್ತಿದ್ದ ಪ್ಯಾಸೆಂಜರ್ ಆಟೋ ರಿಕ್ಷಾದ ಮುಂದಿನಿಂದ ಹೋಗುತ್ತಿದ್ದ ವಾಹನಗಳಾದ 1). ಸುಜುಕಿ ಎರ್ಟಿಗಾ ಕಾರ್ ನಂ: ಕೆ.ಎ-43/ಎನ್-1361 ನೇದರ ಬಲಬದಿಯ ಭಾಗಕ್ಕೆ ತನ್ನ ಕಾರಿನ ಮುಂದಿನ ಭಾಗದಿಂದ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿ, ತನ್ನ ವಾಹನದ ವೇಗವನ್ನು ನಿಯಂತ್ರಿಸಲಾಗದೇ ಸದರ ಕಾರಿನ ಹಿಂದಿನಿಂದ ಹೊರಟಿದ್ದ 2). ಲಗೇಜ್ ಆಟೋ ರಿಕ್ಷಾ ನಂ: ಕೆ.ಎ-17/ಬಿ-1124 ನೇದರ ಹಿಂದಿನ ಭಾಗಕ್ಕೆ ತನ್ನ ಕಾರಿನ ಮುಂದಿನ ಬಲಬದಿಯ ಭಾಗದಿಂದ ಹಾಗೂ ಪಿರ್ಯಾದಿಯವರು ಪ್ರಯಾಣಿಸುತ್ತಿದ್ದ ಪ್ಯಾಸೆಂಜರ್ ಆಟೋ ರಿಕ್ಷಾದ ಮುಂದಿನ ಭಾಗಕ್ಕೆ ತನ್ನ ಕಾರಿನ ಮುಂದಿನ ಬಲಬದಿಯ ಭಾಗದಿಂದ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿ, ಅದೇ ವೇಗದಲ್ಲಿ ತನ್ನ ಕಾರನ್ನು ಚಲಾಯಿಸಿಕೊಂಡು ಬಂದು ಪಿರ್ಯಾದಿಯವರು ಪ್ರಯಾಣಿಸುತ್ತಿದ್ದ ಆಟೋ ರಿಕ್ಷಾದ ಮುಂದಿನ ಬಲಬದಿಯ ಭಾಗಕ್ಕೆ ತನ್ನ ಕಾರಿನ ಮುಂದಿನ ಭಾಗದಿಂದ ಡಿಕ್ಕಿ ಹೊಡೆಸಿ ಪ್ಯಾಸೆಂಜರ್ ಆಟೋ ರಿಕ್ಷಾದಲ್ಲಿದ್ದ ಆಟೋ ರಿಕ್ಷಾ ಚಾಲಕನಾದ ಅಜಾರುದ್ದೀನ್ ತಂದೆ ಹಾರೂನ್ ಶೇಖ್, ಈತನಿಗೆ ತಲೆಯ ಹಿಂದೆ ಬಲಭಾಗದಲ್ಲಿ ಗಾಯ ಹಾಗೂ ಒಳನೋವು, ಎಡಗಾಲಿನ ತೊಡೆಯ ಭಾಗದಲ್ಲಿ ಗಾಯ ಹಾಗೂ ಒಳನೋವು, ಬಲಗೈ ಮೊಣಕೈ ಕೆಳಗೆ ಒಳನೋವು ಪಡಿಸಿದ್ದಲ್ಲದೇ, ಸದರ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿಯವರಿಗೆ ತಲೆಯ ಹಿಂದೆ ಬಲಭಾಗದಲ್ಲಿ ಗಾಯ ಹಾಗೂ ಒಳನೋವು, ಎಡಗಾಲು ಹಾಗೂ ಬಲಗಾಲಿನ ಮಂಡಿಯ ಮೇಲೆ ಗಾಯ ಹಾಗೂ ಒಳನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀಮತಿ ವಿದ್ಯಾ ಕೋಂ. ಗೋಪಿನಾಥ ವೈಂಗಣಕರ. ಪ್ರಾಯ-31 ವರ್ಷ, ವೃತ್ತಿ-ಖಾಸಗಿ ಕೆಲಸ. ಸಾ|| ಮಠ ರಸ್ತೆ, ಬೈತಕೋಲ್, ಕಾರವಾರ ರವರು ದಿನಾಂಕ: 13-04-2022 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 25/2022, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಬಾಲಕೃಷ್ಣ ತಂದೆ ಯವಗು ಗುನಗಿ, ಪ್ರಾಯ-48 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಗುನಗಿವಾಡಾ, ಕಾರವಾರ. ಈತನು ದಿನಾಂಕ: 13-04-2022 ರಂದು 18-40 ಗಂಟೆಗೆ ತನ್ನ ಲಾಭದ ಸಲುವಾಗಿ ಕಾರವಾರ ಗುನಗಿವಾಡ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವ ಷರತ್ತಿನ ಮೇಲೆ ಓ.ಸಿ ಮಟಕಾ ಜೂಗಾರಾಟದ ಅದೃಷ್ಟದ ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿ, ಸಾರ್ವಜನಿಕರಿಂದ ಹಣ ಪಡೆದುಕೊಂಡು ಓ.ಸಿ ಚೀಟಿ ಬರೆದುಕೊಟ್ಟು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ಪಿರ್ಯಾದಿಯವರು ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ನಡೆಸಿದ ಕಾಲಕ್ಕೆ ದಾಳಿ ನಡೆಸಿ ಅಂಕೆ-ಸಂಖ್ಯೆ ಬರೆದ ಕಾಗದ-01, ಬಾಲ್ ಪೆನ್-01 ಮತ್ತು ನಗದು ಹಣ 1,220/- ರೂಪಾಯಿಯೊಂದಿಗೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಕೃಷ್ಣಗೌಡ ಅರಕೇರಿ, ಪಿ.ಎಸ್.ಐ, ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 13-04-2022 ರಂದು 20-25 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಜೋಯಿಡಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 10/2022, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ದೀಪಕ ತಂದೆ ಗಂಗಾ ನಾಯ್ಕ, ಪ್ರಾಯ-45 ವರ್ಷ, ವೃತ್ತಿ-ಕಿರಾಣಿ ಅಂಗಡಿ ವ್ಯಾಪಾರ, ಸಾ|| ಕುಂಬಾರವಾಡ ತಾ: ಜೋಯಿಡಾ. ಈತನು ದಿನಾಂಕ: 13-04-2022 ರಂದು 12-45 ಗಂಟೆಗೆ ಜೋಯಿಡಾ ತಾಲೂಕಿನ ಕುಂಬಾರವಾಡ ಬಸ್ ನಿಲ್ದಾಣದ ಹತ್ತಿರ ಇರುವ ತನ್ನ ಕಿರಾಣಿ ಅಂಗಡಿಯ ಮುಂದೆ ಅಂಗಳದಲ್ಲಿ ಯಾರೋ 04 ಜನ ಅಪರಿಚಿತ  ವ್ಯಕ್ತಿಗಳಿಗೆ ಅವರಲ್ಲಿದ್ದ King Fisher Beer ಹಾಗೂ Haywards Whisky ಯ ಸರಾಯಿಯನ್ನು ಕುಡಿಯಲು ಅನುವು ಮಾಡಿಕೊಟ್ಟು ತನ್ನಲ್ಲಿಯ ಪ್ಲಾಸ್ಟಿಕ್ ಗ್ಲಾಸು, ನೀರಿನ ಬಾಟಲಿ ಹಾಗೂ ತಿನಿಸುಗಳನ್ನು ಕೊಟ್ಟು ತನ್ನ ಕಿರಾಣಿ ಅಂಗಡಿಯ ಮುಂದೆ ಅಂಗಳದಲ್ಲಿ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ, 1). 500 ML ನ King Fisher Beer ತುಂಬಿದ ಟಿನ್-2, ಒಟ್ಟು ಅ||ಕಿ|| 250 ರೂ, 2). 90 ML ನ Haywards Whisky ಖಾಲಿ Tetra Pack-4, ಅ||ಕಿ|| 00.00/- ರೂಪಾಯಿ, 3). 90 ML ನ Haywards Whisky Tetra Pack-2, ಒಟ್ಟೂ ಅ||ಕಿ|| 70.26/- ರೂಪಾಯಿ, 4) ಪ್ಲಾಸ್ಟಿಕ್ ಗ್ಲಾಸ್-1, ಅ||ಕಿ|| 00.00/- ರೂಪಾಯಿ, 5). ನೀರಿನ ಖಾಲಿ ಬಾಟಲಿ-1, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಮಹಾದೇವಿ ಜಿ. ನಾಯ್ಕೋಡಿ, ಡಬ್ಲ್ಯೂ.ಪಿ.ಎಸ್.ಐ (ತನಿಖೆ), ಜೋಯಿಡಾ ಪೊಲೀಸ್ ಠಾಣೆ ರವರು ದಿನಾಂಕ: 13-04-2022 ರಂದು 14-40 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 64/2022, ಕಲಂ: 341, 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮನೋಹರ ತಂದೆ ಮಲ್ಲಪ್ಪ ರಾಧಾಪುರ, ಸಾ|| ನಂದಿಕಟ್ಟಿ, ತಾ: ಮುಂಡಗೋಡ. ಈತನು ಪಿಯಾದಿಯ ಮೇಲೆ ಹಳೇ ದ್ವೇಷದಿಂದ ಇದ್ದವನು, ದಿನಾಂಕ: 08-04-2022 ರಂದು ರಾತ್ರಿ 11-30 ಗಂಟೆಯ ಸುಮಾರಿಗೆ ನಂದಿಕಟ್ಟಾ ಗ್ರಾಮದ ಪಂಚಾಯತಿ ಹತ್ತಿರದ ವಿದ್ಯುತ್ ಕಂಬದ ಹತ್ತಿರ ನಿಂತ  ಪಿರ್ಯಾದಿಯನ್ನು ಅಡ್ಡಗಟ್ಟಿ ಚಾಕುವಿನಿಂದ ಅವನ ಎಡ ಮೊಣಕೈ ಕೆಳಗಿನ ಭಾಗಕ್ಕೆ ಚಾಕುವಿನಿಂದ ಇರಿದು ಗಾಯನೋವು ಪಡಿಸಿ, ‘ಸೂಳೆ ಮಗನೇ, ಈ ಸಾರಿ ಬದುಕಿದೆಯಾ. ಇನ್ನೊಂದು ಸಾರಿ ಸಿಗು. ನಿನ್ನನ್ನು ಜೀವಸಹಿತ ಬಿಡುವುದಿಲ್ಲ’ ಅಂತಾ ಅವಾಚ್ಯವಾಗಿ ಬೈಯ್ದು, ಜೀವದ ಧಮಕಿ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ವಿಶ್ವನಾಥ ತಂದೆ ಬಸವಣ್ಣೆಪ್ಪ ಜೋಗಿ, ಪ್ರಾಯ-28 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ನಂದಿಕಟ್ಟಾ, ತಾ: ಮುಂಡಗೋಡ ರವರು ದಿನಾಂಕ: 13-04-2022 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 48/2022, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಧರ್ಮೇಂದ್ರ ಪ್ರಜಾಪತಿ ತಂದೆ ಕೋಮಲ್ ಸಿಂಗ್, ಪ್ರಾಯ-22 ವರ್ಷ, ಸಾ|| ನರಾವ್, ನರವಾರ್, ಶಿವಪುರಿ, ಮಧ್ಯಪ್ರದೇಶ (ಲಾರಿ ನಂ: ಆರ್.ಜೆ-11/ಜಿ.ಬಿ-1550 ನೇದರ ಚಾಲಕ). ಈತನು ದಿನಾಂಕ: 04-04-2022 ರಂದು ರಾತ್ರಿ 09-30 ಗಂಟೆಗೆ ಪಿರ್ಯಾದಿಯವರು ಸರ್ಕಲ್ ಮ್ಯಾನೇಜರ್ ಆಗಿ ಕೆಲಸ ಮಾಡುವ ಭದ್ರಾವತಿಯ ಈಸ್ಟ್ ಇಂಡಿಯಾ ಟ್ರಾನ್ಸಪೋರ್ಟ್ ಕಂಪನಿಯ ವತಿಯಿಂದ ಸಿದ್ದಾಪುರದ ಸುಬ್ರಮಣ್ಯ ಟ್ರೇಡಿಂಗ್ ಕಂ. ಇವರಿಗೆ ಸಂಬಂಧಪಟ್ಟ ತಲಾ 65 ಕೆ.ಜಿ ತೂಕದ ಅ||ಕಿ|| 1,05,89,750/- ರೂಪಾಯಿ ಮೌಲ್ಯದ 380 ಅಡಿಕೆ ಚೀಲಗಳನ್ನು ತನ್ನ ಲಾರಿ ನಂ: ಆರ್.ಜೆ-11/ಜಿ.ಬಿ-1550 ನೇದರ ಮೇಲೆ ಲೋಡ್ ಮಾಡಿಕೊಂಡು ಅದನ್ನು ಅನಲೋಡ್ ಮಾಡುವ ಸ್ಥಳವಾದ ಉತ್ತರಪ್ರದೇಶದ ಖಾನಪುರಕ್ಕೆ ಹೋಗದೇ ಲಾರಿಯಲ್ಲಿದ್ದ ಅಡಿಕೆ ಮಾಲನ್ನು ಕಳ್ಳತನ ಮಾಡುವ ಉದ್ದೇಶದಿಂದ ದಿನಾಂಕ: 10-04-2022 ರಂದು ರಾತ್ರಿ 10-00 ಗಂಟೆಗೆ ಉತ್ತರಪ್ರದೇಶದ ಚಮಾರಿ ಟೋಲ್ ನಾಕಾ ದಾಟಿದ ನಂತರ ಲಾರಿ ಸಮೇತ ಅಡಿಕೆಯ ಮಾಲನ್ನು ಬೇರೆ ಕಡೆಗೆ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಜೇಸ್ ರಾಮ್ ಶರ್ಮಾ ತಂದೆ ಕನಾ ರಾಮಾ ಶರ್ಮಾ, ಪ್ರಾಯ-59 ವರ್ಷ, ವೃತ್ತಿ-ಸರ್ಕಲ್ ಮ್ಯಾನೇಜರ್, ಈಸ್ಟ್ ಇಂಡಿಯಾ ಟ್ರಾನ್ಸಪೋರ್ಟ್ ಏಜೆನ್ಸಿ, ಸಾ|| ಹುತ್ತಾ, ಬಿ.ಎಚ್ ರೋಡ್, ತಾ: ಭದ್ರಾವತಿ, ಜಿ: ಶಿವಮೊಗ್ಗ ರವರು ದಿನಾಂಕ: 13-04-2022 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 49/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅವಿನಾಶ ಟಿ. ತಂದೆ ತಾಕರ್ಯಾ ನಾಯ್ಕ, ಪ್ರಾಯ-29 ವರ್ಷ, ಸಾ|| ಲಂಬಾನಿಹಟ್ಟಿ, ರೆಕಲಗೇರಿ, ತಾ: ಚಳ್ಳೆಕೆರೆ, ಜಿ: ಚಿತ್ರದುರ್ಗ (ಲಾರಿ ನಂ: ಕೆ.ಎ-06/ಡಿ-7826 ನೇದರ ಚಾಲಕ). ಈತನು ದಿನಾಂಕ: 12-04-2022 ರಂದು ತನ್ನ ಲಾರಿ ನಂ: ಕೆ.ಎ-06/ಡಿ-7826 ನೇದರಲ್ಲಿ ನೀಲಗಿರಿ ಪೋಲ್ಸ್ ಗಳನ್ನು ಲೋಡ್ ಮಾಡಿಕೊಂಡು ಸಾಗರ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗುತ್ತಾ ರಾತ್ರಿ 08-30 ಗಂಟೆಯ ಸುಮಾರಿಗೆ ಸಾಗರ-ಹೊನ್ನಾವರ ರಸ್ತೆಯ ಸಿದ್ದಾಪುರ ತಾಲೂಕಿನ ಜೋಗಿನಮಠದ ಹತ್ತಿರದ ಇಳಿಜಾರಾದ ತಿರುವಾದ ರಸ್ತೆಯಲ್ಲಿ ತನ್ನ ಲಾರಿಯ ಮೇಲಿನ ನಿಯಂತ್ರಣ ಕಳೆದುಕೊಂಡು ಲಾರಿಯನ್ನು ರಸ್ತೆ ಬದಿಯ ತಗ್ಗಾದ ಪ್ರದೇಶದಲ್ಲಿ ಪಲ್ಟಿ ಕೆಡವಿ ಅಪಘಾತ ಪಡಿಸಿ, ತನಗೆ ಎಡಗಾಲಿಗೆ ಹಾಗೂ ತಲೆಗೆ ಗಾಯನೋವನ್ನುಂಟು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಪಾಚಾಸಾಬ್ ತಂದೆ ಅಮೀರಬಾಷಾ, ಪ್ರಾಯ-35 ವರ್ಷ, ವೃತ್ತಿ-ಚಾಲಕ, ಸಾ|| ಸೂರಗ ಜಕ್ಕನಹಳ್ಳಿ, ಆನೆಕಲ್, ಪೋ: ಹಾರಗದ್ದೆ, ತಾ: ಆನೇಕಲ್, ಜಿ: ಬೆಂಗಳೂರು ಗ್ರಾಮಾಂತರ ರವರು ದಿನಾಂಕ: 13-04-2022 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 50/2022, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಸುಭಾಷ ತಂದೆ ಹನುಮಂತ ಮಡಿವಾಳ, ಪ್ರಾಯ-35 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಹೆರವಳ್ಳಿ ಶಿರಳಗಿ, ತಾ: ಸಿದ್ದಾಪುರ. ಈತನು ದಿನಾಂಕ: 13-04-2022 ರಂದು 20-30 ಗಂಟೆಗೆ ಸಿದ್ದಾಪುರ ತಾಲೂಕಿನ ಶಿರಳಗಿ ಗ್ರಾಮದ ಹಾಲಿನ ಡೈರಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಸಾರ್ವಜನಿಕರಿಗೆ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ 1). Original Choice Deluxe Whisky 90 ML ಅಂತಾ ಬರೆದ ಮದ್ಯ ತುಂಬಿದ 04 ಟೆಟ್ರಾ  ಪ್ಯಾಕೆಟ್ ಗಳು, 2). Original Choice Deluxe Whisky 90 ML ಅಂತಾ ಬರೆದ ಖಾಲಿ 2 ಮದ್ಯದ ಟೆಟ್ರಾ ಪ್ಯಾಕೆಟ್ ಗಳು ಮತ್ತು 3). 2 ಪ್ಲಾಸ್ಟಿಕ್ ಗ್ಲಾಸುಗಳು ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತಪ್ಪ ಜಿ. ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 13-04-2022 ರಂದು 21-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 51/2022, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ 1]. ಸಣ್ಣಹುಚ್ಚಾ ತಿಮ್ಮಾ ನಾಯ್ಕ, ಪ್ರಾಯ-66 ವರ್ಷ, ಸಾ|| ಶಿರಳಗಿ ತಾ: ಸಿದ್ದಾಪುರ, 2]. ಕೃಷ್ಣಮೂರ್ತಿ ಸುಬ್ರಾಯ ಶೇಟ್, ಪ್ರಾಯ-65 ವರ್ಷ, ಸಾ|| ಮುಟ್ಟಿನಕೇರಿ, ಹೆರವಳ್ಳಿ ಗ್ರಾಮ, ಶಿರಳಗಿ, ತಾ: ಸಿದ್ದಾಪುರ. ಈ ನಮೂದಿತ ಆರೋಪಿತರಿಬ್ಬರೂ ದಿನಾಂಕ: 13-04-2022 ರಂದು 21-15 ಗಂಟೆಗೆ ಸಿದ್ದಾಪುರ ತಾಲೂಕಿನ ಶಿರಳಗಿ ಗ್ರಾಮದ ಮಾರಿಕಾಂಬಾ ದೇವಸ್ಥಾನದ ಎದುರು ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಅನಧೀಕೃತವಾಗಿ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ 1). HAYWARDS CHEERS WHISKY 90 ML ಅಂತಾ ಬರೆದ ಮದ್ಯ ತುಂಬಿದ 4 ಟೆಟ್ರಾ ಪ್ಯಾಕೆಟ್ ಗಳು, 2). 2 ಪ್ಲಾಸ್ಟಿಕ್ ಗ್ಲಾಸುಗಳು. 3). HAYWARDS CHEERS WHISKY 90 ML ಅಂತಾ ಬರೆದ 2 ಮದ್ಯದ ಕಾಲಿ ಟೆಟ್ರಾ ಪ್ಯಾಕೆಟ್ ಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜೇಶ್ವರ ವಿ. ಚಂದಾವರ, ಪಿ.ಎಸ್.ಐ (ತನಿಖೆ), ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 13-04-2022 ರಂದು 22-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 13-04-2022

at 00:00 hrs to 24:00 hrs

 

ಗೋಕರ್ಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 06/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ದಾಮೋದರ ತಂದೆ ವೆಂಕಪ್ಪ ಹರಿಕಂತ್ರ, ಪ್ರಾಯ-32 ವರ್ಷ, ವೃತ್ತಿ-ಫೈಬರ್ ಡೋರ್ ಮಾಡುವ ಕೆಲಸ, ಸಾ|| ಮೊರಬಾ, ತಾ: ಕುಮಟಾ. ಪಿರ್ಯಾದಿಯ ತಮ್ಮನಾದ ಈತನು ತನ್ನ ಯಾವುದೋ ವೈಯಕ್ತಿಕ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಅಥವಾ ಜೀವನದಲ್ಲ್ಲಿ ಜಿಗುಪ್ಸೆಗೊಂಡು ದಿನಾಂಕ: 13-04-2022 ರಂದು ಬೆಳಿಗ್ಗೆ 05-00 ಗಂಟೆಯಿಂದ 07-00 ಗಂಟೆಯ ನಡುವಿನ ಅವಧಿಯಲ್ಲಿ ಮೊರಬಾ ಗ್ರಾಮದ ತನ್ನ ಮನೆಯ ಎದುರಿನ ಬಾಗಾಯತದಲ್ಲಿರುವ ಬಾವಿಯ ದಂಡಿಗೆ ಹಗ್ಗದಿಂದ ಕಟ್ಟಿ ಕುತ್ತಿಗೆಗೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಇದರ ಹೊರತು ಆತನ ಮರಣದಲ್ಲಿ ಬೇರೇ ಯಾವುದೇ ಸಂಶಯವಿರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿನಾಯಕ ತಂದೆ ವೆಂಕಪ್ಪ ಹರಿಕಂತ್ರ, ಪ್ರಾಯ-40 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಮೊರಬಾ, ತಾ: ಕುಮಟಾ ರವರು ದಿನಾಂಕ: 13-04-2022 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 28-04-2022 06:15 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080